Reliance AGM 2026: ರಿಲಯನ್ಸ್ ಇಂಡಸ್ಟ್ರೀಸ್ನಿಂದ ಭರ್ಜರಿ ಬಂಡವಾಳ ವೆಚ್ಚ; ಒಂದು ವರ್ಷದಲ್ಲಿ 1.44 ಲಕ್ಷ ಕೋಟಿ ರೂ ವೆಚ್ಚ – Kannada News | Reliance generates huge revenue and profit in 2025 26, spent over 1.44 lakh crore on capex
ಮುಕೇಶ್ ಅಂಬಾನಿImage Credit source: Youtube @RelianceUpdates ಮುಂಬೈ, ಜೂನ್ 19: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ತನ್ನ ಆರ್ಥಿಕ ಫಲಿತಾಂಶಗಳನ್ನು ಪ್ರಕಟಿಸಿದ್ದು, ಈ ಬಾರಿಯ ವರದಿಯಲ್ಲಿ ಕಂಪನಿಯು ಭಾರಿ ಬಂಡವಾಳ ಹೂಡಿಕೆ ಮತ್ತು ದಾಖಲೆಯ ಆದಾಯವನ್ನು ದಾಖಲಿಸಿದೆ. 2025-2026ರ ಹಣಕಾಸು ವರ್ಷದಲ್ಲಿ (FY26) ರಿಲಯನ್ಸ್ ಸಂಸ್ಥೆ ಬರೋಬ್ಬರಿ ₹95,754 ಕೋಟಿ ನಿವ್ವಳ ಲಾಭ ದಾಖಲಿಸಿದೆ. ಹಿಂದಿನ ವರ್ಷದಕ್ಕೆ ಹೋಲಿಸಿದರೆ ನಿವ್ವಳ ಲಾಭದಲ್ಲಿ ಬರೋಬ್ಬರಿ ಶೇ. 17.8ರಷ್ಟು ಏರಿಕೆ ಆಗಿದೆ. ಇವತ್ತು ನಡೆದ ಅರ್ಐಎಲ್ನ 49ನೇ ವಾರ್ಷಿಕ…