Headlines

nagaraj11081993

ಅಭಿವೃದ್ಧಿಯಲ್ಲಿ ಬೆಂಗಳೂರಿಗಿಂತ ದಾವಣಗೆರೆಯೇ ಮುಂದು ಎಂದ ಡಿಸಿಎಂ ಡಿ.ಕೆ. ಶಿವಕುಮಾರ್​

ದಾವಣಗೆರೆ, ಏಪ್ರಿಲ್​​ 03: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದಾವಣಗೆರೆಯಲ್ಲಿ ನಡೆದ ಚುನಾವಣಾ ಪ್ರಚಾರದ ಸಂದರ್ಭ ಶಾಮನೂರು ಶಿವಶಂಕರಪ್ಪ ಕುಟುಂಬದ ಕೊಡುಗೆಗಳನ್ನು ಮನಸಾರೆ ಹೊಗಳಿದ್ದಾರೆ. ಆಸ್ಪತ್ರೆಗಳು, ಚೌಲ್ಟ್ರಿಗಳು ಮತ್ತು ಶಿಕ್ಷಣ ಸಂಸ್ಥೆಗಳ ಮೂಲಕ ಸಮಾಜಕ್ಕೆ ಈ ಕುಟುಂಬವು ದೊಡ್ಡ ನೆರವು ನೀಡಿದೆ. ನಗರದ ಅಭಿವೃದ್ಧಿ ಕಾರ್ಯಗಳು, ರಸ್ತೆಗಳು, ಪಾರ್ಕ್‌ಗಳ ನಿರ್ವಹಣೆ ಮತ್ತು ಬಸ್ ನಿಲ್ದಾಣಗಳು ಬೆಂಗಳೂರಿಗಿಂತಲೂ ಉತ್ತಮವಾಗಿವೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ. Source link

Read More

ಆರ್​​ಸಿಬಿ ವಿರುದ್ಧದ ಪಂದ್ಯಕ್ಕೆ ಥಲಾ ಲಭ್ಯ? ಧೋನಿ ಫ್ಯಾನ್ಸ್​​ಗೆ ಖುಷಿ ಸುದ್ದಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯಕ್ಕೆ ಚಿನ್ನಸ್ವಾಮಿ ಸ್ಟೇಡಿಯಂ ಸಿದ್ಧವಾಗುತ್ತಿದೆ. ಈ ಪಂದ್ಯ ನೋಡಲು ಅಭಿಮಾನಿಗಳು ಕಾದಿದ್ದಾರೆ. ಧೋನಿ ಅವರು ಸ್ನಾಯು ಸೆಳೆತದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರಿಗೆ ಎರಡು ವಾರ ರೆಸ್ಟ್ ಸೂಚಿಸಲಾಗಿತ್ತು. ಆದರೆ, ಅವರು ಈಗ ಆರ್​​ಸಿಬಿ ವಿರುದ್ಧ ಪಂದ್ಯಕ್ಕೆ ಲಭ್ಯರಾಗುತ್ತಾರಾ ಎನ್ನುವ ಕುತೂಹಲ ಮೂಡಿದೆ. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಹೀನಾಯವಾಗಿ ಸೋತಿತು. ಇಂದು (ಏಪ್ರಿಲ್ 3) ಚೆನ್ನೈ ತಂಡ ಪಂಜಾಬ್ ಅನ್ನು ಎದುರಿಸಲಿದೆ….

Read More

ಟ್ರೆಕ್ಕಿಂಗ್​ಗೆ ತೆರಳಿದ್ದ ಕೇರಳದ ಯುವತಿ ಮಡಿಕೇರಿಯಲ್ಲಿ ನಾಪತ್ತೆ: 4 ತಂಡಗಳಿಂದ ಶೋಧ ಕಾರ್ಯ

ಮಡಿಕೇರಿ, ಏಪ್ರಿಲ್​​ 03: ಟ್ರೆಕ್ಕಿಂಗ್​ಗೆ ತೆರಳಿದ್ದ ಯುವತಿ ನಾಪತ್ತೆಯಾಗಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಕಕ್ಕಬ್ಬೆ ಗ್ರಾಮದಲ್ಲಿ ನಡೆದಿದೆ. ಕೇರಳ ಮೂಲದ ಯುವತಿ ಶರಣ್ಯ ಜಿ.ಎಸ್. ನಿನ್ನೆ ನಾಪತ್ತೆಯಾಗಿದ್ದು, ತಡಿಯಂಡಮೋಳ್ ಬೆಟ್ಟಕ್ಕೆ ಚಾರಣ‌ಕ್ಕೆ ತೆರಳಿದ್ದಾಗ ಆಕೆ ಮಿಸ್ಸಾಗಿದ್ದಾಳೆ. ಖಾಸಗಿ ಹೋಂಸ್ಟೇಯಲ್ಲಿ ತಂಗಿದ್ದ ಯುವತಿ ನಿನ್ನೆ ಒಬ್ಬಳೇ ಚಾರಣಕ್ಕೆ ತೆರಳಲು ಮುಂದಾಗಿದ್ದಳು. ಆ ಪ್ರದೇಶದಲ್ಲಿ ಕಾಡಾನೆಗಳ ಕಾಟ ಇರುವ ಕಾರಣ ಬೇರೆಯವರ ಜತೆ ಸಿಬ್ಬಂದಿ ಕಳುಹಿಸಿದ್ದರು. ಸಂಜೆಯಾದ್ರೂ ಶರಣ್ಯ ವಾಪಸಾಗದ ಹಿನ್ನೆಲೆ ಶರಣ್ಯಗಾಗಿ ಪೊಲೀಸರು, ಅರಣ್ಯ ಇಲಾಖೆ…

Read More

ಏರ್‌ಪೋರ್ಟ್‌ಗೆ ಬಂದ ಬಾಕ್ಸ್‌ನಲ್ಲಿತ್ತು ಕೊಳೆತ ಟೊಮೆಟೊ, ಅಶ್ಲೀಲ ಚಿತ್ರಗಳು! ಆರೋಪಿ ಕೊಟ್ಟ ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!

ಬೆಂಗಳೂರು, ಏ.3: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೇರೆ ಬೇರೆ ಬೆದರಿಕೆ ಕರೆಗಳು ಬಂದಿರುವುದನ್ನು ನೋಡಬಹುದು. ಆದರೆ ಇದೀಗ ವಿಚಿತ್ರ ಘಟನೆಯೊಂದು ನಡೆದಿದೆ. ಈ ಬಗ್ಗೆ ಸೋಶಿಯಲ್​​ ಮೀಡಿಯಾದಲ್ಲೂ ಭಾರೀ ವೈರಲ್​​ ಆಗಿದೆ. ವಿಮಾನ ನಿಲ್ದಾಣದ ಆಡಳಿತ ಕಚೇರಿಗೆ ಅಸಾಮಾನ್ಯ ವಸ್ತುಗಳನ್ನು ಒಳಗೊಂಡಿರುವ ಬಾಕ್ಸ್​​ವೊಂದು ಬಂದಿದೆ. ಈ ವಿಚಿತ್ರ ಪಾರ್ಸೆಲ್ ಅನ್ನು ಕಳುಹಿಸಿದ ಆರೋಪದ ಮೇಲೆ ಭಾರತೀಯ ಮೂಲದ 65 ವರ್ಷದ ಡಚ್ ಪ್ರಜೆಯನ್ನು ಬಂಧಿಸಲಾಗಿದೆ. ಸುಭಾಷ್ ಜೈ ಅಜೀಜ್ ಎಂದು ಗುರುತಿಸಲ್ಪಟ್ಟ ವ್ಯಕ್ತಿಯನ್ನು ಬುಧವಾರ…

Read More

ಬೇಸಿಗೆ ರಜೆಯ ಹಿನ್ನೆಲೆ ರೈಲ್ವೆ ಇಲಾಖೆ ಹೊಸ ಕೊಡುಗೆ! ಬೆಂಗಳೂರು-ತಿರುಚಿರಾಪಲ್ಲಿ ನಡುವೆ ವಿಶೇಷ ರೈಲು ವ್ಯವಸ್ಥೆ

ಬೆಂಗಳೂರು, ಏಪ್ರಿಲ್ 03: ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಬೇರೆಡೆಗೆ ತೆರಳುವ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಸಿಹಿ ಸುದ್ದಿ ನೀಡಿದೆ. ಹೆಚ್ಚಿನ ಜನ ಸಂದಣಿಯನ್ನು ನಿಯಂತ್ರಿಸಲು ದಕ್ಷಿಣ ರೈಲ್ವೆ ವಿಶೇಷ ರೈಲು ಸೇವೆ ಘೋಷಿಸಿದೆ. ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್​ ಮತ್ತು ತಿರುಚಿರಾಪಲ್ಲಿ (Bengaluru- Tiruchirapalli) ನಡುವೆ ನಾಲ್ಕು ಟ್ರಿಪ್‌ಗಳ ವಿಶೇಷ ರೈಲು ಸಂಚರಿಸಲಿದೆ ಎಂದು ಇಲಾಖೆ ತಿಳಿಸಿದೆ. ವಿಶೇಷ ರೈಲಿನ ವೇಳಾಪಟ್ಟಿ 06007 ಸಂಖ್ಯೆಯ ರೈಲು ಏಪ್ರಿಲ್ 7, 14, 21 ಮತ್ತು 28ರಂದು ಬೆಳಗ್ಗೆ…

Read More

ಪೆಟ್ರೋಲ್​ಗೆ ಕೇಂದ್ರ, ರಾಜ್ಯ ತೆರಿಗೆಗಳು, ಕಮಿಷನ್​ಗಳೆಷ್ಟು? ಜಿಎಸ್​ಟಿಯಿಂದ ಬೆಲೆ ಕಡಿಮೆ ಆಗುತ್ತಾ?

ನವದೆಹಲಿ, ಏಪ್ರಿಲ್ 2: ಜಾಗತಿಕ ಕಚ್ಛಾ ತೈಲ ಬೆಲೆ ಇದೇ ರೀತಿ ಅಧಿಕ ಮಟ್ಟದಲ್ಲೇ ಇದ್ದರೆ ಪೆಟ್ರೋಲ್ ಮತ್ತು ಡೀಸಲ್ ರೀಟೇಲ್ ಬೆಲೆಗಳನ್ನು ಏರಿಸುವುದು ಅನಿವಾರ್ಯವಾಗಬಹುದು. ಸಾಮಾನ್ಯ ಜನರಿಗೆ ಬೆಲೆ ಏರಿಕೆಯ ಬಿಸಿ ತಾಗಬಾರದೆಂದು ಸರ್ಕಾರ ಬೆಲೆ ಏರಿಕೆಯನ್ನು ತಡೆ ಹಿಡಿದಿದೆ. ಒಂದಷ್ಟು ಸೆಂಟ್ರಲ್ ಎಕ್ಸೈಸ್ ಟ್ಯಾಕ್ಸ್ ಅನ್ನು ತಗ್ಗಿಸಿ, ರೀಟೇಲ್ ಬೆಲೆ (Petrol price) ಏರಿಕೆಯನ್ನು ತಾತ್ಕಾಲಿಕವಾಗಿ ತಡೆಹಿಡಿದಿದೆ. ಪೆಟ್ರೋಲ್ ಮೇಲೆ ಯಾವೆಲ್ಲಾ ತೆರಿಗೆಗಳಿವೆ? ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಪೆಟ್ರೋಲ್ ಬೆಲೆ ಯಾಕೆ ವ್ಯತ್ಯಾಸ…

Read More

‘ಪೆದ್ದಿ’ ಸಿನಿಮಾ ಶೂಟಿಂಗ್ ಮುಗಿಯಿತೇ? ರಾಮ್ ಚರಣ್ ಕೊಟ್ಟರು ಉತ್ತರ

ರಾಮ್ ಚರಣ್ (Ram Charan) ನಟನೆಯ ‘ಪೆದ್ದಿ’ ಸಿನಿಮಾದ ಬಿಡುಗಡೆ ಕುರಿತು ಸಾಕಷ್ಟು ಊಹಾಪೋಹಗಳು, ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಮಾರ್ಚ್ ತಿಂಗಳಲ್ಲೇ ಬಿಡುಗಡೆ ಆಗಬೇಕಿದ್ದ ಈ ಸಿನಿಮಾ ಪದೇ ಪದೇ ಬಿಡುಗಡೆ ಮುಂದೂಡಿಕೊಂಡೇ ಬರುತ್ತಿದೆ. ಇದೀಗ ಸಿನಿಮಾ ಏಪ್ರಿಲ್ 30 ರಂದು ಬಿಡುಗಡೆ ಆಗಲಿದೆ ಎನ್ನಲಾಗುತ್ತಿದೆ. ಆದರೆ ಇದು ಸಹ ಸುಳ್ಳಾಗಲಿದ್ದು, ಸಿನಿಮಾ ಮತ್ತೆ ಮುಂದೂಡಲ್ಪಡಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇತ್ತೀಚೆಗೆ ಬಿಡುಗಡೆ ಆದ ‘ಪೆದ್ದಿ’ ಪೋಸ್ಟರ್​​ನಲ್ಲಿ ಬಿಡುಗಡೆ ದಿನಾಂಕವೇ ಇಲ್ಲದಿರುವುದು ಇನ್ನಷ್ಟು ಅನುಮಾನಗಳನ್ನು…

Read More

ವಿದ್ಯುತ್ ಚಾಲಿತ ವಾಹನಗಳಿಗೂ ಇನ್ನು ತೆರಿಗೆ​​: ರಾಜ್ಯ ಸರ್ಕಾರದ ನಿರ್ಧಾರಕ್ಕೆ ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ ಕಿಡಿ

ಬೆಂಗಳೂರು, ಏಪ್ರಿಲ್​​ 03: ವಿದ್ಯುತ್ ಚಾಲಿತ ವಾಹನಗಳಿಗೆ ಇಲ್ಲಿಯವರೆಗೆ ನೀಡಲಾಗಿದ್ದ ತೆರಿಗೆ (Tax) ವಿನಾಯಿತಿಯನ್ನು ಹಿಂಪಡೆದ ಕರ್ನಾಟಕ ಸರ್ಕಾರದ ನಿರ್ಧಾರಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ದೇಶ ಮತ್ತು ಜಗತ್ತಿನಲ್ಲಿ ವಿದ್ಯುತ್ ವಾಹನಗಳತ್ತ ಸಾಗುವ ಪ್ರಯತ್ನಕ್ಕೆ ದೊಡ್ಡ ಹಿನ್ನಡೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಈ ಕ್ರಮವು ಜನರನ್ನು ಮತ್ತೆ ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳತ್ತ ಸೆಳೆಯಲು ಪ್ರೋತ್ಸಾಹ ನೀಡಿದಂತಾಗುತ್ತದೆ. ಇದರಿಂದ ಮಾಲಿನ್ಯ ಹೆಚ್ಚಾಗುವುದಲ್ಲದೆ, ಕಚ್ಚಾ ತೈಲ ಆಮದಿನ ಮೇಲೆ ದೇಶದ ಅವಲಂಬನೆ…

Read More

IAS ರೋಹಿಣಿ ಸಿಂಧೂರಿಗೆ ಸಂಕಷ್ಟ ತಂದಿಟ್ಟ ಬಟ್ಟೆ ಬ್ಯಾಗ್ ಖರೀದಿ ಅಕ್ರಮ ಆರೋಪದ ಹಿನ್ನೆಲೆ ಏನು ಗೊತ್ತೇ? ಇಲ್ಲಿದೆ ಮಾಹಿತಿ

ಬೆಂಗಳೂರು, ಏಪ್ರಿಲ್ 03: ಸುಮಾರು 5 ವರ್ಷಗಳ ಹಿಂದೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ಪರಿಸರ ಸ್ನೇಹಿ ಬಟ್ಟೆ ಬ್ಯಾಗ್ ಖರೀದಿಯಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ಎಸಗಿದ ಆರೋಪಕ್ಕೆ ತುತ್ತಾಗಿದ್ದರು. ಈ ಪ್ರಕರಣವೀಗ ಮತ್ತೆ ಮುನ್ನೆಲೆಗೆ ಬಂದಿದ್ದು, ಕರ್ನಾಟಕ ಹೈಕೋರ್ಟ್ ​ಮಹತ್ವದ ಆದೇಶ ಹೊರಡಿಸಿದೆ. ದೂರುದಾರ ವಕೀಲ, ರವಿಚಂದ್ರೇಗೌಡ ಎನ್.ಆರ್ ಎನ್ನುವರು ಹೈಕೋರ್ಟ್​​​ಗೆ ರಿಟ್ ಅರ್ಜಿ ಸಲ್ಲಿಸಿದ್ದು, ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ತನಿಖೆಗೆ ಅನುಮತಿ ನಿರಾಕರಿಸಿದ ಸರ್ಕಾರದ ಕ್ರಮ ರದ್ದುಪಡಿಸಿದೆ. ರೋಹಿಣಿ…

Read More

ಹಲವು ಜವಾಬ್ದಾರಿಗಳ ನಡುವೆ ಜನಗಣತಿಗೂ ಶಿಕ್ಷಕರ ನಿಯೋಜನೆ: ನಿರ್ಧಾರಕ್ಕೆ ವ್ಯಾಪಕ ವಿರೋಧ

ಬೆಂಗಳೂರು, ಏಪ್ರಿಲ್​​ 03: ಜಾತಿ ಗಣತಿ, ಪಾಠ, ಬಿಸಿಯೂಟ ಹೀಗೆ ನಾನಾ ಜವಾಬ್ದಾರಿಗಳು ಮತ್ತು ಹೊಣೆ ನಿಭಾಯಿಸಿ ಸಂಕಷ್ಟ ಅನುಭವಿಸುತ್ತಿರುವ ಶಿಕ್ಷಕರನ್ನು ಏಪ್ರಿಲ್ 16ರಿಂದ ಜನಗಣತಿ ಕಾರ್ಯಕ್ಕೂ ರಾಜ್ಯದಲ್ಲಿ ನಿಯೋಜನೆ ಮಾಡಲಾಗ್ತಿದೆ. ರಾಜ್ಯದಲ್ಲಿ 2027ರ ಜನಗಣತಿ ಕಾರ್ಯಕ್ಕಾಗಿ ಒಂದು ಲಕ್ಷಕ್ಕೂ ಹೆಚ್ಚು ಸರ್ಕಾರಿ ಶಾಲಾ ಶಿಕ್ಷಕರನ್ನು ಬಳಸಿಕೊಳ್ಳುತ್ತಿದ್ದು, ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು ಈ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ. ಈಗಾಗಲೇ ಏಪ್ರಿಲ್ 1ರಿಂದ ಸ್ವಯಂ ಮೌಲ್ಯಮಾಪನ ಪ್ರಕ್ರಿಯೆ ಆರಂಭವಾಗಿದ್ದು, ಇದು ಏಪ್ರಿಲ್ 15ರವರೆಗೆ ಮುಂದುವರಿಯಲಿದೆ. ಇನ್ನು…

Read More