Headlines

nagaraj11081993

ಪ್ರಭಾಸ್ ಅಭಿಮಾನಿಗಳಿಗೆ ಸಿಹಿ ಸುದ್ದಿ, ನಿರೀಕ್ಷೆಗಿಂತಲೂ ಬೇಗ ಬರಲಿದೆ ‘ಕಲ್ಕಿ 2’

ಪ್ರಭಾಸ್ (Prabhas) ಸಿನಿಮಾಗಳು ಒಂದು ವರ್ಷಕ್ಕೆ ಮುಗಿದಿದ್ದೇ ಇಲ್ಲ. ಶುರುವಾದ ಬಳಿಕ ಬಿಡುಗಡೆಗೆ ಕನಿಷ್ಟ ಎರಡು ವರ್ಷಗಳಾದರೂ ಬೇಕು. ‘ಬಾಹುಬಲಿ’ ಸಿನಿಮಾ ಇಂದಲೂ ಇದೇ ಕತೆ ನಡೆಯುತ್ತಾ ಬಂದಿದೆ. ಆದರೆ ಈ ಬಾರಿ ನಿರ್ದೇಶಕ ನಾಗ ವಂಶಿ ಪ್ರಭಾಸ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದು, ನಿರೀಕ್ಷೆಗಿಂತಲೂ ಬೇಗನೇ ಸಿನಿಮಾ ಅನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಹಾಗೆಂದು ಇದೇ ವರ್ಷ ಸಿನಿಮಾ ಬರುತ್ತದೆ ಎಂದೇನೂ ಇಲ್ಲ. ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾ 2024 ರಲ್ಲಿ ಬಿಡುಗಡೆ…

Read More

ಇಸ್ರೇಲ್ ಸೇನೆಯ ಗುಂಡಿನ ದಾಳಿಗೆ 7 ತಿಂಗಳ ಪ್ಯಾಲೆಸ್ತೀನ್ ಮಗು ಬಲಿ; ಶರಣಾದರೂ ಕಾರಿನ ಮೇಲೆ ಶೂಟಿಂಗ್ – Kannada News

ಜೆರುಸಲೇಂ, ಜೂನ್ 6: ವೆಸ್ಟ್ ಬ್ಯಾಂಕ್‌ನ ಹೆಬ್ರಾನ್ ನಗರದಲ್ಲಿ ಇಸ್ರೇಲ್ (Israel) ಸೇನೆ ನಡೆಸಿದ ಗುಂಡಿನ ದಾಳಿಗೆ 7 ತಿಂಗಳ ಪ್ಯಾಲೆಸ್ತೀನ್ ಮಗು ಬಲಿಯಾಗಿರುವ ಅತ್ಯಂತ ದುರದೃಷ್ಟಕರ ಘಟನೆ ನಡೆದಿದೆ. ಆಕ್ರಮಿತ ವೆಸ್ಟ್ ಬ್ಯಾಂಕ್‌ನ ಹೆಬ್ರಾನ್ ನಗರದಲ್ಲಿ ಇಸ್ರೇಲ್ ಸೇನೆಯು ಕುಟುಂಬವೊಂದು ಚಲಾಯಿಸುತ್ತಿದ್ದ ವಾಹನದ ಮೇಲೆ ನಡೆಸಿದ ಗುಂಡಿನ ದಾಳಿಗೆ 7 ತಿಂಗಳ ಪ್ಯಾಲೆಸ್ತೀನ್ ಮಗು ಬಲಿಯಾಗಿದೆ ಎಂದು ಮಗುವಿನ ಕುಟುಂಬಸ್ಥರು ಮತ್ತು ಇಸ್ರೇಲ್ ಅಧಿಕಾರಿಗಳು ತಿಳಿಸಿದ್ದಾರೆ. ಮೃತ ಶಿಶುವನ್ನು ಸ್ಯಾಮ್ ಫಹದ್ ಅಬು ಹೈಕಲ್ ಎಂದು…

Read More

ಸಚಿನ್​ರಂತೆಯೇ ವೈಭವ್ ಸೂರ್ಯವಂಶಿಗೂ ವಿಶೇಷ ವಿನಾಯಿತಿ ನೀಡಿದ ಬಿಸಿಸಿಐ – Kannada News

ಮುಂಬರುವ ಐರ್ಲೆಂಡ್ ಹಾಗೂ ಇಂಗ್ಲೆಂಡ್‌ ಪ್ರವಾಸ ಮತ್ತು ಏಷ್ಯನ್ ಗೇಮ್ಸ್​ಗೆ ಬಿಸಿಸಿಐ (BCCI) ಇಂದು ಭಾರತ ಟಿ20 ತಂಡವನ್ನು ಪ್ರಕಟಿಸಿತು. ಬಿಸಿಸಿಐ ಪ್ರಕಟಿಸಿರುವ ಈ 16 ಸದಸ್ಯರ ತಂಡದಲ್ಲಿ ಅನುಭವಿಗಳು ಹಾಗೂ ಅನಾನುಭವಿಗಳ ಸಮ್ಮಿಶ್ರಣವಿದೆ. ಐಪಿಎಲ್‌ನಲ್ಲಿ ಮಿಂಚು ಹರಿಸಿದ ಪ್ರತಿಭಾನ್ವೀತರಿಗೆ ಈ ಪ್ರವಾಸದಲ್ಲಿ ಅವಕಾಶ ನೀಡಲಾಗಿದೆ. ಈ ರೀತಿಯಾಗಿ ತನ್ನ ಅಮೋಘ ಪ್ರದರ್ಶನದ ಮೂಲಕ ಭಾರತ ಟಿ20 ತಂಡದಲ್ಲಿ ಸ್ಥಾನ ಪಡೆದಿರುವ ವೈಭವ್ ಸೂರ್ಯವಂಶಿ (Vaibhav Sooryavanshi ) ಕೂಡ ತಂಡದೊಂದಿಗೆ ವಿದೇಶಕ್ಕೆ ಹಾರಲಿದ್ದಾರೆ. ಇದೇ ಮೊದಲ…

Read More

ಬೆಳಗ್ಗೆ ನಿಮ್ಮ ದಿನವನ್ನು ಸುಂದರವಾಗಿ ಆರಂಭಿಸಲು ಹೀಗೆ ಮಾಡಿ! – Kannada News

ನವದೆಜಲಿ, ಜೂನ್ 6: ಇಂದಿನ ವೇಗದ ಜೀವನಶೈಲಿಯಲ್ಲಿ, ಒತ್ತಡವು ಅನೇಕ ಜನರ ದೈನಂದಿನ ಜೀವನದ ಒಂದು ಭಾಗವಾಗಿದೆ. ಕೆಲಸದ ಒತ್ತಡ (Stress), ಕುಟುಂಬದ ಜವಾಬ್ದಾರಿಗಳು, ಆರ್ಥಿಕ ಸಮಸ್ಯೆಗಳು ಮತ್ತು ಅತಿಯಾದ ಡಿಜಿಟಲ್ ಬಳಕೆಯಂತಹ ಅಂಶಗಳಿಂದಾಗಿ ನಮ್ಮ ಮನಸ್ಥಿತಿ ಬಳಲುವುದು ಸಾಮಾನ್ಯವಾಗಿದೆ. ಆದರೆ, ತಜ್ಞರು ಹೇಳುವಂತೆ, ನಾವು ನಮ್ಮ ಬೆಳಿಗ್ಗೆಯನ್ನು ಹೇಗೆ ಪ್ರಾರಂಭಿಸುತ್ತೇವೆ ಎಂಬುದು ದಿನವಿಡೀ ನಮ್ಮ ಮನಸ್ಥಿತಿಯನ್ನು ನಿರ್ಧರಿಸುವ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ನಮ್ಮ ಮುಂಜಾನೆಯ ಕೆಲವು ಅಭ್ಯಾಸಗಳು ಒತ್ತಡವನ್ನು ಕಡಿಮೆ ಮಾಡಲು ಮತ್ತು…

Read More

ಅಧಿಕಾರ ವಹಿಸಿಕೊಂಡ ಕ್ಷಣದಿಂದಲೇ ಯುಟಿ ಖಾದರ್ ಫುಲ್ ಆಕ್ಟಿವ್​​​: ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲು ಪ್ಲ್ಯಾನ್​ – Kannada News

ಬೆಂಗಳೂರು, ಜೂನ್​​ 06: ರಾಜ್ಯದಲ್ಲಿ ಇತ್ತೀಚೆಗಷ್ಟೇ ಸಿಎಂ ಡಿಕೆ ಶಿವಕುಮಾರ್ (DK Shivakumar) ನೇತೃತ್ವದ ನೂತನ ಸಂಪುಟದಲ್ಲಿ ಖಾತೆಗಳ ಹಂಚಿಕೆಯಾಗಿದ್ದು, ನೂತನ ಆರೋಗ್ಯ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಯು.ಟಿ. ಖಾದರ್​​ (UT Khader) ಫುಲ್ ಆಕ್ಟಿವ್ ಆಗಿದ್ದಾರೆ. ಆರೋಗ್ಯ ಇಲಾಖೆಯಲ್ಲಿ ಮಹತ್ವದ ಸುಧಾರಣೆಗಳನ್ನು ತರಲು ಮುಂದಾಗಿರುವ ಅವರು, ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ವಿಶೇಷ ತಂತ್ರಕ್ಕೆ ಕೈಹಾಕಿದ್ದಾರೆ. ಮುಖ್ಯಾಂಶಗಳು ಆರೋಗ್ಯ ಇಲಾಖೆಯಲ್ಲಿ ಮಹತ್ವದ ಸುಧಾರಣೆಗೆ ಮುಂದಾದ ಸಚಿವ ಯುಟಿ ಖಾದರ್​ ಡಿಹೆಚ್‌ಓಗಳಿಗೆ ಖಡಕ್​ ಎಚ್ಚರಿಕೆ…

Read More

‘ಪೆದ್ದಿ’ ವಿವಾದ, ನಟಿ ಜಾನ್ಹವಿಯ ಬೆಂಬಲಕ್ಕೆ ನಿಂತ ಆಶಿಕಾ ರಂಗನಾಥ್ – Kannada News

‘ಪೆದ್ದಿ’ (Peddi) ಸಿನಿಮಾನಲ್ಲಿ ನಟಿ ಜಾನ್ಹವಿ ಕಪೂರ್ ಪಾತ್ರವನ್ನು ತೆರೆಯ ಮೇಲೆ ತೋರಿಸಿರುವ ರೀತಿಯ ಬಗ್ಗೆ ತೀವ್ರ ಟೀಕೆಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗುತ್ತಿವೆ. ಖುದ್ದು ಜಾನ್ಹವಿ ಅವರೇ ತಮ್ಮ ಪಾತ್ರವನ್ನು ಅತಿಯಾಗಿ ಗ್ಲಾಮರೈಸ್ ಮಾಡಿ ಅಶ್ಲೀಲವಾಗಿ ತೋರಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಆದರೆ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಈ ವಿಷಯವಾಗಿ ನಟಿ ಜಾನ್ಹವಿ ಅವರನ್ನೇ ಟಾರ್ಗೆಟ್ ಮಾಡಿ ಟೀಕೆ ಮಾಡುತ್ತಿದ್ದಾರೆ. ‘ಜಾನ್ಹವಿ ಕಪೂರ್ ಅತಿಯಾಗಿ ಅಂಗ ಪ್ರದರ್ಶನ ಮಾಡಿದ್ದಾರೆ’ ಎಂದು ಟೀಕೆ ಮಾಡಿದ್ದಾರೆ….

Read More

ಬಿಜೆಪಿ ಶಾಸಕ ಶರಣು ಸಲಗರ್​​ಗೆ ಬಂಧನದ ಭೀತಿ: 2023ರ ಬಕ್ರೀದ್ ಗಲಾಟೆ ಕೇಸ್‌ನಲ್ಲಿ ಶಾಸಕನಿಗೆ ಬಿಗ್ ಶಾಕ್ – Kannada News

ಬೀದರ್, ಜೂ.6: 2023ರ ಬಕ್ರೀದ್ ಹಬ್ಬದ ವೇಳೆ ನಡೆದ ಗೋಹತ್ಯೆ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಶರಣು ಸಲಗರ್ ಬಂಧನದ ಭೀತಿ ಎದುರಿಸುತ್ತಿದ್ದಾರೆ. ಬೆಂಗಳೂರಿನ 42ನೇ ಎಸಿಜೆಎಂ ನ್ಯಾಯಾಲಯ ಶಾಸಕರ ವಿರುದ್ಧ ಜಾಮೀನು ರಹಿತ (ನಾನ್‌ಬೈಲೆಬಲ್) ಬಂಧನ ವಾರಂಟ್ ಹೊರಡಿಸಿದೆ. 2023ರ ಜುಲೈ 1ರಂದು ನಡೆದ ಘಟನೆಯಲ್ಲಿ, ಅಕ್ರಮ ಗೋಹತ್ಯೆ ತಡೆಯಲು ಶಾಸಕರು ಮುಸ್ಲಿಂ ಸಮುದಾಯದ ಮನೆಯೊಂದಕ್ಕೆ ತೆರಳಿ ಗಲಾಟೆ ಮಾಡಿದ್ದರು ಎನ್ನಲಾಗಿದೆ. ಈ ಪ್ರಕರಣದ ವಿಚಾರಣೆಗೆ ಬರುವಂತೆ ಶಾಸಕ ಶರಣು ಸಲಗರ್​​ಗೆ ಹಲವು ಬಾರಿ…

Read More

‘ಮ್ಯಾಂಗೊ ಪಚ್ಚ’ ಸಿನಿಮಾ ಬಗ್ಗೆ ನಟ ಸುದೀಪ್ ಮಾತು: ವಿಡಿಯೋ – Kannada News

ಸುದೀಪ್ (Sudeep) ಅವರ ಪತ್ನಿ ಮತ್ತು ಪುತ್ರಿ ನಿರ್ಮಾಣ ಮಾಡಿರುವ, ಸುದೀಪ್ ಅವರ ಅಕ್ಕನ ಮಗ ಸಂಚಿತ್ ಸಂಜಯ್ ನಟಿಸಿರುವ ‘ಮ್ಯಾಂಗೊ ಪಚ್ಚ’ ಸಿನಿಮಾ ನಿನ್ನೆ (ಜೂನ್ 5) ಬಿಡುಗಡೆ ಆಗಿದ್ದು, ಸಿನಿಮಾ ಬಿಡುಗಡೆ ಬಳಿಕ ಸುದೀಪ್ ಅವರು ಪತ್ರಿಕಾಗೋಷ್ಠಿ ನಡೆಸಿ ಸಿನಿಮಾ ಬಗ್ಗೆ ಮಾತನಾಡಿದರು. ಈ ವೇಳೆ ಸಿನಿಮಾ ಬಗ್ಗೆ, ಸಿನಿಮಾ ಬಿಡುಗಡೆ ಆದ ಬಳಿಕ ನಡೆದ ಕೆಲವು ಬೆಳವಣಿಗೆಗಳ ಬಗ್ಗೆ ಮಾತನಾಡಿದರು. ಸಿನಿಮಾನಲ್ಲಿ ತಮ್ಮ ಸೋದರಳಿಯನ ನಟನೆ, ಸಿನಿಮಾದ ಮೇಕಿಂಗ್ ಇನ್ನೂ ಕೆಲ ವಿಷಯಗಳ…

Read More

ಕಾಸರಗೋಡಿನಲ್ಲಿ ಭಾರೀ ಮಳೆಗೆ ದುರಂತ: ಆಟವಾಡುತ್ತಿದ್ದಾಗ ಮಣ್ಣು ಕುಸಿದು ಮಕ್ಕಳಿಬ್ಬರು ಸಾವು – Kannada News

ಮಂಗಳೂರು, ಜೂನ್​​ 06: ಕೇರಳಂನ ಕಾಸರಗೋಡು ಜಿಲ್ಲೆಯಾದ್ಯಂತ ವರುಣಾರ್ಭಟ ತೀವ್ರಗೊಂಡಿದೆ. ಧಾರಾಕಾರ ಮಳೆಗೆ (Rain) ಮಣ್ಣು ಕುಸಿದು ಬಿದ್ದ ಪರಿಣಾಮ ಮಕ್ಕಳಿಬ್ಬರು ದಾರುಣವಾಗಿ ಸಾವನ್ನಪ್ಪಿರುವಂತಹ (death) ಘಟನೆ ಕಾಸರಗೋಡು ಜಿಲ್ಲೆಯ ಅಡೂರು ಎಂಬಲ್ಲಿ ನಡೆದಿದೆ. ಮುನ್ಸಿರ್(10) ಮತ್ತು ಮುಜಮ್ಮಿಲ್ (14) ಮೃತ‌ ಮಕ್ಕಳು. ಅಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಮುಖ್ಯಾಂಶಗಳು ಕಾಸರಗೋಡಿನಲ್ಲಿ ವರುಣನ ಅಟ್ಟಹಾಸ ಮಳೆಯಿಂದ ಕುಸಿದ ಮಣ್ಣು ಘಟನೆಯಲ್ಲಿ ಇನ್ನೋರ್ವ ಮಗುವಿನ ಸ್ಥಿತಿ ಗಂಭೀರ ನಡೆದಿದ್ದೇನು? ಸದ್ಯ ಕಾಸರಗೋಡು ಜಿಲ್ಲೆಯಾದ್ಯಂತ ವರುಣಾರ್ಭಟ ಜೋರಾಗಿದೆ….

Read More

‘ಈ ಬೆದರಿಕೆ ಬೇಡ’: ಪವನ್ ಕಲ್ಯಾಣ್ ಸಹೋದರನಿಗೆ ಪ್ರಕಾಶ್ ರೈ ಎಚ್ಚರಿಕೆ – Kannada News

ಪ್ರಕಾಶ್ ರೈ (Prakash Raj) ಮೊದಲಿನಿಂದಲೂ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರು. ರಾಜಕೀಯ ವಿಷಯಗಳ ಬಗ್ಗೆ ‘ಜಸ್ಟ್ ಆಸ್ಕಿಂಗ್’ ಹ್ಯಾಷ್ ಟ್ಯಾಗ್ ಅಡಿಯಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಬಹುತೇಕ, ಬಿಜೆಪಿಯ ಸಿದ್ಧಾಂತಗಳನ್ನು ವಿರೋಧಿಸಿ ಟ್ವೀಟ್​​ಗಳನ್ನು ಮಾಡುತ್ತಿರುತ್ತಾರೆ. ಕಳೆದ ಒಂದೆರಡು ದಿನಗಳಿಂದ ಆಂಧ್ರ ಪ್ರದೇಶ ಡಿಸಿಎಂ ಪವನ್ ಕಲ್ಯಾಣ್ ವಿರುದ್ಧ ಸರಣಿ ಟ್ವೀಟ್​​ಗಳನ್ನು ಮಾಡುತ್ತಿದ್ದಾರೆ. ಇದೀಗ ಪವನ್ ಕಲ್ಯಾಣ್ ಅವರ ಸಹೋದರ ನಾಗಬಾಬು ಅವರ ಟ್ವೀಟ್ ಒಂದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಕಾಶ್ ರೈ, ‘ಈ ಬೆದರಿಕೆ ಎಲ್ಲ ಬೇಡ’ ಎಂದು…

Read More