All posts by nagaraj11081993

ಹಾಲಿವುಡ್​​ ಸೂಪರ್​​ಹೀರೋಗೆ ಬಾಲಿವುಡ್​​ಗೆ ಬರುವ ಆಸೆ, ಸಹಾಯ ಕೇಳಿದ ಸ್ಟಾರ್ ನಟ – Kannada News | Jason Momoa wants to act in Indian movie, says Vidyut is most handsome actor

ಜೇಸನ್ ಮೊಮೊವಾ (Jason Momoa) ಅಂದರೆ ಹೆಚ್ಚು ಜನರಿಗೆ ಗೊತ್ತಾಗುವುದಿಲ್ಲ ಅದೇ ‘ಆಕ್ವಾಮನ್’ ಎಂದರೆ ಥಟ್ಟನೆ ಹೊಳೆಯುತ್ತದೆ. ಹಾಲಿವುಡ್​ನ ಜನಪ್ರಿಯ ಸೂಪರ್ ಹೀರೋ ಸಿನಿಮಾಗಳಲ್ಲಿ ಒಂದಾಗಿರುವ ‘ಆಕ್ವಾಮನ್’ ಪಾತ್ರಧಾರಿ ಝೇಸನ್ ಮೊಮೊವಾ ಅವರಿಗೆ ಬಾಲಿವುಡ್​ಗೆ ಬರುವ ಆಸೆಯಂತೆ. ಈ ಬಗ್ಗೆ ಮಾತನಾಡಿರುವ ಹಾಲಿವುಡ್ ಸ್ಟಾರ್ ನಟ, ತಮಗೆ ಭಾರತೀಯ ಚಿತ್ರರಂಗ ಪ್ರವೇಶಿಸಲು ಬಾಲಿವುಡ್​ನ ನಟನ ಸಹಾಯ ಅಗತ್ಯವಿದೆ ಎಂದು ಮನವಿ ಸಹ ಮಾಡಿದ್ದಾರೆ.

ಹಾಲಿವುಡ್ ತಾರೆ ಜೇಸನ್ ಮೊಮೊವಾ ಇದೀಗ ‘ಸ್ಟ್ರೀಟ್ ಫೈಟರ್’ ಸಿನಿಮಾನಲ್ಲಿ ನಟಿಸಿದ್ದಾರೆ. ಇದೇ ಸಿನಿಮಾನಲ್ಲಿ ಭಾರತೀಯ ನಟ ವಿದ್ಯುತ್ ಜಾಮ್ವಾಲ್ ಸಹ ನಟಿಸಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿರುವ ಜೇಸನ್ ಮೊಮೊವಾ, ‘ನಾನು ನೋಡಿದ ಅತ್ಯಂತ ಸುಂದರ ವ್ಯಕ್ತಿಗಳಲ್ಲಿ ಒಬ್ಬರು’ ಎಂದು ವಿದ್ಯುತ್ ಜಾಮ್ವಾಲ್ ಅವರನ್ನು ಬಣ್ಣಿಸಿದ್ದಾರೆ. ಅಲ್ಲದೆ ತಮಗೆ ಬಾಲಿವುಡ್ ಚಿತ್ರರಂಗಕ್ಕೆ ಪ್ರವೇಶಿಸಲು ವಿದ್ಯುತ್ ಸಹಾಯ ಮಾಡಬೇಕೆಂದು ಹೇಳಿದ್ದಾರೆ.

ವಿದ್ಯುತ್ ಅವರು ತಮಗೆ ಭಾರತೀಯ ಚಿತ್ರರಂಗದಲ್ಲಿ (ಬಾಲಿವುಡ್) ಕೆಲಸ ಪಡೆಯಲು ಸಹಾಯ ಮಾಡಬೇಕೆಂದು ತಮಾಷೆಯಾಗಿ ಹೇಳಿದ್ದಾರೆ. ‘ಅವರು (ವಿದ್ಯುತ್) ನನಗೆ ಬಾಲಿವುಡ್‌ನಲ್ಲಿ ಕೆಲಸ ಕೊಡಿಸಬೇಕು. ನಾವಿಬ್ಬರೂ ಸೇರಿ ಏನಾದರೂ ವಿಶೇಷ ಮಾಡಬೇಕು, ಅದು ಖುಷಿ ಕೊಡುತ್ತದೆ. ನಾನು ಹೇಳಿದ್ದೇನೆ, ಅದಕ್ಕೆ ಬದ್ಧನಾಗಿದ್ದೇನೆ. ಒಂದಲ್ಲ ಒಂದು ದಿನ ಭಾರತಕ್ಕೆ ಬರಲು ನಾನು ಕಾಯುತ್ತಿದ್ದೇನೆ’ ಎಂದು ಜೇಸನ್ ತಮ್ಮ ಆಸೆಯನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:ರಶ್ಮಿಕಾ-ವಿಜಯ್ ಚಿತ್ರಕ್ಕೆ ವಿಲನ್ ಆದ ಹಾಲಿವುಡ್​ನ ‘ದಿ ಮಮ್ಮಿ’ ಚಿತ್ರದ ಖಳ

‘ಸ್ಟ್ರೀಟ್ ಫೈಟರ್’ ಸಿನಿಮಾ ಮೂಲಕ ವಿದ್ಯುತ್ ಜಮ್ವಾಲ್ ಹಾಲಿವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಸಿನಿಮಾನಲ್ಲಿ ಅವರು ‘ಧಾಲ್ಸಿಮ್’ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಬೋಳು ತಲೆ, ಗಂಭೀರ ನೋಟ ಮತ್ತು ವಿಭಿನ್ನ ಅವತಾರದಲ್ಲಿ ವಿದ್ಯುತ್ ಕಾಣಿಸಿಕೊಂಡಿದ್ದು, ಅವರ ಈ ಹೊಸ ಲುಕ್ ಎಲ್ಲರ ಗಮನ ಸೆಳೆದಿದೆ. ‘ಸ್ಟ್ರೀಟ್ ಫೈಟರ್’ ಬಲು ಜನಪ್ರಿಯ ಗೇಮ್ ಒಂದರಿಂದ ಸ್ಪೂರ್ತಿ ಪಡೆದು ನಿರ್ಮಿಸಲಾಗಿರುವ ಸಿನಿಮಾ ಆಗಿದೆ. ಈ ಸಿನಿಮಾ ಅಕ್ಟೋಬರ್ 16ರಂದು ತೆರೆಗೆ ಬರಲಿದೆ.

ಜೇಸನ್ ಮೊಮೊವಾ, ಹಾಲಿವುಡ್​ನ ಜನಪ್ರಿಯ ನಟರಲ್ಲಿ ಒಬ್ಬರಾಗಿದ್ದಾರೆ. ‘ಗೇಮ್ ಆಫ್ ಥ್ರೋನ್ಸ್’ ನಕ್ಲಿ ಕಾರ್ಲ್ಸ್ ಡ್ರಾಗೊ ಪಾತ್ರದಲ್ಲಿ ನಟಿಸಿದ್ದ ಜೇಸನ್ ಅವರಿಗೆ ಭಾರಿ ಹೆಸರು ತಂದುಕೊಟ್ಟಿದ್ದು ‘ಆಕ್ವಮಾನ್’ ಸಿನಿಮಾ. ಆ ಬಳಿಕ ಅವರು ಸೂಪರ್ ಮ್ಯಾನ್, ಬ್ಯಾಟ್​​ಮ್ಯಾನ್ ಸಿನಿಮಾಗಳಲ್ಲಿ, ‘ಜಸ್ಟಿಸ್ ಲೀಗ್’ ಸಿನಿಮಾಗಳಲ್ಲಿಯೂ ನಟಿಸಿದರು. ಇತ್ತೀಚೆಗೆ ಬಂದ ‘ತ್ರಿಬಲ್ ಎಕ್ಸ್’ ಸಿನಿಮಾನಲ್ಲಿ ವಿಲನ್ ಆಗಿಯೂ ಕಾಣಿಸಿಕೊಂಡಿದ್ದಾರೆ. ಈಗ ಭಾರತೀಯ ಸಿನಿಮಾಗಳಲ್ಲಿ ನಟಿಸುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಶ್ರೇಯಾಂಕ ಪಾಟೀಲ್ ಬದಲಿಗೆ ಟೀಂ ಇಂಡಿಯಾ ಸೇರಿಕೊಂಡ ಆರ್​ಸಿಬಿ ಆಟಗಾರ್ತಿ – Kannada News | Shreyanka Patil Out of T20 World Cup 2026 Due to Injury; Prema Rawat Replaces Her

ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಲ್‌ರೌಂಡರ್ ಶ್ರೇಯಾಂಕ ಪಾಟೀಲ್ (Shreyanka Patil) ಅವರನ್ನು ಐಸಿಸಿ ಮಹಿಳಾ ಟಿ20 ವಿಶ್ವಕಪ್ 2026 (Women’s T20 World Cup 2026) ರಿಂದ ಹೊರಗಿಡಲಾಗಿದೆ. ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದ ಸಮಯದಲ್ಲಿ ಶ್ರೇಯಾಂಕ ಪಾಟೀಲ್ ಗಾಯಕ್ಕೆ ಒಳಗಾಗಿದ್ದರು. ಗಾಯ ಗಂಭೀರವಾಗಿರುವ ಕಾರಣ ಶ್ರೇಯಾಂಕರನ್ನು ಪಂದ್ಯಾವಳಿಯಿಂದ ಹೊರಗಿಟ್ಟಿರುವ ಬಿಸಿಸಿಐ, ಅವರ ಬದಲಿ ಆಟಗಾರ್ತಿಯನ್ನು ಸಹ ತಂಡಕ್ಕೆ ಆಯ್ಕೆ ಮಾಡಿದೆ. ಅದರಂತೆ ಟೀಂ ಇಂಡಿಯಾ ಪರ ಇದುವರೆಗೆ ಒಂದೇ ಒಂದು ಅಂತರರಾಷ್ಟ್ರೀಯ ಪಂದ್ಯವನ್ನು ಆಡದ ಲೆಗ್ ಸ್ಪಿನ್ನರ್ ಪ್ರೇಮಾ ರಾವತ್ (Prema Rawat) ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ಪ್ರೇಮಾ ರಾವತ್ ಡಬ್ಲ್ಯೂಪಿಎಲ್​ನಲ್ಲಿ ಆರ್​ಸಿಬಿ ಪರ ಆಡುತ್ತಿದ್ದು, ಇದೀಗ ಆರ್​ಸಿಬಿ ಪರ ಆಡುವ ಶ್ರೇಯಾಂಕ ಪಾಟೀಲ್ ಬದಲಿಗೆ ತಂಡವನ್ನು ಕೂಡಿಕೊಂಡಿದ್ದಾರೆ.

ಶ್ರೇಯಾಂಕ ಬದಲಿಯಾಗಿ ಬಂದ ಪ್ರೇಮಾ

ಶ್ರೇಯಾಂಕ ಪಾಟೀಲ್ ಬದಲಿಗೆ ಬಿಸಿಸಿಐ, ಯುವ ಲೆಗ್ ಸ್ಪಿನ್ನರ್ ಪ್ರೇಮಾ ರಾವತ್ ಅವರನ್ನು ಭಾರತ ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಿದೆ. ಮೇಲೆ ಹೇಳಿದಂತೆ ಪ್ರೇಮಾ ರಾವತ್ ಭಾರತ ತಂಡಕ್ಕೆ ಆಯ್ಕೆಯಾಗಿರುವುದು ಇದೇ ಮೊದಲು. ಮಹಿಳಾ ಪ್ರೀಮಿಯರ್ ಲೀಗ್ ಮತ್ತು ಮಹಿಳಾ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಪಂದ್ಯಾವಳಿಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಪ್ರೇಮಾ ರಾವತ್ ಅವರನ್ನು ಶ್ರೇಯಾಂಕ ಪಾಟೀಲ್ ಬದಲಿಗೆ ತಂಡಕ್ಕೆ ಸೇರಿಸಿಕೊಳ್ಳಲು ಐಸಿಸಿಯ ತಾಂತ್ರಿಕ ಸಮಿತಿ ಕೂಡ ಒಪ್ಪಿಗೆ ಸೂಚಿಸಿದೆ. ಹೀಗಾಗಿ ಪ್ರೇಮಾ ಇಷ್ಟರಲ್ಲೇ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಅನುಕೂಲಕರವೆಂಬಂತೆ ಪ್ರೇಮಾ ರಾವತ್ ಈಗಾಗಲೇ ಇಂಗ್ಲೆಂಡ್‌ನಲ್ಲಿದ್ದಾರೆ. ಪರಿಣಾಮವಾಗಿ, ಐಸಿಸಿ ಅನುಮೋದನೆ ಪಡೆದ ತಕ್ಷಣ ಅವರು ವಿಶ್ವಕಪ್ ತಂಡವನ್ನು ಸೇರಲಿದ್ದಾರೆ.

ಶ್ರೇಯಾಂಕ ಗಾಯಗೊಂಡಿದ್ದು ಹೇಗೆ?

ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದ ವೇಳೆ ಶ್ರೇಯಾಂಕ ಪಾಟೀಲ್ ಬಲಗಾಲಿನ ಗಂಭೀರ ಗಾಯಕ್ಕೆ ತುತ್ತಾಗಿದ್ದರು. ನೆದರ್ಲ್ಯಾಂಡ್ಸ್ ಇನ್ನಿಂಗ್ಸ್‌ನ ಆರನೇ ಓವರ್‌ನ ಮೊದಲ ಎಸೆತದಲ್ಲಿ ಈ ಅವಘಡ ಸಂಭವಿಸಿತ್ತು. ಚೆಂಡನ್ನು ಹಿಡಿಯುವ ಯತ್ನದಲ್ಲಿ ಶ್ರೇಯಾಂಕ ಅವರ ಬಲಗಾಲು ಉಳುಕಿತ್ತು. ಹೀಗಾಗಿ ಅವರನ್ನು ಸ್ಟ್ರೆಚರ್‌ನಲ್ಲಿ ಮೈದಾನದಿಂದ ಹೊರಗೆ ಕರೆದೊಯ್ಯಲಾಯಿತು. ಟೂರ್ನಿಯ ಆರಂಭದಲ್ಲೇ ಶ್ರೇಯಾಂಕ ತಂಡದಿಂದ ಹೊರಬಿದ್ದಿರುವುದು ನಾಯಕಿ ಹರ್ಮನ್ಪ್ರೀತ್ ಕೌರ್ ಮತ್ತು ತಂಡದ ನಿರ್ವಹಣೆಗೆ ದೊಡ್ಡ ಹೊಡೆತ ಬಿದ್ದಿದೆ. ಏಕೆಂದರೆ ಶ್ರೇಯಾಂಕ ತಂಡದ ಪ್ರಮುಖ ಸ್ಪಿನ್ನರ್ ಆಗಿದ್ದು, ಕೆಳಕ್ರಮಾಂಕದಲ್ಲಿ ಬ್ಯಾಟಿಂಗ್‌ ಕೂಡ ಮಾಡುತ್ತಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:49 pm, Fri, 19 June 26

Source link

ಹೆಚ್‌ಐವಿ ಇದೆ ಎಂದು ವದಂತಿ ಹಬ್ಬಿಸುವುದಾಗಿ ಬೆದರಿಸಿ 50 ಲಕ್ಷಕ್ಕೆ ಬೇಡಿಕೆ: ಪತ್ನಿ ವಿರುದ್ಧವೇ ಉದ್ಯಮಿ ದೂರು – Kannada News | Wife Booked After Tech Firm Owner Alleges Blackmail with Fake HIV Rumours and 50 Lakh Demand

ಬೆಂಗಳೂರು, ಜೂನ್​​ 19: ಹೆಚ್‌ಐವಿ/ಏಡ್ಸ್‌ ಸೋಂಕು ಇದೆ ಎಂಬ ಸುಳ್ಳು ಸುದ್ದಿ ಹಬ್ಬಿಸುವುದಾಗಿ ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ಪತ್ನಿ ವಿರುದ್ಧವೇ ಬೆಂಗಳೂರಿನ (Bengaluru) ಉದ್ಯಮಿಯೋರ್ವರು ಪೊಲೀಸರಿಗೆ ದೂರು ನೀಡಿದ್ದಾರೆ. 51 ವರ್ಷದ ವ್ಯಕ್ತಿ ನೀಡಿರುವ ದೂರಿನ ಆಧಾರದಲ್ಲಿ ಮಾರತ್ತಹಳ್ಳಿ ಪೊಲೀಸರು 37 ವರ್ಷದ ಸ್ವಾತಿ ಬಿ. ವಿರುದ್ಧ ವಂಚನೆ, ನಂಬಿಕೆ ದ್ರೋಹ, ಕಳವು, ಸುಲಿಗೆ, ಮಾನಹಾನಿ ಹಾಗೂ ಕ್ರಿಮಿನಲ್ ಬೆದರಿಕೆ ಸೇರಿದಂತೆ ವಿವಿಧ ಆರೋಪಗಳಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಉದ್ಯಮಿ ಆರೋಪವೇನು?

ಮಾರತ್ತಹಳ್ಳಿಯಲ್ಲಿ ಕಂಪ್ಯೂಟರ್ ಏಡೆಡ್ ಡಿಸೈನ್ ಅಂಡ್ ಡ್ರಾಫ್ಟಿಂಗ್ (CADD) ತರಬೇತಿ ಸಂಸ್ಥೆ ನಡೆಸುತ್ತಿರುವ ಉದ್ಯಮಿ, 2021ರ ಅಕ್ಟೋಬರ್‌ನಲ್ಲಿ ಮ್ಯಾಟ್ರಿಮೋನಿ ವೆಬ್‌ಸೈಟ್ ಮೂಲಕ ಸ್ವಾತಿಯನ್ನು ಪರಿಚಯಿಸಿಕೊಂಡು 2022ರ ಫೆಬ್ರವರಿಯಲ್ಲಿ ವಿವಾಹವಾಗಿದ್ದರು. ವಿವಾಹದ ನಂತರ ಮಹಿಳೆ ತನ್ನ ಅಸಲಿ ಮುಖ ತೋರಿಸಿದ್ದು, ಬೇಡಿಕೆಗಳನ್ನು ಈಡೇರಿಸದಿದ್ದರೆ ಸುಳ್ಳು ಆರೋಪಗಳನ್ನು ಹರಡುತ್ತೇನೆ ಎಂದು ಉದ್ಯಮಿಯಾಗಿರುವ ಪತಿಗೆ ಬೆದರಿಕೆ ಹಾಕಿದ್ದಾಳೆ. 50 ಲಕ್ಷ ಹಣಕ್ಕೂ ಬೇಡಿಕೆ ಇಟ್ಟಿದ್ದಾಳೆ. ಹಣ ನೀಡದಿದ್ದರೆ  ಹೆಚ್‌ಐವಿ/ಏಡ್ಸ್‌ ಇದೆ ಹಾಗೂ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದೇನೆ ಎಂಬ ಸುಳ್ಳು ಪ್ರಚಾರ ಮಾಡುವುದಾಗಿ ತನಗೆ ಬೆದರಿಸಿದ್ದಾಳೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಉಚಿತ 5G ಅಪ್‌ಗ್ರೇಡ್ ಆಸೆಗೆ ಬಿದ್ದ ಬೆಂಗಳೂರು ವ್ಯಕ್ತಿಗೆ ಶಾಕ್; ಅಕೌಂಟ್ ಹ್ಯಾಕ್ ಮಾಡಿ 15 ಲಕ್ಷ ರೂ. ಸಾಲ ಪಡೆದ ಸೈಬರ್ ವಂಚಕರು!

3 ಮದುವೆ ಆರೋಪ

ಮನೆಯಿಂದ 18 ಲಕ್ಷ ನಗದು, ವಿದೇಶಿ ಕರೆನ್ಸಿ, ಚಿನ್ನ-ಬೆಳ್ಳಿ ಆಭರಣಗಳನ್ನು ಕಳವು ಮಾಡಿರುವುದಲ್ಲದೆ, ನಕಲಿ ಕೀಲಿ ಬಳಸಿ ಕಾರು ಕೂಡ ತೆಗೆದುಕೊಂಡು ಹೋಗಿದ್ದಾಳೆ. ಸಾಲದ್ದಕ್ಕೆ ಕಚೇರಿಗೆ ಹಾನಿ ಮಾಡುವ ಜೊತೆಗೆ ಚೆಕ್‌ಗೆ ನಕಲಿ ಸಹಿ ಹಾಕಿ ಬ್ಯಾಂಕ್ ಖಾತೆಯಿಂದ 83 ಸಾವಿರ ಹಣ ಡ್ರಾ ಮಾಡಿಕೊಂಡಿರುವುದಾಗಿ ಕೂಡ ದೂರಿನಲ್ಲಿ ತಿಳಿಸಿದ್ದಾರೆ. ಅಲ್ಲದೆ ತನ್ನನ್ನು ಮದುವೆಯಾಗುವ ಮೊದಲು ಆಕೆ ಮೂರು ಬಾರಿ ಮದುವೆಯಾಗಿದ್ದಳು. ನ್ಯಾಯಾಧೀಶರು, ರಾಜಕಾರಣಿಗಳು ಹಾಗೂ ಪ್ರಭಾವಿ ವ್ಯಕ್ತಿಗಳ ಪರಿಚಯವಿದೆ ಎಂದು ಹೇಳಿಕೊಂಡು, ನನ್ನ ವಿರುದ್ಧ ಏನು ಬೇಕಾದರೂ ಮಾಡಬಲ್ಲೆ ಎಂದು ಆಗಾಗ ಬೆದರಿಸುತ್ತಿದ್ದಳು. ಮದುವೆಗೆ ಮುನ್ನವೂ ಹಿಂದಿನ ವಿವಾಹದಿಂದ ಜನಿಸಿದ ಮಗನ ಶಿಕ್ಷಣಕ್ಕಾಗಿ ತನ್ನಿಂದ ಹೆಚ್ಚಿನ ಹಣ ಖರ್ಚು ಮಾಡಿಸಿಕೊಂಡಿದ್ದಾಳೆ ಎಂದು ಉದ್ಯಮಿ ಆರೋಪಿಸಿರೋದಾಗಿ ಡೆಕ್ಕನ್​​ ಹೆರಾಲ್ಡ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ದೇವಸ್ಥಾನದಲ್ಲಿ ಹುಂಡಿ ಹಣ ಎಣಿಸುವಾಗ 20 ರೂ. ನೋಟಿನ ಮೇಲೆ ಬರೆದಿದ್ದ ಕೋರಿಕೆ ನೋಡಿ ಸಿಬ್ಬಂದಿ ಶಾಕ್ – Kannada News | Viral 20 Rupee Note Shocks Temple Staff: A Plea for Mother in Law’s Death

ಅನಂತಪುರ, ಜೂನ್ 19: ಭಕ್ತರು ಸಾಮಾನ್ಯವಾಗಿ ದೇವರ ಹುಂಡಿಗೆ ಕಾಣಿಕೆ ಹಾಕುವಾಗ ತಮಗೆ ಒಳ್ಳೆಯದಾಗಲಿ, ಆರೋಗ್ಯ, ಅಷ್ಟೈಶ್ವರ್ಯ ಸಿಗಲು, ಒಳ್ಳೆಯ ಕೆಲಸ ಸಿಗಲಿ ಎಂದು ಬೇಡಿಕೊಳ್ಳುತ್ತಾರೆ. ಆದರೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಪಂಪನೂರು ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಾಲಯ(Temple)ದಲ್ಲಿ ಇತ್ತೀಚೆಗೆ ಹುಂಡಿ ಎಣಿಕೆಯ ವೇಳೆ ಕಂಡುಬಂದ ನೋಟೊಂದು ದೇವಾಲಯದ ಸಿಬ್ಬಂದಿ ಹಾಗೂ ಭಕ್ತರನ್ನು ಅಚ್ಚರಿಗೊಳಿಸಿದೆ.

ಹುಂಡಿಯಲ್ಲಿ ಸಿಕ್ಕ ಇಪ್ಪತ್ತು ರೂಪಾಯಿ ನೋಟಿನ ಮೇಲೆ ಭಕ್ತರೊಬ್ಬರು ಬರೆದಿದ್ದ ವಿಚಿತ್ರ ಕೋರಿಕೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಹುಂಡಿ ಎಣಿಕೆ ಮಾಡುವಾಗ ಸಿಬ್ಬಂದಿಗೆ ಸಿಕ್ಕ 20 ರೂ. ನೋಟಿನ ಮೇಲೆ ತೆಲುಗಿನಲ್ಲಿ ದೇವರೇ ನನ್ನ ಅತ್ತೆ ಬೇಗ ಸಾಯಬೇಕು ಎಂದು ಬರೆಯಲಾಗಿತ್ತು.

ಸಾಮಾನ್ಯವಾಗಿ ಕಾಗದದ ಮೇಲೆ ಕಷ್ಟಗಳನ್ನು ಬರೆದು ಹಾಕುವುದನ್ನು ನೋಡಿದ್ದ ಸಿಬ್ಬಂದಿಗೆ, ನೋಟಿನ ಮೇಲೆಯೇ ಯಾರೋ ಒಬ್ಬರ ಸಾವು ಬಯಸಿ ದೂರು ನೀಡಿರುವುದು ತೀವ್ರ ಆಶ್ಚರ್ಯ ಮೂಡಿಸಿದೆ.
ಈ ವಿಚಿತ್ರ ಪ್ರಾರ್ಥನೆಯ ಫೋಟೋ ಆನ್‌ಲೈನ್‌ನಲ್ಲಿ ಹರಿದಾಡುತ್ತಿದ್ದಂತೆ ನೆಟ್ಟಿಗರು ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.

ಮತ್ತಷ್ಟು ಓದಿ: 85 ಕೋಟಿ ರೂ. ಗಳಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ

ಆಕೆ ಕೇವಲ 20 ರೂಪಾಯಿ ಸುಪಾರಿ ನೀಡಿ ದೇವರಿಗೇ ನೇರ ದೂರು ದಾಖಲಿಸಿದ್ದಾಳೆ, ಇಪ್ಪತ್ತು ರೂಪಾಯಿಗೆ ಅತ್ತೆಯನ್ನೇ ಕೊಲ್ಲಲು ಹೊರಟಿದ್ದಾಳೆ. ದೇವರು ಕೂಡ ಇಂತಹ ವಿನಂತಿಯನ್ನು ಖಂಡಿತಾ ಊಹಿಸಿರಲ್ಲ ಎಂದು ಹಲವರು ತಮಾಷೆ ಮಾಡಿದ್ದಾರೆ.

ಇನ್ನು ಕೆಲವರು, ಇದು ಕೇವಲ ನಗುವ ವಿಷಯವಲ್ಲ. ಆ ಮಹಿಳೆ ಮನೆಯಲ್ಲಿ ಎಂತಹ ನರಕಯಾತನೆ ಮತ್ತು ಮಾನಸಿಕ ಒತ್ತಡ ಅನುಭವಿಸುತ್ತಿರಬಹುದು ಎಂಬುದಕ್ಕೆ ಈ ನೋಟೇ ಸಾಕ್ಷಿ. ಕೌಟುಂಬಿಕ ಕಲಹಗಳು ಈ ಮಟ್ಟಕ್ಕೆ ತಲುಪಿರುವುದು ವಿಷಾದನೀಯ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಈ ಘಟನೆ ಸದ್ಯಕ್ಕೆ ಇಂಟರ್ನೆಟ್‌ನಲ್ಲಿ ನಗುವಿನ ಅಲೆ ಎಬ್ಬಿಸಿದ್ದರೂ, ಸಮಾಜದಲ್ಲಿ ಮತ್ತು ಕುಟುಂಬಗಳಲ್ಲಿ ಹೆಚ್ಚುತ್ತಿರುವ ಮಾನಸಿಕ ಒತ್ತಡ ಹಾಗೂ ಭಿನ್ನಾಭಿಪ್ರಾಯಗಳಿಗೆ ಕನ್ನಡಿ ಹಿಡಿದಂತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬಗರ್ ಹುಕುಂ ಹಗರಣ: ಜೆಡಿಎಸ್​​ ಮಾಜಿ ಶಾಸಕ ಸಿಐಡಿ ವಶಕ್ಕೆ – Kannada News | JDS belur Former MLA lingesh arrested By CID In bagar hukum Land Scam

ಹಾಸನ, (ಜೂನ್ 19): ಅಕ್ರಮವಾಗಿ ಬಗರ್ ಹುಕುಂ ಜಮೀನು (bagar hukum Land) ಮಂಜೂರಾತಿ ಮಾಡಿ ಆರೋಪದಲ್ಲಿ ಹಾಸನ (Hassan) ಜಿಲ್ಲೆ ಬೇಲೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಮಾಜಿ ಶಾಸಕ ಕೆ.ಎಸ್. ಲಿಂಗೇಶ್ ಅವರನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬೇಲೂರು ಬಗರ್ ಹುಕ್ಕುಂ ಸಮಿತಿ ಅಧ್ಯಕ್ಷರಾಗಿದ್ದ ವೇಳೆ 2016 ರಿಂದ 2022ರ ನಡುವೆ ಬರೋಬ್ಬರಿ 2,750 ಎಕರೆ ಸರ್ಕಾರಿ ಜಮೀನುಗಳನ್ನು ನಿಯಮಬಾಹಿರವಾಗಿ ಮಂಜೂರು ಮಾಡಲಾಗಿದೆ ಎಂದು ಕೋಲಾರದ ಸಾಮಾಜಿಕ ಕಾರ್ಯಕರ್ತ ರಮೇಶ್‌ ಕುಮಾರ್ ಎಂಬುವರು ದಾಖಲಿಸಿದ್ದ ದೂರಿನ ಮೇರೆಗೆ ಸಿಐಡಿ ಅಧಿಕಾರಿಗಳು, ಇಂದು (ಜೂನ್ 19) ಹಳೇಬೀಡಿನಲ್ಲಿರುವ ಅವರ ನಿವಾಸದಲ್ಲೇ ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಮುಖ್ಯಾಂಶಗಳು

  • ಬೇಲೂರು ಕ್ಷೇತ್ರದ ಮಾಜಿ ಶಾಸಕ ಕೆ.ಎಸ್.ಲಿಂಗೇಶ್ ಸಿಐಡಿ ವಶಕ್ಕೆ
  • ಬೆಂಗಳೂರಿನಿಂದ ಬಂದು ವಿಚಾರಣೆಗೆ ಕರೆದೊಯ್ದ ಸಿಐಡಿ ಪೊಲೀಸರು
  • ಬಗರ್ ಹುಕುಂ ಕಮಿಟಿಯ ಅಧ್ಯಕ್ಷರಾಗಿದ್ದ ವೇಳೆ ಅಕ್ರಮ ಆರೋಪ
  • ಅಕ್ರಮವಾಗಿ ಮಾಜಿ ಶಾಸಕ ಲಿಂಗೇಶ್ ಭೂಮಂಜೂರಾತಿ ಆರೋಪ
  • ಬೇಲೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ
  • ಕೋಲಾರದ RTI ಕಾರ್ಯಕರ್ತ ರಮೇಶ್‌ಕುಮಾರ್ ನೀಡಿದ್ದ ದೂರು

2018ರಲ್ಲಿ ಜೆಡಿಎಸ್ ಪಕ್ಷದಿಂದ ಗೆದ್ದು ಶಾಸಕರಾಗಿದ್ದ ಕೆ.ಎಸ್.ಲಿಂಗೇಶ್, ಬಗರ್ ಹುಕುಂ ಕಮಿಟಿಯ ಅಧ್ಯಕ್ಷರಾಗಿದ್ದರು. ಬರೋಬ್ಬರಿ 2,750 ಎಕರೆ ಸರ್ಕಾರಿ ಜಮೀನುಗಳನ್ನು ನಿಯಮಬಾಹಿರವಾಗಿ ಮಂಜೂರು ಮಾಡಲಾಗಿದೆ ಎಂದು ಕೋಲಾರದ ಸಾಮಾಜಿಕ ಕಾರ್ಯಕರ್ತ ರಮೇಶ್‌ ಕುಮಾರ್ ಎಂಬುವರು ನೀಡಿದ ದೂರಿನ ಮೇರೆಗೆ ಬೇಲೂರು ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದ್ದು, ಬಳಿಕ ಪ್ರಕರಣವನ್ನು ಸಿಐಡಿಗೆ ಹಸ್ತಾಂತಿರಿಸಲಾಗಿತ್ತು.

ದೂರಿನಲ್ಲಿ ಸುಮಾರು 2750 ಎಕರೆ ಸರ್ಕಾರಿ ಜಮೀನನನ್ನು ನಕಲಿ ದಾಖಲೆಗಳ ಆಧಾರದ ಮೇಲೆ 1430 ಬೋಗಸ್ ಫಲಾನುಭವಿಗಳಿಗೆ ಮಂಜೂರು ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಮಾಜಿ ಶಾಸಕ ಲಿಂಗೇಶ್ ಸೇರಿದಂತೆ ಇತರರ ವಿರುದ್ಧ ವಿವಿಧ ಸೆಕ್ಷನ್​​ಗಳಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ನಂತರದ ಬಂಧನ ಭೀತಿ ಎದುರಾಗುತ್ತಿದ್ದಂತೆಯೇ ಲಿಂಗೇಶ್ ಹಾಗೂ ಇತರರು ಅವರು ತಮ್ಮ ವಿರುದ್ಧ ಪ್ರಕರಣ ರದ್ದತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್​ ವಜಾ ಮಾಡಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಶುರುವಾಯ್ತಾ ಮೈತ್ರಿ ಕುಸ್ತಿ? ಹೆಚ್​ಡಿ ರೇವಣ್ಣಗೆ ಮಾತಾಡೋ ಅಧಿಕಾರವಿಲ್ಲ: ಅಶೋಕ್ ತಿರುಗೇಟು

ಬೆಂಗಳೂರು, ಜೂನ್ 19: ಮಂಡ್ಯ ಮಾಜಿ ಸಂಸದೆ ಸುಮಲತಾ ಅಂಬರೀಶ್​ಗೆ ಬಿಜೆಪಿ ರಾಜ್ಯಸಭಾ ಟಿಕೆಟ್ ನೀಡುವ ವಿಚಾರದಲ್ಲಿ ಭರವಸೆ ನೀಡಿ ನಂತರ ನಿರಾಕರಿಸಿದೆ ಎಂಬರ್ಥದಲ್ಲಿ ಜೆಡಿಎಸ್ ಶಾಸಕ ಹೆಚ್​ಡಿ ರೇವಣ್ಣ ನೀಡಿರುವ ಹೇಳಿಕೆಗೆ ವಿಪಕ್ಷ ನಾಯಕ ಆರ್. ಅಶೋಕ್ ತೀವ್ರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ರೇವಣ್ಣ ಈ ಹೇಳಿಕೆಯು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ ಆರ್. ಅಶೋಕ್, ಇದು ತಮ್ಮ ಪಕ್ಷದ ಆಂತರಿಕ ವಿಚಾರ ಎಂದು ಸ್ಪಷ್ಟಪಡಿಸಿದರು. ಈ ಬಗ್ಗೆ ಜೆಡಿಎಸ್ ಪಕ್ಷದ ನಾಯಕರಾದ ಹೆಚ್.ಡಿ. ರೇವಣ್ಣಗಾಗಲಿ ಅಥವಾ ಇತರ ಯಾವುದೇ ಹೊರಗಿನವರಿಗಾಗಲಿ ಮಾತನಾಡುವ ಅಧಿಕಾರ ಇಲ್ಲ ಎಂದು ಅವರು ಖಡಾಖಂಡಿತವಾಗಿ ಹೇಳಿದ್ದಾರೆ.

ಬಿಜೆಪಿ ಯಾರಿಗೂ ರಾಜ್ಯಸಭಾ ಟಿಕೆಟ್ ಭರವಸೆ ನೀಡಿರಲಿಲ್ಲ ಎಂದು ಆರ್. ಅಶೋಕ್ ಸ್ಪಷ್ಟಪಡಿಸಿದ್ದಾರೆ. ಪಕ್ಷದ ನಿಯಮಾನುಸಾರ, ನಾವು ನಮ್ಮ ನಿಷ್ಠಾವಂತ ಕಾರ್ಯಕರ್ತರಿಗೆ ಮಾತ್ರ ರಾಜ್ಯಸಭಾ ಟಿಕೆಟ್ ನೀಡಿದ್ದೇವೆ. ಈ ನಿರ್ಧಾರ ಸಂಪೂರ್ಣವಾಗಿ ನಮ್ಮ ಪಕ್ಷದ ಆಂತರಿಕ ಪ್ರಕ್ರಿಯೆಯ ಭಾಗವಾಗಿದೆ. ರೇವಣ್ಣ ಅವರು ಈ ಕುರಿತು ಅನಗತ್ಯವಾಗಿ ಹೇಳಿಕೆಗಳನ್ನು ನೀಡಿ ಗೊಂದಲ ಸೃಷ್ಟಿಸಬಾರದು ಎಂದು ಆರ್. ಅಶೋಕ್ ಹೇಳಿದ್ದಾರೆ. ರಾಜ್ಯಸಭಾ ಸ್ಥಾನಕ್ಕೆ ಮೊದಲು ದೇವೇಗೌಡರು ಮತ್ತು ಸದಾನಂದಗೌಡರ ಹೆಸರುಗಳು ಕೇಳಿಬಂದಿದ್ದವು. ನಂತರ ಮಂಡ್ಯದ ಮೇಡಂ ಹೆಸರು ಕೇಳಿಬಂದಿತ್ತು. ನಂತರ ಅವರಿಗೂ ಟೋಪಿ ಹಾಕಿದರು ಎಂದು ರೇವಣ್ಣ ಹೇಳಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

BOB Recruitment 2026: ಬ್ಯಾಂಕ್ ಆಫ್ ಬರೋಡಾದಲ್ಲಿ ಉದ್ಯೋಗಾವಕಾಶ; 86 ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನ – Kannada News | Bank of Baroda Recruitment 2026: 86 Manager Posts in C&IC Dept | Apply by July 6

ಬ್ಯಾಂಕ್ ಆಫ್ ಬರೋಡಾದಲ್ಲಿ ಉದ್ಯೋಗಾವಕಾಶImage Credit source: Pinterest

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉತ್ತಮ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ ಇಲ್ಲಿದೆ. ದೇಶದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್ ಆದ ಬ್ಯಾಂಕ್ ಆಫ್ ಬರೋಡಾ (BOB) ತನ್ನ ಕಾರ್ಪೊರೇಟ್ ಮತ್ತು ಸಾಂಸ್ಥಿಕ ಕ್ರೆಡಿಟ್ (C&IC) ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಮ್ಯಾನೇಜರ್ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಖಾಲಿ ಇರುವ ಒಟ್ಟು ಹುದ್ದೆಗಳ ವಿವರ:

ಈ ನೇಮಕಾತಿ ಪ್ರಕ್ರಿಯೆಯ ಅಡಿಯಲ್ಲಿ ದೇಶದ ವಿವಿಧ ಶಾಖೆಗಳಲ್ಲಿ ಒಟ್ಟು 86 ನಿಯಮಿತ (Regular) ಮ್ಯಾನೇಜರ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಇದರಲ್ಲಿ ಮ್ಯಾನೇಜರ್ – ಕ್ರೆಡಿಟ್ ವಿಶ್ಲೇಷಕ (4 ಹುದ್ದೆಗಳು), ಹಿರಿಯ ವ್ಯವಸ್ಥಾಪಕ – ಕ್ರೆಡಿಟ್ ವಿಶ್ಲೇಷಕ (38 ಹುದ್ದೆಗಳು), ಮುಖ್ಯ ವ್ಯವಸ್ಥಾಪಕ – ಕ್ರೆಡಿಟ್ ವಿಶ್ಲೇಷಕ (1 ಹುದ್ದೆ), ಸೀನಿಯರ್ ಮ್ಯಾನೇಜರ್ – C&IC ರಿಲೇಶನ್‌ಶಿಪ್ (36 ಹುದ್ದೆಗಳು) ಮತ್ತು ಮುಖ್ಯ ವ್ಯವಸ್ಥಾಪಕ – C&IC ರಿಲೇಶನ್‌ಶಿಪ್ (7 ಹುದ್ದೆಗಳು) ಸೇರಿವೆ.

ಅಗತ್ಯವಿರುವ ಶೈಕ್ಷಣಿಕ ಅರ್ಹತೆ:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ (Graduation) ಮುಗಿಸಿರಬೇಕು. ಇದರೊಂದಿಗೆ ಫೈನಾನ್ಸ್ ಸ್ಪೆಷಲೈಸೇಶನ್‌ನಲ್ಲಿ ಪಿಜಿ (PG) ಅಥವಾ ಡಿಪ್ಲೊಮಾ ಹೊಂದಿರಬೇಕು. ಅಥವಾ CA/CMA/CS/CFA ನಂತಹ ವೃತ್ತಿಪರ ಅರ್ಹತೆಗಳನ್ನು ಪಡೆದಿರಬೇಕು. ಇದರ ಜೊತೆಗೆ ಬ್ಯಾಂಕಿಂಗ್ ಅಥವಾ ಹಣಕಾಸು ಕ್ಷೇತ್ರದಲ್ಲಿ ಸಂಬಂಧಿತ ಕೆಲಸದ ಅನುಭವ ಇರುವುದು ಕಡ್ಡಾಯವಾಗಿದೆ.

ವಯೋಮಿತಿ ಮತ್ತು ಸಡಿಲಿಕೆ:

ವಿವಿಧ ಹುದ್ದೆಗಳಿಗೆ ಅನುಗುಣವಾಗಿ ವಯೋಮಿತಿಯನ್ನು ನಿಗದಿಪಡಿಸಲಾಗಿದೆ. ಮ್ಯಾನೇಜರ್ ಹುದ್ದೆಗಳಿಗೆ 25 ರಿಂದ 30 ವರ್ಷಗಳು, ಸೀನಿಯರ್ ಮ್ಯಾನೇಜರ್ ಹುದ್ದೆಗಳಿಗೆ 28 ರಿಂದ 35 ವರ್ಷಗಳು ಮತ್ತು ಚೀಫ್ ಮ್ಯಾನೇಜರ್ ಹುದ್ದೆಗಳಿಗೆ 32 ರಿಂದ 42 ವರ್ಷಗಳ ವಯೋಮಿತಿ ಇರಬೇಕು. ನಿಯಮಾವಳಿಗಳ ಪ್ರಕಾರ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆ ಇರಲಿದೆ.

ಇದನ್ನೂ ಓದಿ: ಲಿಖಿತ ಪರೀಕ್ಷೆಯಿಲ್ಲದೆ ಸಿಗಲಿದೆ ತಿಂಗಳಿಗೆ 2.25 ಲಕ್ಷ ರೂ. ಸಂಬಳದ ಉದ್ಯೋಗ! ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜಿ ಶುಲ್ಕದ ವಿವರ:

ಅರ್ಜಿ ಸಲ್ಲಿಸಲು ಸಾಮಾನ್ಯ (General), EWS ಮತ್ತು OBC ಅಭ್ಯರ್ಥಿಗಳಿಗೆ ರೂ. 850 ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಇನ್ನುಳಿದಂತೆ ಎಸ್‌ಸಿ/ಎಸ್‌ಟಿ, ಮಹಿಳೆಯರು ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ. 175 ಅರ್ಜಿ ಶುಲ್ಕ ಇರಲಿದೆ. ಅಭ್ಯರ್ಥಿಗಳು ಆನ್‌ಲೈನ್ ಪಾವತಿ ವಿಧಾನಗಳ ಮೂಲಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಆಯ್ಕೆ ವಿಧಾನ ಮತ್ತು ಆಕರ್ಷಕ ವೇತನ:

ಅಭ್ಯರ್ಥಿಗಳನ್ನು ನೇರವಾಗಿ ಆಯ್ಕೆ ಮಾಡದೆ ಆನ್‌ಲೈನ್ ಲಿಖಿತ ಪರೀಕ್ಷೆ, ಸೈಕೋಮೆಟ್ರಿಕ್ ಪರೀಕ್ಷೆ, ಗುಂಪು ಚರ್ಚೆ (GD) ಮತ್ತು ವೈಯಕ್ತಿಕ ಸಂದರ್ಶನದ ಆಧಾರದ ಮೇಲೆ ಶಾರ್ಟ್‌ಲಿಸ್ಟ್ ಮಾಡಿ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಗ್ರೇಡ್ 2 ಹುದ್ದೆಗಳಿಗೆ ಮಾಸಿಕ ರೂ. 93,960, ಗ್ರೇಡ್ 3 ಹುದ್ದೆಗಳಿಗೆ ರೂ. 1,05,280 ಮತ್ತು ಗ್ರೇಡ್ 4 ಹುದ್ದೆಗಳಿಗೆ ರೂ. 1,20,940 ರವರೆಗೆ ಇತರೆ ಭತ್ಯೆಗಳೊಂದಿಗೆ ಅತ್ಯುತ್ತಮ ವೇತನ ಸಿಗಲಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:

ಅರ್ಹ ಅಭ್ಯರ್ಥಿಗಳು ಜುಲೈ 6 ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಬ್ಯಾಂಕಿನ ಅಧಿಕೃತ ವೆಬ್‌ಸೈಟ್ ಆದ bankofbaroda.in ಗೆ ಭೇಟಿ ನೀಡಿ ‘Careers’ ವಿಭಾಗದಲ್ಲಿ ಲಾಗ್ ಇನ್ ಆಗುವ ಮೂಲಕ ಆಸಕ್ತರು ತಮ್ಮ ಫಾರ್ಮ್‌ಗಳನ್ನು ಸಲ್ಲಿಸಬಹುದು. ಅಂತಿಮ ದಿನಾಂಕದ ವರೆಗೆ ಕಾಯದೇ ಅಭ್ಯರ್ಥಿಗಳು ಮೊದಲೇ ಅರ್ಜಿ ಸಲ್ಲಿಸುವುದು ಸೂಕ್ತ.

Source link

ವೈರಲ್ ಪೋಸ್ಟ್: ಟರ್ಕಿಶ್ ಭಾಷೆಯಲ್ಲಿ ‘ಇಂದಿರಾ ಗಾಂಧಿ’ ಅಂದ್ರೆ ಏನು ಗೊತ್ತಾ? – Kannada News | Indira Gandhi in Turkish: Viral Post Reveals Surprising Meaning and Origin

ನವದೆಹಲಿ, ಜೂನ್ 19: ಒಂದೊಂದು ಪದಕ್ಕೆ ಒಂದೊಂದು ಭಾಷೆಯಲ್ಲಿ ಒಂದೊಂದು ಅರ್ಥವಿರುತ್ತದೆ. ಹಾಗೆಯೇ ಇಂದಿರಾ ಗಾಂಧಿ ಎಂಬ ಪದಕ್ಕೆ ಟರ್ಕಿಶ್ ಭಾಷೆಯಲ್ಲಿ ಅರ್ಥವೇನು ಗೊತ್ತಾ. ಸಂಪೂರ್ಣ ಮಾಹಿತಿ ಇಲ್ಲಿದೆ. ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಅಭಿಜಿತ್ ಐಯ್ಯರ್ ಎಂಬುವವರು ಕೀರ್ತನಾ ಎಂಬುವವರ ಪೋಸ್ಟ್ ಹಂಚಿಕೊಂಡಿದ್ದು​ ವೈರಲ್ ಆಗಿದೆ. ಟರ್ಕಿಶ್ ಭಾಷೆಯಲ್ಲಿ ‘ಇಂದಿರಾ ಗಾಂಧಿ’ ಎಂದರೆ ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಳ್ಳುವುದು, ಕಳ್ಳತನ ಮಾಡುವುದು ಅಥವಾ ವಂಚಿಸುವುದು ಎಂದರ್ಥ ಎಂದು ಹೇಳಿದ್ದಾರೆ. ಈ ಪೋಸ್ಟ್ ರಾಜಕೀಯ ವಲಯ ಹಾಗೂ ನೆಟ್ಟಿಗರಲ್ಲಿ ಭಾರೀ ಕುತೂಹಲ ಮೂಡಿಸಿದೆ.

ಕೀರ್ತನಾ ಎಂಬುವವರು ತಮ್ಮ ಸ್ನೇಹಿತರ ಜತೆ ಮಾತನಾಡುವಾಗ ಇಂದಿರಾ ಗಾಂಧಿ ಎಂಬ ಪದ ಬಳಸಿದ್ದರಂತೆ, ಆಗ ಇಂದಿರಾ ಗಾಂಧಿ ಎನ್ನುವ ಪದದ ಬಗ್ಗೆ ನಿಮಗೆ ಹೇಗೆ ಗೊತ್ತು ಎಂದು ಆಕೆಯನ್ನು ಅವರು ಕೇಳಿದ್ದರಂತೆ, ಆಗ ಅವರು ಭಾರತದ ಮಾಜಿ ಪ್ರಧಾನಿ ಎಂದು ಹೇಳಿದಾಗ, ಇಲ್ಲ ಇಲ್ಲ ನಾವು ಮಾತನಾಡುತ್ತಿರುವುದು ವ್ಯಕ್ತಿ ಬಗ್ಗೆ ಅಲ್ಲ ವ್ಯವಸ್ಥೆ ಬಗ್ಗೆ ಇಂದಿರಾ ಗಾಂಧಿ ಎಂದರೆ ಸಾರ್ವಜನಿಕರ ಹಣವನ್ನು ದುರುಪಯೋಗ ಮಾಡಿಕೊಳ್ಳುವುದು ಎಂದರ್ಥ ಎಂದು ಹೇಳಿದ್ದರಂತೆ.

70 ಹಾಗೂ 80ನೇ ದಶಕದಲ್ಲಿ ಈ ಪದ ಬಳಕೆಯಲ್ಲಿತ್ತು. ಆದರೆ ನಂತರದ ದಿನಗಳಲ್ಲಿ ಪದ ಬಳಸುತ್ತಿದ್ದರೂ ಆ ಹೆಸರಿನ ವ್ಯಕ್ತಿ ಇದ್ದಾರೆ ಎಂದು ಟರ್ಕಿಯ ಬಹುತೇಕ ಜನರಿಗೆ ತಿಳಿದಿರಲಿಲ್ಲ. 2014ರಲ್ಲಿ ಟರ್ಕಿಯ ವಿಪಕ್ಷವು ಇಂಡಿರಾ ಗಾಂಧಿ ಮೆಮೋರಿಯಲ್ ವೀಕ್ ಅನ್ನು ಆರಂಭಿಸಿತ್ತು. ಆಗಿನ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ನಡೆಸಿದ್ದ ಆಂದೋಲನ ಅದಾಗಿತ್ತು. ಪೊಲೀಸರು ಬಂದು ಬ್ಯಾನರ್​ ಅನ್ನು ಕಿತ್ತು ಹಾಕಿದ್ದರು. ಸಂಸತ್ತಿನಲ್ಲಿ ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ವಿರುದ್ಧ ಏನಿದು ಅಭಿಯಾನ ಎಂದು ಪ್ರಶ್ನೆ ಮಾಡಿದ್ದರು.

ವಿಡಿಯೋ

ಭಾಷಾ ತಜ್ಞರು ಮತ್ತು ಡಿಕ್ಷನರಿಗಳ ಪ್ರಕಾರ, ಈ ವೈರಲ್ ಪೋಸ್ಟ್‌ ಸುಳ್ಳಲ್ಲ, ಟರ್ಕಿಶ್ ಭಾಷೆಯ ಆಡುಭಾಷೆಯಲ್ಲಿ ನಿಜವಾಗಿಯೂ ‘ಇಂದಿರಾ ಗಾಂಧಿ’ ಎಂಬ ಪದವನ್ನು ಬಳಸಲಾಗುತ್ತದೆ. ಟರ್ಕಿಶ್ ಭಾಷೆಯಲ್ಲಿ ‘ಇಂದಿರ್ಮೆಕ್’ (İndirmek) ಎಂದರೆ ಒಂದು ವಸ್ತುವನ್ನು ಕೆಳಗಿಳಿಸುವುದು ಅಥವಾ ಸ್ವಾಧೀನಪಡಿಸಿಕೊಳ್ಳುವುದು ಎಂದರ್ಥ.

ಕಾಲಾನಂತರದಲ್ಲಿ ಟರ್ಕಿಯ ಯುವಕರು ಮತ್ತು ಅಲ್ಲಿನ ಆಡುಭಾಷೆಯಲ್ಲಿ, ಯಾರಾದರೂ ಹಣವನ್ನು ಲಪಟಾಯಿಸಿದರೆ ಅಥವಾ ಕಳ್ಳತನ ಮಾಡಿದರೆ ಅದನ್ನು ತಮಾಷೆಯಾಗಿ ‘ಇಂದಿರಾ ಗಾಂಧಿ’ (İndira gandi) ಎಂದು ಕರೆಯಲು ಆರಂಭಿಸಿದರು.

ಭಾರತದ ನಂಟಿದೆಯೇ?: ಇದು ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹೆಸರನ್ನೇ ಹೋಲುತ್ತದೆಯಾದರೂ, ಟರ್ಕಿಶ್ ಭಾಷೆಯ ಮೂಲ ಪದಕ್ಕೂ ಭಾರತದ ರಾಜಕಾರಣಕ್ಕೂ ಯಾವುದೇ ನೇರ ಸಂಬಂಧವಿಲ್ಲ. ಆದರೆ, ಕೇವಲ ಉಚ್ಚಾರಣೆಯ ಹೋಲಿಕೆಯಿಂದಾಗಿ ಭಾರತೀಯ ನೆಟ್ಟಿಗರು ಇದನ್ನು ರಾಜಕೀಯ ವ್ಯಂಗ್ಯಕ್ಕೆ ವ್ಯಾಪಕವಾಗಿ ಬಳಸುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ವಿಧಾನ ಪರಿಷತ್​​ ಚುನಾವಣೆಯಲ್ಲಿ ಕ್ರಾಸ್​​ ವೋಟಿಂಗ್​​: ಬಿಜೆಪಿಯಿಂದ ಸತ್ಯಶೋಧನಾ ಸಮಿತಿ ರಚನೆ – Kannada News | Karnataka MLC Polls: BJP Forms CT Ravi Led Panel to Probe Cross Voting; Bhagwant Khuba Demands Strict Action

ಬೆಂಗಳೂರು, ಜೂನ್​​ 19: ವಿಧಾನ ಪರಿಷತ್​​ ಚುನಾವಣೆಯಲ್ಲಿ ಭಾರಿ ಅಡ್ಡಮತದಾನದ ಪರಿಣಾಮ ಕೂದಲೆಳೆ ಅಂತರದಲ್ಲಿ ಮುಖಭಂಗ ತಪ್ಪಿಸಿಕೊಂಡಿರುವ ಕರ್ನಾಟಕ ಬಿಜೆಪಿ ಕ್ರಾಸ್​​ ವೋಟಿಂಗ್​​ ವಿಚಾರವಾಗಿ ಸತ್ಯಶೋಧನಾ ಸಮಿತಿ ರಚನೆ ಮಾಡಿದೆ. ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದ್ದು, ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷ ಎನ್​.ಮಹೇಶ್, ಶಾಸಕ ಮಹೇಶ್ ಟೆಂಗಿನಕಾಯಿ ಒಳಗೊಂಡ ತ್ರಿಸದಸ್ಯ ಸಮಿತಿಗೆ ಜೂನ್ 25ರೊಳಗೆ ವರದಿ ನೀಡುವಂತೆ ಬಿ.ವೈ.ವಿಜಯೇಂದ್ರ ಸೂಚನೆ ನೀಡಿದ್ದಾರೆ.

ಭಗವಂತ್ ಖೂಬಾ ಪತ್ರ

ಬಿಜೆಪಿ ಶಾಸಕರಿಂದ ಅಡ್ಡಮತದಾನ ಹಿನ್ನೆಲೆ ರಾಜ್ಯ ಬಿಜೆಪಿ ಅದ್ಯಕ್ಷ ಬಿ.ವೈ.ವಿಜಯೇಂದ್ರಗೆ ಕೇಂದ್ರದ ಮಾಜಿ ಸಚಿವ ಭಗವಂತ್ ಖೂಬಾ ಪತ್ರ ಬರೆದಿದ್ದಾರೆ. ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧವೇ ರಾಜಾರೋಷವಾಗಿ ಕೆಲಸ ಮಾಡಿದರೂ ಅವರ ವಿರುದ್ಧ ಕ್ರಮ ಕೈಗೊಂಡಿಲ್ಲ. ಇದರಿಂದಾಗಿಯೇ ಪರಿಷತ್​​ ಚುನಾವಣೆಯಲ್ಲಿ ಅಡ್ಡಮತದಾನ ನಡೆದಿದೆ. ಎಷ್ಟೋ ಕಡೆ ಶಾಸಕರು ತಮ್ಮ ಬೆಂಬಲಿಗರಿಗೆ ಮುನ್ಸೂಚನೆ ನೀಡುತ್ತಿದ್ದಾರೆ ಕಾರ್ಯಕರ್ತರು ಸಂಘಟನೆಯಲ್ಲಿ ಕೆಲಸ ಮಾಡದೇ ದೂರ ಉಳಿಯುತ್ತಿದ್ದಾರೆ. ಹಣ ಕೊಟ್ಟು ಜನರನ್ನು ಕರೆತಂದು ಕಾರ್ಯಕರ್ತರು ಎಂದು ಬಿಂಬಿಸುವ ಕೆಲಸ ಆಗುತ್ತಿದ್ದರೂ ಇದ್ಯಾವುದನ್ನೂ ಪ್ರಶ್ನಿಸುತ್ತಿಲ್ಲ ಎಂದು ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ. 2028ರಲ್ಲಿ ಪಕ್ಷ ಅಧಿಕಾರಕ್ಕೆ ಬರಬೇಕಾದರೆ ಶಿಸ್ತು ಕ್ರಮ ಆಗಲೇಬೇಕು ಎಂದು ಗೌಪ್ಯ ಪತ್ರದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷರನ್ನು ಒತ್ತಾಯಿಸಿರುವ ಖೂಬಾ, ರಾಜ್ಯ ಬಿಜೆಪಿ ಕೋರ್ ಕಮಿಟಿ ಸದಸ್ಯರಿಗೂ ಈ ಸಂಬಂಧ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಪರಿಷತ್ ಚುನಾವಣೆಯಲ್ಲಿ ಜೆಡಿಎಸ್​ಗೆ ಸೋಲು; ಶಾಸಕರ ಅಡ್ಡಮತದಾನದ ಬಗ್ಗೆ ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದೇನು ನೋಡಿ

‘ಅಡ್ಡ ಮತದಾನದಿಂದ ಬೇಸರವಾಗಿದೆ’

ಪರಿಷತ್ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಅಡ್ಡಮತದಾನದಿಂದ ನಮಗೂ ಬೇಸರ ಹಾಗೂ ನೋವಾಗಿದೆ ಎಂದು ಬೆಂಗಳೂರಿನಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಅಡ್ಡಮತದಾನ ಆಗಬಾರದಿತ್ತು, ಆದರೆ ದುರಾದೃಷ್ಟವಶಾತ್ ಆಗಿದೆ. ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ. ಈ ಬೆಳವಣಿಗೆಯಿಂದ ವಿಚಲಿತ ಆಗಿ ಓಡಿಹೋಗುವವನು ನಾನಲ್ಲ. ಇದನ್ನು ಅರಗಿಸಿಕೊಳ್ಳುವ ಶಕ್ತಿ ನನಗಿದೆ. ನಾನು ರಾಜ್ಯ ಬಿಜೆಪಿ ಅಧ್ಯಕ್ಷ, ಬಿ.ಎಸ್​.ಯಡಿಯೂರಪ್ಪನವರ ಮಗ. ಅಡ್ಡಮತದಾನ ಬಗ್ಗೆ ಯಾರಿಗೆ ಹೇಳಬೇಕೋ ಹೇಳುತ್ತೇನೆ ಎಂದವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 2:05 pm, Fri, 19 June 26

Source link

ಮೈಸೂರು: ಕಾಲೇಜು ಕ್ಯಾಂಪಸ್‌ನಲ್ಲೇ ಹೃದಯಾಘಾತದಿಂದ ಕುಸಿದುಬಿದ್ದು ವಿದ್ಯಾರ್ಥಿ ಸಾವು – Kannada News | Tragedy in Mysore: Student’s Sudden Heart Attack at Marimallappa College Sparks Youth Health Fears

ಮೈಸೂರು ವಿದ್ಯಾರ್ಥಿ ಸಾವುImage Credit source: Tv9 kannada

ಮೈಸೂರು, ಜೂ.19: ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಹೃದಯಾಘಾತದ (Heart Attack) ಪ್ರಕರಣಗಳು ಹೆಚ್ಚಾಗುತ್ತಿರುವುದು ತೀವ್ರ ಆತಂಕವೂ ಮೂಡಿಸಿದೆ. ಇದಕ್ಕೆ ಸಾಕ್ಷಿ ಎಂಬಂತೆ, ಸಾಂಸ್ಕೃತಿಕ ನಗರಿ ಮೈಸೂರಿನ ಖ್ಯಾತ ಮರಿಮಲ್ಲಪ್ಪ ಕಾಲೇಜು ಕ್ಯಾಂಪಸ್‌ನಲ್ಲೇ (Marimallappa College) ಹೃದಯಾಘಾತದಿಂದ ವಿದ್ಯಾರ್ಥಿಯೊಬ್ಬ ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಇದೀಗ ಚಿಕ್ಕ ವಯಸ್ಸಿನಲ್ಲಿ ಹೃದಯಾಘಾತದಂತಹ ಕಾಯಿಲೆಗಳು ಹೆಚ್ಚಾಗಿರುವುದು ಪೋಷಕರಲ್ಲಿ ಆಂತಕ ಉಂಟು ಮಾಡಿದೆ.

ಮೃತ ವಿದ್ಯಾರ್ಥಿಯನ್ನು ಮಾದೇಶ್ ಎಂದು ಗುರುತಿಸಲಾಗಿದೆ. ಇವರು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಮೂಲದವರಾಗಿದ್ದು, ಸದ್ಯ ಮೈಸೂರಿನಲ್ಲಿ ತಮ್ಮ ಅಕ್ಕನ ಜೊತೆ ವಾಸವಿದ್ದುಕೊಂಡು ಮರಿಮಲ್ಲಪ್ಪ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಎಂದಿನಂತೆ ಕಾಲೇಜಿಗೆ ಬಂದಿದ್ದ ಮಾದೇಶ್, ಕ್ಯಾಂಪಸ್‌ನಲ್ಲಿ ಇದ್ದಕ್ಕಿದ್ದಂತೆ ತೀವ್ರ ಹೃದಯಾಘಾತಕ್ಕೊಳಗಾಗಿ ಪ್ರಜ್ಞೆ ತಪ್ಪಿ ಕುಸಿದುಬಿದ್ದಿದ್ದಾರೆ.

ವಿದ್ಯಾರ್ಥಿ ಕುಸಿದುಬೀಳುತ್ತಿದ್ದಂತೆ ಗಾಬರಿಗೊಂಡ ಕಾಲೇಜಿನ ಸಿಬ್ಬಂದಿ ಹಾಗೂ ಸಹಪಾಠಿಗಳು ತಕ್ಷಣವೇ ಕಾಲೇಜು ಮಂಡಳಿಯ ಸಿಬ್ಬಂದಿ ಮಾದೇಶ್​ ಅನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಆಸ್ಪತ್ರೆಯಲ್ಲಿ ವೈದ್ಯರು ತುರ್ತು ಪರೀಕ್ಷೆ ಮಾಡಿದರೂ ಚಿಕಿತ್ಸೆ ಫಲಕಾರಿಯಾಗದೆ ಮಾದೇಶ್ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಸಣ್ಣ ವಯಸ್ಸಿನಲ್ಲೇ ವಿದ್ಯಾರ್ಥಿ ಸಾವನ್ನಪ್ಪಿರುವುದು ಕಾಲೇಜು ಹಾಗೂ ಮೃತನ ಕುಟುಂಬದಲ್ಲಿ ನೋವು ಉಂಟು ಮಾಡಿದೆ.

ಇದನ್ನೂ ಓದಿ:ಶಿವಮೊಗ್ಗ: ಶಾಲೆಯಲ್ಲಿ ಆಟವಾಡುತ್ತಿದ್ದಾಗ ಆರು ವರ್ಷದ ಬಾಲಕ ಸಾವು, ಹೃದಯಾಘಾತ ಶಂಕೆ

ಕಾಲೇಜು ದಿನಗಳಲ್ಲೇ ಮಗನನ್ನು ಕಳೆದುಕೊಂಡ ಹೆತ್ತವರ ಹಾಗೂ ಅಕ್ಕನ ಆಕ್ರಂದನ ಮುಗಿಲು ಮುಟ್ಟಿದೆ. ಈ ದುರಂತಕ್ಕೆ ಸಂಬಂಧಿಸಿದಂತೆ ಮೈಸೂರಿನ ದೇವರಾಜ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಾನೂನು ಪ್ರಕ್ರಿಯೆಗಳನ್ನು ಕೈಗೊಂಡಿದ್ದಾರೆ.

ಶಾಲಾ ಆವರಣದಲ್ಲಿ ಆಟವಾಡುತ್ತಿದ್ದಾಗಲೇ ಕುಸಿದುಬಿದ್ದು 1ನೇ ತರಗತಿ ವಿದ್ಯಾರ್ಥಿ ಸಾವು

ಶಾಲಾ ಆವರಣದಲ್ಲಿ ಸ್ನೇಹಿತರೊಂದಿಗೆ ಆಟವಾಡುತ್ತಿದ್ದ ಆರು ವರ್ಷದ ಪುಟ್ಟ ಬಾಲಕನೊಬ್ಬ ಏಕಾಏಕಿ ಕುಸಿದುಬಿದ್ದು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹಾಳಸಸಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಮೃತ ದುರ್ದೈವಿ ಬಾಲಕನನ್ನು ತ್ರಿಲೋಕ್ ಜೈನ್ (6) ಎಂದು ಗುರುತಿಸಲಾಗಿದೆ. . ಕೊಡನವಳ್ಳಿಯ ಗೌತಮ್ ಮತ್ತು ಶಿಲ್ಪಾ ದಂಪತಿಯ ಪ್ರೀತಿಯ ಪುತ್ರನಾಗಿದ್ದ ತ್ರಿಲೋಕ್ ಜೈನ್ ಎಂದಿನಂತೆ ಶಾಲೆಗೆ ಬಂದಿದ್ದ ಬಾಲಕ ಬಿಡುವಿನ ವೇಳೆಯಲ್ಲಿ ಶಾಲಾ ಮೈದಾನದಲ್ಲಿ ಆಟವಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿ ಕುಸಿದುಬಿದ್ದಿದ್ದಾನೆ.

ಮಗು ದಿಢೀರನೆ ಕೆಳಗೆ ಬಿದ್ದಿದ್ದನ್ನು ಕಂಡು ಗಾಬರಿಗೊಂಡ ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿ ತಕ್ಷಣವೇ ಮಗುವನ್ನು ಉಪಚರಿಸಿ ಆಸ್ಪತ್ರೆಗೆ ಸಾಗಿಸಲು ವ್ಯವಸ್ಥೆ ಮಾಡಿದ್ದಾರೆ. ಆದರೆ ದುರದೃಷ್ಟವಶಾತ್, ಆಸ್ಪತ್ರೆಗೆ ತಲುಪುವ ಮಾರ್ಗಮಧ್ಯದಲ್ಲೇ ಆ ಪುಟ್ಟ ಕಂದಮ್ಮ ಕೊನೆಯುಸಿರೆಳೆದಿದ್ದಾನೆ. ಆಸ್ಪತ್ರೆಯ ವೈದ್ಯರು ಬಾಲಕನನ್ನು ಪರೀಕ್ಷಿಸಿ ಈಗಾಗಲೇ ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ.ಪ್ರಾಥಮಿಕ ಮಾಹಿತಿಗಳ ಪ್ರಕಾರ ಬಾಲಕ ತ್ರಿಲೋಕ್ ತೀವ್ರ ಹೃದಯಾಘಾತದಿಂದಲೇ ಮೃತಪಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆದರೆ, ಇಷ್ಟು ಸಣ್ಣ ವಯಸ್ಸಿನ ಮಗುವಿಗೆ ಹಠಾತ್ ಹೃದಯಾಘಾತ ಸಂಭವಿಸಲು ಕಾರಣವೇನು? ಅಥವಾ ಮಗುವಿಗೆ ಈ ಮೊದಲೇನಾದರೂ ಹೃದಯ ಸಂಬಂಧಿ ಕಾಯಿಲೆ ಇತ್ತೇ? ಎಂಬ ಅಸಲಿ ಸತ್ಯ ವೈದ್ಯಕೀಯ ವರದಿ ಬಂದ ನಂತರವಷ್ಟೇ ತಿಳಿಯಬೇಕಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link