All posts by nagaraj11081993

ಅಪ್ರಾಪ್ತನಿಗೆ ಸಿಗರೇಟ್ ಕಲಿಸಿ, ಬ್ಲಾಕ್‌ಮೇಲ್ ಮಾಡಿ 120 ಗ್ರಾಂ ಬಂಗಾರ ದೋಚಿದ ಖದೀಮರ ಬಂಧನ! – Kannada News

ಕೊಪ್ಪಳ, ಜೂನ್ 10: ಅಪ್ರಾಪ್ತ ಬಾಲಕನಿಗೆ ಸಿಗರೇಟ್ ಸೇದುವ ದುಶ್ಚಟ ಹಿಡಿಸಿ ಬರೋಬ್ಬರಿ 120 ಗ್ರಾಂ ಬಂಗಾರ ದೋಚಿದ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ನಡೆದಿದೆ. ಈ ಹಿನ್ನೆಲೆ ಬಸವರಾಜ್ ಅಂಗಡಿ ಮತ್ತು ನವೀನ್ ಎಂಬುವವರನ್ನು ಬಂಧಿಸಲಾಗಿದ್ದು, ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ಮೊದಲು ಬಾಲಕನಿಗೆ ಸಿಗರೇಟ್ ಅಭ್ಯಾಸ ಮಾಡಿಸಿ, ಆ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದರು. ನಂತರ, ಈ ವೀಡಿಯೊವನ್ನು ನಿನ್ನ ತಂದೆಗೆ ತೋರಿಸುತ್ತೇವೆ ಎಂದು ಬೆದರಿಸಿ ಹಣಕ್ಕಾಗಿ ಪೀಡಿಸಿದ್ದರು. ಬ್ಲಾಕ್‌ಮೇಲ್‌ಗೆ ಹೆದರಿದ ಬಾಲಕ, ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಹಂತ ಹಂತವಾಗಿ ತಂದು ಇವರಿಗೆ ನೀಡಿದ್ದನು. ಮನೆಯಲ್ಲಿ ಚಿನ್ನ ನಾಪತ್ತೆಯಾಗಿರುವುದನ್ನು ಗಮನಿಸಿದ ಪೋಷಕರು ಕುಷ್ಟಗಿ ಠಾಣೆಗೆ ದೂರು ನೀಡಿದ್ದರು. ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರೂ ಆರೋಪಿಗಳನ್ನು ಬಂಧಿಸಿ, ಅವರಿಂದ 120 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

 

Source link

ವಿಶ್ವದಾಖಲೆ ಸನಿಹದಲ್ಲಿ 23 ವರ್ಷದ ಆದಿತ್ ಪಲಿಚಾ; ಲಿಸ್ಟೆಡ್ ಕಂಪನಿಯ ಅತಿ ಕಿರಿಯ ಸಿಇಒ ಎನಿಸಲಿದ್ದಾರೆ ಝೆಪ್ಟೋ ಸಂಸ್ಥಾಪಕ – Kannada News

ಝೆಪ್ಟೋ ಸಹ-ಸ್ಥಾಪಕ ಆದಿತ್ ಪಲಿಚಾImage Credit source: Moneycontrol

ನವದೆಹಲಿ, ಜೂನ್ 10: ಕ್ವಿಕ್ ಕಾಮರ್ಸ್ ಕ್ಷೇತ್ರದ ದೈತ್ಯನೆನಿರುವ ಝೆಪ್ಟೋ (Zepto) ಸಂಸ್ಥೆಯ ಸಹ-ಸ್ಥಾಪಕ ಆದಿತ್ ಪಲಿಚಾ (Aadit Palicha) ಅವರು ಷೇರುಮಾರುಕಟ್ಟೆಯಲ್ಲಿ ಲಿಸ್ಟೆಡ್ ಆಗಿರುವ (Publicly Listed) ಕಂಪನಿಯ ಅತಿ ಕಿರಿಯ ಎಂಡಿ (MD) ಮತ್ತು ಸಿಇಒ (CEO) ಎನಿಸಲಿದ್ದಾರೆ. 23 ವರ್ಷದ ಆದಿತ್ ಪಲಿಚಾ ಅವರು ಪ್ರಸಕ್ತ ಝೆಪ್ಟೋದ ಎಂಡಿ ಮತ್ತು ಸಿಇಒ ಆಗಿದ್ದಾರೆ. ಈ ಸಂಸ್ಥೆ ಐಪಿಒಗೆ ಮುಂದಾಗಿದ್ದು, ಅದು ಯಶಸ್ವಿಯಾಗಿ ಮಾರುಕಟ್ಟೆಯಲ್ಲಿ ಲಿಸ್ಟ್ ಆದಲ್ಲಿ ಆದಿತ್ ಪಲಿಚಾ ಅವರು ಲಿಸ್ಟೆಡ್ ಕಂಪನಿಯೊಂದರ ಅತ್ಯಂತ ಕಿರಿಯ ಸಿಇಒ ಮತ್ತು ಎಂಡಿ ಎನ್ನುವ ದಾಖಲೆಗೆ ಬಾಜನರಾಗಲಿದ್ದಾರೆ.

ಕೇವಲ ಐದು ವರ್ಷಗಳ ಹಿಂದೆ ಅಮೆರಿಕದ ಸ್ಟ್ಯಾನ್​ಫೋರ್ಡ್ ವಿಶ್ವವಿದ್ಯಾಲಯದಲ್ಲಿ ದಿನಸಿ ಸಾಮಾನುಗಳನ್ನು ಮನೆಗಳಿಗೆ ತಲುಪಿಸುವ ವ್ಯವಸ್ಥೆ ರೂಪಿಸುವ ಒಂದು ಐಡಿಯಾದ ಪ್ರಯೋಗದಲ್ಲಿದ್ದ ಇಬ್ಬರು ವಿದ್ಯಾರ್ಥಿಗಳು, ಕಾಲೇಜು ತೊರೆದು ಕಿರಾನಾಕಾರ್ಟ್ ಎನ್ನುವ ಕಂಪನಿ ಆರಂಭಿಸಿದರು. 2021ರಲ್ಲಿ ಝೆಪ್ಟೋ ಶುರುವಾಯಿತು. 10 ನಿಮಿಷದಲ್ಲಿ ಜನರ ಮನೆಗಳಿಗೆ ದಿನಸಿ ತಲುಪಿಸುವ ಇವರ ಬ್ಯುಸಿನೆಸ್ ಐಡಿಯಾ ಆಗ ಬಹಳ ಜನರಿಗೆ ಅಚ್ಚರಿ ತಂದಿತ್ತು. ಆದರೆ, ಸಾವಿರಾರು ಕೋಟಿ ರೂ ಬ್ಯುಸಿನೆಸ್ ಇರುವ ಕ್ವಿಕ್ ಕಾಮರ್ಸ್ ಕ್ಷೇತ್ರದ ಹುಟ್ಟು ಮತ್ತು ಬೆಳವಣಿಗೆಗೆ ಆದಿತ್ ಪಲಚಾ ಹಾಗೂ ಅವರ ಬಾಲ್ಯಮಿತ್ರ ಮತ್ತು ಸಿಟಿಒ ಆಗಿರುವ ಕೈವಲ್ಯ ವೋಹ್ರಾ ನಾಂದಿ ಹಾಡಿದ್ದರು.

ಇದನ್ನೂ ಓದಿ: ಆನ್​ಲೈನ್​ನಲ್ಲಿ ಶಾಪಿಂಗ್ ಮಾಡುವ ಹೆಚ್ಚಿನವರಿಗೆ ಟೊಪ್ಪಿಹಾಕುತ್ತಿವೆ ಡಾರ್ಕ್ ಪ್ಯಾಟರ್ನ್ಸ್; ಬೆಚ್ಚಿಬೀಳಿಸುತ್ತಿದೆ ಈ ವರದಿ

ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯವನ್ನು ತೊರೆದಿದ್ದ ಆದಿತ್ ಪಲಿಚಾ ಮತ್ತು ಅವರ ಬಾಲ್ಯದ ಸ್ನೇಹಿತ ಕೈವಲ್ಯ ವೋಹ್ರಾ ಅವರು, ಕೇವಲ 5 ವರ್ಷಗಳ ಅಂತರದಲ್ಲಿ ತಮ್ಮ ಸ್ಟಾರ್ಟ್‌ಅಪ್ ಅನ್ನು ದಲಾಲ್ ಸ್ಟ್ರೀಟ್‌ಗೆ (ಷೇರು ಮಾರುಕಟ್ಟೆ) ಕೊಂಡೊಯ್ಯುವ ಹಂತಕ್ಕೆ ತಲುಪಿಸಿದ್ದಾರೆ.

ಆದಿತ್ ಪಲಿಚಾ ಅವರದ್ದು ವಿಶ್ವದಾಖಲೆಯಾ?

ಕೆನಡಾದ ಎಂಬಾರ್ಕ್ ಕಂಪನಿ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆದಾಗ ಅದರ ಸಿಇಒ ಹಾಗೂ ಸಂಸ್ಥಾಪಕ ಅಲೆಕ್ಸ್ ರೋಡ್ರಿಗೆಸ್ ಅವರ ವಯಸ್ಸು 26 ಮಾತ್ರ. 19ನೇ ವಯಸ್ಸಿನಲ್ಲಿ ಫೇಸ್​ಬುಕ್ ಸ್ಥಾಪಿಸಿದ ಮಾರ್ಕ್ ಜುಕರ್​ಬರ್ಗ್ ಅವರು 28ನೇ ವಯಸ್ಸಿನಲ್ಲಿದ್ದಾಗ ಅವರ ಕಂಪನಿಯು ಪಬ್ಲಿಕ್ ಲಿಸ್ಟೆಡ್ ಕಂಪನಿ ಎನಿಸಿತು. ಆದರೆ, ಝೆಪ್ಟೋ ಸಿಇಒ ಆದಿತ್ ಪಲಿಚಾ ಅವರು ಅವರೆಲ್ಲರನ್ನೂ ಮೀರಿಸುವ ಕಿರಿಯ ಎನಿಸಿದ್ದಾರೆ.

ಝೆಪ್ಟೋ ಐಪಿಒ (IPO) ವಿವರಗಳು

ಝೆಪ್ಟೋ ತನ್ನ ಐಪಿಒಗಾಗಿ ಸೆಬಿಗೆ (SEBI) ಕರಡು ಪತ್ರಗಳನ್ನು ಸಲ್ಲಿಸಿದೆ. ಈ ಐಪಿಒ ಗಾತ್ರವು ಸುಮಾರು 9,000 ಕೋಟಿ ರೂ. ನಿಂದ 10,000 ಕೋಟಿ ರೂ. ಇರಬಹುದೆಂದು ಅಂದಾಜಿಸಲಾಗಿದೆ. ಇದರಲ್ಲಿ 8,010 ಕೋಟಿ ರೂ.ಗಳ ಹೊಸ ಷೇರುಗಳ ವಿತರಣೆ ಸೇರಿದೆ.

ಝೆಪ್ಟೋ ಕೇವಲ 10 ನಿಮಿಷಗಳಲ್ಲಿ ದಿನಸಿ ವಸ್ತುಗಳನ್ನು ತಲುಪಿಸುವ ಮೂಲಕ ಆರಂಭವಾಗಿ, ಇಂದು ಭಾರತದ ಅತಿದೊಡ್ಡ ಕ್ವಿಕ್-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾಗಿ ಬೆಳೆದಿದೆ. ಪ್ರಸ್ತುತ ಕಂಪನಿಯು 66 ನಗರಗಳಲ್ಲಿ 1,139 ಡಾರ್ಕ್ ಸ್ಟೋರ್‌ಗಳನ್ನು ಹೊಂದಿದೆ.

ಇದನ್ನೂ ಓದಿ: ರೈಲುಗಳಲ್ಲಿ ಇನ್ಮುಂದೆ ಮತ್ತೆ ಅಡುಗೆ ಶುರು; ಆದರೆ, ಎಲ್​ಪಿಜಿ ಬದಲು ಇಂಡಕ್ಷನ್ ಸ್ಟೌವ್ ಬಳಲು ನಿರ್ಧಾರ

FY26 ರಲ್ಲಿ ಕಂಪನಿಯು 22,624 ಕೋಟಿ ರೂಪಾಯಿಗಳ ಕಾರ್ಯಾಚರಣೆಯ ಆದಾಯವನ್ನು ಗಳಿಸಿದೆ. ಆದಾಗ್ಯೂ, ಕಂಪನಿಯು ಇನ್ನೂ ನಷ್ಟದಲ್ಲಿದ್ದು, FY26 ರಲ್ಲಿ 5,905 ಕೋಟಿ ರೂಪಾಯಿಗಳ ನಿವ್ವಳ ನಷ್ಟವನ್ನು ವರದಿ ಮಾಡಿದೆ.

ಐಪಿಒ ಪ್ರಕ್ರಿಯೆಯಲ್ಲಿ ಆದಿತ್ ಪಲಿಚಾ ಅಥವಾ ಕೈವಲ್ಯ ವೋಹ್ರಾ ತಮ್ಮ ಯಾವುದೇ ಷೇರುಗಳನ್ನು ಮಾರಾಟ ಮಾಡುತ್ತಿಲ್ಲ. ಈ ಐಪಿಒ ಸಂಪೂರ್ಣವಾಗಿ ಹೂಡಿಕೆದಾರರ ಒಡೆತನದ ಷೇರುಗಳ ಮಾರಾಟವನ್ನು ಒಳಗೊಂಡಿದೆ.

ಈ ಸಾಧನೆಯು ಭಾರತೀಯ ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆಯಲ್ಲಿ ಒಂದು ಮೈಲಿಗಲ್ಲಾಗಿದೆ ಮತ್ತು ಅತಿ ಕಿರಿಯ ವಯಸ್ಸಿನಲ್ಲಿ ಇಂತಹ ದೊಡ್ಡ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಿರುವ ಮೊದಲ ನಿದರ್ಶನಗಳಲ್ಲಿ ಒಂದಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

9 ಸ್ಟಾರ್ ಆಟಗಾರರು ಔಟ್: ಏಷ್ಯನ್ ಗೇಮ್ಸ್​ಗೆ ಪಾಕಿಸ್ತಾನ್ ತಂಡ ಪ್ರಕಟ – Kannada News

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ ಟಿ20 ಕ್ರಿಕೆಟ್ ಟೂರ್ನಿಗಾಗಿ ಪಾಕಿಸ್ತಾನ್ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರುಗಳ ಈ ತಂಡದ ನಾಯಕನಾಗಿ ಸಾಹಿಬ್​ಝಾದ ಫರ್ಹಾನ್ ಆಯ್ಕೆಯಾಗಿದ್ದಾರೆ. ಹಾಗೆಯೇ ಯುವ ಬ್ಯಾಟರ್ ಅಬ್ದುಲ್ ಸಮದ್ ಉಪನಾಯಕರಾಗಿ ಆಯ್ಕೆಯಾಗಿದ್ದಾರೆ.

ಈ ಹಿಂದೆ ಪಾಕಿಸ್ತಾನ್ ತಂಡದ ನಾಯಕನಾಗಿ ಸಲ್ಮಾನ್ ಅಲಿ ಅಘಾ ಕಣಕ್ಕಿಳಿಯುತ್ತಿದ್ದರು. ಆದರೆ ಇದೀಗ ಪಾಕಿಸ್ತಾನ್ ತಂಡಕ್ಕೆ ಮೇಜರ್ ಸರ್ಜರಿ ಮಾಡಲಾಗಿದ್ದು, ಅದರಂತೆ ಏಷ್ಯಾಡ್ ಟೂರ್ನಿಯಲ್ಲಿ ಸಾಹಿಬ್​ಝಾದ ಫರ್ಹಾನ್ ಮುಂದಾಳತ್ವದಲ್ಲಿ ಪಾಕ್ ಪಡೆ ಕಣಕ್ಕಿಳಿಯಲಿವೆ.

ಸ್ಟಾರ್ ಆಟಗಾರರಿಗೆ ಗೇಟ್ ಪಾಸ್:

ಮುಂಬರುವ ಪ್ರಮುಖ ಸರಣಿಗಳನ್ನು ಗಮನದಲ್ಲಿಟ್ಟುಕೊಂಡು ಪಿಸಿಬಿ ಆಯ್ಕೆ ಸಮಿತಿಯು ಈ ಬಾರಿ ಸಂಪೂರ್ಣ ಯುವ ಆಟಗಾರರಿಂದ ಕೂಡಿದ ಹೊಸ ಪ್ರಯೋಗಕ್ಕೆ ಕೈಹಾಕಿದೆ. ಪರಿಣಾಮ ಅನುಭವಿ ಹಾಗೂ ಸ್ಟಾರ್ ಆಟಗಾರರು ತಂಡದಿಂದ ಹೊರಬಿದ್ದಿದ್ದಾರೆ. ಪಾಕಿಸ್ತಾನ್ ಟಿ20 ತಂಡದಿಂದ ಹೊರಬಿದ್ದಿರುವ ಪ್ರಮುಖ ಆಟಗಾರರ ಪಟ್ಟಿ ಈ ಕೆಳಗಿನಂತಿದೆ…

  • ಸಲ್ಮಾನ್ ಅಲಿ ಅಘಾ
  • ಬಾಬರ್ ಆಝಂ
  • ಶಾಹೀನ್ ಅಫ್ರಿದಿ
  • ಮೊಹಮ್ಮದ್ ರಿಝ್ವಾನ್
  • ಶಾದಾಬ್ ಖಾನ್
  • ನಸೀಮ್ ಶಾ
  • ಹ್ಯಾರಿಸ್ ರೌಫ್
  • ಇಫ್ತಿಕಾರ್ ಅಹ್ಮದ್
  • ಫಖರ್ ಜಮಾನ್

ಹೊಸ ಮುಖಗಳಿಗೆ ಮಣೆ:

ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಈ ಬಾರಿ ನಾಲ್ಕು ಹೊಸ ಆಟಗಾರರಿಗೆ ಅವಕಾಶ ನೀಡಿದೆ. ಅದರಂತೆ ಆಕಿಫ್ ಜಾವೇದ್, ಅಲಿ ರಾಝ, ಮಾಝ್ ಸದಾಕತ್ ಮತ್ತು ಸಾದ್ ಮಸೂದ್ ಅವರು ಏಷ್ಯನ್ ಗೇಮ್ಸ್ ವೇದಿಕೆಯಲ್ಲಿ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ.

ಇನ್ನು ಕಳೆದ ಟಿ20 ವಿಶ್ವಕಪ್‌ನಲ್ಲಿ ಮಿಂಚಿದ್ದ ವಿಕೆಟ್ ಕೀಪರ್ ಉಸ್ಮಾನ್ ಖಾನ್ ಮತ್ತು ಆರಂಭಿಕ ಆಟಗಾರ ಸೈಮ್ ಅಯೂಬ್ ಅವರನ್ನು ತಂಡದಲ್ಲೇ ಉಳಿಸಿಕೊಳ್ಳಲಾಗಿದೆ. ಅದರಂತೆ ಪಾಕಿಸ್ತಾನ್ ಟಿ20 ತಂಡ ಈ ಕೆಳಗಿನಂತಿದೆ…

ಪಾಕಿಸ್ತಾನ್ ಟಿ20 ತಂಡ:  ಸಾಹಿಬ್‌ಝಾದ ಫರ್ಹಾನ್ (ನಾಯಕ), ಅಬ್ದುಲ್ ಸಮದ್ (ಉಪನಾಯಕ), ಸೈಮ್ ಅಯೂಬ್, ಹೈದರ್ ಅಲಿ, ಹಸನ್ ನವಾಝ್, ಸಾದ್ ಮಸೂದ್, ಉಸ್ಮಾನ್ ಖಾನ್ (ವಿಕೆಟ್ ಕೀಪರ್), ಅರಾಫತ್ ಮಿನ್ಹಾಸ್, ಮಾಝ್ ಸದಾಕತ್, ಅಬ್ರಾರ್ ಅಹ್ಮದ್, ಸುಫ್ಯಾನ್ ಮುಖೀಮ್, ಅಹ್ಮದ್ ದಾನಿಯಾಲ್, ಆಕಿಫ್ ಜಾವೇದ್, ಅಲಿ ರಾಝ, ಮೊಹಮ್ಮದ್ ಸಲ್ಮಾನ್ ಮಿರ್ಝ.

ಇದನ್ನೂ ಓದಿ: ಬ್ಯಾಟ್ ಲಾಕ್ ಮಾಡಿದ ಕೀಪರ್: ಟೀಮ್ ಇಂಡಿಯಾ ಆಟಗಾರ ರನೌಟ್!

ಟೀಮ್ ಇಂಡಿಯಾ ರೆಡಿ:

ಏಷ್ಯನ್ ಗೇಮ್ಸ್ ಟಿ20 ಟೂರ್ನಿಗಾಗಿ ಈಗಾಗಲೇ ಭಾರತ ತಂಡವನ್ನು ಕೂಡ ಘೋಷಿಸಲಾಗಿದೆ. 15 ಸದಸ್ಯರುಗಳ ತಂಡದ ನಾಯಕನಾಗಿ ಶ್ರೇಯಸ್ ಅಯ್ಯರ್ ಕಾಣಿಸಿಕೊಳ್ಳಲಿದ್ದು, ಉಪನಾಯಕನಾಗಿ ತಿಲಕ್ ವರ್ಮಾ ಕಣಕ್ಕಿಳಿಯಲಿದ್ದಾರೆ. ಅದರಂತೆ ಮುಂಬರುವ ಏಷ್ಯನ್ ಗೇಮ್ಸ್ ಟೂರ್ನಿಗೆ ಟೀಮ್ ಇಂಡಿಯಾ ಈ ಕೆಳಗಿನಂತಿದೆ…

ಭಾರತ ಟಿ20 ತಂಡ: ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ (ಉಪಾನಯಕ), ರವಿ ಬಿಷ್ಣೋಯ್, ಅಭಿಷೇಕ್ ಶರ್ಮಾ, ನಿತೀಶ್ ಕುಮಾರ್ ರೆಡ್ಡಿ, ಜಸ್​ಪ್ರೀತ್ ಬುಮ್ರಾ ಬುಮ್ರಾ, ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ಇಶಾನ್ ಕಿಶನ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಶಿವಂ ದುಬೆ, ವರುಣ್ ಚಕ್ರವರ್ತಿ, ವೈಭವ್ ಸೂರ್ಯವಂಶಿ.

Source link

ನಾಯಿ ಮರಿಯನ್ನು ಎತ್ತಿಕೊಂಡು ಮರದ ಮೇಲೆ ಹೋಗಿ ಕುಳಿತ ಕೋತಿ – Kannada News

ಮಂಡಿ, ಜೂನ್ 10: ಪ್ರಕೃತಿಯ ಮಡಿಲಲ್ಲಿ ಪ್ರಾಣಿ(Animal)ಗಳ ಜಗತ್ತು ಕೆಲವು ಬಾರಿ ಮನುಷ್ಯರೇ ಬೆರಗಾಗುವಂತಹ ಅದ್ಭುತ ಪ್ರೀತಿ ಮತ್ತು ಕಾರುಣ್ಯದ ಕಥೆಗಳನ್ನು ನಮಗೆ ಉಣಬಡಿಸುತ್ತದೆ. ಅಂತಹದೇ ಒಂದು ಹೃದಯಸ್ಪರ್ಶಿ ಘಟನೆ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ರೆವಾಲ್ಸರ್ ಪ್ರದೇಶದಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಸಂಚಲನ ಮೂಡಿಸಿದೆ.

ಕೋತಿಯೊಂದು ತನ್ನ ಮರಿಯೇ ಎಂಬಂತೆ ನಾಯಿ ಮರಿಯನ್ನು ಎತ್ತಿಕೊಂಡು ಹೋಗಿ ಮರದ ಮೇಲೆ ಕುಳಿತಿರುವ ಘಟನೆ ಹಿಮಾಚಲ ಪ್ರದೇಶದ ಮಂಡಿಯಲ್ಲಿ ನಡೆದಿದೆ. ಮಂಡಿಯ ರೆವಾಲ್ಸರ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಸ್ಥಳೀಯರ ಪ್ರಕಾರ, ಕೋತಿ ರಸ್ತೆಬದಿಯಿಂದ ನಾಯಿಮರಿಯನ್ನು ಎತ್ತಿಕೊಂಡು ಸುಮಾರು 20 ಅಡಿ ಎತ್ತರದ ಮರವನ್ನು ಹತ್ತಿತು. ಅವರಲ್ಲಿ ಹಲವರು ಮರದ ಕೆಳಗೆ ಜಮಾಯಿಸಿ ಪ್ರಾಣಿಯು ನಾಯಿಮರಿಯನ್ನು ಎತ್ತರದಿಂದ ಬೀಳಿಸಬಹುದೆಂಬ ಭಯದಿಂದ ಇದ್ದರು.

ಆದರೆ ಕೋತಿ ನಾಯಿಯನ್ನು ಕೆಳಗೆ ಬೀಳಲು ಬಿಡಲಿಲ್ಲ, ಪ್ರತ್ಯಕ್ಷದರ್ಶಿಗಳು ಹೇಳುವಂತೆ ಕೋತಿ ನಾಯಿ ಮರಿಯನ್ನು ಹಿಡಿದುಕೊಂಡು ಸುಮಾರು 10 ರಿಂದ 15 ನಿಮಿಷಗಳ ಕಾಲ ಮರದಲ್ಲಿ ಕುಳಿತಿತ್ತು. ಮರದ ಮೇಲೆ ಸ್ವಲ್ಪ ಸಮಯ ಕಳೆದ ನಂತರ, ಕೋತಿ ಕೊನೆಗೆ ಕೆಳಗೆ ಇಳಿದು ನಾಯಿಮರಿಯನ್ನು ಸುರಕ್ಷಿತವಾಗಿ ನೆಲದ ಮೇಲೆ ಬಿಟ್ಟಿತು. ನಾಯಿಮರಿಗೆ ಯಾವುದೇ ಹಾನಿಯಾಗಲಿಲ್ಲ.

ವಿಡಿಯೋ

ತನ್ನ ಮರಿಯಾಗಿರದಿದ್ದರೂ ಅಷ್ಟು ವಾತ್ಸಲ್ಯ ತೋರಿದ ಕೋತಿ ಬಗ್ಗೆ ನೆಟ್ಟಿಗರು ಹೊಗಳುತ್ತಿದ್ದರೆ, ಇನ್ನೊಂದಿಷ್ಟು ಮಂದಿ ಒಂದೊಮ್ಮೆ ನಾಯಿ ಮರ ಬದಲು ಮಗುವನ್ನು ಎತ್ತಿಕೊಂಡು ಹೋಗಿದ್ದರೆ ಕಥೆ ಏನಾಗಿರುತ್ತಿತ್ತು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಪರಿಸರವಾದಿ ನರೇಂದ್ರ ಸೈನಿ ಜನರು ಭಯಭೀತರಾಗಬೇಡಿ ಎಂದು ಹೇಳಿದ್ದಾರೆ.

ಮತ್ತಷ್ಟು ಓದಿ: Video: ಗೊಂಬೆಯೇ ಈ ಕೋತಿ ಮರಿಯ ಕುಟುಂಬ, ಬೇರೆ ಕೋತಿಗಳು ಕೊಡುವ ಕಾಟ ನೋಡಿದ್ರೆ ನಿಮ್ಮ ಕಣ್ಣಲ್ಲೂ ನೀರು ಬರುತ್ತೆ

ಪ್ರಕೃತಿಯಲ್ಲಿ ಪ್ರೀತಿಗಿಂತ ದೊಡ್ಡದಾದ ಶಕ್ತಿ ಮತ್ತೊಂದಿಲ್ಲ ಮತ್ತು ಮೂಕ ಪ್ರಾಣಿಗಳೂ ಸಹ ಪ್ರೀತಿಯ ಭಾಷೆಯನ್ನು ಎಷ್ಟು ಸುಂದರವಾಗಿ ಆಡಬಲ್ಲವು ಎಂಬುದಕ್ಕೆ ಮಂಡಿ ಜಿಲ್ಲೆಯ ಈ ಕೋತಿ-ನಾಯಿಮರಿಯ ಸ್ನೇಹದ ಕಥೆ ಒಂದು ಅದ್ಭುತ ಉದಾಹರಣೆಯಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಹೊನ್ನಾವರ: ಅಝಾನ್ ಮೊಳಗಿಸುತ್ತಿದ್ದ ಪವಿತ್ರ ಕ್ಷಣದಲ್ಲೇ ಇಹಲೋಕ ತ್ಯಜಿಸಿದ ಮೌಲ್ವಿ – Kannada News

ಕಾಸರಕೋಡ ಟೊಂಕಾದ ಎಮ್.ಜೆ.ಎಮ್ ಮಸೀದಿ ಹಾಗೂ ಮೌಲ್ವಿ ಅಬ್ದುಲ್ ಲತೀಫ್ ಮದನಿImage Credit source: tv9

ಹೊನ್ನಾವರ, ಜೂನ್ 10: ಮಸೀದಿಯಲ್ಲಿ ಅತ್ಯಂತ ಭಕ್ತಿಭಾವದಿಂದ ಅಸರ್ ನಮಾಜ್‌ಗಾಗಿ ಅಝಾನ್ (ಪ್ರಾರ್ಥನೆಯ ಕರೆ) ಮೊಳಗಿಸುತ್ತಿದ್ದ (Azan) ಪವಿತ್ರ ಕ್ಷಣದಲ್ಲೇ ಮೌಲ್ವಿಯೊಬ್ಬರು ಹೃದಯಾಘಾತದಿಂದ ಕೊನೆಯುಸಿರೆಳೆದಿರುವ ಕರುಣಾಜನಕ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಹೊನ್ನಾವರದಲ್ಲಿ ನಡೆದಿದೆ. ಹೊನ್ನಾವರ ತಾಲೂಕಿನ ಕಾಸರಕೋಡ ಟೊಂಕಾದ ಎಮ್.ಜೆ.ಎಮ್ (MJM) ಮಸೀದಿಯಲ್ಲಿ ಮಂಗಳವಾರ ಸಂಜೆ ಈ ಘಟನೆ ಸಂಭವಿಸಿದೆ.

ಮುಖ್ಯಾಂಶಗಳು

  • ಅಝಾನ್ ಕೂಗುತ್ತಿದ್ದಾಗಲೇ ಮೌಲ್ವಿ ಸಾವು.
  • ನಮಾಜ್ ವೇಳೆ ತೀವ್ರ ಹೃದಯಾಘಾತ.
  • ಸಾವಿನ ಕೊನೆಕ್ಷಣ ಸಿಸಿಟಿವಿಯಲ್ಲಿ ಸೆರೆ.

ಮಕ್ಕಳಿಗೆ ಶಿಕ್ಷಣ ನೀಡಲು ಬಂದಿದ್ದ ಲತೀಫ್ ಮದನಿ

ಮೃತರನ್ನು ಮಂಗಳೂರು ಮೂಲದ ಕುಕ್ಕಾಜೆಯ ಅಬ್ದುಲ್ ಲತೀಫ್ ಮದನಿ ಎಂದು ಗುರುತಿಸಲಾಗಿದೆ. ಇವರು ಇಸ್ಲಾಮಿಕ್ ಧಾರ್ಮಿಕ ಹಾಗೂ ಮದರಸಾ ಶಿಕ್ಷಣವನ್ನು ಮಕ್ಕಳಿಗೆ ನೀಡುವ ಸಲುವಾಗಿ ಆರು ತಿಂಗಳ ಹಿಂದೆಯಷ್ಟೇ ಮಂಗಳೂರಿನಿಂದ ಹೊನ್ನಾವರದ ಕಾಸರಕೋಡ ಟೊಂಕಾ ಮಸೀದಿಗೆ ಆಗಮಿಸಿದ್ದರು. ಮಂಗಳವಾರ ಸಂಜೆ ವಾಡಿಕೆಯಂತೆ ಮಸೀದಿಯಲ್ಲಿ ಅಸರ್ ನಮಾಜ್ ಪ್ರಾರ್ಥನೆಗೆ ಮುನ್ನ ಮೌಲ್ವಿ ಅಬ್ದುಲ್ ಲತೀಫ್ ಅವರು ಮೈಕ್ ಹಿಡಿದು ಅಝಾನ್ ಕೂಗುತ್ತಿದ್ದರು. ಈ ವೇಳೆ ಅವರಿಗೆ ತೀವ್ರ ಹೃದಯಾಘಾತ ಸಂಭವಿಸಿದ್ದು, ಮೈಕ್ ಹಿಡಿದುಕೊಂಡೇ ಕುಸಿದು ಬಿದ್ದಿದ್ದಾರೆ.

ಆಸ್ಪತ್ರೆಗೆ ತಲುಪುವ ಮುನ್ನವೇ ಹಾರಿಹೋದ ಪ್ರಾಣ

ಮೌಲ್ವಿ ಹಠಾತ್ ಕುಸಿದು ಬೀಳುತ್ತಿರುವುದನ್ನು ಗಮನಿಸಿದ ಮಸೀದಿಯಲ್ಲಿದ್ದ ಇತರರು ತಕ್ಷಣವೇ ಅವರನ್ನು ಹೊನ್ನಾವರದ ಸೆಂಟ್ ಇಗ್ನೇಶಿಯಸ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ದುರದೃಷ್ಟವಶಾತ್ ಆಸ್ಪತ್ರೆಗೆ ತಲುಪುವ ಮುನ್ನವೇ ಮೌಲ್ವಿ ಅಬ್ದುಲ್ ಲತೀಫ್ ಮೃತಪಟ್ಟಿದ್ದಾರೆ ಎಂದು ವೈದ್ಯರು ಧೃಢಪಡಿಸಿದ್ದಾರೆ.

ಇದನ್ನೂ ಓದಿ: ಉತ್ತರ ಕನ್ನಡದ 439 ಪ್ರದೇಶಗಳಲ್ಲಿ ಗುಡ್ಡ ಕುಸಿತದ ಭೀತಿ: 100 ಕೋಟಿ ರೂ. ಬಿಡುಗಡೆಯಾದ್ರೂ ಕಾಮಗಾರಿ ನಡೆಸಲಾಗದೆ ಸಂಕಷ್ಟ!

ಅತ್ಯಂತ ಪವಿತ್ರವಾದ ಪ್ರಾರ್ಥನೆಯ ಸಮಯದಲ್ಲಿ, ಅಲ್ಲಾಹನ ನಾಮಸ್ಮರಣೆ ಮಾಡುತ್ತಿರುವಾಗಲೇ ಮೌಲ್ವಿ ಪ್ರಾಣ ಬಿಟ್ಟಿರುವುದು ಅತ್ಯಂತ ಪುಣ್ಯದ ಸಾವು ಎಂದು ಸ್ಥಳೀಯರು ಹೇಳಿದ್ದು, ಕಂಬನಿ ಮಿಡಿದಿದ್ದಾರೆ. ಮೌಲ್ವಿಯ ಕೊನೆಯ ಕ್ಷಣದ ಭೀಕರ ದೃಶ್ಯಗಳು ಮಸೀದಿಯ ಒಳಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲೂ ಸರೆಯಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶಾಲಾ ಕಟ್ಟಡದಿಂದ ಬಿದ್ದು ಬೀದರ್​​ನಲ್ಲಿ 15 ವರ್ಷದ ಬಾಲಕ ಸಾವು: ಕಾರಣ ನಿಗೂಢ – Kannada News

ಸುರೇಶ ನಾಯಕ ಮೂಲತಃ, ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮೇಲ್ಮನಹಟ್ಟಿ ಗ್ರಾಮದರು. ಓದಿದ್ದು ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪದವಿ ಹಾಗೂ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 2009 ರಿಂದ ಅಂದರೆ ಕಳೆದ 16 ವರ್ಷದಿಂದ ದೃಷ್ಯ ಮಾಧ್ಯಮ ಕ್ಷೇತ್ರದಲ್ಲಿದ್ದು ಸಮಯ ಸುದ್ದಿ ವಾಹಿನಿಯ ಇನ್ ಪೂಟ್ ವಿಭಾಗದಲ್ಲಿ, ಜೊತೆಗೆ ಕಸ್ತೂರಿ ಸುದ್ದಿವಾಹಿನಿಯ ಹುಬ್ಬಳ್ಳಿ ವರದಿಗಾರನಾಗಿ ನಾಲ್ಕು ವರ್ಷ ಕೆಲಸ ಮಾಡಿದ ಅನುಭವವಿದೆ. 2014 ಪೆಬ್ರುವರಿ 01 ರಿಂದ ಟಿವಿ9 ಸುದ್ದಿವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದು, 10 ವರ್ಷ ಪೂರೈಸಿದ್ದಾರೆ. ಟಿವಿ9 ನ ಆರಂಭದಲ್ಲಿ ಬಾಗಲಕೋಟೆ ಜಿಲ್ಲೆಯ ವರದಿಗಾರನಾಗಿ ಸಧ್ಯ ಬೀದರ್ ಜಿಲ್ಲೆಯ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಕೃಷಿ, ಮಾನವೀಯ ಕಳಕಳಿಯ ವರದಿ, ರೈತರ ಸಮಸ್ಯೆಗಳ ಕುರಿತು ಹೆಚ್ಚಿನ ಒತ್ತು ಕೊಟ್ಟು ತಮ್ಮ ಸುದ್ದಿಯ ಮೂಲಕ ನೊಂದವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿದ್ದಾರೆ. ಕಾಡು ಸುತ್ತೋದು, ಸಂಗೀತ ಕೇಳೋದು, ಇವರ ಹವ್ಯಾಸವಾಗಿದೆ…

Read More

Source link

ರಜತ್​​ಗೆ ‘ಮಚ್’ ಬ್ರದರ್ ಎಂದ ವಿನಯ್ ಗೌಡ – Kannada News

ವಿನಯ್ ಹಾಗೂ ರಜತ್ ಮಧ್ಯೆ ಬಿಗ್ ಬಾಸ್ ಮನೆಯಲ್ಲಿ ಉತ್ತಮ ಗೆಳೆತನ ಮೂಡಿದೆ. ಇಬ್ಬರೂ ಮಚ್ಚು ಹಿಡಿದು ರೀಲ್ಸ್ ಮಾಡಿ ಸುದ್ದಿ ಆಗಿದ್ದರು. ಇತ್ತೀಚೆಗೆ ನಡೆದ ‘ಬಲರಾಮನ ದಿನಗಳು’ ಸಿನಿಮಾ ಸುದ್ದಿಗೋಷ್ಠಿಯಲ್ಲಿ ರಜತ್ ಅವರನ್ನು ವಿನಯ್ ‘ಮಚ್ ಬ್ರದರ್’ ಎಂದು ಕರೆದಿದ್ದಾರೆ. ‘ನಮ್ಮ ಮಚ್ ಬ್ರದರ್ ರಜತ್ ಅವರು ಸುದ್ದಿಗೋಷ್ಠಿಗೆ ಬರಬೇಕಿತ್ತು. ಆದರೆ, ಅವನು ಶೂಟ್​​ನಲ್ಲಿ ಇರೋದ್ರಿ ಬರೋಕೆ ಆಗಿಲ್ಲ’ ಎಂದಿದ್ದಾರೆ. ಬಲರಾಮನ ದಿನಗಳು ಚಿತ್ರಕ್ಕೆ ವಿನೋದ್ ರಾಜ್ ಹೀರೋ. 80ರ ದಶಕದ ಕಥೆ ಸಿನಿಮಾದಲ್ಲಿದ್ದು, ಚಿತ್ರ ಗೆಲ್ಲುತ್ತದೆ ಎಂಬ ಭರವಸೆ ಅವರಿಗೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಹೆತ್ತವರಿಗೆ ತಾನು ಕೆಲಸ ಮಾಡುವ ಬೆಂಗಳೂರಿನ ಮೈಕ್ರೋಸಾಫ್ಟ್ ಆಫೀಸ್ ತೋರಿಸಿದ ಉದ್ಯೋಗಿ – Kannada News

ಹೆತ್ತವರೊಂದಿಗೆ ತರುಣ್ ಖಂಡಾಗರೆImage Credit source: Instagram

ಬೆಂಗಳೂರು, ಜೂನ್ 10: ಮಕ್ಕಳಿಗೆ ತಮ್ಮ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು, ಊರು ಸುತ್ತಿಸಬೇಕು. ಕಷ್ಟ ಪಟ್ಟು ಓದಿಸಿ ಒಂದೊಳ್ಳೆ ಉದ್ಯೋಗ ಸಿಗಲು ಕಾರಣರಾದ ತಂದೆ ತಾಯಿಗೆ ತಾನು ಕೆಲಸ ಮಾಡುವ ಆಫೀಸ್ ತೋರಿಸಬೇಕು ಇಂತಹ ಸಾಕಷ್ಟು ಆಸೆಗಳಿರುವುದು ಸಹಜ. ಇದೀಗ ಇಂತಹ ಭಾವನಾತ್ಮಕ ಕ್ಷಣವನ್ನು ಬೆಂಗಳೂರಿನ (Bengaluru) ಮೈಕ್ರೋಸಾಫ್ಟ್ ಉದ್ಯೋಗಿಯೊಬ್ಬರು ಸೆರೆ ಹಿಡಿದಿದ್ದಾರೆ. ತಮ್ಮ ಹೆತ್ತವರನ್ನು ಮೈಕ್ರೋಸಾಫ್ಟ್ (Microsoft) ಆಫೀಸಿಗೆ ಕರೆದುಕೊಂಡು ಹೋಗಿ ತಾನು ಕೆಲಸ ಮಾಡುವ ಸ್ಥಳವನ್ನು ತೋರಿಸುವ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಹೆತ್ತವರಿಗೆ ಹೆಮ್ಮೆ ತರುವ ಮಗನಾಗಿ ಇನ್ನು ಬೆಳೆಯಿರಿ ಎಂದು ಕಾಮೆಂಟ್‌ ಮಾಡಿದ್ದಾರೆ.

ತರುಣ್ ಖಂಡಾಗರೆ (me_tarun.khandagare) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮೈಕ್ರೋಸಾಫ್ಟ್ ಉದ್ಯೋಗಿಯೊಬ್ಬರು ಹೆತ್ತವರನ್ನು ತಮ್ಮ ಆಫೀಸ್ ತೋರಿಸಲು ಕರೆದುಕೊಂಡು ಹೋಗಿರುವ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋದ ಶೀರ್ಷಿಕೆಯಲ್ಲಿ ಪೋಷಕರು ಮೈಕ್ರೋಸಾಫ್ಟ್ ಬೆಂಗಳೂರಿಗೆ ಭೇಟಿ ನೀಡಿದರು ಎಂದು ಬರೆಯಲಾಗಿದೆ. ಪ್ರತಿಯೊಬ್ಬ ಹುಡುಗನೂ ತನ್ನ ಯಶಸ್ಸನ್ನು ಹೆತ್ತವರಿಗೆ ತೋರಿಸಬೇಕೆಂದು ಕನಸು ಕಾಣುತ್ತಾನೆ ಎಂದು ಕ್ಲಿಪ್ ನಲ್ಲಿದೆ.

ವೈರಲ್ ವಿಡಿಯೋ ಇಲ್ಲಿದೆ

ಈ ಕ್ಲಿಪಿಂಗ್‌ನಲ್ಲಿ ಮೈಕ್ರೋಸಾಫ್ಟ್ ಉದ್ಯೋಗಿಯೊಬ್ಬರು ಬಹಳ ಹೆಮ್ಮೆಯಿಂದ ತಮ್ಮ ಪೋಷಕರೊಂದಿಗೆ ಆಫೀಸಿನಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಹೆತ್ತವರು ಸಂತೋಷ ಮತ್ತು ಕುತೂಹಲದಿಂದ ಸುತ್ತಲೂ ನೋಡುತ್ತಿರುವುದು ಸೆರೆ ಹಿಡಿಯಲಾಗಿದೆ.

ಇದನ್ನೂ ಓದಿ: ತಿಂಗಳಿಗೆ ಲಕ್ಷ ಸಂಪಾದನೆಯಿದ್ರೂ ವೀಕೆಂಡ್‌ನಲ್ಲಿ ರ‍್ಯಾಪಿಡೋ ಬೈಕ್ ಓಡಿಸುವ ಬೆಂಗಳೂರಿನ ಸಾಫ್ಟ್‌ವೇರ್‌ ಇಂಜಿನಿಯರ್

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಒಬ್ಬ ಬಳಕೆದಾರ, ಈ ವಿಡಿಯೋ ನೋಡಿ ಖುಷಿಯಾಯ್ತು, ನಿಮ್ಮ ಹೆತ್ತವರನ್ನು ಹೆಮ್ಮೆಪಡುವಂತೆ ಮಾಡಿ ಮತ್ತು ಅವರನ್ನು ಯಾವಾಗಲೂ ಚೆನ್ನಾಗಿ ನೋಡಿಕೊಳ್ಳಿ ಎಂದಿದ್ದಾರೆ. ಇನ್ನೊಬ್ಬರು, ಈ ವಿಡಿಯೋ ನನ್ನ ದಿನವನ್ನು ಸುಂದರಗೊಳಿಸಿದೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ನಿಮ್ಮ ಪೋಷಕರು ನಿಮ್ಮ ಬಗ್ಗೆ ಹೆಮ್ಮೆ ಪಡುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:34 pm, Wed, 10 June 26

Source link

ಸಾರ್ವಜನಿಕ ಸೇವೆಯೇ ಉತ್ತಮ ಆಡಳಿತದ ಶ್ರೇಷ್ಠ ಮಾನದಂಡ: ಪ್ರಧಾನಿ ನರೇಂದ್ರ ಮೋದಿ – Kannada News

ನವದೆಹಲಿ, ಜೂನ್​​ 10: ಸಾರ್ವಜನಿಕ ಸೇವೆಯೇ ಉತ್ತಮ ಆಡಳಿತದ ಶ್ರೇಷ್ಠ ಮಾನದಂಡ ಎಂದು ಪ್ರಧಾನಿ ನರೇಂದ್ರ ಮೋದಿಯವರು ಪ್ರತಿಪಾದಿಸಿದ್ದಾರೆ. ಪ್ರಧಾನಿಯಾಗಿ 12 ವರ್ಷಗಳನ್ನು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಜನಸೇವೆಯ ಮಹತ್ವದ ಬಗ್ಗೆ ಸಂದೇಶ ನೀಡಿದ್ದಾರೆ. ಜನಸೇವೆಯು ಉತ್ತಮ ಆಡಳಿತದ ನಿಜವಾದ ಪರೀಕ್ಷೆಯಾಗಿದೆ ಎಂದು ಪ್ರಧಾನಮಂತ್ರಿಯವರು ತಿಳಿಸಿದ್ದಾರೆ. ಮೋದಿಯವರ ಪ್ರಕಾರ, ವಿನಮ್ರತೆ, ಸಮರ್ಪಣಾ ಭಾವನೆ ಮತ್ತು ಕರ್ತವ್ಯ ಪ್ರಜ್ಞೆಯಿಂದ ನಿರಂತರವಾಗಿ ಕೆಲಸ ಮಾಡುವ ವ್ಯಕ್ತಿ ಮಾತ್ರ ಜನರ ವಿಶ್ವಾಸವನ್ನು ಗಳಿಸಲು ಸಾಧ್ಯ. ಸಾರ್ವಜನಿಕರು ನಿಮ್ಮನ್ನು ಒಪ್ಪಿಕೊಂಡರೆ ಮತ್ತು ನಿಮ್ಮ ಮೇಲೆ ವಿಶ್ವಾಸ ಇಟ್ಟರೆ, ಅದಕ್ಕೆ ನೀವು ನೀಡುತ್ತಿರುವ ಆಡಳಿತವೇ ಮೂಲ ಕಾರಣ ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಸಂಗಾತಿ ಜತೆ ಜಗಳವಾಡಿ, ಬೇಸರದಲ್ಲಿ ಮನುಷ್ಯರಂತೆ ಗಲ್ಲದ ಮೇಲೆ ಕೈ ಇಟ್ಟು ಗಾಢವಾಗಿ ಯೋಚಿಸುತ್ತಾ ಕುಳಿತ ಗೋರಿಲ್ಲಾ – Kannada News

ಟೋಕಿಯೋ, ಜೂನ್ 10: ಇಂಟರ್ನೆಟ್ ಜಗತ್ತಿನಲ್ಲಿ ಪ್ರಾಣಿ(Animal)ಗಳ ತಮಾಷೆಯ ಹಾಗೂ ಆಸಕ್ತಿದಾಯಕ ವಿಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತವೆ. ಆದರೆ, ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಸಂಚಲನ ಮೂಡಿಸುತ್ತಿರುವ ಜಪಾನ್‌ನ ಮೃಗಾಲಯವೊಂದರ ಈ ಗೊರಿಲ್ಲಾ.

ಜಪಾನ್‌ನ ನಗೋಯಾದಲ್ಲಿರುವ ಪ್ರಸಿದ್ಧ ಹಿಗಾಶಿಯಾಮಾ ಮೃಗಾಲಯದಲ್ಲಿ ವಾಸಿಸುವ 13 ವರ್ಷದ ಕಿಯೋಮಾಸ (Kiyomasa) ಎಂಬ ಗಂಡು ಗೊರಿಲ್ಲಾದ 62 ಸೆಕೆಂಡುಗಳ ವಿಡಿಯೋ ಕ್ಲಿಪ್ ಈಗ ಭಾರಿ ವೈರಲ್ ಆಗುತ್ತಿದೆ.

ಏನಿದು ವಿಡಿಯೋದ ವೈಶಿಷ್ಟ್ಯವೇನು?
ಮಾಧ್ಯಮಗಳ ವರದಿ ಪ್ರಕಾರ, ಕಿಯೋಮಾಸ ತನ್ನ ಸಂಗಾತಿಯೊಂದಿಗೆ ಜಗಳವಾಡಿದೆ. ಮೃಗಾಲಯದ ಅಧಿಕಾರಿಗಳ ಪ್ರಕಾರ ಇದು ಪ್ರಾಣಿಗಳಲ್ಲಿ ಸಹಜವಾಗಿ ನಡೆಯುವ ಸಣ್ಣ ಭಿನ್ನಾಭಿಪ್ರಾಯವೇ ಆಗಿದ್ದರೂ, ಕಿಯೋಮಾಸ ಮಾತ್ರ ಇದನ್ನು ತೀರಾ ಮನಸ್ಸಿಗೆ ಹಚ್ಚಿಕೊಂಡಿದೆ.

ಜಗಳ ಮುಗಿದ ನಂತರ, ಕಿಯೋಮಾಸ ಬೇಸರದಿಂದ ಕಾಂಕ್ರೀಟ್ ಮೆಟ್ಟಿಲುಗಳ ಬಳಿಗೆ ಹೋಗಿ ಯಾರೂ ಇಲ್ಲದೆ ಶಾಂತವಾಗಿ ಒಬ್ಬಂಟಿಯಾಗಿ ಕುಳಿತಿತ್ತು. ವಿಡಿಯೋದಲ್ಲಿ ಆತ ಕುಳಿತಿರುವ ಶೈಲಿ ಒಬ್ಬ ಮನುಷ್ಯ ತೀವ್ರ ಆಲೋಚನೆಯಲ್ಲಿ ಮುಳುಗಿರುವಂತೆ ಕಾಣಿಸುತ್ತದೆ. ಆತ ತನ್ನ ಗಲ್ಲವನ್ನು ಕೈಯಲ್ಲಿ ಹಿಡಿದುಕೊಂಡು, ಯಾವುದೋ ಜೀವನದ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವ ತತ್ವಜ್ಞಾನಿಯಂತೆ (Philosopher) ಗಂಭೀರವಾಗಿ ಯೋಚಿಸುತ್ತಿದ್ದಾನೆ. ಅಷ್ಟೇ ಅಲ್ಲದೆ, ಮಧ್ಯೆ ಮಧ್ಯೆ ತಲೆ ಕೆರೆದುಕೊಳ್ಳುವುದನ್ನು ಕಾಣಬಹುದು.

ವಿಡಿಯೋ

ಮನುಷ್ಯರಿಗೆ ಎಷ್ಟು ಹತ್ತಿರದಲ್ಲಿವೆ ಗೊರಿಲ್ಲಾಗಳು?
ಕಿಯೋಮಾಸನ ಈ ವಿಶಿಷ್ಟ ನಡವಳಿಕೆಯು ಪ್ರಾಣಿ ಪ್ರಿಯರನ್ನು ಮಾತ್ರವಲ್ಲದೆ ವಿಜ್ಞಾನಿಗಳನ್ನು ಮತ್ತು ಪ್ರಾಣಿ ತಜ್ಞರನ್ನು ಆಶ್ಚರ್ಯಗೊಳಿಸಿದೆ. ವೈಜ್ಞಾನಿಕ ಸಂಶೋಧನೆಗಳ ಪ್ರಕಾರ, ಗೊರಿಲ್ಲಾಗಳು ಮಾನವರ ಸರಿಸುಮಾರು ಶೇಕಡಾ 98 ರಷ್ಟು ಡಿಎನ್‌ಎ (DNA) ಹಂಚಿಕೊಳ್ಳುತ್ತವೆ.

ಮತ್ತಷ್ಟು ಓದಿ:

ವೈದ್ಯನ ಮನೆಯಲ್ಲಿ ಅಪರೂಪದ ವಿದೇಶಿ ಪ್ರಾಣಿಗಳು ಪತ್ತೆ! 7 ಮಂದಿ ಅಂದರ್

ಅವು ಕೇವಲ ಕಾಡಿನಲ್ಲಿ ಬದುಕುವ ಜೀವಿಗಳಲ್ಲ, ಬದಲಿಗೆ ಅತ್ಯಂತ ಸಾಮಾಜಿಕ ಪ್ರಾಣಿಗಳಾಗಿದ್ದು, ಮನುಷ್ಯರಂತೆಯೇ ಕೋಪ, ದುಃಖ, ಅಸೂಯೆ, ಪ್ರೀತಿ ಮತ್ತು ವಿಷಾದದಂತಹ ಎಲ್ಲಾ ರೀತಿಯ ಭಾವನೆಗಳನ್ನು ವ್ಯಕ್ತಪಡಿಸುವ ಮತ್ತು ಅನುಭವಿಸುವ ಸಾಮರ್ಥ್ಯವನ್ನು ಹೊಂದಿವೆ ಎಂಬುದನ್ನು ಈ ವಿಡಿಯೋ ಮತ್ತೊಮ್ಮೆ ಸಾಬೀತುಪಡಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 12:14 pm, Wed, 10 June 26

Source link