All posts by nagaraj11081993

ಮಧ್ಯರಾತ್ರಿ ಹುಡುಗಿಯರ ಹಾಸ್ಟೆಲ್​​ಗೆ ನುಗ್ಗಿದ ಯುವಕ: ಕಳ್ಳತನಕ್ಕೆಂದು ಹೋದವನೀಗ ಖಾಕಿ ಅತಿಥಿ! – Kannada News

ಮಧ್ಯರಾತ್ರಿ ಹುಡುಗಿಯರ ಹಾಸ್ಟೆಲ್​​ಗೆ ನುಗ್ಗಿದ ಯುವಕ ಅರೆಸ್ಟ್​​Image Credit source: Tv9 Kannada

ಚಿಕ್ಕಮಗಳೂರು, ಜೂನ್​​ 10: ಸರ್ಕಾರಿ ಮೆಡಿಕಲ್ ಕಾಲೇಜಿನ ಹುಡುಗಿಯರ ಹಾಸ್ಟೆಲ್​​ಗೆ ಮಧ್ಯರಾತ್ರಿ ನುಗ್ಗಿ ಯುವಕಮೋರ್ವ ಓಡಾಟ ನಡೆಸಿರುವ ಘಟನೆ ಚಿಕ್ಕಮಗಳೂರು ನಗರದ ಹೊರವಲಯದಲ್ಲಿ ನಡೆದಿದೆ. ಹುಡುಗಿಯ ಹಾಸ್ಟೆಲ್​​ನಲ್ಲಿ ಮಧ್ಯರಾತ್ರಿ ಯುವಕನ ಕಂಡು ವಿದ್ಯಾರ್ಥಿನಿಯರು ಗಾಬರಿಗೊಂಡಿದ್ದು, ಈ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಪ್ರಕರಣ ಸಂಬಂಧ ಆರೋಪಿ ಉತ್ತರ ಪ್ರದೇಶ ಮೂಲದ ರಾಕೇಶ್ (30) ಎಂಬಾತನನ್ನು ಬಂಧಿಸಲಾಗಿದೆ.

ಕಾಲೇಜು ಆಡಳಿತ ಮಂಡಳಿ ವಿರುದ್ಧ ಆಕ್ರೋಶ

ವಿದ್ಯಾರ್ಥಿನಿಯರು ವಸತಿ ಪಡೆದಿರುವ ಮೆಡಿಕಲ್​​ ಕಾಲೇಜಿನ ಈ ಹಾಸ್ಟೆಲ್​​ನಲ್ಲಿ ಇಂತಹ ಘಟನೆಗಳು ಹೊಸದೇನೂ ಅಲ್ಲ. ಈ ಹಿಂದೆಯೂ ಇದೇ ಮಾದರಿಯ ಘಟನೆಗಳು ನಡೆದಿದ್ದವು. ಹೀಗಿದ್ದರೂ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದ ಕಾಲೇಜು ಆಡಳಿತ ಮಂಡಳಿಯ ವಿರುದ್ಧ ಯುವತಿಯರು ಆಕ್ರೋಶ ಹೊರಹಾಕಿದ್ದಾರೆ. ಘಟನೆ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಮೆಡಿಕಲ್ ಕಾಲೇಜು ಡೀನ್ ಪೊಲೀಸರಿಗೆ ದೂರು ನೀಡಿದ್ದು, ಮೆಡಿಕಲ್ ಕಾಲೇಜು ಹಾಸ್ಟೆಲ್ ಭದ್ರತೆ ಬಗ್ಗೆ ಭಾರಿ ಚರ್ಚೆಗಳು ಶುರುವಾಗಿವೆ.

ಇದನ್ನೂ ಓದಿ: ಎಸ್ಟೇಟ್​​​ನಲ್ಲಿ ಬೀಡುಬಿಟ್ಟ ಕಾಡಾನೆಗಳ ಹಿಂಡು; ಗಜಪಡೆ ಕಂಡು ಸಾರ್ವಜನಿಕರು ಕಂಗಾಲು

ಇನ್ನು ಆರೋಪಿ ರಾಕೇಶ್​​ ಮೆಡಿಕಲ್ ಕಾಲೇಜು ಕಟ್ಟಡದ ಕಾಮಗಾರಿ ನಡೆಸುತ್ತಿದ್ದ ಕಾರ್ಮಿಕನೇ ಎಂಬುದು ಗೊತ್ತಾಗಿದೆ. ಹಾಸ್ಟೆಲ್​​ನೊಳಗೆ ನುಗ್ಗಿ ವಿದ್ಯಾರ್ಥಿನಿಯರ ಜೊತೆ ಆರೋಪಿ ಅನುಚಿತವಾಗಿ ವರ್ತನೆ ಮಾಡಿದ್ದಾನೆ ಎನ್ನಲಾಗಿದ್ದು, ಈತನನ್ನು ವಿದ್ಯಾರ್ಥಿನಿಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಭಾನುವಾರ ರಾತ್ರಿ ಘಟನೆ ನಡೆದಿದ್ದು, ವಿದ್ಯಾರ್ಥಿನಿಯರ ಕೈಯಿಂದ ತಪ್ಪಿಸಿಕೊಂಡು ಓಡಿಹೋಗಲು ಆರೋಪಿ ಯತ್ನಿಸಿದ್ದ. ಹೀಗಾಗಿ ಯಾವ ಕಾರಣಕ್ಕೆ ಈತ ಯುವತಿಯರ ಹಾಸ್ಟೆಲ್​​ಗೆ ತೆರಳಿದ್ದ ಎಂಬುದನ್ನು ಪೊಲೀಸರು ವಿಚಾರಣೆ ನಡೆಸಿದಾಗ, ಕಳ್ಳತನ ಮಾಡಲು ಹೋಗೊದ್ದೆ ಎಂದು ರಾಕೇಶ್​​ ತಪ್ಪೊಪ್ಪಿಕೊಂಡಿದ್ದಾನೆ . ಈ ಹಿಂದೆಯೂ ಆರೋಪಿ ರಾಕೇಶ್​​ ಹಾಸ್ಟೆಲ್​​ಗೆ ನುಗ್ಗಿದ್ದ. ಹೀಗಿದ್ದೂ ಮತ್ತೊಮ್ಮೆ ಅಂತಹುದ್ದೇ ಕೆಲಸ ಮಾಡಿದ್ದಾನೆ ಎಂಬುದು ತನಿಖೆ ವೇಳೆ ಬಯಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 11:33 am, Wed, 10 June 26

Source link

ಮಧ್ಯಪ್ರದೇಶ ರಾಜ್ಯಸಭಾ ಚುನಾವಣೆ: ಮೀನಾಕ್ಷಿ ನಟರಾಜನ್ ನಾಮಪತ್ರ ರದ್ದಾಗಿದ್ದೇಕೆ? ಇಲ್ಲಿದೆ ಮಾಹಿತಿ – Kannada News

ಭೋಪಾಲ್, ಜೂನ್ 10: ಮಧ್ಯಪ್ರದೇಶದ ರಾಜ್ಯಸಭಾ ಚುನಾವಣೆ(Rajya Sabha Election)ಯಲ್ಲಿ ಭಾರಿ ರಾಜಕೀಯ ಹೈಡ್ರಾಮಾ ನಡೆದಿದ್ದು, ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಸಂಸದೆ ಮೀನಾಕ್ಷಿ ನಟರಾಜನ್ ಅವರ ನಾಮಪತ್ರವನ್ನು ಚುನಾವಣಾಧಿಕಾರಿಗಳು ಕೊನೆಯ ಕ್ಷಣದಲ್ಲಿ ತಿರಸ್ಕರಿಸಿದ್ದಾರೆ. ಇದು ಕಾಂಗ್ರೆಸ್‌ಗೆ ಭಾರಿ ಆಘಾತ ನೀಡಿದ್ದು, ಬಿಜೆಪಿ ಅಭ್ಯರ್ಥಿ ಮಹೇಶ್ ಅವರ ಅವಿರೋಧ ಆಯ್ಕೆಗೆ ಹಾದಿ ಸುಗಮಗೊಳಿಸಿದೆ.

ನಾಮಪತ್ರ ರದ್ದಾಗಲು ಕಾರಣವೇನು?
ಬಿಜೆಪಿ ಅಭ್ಯರ್ಥಿ ಮಹೇಶ್ ಕೇವತ್ ಅವರು ಚುನಾವಣಾಧಿಕಾರಿಗಳಿಗೆ ಅಧಿಕೃತ ದೂರು ನೀಡಿದ್ದರು. ಅದರ ಪ್ರಕಾರ: ಮೀನಾಕ್ಷಿ ನಟರಾಜನ್ ಅವರು ತೆಲಂಗಾಣದ ಹೈದರಾಬಾದ್ ಕೋರ್ಟ್‌ನಲ್ಲಿ ತಮ್ಮ ವಿರುದ್ಧ ಇರುವ ಒಂದು ಖಾಸಗಿ ದೂರಿಗೆ (Private Complaint) ಸಂಬಂಧಿಸಿದ ಮಾಹಿತಿಯನ್ನು ಚುನಾವಣಾ ಅಫಿಡವಿಟ್‌ನಲ್ಲಿ ಮುಚ್ಚಿಟ್ಟಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ದೂರಿನ ಆಧಾರದ ಮೇಲೆ, ಚುನಾವಣಾಧಿಕಾರಿಗಳು “ಮಾಹಿತಿ ಮರೆಮಾಚಿದ” ಕಾರಣಕ್ಕಾಗಿ ಅವರ ನಾಮಪತ್ರವನ್ನು ರದ್ದುಗೊಳಿಸಿದರು.

ಪ್ರಕರಣವೇನು?
ವರದಿಗಳ ಪ್ರಕಾರ, ಮೀನಾಕ್ಷಿ ನಟರಾಜನ್ ಅವರು ತೆಲಂಗಾಣದ ಎಐಸಿಸಿ (AICC) ಉಸ್ತುವಾರಿಯಾಗಿದ್ದಾರೆ. 2025 ರಲ್ಲಿ ಹೈದರಾಬಾದ್‌ನ ಮಾಜಿ ಕಾರ್ಪೊರೇಟರ್ ಒಬ್ಬರು ಸ್ಥಳೀಯ ನಾಯಕರೊಬ್ಬರಿಂದ ತಮಗೆ ಜೀವಬೆದರಿಕೆ ಇದೆ ಎಂದು ಕೋರ್ಟ್‌ಗೆ ಖಾಸಗಿ ದೂರು ನೀಡಿದ್ದರು. ಆ ದೂರಿನಲ್ಲಿ ಕಾಂಗ್ರೆಸ್‌ನ ಉನ್ನತ ನಾಯಕರು ತಮಗೆ ನ್ಯಾಯ ಒದಗಿಸಿಲ್ಲ ಎಂದು ಮೀನಾಕ್ಷಿ ನಟರಾಜನ್ ಸೇರಿದಂತೆ 7 ಜನರ ಹೆಸರನ್ನು ಉಲ್ಲೇಖಿಸಿದ್ದರು.

ಈ ಕಾರಣಕ್ಕಾಗಿ ಕೋರ್ಟ್ ಅವರಿಗೆ ಕೇವಲ ನೋಟಿಸ್ ನೀಡಿತ್ತೇ ವಿನಃ ಅವರ ಮೇಲೆ ಯಾವುದೇ ನೇರ ಎಫ್‌ಐಆರ್ ಅಥವಾ ಕ್ರಿಮಿನಲ್ ಕೇಸ್ ದಾಖಲಾಗಿರಲಿಲ್ಲ. ಆದರೆ, ಬಿಜೆಪಿ ಇದನ್ನು ಅಫಿಡವಿಟ್‌ನಲ್ಲಿ ಮರೆಮಾಚಲಾಗಿದೆ ಎಂದು ಆಕ್ಷೇಪಿಸಿತು.

ಮತ್ತಷ್ಟು ಓದಿ: ಕಾಂಗ್ರೆಸ್​ಗೆ ಭಾರೀ ಮುಖಭಂಗ; ರಾಜ್ಯಸಭೆ ಚುನಾವಣೆಗೆ ಮೀನಾಕ್ಷಿ ನಟರಾಜನ್ ನಾಮಪತ್ರ ತಿರಸ್ಕೃತ

ಕಾನೂನು ಏನು ಹೇಳುತ್ತದೆ?
ಪ್ರಜಾ ಪ್ರಾತಿನಿಧ್ಯ ಕಾಯ್ದೆ, 1951 (Representation of the People Act, 1951): ಈ ಕಾಯ್ದೆಯ ಸೆಕ್ಷನ್ 33A ಮತ್ತು ಸುಪ್ರೀಂ ಕೋರ್ಟ್‌ನ ಐತಿಹಾಸಿಕ ತೀರ್ಪುಗಳ ಪ್ರಕಾರ, ಅಭ್ಯರ್ಥಿಯು ತನ್ನ ನಾಮಪತ್ರದ ಜೊತೆ ಸಲ್ಲಿಸುವ ಅಫಿಡವಿಟ್‌ನಲ್ಲಿ ತನ್ನ ಮೇಲಿರುವ ಎಲ್ಲಾ ಕ್ರಿಮಿನಲ್ ಮೊಕದ್ದಮೆಗಳು, ಕೋರ್ಟ್ ನೋಟಿಸ್‌ಗಳು ಮತ್ತು ಬಾಕಿ ಇರುವ ಪ್ರಕರಣಗಳ ವಿವರಗಳನ್ನು ಕಡ್ಡಾಯವಾಗಿ ಮತ್ತು ಪ್ರಾಮಾಣಿಕವಾಗಿ ಘೋಷಿಸಬೇಕು.

ಮಾಹಿತಿ ಮರೆಮಾಚುವಿಕೆ (Concealment of Facts): ಅಭ್ಯರ್ಥಿಯು ಯಾವುದೇ ನ್ಯಾಯಾಲಯದ ಪ್ರಕರಣ ಅಥವಾ ಗಂಭೀರ ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಅಫಿಡವಿಟ್‌ನಲ್ಲಿ ಉಲ್ಲೇಖಿಸದಿದ್ದರೆ, ಅದನ್ನು ‘ಅಪೂರ್ಣ ಅಥವಾ ಸುಳ್ಳು ಅಫಿಡವಿಟ್’ ಎಂದು ಪರಿಗಣಿಸಿ ಚುನಾವಣಾಧಿಕಾರಿಗೆ ನಾಮಪತ್ರವನ್ನು ತಿರಸ್ಕರಿಸುವ ಸಂಪೂರ್ಣ ಅಧಿಕಾರವಿರುತ್ತದೆ.

ಕಾಂಗ್ರೆಸ್ ವಾದವೇನು?
ಈ ನಿರ್ಧಾರವನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ. ಮೀನಾಕ್ಷಿ ನಟರಾಜನ್ ಅವರ ಮೇಲೆ ಯಾವುದೇ ಪೊಲೀಸ್ ಕೇಸ್ ಅಥವಾ ಎಫ್‌ಐಆರ್ ಇಲ್ಲ, ಕೇವಲ ಕೋರ್ಟ್ ನೋಟಿಸ್ ಬಂದಿರುವುದಕ್ಕೆ ನಾಮಪತ್ರ ರದ್ದು ಮಾಡಿರುವುದು ಬೇಜವಾಬ್ದಾರಿತನ ಹಾಗೂ “ಪ್ರಜಾಪ್ರಭುತ್ವದ ಕೊಲೆ” ಎಂದು ಕಾಂಗ್ರೆಸ್ ನಾಯಕರು ದೆಹಲಿಯ ಚುನಾವಣಾ ಆಯೋಗದ  ಕಚೇರಿ ಮುಂದೆ ಭಾರಿ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ ಈ ತೀರ್ಪಿನ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಫಿಫಾ ವಿಶ್ವಕಪ್ ಅಂಗಳದಲ್ಲಿ ನಾಲ್ವರು ಭಾರತೀಯ ಮೂಲದವರು! – Kannada News

ಫುಟ್‌ಬಾಲ್ ಜಗತ್ತಿನ ಮಹಾಸಮರ ‘ಫಿಫಾ ವಿಶ್ವಕಪ್ 2026‘ ಕ್ಷಣಗಣನೆ ಶುರುವಾಗಿದೆ.  ಭಾರತ ಫುಟ್‌ಬಾಲ್ ತಂಡವು 2026ರ ಫಿಫಾ ವಿಶ್ವಕಪ್‌ಗೆ ಅರ್ಹತೆ ಪಡೆಯದಿದ್ದರೂ, ಜಾಗತಿಕ ಫುಟ್‌ಬಾಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ಮೂಲದ ನಾಲ್ವರು ಆಟಗಾರರು ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಅದು ಸಹ ಮೂರು ವಿಭಿನ್ನ ಖಂಡಗಳ ನಾಲ್ಕು ಪ್ರಮುಖ ರಾಷ್ಟ್ರಗಳ ಪರವಾಗಿ ಎಂಬುದು ವಿಶೇಷ. ಆ ಆಟಗಾರರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ…

ಸರ್​ಪ್ರೀತ್ ಸಿಂಗ್ (ನ್ಯೂಝಿಲೆಂಡ್): ಆಕ್ಲೆಂಡ್‌ನಲ್ಲಿ ಜನಿಸಿದ 27 ವರ್ಷದ ಸರ್​ಪ್ರೀತ್ ಸಿಂಗ್ ಅವರ ಪೋಷಕರು ಪಂಜಾಬ್‌ನ ಜಲಂಧರ್ ಮೂಲದವರು. 2019 ರಲ್ಲಿ ಜರ್ಮನಿಯ ಪ್ರಸಿದ್ಧ ‘ಬಯರ್ನ್ ಮ್ಯೂನಿಚ್’ ಕ್ಲಬ್ ಪರ ಆಡುವ ಮೂಲಕ ಜರ್ಮನ್ ಬುಂಡೆಸ್ಲಿಗಾದಲ್ಲಿ ಆಡಿದ ಮೊದಲ ಭಾರತೀಯ ಮೂಲದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇದೀಗ ನ್ಯೂಝಿಲೆಂಡ್ ಪರ ಚೊಚ್ಚಲ ವಿಶ್ವಕಪ್ ಪಂದ್ಯವಾಡಲು ಸರ್​ಪ್ರೀತ್ ಸಿಂಗ್ ಸಜ್ಜಾಗಿದ್ದಾರೆ.

ನಿಶಾನ್ ವೇಲುಪಿಳ್ಳೈ (ಆಸ್ಟ್ರೇಲಿಯಾ): ಮೆಲ್ಬೋರ್ನ್‌ನಲ್ಲಿ ಜನಿಸಿದ 25 ವರ್ಷದ ನಿಶಾನ್ ಅವರ ತಾಯಿ ಆಂಗ್ಲೋ-ಇಂಡಿಯನ್ ಮತ್ತು ತಂದೆ ಶ್ರೀಲಂಕಾ/ಮಲೇಷ್ಯಾ ತಮಿಳು ಮೂಲದವರು. ಆಸ್ಟ್ರೇಲಿಯಾದ ‘ಮೆಲ್ಬೋರ್ನ್ ವಿಕ್ಟರಿ’ ಅಕಾಡೆಮಿಯ ಮೂಲಕ ಫುಟ್​ಬಾಲ್ ಅಂಗಳಕ್ಕೆ ಕಾಲಿಟ್ಟ ನಿಶಾನ್, ಚೀನಾ ವಿರುದ್ಧ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಗೋಲು ಬಾರಿಸಿ ಮಿಂಚಿದ್ದರು. ಇದೀಗ ಆಸ್ಟ್ರೇಲಿಯಾ ತಂಡದ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿರುವ ನಿಶಾನ್ ವೇಲುಪಿಳ್ಳೆಯನ್ನು ಈ ಬಾರಿ ಆಸ್ಟ್ರೇಲಿಯಾದ ಮುನ್ಪಡೆ ಆಟಗಾರನಾಗಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.

ತಹ್ಸಿನ್ ಮೊಹಮ್ಮದ್ ಜಮ್ಶೀದ್ (ಖತಾರ್): ಖತಾರ್‌ನ ದೋಹಾದಲ್ಲಿ ಜನಿಸಿದ ಈ 19 ವರ್ಷದ ತಹ್ಸಿನ್ ಮೊಹಮ್ಮದ್ ಜಮ್ಶೀದ್ ಪೋಷಕರು ಕೇರಳದ ಕಣ್ಣೂರು (ತಲಶ್ಶೇರಿ) ಜಿಲ್ಲೆಯವರು. ಭಾರತೀಯ ಪಾಸ್‌ಪೋರ್ಟ್ ಹೊಂದಿರುವ ಇವರು, ಖತಾರ್‌ನ ಪ್ರತಿಷ್ಠಿತ ಆಸ್ಪೈರ್ ಅಕಾಡೆಮಿಯ ಪ್ರತಿಭೆ. ಇದೀಗ ಖತಾರ್ ಪರ ವಿಶ್ವಕಪ್​ ಆಡಲು ಸಜ್ಜಾಗಿದ್ದಾರೆ.

ಸ್ಯಾಮ್ಯುಯೆಲ್ ಮುಟುಸಾಮಿ (ಡಿಆರ್ ಕಾಂಗೋ): ಪ್ಯಾರಿಸ್‌ನಲ್ಲಿ ಜನಿಸಿದ 29 ವರ್ಷದ ಸ್ಯಾಮ್ಯುಯೆಲ್ ಅವರ ತಾಯಿ ಕಾಂಗೋ ದೇಶದವರಾದರೆ, ತಂದೆ ಭಾರತೀಯ (ತಮಿಳು) ಮೂಲದ ಗ್ವಾಡೆಲೋಪ್ ನಿವಾಸಿಯಾಗಿದ್ದಾರೆ. ಯುರೋಪಿಯನ್ ಫುಟ್‌ಬಾಲ್‌ನಲ್ಲಿ ದೀರ್ಘಕಾಲದ ಅನುಭವ ಹೊಂದಿರುವ ಇವರು, ಫ್ರಾನ್ಸ್‌ನ ಪ್ರಸಿದ್ಧ ಲೀಗ್ 1 ಕ್ಲಬ್ ಆದ ‘ನಾಂಟೆಸ್’ ಪರ 140 ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ್ದಾರೆ. ಇದೀಗ ಕಾಂಗೋ ಪರ ಮಿಡ್ ಫೀಲ್ಡರ್ ಆಗಿ ಫುಟ್​ಬಾಲ್ ವಿಶ್ವಕಪ್ ಆಡಲು ಸಜ್ಜಾಗಿ ನಿಂತಿದ್ದಾರೆ.

ಇದನ್ನೂ ಓದಿ: RCB ಆಟಗಾರನ ನಿಧಾನಗತಿಯ ಬ್ಯಾಟಿಂಗ್: ಆದರೂ ರೋಚಕ ಗೆಲುವು!

ಫಿಫಾ ವಿಶ್ವಕಪ್ ಯಾವಾಗ ಶುರು?

ಜಾಗತಿಕ ಫುಟ್‌ಬಾಲ್ ಮಹಾಸಮರಕ್ಕೆ ನಾಳೆ (ಜೂನ್ 11) ಚಾಲನೆ ಸಿಗಲಿದೆ. ಜೂನ್ 11 ರಿಂದ ಜುಲೈ 19, 2026 ರವರೆಗೆ ನಡೆಯಲಿರುವ ಈ ಟೂರ್ನಿಗೆ ಅಮೆರಿಕ, ಮೆಕ್ಸಿಕೋ ಹಾಗೂ ಕೆನಡಾ ಆತಿಥ್ಯವಹಿಸಲಿದೆ. ಇನ್ನು ಈ ಟೂರ್ನಿಯ ಪಂದ್ಯಗಳನ್ನು ಭಾರತೀಯ ಅಭಿಮಾನಿಗಳು  Zee5 (ಝೀ5) ಆಪ್ ಮೂಲಕ ಲೈವ್ ವೀಕ್ಷಿಸಬಹುದು.

Published On – 11:10 am, Wed, 10 June 26

Source link

ಉದ್ಯೋಗಾಕಾಂಕ್ಷಿಗಳಿಗೆ ಬಂಪರ್ ಕೊಡುಗೆ: 100 ದಿನಗಳೊಳಗೆ 15 ಸಾವಿರ ಶಾಲಾ ಶಿಕ್ಷಕರ ನೇಮಕಾತಿ! – Kannada News

ಬೆಂಗಳೂರು, ಜೂನ್ 10: ರಾಜ್ಯದಲ್ಲಿ ಸರ್ಕಾರಿ ಶಿಕ್ಷಕರ ಹುದ್ದೆಯ ನಿರೀಕ್ಷೆಯಲ್ಲಿದ್ದ ಅಭ್ಯರ್ಥಿಗಳಿಗೆ ಶಿಕ್ಷಣ ಇಲಾಖೆಯು ಭರ್ಜರಿ ಸಿಹಿ ಸುದ್ದಿ ನೀಡಿದೆ. ಮುಂಬರುವ 100 ದಿನಗಳ ಒಳಗಾಗಿ 15,000 ಪ್ರಾಥಮಿಕ ಶಾಲಾ ಶಿಕ್ಷಕರ (Teachers) ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸರ್ಕಾರ ಮುಂದಾಗಿದೆ. ಮುಂದಿನ ವಾರದಲ್ಲೇ ಇದಕ್ಕೆ ಸಂಬಂಧಿಸಿದ ಅಧಿಕೃತ ಅಧಿಸೂಚನೆ ಹೊರಬೀಳಲಿದೆ.

ಮುಖ್ಯಾಂಶಗಳು

  • ಮುಂದಿನ 100 ದಿನಗಳ ಒಳಗೆ 15,000 ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪೂರ್ಣಗೊಳ್ಳಲಿದೆ.
  • ಕಂಪ್ಯೂಟರ್ ಶಿಕ್ಷಣಕ್ಕಾಗಿ ಸರ್ಕಾರಿ ಶಾಲೆಗಳಿಗೆ 2,500 ಐಟಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗುತ್ತಿದೆ.
  • ಮುಂದಿನ ವಾರ ಅಧಿಕೃತ ನೋಟಿಫಿಕೇಶನ್ ಪ್ರಕಟವಾಗಲಿದ್ದು, ಎರಡು ತಿಂಗಳಲ್ಲಿ ಪರೀಕ್ಷೆ ನಡೆಯಲಿದೆ.

2500 ಐಟಿ ಶಿಕ್ಷಕರ ನೇಮಕ!

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಪ್ರಸ್ತುತ 80 ಸಾವಿರಕ್ಕೂ ಹೆಚ್ಚು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಕೊರತೆಯಿದೆ. ಈ ಕೊರತೆಯನ್ನು ನೀಗಿಸಲು ಒಟ್ಟು 51 ಸಾವಿರ ಶಿಕ್ಷಕರ ನೇಮಕಾತಿಗೆ ಆರ್ಥಿಕ ಇಲಾಖೆಯ ಅನುಮೋದನೆ ಸಿಕ್ಕಿದ್ದು, ಮೊದಲ ಹಂತದಲ್ಲಿ 15 ಸಾವಿರ ಶಿಕ್ಷಕರನ್ನು ನೇಮಿಸಿಕೊಳ್ಳಲಾಗುತ್ತಿದೆ. ಇದರಲ್ಲಿ ಪ್ರಾಥಮಿಕ, ಪ್ರೌಢಶಾಲೆ, ದೈಹಿಕ ಶಿಕ್ಷಣ ಹಾಗೂ ವಿಶೇಷವಾಗಿ ಸರ್ಕಾರಿ ಶಾಲೆಗಳಲ್ಲಿ 1ನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣ ನೀಡುವ ಉದ್ದೇಶದಿಂದ 2,500 ಐಟಿ (ಮಾಹಿತಿ ತಂತ್ರಜ್ಞಾನ) ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಈ ಶೈಕ್ಷಣಿಕ ವರ್ಷದಲ್ಲೇ ಹೊಸ ಶಿಕ್ಷಕರು ಶಾಲೆಗಳಲ್ಲಿ ಬೋಧನೆಗೆ ಲಭ್ಯವಾಗಲಿದ್ದಾರೆ.

ಇದನ್ನೂ ಓದಿ Karnataka Teaching Jobs: ಅತಿಥಿ ಉಪನ್ಯಾಸಕ ಹುದ್ದೆಗಳ ಆಕಾಂಕ್ಷಿಗಳಿಗೆ ಸುವರ್ಣಾವಕಾಶ; ನೇಮಕಾತಿ ವೇಳಾಪಟ್ಟಿ ಪ್ರಕಟ!

ಎರಡು ತಿಂಗಳಲ್ಲಿ ಪರೀಕ್ಷೆ ಮತ್ತು ರಿಸಲ್ಟ್ಸ್

ಶಿಕ್ಷಣ ಇಲಾಖೆಯು ಹೊಸ ಸಿಆರ್‌ ಆಂಡ್ ಆರ್‌ ನಿಯಮಾವಳಿಗಳ ಅಡಿಯಲ್ಲಿ PSTR, GPSTR ಹಾಗೂ HSTR ಹುದ್ದೆಗಳ ಸಮಗ್ರ ವಿವರಗಳನ್ನು ಬಿಡುಗಡೆ ಮಾಡಲಿದೆ. ನೋಟಿಫಿಕೇಶನ್ ಪ್ರಕಟವಾದ ಕೇವಲ ಎರಡು ತಿಂಗಳ ಒಳಗೆ ಪರೀಕ್ಷೆ ನಡೆಸಿ, ಫಲಿತಾಂಶ ಪ್ರಕಟಿಸುವ ಮೂಲಕ ಇಡೀ ನೇಮಕಾತಿ ಪ್ರಕ್ರಿಯೆಯನ್ನು ಶರವೇಗದಲ್ಲಿ ಮುಗಿಸಲು ಇಲಾಖೆ ಸಜ್ಜಾಗಿದೆ. ಕಳೆದ ಹಲವು ವರ್ಷಗಳಿಂದ ಶಿಕ್ಷಕರ ಹುದ್ದೆಗಾಗಿ ಕಾಯುತ್ತಿದ್ದ ಅಭ್ಯರ್ಥಿಗಳಿಗೆ ಇದು ಸುವರ್ಣ ಅವಕಾಶವಾಗಿದ್ದು, ತಕ್ಷಣವೇ ಪರೀಕ್ಷಾ ಸಿದ್ಧತೆ ಆರಂಭಿಸುವಂತೆ ಇಲಾಖೆ ಕೋರಿದೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ನೆಹರು ದಾಖಲೆ ಮುರಿದ ಪ್ರಧಾನಿ ಮೋದಿ: ಜಗತ್ತಿನಾದ್ಯಂತ ಹರಿದುಬಂದ ಅಭಿನಂದನೆಗಳ ಮಹಾಪೂರ, ವಿಶ್ವ ನಾಯಕರು ಹೇಳಿದ್ದೇನು? – Kannada News

ನವದೆಹಲಿ, ಜೂನ್ 10: ಭಾರತದ ಪ್ರಧಾನಿ ನರೇಂದ್ರ ಮೋದಿ(Narendra Modi) ಸತತ 4,399 ದಿನಗಳ ಸುಸ್ಥಿರ ಆಡಳಿತ ಪೂರೈಸಿ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಈ ಮೂಲಕ ಸ್ವತಂತ್ರ ಭಾರತದಲ್ಲಿ ಸತತವಾಗಿ ಅತಿ ದೀರ್ಘ ಅವಧಿಗೆ ಚುನಾಯಿತರಾದ ಮೊದ ಪ್ರಧಾನಿ ಎಂಬ ಐತಿಹಾಸಿಕ ಮೈಲಿಗಲ್ಲನ್ನು ಅವರು ಸ್ಥಾಪಿಸಿದ್ದಾರೆ.

ಭಾರತವನ್ನು ವಿಶ್ವದ 5ನೇ ಅತಿ ದೊಡ್ಡ ಆರ್ಥಿಕತೆಯನ್ನಾಗಿ ಬೆಳೆಸಿದ ಹಾಗೂ ಜಾಗತಿಕ ವೇದಿಕೆಯಲ್ಲಿ ದೇಶದ ಕೀರ್ತಿ ಹೆಚ್ಚಿಸಿದ ಪ್ರಧಾನಿ ಮೋದಿಯವರ ಈ ಅಪೂರ್ವ ಸಾಧನೆಗೆ ದೇಶ-ವಿದೇಶಗಳ ಪ್ರಮುಖ ನಾಯಕರಿಂದ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ಯಾರು ಏನು ಹೇಳಿದರು ಇಲ್ಲಿದೆ ಮಾಹಿತಿ.

ಜಾಗತಿಕ ನಾಯಕರ ಹಾರೈಕೆ
ಮೊಹಮ್ಮದ್ ಮುಯಿಝು (ಮಾಲ್ಡೀವ್ಸ್ ಅಧ್ಯಕ್ಷ): ಭಾರತದ ಅತ್ಯಂತ ದೀರ್ಘಾವಧಿಯ ಚುನಾಯಿತ ಪ್ರಧಾನಿಯಾಗಿ ಈ ಮೈಲಿಗಲ್ಲು ತಲುಪಿದ ನರೇಂದ್ರ ಮೋದಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಪರಸ್ಪರ ಗೌರವ ಮತ್ತು ಸಾರ್ವಭೌಮ ಸಮಾನತೆಯ ಆಧಾರದ ಮೇಲೆ ಭಾರತದೊಂದಿಗೆ ಸಹಕಾರವನ್ನು ಮತ್ತಷ್ಟು ಬಲಪಡಿಸಬೇಕೆಂಬುದು ಮಾಲ್ಡೀವ್ಸ್  ಆಶಯ ಎಂದರು.

ಮುಯಿಝು ಪೋಸ್ಟ್​

ಬೋಲಾ ಅಹ್ಮದ್ ಟಿನುಬು (ನೈಜೀರಿಯಾ ಅಧ್ಯಕ್ಷ): ಈ  ಐತಿಹಾಸಿಕ ಸಾಧನೆಯು ಭಾರತದ ಜನರು ಸತತ ಮೂರು ಅವಧಿಗಳಲ್ಲಿ ಅವರ ನಾಯಕತ್ವದ ಮೇಲೆ ಇಟ್ಟಿರುವ ಅಚಲ ವಿಶ್ವಾಸಕ್ಕೆ ಸಾಕ್ಷಿ. ಪ್ರಧಾನಿ ಮೋದಿ ಅವರು ನೈಜೀರಿಯಾದ ಆಪ್ತ ಸ್ನೇಹಿತ. ಅವರ ಬುದ್ಧಿವಂತಿಕೆ ಮತ್ತು ಧೈರ್ಯ ಪ್ರಪಂಚದಾದ್ಯಂತ ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಿದೆ ಎಂದಿದ್ದಾರೆ.

ಅನುರ ಕುಮಾರ ದಿಸಾನಾಯಕ (ಶ್ರೀಲಂಕಾ ಅಧ್ಯಕ್ಷ): ಈ ಮೈಲಿಗಲ್ಲು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಜನರು ನಿಮ್ಮ ನಾಯಕತ್ವದ ಮೇಲೆ ಪದೇ ಪದೇ ಇಟ್ಟಿರುವ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ. (2022 ರ ಆರ್ಥಿಕ ಬಿಕ್ಕಟ್ಟಿನ ವೇಳೆ ಭಾರತ ನೀಡಿದ ಬೆಂಬಲ ಹಾಗೂ 2025 ರಲ್ಲಿ ಪ್ರಧಾನಿ ಮೋದಿಯವರಿಗೆ ಲಂಕಾದ ಅತ್ಯುನ್ನತ ‘ಮಿತ್ರ ವಿಭೂಷಣ’ ಗೌರವ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು).

ಶ್ರೀಲಂಕಾ ಅಧ್ಯಕ್ಷರ ಪೋಸ್ಟ್​

ಜೇಮ್ಸ್ ಮರಾಪೆ (ಪಪುವಾ ನ್ಯೂಗಿನಿಯಾ ಪ್ರಧಾನಿ): ವಿಶೇಷ ವೀಡಿಯೊ ಸಂದೇಶ ಕಳುಹಿಸಿರುವ ಅವರು, ಪ್ರಧಾನಿ ಮೋದಿಯವರನ್ನು ನಾಯಕತ್ವದ ಅದ್ಭುತ ಮಾದರಿ ಎಂದು ಬಣ್ಣಿಸಿದ್ದಾರೆ. ಭಾರತದಲ್ಲಿ 20 ಕೋಟಿಗೂ ಅಧಿಕ ಜನರನ್ನು ಬಡತನದಿಂದ ಮೇಲೆತ್ತಿದ ಮೋದಿಯವರ ಸಾಧನೆಯನ್ನು ಅವರು ಶ್ಲಾಘಿಸಿದ್ದಾರೆ.

ಕಮಲಾ ಪ್ರಸಾದ್-ಬಿಸ್ಸೆಸ್ಸರ್ (ಟ್ರಿನಿಡಾಡ್ ಮತ್ತು ಟೊಬೆಗೊ ಪ್ರಧಾನಿ): ಪ್ರಧಾನಿ ಮೋದಿಯವರ ದೂರದೃಷ್ಟಿಯಿಂದಾಗಿ ಭಾರತವು ಜಾಗತಿಕ ವಿಷಯಗಳಲ್ಲಿ ಅತ್ಯಂತ ಪ್ರಮುಖ ಧ್ವನಿಯಾಗಿ ವಿಕಸನಗೊಂಡಿದೆ. ಅತ್ಯಂತ ಸಾಮಾನ್ಯ ಮೂಲದಿಂದ ಬಂದು 1.4 ಬಿಲಿಯನ್ ಜನಸಂಖ್ಯೆಯ ರಾಷ್ಟ್ರವನ್ನು ಮುನ್ನಡೆಸುತ್ತಿರುವ ಅವರ ಪ್ರಯಾಣ ಅದ್ಭುತ.

ಅಮೆರಿಕ ರಾಯಭಾರಿ ಶ್ಲಾಘನೆ
ರಾಯಭಾರಿ ಸೆರ್ಗಿಯೊ ಗೋರ್ (ಭಾರತದಲ್ಲಿನ ಯುಎಸ್ ರಾಯಭಾರಿ): ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಭಾರತದ ಅತಿ ಹೆಚ್ಚು ಕಾಲ ಚುನಾಯಿತ ಪ್ರಧಾನಿಯಾದ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆಗಳು. ಈ ಸಾಧನೆಯು ಅವರ ದಶಕಗಳ ಸಮರ್ಪಿತ ಸಾರ್ವಜನಿಕ ಸೇವೆ ಮತ್ತು ಪ್ರಬಲ ನಾಯಕತ್ವಕ್ಕೆ ಸಾಕ್ಷಿಯಾಗಿದೆ. ಅವರಿಗೆ ಶುಭ ಹಾರೈಕೆಗಳು ಎಂದು ಬರೆದಿದ್ದಾರೆ.

ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಒಟ್ಟು 14 ವರ್ಷ ಅಧಿಕಾರದಲ್ಲಿದ್ದರೂ ಅವರ ಅವಧಿ ಸತತವಾಗಿರಲಿಲ್ಲ. ಹೀಗಾಗಿ, 2014 ರಿಂದ ಆರಂಭಿಸಿ ಸತತ ಮೂರು ಬಾರಿ ಭರ್ಜರಿ ಜನಾದೇಶ ಪಡೆದು ಮುನ್ನಡೆಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ರಾಜಕೀಯ ಚರಿತ್ರೆಯಲ್ಲಿ ಅಪ್ರತಿಮ ಜನಪ್ರಿಯ ನಾಯಕನಾಗಿ ಹೊರಹೊಮ್ಮಿದ್ದಾರೆ ಎಂದು ಜಾಗತಿಕ ರಾಜತಾಂತ್ರಿಕ ವಲಯ ಬಿಂಬಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ನರೇಂದ್ರ ಮೋದಿ ಪ್ರಧಾನಿಯಾಗಿ 12 ವರ್ಷ ಪೂರ್ಣ; ಬೆಂಗಳೂರಿನಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ ವಿಶೇಷ ಪೂಜೆ – Kannada News

ಬೆಂಗಳೂರು, ಜೂನ್ 10: ನರೇಂದ್ರ ಮೋದಿ (Narendra Modi) ದೇಶದ ಪ್ರಧಾನಮಂತ್ರಿಯಾಗಿ ಯಶಸ್ವಿಯಾಗಿ 12 ವರ್ಷಗಳನ್ನು ಪೂರೈಸಿರುವ ಐತಿಹಾಸಿಕ ಕ್ಷಣದಲ್ಲಿ, ಬೆಂಗಳೂರಿನಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ವಿಶೇಷ ಪೂಜೆ ಸಲ್ಲಿಸಿ ಸಂಭ್ರಮಿಸಿದ್ದಾರೆ. ನಗರದ ವಿಜಯನಗರದ ಆರ್‌ಪಿಸಿ ಲೇಔಟ್‌ನಲ್ಲಿರುವ ಪ್ರಸಿದ್ಧ ಸಂಕಷ್ಟಹರ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿದ ಸಚಿವರು, ಪ್ರಧಾನಿ ಮೋದಿಯವರ ಆಯುಷ್ಯ, ಆರೋಗ್ಯ ವೃದ್ಧಿಗಾಗಿ ಹಾಗೂ ದೇಶದ ಸಮೃದ್ಧಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ವಿಜಯನಗರ ಮತ್ತು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರಗಳ ನೂರಾರು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ಪೂಜೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸೋಮಣ್ಣ, ಪ್ರಧಾನಿ ಮೋದಿಯವರ ಸುದೀರ್ಘ ನಾಯಕತ್ವವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

ಕೇಂದ್ರ ಸಚಿವ ಸಂಪುಟ ಪುನರ್‌ರಚನೆ ವೇಳೆ ವಿ. ಸೋಮಣ್ಣ ಅವರಿಗೆ ಕರ್ನಾಟಕ ರಾಜ್ಯ ರಾಜಕಾರಣದ ಪ್ರಮುಖ ಜವಾಬ್ದಾರಿ ಅಥವಾ ಹೆಚ್ಚಿನ ಹೊಣೆಗಾರಿಕೆ ವಹಿಸುವ ಸಾಧ್ಯತೆಗಳ ಕುರಿತು ಹರಿದಾಡುತ್ತಿರುವ ಸುದ್ದಿಗಳಿಗೆ ಸಚಿವರು ಪ್ರತಿಕ್ರಿಯೆ ನೀಡಿದರು. ಕರ್ನಾಟಕ ರಾಜಕಾರಣದಲ್ಲಿ ನಾನು ವಿವಿಧ ಹಂತಗಳಲ್ಲಿ ಸರಿಸುಮಾರು 45 ವರ್ಷಗಳಿಗೂ ಹೆಚ್ಚು ಕಾಲ ಸುದೀರ್ಘ ರಾಜಕೀಯ ಮಾಡಿದ್ದೇನೆ. ಆದರೆ ಸದ್ಯ ಹರಿದಾಡುತ್ತಿರುವ ಆ ರೀತಿಯ ಯಾವುದೇ ಹೊಸ ಜವಾಬ್ದಾರಿಯ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ನಾನು ಬೆಳಗ್ಗೆ ಎದ್ದರೆ ಸಂಜೆಯವರೆಗೂ ಬರೀ ದೇಶ ಸುತ್ತುತ್ತಾ ನನ್ನ ಇಲಾಖೆಯ ಕೆಲಸಗಳಲ್ಲೇ ನಿರತನಾಗಿರುತ್ತೇನೆ ಎಂದು ಸ್ಪಷ್ಟಪಡಿಸಿದರು. ರಾಜಕೀಯ ನಿಲುವನ್ನು ಪುನರುಚ್ಚರಿಸಿದ ಸೋಮಣ್ಣ, ವ್ಯಕ್ತಿಗಿಂತ ಪಕ್ಷ ದೊಡ್ಡದು, ಪಕ್ಷಕ್ಕಿಂತ ದೇಶ ದೊಡ್ಡದು ಎನ್ನುವುದನ್ನು ನಮ್ಮ ಹಿರಿಯ ನಾಯಕರು ನಮಗೆ ಸದಾ ಮನವರಿಕೆ ಮಾಡಿಕೊಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ನಮಗೆ ಕೊಡುವ ಕೆಲಸವನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದು ಮಾತ್ರ ನನ್ನ ಕರ್ತವ್ಯ ಎಂದು ತಿಳಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Gold Rate: ಹತ್ತು ಗ್ರಾಮ್ ಚಿನ್ನದ ಬೆಲೆ 3,950 ರೂ ಕುಸಿತ; ಬೆಳ್ಳಿಯೂ ಭರ್ಜರಿ ಇಳಿಕೆ – Kannada News

ನವದೆಹಲಿ, ಜೂನ್ 10: ಚಿನ್ನ ಮತ್ತು ಬೆಳ್ಳಿ ಬೆಲೆಗಳೆರಡೂ ಇಂದು ಬುಧವಾರ ಭರ್ಜರಿಯಾಗಿ ಕುಸಿತ ಕಂಡಿವೆ. ಚಿನ್ನದ ಬೆಲೆ ಒಂದು ಗ್ರಾಮ್​ಗೆ ಬರೋಬ್ಬರಿ 395 ರೂನಿಂದ 450 ರೂಗಳವರೆಗೆ ಇಳಿಕೆಯಾಗಿದೆ. ಭಾರತದಲ್ಲಿ ಆಭರಣ ಚಿನ್ನದ ಬೆಲೆ (Gold Rates) 14,000 ರೂ ಗಡಿಯೊಳಗೆ ಬಂದರೆ, ಅಪರಂಜಿ ಚಿನ್ನದ ಬೆಲೆ 15,000 ರೂಗಿಂತ ಕೆಳಗೆ ಇಳಿದಿವೆ. ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಬಂಗಾರದ ದರ ತಗ್ಗಿದೆ. ಹಳದಿ ಲೋಹದಂತೆ ಬಿಳಿ ಲೋಹವಾದ ಬೆಳ್ಳಿ ಬೆಲೆಯೂ ಭರ್ಜರಿ ಇಳಿಕೆ ಕಂಡಿದೆ. ಗ್ರಾಮ್​ಗೆ ಬರೋಬ್ಬರಿ 10 ರೂ ತಗ್ಗಿದೆ. ಬೆಂಗಳೂರಿನಲ್ಲಿ ಇದರ ಬೆಲೆ ಮತ್ತೊಮ್ಮೆ 250 ರೂಗೆ ಇಳಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,36,450 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,48,860 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 25,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,36,450 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 25,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 26,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜೂನ್ 10ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,886 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,645 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,164 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 250 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,886 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,645 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 250 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 13,645 ರೂ
  • ಚೆನ್ನೈ: 13,800 ರೂ
  • ಮುಂಬೈ: 13,645 ರೂ
  • ದೆಹಲಿ: 13,660 ರೂ
  • ಕೋಲ್ಕತಾ: 13,645 ರೂ
  • ಕೇರಳ: 13,645 ರೂ
  • ಅಹ್ಮದಾಬಾದ್: 13,650 ರೂ
  • ಜೈಪುರ್: 13,660 ರೂ
  • ಲಕ್ನೋ: 13,660 ರೂ
  • ಭುವನೇಶ್ವರ್: 13,645 ರೂ

ಇದನ್ನೂ ಓದಿ: ಆನ್​ಲೈನ್​ನಲ್ಲಿ ಶಾಪಿಂಗ್ ಮಾಡುವ ಹೆಚ್ಚಿನವರಿಗೆ ಟೊಪ್ಪಿಹಾಕುತ್ತಿವೆ ಡಾರ್ಕ್ ಪ್ಯಾಟರ್ನ್ಸ್; ಬೆಚ್ಚಿಬೀಳಿಸುತ್ತಿದೆ ಈ ವರದಿ

ವಿದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 564 ರಿಂಗಿಟ್ (13,233 ರುಪಾಯಿ)
  • ದುಬೈ: 514.25 ಡಿರಾಮ್ (13,365 ರುಪಾಯಿ)
  • ಅಮೆರಿಕ: 141.50 ಡಾಲರ್ (13,504 ರುಪಾಯಿ)
  • ಸಿಂಗಾಪುರ: 184.60 ಸಿಂಗಾಪುರ್ ಡಾಲರ್ (13,686 ರುಪಾಯಿ)
  • ಕತಾರ್: 517.50 ಕತಾರಿ ರಿಯಾಲ್ (13,547 ರೂ)
  • ಸೌದಿ ಅರೇಬಿಯಾ: 533 ಸೌದಿ ರಿಯಾಲ್ (13,547 ರುಪಾಯಿ)
  • ಓಮನ್: 54.10 ಒಮಾನಿ ರಿಯಾಲ್ (13,410 ರುಪಾಯಿ)
  • ಕುವೇತ್: 43.55 ಕುವೇತಿ ದಿನಾರ್ (13,527 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 250 ರೂ
  • ಚೆನ್ನೈ: 260 ರೂ
  • ಮುಂಬೈ: 250 ರೂ
  • ದೆಹಲಿ: 250 ರೂ
  • ಕೋಲ್ಕತಾ: 250 ರೂ
  • ಕೇರಳ: 260 ರೂ
  • ಅಹ್ಮದಾಬಾದ್: 250 ರೂ
  • ಜೈಪುರ್: 250 ರೂ
  • ಲಕ್ನೋ: 250 ರೂ
  • ಭುವನೇಶ್ವರ್: 260 ರೂ
  • ಪುಣೆ: 250

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Brain Teaser: ನಿಮ್ಮ ಬುದ್ಧಿವಂತಿಕೆಗೊಂದು ಸವಾಲ್; ಈ ಪ್ರಶ್ನೆಯಲ್ಲೇ ಅಡಗಿರುವ ಉತ್ತರವನ್ನು ಹೇಳಬಲ್ಲಿರಾ? – Kannada News

ಆಪ್ಟಿಕಲ್‌ ಇಲ್ಯೂಷನ್‌ (optical illusion) ಅಥವಾ ಒಗಟನ್ನು ಬಿಡಿಸುವಂತಹ ಕೆಲವು ಆಟಗಳು ಎಲ್ಲರ ಗಮನ ಸೆಳೆಯುತ್ತಿರುತ್ತವೆ. ಈ ಒಗಟಿನ ಪ್ರಶ್ನೆ ಬಿಡಿಸುವುದು ಖುಷಿಕೊಟ್ಟರೂ ನೀವು ನಿಮ್ಮ ಬುದ್ಧಿ ಖರ್ಚು ಮಾಡಬೇಕಾಗುತ್ತದೆ. ಕೆಲವರು ನೀರು ಕುಡಿದಂತೆ ಸಲೀಸಾಗಿ ಒಗಟು ಬಿಡಿಸುತ್ತಾರೆ. ಈ ಕುಟುಂಬದಲ್ಲಿ ಇಬ್ಬರೂ ಅಪ್ಪಂದಿರು, ಇಬ್ಬರೂ ಮಕ್ಕಳು ಇದ್ದರೂ ಇಲ್ಲಿರುವುದು ಮೂರೇ ಜನ, ಅದೇಗೆ ಎನ್ನುವ ಪ್ರಶ್ನೆ ನಿಮ್ಮಲ್ಲಿ ಮೂಡುತ್ತದೆ. ಈ ಪ್ರಶ್ನೆಗೆ ಉತ್ತರ ಹುಡುಕುವ ಕೆಲಸ ನಿಮ್ಮದು, ನೀವು ಈ ಟ್ರಿಕ್ಕಿ ಒಗಟು ಬಿಡಿಸಲು ರೆಡಿ ಇದ್ದೀರಾ ಎಂದುಕೊಳ್ಳುತ್ತೇವೆ.

ಕನ್ನಡ ವೈಬ್ಸ್‌ (kannada_vibes) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ಒಗಟಿನ ಪ್ರಶ್ನೆಗೆ ಹೀಗಿದೆ. ಬುದ್ಧಿವಂತರಿಗೆ ಮಾತ್ರ, ಮೊದಲ ಪ್ರಯತ್ನದಲ್ಲಿ ಉತ್ತರ ಹೇಳುವಿರಾ?. ಒಂದು ಕುಟುಂಬದಲ್ಲಿ 2 ಅಪ್ಪ 2 ಮಗ ಇದ್ದರು. ಆದರೂ ಅವರೆಲ್ಲರನ್ನು ಸೇರಿದರೆ ಒಟ್ಟು ಮೂವರು ಮಾತ್ರ ಆಗುತ್ತಾರೆ. ಹಾಗಾದ್ರೆ ಈ ಒಗಟು ಬಿಡಿಸಿ.

ವೈರಲ್ ಪೋಸ್ಟ್ ಇಲ್ಲಿದೆ

ಉತ್ತರ ಇಲ್ಲಿದೆ:

ಎಷ್ಟೇ ತಲೆ ಕೆಡಿಸಿಕೊಂಡರೂ ಈ ಒಗಟಿನ ಉತ್ತರವನ್ನು ಕಂಡುಹಿಡಿಯಲು ಸಾಧ್ಯವಾಗುತ್ತಿಲ್ಲವೇ, ಈ ಪ್ರಶ್ನೆಯನ್ನು ಸರಿಯಾಗಿ ಗಮನಿಸಿದರೆ ಅದರಲ್ಲೇ ಉತ್ತರ ಅಡಗಿದೆ. ಈ ಟ್ರಿಕ್ಕಿ ಒಗಟಿನ ಉತ್ತರ ಅಪ್ಪ, ಮಗ ಹಾಗೂ ಮೊಮ್ಮಗ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

RCB ಆಟಗಾರನ ನಿಧಾನಗತಿಯ ಬ್ಯಾಟಿಂಗ್: ಆದರೂ ರೋಚಕ ಗೆಲುವು! – Kannada News

ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ಟಿ20 ಬ್ಲಾಸ್ಟ್ ಟೂರ್ನಿಯ 52ನೇ ಪಂದ್ಯದಲ್ಲಿ ಎಸೆಕ್ಸ್ ತಂಡವು ರೋಚಕ ಜಯ ಸಾಧಿಸಿದೆ. ಚೆಲ್ಮ್ಸ್‌ಫೋರ್ಡ್​ನ ಕೌಂಟ್ರಿ ಗ್ರೌಂಡ್​ನಲ್ಲಿ ನಡೆದ ಈ ಪಂದ್ಯದಲ್ಲಿ ಎಸೆಕ್ಸ್ ಹಾಗು ಕೆಂಟ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಕೆಂಟ್ ತಂಡದ ನಾಯಕ ಸ್ಯಾಮ್ ಬಿಲ್ಲಿಂಗ್ ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಎಸೆಕ್ಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ದಾಂಡಿಗ ಪೌಲ್ ವಾಲ್ಟರ್ 17 ರನ್​ಗಳಿಸಿ ಔಟಾದರೆ, ಮೈಕೆಲ್ ಪೆಪ್ಪೆರ್ 6 ರನ್​ಗಳಿಗೆ ಇನಿಂಗ್ಸ್ ಅಂತ್ಯಗೊಳಿಸಿದರು.

ಈ ಹಂತದಲ್ಲಿ ಕಣಕ್ಕಿಳಿದ ಜೋರ್ಡನ್ ಕಾಕ್ಸ್ ಎಚ್ಚರಿಕೆಯ ಬ್ಯಾಟಿಂಗ್​ಗೆ ಒತ್ತು ನೀಡಿದರು. ಈ ಎಚ್ಚರಿಕೆಯ ಬ್ಯಾಟಿಂಗ್​ನೊಂದಿಗೆ ಎದುರಿಸಿದ್ದು ಬರೋಬ್ಬರಿ 31 ಎಸೆತಗಳು. ಈ ಮೂವತ್ತೊಂದು ಎಸೆತಗಳಲ್ಲಿ ಕಾಕ್ಸ್ 1 ಸಿಕ್ಸ್ ಹಾಗೂ 5 ಫೋರ್​ಗಳೊಂದಿಗೆ ಕೇವಲ 40 ರನ್​ಗಳಿಸಲಷ್ಟೇ ಶಕ್ತರಾದರು.

ಒಂದೆಡೆ ಕಾಕ್ಸ್ ಅವರ ನಿಧಾನಗತಿಯ ಬ್ಯಾಟಿಂಗ್​ನಿಂದಾಗಿ ಎಸೆಕ್ಸ್ ತಂಡದ ರನ್​ ಗತಿ ಕೂಡ ಕುಂಠಿತವಾಯಿತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಚಾರ್ಲಿ ಅಲ್ಲಿಸನ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ರನ್ ವೇಗ ಹೆಚ್ಚಿಸಿದರು.

  • 47 ಎಸೆತಗಳನ್ನು ಎದುರಿಸಿದ ಚಾರ್ಲಿ ಅಲ್ಲಿಸನ್ 6 ಭರ್ಜರಿ ಸಿಕ್ಸ್​ ಹಾಗೂ 3 ಫೋರ್​ಗಳೊಂದಿಗೆ 74 ರನ್ ಬಾರಿಸಿದರು.
  • ಚಾರ್ಲಿ ಅಲ್ಲಿಸನ್​ಗೆ ಉತ್ತಮ ಸಾಥ್ ನೀಡಿದ ವಿಯಾನ್ ಮುಲ್ಡರ್ 11 ಎಸೆತಗಳಲ್ಲಿ 29 ರನ್​ಗಳ ಕೊಡುಗೆ ನೀಡಿದರು.

ಚಾರ್ಲಿ ಅಲ್ಲಿಸನ್ ಅವರ ಸಿಡಿಲಬ್ಬರ ಹಾಗೂ ವಿಯಾನ್ ಮುಲ್ಡರ್ ಸ್ಫೋಟಕ ಬ್ಯಾಟಿಂಗ್ ನೆರವಿನೊಂದಿಗೆ ಎಸೆಕ್ಸ್ ತಂಡವು 20 ಓವರ್​ಗಳಲ್ಲಿ 187 ರನ್ ಕಲೆಹಾಕಿತು.

188 ರನ್​ಗಳ ಗುರಿ:

ಈ ಗುರಿ ಬೆನ್ನತ್ತಿದ ಕೆಂಟ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಚಾರ್ಲಿ ಬೆನ್ನೆಟ್ ಯಶಸ್ವಿಯಾದರು. ಆರಂಭಿಕ ದಾಂಡಿಗರಾದ ಹ್ಯಾರಿ ಫಿಂಚ್ (13) ಹಾಗೂ ಬೆಲ್ ಡ್ರಾಮೊಂಡ್ (2) ವಿಕೆಟ್ ಉರುಳಿಸುವ ಮೂಲಕ ಚಾರ್ಲಿ ಬೆನ್ನೆಟ್ ಪವರ್​ಪ್ಲೇನಲ್ಲೇ 2 ಯಶಸ್ಸು ತಂದು ಕೊಟ್ಟರು.

ಆದರೆ ಬಳಿಕ ಬಂದ ನಾಯಕ ಸ್ಯಾಮ್ ಬಿಲ್ಲಿಂಗ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. 38 ಎಸೆತಗಳನ್ನು ಎದುರಿಸಿದ ಬಿಲ್ಲಿಂಗ್ಸ್​ 4 ಭರ್ಜರಿ ಸಿಕ್ಸ್ ಹಾಗೂ 3 ಫೋರ್​ಗಳೊಂದಿಗೆ 68 ರನ್ ಬಾರಿಸಿದರು. ಇದಾಗ್ಯೂ ಕೆಂಟ್ ತಂಡಕ್ಕೆ ಗೆಲ್ಲಲು ಕೊನೆಯ ಓವರ್​ನಲ್ಲಿ 17 ರನ್​ಗಳ ಅವಶ್ಯಕತೆಯಿತ್ತು.

ಅಂತಿಮ ಓವರ್​ನಲ್ಲಿ ಜೇಕ್ ಲಿನ್ನೊಟ್ ಹಾಗೂ ಫ್ರೆಡ್ ಕ್ಲಾಸೆನ್ ಜೊತೆಗೂಡಿ 4, 4, 0, 1, 1, 4 ಬಾರಿಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಿಲ್ಲ. ಅಂತಿಮವಾಗಿ ಎಸೆಕ್ಸ್ ತಂಡವು 3 ರನ್​ಗಳ ರೋಚಕ ಜಯ ಸಾಧಿಸುವಲ್ಲಿ ಯಶಸ್ವಿಯಾಯಿತು.

Source link

ಗ್ಲಾಮರ್ ಬಿಟ್ಟು ಹಾರರ್ ಕಡೆ ಹೊರಟ ಜಾನ್ಹವಿ ಕಪೂರ್ – Kannada News

ಜಾನ್ಹವಿ ಕಪೂರ್ (Janhvi Kapoor), ರಾಮ್ ಚರಣ್ ಒಟ್ಟಿಗೆ ನಟಿಸಿರುವ ‘ಪೆದ್ದಿ’ ಸಿನಿಮಾ ಕಳೆದ ಗುರುವಾರವಷ್ಟೆ ಬಿಡುಗಡೆ ಆಗಿದ್ದು, ಬಾಕ್ಸ್ ಆಫೀಸ್​​ನಲ್ಲಿ ಸದ್ದು ಮಾಡುತ್ತಿದೆ. ಆದರೆ ಸಿನಿಮಾನಲ್ಲಿ ಜಾನ್ಹವಿ ಕಪೂರ್ ಅವರನ್ನು ತೋರಿಸುವ ರೀತಿಯ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗಿದ್ದು, ಜಾನ್ಹವಿಯನ್ನು ಅತಿಯಾಗಿ ಗ್ಲಾಮರೈಸ್ ಮಾಡಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಕೆಲವರು ನಟಿ ಜಾನ್ಹವಿಯನ್ನೂ ಸಹ ಟೀಕೆ ಮಾಡಿದ್ದಾರೆ. ನಟಿಯಾದವರು ತಾವು ಇಂಥಹಾ ದೃಶ್ಯಗಳಲ್ಲಿ ನಟಿಸುವುದಿಲ್ಲ, ಇಂಥಹಾ ಉಡುಗೆ ಉಡುವುದಿಲ್ಲ ಎಂದು ಒಂದು ನಿಯಮವನ್ನು ಹೊಂದಿರಬೇಕು, ಹಾಗಿದ್ದಾಗ ಇಂಥಹಾ ಘಟನೆಗಳು ನಡೆಯುವುದಿಲ್ಲ ಎಂದು ಕೆಲವರು ನಟಿಯನ್ನೇ ಟೀಕೆ ಮಾಡಿದ್ದಾರೆ. ಈ ವಿವಾದದ ಬಳಿಕ ನಟಿ ಜಾನ್ಹವಿ ಕಪೂರ್ ಗ್ಲಾಮರ್​ ಇಂದ ದೂರಾಗಿ ಹಾರರ್ ಕಡೆಗೆ ಮುಖ ಮಾಡಿದ್ದಾರೆ.

ಜಾನ್ಹವಿ ಕಪೂರ್ ಈ ವರೆಗೆ ಬಹುತೇಕ ಗ್ಲಾಮರಸ್ ಪಾತ್ರಗಳಲ್ಲಿಯೇ ನಟಿಸಿದ್ದಾರೆ. ರೀಮೇಕ್ ಸಿನಿಮಾಗಳಾದ, ‘ಗುಡ್ ಲಕ್ ಜೆರ್ರಿ’, ‘ಮಿಲಿ’ ಸಿನಿಮಾಗಳಲ್ಲಿ ತುಸು ಭಿನ್ನ ಪಾತ್ರವಿದೆ. ಹಾಗೂ ‘ಗುಂಜನ್ ಸಕ್ಸೇನಾ’ ಸಿನಿಮಾನಲ್ಲಿಯೂ ಭಿನ್ನವಾದ ಪಾತ್ರದಲ್ಲಿ ನಟಿಸಿದ್ದರು. ಇವುಗಳ ಹೊರತಾಗಿ ಜಾನ್ಹವಿ ಬಹುತೇಕ ಎಲ್ಲ ಸಿನಿಮಾಗಳಲ್ಲಿಯೂ ಗ್ಲಾಮರ್ ಗೊಂಬೆಯಾಗಿಯೇ ಕಾಣಿಸಿಕೊಂಡಿದ್ದಾರೆ. ಈಗ ‘ಪೆದ್ದಿ’ ಸಿನಿಮಾನಲ್ಲಿ ಅವರ ಅತಿಯಾದ ಗ್ಲಾಮರ್ ಪ್ರದರ್ಶನದಿಂದ ತೀವ್ರ ಟೀಕೆಗೂ ಗುರಿ ಆಗಿದ್ದಾರೆ.

ಇದೇ ಕಾರಣಕ್ಕೋ ಏನೋ ಜಾನ್ಹವಿ ಕಪೂರ್ ಈಗ ಹಾರರ್ ಕಡೆಗೆ ಮುಖ ಮಾಡಿದ್ದಾರೆ. ಕಲ್ಟ್ ಕ್ಲಾಸಿಕ್ ಎನಿಸಿಕೊಂಡಿರುವ ‘ತುಂಬಾಡ್’ ಸಿನಿಮಾ ನಿರ್ದೇಶಿಸಿದ್ದ ನಿರ್ದೇಶಕನ ಹೊಸ ಸಿನಿಮಾನಲ್ಲಿ ಜಾನ್ಹವಿ ಕಪೂರ್ ನಟಿಸಲಿದ್ದಾರೆ. ‘ತುಂಬಾಡ್’ ನಿರ್ದೇಶನ ಮಾಡಿರುವ ರಹಿ ಅನಿಲ್ ಬರ್ವೆ ಅವರು ಹೊಸ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದು, ಅದೂ ಸಹ ಸಸ್ಪೆನ್ಸ್ ಥ್ರಿಲ್ಲರ್ ಕತೆಯನ್ನು ಒಳಗೊಂಡಿದೆ. ಈ ಸಿನಿಮಾನಲ್ಲಿ ಜಾನ್ಹವಿ ಕಪೂರ್ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.

ಇದನ್ನೂ ಓದಿ:‘ಪೆದ್ದಿ’ ವಿವಾದ, ನಟಿ ಜಾನ್ಹವಿಯ ಬೆಂಬಲಕ್ಕೆ ನಿಂತ ಆಶಿಕಾ ರಂಗನಾಥ್

ಜಾನ್ಹವಿ ಅವರು ಹಲವು ಚಿತ್ರಕತೆಗಳನ್ನು ಕೇಳುತ್ತಿದ್ದು, ಅವುಗಳಲ್ಲಿ ರಹಿ ಅವರ ಹಾರರ್ ಸಿನಿಮಾ ಚಿತ್ರಕತೆಯೂ ಒಂದಾಗಿದೆ. ರಹಿ ಅವರ ಚಿತ್ರಕತೆ ಜಾನ್ಹವಿ ಅವರಿಗೆ ಇಷ್ಟವಾಗಿದ್ದು, ಇದು ಹಾರರ್ ಜೊತೆಗೆ ಜನಪದವನ್ನು ಬೆರೆಸಿದ ಕತೆಯಾಗಿದೆಯಂತೆ. ಜಾನ್ಹವಿ ಅವರ ಮುಂದಿನ ಸಿನಿಮಾ ಇದೇ ಆಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಜಾನ್ಹವಿ ಕಪೂರ್ ಬಾಲಿವುಡ್​​ನ ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ಸದ್ಯಕ್ಕೆ ಅವರ ಕೈಯಲ್ಲಿ ಯಾವುದೇ ಸಿನಿಮಾಗಳಿಲ್ಲ. ಆದರೆ ಅವರು ಕರಣ್ ನಿರ್ಮಾಣದ ಹೊಸ ಸಿನಿಮಾನಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಇನ್ನು ತೆಲುಗಿನಲ್ಲಿ ‘ದೇವರ 2’ ಸಿನಿಮಾನಲ್ಲಿಯೂ ಜಾನ್ಹವಿ ನಟಿಸಲಿದ್ದಾರೆ. ತಮಿಳಿನ ಒಂದು ಹೊಸ ಸಿನಿಮಾವನ್ನು ಸಹ ಜಾನ್ಹವಿ ಕಪೂರ್ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link