ಭಾರತದ ಬಗ್ಗೆ ಇಲಾನ್ ಮಸ್ಕ್ ಟ್ವೀಟ್; ರಾಹುಲ್ ಮತ್ತು ವಿಪಕ್ಷಗಳನ್ನು ಝಾಡಿಸಿದ ಕೇಂದ್ರ ಸಚಿವರು – Kannada News | Central ministers quote Elon Musk’s tweet to lash out against Rahul Gandhi and opposition on Indian Economy
ನವದೆಹಲಿ, ಫೆಬ್ರುವರಿ 2: ದೇಶದ ಆರ್ಥಿಕ ಪರಿಸ್ಥಿತಿ ಹಾಗೂ ಸರ್ಕಾರದ ಆರ್ಥಿಕ ನೀತಿಗಳ ಬಗ್ಗೆ ಕಳವಳ ಮತ್ತು ಟೀಕೆ ಮಾಡುತ್ತಲೇ ಬಂದಿರುವ ರಾಹುಲ್ ಗಾಂಧಿ ಹಾಗೂ ವಿಪಕ್ಷಗಳ ವಿರುದ್ಧ ಸರ್ಕಾರ ಹರಿಹಾಯಲು ಹೊಸ ಅಸ್ತ್ರ ಸಿಕ್ಕಿದೆ. ವಿಶ್ವದ ನಂಬರ್ ಒನ್ ಶ್ರೀಮಂತ ಇಲಾನ್ ಮಸ್ಕ್ (Elon Musk) ಅವರು ಭಾರತದ ಆರ್ಥಿಕ ಉನ್ನತಿಯನ್ನು ಪುಷ್ಟೀಕರಿಸಿ ಮಾಡಿರುವ ಟ್ವೀಟ್ವೊಂದು ಈಗ ಸರ್ಕಾರಕ್ಕೆ ಹೊಸ ಶಸ್ತ್ರವಾಗಿ ಪರಿಣಮಿಸಿದೆ. ‘ಭಾರತೀಯರಲ್ಲದವರು ನೀಡುವ ಹೇಳಿಕೆ ಬಗ್ಗೆ ನಾನು ಪ್ರತಿಕ್ರಿಯಿಸುವುದಕ್ಕೆ ಹೋಗುವುದಿಲ್ಲ. ರಾಹುಲ್ ಗಾಂಧಿಗೆ…