ಬೆಂಗಳೂರಿನಲ್ಲಿ ಸಂಜೆ ವೇಳೆಯೇ ಆವರಿಸಿದ ಕಗ್ಗತ್ತಲು, ಲೈಟ್ ಹಾಕಿಕೊಂಡು ಚಲಿಸಿದ ವಾಹನ ಚಾಲಕರು – Kannada News | Bengaluru Rainfall: Traffic Jam Some Roads In the City due to stagnant rainwater
ಬೆಂಗಳೂರು, (ಜೂನ್ 20): ಬೆಂಗಳೂರು ಮಾತ್ರವಲ್ಲ ದೇಶದಲ್ಲೂ ಸಹ ಈ ಬಾರಿ ವಾಡಿಕೆಗಿಂತ ಮಳೆಯಾಗಿಲ್ಲ. ಆದರೂ ಇಂದು (ಜೂನ್ 20) ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಳೆರಾಯ (Bengaluru Rain) ಕೃಪೆತೋರಿದ್ದಾನೆ. ಆದ್ರೆ, ಬಂದ ಸಣ್ಣ ಹನಿಯ ಮಳೆಗೆ ಬೆಂಗಳೂರಿನ ರಸ್ತೆಗಳು ಕೆರೆಗಳಂತಾಗಿವೆ. ಹೌದು…ಸಂಜೆ ಸುರಿದ ಮಳೆಯಿಂದಾಗಿ ರಸ್ತೆಗಳಲ್ಲಿ ನೀರು ತುಂಬಿಕೊಂಡು ಹಲವೆಡೆ ಸಂಚಾರ ದಟ್ಟಣೆಯಾಗಿದ್ದು, ವಾಹನ ಸವಾರರು ಪರದಾಡುವಂತಾಯ್ತು. ಇನ್ನು ಮೋಡ ಕವಿದ ವಾತಾವರಣದಿಂದಾಗಿ ವಾಹನ ಸವಾರರು ಸಂಜೆ ವೇಳೆಯಲ್ಲೇ ಹೆಡ್ ಲೈಟ್ ಆನ್ ಮಾಡಿಕೊಂಡು ಪ್ರಯಾಣಿಸುತ್ತಿರುವುದು…