ಬುರ್ಖಾ ಧರಿಸಿ ಬಂದವಳಿಂದ ಲಕ್ಷಾಂತರ ಮೌಲ್ಯದ ಚಿನ್ನದ ಸರ ಲೂಟಿ; ಸಿಸಿಟಿವಿಯಲ್ಲಿ ಸೆರೆಯಾಯ್ತು ಕಳ್ಳಿಯ ಕೃತ್ಯ!
ಅಯೋಧ್ಯೆ, ಏ.3: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಬುರ್ಖಾ ಧರಿಸಿದ ಮಹಿಳೆಯೊಬ್ಬಳು ಗ್ರಾಹಕಿಯ ಸೋಗಿನಲ್ಲಿ ಬಂದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿರುವ ಘಟನೆ ನಡೆದಿದೆ. ಅಯೋಧ್ಯೆಯ ಜನನಿಬಿಡ ಪ್ರದೇಶದಲ್ಲಿರುವ ಆಭರಣದ ಅಂಗಡಿಯೊಂದಕ್ಕೆ ಬಂದ ಮಹಿಳೆ, ಆಭರಣಗಳನ್ನು ಖರೀದಿಸುವ ನೆಪದಲ್ಲಿ ಒಳಬಂದಿದ್ದಾಳೆ. ಅಂಗಡಿಯವರು ಆಭರಣಗಳನ್ನು ತೋರಿಸುತ್ತಿದ್ದಾಗ ಸಮಯ ಸಾಧಿಸಿದ ಆಕೆ, ಸುಮಾರು 26 ಗ್ರಾಂ ತೂಕದ ಚಿನ್ನದ ಸರ ಮತ್ತು ನೆಕ್ಲೇಸ್ ಅನ್ನು ತನ್ನೊಂದಿಗೆ ತಂದಿದ್ದ ಬಟ್ಟೆಯೊಳಗೆ ಅಡಗಿಸಿಟ್ಟುಕೊಂಡಿದ್ದಾಳೆ. ಕಳುವಾದ ಈ ಆಭರಣಗಳ ಮೌಲ್ಯ ಸುಮಾರು 3,80,000 ರೂಪಾಯಿಗಳಿಗೂ…