All posts by nagaraj11081993

ಭಾರತದ ಈ ರೈಲ್ವೆ ನಿಲ್ದಾಣಕ್ಕೆ ವರ್ಷಕ್ಕೆ ಎರಡೇ ಬಾರಿ ರೈಲು ಬರುತ್ತೆ

ಭಾರತದ ಈ ರೈಲ್ವೆ ನಿಲ್ದಾಣಕ್ಕೆ ವರ್ಷಕ್ಕೆ ಎರಡೇ ಬಾರಿ ರೈಲು ಬರುತ್ತೆ

ನವದೆಹಲಿ, ಮಾರ್ಚ್​ 26: ಭಾರತವು ವಿಶ್ವದ ನಾಲ್ಕನೇ ಅತಿದೊಡ್ಡ ರೈಲ್ವೆ(Railway) ಜಾಲವನ್ನು ಹೊಂದಿದೆ. ನಿತ್ಯವೂ ಸಾವಿರಾರು ಮಂದಿ ರೈಲಿನಲ್ಲಿ ಸಂಚರಿಸುತ್ತಾರೆ. ಅದಕ್ಕಾಗಿಯೇ ಹೆಚ್ಚಿನ ನಿಲ್ದಾಣಗಳು ಯಾವಾಗಲೂ ಜನದಟ್ಟಣೆಯಿಂದ ಕೂಡಿರುತ್ತವೆ. ಆದರೆ ಇಂದು, ಭಾರತದಲ್ಲಿ ಒಂದು ವಿಶಿಷ್ಟ ರೈಲ್ವೆ ನಿಲ್ದಾಣದ ಬಗ್ಗೆ ನಿಮಗೆ ಗೊತ್ತೆ? ಈ ನಿಲ್ದಾಣದಲ್ಲಿ ವರ್ಷದಲ್ಲಿ ಎರಡೇ ಬಾರಿ ರೈಲು ಬರುತ್ತೆ.

ಇದು ಪಂಜಾಬ್‌ನ ಹುಸೇನಿವಾಲಾ ರೈಲು ನಿಲ್ದಾಣವಾಗಿದ್ದು, ಫಿರೋಜ್‌ಪುರ ಮತ್ತು ಹುಸೇನಿವಾಲಾ ಗಡಿಯ ನಡುವೆ ಇದೆ. ಈ ನಿಲ್ದಾಣವು ಫಿರೋಜ್‌ಪುರ ಕ್ಯಾಂಟ್‌ನಿಂದ ಬರುವ ರೈಲು ಮಾರ್ಗದ ಕೊನೆಯ ನಿಲ್ದಾಣವಾಗಿದೆ.ಈ ನಿಲ್ದಾಣದ ಅತ್ಯಂತ ವಿಶೇಷವೆಂದರೆ ರೈಲುಗಳು ವರ್ಷಕ್ಕೆ ಎರಡು ಬಾರಿ ಮಾತ್ರ ಇಲ್ಲಿಗೆ ಬರುತ್ತವೆ.

ಹುಸೇನಿವಾಲಾ ನಿಲ್ದಾಣದ ಅತ್ಯಂತ ವಿಶೇಷವೆಂದರೆ ಇಲ್ಲಿ ರೈಲುಗಳು ಪ್ರತಿದಿನ ಓಡುವುದಿಲ್ಲ. ವರ್ಷವಿಡೀ ಎರಡು ವಿಶೇಷ ಸಂದರ್ಭಗಳಲ್ಲಿ ಮಾತ್ರ ರೈಲುಗಳು ಇಲ್ಲಿಗೆ ಬರುತ್ತವೆ. ಭಗತ್ ಸಿಂಗ್ ಅವರ ಹುತಾತ್ಮ ದಿನವಾದ ಮಾರ್ಚ್ 23 ರಂದು ಮೊದಲ ರೈಲು ಚಲಿಸುತ್ತದೆ. ಈ ದಿನದಂದು, ದೇಶಾದ್ಯಂತದ ಜನರು ಹುಸೇನಿವಾಲಾ ಗಡಿಗೆ ಬಂದು ಗೌರವ ಸಲ್ಲಿಸುತ್ತಾರೆ.

ಬೈಸಾಖಿ ಹಬ್ಬವನ್ನು ಗುರುತಿಸಲು ಏಪ್ರಿಲ್ 13 ರಂದು ಎರಡನೇ ರೈಲು ಚಲಿಸುತ್ತದೆ. ಈ ಎರಡು ದಿನಗಳಲ್ಲಿ ಇಲ್ಲಿ ಜನಸಂದಣಿ ಕಂಡುಬರುತ್ತದೆ, ಆದರೆ ಉಳಿದ ಸಮಯದಲ್ಲಿ ನಿಲ್ದಾಣವು ಬಹುತೇಕ ಖಾಲಿಯಾಗಿರುತ್ತದೆ.

ಮತ್ತಷ್ಟು ಓದಿ: Free railway travel: ಶೌರ್ಯ ಪ್ರಶಸ್ತಿ ವಿಜೇತರಿಗೆ ಸರ್ಕಾರದ ಗಿಫ್ಟ್​, ಜೀವಮಾನವಿಡೀ ರೈಲು ಪ್ರಯಾಣ ಉಚಿತ

ಇತ್ತೀಚೆಗೆ, ಸಾಮಾಜಿಕ  ಜಾಲತಾಣದಲ್ಲಿ ಒಂದು ವೀಡಿಯೊ ವೈರಲ್ ಆಗಿದ್ದು, ಅದರಲ್ಲಿ ಒಬ್ಬ ವ್ಯಕ್ತಿ ಈ ನಿಲ್ದಾಣದ ಬಗ್ಗೆ ಮಾಹಿತಿ ನೀಡುತ್ತಿರುವುದು ಕಂಡುಬರುತ್ತದೆ. ರೈಲು ವರ್ಷಕ್ಕೆ ಎರಡು ಬಾರಿ ಮಾತ್ರ ತಾನು ನಿಂತಿರುವ ಸ್ಥಳಕ್ಕೆ ಬರುತ್ತದೆ ಎಂದು ಅವರು ವಿವರಿಸುತ್ತಾರೆ.ಹುಸೇನಿವಾಲಾ ರೈಲು ನಿಲ್ದಾಣವು ರೈಲು ಮಾರ್ಗದ ಕೊನೆಯ ನಿಲ್ದಾಣವಾಗಿದ್ದು ರೈಲು ಮಾರ್ಗವು ಇಲ್ಲಿ ಕೊನೆಗೊಳ್ಳುತ್ತದೆ.

ಇದು ಉತ್ತರ ರೈಲ್ವೆಯ ಕೊನೆಯ ರೈಲು ಮಾರ್ಗವಾಗಿದೆ. ಇಲ್ಲಿಗೆ ಬರುವ ರೈಲುಗಳು ಅವು ಬಂದ ದಿಕ್ಕಿನಲ್ಲೇ ಹಿಂತಿರುಗುತ್ತವೆ. ಹಿಂದೆ, ಈ ನಿಲ್ದಾಣದಿಂದ ಲಾಹೋರ್‌ಗೆ ರೈಲು ಓಡುತ್ತಿತ್ತು, ಆದರೆ ಈಗ ಅದು ಸ್ಥಗಿತಗೊಂಡಿದೆ.

ವಾಘಾ ನಿಲ್ದಾಣ
ವಾಘಾ ನಿಲ್ದಾಣ ಎಂದೂ ಕರೆಯಲ್ಪಡುವ ಅಟ್ಟಾರಿ ಶ್ಯಾಮ್ ಸಿಂಗ್ ರೈಲು ನಿಲ್ದಾಣವು ಪಾಕಿಸ್ತಾನ ಗಡಿಯ ಬಳಿ ಭಾರತದ ಕೊನೆಯ ನಿಲ್ದಾಣವಾಗಿದೆ. ಆದರೆ ಈ ನಿಲ್ದಾಣವನ್ನು ಪ್ರವೇಶಿಸಲು ನಿಮಗೆ ಪಾಸ್​ಪೋರ್ಟ್​ ಹಾಗೂ ವೀಸಾದ ಅಗತ್ಯವಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

ವಿಜಯ್ ಹಾಡಿಗೆ ಡ್ಯಾನ್ಸ್ ಮಾಡಿದ ತಮಿಳುನಾಡಿನ ಸರ್ಕಾರಿ ಶಾಲೆ ಮುಖ್ಯ ಶಿಕ್ಷಕಿ ಅಮಾನತು

ತಂಜಾವೂರು, ಮಾರ್ಚ್ 26: ತಮಿಳುನಾಡಿನ ತಂಜಾವೂರು ಜಿಲ್ಲೆಯ ಒರಥನಾಡುವಿನಲ್ಲಿ ನಡೆದ ತಮಿಳುನಾಡು ವೆಟ್ರಿ ಕಗಮಗನ್‌ನ ಮಹಿಳಾ ದಿನಾಚರಣೆಯಲ್ಲಿ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯಿನಿ ಕೃಷ್ಣವೇಣಿ ನಟ ದಳಪತಿ ವಿಜಯ್ ಅವರ ಹಾಡಿಗೆ ನೃತ್ಯ ಮಾಡಿದ್ದರು. ಈ ಘಟನೆ ಸಾಕಷ್ಟು ಸಂಚಲನ ಮೂಡಿಸಿತ್ತು. ತಮಿಳುನಾಡು ವಿಧಾನಸಭಾ ಚುನಾವಣೆಯ (Tamil Nadu Elections) ದಿನಾಂಕವನ್ನು ಘೋಷಿಸಲಾಗಿದ್ದು, ರಾಜಕೀಯ ಪಕ್ಷಗಳು ಸೀಟು ಹಂಚಿಕೆ ಮತ್ತು ಪ್ರಚಾರದಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿವೆ. ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿರುವುದರಿಂದ ಚುನಾವಣಾ ಆಯೋಗವು ತಮಿಳುನಾಡಿನಾದ್ಯಂತ ತೀವ್ರ ನಿಗಾ ವಹಿಸಿದೆ.

ತಂಜಾವೂರು ಜಿಲ್ಲೆಯ ತಿರುಓಣಂ ಬಳಿಯ ಹಳ್ಳಿಯ ಕೃಷ್ಣವೇಣಿ ಶಂಕರನಾಥರ್ ಕುಡಿಕಾಡು ಗ್ರಾಮದ ಪಂಚಾಯತ್ ಯೂನಿಯನ್ ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಾಧ್ಯಾಯಿನಿಯಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಪಕ್ಷದ ಆಹ್ವಾನದ ಮೇರೆಗೆ ಒರಥನಾಡು ಪ್ರದೇಶದಲ್ಲಿ ತಮಿಳುನಾಡು ವಿಕ್ಟರಿ ಪಾರ್ಟಿ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಈ ವೇಳೆ ಅವರು ವಿಜಯ್ ಹಾಡಿಗೆ ನೃತ್ಯ ಮಾಡಿದ್ದಾರೆ. ಈ ವೀಡಿಯೊ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳ ಗಮನಕ್ಕೂ ಬಂದಿತು. ಈ ಘಟನೆಯ ಬಗ್ಗೆ ತನಿಖೆ ನಡೆಸಿದ ಶಾಲಾ ಶಿಕ್ಷಣ ಇಲಾಖೆ ಕೃಷ್ಣವೇಣಿ ಅವರನ್ನು ಅಮಾನತುಗೊಳಿಸಲು ಆದೇಶಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗುಡ್​ ನ್ಯೂಸ್: ಎಲ್‌ಪಿಜಿ ಹೊತ್ತು ಕತಾರ್​​ನಿಂದ ಮಂಗಳುರಿಗೆ ಬಂದ ಹಡಗು

ಮಂಗಳೂರು, (ಮಾರ್ಚ್ 26): ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧ ಹಿನ್ನೆಲೆಯಲ್ಲಿ ಭಾರತದಲ್ಲಿ ಗ್ಯಾಸ್ ಸಿಲಿಂಡರ್ ಅಭಾವ ಎದುರಾಗಿದ್ದು, ಹಲವು ಉದ್ಯಮಗಳ ಮೇಲೆ ಪರಿಣಾಮ ಬೀರಿದೆ. ಇದರ ಮಧ್ಯೆ ಕತಾರ್​​ನಿಂದ ಎಲ್‌ಪಿಜಿ ಹೊತ್ತ ಹಡಗು ನವಮಂಗಳೂರು ಬಂದರಿಗೆ (New Mangalore Port) ಆಗಮಿಸಿದೆ. 17 ಸಾವಿರ ಮೆಟ್ರಿಕ್ ಟನ್ ಎಲ್‌ಪಿಜಿ (LPG) ಇರುವ ಅಪೋಲೋ ಓಷನ್(Apollo Ocean) ಹೆಸರಿನ ಹಡಗು ಮಂಗಳೂರಿಗೆ ಆಗಮಿಸಿದೆ. ಇದರಿಂದ ಗ್ಯಾಸ್ ಸಿಲಿಂಡರ್ ಕೊರತೆ ನೀಗುತ್ತಾ ಎನ್ನುವುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪಶ್ಚಿಮ ಏಷ್ಯಾ ಸಂಘರ್ಷದ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ನಾಳೆ ಪ್ರಧಾನಿ ಮೋದಿ ಸಂವಾದ

ನವದೆಹಲಿ, ಮಾರ್ಚ್​ 26: ಅಮೆರಿಕ, ಇಸ್ರೇಲ್, ಇರಾನ್ ನಡುವಿನ ಸಂಘರ್ಷ ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ದೇಶದ ಸಿದ್ಧತೆ ಮತ್ತು ಯೋಜನೆಗಳನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ(Narendra Modi) ಶುಕ್ರವಾರ(ಮಾರ್ಚ್​ 27) ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಸಂವಾದ ನಡೆಸಲಿದ್ದಾರೆ. ಮಾದರಿ ನೀತಿ ಸಂಹಿತೆ (MCC) ಯಿಂದಾಗಿ ವಿಧಾನಸಭಾ ಚುನಾವಣೆಗಳು ನಡೆಯಲಿರುವ ರಾಜ್ಯಗಳ ಮುಖ್ಯಮಂತ್ರಿಗಳು ಸಭೆಯಲ್ಲಿ ಭಾಗವಹಿಸುವುದಿಲ್ಲ.

ಆದಾಗ್ಯೂ, ಚುನಾವಣೆ ನಡೆಯಲಿರುವ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗಾಗಿ ಪ್ರತ್ಯೇಕ ಸಭೆ ಶೀಘ್ರದಲ್ಲೇ ನಡೆಯಲಿದೆ. ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಮತ್ತು ಅಸ್ಸಾಂ ಮತ್ತು ಪುದುಚೇರಿಯ ಕೇಂದ್ರಾಡಳಿತ ಪ್ರದೇಶದಲ್ಲಿ (UT) ಚುನಾವಣೆಗಳು ನಡೆಯಲಿವೆ.

ಕೇರಳ, ಅಸ್ಸಾಂ ಮತ್ತು ಪುದುಚೇರಿಯಲ್ಲಿ ಏಪ್ರಿಲ್ 9 ರಂದು ಮತದಾನ ನಡೆಯಲಿದ್ದು, ತಮಿಳುನಾಡಿನಲ್ಲಿ ಏಪ್ರಿಲ್ 23 ರಂದು ಮತದಾನ ನಡೆಯಲಿದೆ. ಮತ್ತೊಂದೆಡೆ, ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್ 23 ಮತ್ತು ಏಪ್ರಿಲ್ 29 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮತ ಎಣಿಕೆ ಮೇ 4 ರಂದು ನಡೆಯಲಿದೆ.

ಮತ್ತಷ್ಟು ಓದಿ: PM Modi speech: ಸಾಧ್ಯವಿರುವೆಡೆಯೆಲ್ಲಾ ತೈಲ ಮತ್ತು ಅನಿಲ ಪಡೆಯುತ್ತಿದ್ದೇವೆ- ಪ್ರಧಾನಿ ಮೋದಿ

ಸಂಘರ್ಷ ಆರಂಭವಾದಾಗಿನಿಂದ ಎಲ್ಲಾ ಗಲ್ಫ್ ನಾಯಕರೊಂದಿಗೆ ಸಂಪರ್ಕದಲ್ಲಿರುವ ಪ್ರಧಾನಿ ಮೋದಿ, ಪಶ್ಚಿಮ ಏಷ್ಯಾ ಯುದ್ಧದ ಕುರಿತು ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ್ದಾರೆ . ತಮ್ಮ ಹೇಳಿಕೆಗಳಲ್ಲಿ, ಸಂವಾದ ಮತ್ತು ರಾಜತಾಂತ್ರಿಕತೆಯ ಮೂಲಕ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಭಾರತದ ಕರೆಯನ್ನು ಅವರು ಪುನರುಚ್ಚರಿಸಿದರು ಮತ್ತು ಜಾಗತಿಕ ಕಚ್ಚಾ ತೈಲಕ್ಕೆ ನಿರ್ಣಾಯಕ ಸಾಗಣೆ ಕೇಂದ್ರವಾಗಿರುವ ಹಾರ್ಮುಜ್ ಜಲಸಂಧಿಯನ್ನು ತೆರೆಯುವ ವಿಷಯದ ಬಗ್ಗೆಯೂ ಭಾರತ ಚರ್ಚಿಸಿದೆ ಎಂದು ಹೇಳಿದರು.

ಭಾರತೀಯ ಹಡಗುಗಳಿಗೆ ಜಲಸಂಧಿಯಲ್ಲಿ ಸುರಕ್ಷಿತ ಮಾರ್ಗವನ್ನು ಖಚಿತಪಡಿಸಿಕೊಳ್ಳಲು ಭಾರತ ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಅವರು ಹೇಳಿದರು . ದೇಶದಲ್ಲಿ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ತೈಲ ಮತ್ತು ಅನಿಲ ಸರಬರಾಜು ಭಾರತವನ್ನು ತಲುಪುವುದನ್ನು ಖಚಿತಪಡಿಸಿಕೊಳ್ಳಲು ತಮ್ಮ ಸರ್ಕಾರ ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಿದೆ ಎಂದು ಅವರು ಸಂಸದರಿಗೆ ತಿಳಿಸಿದ್ದರು.

ಯುದ್ಧ ಪ್ರಾರಂಭವಾದಾಗಿನಿಂದ, ಹಾರ್ಮುಜ್ ಜಲಸಂಧಿಯ ಮೂಲಕ ಹಡಗುಗಳ ಚಲನೆ ತುಂಬಾ ಸವಾಲಿನದ್ದಾಗಿದೆ, ಆದರೆ ಈ ಪ್ರತಿಕೂಲ ಸಂದರ್ಭಗಳ ಹೊರತಾಗಿಯೂ, ನಮ್ಮ ಸರ್ಕಾರವು ಸಂವಾದ ಮತ್ತು ರಾಜತಾಂತ್ರಿಕತೆಯ ಮೂಲಕ ಮುಂದುವರಿಯಲು ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದ್ದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ಧುರಂಧರ್’ ಯಶಸ್ಸಿನ ಬೆನ್ನಲ್ಲೇ ಸಂಜಯ್ ದತ್ ಹೊಸ ಸಿನಿಮಾ ‘ಆಖ್ರಿ ಸವಾಲ್’

ಬಾಲಿವುಡ್‌ನ ಹಿರಿಯ ನಟ ಸಂಜಯ್ ದತ್ (Sanjay Dutt) ಸದ್ಯ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಆದಿತ್ಯ ಧರ್ ನಿರ್ದೇಶನದ ಬ್ಲಾಕ್‌ಬಸ್ಟರ್ ‘ಧುರಂಧರ್: ದಿ ರಿವೆಂಜ್’ ಸಿನಿಮಾದಲ್ಲಿ ಚೌಧರಿ ಅಸ್ಲಂ ಎಂಬ ಪಾತ್ರದ ಮೂಲಕ ಸಂಜಯ್ ದತ್ ಅವರು ಪ್ರೇಕ್ಷಕರ ಮನಗೆದ್ದಿದ್ದಾರೆ. ಈಗ ಅವರು ತಮ್ಮ ಮುಂದಿನ ಸಿನಿಮಾ ಬಗ್ಗೆ ಮಾಹಿತಿ ನೀಡಿದ್ದಾರೆ. ‘ಆಖ್ರಿ ಸವಾಲ್’ (Aakhri Sawal) ಎಂಬುದು ಈ ಸಿನಿಮಾದ ಹೆಸರು. ಗುರುವಾರ (ಮಾರ್ಚ್ 26) ಚಿತ್ರತಂಡವು ಸಾಮಾಜಿಕ ಜಾಲತಾಣಗಳಲ್ಲಿ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದೆ.

ಬಿಡುಗಡೆಯಾಗಿರುವ ಪೋಸ್ಟರ್‌ನಲ್ಲಿ ಸಂಜಯ್ ದತ್ ಅತ್ಯಂತ ಗಂಭೀರವಾಗಿ ಕಾಣಿಸಿಕೊಂಡಿದ್ದಾರೆ. ವಿಶೇಷವೆಂದರೆ, ಅವರ ಈ ಭಾವಚಿತ್ರವು ಒಂದು ಬೃಹತ್ ಪ್ರಶ್ನಾರ್ಥಕ ಚಿಹ್ನೆಯ ಒಳಗೆ ಅಡಕವಾಗಿದೆ. ಪೋಸ್ಟರ್‌ನ ವಿನ್ಯಾಸ ಗಮನ ಸೆಳೆದಿದೆ. ಕಥೆಯ ಬಗ್ಗೆ ಕೌತುಕ ಮೂಡಿಸಿದೆ. ಪೋಸ್ಟರ್‌ನಲ್ಲಿರುವ ‘The Question India Never Stopped Asking’ ಎಂಬ ಟ್ಯಾಗ್‌ಲೈನ್ ಸಖತ್ ಹೈಲೈಟ್ ಆಗಿದೆ.

‘ಆಖ್ರಿ ಸವಾಲ್’ ಚಿತ್ರವನ್ನು ನಿಖಿಲ್ ನಂದಾ, ಧನರಾಜ್ ನಾಥ್ವಾನಿ ಮತ್ತು ಸ್ವತಃ ಸಂಜಯ್ ದತ್ ನಿರ್ಮಿಸುತ್ತಿದ್ದಾರೆ. ಈ ಚಿತ್ರವು ‘ನಿಖಿಲ್ ನಂದಾ ಮೋಷನ್ ಪಿಕ್ಚರ್ಸ್’ ಮತ್ತು ‘ನೀಮ್ ಟ್ರೀ ಎಂಟರ್‌ಟೈನ್‌ಮೆಂಟ್’ ಬ್ಯಾನರ್ ಅಡಿಯಲ್ಲಿ ಮೂಡಿಬರುತ್ತಿದೆ. ಸಂಜಯ್ ದತ್ ಅವರೊಂದಿಗೆ ಚಿತ್ರದಲ್ಲಿ ಅಮಿತ್ ಸಾಧ್, ನಮಾಶಿ ಚಕ್ರವರ್ತಿ, ಸಮೀರಾ ರೆಡ್ಡಿ, ತ್ರಿದಾ ಚೌಧರಿ ಮತ್ತು ನೀತು ಚಂದ್ರ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಪೋಸ್ಟರ್​ನಲ್ಲಿ ‘ಆಖ್ರಿ ಸವಾಲ್’ ಸಿನಿಮಾದ ಬಿಡುಗಡೆ ದಿನಾಂಕದ ಬಗ್ಗೆಯೂ ಮಾಹಿತಿ ಹಂಚಿಕೊಳ್ಳಲಾಗಿದೆ. ಈ ಚಿತ್ರವು 2026ರ ಮೇ 15ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಕಥೆಯ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಆದರೆ ಇದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕುರಿತು ಕತೆ ಹೊಂದಿರಲಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಧುರಂಧರ್ 2: ಪಾಕಿಸ್ತಾನದ ಪೊಲೀಸ್ ಆಗಲು ಕೈತುಂಬಾ ಸಂಬಳ ಪಡೆದ ಸಂಜಯ್ ದತ್

ಸದ್ಯ ಸಂಜಯ್ ದತ್ ಅಭಿನಯದ ‘ಧುರಂಧರ್: ದಿ ರಿವೆಂಜ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದ್ದು, ಅದರಲ್ಲಿ ಅವರು ಪಾಕಿಸ್ತಾನಿ ಪೊಲೀಸ್ ಅಧಿಕಾರಿ ಚೌಧರಿ ಅಸ್ಲಂ ಪಾತ್ರದಲ್ಲಿ ಮಿಂಚಿದ್ದಾರೆ. ರಣವೀರ್ ಸಿಂಗ್ ಮುಖ್ಯಭೂಮಿಕೆಯಲ್ಲಿದ್ದ ಈ ಚಿತ್ರವು ಬಿಡುಗಡೆಯಾದಾಗಿನಿಂದ ಅನೇಕ ದಾಖಲೆಗಳನ್ನು ಬರೆಯುತ್ತಿದ್ದು, ಈಗ ‘ಆಖ್ರಿ ಸವಾಲ್’ ಘೋಷಣೆ ಆಗಿರುವುದು ಸಂಜು ಬಾಬಾ ಅಭಿಮಾನಿಗಳಿಗೆ ಡಬಲ್ ಸಂಭ್ರಮ ತಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IPL 2026: ಎಲ್ಲಾ 10 ತಂಡಗಳ ಬಲಿಷ್ಠ ಪ್ಲೇಯಿಂಗ್ 11 ಹೀಗಿದೆ

Source link

Chanakya Niti: ಈ ಸಣ್ಣ ಅಭ್ಯಾಸಗಳು ನಿಮ್ಮನ್ನು ಮಾನಸಿಕವಾಗಿ ಬಲಶಾಲಿಯನ್ನಾಗಿ ಮಾಡುತ್ತವೆ

ಈಗಿನ ಕಾಲಘಟ್ಟದಲ್ಲಿ ಯುವ ಜನ ಜಿಮ್‌ಗೆ ಹೋಗಿ ವ್ಯಾಯಾಮ ಮಾಡಿಕೊಂಡು ದೈಹಿಕವಾಗಿ ಸದೃಢವಾಗಿರುತ್ತಾರೆ. ಆದರೆ ಹೆಚ್ಚಿನವರು ಮಾನಸಿಕವಾಗಿ ದುರ್ಬಲರಾಗಿರುತ್ತಾರೆ. ಹೌದು ಜೀವನದಲ್ಲಿ ಎದುರಾಗುವ ಕಷ್ಟ ಸೋಲುಗಳಿಗೆ ಭಯಪಟ್ಟು ಪ್ರಾಣ ಕಳೆದುಕೊಳ್ಳುತ್ತಾರೆ, ಸಣ್ಣಪುಟ್ಟ ವಿಚಾರಗಳಿಗೆ ಖಿನ್ನತೆಗೆ ಒಳಗಾಗುತ್ತಾರೆ. ಈ ರೀತಿ ದುರ್ಬಲ ಮನಸ್ಥಿತಿಯಿದ್ದರೆ ಎಂದಿಗೂ ಜೀವನದಲ್ಲಿ ಯಶಸ್ಸನ್ನು (Success) ಸಾಧಿಸಲು ಸಾಧ್ಯವಿಲ್ಲ, ಧೈರ್ಯದಿಂದ ಬದುಕಲು ಸಾಧ್ಯವಿಲ್ಲ. ಒಬ್ಬ ವ್ಯಕ್ತಿ ಒಳಗಿನಿಂದ ಬಲಶಾಲಿಯಾಗಿದ್ದಾಗ ಮಾತ್ರ ಎಂತಹದ್ದೇ ಸವಾಲುಗಳನ್ನು ಭಯವಿಲ್ಲದೆ ಎದುರಿಸಲು ಎನ್ನುತ್ತಾರೆ ಆಚಾರ್ಯ ಚಾಣಕ್ಯ. ಅದೇ ರೀತಿ ಮಾನಸಿಕವಾಗಿ ಬಲಶಾಲಿಯಾಗಲು ಒಂದಷ್ಟು ಸಲಹೆಗಳನ್ನು ಸಹ ನೀಡಿದ್ದಾರೆ. ಈ ಸಲಹೆಗಳನ್ನು ಪಾಲಿಸಿದರೆ ನಿಮ್ಮ ಜೀವನವು ಸಕಾರಾತ್ಮಕ ರೀತಿಯಲ್ಲಿ ಬದಲಾಗುವುದಂತೂ ನಿಜ.

ಮಾನಸಿಕವಾಗಿ ಬಲಶಾಲಿಯಾಗಲು ಏನು ಮಾಡಬೇಕು?

ನಿಮ್ಮ ಆಲೋಚನೆಯನ್ನು ಸಕಾರಾತ್ಮಕವಾಗಿ ಮತ್ತು ಸ್ಪಷ್ಟವಾಗಿ ಇರಿಸಿ: ನೀವು ನಿಮ್ಮನ್ನು ಒಳಗಿನಿಂದ ಬಲಪಡಿಸಿಕೊಳ್ಳಲು ಬಯಸಿದರೆ, ಸಕಾರಾತ್ಮಕವಾಗಿ ಆಲೋಚಿಸುವುದನ್ನು ಕಲಿಯಿರಿ, ನಿಮ್ಮ ಆಲೋಚನೆಗಳು ಸ್ಪಷ್ಟವಾಗಿರಿಸಿ. ನಿಮ್ಮ ಮನಸ್ಸು ನಕಾರಾತ್ಮಕ ಆಲೋಚನೆಗಳಿಂದ ತುಂಬಿದ್ದರೆ, ನೀವು ಜೀವನದಲ್ಲಿ ಎಂದಿಗೂ ಮುಂದುವರಿಯಲು ಸಾಧ್ಯವಾಗುವುದಿಲ್ಲ. ಚಾಣಕ್ಯರ ಪ್ರಕಾರ,  ಸಕಾರಾತ್ಮಕ ಮನಸ್ಥಿತಿಯು ಸ್ಪಷ್ಟ ಗುರಿಗಳನ್ನು ಮತ್ತು ಆತ್ಮವಿಶ್ವಾಸವನ್ನು ಕಾಪಾಡಿಕೊಳ್ಳಲು ಸಾಧ್ಯ.

ಶಿಸ್ತಿನಿಂದ ಬದುಕಲು ಪ್ರಾರಂಭಿಸಿ: ಶಿಸ್ತು ನಿಮ್ಮ ಜೀವನವನ್ನು ಸಮತೋಲನ ಮತ್ತು ಸಂಘಟಿತವಾಗಿಸುತ್ತದೆ. ದೈನಂದಿನ ದಿನಚರಿಯನ್ನು ಸರಿಯಾಗಿ ಪಾಲಿಸುವುದು, ಸಮಯಕ್ಕೆ ಸರಿಯಾಗಿ ಕೆಲಸಗಳನ್ನು ಪೂರ್ಣಗೊಳಿಸುವುದು ಮತ್ತು ಸೋಮಾರಿತನವನ್ನು ತಪ್ಪಿಸುದರಿಂದ ಒಬ್ಬ ವ್ಯಕ್ತಿಯು ಬಲಶಾಲಿಯಾಗಲು ಸಾಧ್ಯವಾಗುತ್ತದೆ.  ಅದೇ ಶಿಸ್ತು ಇಲ್ಲದೆ, ಜೀವನದಲ್ಲಿ ಯಶಸ್ಸನ್ನು ಸಾಧಿಸುವುದು ತುಂಬಾ ಕಷ್ಟಕರವಾಗುತ್ತದೆ ಎಂದು ಚಾಣಕ್ಯ ಹೇಳುತ್ತಾರೆ. ನೀವು ನಿಮ್ಮ ಜೀವನವನ್ನು ಶಿಸ್ತಿನಿಂದ ನಡೆಸಿದಾಗ, ನಿಮ್ಮ ಆತ್ಮವಿಶ್ವಾಸವೂ ಗಮನಾರ್ಹವಾಗಿ ಹೆಚ್ಚಾಗುತ್ತದೆ, ಯಶಸ್ಸನ್ನು ಕೂಡ ಸಾಧಿಸಲು ಸಾಧ್ಯವಾಗುತ್ತದೆ.

ಉತ್ತಮ ಸಂಘದೊಂದಿಗಿರುವುದು: ಚಾಣಕ್ಯರ ಪ್ರಕಾರ, ನೀವು ಯಾವ ರೀತಿಯ ಜನರೊಂದಿಗೆ ಇರುತ್ತೀರಿ ಎಂಬುದು ನಿಮ್ಮ ಆಲೋಚನೆ ಮತ್ತು ಅಭ್ಯಾಸಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ನೀವು ಒಳ್ಳೆಯ ಜನರ ಸಹವಾಸ ಮಾಡಿದಾಗ, ನೀವು ಜೀವನದಲ್ಲಿ ಪ್ರಗತಿ ಹೊಂದುತ್ತೀರಿ. ಆದರೆ, ಕೆಟ್ಟ ಸಹವಾಸವು ನಿಮ್ಮನ್ನು ಒಳಗಿನಿಂದ ದುರ್ಬಲಗೊಳಿಸುತ್ತದೆ. ಹಾಗಾಗಿ ಒಳಗಿನಿಂದ ಬಲಶಾಲಿಯಾಗಲು, ನೀವು ಸಕಾರಾತ್ಮಕ ಮನೋಭಾವವನ್ನು ಹೊಂದಿರುವ ಮತ್ತು  ನನಿಮ್ಮನ್ನು ಪ್ರೇರೇಪಿಸುವ ಜನರೊಂದಿಗಿನ ಸಹವಾಸದಲ್ಲಿರಿ.

ಇದನ್ನೂ ಓದಿ: ಜೀವನದಲ್ಲಿ ಮುಂದುವರೆಯಲು ಬಯಸಿದರೆ ವಿಚಾರಗಳ ಬಗ್ಗೆ ಹಿಂಜರಿಕೆ ಪಡಬಾರದು

ಜ್ಞಾನ ಪಡೆಯುವ ಮತ್ತು ಕಲಿಯುವ ಅಭ್ಯಾಸವನ್ನು ಬೆಳೆಸಿಕೊಳ್ಳಿ: ನೀವು ನಿಮ್ಮನ್ನು ಬಲಪಡಿಸಿಕೊಳ್ಳಲು ಬಯಸಿದರೆ, ನೀವು ನಿರಂತರ ಕಲಿಕೆಯ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ಹೊಸ ವಿಷಯಗಳನ್ನು ಕಲಿಯಲು ಪುಸ್ತಕಗಳನ್ನು ಓದಿ, ಹೊಸ ಕೌಶಲ್ಯಗಳನ್ನು ಪಡೆದುಕೊಳ್ಳಿ ಮತ್ತು ನಿಮ್ಮ ಹಿಂದಿನ ಅನುಭವಗಳಿಂದ ಕಲಿಯಲು ಪ್ರಯತ್ನಿಸಿ. ಈ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದರಿಂದ ನೀವು ಆತ್ಮವಿಶ್ವಾಸದಿಂದ ಬದುಕಲು ಸಾಧ್ಯವಾಗುತ್ತದೆ. ಚಾಣಕ್ಯನ ಪ್ರಕಾರ, ನಿಮ್ಮೊಳಗಿನ ಜ್ಞಾನವು ನಿಮ್ಮ ದೊಡ್ಡ ಶಕ್ತಿ. ಅದನ್ನು ಯಾರೂ ನಿಮ್ಮಿಂದ ಕಸಿದುಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ನೀವು ಹೆಚ್ಚು ಜ್ಞಾನವನ್ನು ಹೊಂದಿದಾಗ ನಿಮ್ಮ ಆತ್ಮವಿಶ್ವಾಸವೂ ಹೆಚ್ಚಾಗುತ್ತದೆ.

ತಾಳ್ಮೆ ಮತ್ತು ನಿಯಂತ್ರಣ: ಜೀವನದಲ್ಲಿ ಕೆಲವು ಸಮಯಗಳಲ್ಲಿ ತಕ್ಷಣದ ಫಲಿತಾಂಶಗಳು ಸಿಗುವುದಿಲ್ಲ. ಅಂತಹ ಸಮಯದಲ್ಲಿ ತಾಳ್ಮೆಯಿಂದಿರುವುದು ಬಹಳ ಮುಖ್ಯ. ಚಾಣಕ್ಯನ ಪ್ರಕಾರ, ತಾಳ್ಮೆಯುಳ್ಳ ವ್ಯಕ್ತಿಯು ಕಠಿಣ ಸಂದರ್ಭಗಳಲ್ಲಿಯೂ ಸಹ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಆದ್ದರಿಂದ, ಆತುರ ಮತ್ತು ಕೋಪ ಮಾಡಿಕೊಳ್ಳದೆ ಶಾಂತವಾಗಿ ಯೋಚಿಸುವುದನ್ನು ಕಲಿಯಿರಿ.

ಸ್ವಯಂ ನಿಯಂತ್ರಣವನ್ನು ಬೆಳೆಸಿಕೊಳ್ಳಿ: ಸ್ವಯಂ ನಿಯಂತ್ರಣ ಹೊಂದಿರುವ ವ್ಯಕ್ತಿಯು ಒಳಗಿನಿಂದ ಬಲಶಾಲಿಯಾಗಿರುತ್ತಾನೆ. ಆದ್ದರಿಂದ, ನಿಮ್ಮ ಆಸೆಗಳನ್ನು ಮತ್ತು ಅಭ್ಯಾಸಗಳನ್ನು ನಿಯಂತ್ರಿಸಲು ಕಲಿಯಿರಿ. ಒಬ್ಬ ವ್ಯಕ್ತಿಯು ತನ್ನ ಮನಸ್ಸಿನ ಮೇಲೆ ನಿಯಂತ್ರಣ ಹೊಂದಿದರೆ, ಸಮಸ್ಯೆಯು ಆತನ ಸುತ್ತ ಸುಳಿಯುವುದಿಲ್ಲ ಎನ್ನುತ್ತಾರೆ ಆಚಾರ್ಯ ಚಾಣಕ್ಯ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಸ್ ಮೇಲೆ ಅಂಡರ್ ವಲ್ಡ್ ದಾವೂದ್ ದಿ ರಿಯಲ್ ಡಾನ್ ಎಂದು ಬರಹ: ಸಿಡಿದೆದ್ದ ಭಜರಂಗದಳ

ಚಿಕ್ಕಮಗಳೂರು, ಮಾರ್ಚ್​ 26: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹೆಸರು ಬರೆದಿರುವ ಖಾಸಗಿ ಬಸ್​ವೊಮದು ಚಿಕ್ಕಮಗಳೂರು ನಗರದಲ್ಲಿ ಕಂಡುಬಂದಿದೆ. ತಮಿಳುನಾಡಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನ ಚಿಕ್ಕಮಗಳೂರಿಗೆ ಪ್ರವಾಸಕ್ಕೆ ಕರೆತಂದಿದ್ದ ಖಾಸಗಿ ಬಸ್​ ಮೇಲೆ ಅಂಡರ್ ವಲ್ಡ್ ದಾವೂದ್ ದಿ ರಿಯಲ್ ಡಾನ್​ ಎಂದು ಬರೆಸಲಾಗಿದೆ. ಸದ್ಯ ಇದು ಭಜರಂಗದಳ ಕಾರ್ಯಕರ್ತರು ಹಾಗೂ ಸ್ಥಳೀಯರು ಆಕ್ರೋಶಕ್ಕೆ ಕಾರಣವಾಗಿದ್ದು, ಬಸ್​ ತಡೆದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಬಸ್ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸುವಂತೆ ಆಗ್ರಹಿಸಲಾಗಿದ್ದು, ಬಸವನಹಳ್ಳಿ ಪೊಲೀಸ್ ಠಾಣೆಗೆ ಪೊಲೀಸರು ಬಸ್ ಕರೆತಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ರಾಮ್ ಚರಣ್​​ಗೆ ಗಂಭೀರ ಗಾಯ: ‘ಪೆದ್ದಿ’ ಬಿಡುಗಡೆ ಇನ್ನಷ್ಟು ಮುಂದಕ್ಕೆ

ರಾಮ್ ಚರಣ್ (Ram Charan) ಮತ್ತು ಜಾನ್ವಿ ಕಪೂರ್ ನಟಿಸಿ, ಬುಚ್ಚಿ ಬಾಬು ಸನಾ ನಿರ್ದೇಶನ ಮಾಡುತ್ತಿರುವ ‘ಪೆದ್ದಿ’ ಸಿನಿಮಾದ ಬಿಡುಗಡೆ ಈಗಾಗಲೇ ಎರಡು ಬಾರಿ ಮುಂದೂಡಲ್ಪಟ್ಟಿದೆ. ಆದರೆ ಇದೀಗ ರಾಮ್ ಚರಣ್ ಅವರಿಗೆ ಚಿತ್ರೀಕರಣದ ಸಮಯದಲ್ಲಿ ಆಗಿರುವ ಗಾಯ ಹಾಗೂ ಅದರಿಂದ ರಾಮ್ ಚರಣ್ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಕಾರಣ ಸಿನಿಮಾದ ಬಿಡುಗಡೆ ಇನ್ನಷ್ಟು ತಡವಾಗುವ ಸಂಭವ ಇದೆ. ಇದು ರಾಮ್ ಚರಣ್ ಅಭಿಮಾನಿಗಳಿಗೆ ತೀವ್ರ ಆತಂಕ ತಂದಿದೆ.

‘ಪೆದ್ದಿ’ ಸಿನಿಮಾ ಫೆಬ್ರವರಿಯಲ್ಲಿ ಬಿಡುಗಡೆ ಆಗಲಿದೆ ಎನ್ನಲಾಗಿತ್ತು. ಬಳಿಕ ಮಾರ್ಚ್ ತಿಂಗಳ ದಿನಾಂಕ ನಿಗದಿಯಾಯ್ತು. ಆದರೆ ಮಾರ್ಚ್ ತಿಂಗಳಲ್ಲಿ ಪವನ್ ಅವರ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾಕ್ಕೆ ಜಾಗ ಮಾಡಿಕೊಡಲೆಂದು ‘ಪೆದ್ದಿ’ ಸಿನಿಮಾವನ್ನು ಏಪ್ರಿಲ್ 30ಕ್ಕೆ ಮುಂದೂಡಲಾಯ್ತು. ಸಿನಿಮಾದ ಚಿತ್ರೀಕರಣ, ಡಬ್ಬಿಂಗ್ ಸಹ ಮುಗಿದಿತ್ತು. ಆದರೆ ಪ್ಯಾಚಪ್ ವರ್ಕ್​ ಚಿತ್ರೀಕರಣ ಮಾಡುವ ಸಮಯದಲ್ಲಿ ರಾಮ್ ಚರಣ್ ಅವರ ಕಣ್ಣಿಗೆ ಪೆಟ್ಟಾಯ್ತು. ಇದರಿಂದ ಶೀಘ್ರವೇ ರಾಮ್ ಚರಣ್ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯ್ತು.

ಇದು ಸಿನಿಮಾ ತಂಡಕ್ಕೆ ಆತಂಕ ತಂದಿದೆ. ಇನ್ನು ಕೆಲವೇ ದೃಶ್ಯಗಳ ಚಿತ್ರೀಕರಣ ಬಾಕಿ ಇದೆಯಾದರೂ ರಾಮ್ ಚರಣ್ ಅವರು ಸದ್ಯಕ್ಕೆ ಚಿತ್ರೀಕರಣ ಮುಂದುವರೆಸುವ ಪರಿಸ್ಥಿತಿಯಲ್ಲಿ ಇಲ್ಲ ಎನ್ನಲಾಗುತ್ತಿದೆ. ಹೈದರಾಬಾದ್‌ನ ಗಚಿಬೌಲಿ ಸ್ಟೇಡಿಯಂನಲ್ಲಿ ‘ಪೆದ್ದಿ’ ಚಿತ್ರದ ಹೈ-ವೋಲ್ಟೇಜ್ ಆಕ್ಷನ್ ದೃಶ್ಯವೊಂದರ ಚಿತ್ರೀಕರಣ ನಡೆಯುತ್ತಿದ್ದಾಗ ರಾಮ್ ಚರಣ್ ಅವರಿಗೆ ಸಣ್ಣ ಪ್ರಮಾಣದ ಗಾಯವಾಗಿತ್ತು. ಆರಂಭದಲ್ಲಿ ಇದು ಸಾಮಾನ್ಯ ಗಾಯ ಎಂದು ಭಾವಿಸಲಾಗಿತ್ತಾದರೂ, ಅವರ ಎಡಗಣ್ಣಿನ ರೆಪ್ಪೆಯ ಭಾಗಕ್ಕೆ ಪೆಟ್ಟಾಗಿದ್ದರಿಂದ ತಕ್ಷಣವೇ ಶಸ್ತ್ರಚಿಕಿತ್ಸೆಯ ಅಗತ್ಯವಿತ್ತು.

ಇದನ್ನೂ ಓದಿ:‘ಧುರಂಧರ್ 2’ ಚಿತ್ರದಲ್ಲಿ ಹೇಳಿದ್ದು ತಪ್ಪೆನಿಸಿದರೆ, ಅದರ ವಿರುದ್ಧ ನೀವು ಸಿನಿಮಾ ಮಾಡಿ’; ಆರ್​​ಜಿವಿ

ರಾಮ್ ಚರಣ್ ಅವರ ತಂದೆ ಚಿರಂಜೀವಿ ಅವರು ಸಹ ಮಗನ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರಿಗೆ ಧನ್ಯವಾದ ಅರ್ಪಿಸಿ ಟ್ವೀಟ್ ಮಾಡಿದ್ದು, ‘ಡಾ ಸುಧಾಕರ್ ಪ್ರಸಾದ್ ಅವರೇ, ಚರಣ್ ಅವರ ಕಣ್ಣಿಗೆ ನೀವು ಸಮಯಕ್ಕೆ ಸರಿಯಾಗಿ ಮತ್ತು ಅತ್ಯಂತ ನೈಪುಣ್ಯತೆಯಿಂದ ಮಾಡಿದ ಶಸ್ತ್ರಚಿಕಿತ್ಸೆ ನಮಗೆ ದೊಡ್ಡ ಆಶೀರ್ವಾದದಂತಿದೆ. ನಮ್ಮಲ್ಲಿದ್ದ ಆತಂಕವನ್ನು ನಿಮ್ಮ ನಿಖರವಾದ ಚಿಕಿತ್ಸೆ ಮತ್ತು ಕಾಳಜಿ ದೂರ ಮಾಡಿದೆ. ನಿಮ್ಮ ಕಲಾತ್ಮಕ ವೃತ್ತಿಪರತೆಗೆ ನಾವು ಆಭಾರಿಯಾಗಿದ್ದೇವೆ. ಧನ್ಯವಾದಗಳು’ ಎಂದಿದ್ದಾರೆ. ರಾಮ್ ಚರಣ್ ಪತ್ನಿ ಸಹ ವೈದ್ಯರಿಗೆ ಧನ್ಯವಾದ ಹೇಳಿದ್ದಾರೆ.

ಚಿತ್ರದ ಚಿತ್ರೀಕರಣ ಇನ್ನೂ ಬಾಕಿ ಇರುವುದು ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಹೆಚ್ಚಿನ ಸಮಯ ಬೇಕಾಗಿರುವುದು ಈ ವಿಳಂಬಕ್ಕೆ ಕಾರಣ ಎನ್ನಲಾಗುತ್ತಿದೆ. ಒಂದು ವೇಳೆ ಏಪ್ರಿಲ್‌ನಲ್ಲಿ ಬಿಡುಗಡೆಯಾಗದಿದ್ದರೆ, ಚಿತ್ರವು ಜೂನ್ ಅಥವಾ ಆಗಸ್ಟ್ ತಿಂಗಳಿನಲ್ಲಿ ತೆರೆಗೆ ಬರಬಹುದು ಎಂದು ಅಂದಾಜಿಸಲಾಗಿದೆ. ಇದರಿಂದಾಗಿ ಚರಣ್ ಅಭಿಮಾನಿಗಳಲ್ಲಿ ಸ್ವಲ್ಪ ಮಟ್ಟಿನ ನಿರಾಸೆ ಮತ್ತು ಆತಂಕ ಮೂಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸದನದಲ್ಲೂ ಐಪಿಎಲ್ ಟಿಕೆಟ್ ಬಗ್ಗೆ ಚರ್ಚೆ: ಮ್ಯಾಚ್‌ ಟಿಕೆಟ್‌ಗಾಗಿ ಸರ್ಕಾರವನ್ನು ಬೇಡಿದ ಶಾಸಕರು!

ಬೆಂಗಳೂರು, (ಮಾರ್ಚ್ 26): ಇದೇ ಮಾರ್ಚ್ 28ರಿಂದ ಐಪಿಎಲ್ (IPL 2026) ಹಬ್ಬ ಶುರುವಾಗಲಿದ್ದು, ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ(M.Chinnaswamy Stadium) ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ. ಇನ್ನೊಂದೆಡೆ ಐಪಿಎಲ್​​ ಟಿಕೆಟ್​ ಗೆ ಬೇಡಿಕೆ ಹೆಚ್ಚಾಗಿದೆ. ಈ ಸಂಬಂಧ ಬಜೆಟ್ ಅಧಿವೇಶನದಲ್ಲೂ ಚರ್ಚೆಯಾಗಿದೆ. ಹೌದು.. ಐಪಿಎಲ್ ಟಕೆಟ್ ಸಂಬಂಧ ಆಡಳಿತರೂಢ ಹಾಗೂ ವಿಪಕ್ಷ ಶಾಸಕರು ಐಪಿಎಲ್ ಟಿಕೆಟ್​​ ಬೇಡಿಕೆ ಇಟ್ಟಿದ್ದಾರೆ. ಶಾಸಕರಿಗೆ ಕನಿಷ್ಠ 4 ರಿಂದ 5 ಟಿಕೆಟ್ ಕೊಡಿಸಿ ಎಂದು ವಿಧಾನಸಭೆಯಲ್ಲಿಂದು (Vidhan Sabha) ಸದಸ್ಯರು ಪಕ್ಷಾತೀತವಾಗಿ ಸ್ಪೀಕರ್ ಯುಟಿ ಖಾದರ್​ ಮುಂದೆ ಬೇಡಿಕೆ ಇಟ್ಟಿದ್ದಾರೆ.

KSCA ಮುಂದೆ ಅಂಗಲಾಚುವ ಪರಿಸ್ಥಿತಿ

ಉದ್ದೇಶಿತ ಸ್ಟೇಡಿಯಂ ಸಂಬಂಧ ನಡೆದ ಚರ್ಚೆ ವೇಳೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಮಾತನಾಡಿ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶಾಸಕರಿಗೆ ಅಗೌರವವಾಗುತ್ತಿದೆ ಮತ್ತು ಸರಿಯಾಗಿ ಟಿಕೆಟ್ ಸಿಗುತ್ತಿಲ್ಲ. ಮೊನ್ನೆ 11 ಜನ ಕಾಲ್ತುಳಿತದಲ್ಲಿ ಸತ್ತಿದ್ದಾರೆ. ಮತ್ತೊಂದು ಸ್ಟೇಡಿಯಂ ಬೇಡ. ಚಿನ್ನಸ್ವಾಮಿ ಸ್ಟೇಡಿಯಂ ಜಾಗ ನಮ್ಮದು. ಅಲ್ಲಿ ಕ್ರಿಕೆಟ್ ಟ್ರೈನಿಂಗ್ ಮಾಡಿ‌ ಎಂದು ಜಾಗ ನೀಡಿದ್ದೇವೆ. ಅವರು ಏನು ತರಬೇತಿ ನೀಡುತ್ತಿದ್ದಾರೆ ಎಂದು ಪ್ರಶ್ನಿಸಿದ ಅಶೋಕ್, ಒಂದು ಟಿಕೆಟ್‌ಗೆ ಕರ್ನಾಟಕ ರಾಜ್ಯ ಕ್ರಿಕೆಟ್‌ ಮಂಡಳಿ (KSCA) ಮುಂದೆ ಅಂಗಲಾಚುವ ಪರಿಸ್ಥಿತಿ ಇದೆ. ನಮ್ಮ ಹೆಸರಿನಲ್ಲಿರುವ ಟಿಕೆಟ್‌ಗಳನ್ನು ಮಾರಿಕೊಳ್ಳುತ್ತಾರೆ ಎಂದು ಕಿಡಿಕಾರಿದರು.

ಇದನ್ನೂ ಓದಿ: ಬೆಂಗಳೂರು ಮ್ಯಾಚ್ ಬಗ್ಗೆ ಆರ್‌ಸಿಬಿ ಬಿಗ್ ಅಪ್‌ಡೇಟ್: ಟಿಕೆಟ್ ಬುಕಿಂಗ್ ಮತ್ತು ಹೊಸ ರೂಲ್ಸ್ ಮಾಹಿತಿ ಇಲ್ಲಿದೆ!

ಸ್ಟೇಡಿಯಂಗೆ 16 ಎಕರೆ 32 ಗುಂಟೆ ಜಾಗ ನಾವು ಕೊಟ್ಟಿದ್ದೇವೆ. ನಮ್ಮ ಟಿಕೆಟ್‌ಗೆ ಎರಡು ಸಾವಿರ, ಮೂರು ಸಾವಿರ, ಇಪ್ಪತ್ತು ಸಾವಿರ ರೂ. ಚಾರ್ಜ್ ಮಾಡ್ತಾರೆ. ಅವರು ತಿಂಗಳಿಗೆ ಸರ್ಕಾರಕ್ಕೆ ಕೊಡೋದು ಕೇವಲ 1600 ರೂ. ಮಾತ್ರ. ನಾವು 16 ಎಕರೆ ಜಾಗ ನೀಡಿದ್ದೇವೆ. ನಮ್ಮ ತಲೆ ಮೇಲೆ ಎಳೀತಾರೆ, ಅಂಥವರಿಗಾಗಿ ಇನ್ನೊಂದು ಸ್ಟೇಡಿಯಂ ಮಾಡಲು ಹೊರಟಿದ್ದೀರಿ. ಇವರಿಗೆ ಮೊದಲು ಬುದ್ಧಿ ಕಲಿಸಿ ಎಂದು ಆಗ್ರಹಿಸಿದರು.

ಟಿಕೆಟ್ ಬಗ್ಗೆ ಧ್ವನಿ ಎತ್ತಿದ ಕಾಂಗ್ರೆಸ್ ಶಾಸಕ

ಈ ವೇಳೆ ಮಾತಾಡಿದ ಕೈ ಶಾಸಕ ವಿಜಯಾನಂದ ಕಾಶಪ್ಪನವರ್, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವೀಕ್ಷಕರ ಸಂಖ್ಯೆಯನ್ನು ಏರಿಸಿ. ಶಾಸಕರಿಗೆ ಒಂದೇ ಟಿಕೆಟ್ ಅದೂ ಕೆಳಗಡೆಯ ಗ್ಯಾಲರಿಯಲ್ಲಿ ಕೊಡುತ್ತಾರೆ. ಶಾಸಕರಿಗೆ ಕೂರಲು ಮೊದಲು ಸೂಕ್ತ ಅವಕಾಶ ಮಾಡಿಕೊಡಲಿ. ಹೊಸ ಸ್ಟೇಡಿಯಂ ಆಮೇಲೆ ಮಾಡಿ. ಶಾಸಕರಿಗೆ ಪ್ರತ್ಯೇಕ ಲಾಂಜ್ ಮಾಡಿ ಐದು ಟಿಕೆಟ್ ಕೊಡಿಸಿ. ಟಿಕೆಟ್ ಕಾಸಂತೆಯಲ್ಲಿ ಮಾರುತ್ತಾರೆ. ಆದರೆ ನಮಗೆ ಕೊಡುವುದಿಲ್ಲ. ಶಾಸಕರು ಅಂದ್ರೆ ಗೌರವ ಇಲ್ವಾ? ನಮಗೆ ಐದು ಟಿಕೆಟ್ ಕೊಡಲಿ ಎಂದು ಒತ್ತಾಯಿಸಿದರು.

ಟಿಕೆಟ್ ವ್ಯವಸ್ಥೆ ಮಾಡುವಂತೆ ಸರ್ಕಾರಕ್ಕೆ ಸ್ಫೀಕರ್ ಸಲಹೆ

ಬಳಿಕ ಮಾತಾಡಿದ ಸ್ಪೀಕರ್ ಖಾದರ್, ಶಾಸಕರು ಕ್ರಿಕೆಟ್ ಟಿಕೆಟ್ ಬಗ್ಗೆ ಗಂಭೀರ ವಿಚಾರ ಎತ್ತಿದ್ದಾರೆ. ಸರ್ಕಾರ ಕೆಎಸ್‌ಸಿಎ ಅವರನ್ನು ಕರೆಸಿ ಒಂದು ತೀರ್ಮಾನ ಮಾಡಬೇಕು. ಶಾಸಕರು ಬಂದ್ರೆ ಮಾತ್ರ ಟಿಕೆಟ್ ನೀಡುತ್ತೇವೆ ಎನ್ನುತ್ತಾರೆ. ಶಾಸಕರು ಕ್ಯೂನಲ್ಲಿ ‌ನಿಂತ್ರೆ ಟಿಕೆಟ್ ಕೊಡೋರಿಗೆ, ಭದ್ರತೆಯವರಿಗೆ ಏನು ಗೊತ್ತಿದೆ. ಗೌರವ ಸಿಗದಕ್ಕೆ ಶಾಸಕರು ಹೋಗುವುದೇ ಇಲ್ಲ. ಶಾಸಕರಿಗೆ ಕನಿಷ್ಠ ನಾಲ್ಕು ವಿಐಪಿ ಟಿಕೆಟ್ ಕೊಡುವ ವ್ಯವಸ್ಥೆ ಆಗಲಿ ಎಂದು ಸಲಹೆ ನೀಡಿದರು.

ಟಿಕೆಟ್ ನೀಡುವ ಬಗ್ಗೆ ಡಿಕೆಶಿ ಹೇಳಿದ್ದೇನು?

ಕೊನೆಗೆ ಡಿಕೆಶಿ ಪ್ರತಿಕ್ರಿಯಿಸಿ, ಖಂಡಿತವಾಗಿ ಅವರನ್ನು ಕರೆಸಿ ಮಾತಾಡುತ್ತೇವೆ. ನಾನೂ ಕೆಎಸ್‌ಸಿಎ ಸದಸ್ಯ. ಅವರನ್ನು ಕರೆಸಿ ಶಾಸಕರ ಟಿಕೆಟ್ ಬಗ್ಗೆ ಮಾತಾಡುತ್ತೇನೆ. ಶಾಸಕರಿಗೆ ಎಲ್ಲ ಹಕ್ಕೂ ಇದೆ. ಖಾದರ್ ಆದೇಶ, ಸಾಮ್ರಾಟ್ ಅಶೋಕ್ ಮನವಿ ಇದೆ ಎಂದು ಹೇಳುತ್ತೇನೆ ಎಂದು ಉತ್ತರಿಸಿ ಚರ್ಚೆಗೆ ತೆರೆ ಎಳೆದರು.

ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link