ಕೆ.ಆರ್. ಮಾರುಕಟ್ಟೆಗೆ ಸಿಗಲಿದೆ ಹೈಟೆಕ್ ಸ್ಪರ್ಶ: ಒಂದು ವಾರದೊಳಗೆ ಅಭಿವೃದ್ಧಿ ರಿಪೋರ್ಟ್ ನೀಡಲು ಮಹೇಶ್ವರ ರಾವ್ ಸೂಚನೆ
ಬೆಂಗಳೂರು, ಏ.3: ಬೆಂಗಳೂರಿನ ಕೆ.ಆರ್ ಮಾರುಕಟ್ಟೆಗೆ (K.R. Market) ಬೇರೆ ಬೇರೆ ಕಡೆಯಿಂದ ಜನ ಬರುತ್ತಾರೆ. ಇಲ್ಲಿ ಎಲ್ಲವೂ ಸಿಗುತ್ತದೆ. ಹಾಗೂ ಅತೀ ಕಡಿಮೆ ದರದಲ್ಲಿ ದೊರೆಯುತ್ತದೆ. ಈ ಕಾರಣಕ್ಕೆ ಇಲ್ಲಿ ಜನ ತುಂಬಿರುತ್ತಾರೆ. ಆದರೆ ಇಲ್ಲಿನ ಮೂಲಸೌಕರ್ಯದ ಬಗ್ಗೆ ಆಗ್ಗಾಗೆ ದೂರುಗಳು ಬರುತ್ತಿರುತ್ತದೆ. ಇದೀಗ ಈ ಬಗ್ಗೆ ಎಚ್ಚೆತ್ತುಕೊಂಡ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಲವು ಬದಲಾವಣೆಗಳನ್ನು ತರಲಿದೆ. ಬೆಂಗಳೂರು ಕೇಂದ್ರ ನಗರ ನಿಗಮದ ವ್ಯಾಪ್ತಿಯಲ್ಲಿರುವ ಕೆ.ಆರ್. ಮಾರುಕಟ್ಟೆಗೆ ಭೇಟಿ ನೀಡಿದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ…