ವಿಜಯಪುರ, (ಏಪ್ರಿಲ್ 02): ಕಾಂಗ್ರೆಸ್ನ ಎಚ್ವೈ ಮೇಟಿ ನಿಧನದಿಂದ ತರವಾದ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಇದೇ ಏಪ್ರಿಲ್ 9ರಂದು ಮತದಾನ ನಡೆಯಲಿದ್ದು, ಎರಡು ರಾಷ್ಟ್ರೀಯ ಪಕ್ಷದಿಂದ ಭರ್ಜರಿ ಪ್ರಚಾರ ನಡೆದಿದೆ. ಬೇಸಿಗೆಯ ಬಿರು ಬಿಸಿಲು ಲೆಕ್ಕಿಸಿದೇ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಮತಬೇಟೆ ನಡೆಸಿದ್ದಾರೆ. ಇದೀಗ ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಹ ಬಾಗಲಕೋಟೆ ಬೈ ಎಲೆಕ್ಷನ್ ಅಖಾಡಕ್ಕಿಳಿದಿದ್ದು, ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರ ಪ್ರಚಾರಕ್ಕಿಳಿದಿದ್ದಾರೆ. ಚುನಾವಣಾ ಪ್ರಚಾರಕ್ಕೆ ತೆರಳುವ ಮುನ್ನ ವಿಜಯಪುರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಯತ್ನಾಳ್, ಕರ್ನಾಟಕ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಧಿಕಾರ ಇದ್ದಾಗ ಹಿಂದೂಗಳ ರಕ್ಷಣೆ ಮಾಡಿಲ್ಲ ಎಂದು ಕಿಡಿಕಾರಿದ್ದಾರೆ.
ಚಿತ್ರದುರ್ಗ/ ಚಿಕ್ಕಮಗಳೂರು, ಏಪ್ರಿಲ್ 02: ನಗರದ ಹೊರವಲಯದ ನಿರ್ಜನ ಪ್ರದೇಶದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಕಾಂಗ್ರೆಸ್ ಮುಖಂಡನ ಶವ ಪತ್ತೆಯಾಗಿದೆ. ಮೃತರನ್ನು ರಸಗೊಬ್ಬರ ಅಂಗಡಿ ನಡೆಸುತ್ತಿದ್ದ ‘ಕೈ’ ಮುಖಂಡ ಶಿವಲಿಂಗಪ್ಪ (50) ಎಂದು ಗುರುತಿಸಲಾಗಿದ್ದು, ಮೂರು ದಿನಗಳ ಹಿಂದೆ ಇವರು ನಾಪತ್ತೆಯಾಗಿದ್ದರು. ಇಂದು ಅವರ ಮೃತದೇಹ ಮುಖದ ಗುರುತು ಸಿಗದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ದುಷ್ಕರ್ಮಿಗಳು ಕೊಲೆ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ತನಿಖೆಗೆ ಸಂಬಂಧಿಕರಿಂದ ಆಗ್ರಹ ವ್ಯಕ್ತವಾಗಿದ್ದು, ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಹಿಟ್ ಆ್ಯಂಡ್ ರನ್ಗೆ ಬೈಕ್ ಸವಾರರು ಬಲಿ
ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ ಸವಾರರಿಬ್ಬರು ಧಾರುಣವಾಗಿ ಮೃತಪಟ್ಟಿರುವ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಹನಗವಾಡಿ ಸಮೀಪದ ಸಾಸ್ವಿಹಳ್ಳಿ- ಆನವೇರಿ ರಸ್ತೆಯಲ್ಲಿ ನಡೆದಿದೆ. ನವೀನ್ ಎನ್. ಎಂ. (33) ಮತ್ತು ಶಶಿಕುಮಾರ್ (32) ಮೃತರಾಗಿದ್ದು, ಡಿಕ್ಕಿ ರಭಸಕ್ಕೆ ನವೀನ್ ಸ್ಥಳದಲ್ಲಿಯೇ ಜೀವ ಬಿಟ್ಟಿದ್ದಾರೆ. ಶಶಿಕುಮಾರ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಪ್ರಾಣ ಕಳೆದುಕೊಂಡಿದ್ದಾರೆ. ಇವರಿಬ್ಬರು ಹೊನ್ನಾಳಿ ತಾಲೂಕಿನ ಹೊಸಹಳ್ಳಿ ಗ್ರಾಮದ ನಿವಾಸಿಗಳು ಎಂಬುದು ಗೊತ್ತಾಗಿದೆ. ಸ್ವಗ್ರಾಮದಿಂದ ಕಾರ್ಯ ನಿಮಿತ್ತ ಆನವೇರಿಗೆ ತೆರಳುತ್ತಿದ್ದಾಗ ಅಪಘಾತ ನಡೆದಿದೆ. ಅಪಘಾತ ಮಾಡಿದ ಚಾಲಕ ವಾಹನ ಸಹಿತ ಪರಾರಿಯಾಗಿದ್ದು, ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ 9ನೇ ಮೈಲಿಕಲ್ ಗ್ರಾಮದಲ್ಲಿ ಕಾಲಿಗೆ ಹಾವು ಕಡಿದು ಮಹಿಳೆಯೋರ್ವರು ಮೃತಪಟ್ಟಿದ್ದಾರೆ. ಛತ್ತೀಸ್‌ಗಢ ಮೂಲದ ಕಾರ್ಮಿಕ ಮಹಿಳೆ ಜಾಲ್ ಬಾಯಿ ಸಿಧಾರ್(42) ಮರತರಾಗಿದ್ದು, ಇವರು ಸಿಮೆಂಟ್ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ತಡರಾತ್ರಿ ಮಲಗಿದ್ದ ವೇಳೆ ಕಾರ್ಮಿಕ ಮಹಿಳೆ ಜಾಲ್ ಬಾಯಿಗೆ ಹಾವು ಕಡಿದಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಸಿಂಗಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
೨೦೨೬ರ ಏಪ್ರಿಲ್ ತಿಂಗಳು ಸಿಂಹ ರಾಶಿಯವರಿಗೆ ಗ್ರಹಗಳ ಸಂಚಾರದ ದೃಷ್ಟಿಯಿಂದ ಅತ್ಯಂತ ಮಹತ್ವದ ಕಾಲಘಟ್ಟವಿದಾಗಿದೆ. ನಿಮ್ಮ ರಾಶ್ಯಾಧಿಪತಿಯಾದ ಸೂರ್ಯನು ಈ ತಿಂಗಳ ಮಧ್ಯಭಾಗದಲ್ಲಿ ಉಚ್ಚ ಸ್ಥಾನಕ್ಕೇರುವುದರಿಂದ ಆತ್ಮವಿಶ್ವಾಸ ಹೆಚ್ಚಾಗಲಿದೆ.
ವೃತ್ತಿ ಬದುಕು :
ಉದ್ಯೋಗ ಕ್ಷೇತ್ರದಲ್ಲಿ ನೀವು ಈ ತಿಂಗಳು ಮಿಶ್ರ ಫಲಗಳನ್ನು ನಿರೀಕ್ಷಿಸಬಹುದು.
ಸವಾಲುಗಳು: ತಿಂಗಳ ಆರಂಭದಲ್ಲಿ ಹತ್ತನೇ ಮನೆಯ ಮೇಲಿನ ಶನಿಯ ದೃಷ್ಟಿಯಿಂದಾಗಿ ಕೆಲಸದ ಸ್ಥಳದಲ್ಲಿ ಶ್ರಮ ಹೆಚ್ಚಾಗಲಿದೆ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ತಕ್ಷಣ ಸಿಗುತ್ತಿಲ್ಲ ಎಂಬ ಭಾವನೆ ಮೂಡಬಹುದು. ಮೇಲಧಿಕಾರಿಗಳೊಂದಿಗೆ ಮಾತನಾಡುವಾಗ ಸಂಯಮವಿರಲಿ.
ಅವಕಾಶಗಳು: ಏಪ್ರಿಲ್ ೧೪ರ ನಂತರ ಸೂರ್ಯನು ಮೇಷ ರಾಶಿಯನ್ನು ಪ್ರವೇಶಿಸುವುದರಿಂದ, ಆಡಳಿತಾತ್ಮಕ ಕೆಲಸಗಳಲ್ಲಿ ಇರುವವರಿಗೆ ಅಥವಾ ಸರ್ಕಾರಿ ಉದ್ಯೋಗಿಗಳಿಗೆ ಬಡ್ತಿ ಅಥವಾ ವಿಶೇಷ ಗೌರವ ಸಿಗುವ ಸಾಧ್ಯತೆ ಇದೆ. ಸ್ವಂತ ಉದ್ಯೋಗ ಮಾಡುವವರಿಗೆ ಹೊಸ ಗ್ರಾಹಕರು ಸಿಗುವ ಸಮಯವಿದು.
ವಿದ್ಯಾಭ್ಯಾಸ :
ವಿದ್ಯಾರ್ಥಿಗಳಿಗೆ ಇದು ಶುಭ ಕಾಲವಾಗಿದೆ. ಪಂಚಮ ಸ್ಥಾನದ ಅಧಿಪತಿ ಗುರುವಿನ ಸ್ಥಿತಿಯು ಜ್ಞಾನಾರ್ಜನೆಗೆ ಪೂರಕವಾಗಿದೆ. ಸಂಶೋಧನೆ ಅಥವಾ ಗಣಿತ ವಿಷಯಗಳಲ್ಲಿ ತೊಡಗಿರುವವರಿಗೆ ಉತ್ತಮ ಪ್ರಗತಿ ಕಾಣಲಿದೆ.
ಸ್ಪರ್ಧಾತ್ಮಕ ಪರೀಕ್ಷೆ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವವರು ಈ ತಿಂಗಳು ಹೆಚ್ಚು ಏಕಾಗ್ರತೆ ವಹಿಸಿದರೆ ಯಶಸ್ಸು ಖಚಿತ. ತಾಂತ್ರಿಕ ಶಿಕ್ಷಣ ಪಡೆಯುವವರಿಗೆ ಕ್ಯಾಂಪಸ್ ಸೆಲೆಕ್ಷನ್‌ನಲ್ಲಿ ಶುಭ ಸುದ್ದಿ ಸಿಗಲಿದೆ.
ಹಣಕಾಸು ಮತ್ತು ಆರ್ಥಿಕತೆ :
ಹಣಕಾಸಿನ ವಿಷಯದಲ್ಲಿ ನೀವು ಮಧ್ಯಮದಿಂದ ಶುಭ ಫಲಗಳನ್ನು ನಿರೀಕ್ಷಿಸಬಹುದು.
ಆದಾಯ: ಹಳೆಯ ಹೂಡಿಕೆಗಳಿಂದ ಲಾಭ ಬರುವ ಸಾಧ್ಯತೆ ಇದೆ. ವಿಶೇಷವಾಗಿ ಭೂಮಿ ಅಥವಾ ಕೃಷಿ ಸಂಬಂಧಿತ ಉದ್ಯಮಗಳಿಂದ ಧನಲಾಭವಾಗಬಹುದು.
ವೆಚ್ಚ: ಮನೆಯ ಅಲಂಕಾರ ಅಥವಾ ಧಾರ್ಮಿಕ ಕಾರ್ಯಕ್ರಮಗಳಿಗಾಗಿ ಖರ್ಚು ಹೆಚ್ಚಾಗಲಿದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಾಗ ಎಚ್ಚರಿಕೆ ಅಗತ್ಯ. ಅನಗತ್ಯವಾಗಿ ಬೇರೆಯವರಿಗೆ ಸಾಲ ನೀಡುವುದನ್ನು ಈ ತಿಂಗಳು ತಪ್ಪಿಸಿ.
ವಿವಾಹ ಮತ್ತು ಸಂಬಂಧಗಳು :
ಅವಿವಾಹಿತರಿಗೆ: ಸಪ್ತಮ ಸ್ಥಾನದ ಮೇಲೆ ಗ್ರಹಗಳ ದೃಷ್ಟಿ ಇರುವುದರಿಂದ ವಿವಾಹ ಪ್ರಯತ್ನಗಳು ಚುರುಕುಗೊಳ್ಳಲಿವೆ. ಆದರೆ ಮಾತುಕತೆಯ ವೇಳೆ ತಪ್ಪು ತಿಳುವಳಿಕೆ ಬರದಂತೆ ಜಾಗ್ರತೆ ವಹಿಸಿ.
ದಾಂಪತ್ಯ: ಸಂಗಾತಿಯೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಮೂಡಬಹುದು. ವಿಶೇಷವಾಗಿ ತಿಂಗಳ ಎರಡನೇ ವಾರದಲ್ಲಿ ತಾಳ್ಮೆ ಬಹಳ ಮುಖ್ಯ. ಪರಸ್ಪರ ಗೌರವ ನೀಡುವ ಮೂಲಕ ಸಂಸಾರದಲ್ಲಿ ಸಾಮರಸ್ಯ ಕಾಪಾಡಿಕೊಳ್ಳಬಹುದು.
ವಿದೇಶ ಪ್ರವಾಸ ಮತ್ತು ದೂರದ ಪ್ರಯಾಣ :
ಈ ತಿಂಗಳು ವಿದೇಶ ಪ್ರವಾಸದ ಯೋಗವು ಪ್ರಬಲವಾಗಿದೆ. ಭಾಗ್ಯ ಸ್ಥಾನದಲ್ಲಿ ಸೂರ್ಯನ ಸಂಚಾರವು ವಿದೇಶಕ್ಕೆ ಹೋಗಲು ಬಯಸುವವರಿಗೆ ವೀಸಾ ಅಥವಾ ಇತರ ದಾಖಲೆಗಳ ಕೆಲಸಗಳನ್ನು ಸುಗಮಗೊಳಿಸುತ್ತದೆ. ಉದ್ಯೋಗದ ನಿಮಿತ್ತ ಅಥವಾ ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ತೆರಳುವ ಪ್ರಯತ್ನದಲ್ಲಿದ್ದರೆ ಈ ತಿಂಗಳು ಸಫಲತೆ ಸಿಗುವ ಸಾಧ್ಯತೆ ಹೆಚ್ಚಿದೆ. ಸಣ್ಣ ಪ್ರವಾಸಗಳೂ ಮನಸ್ಸಿಗೆ ಉಲ್ಲಾಸ ನೀಡಲಿವೆ.
ಸಾಲ ಮತ್ತು ಆರೋಗ್ಯ :
ಸಾಲ: ನಿಮ್ಮ ರಾಶಿಗೆ ಆರನೇ ಮನೆಯಲ್ಲಿ ಗ್ರಹಗಳ ಪ್ರಭಾವ ಇರುವುದರಿಂದ ಹಳೆಯ ಸಾಲಗಳನ್ನು ಮರುಪಾವತಿಸಲು ನೀವು ಕೆಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದೀರಿ. ಶತ್ರುಗಳ ಮೇಲೆ ನಿಮ್ಮ ಮೇಲುಗೈ ಇರಲಿದೆ.
ಆರೋಗ್ಯ: ಬೆನ್ನು ನೋವು ಅಥವಾ ಕಣ್ಣಿನ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಕೆಲಸದ ಒತ್ತಡದಿಂದಾಗಿ ಮಾನಸಿಕ ಅಶಾಂತಿ ಉಂಟಾಗಬಹುದು, ಆದ್ದರಿಂದ ಪ್ರತಿದಿನ ಯೋಗ ಅಥವಾ ಪ್ರಾಣಾಯಾಮ ಮಾಡುವುದು ಸೂಕ್ತ.
ಭಾನುವಾರದಂದು ಗೋಧಿ ಅಥವಾ ಬೆಲ್ಲವನ್ನು ದಾನ ಮಾಡಿ. ನಿಮ್ಮ ಇಷ್ಟದೇವತೆಯ ಪ್ರಾರ್ಥನೆ ಮಾಡಿ ಮತ್ತು ಹಿರಿಯರ ಆಶೀರ್ವಾದ ಪಡೆದು ಯಾವುದೇ ಕೆಲಸ ಆರಂಭಿಸಿ. ಒಟ್ಟಾರೆಯಾಗಿ, ಏಪ್ರಿಲ್ ತಿಂಗಳು ಸಿಂಹ ರಾಶಿಯವರಿಗೆ ಶ್ರಮಕ್ಕೆ ತಕ್ಕ ಫಲ ನೀಡುವಂತಹ ತಿಂಗಳಾಗಿದೆ.
ಬಲೋತ್ರಾ, ಏಪ್ರಿಲ್ 02: ಕೆಲವು ಮುಸುಕುಧಾರಿಗಳು ಬಂದೂಕು, ದೊಣ್ಣೆಗಳನ್ನು ಹಿಡಿದು ಮನೆಯೊಂದಕ್ಕೆ ನುಗ್ಗಿರುವ ಘಟನೆ ರಾಜಸ್ಥಾನದ ಬಲೋತ್ರಾದಲ್ಲಿ ನಡೆದಿದೆ. ದುಷ್ಕರ್ಮಿಗಳನ್ನು ಇಬ್ಬರು ಯುವಕರು ಎದುರಿಸಿದ್ದಾರೆ, ಅವರನ್ನು ಓಡಿಸಿದ್ದಲ್ಲದೆ ಬೆನ್ನಟ್ಟಿದ್ದಾರೆ. ಆದರೆ ಇನ್ನೊಂದು ಬದಿಯಲ್ಲಿ ಮನೆಯಲ್ಲಿರುವ ಹೆಣ್ಣುಮಕ್ಕಳು ಭಯದಿಂದ ಅಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ಪ್ರದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ, ಆರೋಪಿಗಳನ್ನು ಯಾರು ಎಂದು ಕಂಡುಹಿಡಿಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.
ಬೆಂಗಳೂರು, ಏಪ್ರಿಲ್ 2: ಸತತವಾಗಿ ಏರುತ್ತಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಗುರುವಾರ ತಗ್ಗಿವೆ. ಒಂದು ಚಿನ್ನದ ಬೆಲೆ (Gold Rates) 230 ರೂನಷ್ಟು ಕಡಿಮೆ ಆಗಿದೆ. ವಿದೇಶಗಳಲ್ಲಿ ಕೆಲವೆಡೆ ಬೆಲೆ ಇಳಿದರೆ, ಇನ್ನೂ ಕೆಲವೆಡೆ ಏರಿದೆ. ಬೆಳ್ಳಿ ಬೆಲೆಯೂ ಕಡಿಮೆಗೊಂಡಿದೆ. ನಿನ್ನೆ 5 ರೂ ಹೆಚ್ಚಿದ್ದ ಬೆಳ್ಳಿ ಬೆಲೆ ಇವತ್ತು 5 ರೂ ಕಡಿಮೆಗೊಂಡಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,36,550 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,48,970 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 25,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,36,550 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 25,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 25,500 ರೂ ಇದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಏಪ್ರಿಲ್ 2ಕ್ಕೆ)
24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,897 ರೂ
22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,655 ರೂ
18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,173 ರೂ
ಬೆಳ್ಳಿ ಬೆಲೆ 1 ಗ್ರಾಂಗೆ: 250 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,897 ರೂ
22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,655 ರೂ
ಬೆಳ್ಳಿ ಬೆಲೆ 1 ಗ್ರಾಂಗೆ: 250 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಸೌತ್ ಆಫ್ರಿಕಾದ ಸ್ಫೋಟಕ ಬ್ಯಾಟರ್ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ (Rassie van der Dussen) ಅವರು ಇಂದು (ಏಪ್ರಿಲ್ 2, 2026) ಎಲ್ಲಾ ಮಾದರಿಯ ಅಂತರರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಕಳೆದ ಏಳು ವರ್ಷಗಳಿಂದ ಸೌತ್ ಆಫ್ರಿಕಾ ತಂಡದ ಭಾಗವಾಗಿದ್ದ ಡಸ್ಸೆನ್ ಯುವ ಆಟಗಾರರಿಗೆ ಅವಕಾಶ ಕಲ್ಪಿಸುವ ಸಲುವಾಗಿ ನಿವೃತ್ತಿ ಘೋಷಿಸುತ್ತಿರುವುದಾಗಿ ತಿಳಿಸಿದ್ದಾರೆ.
ಆದರೆ ಕ್ರಿಕೆಟ್ ಸೌತ್ ಆಫ್ರಿಕಾ (CSA) ಇತ್ತೀಚೆಗೆ ಪ್ರಕಟಿಸಿದ 2026-27ರ ಕೇಂದ್ರ ಗುತ್ತಿಗೆ ಪಟ್ಟಿಯಲ್ಲಿ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಅವರ ಹೆಸರನ್ನು ಕೈಬಿಡಲಾಗಿತ್ತು. ಇದು ಅವರ ನಿವೃತ್ತಿಯ ನಿರ್ಧಾರಕ್ಕೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.
ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ಆಡುತ್ತಿರುವುದು ಆಯಾಸ ತಂದಿದೆ, ಈಗ ಯುವಕರಿಗೆ ದಾರಿ ಮಾಡಿಕೊಡುವ ಸರಿಯಾದ ಸಮಯ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುವ ಮೂಲಕ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ತಮ್ಮ ನಿವೃತ್ತಿಯನ್ನು ಅಧಿಕೃತಗೊಳಿಸಿದ್ದಾರೆ.
2018ರಲ್ಲಿ ಝಿಂಬಾಬ್ವೆ ವಿರುದ್ಧದ ಟಿ20 ಪಂದ್ಯದ ಮೂಲಕ ಸೌತ್ ಆಫ್ರಿಕಾ ಪರ ಪಾದಾರ್ಪಣೆ ಮಾಡಿದ ಡಸ್ಸೆನ್, ಅಲ್ಪಾವಧಿಯಲ್ಲೇ ತಂಡದ ಮಧ್ಯಾಂತರ ಕ್ರಮಾಂಕದ ಶಕ್ತಿಯಾದರು. ಆಗಸ್ಟ್ 16, 2025 ರಂದು ಆಸ್ಟ್ರೇಲಿಯಾ ವಿರುದ್ಧ ನಡೆದ ಟಿ20 ಪಂದ್ಯವೇ ಅವರ ವೃತ್ತಿಜೀವನದ ಕೊನೆಯ ಅಂತರರಾಷ್ಟ್ರೀಯ ಪಂದ್ಯವಾಯಿತು.
ಇದರ ನಡುವೆ 71 ಏಕದಿನ ಪಂದ್ಯಗಳನ್ನಾಡಿರುವ ಅವರು 6 ಶತಕ ಹಾಗೂ 17 ಅರ್ಧಶತಕಗಳೊಂದಿಗೆ 2657 ರನ್ ಕಲೆಹಾಕಿದ್ದಾರೆ. ಇನ್ನು 57 ಟಿ20 ಪಂದ್ಯಗಳಲ್ಲಿ ಬ್ಯಾಟ್ ಬೀಸಿರುವ ಡಸ್ಸೆನ್ 10 ಅರ್ಧಶತಕಗಳೊಂದಿಗೆ 1406 ರನ್ ಗಳಿಸಿದ್ದಾರೆ. ಹಾಗೆಯೇ 18 ಟೆಸ್ಟ್ ಪಂದ್ಯಗಳಲ್ಲಿ ಸೌತ್ ಆಫ್ರಿಕಾ ತಂಡವನ್ನು ಪ್ರತಿನಿಧಿಸಿರುವ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ 6 ಅರ್ಧಶತಕಗಳೊಂದಿಗೆ ಒಟ್ಟು 905 ರನ್ ಕಲೆಹಾಕಿದ್ದಾರೆ.
ಬೆಂಗಳೂರು, ಏಪ್ರಿಲ್ 2: ಕರ್ನಾಟಕದಾದ್ಯಂತ ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್ ಅಭಾವ, ಗೃಹ ಬಳಕೆಯ ಎಲ್‌ಪಿಜಿ (LPG) ಕೊರತೆ ಒಂದೆಡೆಯಾದರೆ ಇದೀಗ ಆಟೋ ಗ್ಯಾಸ್ (Auto Gas) ಸಮಸ್ಯೆ ವಿಕೋಪಕ್ಕೆ ಹೋಗಿದೆ. ಗ್ಯಾಸ್ ಸಿಗದೆ ಆಟೋ ಚಾಲಕರು ಬೀದಿಗೆ ಬೀಳುವ ಸ್ಥಿತಿ ನಿರ್ಮಾಣವಾಗಿದ್ದು, ಹಗಲಿಡೀ ಬಂಕ್‌ಗಳ ಮುಂದೆ ಕಾದು ಕುಳಿತು ಕಣ್ಣೀರಿಡುತ್ತಿದ್ದಾರೆ. ಬೆಂಗಳೂರು (Bangalore) ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗ್ಯಾಸ್ ಅಭಾವದಿಂದಾಗಿ ಸಾರಿಗೆ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಬೆಂಗಳೂರಿನಲ್ಲಿ ಚಾಲಕರ ಗೋಳು ಕೇಳೋರಿಲ್ಲ
ಸಿಲಿಕಾನ್ ಸಿಟಿ ಬೆಂಗಳೂರಿನ ಹೊಸಹಳ್ಳಿ, ಮೂಡಲಪಾಳ್ಯ ಮತ್ತು ರಾಜಾಜಿನಗರದ ರಸ್ತೆಗಳಲ್ಲಿ ಆಟೋಗಳು ಎರಡು ಕಿಲೋಮೀಟರ್‌ವರೆಗೂ ಸಾಲುಗಟ್ಟಿ ನಿಂತಿವೆ. ‘ಕೊರೊನಾ ಸಮಯದಲ್ಲಿಯೂ ನಾವು ಇಷ್ಟು ಪರದಾಡಿಲ್ಲ’ ಎಂದು ಚಾಲಕರು ತಮ್ಮ ಅಳಲು ತೋಡಿಕೊಂಡಿದ್ದಾರೆ. ವಿಜಯನಗರ ಮತ್ತು ಚಾಮರಾಜಪೇಟೆಯ ಭಾರತ್ ಪೆಟ್ರೋಲ್ ಬಂಕ್‌ಗಳಲ್ಲಿ ಕೇವಲ 500 ರೂಪಾಯಿಗೆ ಸೀಮಿತಗೊಳಿಸಿ ಗ್ಯಾಸ್ ನೀಡಲಾಗುತ್ತಿದೆ. ಇದರಿಂದ ಆಕ್ರೋಶಗೊಂಡ ಚಾಲಕರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಇತ್ತ ಹೊಸಹಳ್ಳಿಯಲ್ಲಿ ವಿಶೇಷ ಚೇತನ ಚಾಲಕನೊಬ್ಬ ಗ್ಯಾಸ್‌ಗಾಗಿ ದಿನವಿಡೀ ಕಾಯುತ್ತಿದ್ದ ದೃಶ್ಯ ಮನಕಲಕುವಂತಿತ್ತು.
ಬಳ್ಳಾರಿಯಲ್ಲಿ ಬಾಣಂತಿ ಮತ್ತು ರೋಗಿಗಳ ಪರದಾಟ
ಗ್ಯಾಸ್ ಅಭಾವ ಕೇವಲ ಚಾಲಕರಿಗಷ್ಟೇ ಅಲ್ಲ, ಪ್ರಯಾಣಿಕರಿಗೂ ಶಾಪವಾಗಿ ಪರಿಣಮಿಸಿದೆ. ಬಳ್ಳಾರಿಯಲ್ಲಿ 9 ದಿನದ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಬೇಕಿದ್ದ ಆಟೋದಲ್ಲಿ ಗ್ಯಾಸ್ ಖಾಲಿಯಾಗಿದ್ದು, ಬಂಕ್‌ಗಳ ಮುಂದೆ ನೂರಾರು ಆಟೋಗಳು ನಿಂತಿದ್ದರಿಂದ ತಾಯಿ ಮತ್ತು ಮಗು ಪರದಾಡುವಂತಾಯಿತು.
ಇತರ ಜಿಲ್ಲೆಗಳಲ್ಲೂ ಮುಂದುವರಿದ ಸಂಕಷ್ಟ
ಹುಬ್ಬಳ್ಳಿ: ಇಲ್ಲಿನ ಬಂಕ್‌ಗಳಲ್ಲಿ ಪ್ರತಿ ಆಟೋಗೆ ಕೇವಲ 2 ಲೀಟರ್ ಗ್ಯಾಸ್ ಮಾತ್ರ ನೀಡುವಂತೆ ಲಿಮಿಟ್ ವಿಧಿಸಲಾಗಿದೆ.
ಯಾದಗಿರಿ: ಜಿಲ್ಲೆಯಲ್ಲಿದ್ದ ಏಕೈಕ ಎಲ್‌ಪಿಜಿ ಬಂಕ್‌ಗೆ ಬೀಗ ಬಿದ್ದಿದ್ದು, ಚಾಲಕರು ದಿಕ್ಕು ತೋಚದಂತಾಗಿದ್ದಾರೆ.
ರಾಯಚೂರು: ಇಲ್ಲಿನ ಚಾಲಕರ ಕಣ್ಣೀರಿಗೆ ಸ್ಪಂದಿಸಿರುವ ಜಿಲ್ಲಾಡಳಿತ, ಆಹಾರ ಇಲಾಖೆ ಅಧಿಕಾರಿಗಳ ಮೂಲಕ ಬಂಕ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ.
ಮಂಗಳೂರು & ಚಾಮರಾಜನಗರ: ಈ ಜಿಲ್ಲೆಗಳಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ, ಚಾಲಕರು ದುಡಿಮೆ ಇಲ್ಲದೆ ಕಂಗಾಲಾಗಿದ್ದಾರೆ.
‘ಮೋದಿ ಸಾಹೇಬರೇ ನಮಗೆ ಸಹಾಯ ಮಾಡಿ’ ಎಂದು ರಾಜಾಜಿನಗರದ ಚಾಲಕರು ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೊರೆ ಇಟ್ಟಿದ್ದಾರೆ. ಒಟ್ಟಾರೆ, ದಿನದ ದುಡಿಮೆಯನ್ನೇ ನಂಬಿರುವ ಸಾವಿರಾರು ಕುಟುಂಬಗಳು ಇಂದು ಗ್ಯಾಸ್, ಆಟೋ ಗ್ಯಾಸ್ ಇಲ್ಲದೆ ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಬೆಂಗಳೂರು, ಏಪ್ರಿಲ್ 02: ನಗರದ ಬನಶಂಕರಿಯಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಬೊಲೆರೊ ವಾಹನದಲ್ಲಿ ಓಡಾಟ ನಡೆಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಆಶೀರ್ವಾದ ಮಾಡುವ ನೆಪದಲ್ಲಿ ಹೆಣ್ಣುಮಕ್ಕಳನ್ನು ಗ್ಯಾಂಗ್ ಕರೆಯುತ್ತಿದೆ ಎಂದು ದೂರಲಾಗಿದೆ. ರಸ್ತೆಯಲ್ಲಿ ತೆರಳುತ್ತಿರುವ ಬೊಲೆರೋ ವಾಹನ ಮನೆಯೊಂದರ ಗೇಟ್ ಬಳಿ ಶಾಲಾ ಬಾಲಕಿ ಕಾಣುತ್ತಿದ್ದಂತೆ ನಿಂತಿದೆ. ಬಳಿಕ ಹಿಮ್ಮುಖವಾಗಿ ಹೋಗಿ ಬಾಲಕಿ ಬಳಿ ವಾಹನದಲ್ಲಿದ್ದವರು ಮಾತನಾಡಿದ್ದಾರೆ. ಈ ವೇಳೆ ಆಕೆ ಮನೆಯವರನ್ನು ಕರೆದಿದ್ದು, ಅವರು ವಿಚಾರಿಸುತ್ತಿದ್ದಂತೆ ವಾಹನ ಸಮೇತ ಗ್ಯಾಂಗ್ ಸ್ಥಳದಿಂದ ಕಾಲ್ಕಿತ್ತಿದೆ. ವೈರಲ್ ವಿಡಿಯೋ ಬಗ್ಗೆ ಪೊಲೀಸರು ಪರಿಶೀಲನೆಗೆ ಮುಂದಾಗಿದ್ದು, ಈ ಸಂಬಂಧ ಇಲ್ಲಿಯವರೆಗೂ ಯಾವುದೇ ಕೇಸ್ ದಾಖಲಾಗಿಲ್ಲ.
ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರ ಸೀಸನ್‌ನಲ್ಲಿ ಕ್ರೀಡಾ ಸ್ಫೂರ್ತಿಗೆ ಮಸಿ ಬಳಿಯುವಂತಹ ಘಟನೆಯೊಂದು ನಡೆದಿದೆ. ಏಪ್ರಿಲ್ 1 ರಂದು ಲಕ್ನೋದ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ (LSG) ಮತ್ತು ಡೆಲ್ಲಿ ಕ್ಯಾಪಿಟಲ್ಸ್ (DC) ನಡುವಿನ ಪಂದ್ಯದ ವೇಳೆ ಅಭಿಮಾನಿಗಳು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.
ಪಂದ್ಯ ನಡೆಯುತ್ತಿದ್ದಾಗ ಸ್ಟೇಡಿಯಂನ ಗ್ಯಾಲರಿಯಲ್ಲಿದ್ದ ಇಬ್ಬರು ವ್ಯಕ್ತಿಗಳ ನಡುವೆ ಮೊದಲು ಮಾತಿನ ಚಕಮಕಿ ಆರಂಭವಾಗಿದೆ. ಇದು ಕ್ಷಣಾರ್ಧದಲ್ಲಿ ವಿಕೋಪಕ್ಕೆ ತಿರುಗಿ, ಒಬ್ಬರಿಗೊಬ್ಬರು ಗುದ್ದಾಟ ಮತ್ತು ಒದೆಯಾಟ ಶುರು ಮಾಡಿದ್ದಾರೆ. ಈ ಮಾರಾಮಾರಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ನೆಟ್ಟಿಗರು ಇದನ್ನು “WWE ಕುಸ್ತಿ” ಎಂದು ವ್ಯಂಗ್ಯವಾಡಿದ್ದಾರೆ.
ಇನ್ನು ಗಲಾಟೆ ಜೋರಾಗುತ್ತಿದ್ದಂತೆ ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ಮತ್ತು ಪೊಲೀಸರು ತಕ್ಷಣ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಗಲಾಟೆ ಮಾಡಿದವರನ್ನು ಸ್ಟೇಡಿಯಂನಿಂದ ಹೊರಹಾಕಲಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಲಕ್ನೋ ಸೂಪರ್ ಜೈಂಟ್ಸ್ 18.4 ಓವರ್ಗಳಲ್ಲಿ 141 ರನ್ಗಳಿಸಿ ಆಲೌಟ್ ಆಗಿದ್ದರು. ಈ ಗುರಿಯನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ 17.1 ಓವರ್ಗಳಲ್ಲಿ ಚೇಸ್ ಮಾಡಿ 6 ವಿಕೆಟ್ಗಳ ಜಯ ಸಾಧಿಸಿದೆ.
ಪದ್ಮಜಾ ರಾವ್ (Padmaja Rao) ಅವರು ಕನ್ನಡದಲ್ಲಿ ಹಲವು ಸಿನಿಮಾಗಳನ್ನು ಮಾಡಿದ್ದಾರೆ. ಇದರ ಜೊತೆಗೆ ಧಾರಾವಾಹಿಗಳಲ್ಲೂ ಪದ್ಮಜಾ ನಟಿಸಿದ್ದಾರೆ. ‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ ಭಾಗ್ಯಾಳ ಅತ್ತೆ ಪಾತ್ರ ಮಾಡುತ್ತಿದ್ದಾರೆ. ಖಡಕ್ ಅತ್ತೆಯಾಗಿ, ಮಗ ತಪ್ಪು ಮಾಡಿದಾಗ ಶಿಕ್ಷೆ ಕೊಡುವಾಗ ಅಮ್ಮನಾಗಿ ಕಾಣಿಸಿಕೊಂಡಿದ್ದಾರೆ. ಪದ್ಮಜಾ ಅವರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ಮೊದಲ ಮದುವೆ ಹಾಗೂ ಅದರ ವಿಚ್ಛೇದನದ ಬಗ್ಗೆ ಹೇಳಿದ್ದಾರೆ ಪದ್ಮಾಜಾ.
ರ‍್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಪದ್ಮಜಾ ಹೇಳಿದ್ದಾರೆ. ‘ನಾನು ಸಣ್ಣ ವಯಸ್ಸಿಗೆ ಮದುವೆ ಆದೆ. ಖುಷಿಯಿಂದಲೇ ಮದುವೆ ಆದೆ. ಧಾರಾವಾಹಿ ಮಾಡಲು ಅಮ್ಮ ಅವಕಾಶ ಕೊಡ್ತಾ ಇರಲಿಲ್ಲ. ಮದುವೆ ಆದ ಬಳಿಕ ನಟಿಸಬಹುದು ಎಂದುಕೊಂಡಿದ್ದೆ. ಆದರೆ, ಹಾಗಾಗಿಲ್ಲ’ ಎಂದರು ಪದ್ಮಜಾ.
‘ಮೊದಲ ಮದುವೆ ಯಶಸ್ಸು ಕಾಣಲಿಲ್ಲ. ಮೊದಲ ಮದುವೆಯಿಂದ ಸಂಜೀವ್ ಜನಿಸಿದ. ಆ ಬಳಿಕ ನಟಿಯಾಗಲು ಪ್ರಯತ್ನಿಸಿದೆ. ನಾನು ಆ ನೋaವಿನಿಂದ ಹೊರ ಬಂದಿದ್ದೇನೆ. ನನ್ನ ಮಗ ಸಂಜೀವ್ ಅನ್ನು ನೋಡಿದರೆ ಎಲ್ಲಾ ನೋವು ಮಾಯ ಆಗುತ್ತದೆ. ಅವನಲ್ಲಿ ಆ ಶಕ್ತಿ ಇದೆ’ ಎಂದಿದ್ದಾರೆ ಪದ್ಮಜಾ.
ನಂತರ ಪದ್ಮಜಾ ರಾವ್ ಅವರು ನಿಧಾನವಾಗಿ ಕಿರುತೆರೆಯಲ್ಲಿ ಅವಕಾಶ ಪಡೆಯುತ್ತಾ ಬಂದರು. ದೂರದರ್ಶನದಲ್ಲಿ ಪ್ರೋಗ್ರಾಂಗಳನ್ನು ಕೂಡ ನಿರ್ಮಾಣ ಮಾಡಿದರು ಪದ್ಮಜಾ ರಾವ್. ನಂತರ ಅವರಿಗೆ ನಟನೆಯಲ್ಲಿ ಹಲವು ಅವಕಾಶಗಳನ್ನು ಪಡೆದರು. ‘ಮೂಡಲ ಮನೆ’ ಅವರ ಬದುಕು ಬದಲಿಸಿತು.
ರಿಲೇಶನ್ಶಿಪ್ ಬಗ್ಗೆ ಪದ್ಮಜಾ ರಾವ್ ಸಲಹೆ ನೀಡಿದ್ದಾರೆ. ‘ಸಂಬಂಧಗಳಲ್ಲಿ ನಾನು ಸಾಕಷ್ಟು ವಿಷಯಗಳನ್ನು ಕಲಿತಿದ್ದೇನೆ. ಮಲಗುವುದಕ್ಕೂ ಮೊದಲು ಯೋಚಿಸಿ. ಲಿವಿನ್ ಅಲ್ಲಾದರೂ ಇರಿ ಅಥವಾ ಮದುವೆ ಆಗಿ ಅದು ನಿಮಗೆ ಬಿಟ್ಟಿದ್ದು. ಆದರೆ, ಅದಕ್ಕೆ ಹೋಗೋದಕ್ಕೂ ಮೊದಲು ಅವರ ಜೊತೆ ಸುತ್ತಾಡಿ, ಅವರು ಹೇಗೆ ಎಂಬುದನ್ನು ತಿಳಿದುಕೊಳ್ಳಿ’ ಎಂದು ಪದ್ಮಜಾ ರಾವ್ ಹೇಳಿದ್ದಾರೆ.