All posts by nagaraj11081993

ಅಮೆರಿಕದ ಲಕ್ಷಾಂತರ ಸಂಬಳದ ಕೆಲಸ ಬಿಟ್ಟು ಬೆಂಗಳೂರಲ್ಲಿ ಕೆಫೆ ತೆರೆದ ಸ್ನೇಹಿತರು!

ಅಮೆರಿಕದ ಲಕ್ಷಾಂತರ ಸಂಬಳದ ಕೆಲಸ ಬಿಟ್ಟು ಬೆಂಗಳೂರಲ್ಲಿ ಕೆಫೆ ತೆರೆದ ಸ್ನೇಹಿತರು!

ಬೆಂಗಳೂರು, ಜೂನ್ 01: ಕೈಯಲ್ಲಿ ದೇಶದ ಪ್ರತಿಷ್ಠಿತ ಐಐಟಿ (IIT) ಮತ್ತು ಐಐಎಂ (IIM) ಪದವಿಗಳು, ಅಮೆರಿಕದ ಪ್ರಸಿದ್ಧ ಕಂಪನಿಯಲ್ಲಿ ಕೈತುಂಬಾ ಸಂಬಳ ತಂದುಕೊಡುವ ಉದ್ಯೋಗ, ಐಷಾರಾಮಿ ಜೀವನ ಹೀಗೆ ಎಲ್ಲವೂ ಇದ್ದರೂ, ಅವೆಲ್ಲವನ್ನೂ ಬಿಟ್ಟು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸ್ವಂತ ಕೆಫೆ (Cafe) ಆರಂಭಿಸುವ ಮೂಲಕ ಇಬ್ಬರು ಸ್ನೇಹಿತರು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದ್ದಾರೆ.

ಮುಖ್ಯಾಂಶಗಳು

  • ಐಐಟಿ ಖರಗ್‌ಪುರ ಹಾಗೂ ಐಐಎಂ ಬೆಂಗಳೂರು ಪದವೀಧರರಿಂದ ಸ್ವಂತ ಉದ್ಯಮದ ಸಾಹಸ.
  • ಅಮೆರಿಕದ ಪ್ರತಿಷ್ಠಿತ ಕಾರ್ಪೊರೇಟ್ ಕಂಪನಿಯ ಉದ್ಯೋಗ ತೊರೆದು ಬೆಂಗಳೂರಿಗೆ ಮರಳಿದ ಸ್ನೇಹಿತರು.
  • ಸಿಲಿಕಾನ್ ಸಿಟಿಯಲ್ಲಿ ಹೊಸ ಕೆಫೆ ಆರಂಭಿಸಿದ ಯುವಕರ ಕಥೆ ನೆಟ್ಟಿಗರ ಮನಗೆದ್ದಿದೆ.

ಸ್ಟಾರ್ಟ್‌ಅಪ್ ಹಬ್‌ನಲ್ಲಿ ಹೊಸ ಸಾಹಸ

ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಐಐಟಿ ಖರಗ್‌ಪುರ (IIT Kharagpur) ಮತ್ತು ಐಐಎಂ ಬೆಂಗಳೂರು (IIM Bangalore) ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಿದ್ದ ಇಬ್ಬರು ಯುವಕರು ಅಮೆರಿಕದ ಪ್ರಸಿದ್ಧ ಕಾರ್ಪೊರೇಟ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅವರ ರೆಸ್ಯೂಮೆ (CV) ನೋಡಿದರೆ ಯಾವುದೇ ದೊಡ್ಡ ಕಂಪನಿಯಾದರೂ ತಕ್ಷಣ ಕೋಟ್ಯಂತರ ರೂಪಾಯಿ ಪ್ಯಾಕೇಜ್ ನೀಡಲು ಸಿದ್ಧವಿತ್ತು. ಆದರೆ, ಈ ಯುವಕರು ಕೇವಲ ಸಂಬಳದ ಗುಲಾಮರಾಗಿರಲು ಬಯಸಲಿಲ್ಲ. ಕಾರ್ಪೊರೇಟ್ ಬದುಕಿಗೆ ಬೈ ಹೇಳಿದ ಈ ಜೋಡಿ, ತಮ್ಮದೇ ಆದ ಉದ್ಯಮ ಆರಂಭಿಸಲು ನಿರ್ಧರಿಸಿ ಬೆಂಗಳೂರಿಗೆ ಮರಳಿತು

ಪ್ರಸ್ತುತ ಈ ಇಬ್ಬರು ಸ್ನೇಹಿತರು ಬೆಂಗಳೂರಿನಲ್ಲಿ ಸ್ವಂತ ಕೆಫೆಯೊಂದನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಇವರ ಈ ಯಶೋಗಾಥೆಯು ಲಿಂಕ್ಡ್‌ಇನ್ (LinkedIn) ಹಾಗೂ ಎಕ್ಸ್ (X) ಪ್ಲಾಟ್‌ಫಾರ್ಮ್‌ಗಳಲ್ಲಿ ವೈರಲ್ ಆಗಿದ್ದು, ಲಕ್ಷಾಂತರ ಯುವ ಉದ್ಯಮಿಗಳಿಗೆ ಪ್ರೇರಣೆಯಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆಯ ಮಹಾಪೂರ

ಸಾಮಾನ್ಯವಾಗಿ ಐಐಟಿ-ಐಐಎಂ ಪದವೀಧರರು ದೊಡ್ಡ ತಂತ್ರಜ್ಞಾನ ಕಂಪನಿಗಳು ಅಥವಾ ಹಣಕಾಸು ಸಂಸ್ಥೆಗಳ ಮುಖ್ಯಸ್ಥರಾಗಲು ಬಯಸುತ್ತಾರೆ. ಆದರೆ, ಈ ಯುವಕರು ತಳಮಟ್ಟದಿಂದ ಆಹಾರ ಉದ್ಯಮದಲ್ಲಿ ಹೊಸದೇನನ್ನಾದರೂ ಸಾಧಿಸಲು ಹೊರಂತಿರುವುದು ನೆಟ್ಟಿಗರ ಗಮನ ಸೆಳೆದಿದೆ. ನಿಮ್ಮ ಕನಸನ್ನು ಬೆನ್ನಟ್ಟುವುದು ಸುಲಭವಲ್ಲ, ಅದಕ್ಕೆ ಅಪಾರ ಧೈರ್ಯ ಬೇಕು ಎಂದು ಹಲವರು ಇವರ ನಿರ್ಧಾರವನ್ನು ಕೊಂಡಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕೋಲ್ಕತಾದಲ್ಲಿ ಅಮುಲ್​ನಿಂದ ವಿಶ್ವದ ಅತಿದೊಡ್ಡ ಮೊಸರು ಘಟಕ; ಕರ್ನಾಟಕದಲ್ಲಿ ನಂದಿನಿ ಎದುರು ಸಿಗದ ಗೆಲುವು ಅಮುಲ್​ಗೆ ಬಂಗಾಳದಲ್ಲಿ ಸಿಗುತ್ತಾ?

ಕೋಲ್ಕತಾ, ಜೂನ್ 1: ಗುಜರಾತ್ ಸಹಕಾರಿ ಹಾಲು ಮಾರಾಟ ಮಹಾಮಂಡಳ (GCMMF) ಒಡೆತನದ ಅಮುಲ್ ಸಂಸ್ಥೆಯು ಪಶ್ಚಿಮ ಬಂಗಾಳದ ಕೋಲ್ಕತ್ತಾ ಸಮೀಪದ ಹೌರಾದಲ್ಲಿರುವ ಸಂಕ್ರೇಲ್ ಫುಡ್ ಪಾರ್ಕ್‌ನಲ್ಲಿ ಸುಮಾರು 600 ಕೋಟಿ ರೂಪಾಯಿ ವೆಚ್ಚದಲ್ಲಿ ಬೃಹತ್ ಸಮಗ್ರ ಡೈರಿ ಘಟಕವನ್ನು ಸ್ಥಾಪಿಸುತ್ತಿದೆ. ಇದು ವಿಶ್ವದಲ್ಲೇ ಅತ್ಯಂತ ದೊಡ್ಡ ಮೊಸರು ಉತ್ಪಾದನಾ ಘಟಕ (Curd plant) ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಈ ಘಟಕವು ಪ್ರತಿದಿನ 10 ಲಕ್ಷ ಕಿಲೋಗ್ರಾಂ (1,000 ಮೆಟ್ರಿಕ್ ಟನ್) ಮೊಸರು ಉತ್ಪಾದಿಸುವ ಹಾಗೂ ದಿನಕ್ಕೆ 15 ಲಕ್ಷ ಲೀಟರ್ ಹಾಲು ಸಂಸ್ಕರಿಸುವ ಸಾಮರ್ಥ್ಯ ಹೊಂದಿರಲಿದೆ. ಬಂಗಾಳದ ಮಾರುಕಟ್ಟೆಯಲ್ಲಿ ಸಾಂಪ್ರದಾಯಿಕ ‘ಮಿಷ್ಟಿ ದೋಯಿ’ ಮತ್ತು ‘ಟೋಕ್ ದೋಯಿ’ ಇತ್ಯಾದಿ ಮೊಸರು ಉತ್ಪನ್ನಗಳಿಗೆ ಇರುವ ಭಾರಿ ಬೇಡಿಕೆಯನ್ನು ಬಳಸಿಕೊಂಡು ಪೂರ್ವ ಭಾರತದಲ್ಲಿ ತನ್ನ ಸಾಮ್ರಾಜ್ಯ ವಿಸ್ತರಿಸಲು ಅಮುಲ್ ಈ ತಂತ್ರ ರೂಪಿಸಿದೆ.

ಕರ್ನಾಟಕದಲ್ಲಿ ನಂದಿನಿಯಿಂದ ಸಿಕ್ಕ ಪ್ರತಿರೋಧ ಅಮುಲ್​ಗೆ ಬಂಗಾಳದಲ್ಲಿ ಇಲ್ಲ

ಗುಜರಾತ್ ಮೂಲದ ಅಮುಲ್ ದೇಶದ ವಿವಿಧ ಭಾಗಗಳಲ್ಲಿ ತನ್ನ ಮಾರುಕಟ್ಟೆಯನ್ನು ವಿಸ್ತರಿಸುತ್ತಾ ಮುನ್ನುಗ್ಗುತ್ತಿದ್ದರೆ, ಕರ್ನಾಟಕದಂತಹ ಕೆಲ ರಾಜ್ಯಗಳಲ್ಲಿ ದೊಡ್ಡ ಮಾರುಕಟ್ಟೆ ಪಾಲು ಪಡೆಯಲು ವಿಫಲವಾಗಿದೆ. ಕರ್ನಾಟಕದ ಹಾಲು ಮಹಾಮಂಡಳಿ (KMF) ಒಡೆತನದ ‘ನಂದಿನಿ’ ಬ್ರ್ಯಾಂಡ್ ಎದುರು ಅಮುಲ್ ಆಟ ಹೆಚ್ಚು ನಡೆಯುತ್ತಿಲ್ಲ. ಆದರೆ, ಪಶ್ಚಿಮ ಬಂಗಾಳದಲ್ಲಿ ಅಮುಲ್​ಗೆ ಹೆಚ್ಚಿನ ಪೈಪೋಟಿ ಸಿಕ್ಕೇ ಇಲ್ಲ. ಅಲ್ಲಿ ಅಮುಲ್ ಈಗಾಗಲೇ ಅತಿದೊಡ್ಡ ಹಾಲಿನ ಬ್ರ್ಯಾಂಡ್ ಆಗಿದೆ. ಈಗ ಬಹಳ ಬೇಡಿಕೆಯಲ್ಲಿರುವ ಮೊಸರು ಬ್ಯುಸಿನೆಸ್​ನಲ್ಲೂ ಅಮುಲ್ ನಂಬರ್ ಒನ್ ಆಗಲು ಸ್ಕೆಚ್ ಹಾಕಿದೆ.

ಇದನ್ನೂ ಓದಿ: ಚಿನ್ನಕ್ಕಿಂತಲೂ ಬಿಟ್​ಕಾಯಿನ್ ಒಂದು ಕೈ ಮೇಲೆ ಎನ್ನುತ್ತಿದ್ದ ಮಾರ್ಕ್ ಕ್ಯೂಬನ್ ಈಗ ಕೈಚೆಲ್ಲಿ ಕೂತ ಕಥೆ..!

ಕರ್ನಾಟಕದಲ್ಲಿ ನಂದಿನಿ ಸೋಲದಿರಲು ಏನು ಕಾರಣ?

ಕರ್ನಟಕದಲ್ಲಿ ಕೆಎಂಎಫ್ ಮತ್ತು ನಂದಿನಿ ಬ್ರ್ಯಾಂಡ್​ಗೆ ಭಾವನಾತ್ಮಕ ನಂಟಿದೆ. ತಮ್ಮ ಊರಿನ ಹಾಲೆಂದು ಜನಸಾಮಾನ್ಯರಿಂದ ಹಿಡಿದು ಹೋಟೆಲ್ ಉದ್ದಿಮೆಯ ಜನರೆಲ್ಲರೂ ನಂದಿನಿ ಹಾಲೇ ಬೇಕೆಂದು ಕೇಳಿ ಹಾಕಿಸಿಕೊಳ್ಳುತ್ತಿರುವುದು ಹೆಚ್ಚಾಗಿದೆಯಂತೆ. ಜೊತೆಗೆ, ಇತರ ಬ್ರ್ಯಾಂಡ್ ಹಾಲುಗಳಿಗಿಂತ ನಂದಿನಿ ಹಾಲು ತುಸು ಕಡಿಮೆ ಬೆಲೆ ಹೊಂದಿರುವುದು ಕೂಡ ಕೆಎಂಎಫ್ ಕರ್ನಾಟಕದಲ್ಲಿ ನಂಬರ್ ಒನ್ ಆಗಿ ಮುಂದುವರಿಯಲು ಸಾಧ್ಯವಾಗಿದೆ.

ನಂದಿನಿ ಕೇವಲ ಕರ್ನಾಟಕ ಅಷ್ಟೇ ಅಲ್ಲದೆ ನೆರೆಯ ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ, ಮಹಾರಾಷ್ಟ್ರ ಹಾಗೂ ಗೋವಾಗಳಿಗೂ ತನ್ನ ಮಾರುಕಟ್ಟೆಯನ್ನು ವಿಸ್ತರಿಸಿದೆ. ಮಹಾರಾಷ್ಟ್ರದ ‘ಮಹಾನಂದ್’ ಡೈರಿ ಅಮುಲ್ ಎಂಟ್ರಿಯಿಂದ ಸೊರಗಿದ ಉದಾಹರಣೆ ಮುಂದಿಟ್ಟುಕೊಂಡು, ನಂದಿನಿ ತನ್ನ ಮಾರುಕಟ್ಟೆಯನ್ನು ರಕ್ಷಿಸಿಕೊಳ್ಳಲು ಆಕ್ರಮಣಕಾರಿ ಹೆಜ್ಜೆ ಇಡುತ್ತಿದೆ.

ಅಮುಲ್ ಜಾಗತಿಕವಾಗಿ ಹರಡಿಕೊಳ್ಳುತ್ತಿದ್ದರೆ, ನಂದಿನಿ ಕೂಡ ಕಡಿಮೆ ಇಲ್ಲ ಎಂಬಂತೆ ಅಂತರರಾಷ್ಟ್ರೀಯ ಮಟ್ಟದಲ್ಲಿ (ಟಿ20 ವಿಶ್ವಕಪ್ ಪ್ರಾಯೋಜಕತ್ವದಂತಹ ದೊಡ್ಡ ವೇದಿಕೆಗಳ ಮೂಲಕ) ತನ್ನ ಬ್ರ್ಯಾಂಡ್ ಮೌಲ್ಯ ಹೆಚ್ಚಿಸಿಕೊಂಡು ಅಮುಲ್‌ಗೆ ಪ್ರಬಲ ರಾಷ್ಟ್ರೀಯ ಪೈಪೋಟಿ ನೀಡುತ್ತಿದೆ.

ಇದನ್ನೂ ಓದಿ: ಜಾಗತಿಕ ಸವಾಲುಗಳ ನಡುವೆಯೂ 2026-27ರಲ್ಲಿ ಭಾರತದ ಜಿಡಿಪಿ ಶೇ. 6.9 ವೃದ್ಧಿ: ಆರ್​ಬಿಐ ವಾರ್ಷಿಕ ವರದಿಯಲ್ಲಿ ಅಂದಾಜು

ಪಶ್ಚಿಮ ಬಂಗಾಳದಲ್ಲಿ ಡೈರಿ ಉದ್ಯಮಕ್ಕೆ ದೊಡ್ಡ ಮಾರುಕಟ್ಟೆ

ಕರ್ನಾಟಕದಲ್ಲಿ ಡೈರಿ ಉದ್ಯಮದ ಮಾರುಕಟ್ಟೆ ಗಾತ್ರ 1.35 ಲಕ್ಷ ಕೋಟಿ ರೂ ಇದೆ. ಪಶ್ಚಿಮ ಬಂಗಾಳದಲ್ಲಿ ಹತ್ತಿರ ಹತ್ತಿರ ಒಂದು ಲಕ್ಷ ಕೋಟಿ ರೂ ಸಮೀಪದಷ್ಟು ಗಾತ್ರದ ಮಾರುಕಟ್ಟೆ ಇದೆ. ಇಲ್ಲಿಯ ತಿನಿಸುಗಳಿಗೆ ಹೆಚ್ಚಾಗಿ ಮೊಸರನ್ನು ಬಳಸಲಾಗುತ್ತದೆ. ಆದರೆ, ಇಲ್ಲಿಯ ಡೈರಿ ಉದ್ಯಮದಲ್ಲಿ ಸಣ್ಣ ಸಣ್ಣ ಸಂಸ್ಥೆಗಳದ್ದೇ ಕಾರುಬಾರು. ಹೀಗಾಗಿ, ಅಮುಲ್​ನಂತಹ ದೊಡ್ಡ ಸಂಸ್ಥೆಗಳಿಗೆ ನೆಲೆಯೂರಲು ಮಾರುಕಟ್ಟೆ ಪೂರಕವಾಗಿದೆ. ಬಂಗಾಳ ಮಾತ್ರವಲ್ಲ, ಬಿಹಾರ, ಒಡಿಶಾ ಇತ್ಯಾದಿ ಪೂರ್ವ ರಾಜ್ಯಗಳ ಡೈರಿ ಮಾರುಕಟ್ಟೆಗಳಲ್ಲೂ ಇಂಥದ್ದೇ ಸ್ಥಿತಿ ಇರುವುದು. ಹೀಗಾಗಿ, ಅಮುಲ್ ಧೈರ್ಯವಾಗಿ ಬಂಡವಾಳ ಹೂಡುತ್ತಿದೆ ಎಂದು ತಜ್ಞರು ಹೇಳುತ್ತಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಆರ್‌ಸಿಬಿ ಪಾಲಿಗೆ ‘ಲಕ್ಕಿ ಚಾರ್ಮ್’ ಆದ ಅನುಷ್ಕಾ ಶರ್ಮಾ

Source link

RCB ಗೆಲುವಿನ ಬೆನ್ನಲ್ಲೇ ಅಂಬಾಟಿ ರಾಯುಡು ‘ಬಿಗ್ ಬಾಯ್ಸ್’ ಹೇಳಿಕೆ!

17 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಬ್ಯಾಕ್ ಟು ಬ್ಯಾಕ್ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಕಳೆದ ಬಾರಿ ಪಂಜಾಬ್ ಕಿಂಗ್ಸ್​ ತಂಡಕ್ಕೆ ಸೋಲುಣಿಸಿ ಚೊಚ್ಚಲ ಟ್ರೋಫಿ ಮುಡಿಗೇರಿಸಿಕೊಂಡಿದ್ದ ಆರ್​ಸಿಬಿ ಈ ಬಾರಿ ಗುಜರಾತ್ ಟೈಟಾನ್ಸ್ ತಂಡವನ್ನು ಬಗ್ಗು ಬಡಿದು 2ನೇ ಬಾರಿ ಟ್ರೋಫಿ ಎತ್ತಿ ಹಿಡಿದಿದೆ. ಈ ಮೂಲಕ ಐಪಿಎಲ್​ನಲ್ಲಿ ಸತತ ಎರಡು ಟ್ರೋಫಿ ಗೆದ್ದ ವಿಶೇಷ ಸಾಧನೆ ಮಾಡಿದೆ. ಈ ಸಾಧನೆಯ ಬೆನ್ನಲ್ಲೇ, ಸಿಎಸ್​ಕೆ ತಂಡದ ಮಾಜಿ ಆಟಗಾರ ಅಂಬಾಟಿ ರಾಯುಡು ಆರ್​ಸಿಬಿ ತಂಡವನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಟು ಟೀಕಾಗಾರನೆಂದೇ ಗುರುತಿಸಿಕೊಂಡಿದ್ದ ಅಂಬಾಟಿ ರಾಯುಡು ಅವರೇ ಇದೀಗ ಆರ್​ಸಿಬಿ ತಂಡವನ್ನು ‘ಬಿಗ್ ಬಾಯ್ಸ್’ ಪಡೆ ಎಂದು ಹೊಗಳಿದ್ದಾರೆ. ಅಂದರೆ ಸಾಟಿಯಿಲ್ಲದ ಸರದಾರರು ಎಂದರ್ಥ.

ಇಎಸ್‌ಪಿಎನ್ ಕ್ರಿಕ್‌ಇನ್ಫೋ ಚರ್ಚಾ ಕಾರ್ಯಕ್ರಮದಲ್ಲಿ ಮಾತನಾಡಿದ ರಾಯುಡು, ಆರ್‌ಸಿಬಿ ತಂಡದ ಈ ಅದ್ಭುತ ಪರಿವರ್ತನೆಯನ್ನು ಮುಕ್ತವಾಗಿ ಒಪ್ಪಿಕೊಂಡಿದ್ದಾರೆ.

“ಈ ಹಿಂದೆ ಆರ್​ಸಿಬಿ ತಂಡವು ವಿರಾಟ್ ಕೊಹ್ಲಿ ಅವರಂತಹ ಸ್ಟಾರ್ ಆಟಗಾರರ ಮೇಲೆ ಅವಲಂಭಿತವಾಗಿತ್ತು. ಆದರೆ ಇದೀಗ ತಂಡ ಬದಲಾಗಿದೆ. ಒಂದು ತಂಡವಾಗಿ ಹೋರಾಡುತ್ತಿದ್ದಾರೆ”.

“ಆರ್​ಸಿಬಿ ತಂಡದ ಪ್ರದರ್ಶನವನ್ನು ಗಮನಿಸಿದರೆ, ಅವರು ಐಪಿಎಲ್​ನ ಬಿಗ್ ಬಾಯ್ಸ್ ಎಂಬುದರಲ್ಲಿ ಸಂಶಯವೇ ಇಲ್ಲ. ಪ್ರಸ್ತುತ ಇರುವ ತಂಡವು ಈ ಹಿಂದಿನ ಚಾಂಪಿಯನ್​ಗಳಾದ ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್, ಕೊಲ್ಕತ್ತಾ ನೈಟ್ ರೈಡರ್ಸ್​ ಹಾಗೂ ಸನ್​ರೈಸರ್ಸ್​ ಹೈದರಾಬಾದ್​ ತಂಡಗಳಿಗಿಂತ ಬಲಿಷ್ಠವಾಗಿದೆ” ಎಂದು ಅಂಬಾಟಿ ರಾಯುಡು ಅಭಿಪ್ರಾಯಪಟ್ಟಿದ್ದಾರೆ.

“ಅಷ್ಟೇ ಅಲ್ಲದೆ ಇದು ಆರ್​ಸಿಬಿ ತಂಡದ ಯುಗ. ಈ ಯುಗದಲ್ಲಿ ಅವರು ಈ ಹಿಂದಿನ ಚಾಂಪಿಯನ್​ ತಂಡಗಳಿಗೆ ಸಮನಾದ ಪ್ರದರ್ಶನ ನೀಡುತ್ತಿದೆ. ಪ್ರಸ್ತುತ ಇರುವ ಆರ್‌ಸಿಬಿ ತಂಡವು ಎಷ್ಟು ಬಲಿಷ್ಠವಾಗಿದೆ ಎಂದರೆ, ಬೇರೆ ಯಾವುದೇ ತಂಡಗಳು ಅವರ ಹತ್ತಿರವೂ ಬರಲು ಸಾಧ್ಯವಿಲ್ಲ” ಎಂದು ರಾಯುಡು ಹೇಳಿದ್ದಾರೆ.

ಇದೀಗ ಅಂಬಾಟಿ ರಾಯುಡು ಅವರ ಹೇಳಿಕೆಯು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈ ಹೇಳಿಕೆಗೆ ರಾಯುಡು ಅವರನ್ನು ಆರ್​ಸಿಬಿ ಅಭಿಮಾನಿಗಳು ಕಾಲೆಳೆಯುತ್ತಿದ್ದಾರೆ.

ಏಕೆಂದರೆ ಅಂಬಾಟಿ ರಾಯುಡು ಈ ಹಿಂದೆ ಆರ್​ಸಿಬಿ ತಂಡವನ್ನು ಲೇವಡಿ ಮಾಡಿದ್ದರು. ಅಲ್ಲದೆ ಅವಕಾಶ ಸಿಕ್ಕಾಗೆಲ್ಲಾ ಆರ್​ಸಿಬಿ ತಂಡವನ್ನು ಟೀಕಿಸಿದ್ದರು. ಇದಕ್ಕೆ ಸಾಕ್ಷಿ ಅವರ ಈ ಹಿಂದಿನ ಹೇಳಿಕೆಗಳು…

  • ಟ್ರೋಫಿ ಸಂಖ್ಯೆಯ ಲೇವಡಿ: RCB ತನ್ನ ಮೊದಲ ಐಪಿಎಲ್ ಟ್ರೋಫಿ ಗೆದ್ದಾಗ ಲೇವಡಿ ಮಾಡಿದ್ದ ರಾಯುಡು, “ನಿಮಗೆ ಒಂದು ಕಪ್ ಗೆಲ್ಲಲು 18 ವರ್ಷ ಬೇಕಾಯಿತು, ಹಾಗಾದರೆ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ 5 ಟ್ರೋಫಿಗಳ ದಾಖಲೆ ಸರಿಗಟ್ಟಲು ನಿಮಗೆ 72 ವರ್ಷ ಬೇಕಾಗಬಹುದು” ಎಂದು ಕಾಲೆಳೆದಿದ್ದರು.
  • ಸಂಭ್ರಮಾಚರಣೆಗೆ ಟೀಕೆ: 2024ರ ಐಪಿಎಲ್‌ನಲ್ಲಿ ಸಿಎಸ್‌ಕೆ ತಂಡವನ್ನು ಟೂರ್ನಿಯಿಂದ ಹೊರಹಾಕಿದಾಗ ಆರ್‌ಸಿಬಿ ಆಟಗಾರರು ಮತ್ತು ಅಭಿಮಾನಿಗಳು ರಸ್ತೆಯಲ್ಲಿ ಅತಿಯಾಗಿ ಸಂಭ್ರಮಿಸಿದ್ದನ್ನು ರಾಯುಡು ಟೀಕಿಸಿದ್ದರು. “ಕೇವಲ ಸಂಭ್ರಮಾಚರಣೆಗಳು ನಿಮಗೆ ಟ್ರೋಫಿ ತಂದುಕೊಡುವುದಿಲ್ಲ” ಎಂದು ತಿವಿದಿದ್ದರು.

ಇದನ್ನೂ ಓದಿ: Virat Kohli: ಯುವ ಆಟಗಾರರ ಸವಾಲಿಗೆ ನಾನು ರೆಡಿ!

ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬದಲಾಗಿದೆ. ಈ ಹಿಂದೆ ಟೀಕಿಸಿದ ಅಂಬಾಟಿ ರಾಯುಡುವೇ, ಪ್ರಸ್ತುತ ಇರುವ ಆರ್‌ಸಿಬಿ ತಂಡವು ಎಷ್ಟು ಬಲಿಷ್ಠವಾಗಿದೆ ಎಂದರೆ, ಬೇರೆ ಯಾವುದೇ ತಂಡಗಳು ಅವರ ಹತ್ತಿರವೂ ಬರಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

Source link

ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ

ಬೆಂಗಳೂರು, ಜೂನ್ 1: ರಾಜ್ಯಪಾಲ ಥಾವರ್‌ಚಂದ್ ಗೆಹಲೋಟ್​ಗೆ ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಿದ್ದಕ್ಕೆ ವ್ಯಕ್ತಿಯೊಬ್ಬರು ನಡು ಮಾರ್ಗದಲ್ಲಿ ಕುಳಿತು ಪ್ರತಿಭಟಿಸಿದ ಘಟನೆ ಬೆಂಗಳೂರಿನ ಹೆಚ್​ಎಎಲ್​ ಓಲ್ಡ್ ಏರ್​ಪೋರ್ಟ್ ರಸ್ತೆಯಲ್ಲಿ ನಡೆದಿದೆ. ಇದೇ ವೇಳೆ ಬಳಿ ಬಂದ ಟ್ರಾಫಿಕ್ ಪೊಲೀಸರ ಬಳಿ, ‘ನನ್ನ ಪತ್ನಿ ಗರ್ಭಿಣಿ, ಈಗ ಹೇಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಿ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯಪಾಲರ ಸಂಚಾರಕ್ಕಾಗಿ ಸುಮಾರು 30 ನಿಮಿಷ ಪೊಲೀಸರು ಟ್ರಾಫಿಕ್​ ಬಂದ್ ಮಾಡಿದ್ದರು. ಇದರಿಂದ ವ್ಯಕ್ತಿ ಕೆರಳಿದ್ದರು. ನಂತರ ವ್ಯಕ್ತಿಯನ್ನು ಪೊಲೀಸರು ಸಮಾಧಾನಪಡಿಸಿ ಕಳುಹಿಸಿದ್ದಾರೆ.

ವರದಿ: ವಿಕಾಸ್, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸ್ಪೆಷಲ್ ಫ್ಲೈಟ್​ನಲ್ಲಿ ಒಟ್ಟಿಗೆ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!

ಬೆಂಗಳೂರು, ಜೂನ್ 01: ಕಾಂಗ್ರೆಸ್ ಹೈಕಮಾಂಡ್‌ನೊಂದಿಗೆ ಮಹತ್ವದ ಸಭೆಗಳನ್ನು ನಡೆಸಲು ಹಂಗಾಮಿ ಸಿಎಂ ಸಿದ್ದರಾಮಯ್ಯ ಮತ್ತು ನಿಯೋಜಿತ ಸಿಎಂ ಡಿಕೆ ಶಿವಕುಮಾರ್ ಇಬ್ಬರೂ ಒಟ್ಟಿಗೆ ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಿದ್ದಾರೆ. ಅಧಿಕಾರ ಹಂಚಿಕೆ ಮತ್ತು ಸಂಪುಟ ಪುನರ್‌ರಚನೆ ಕುರಿತು ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ. ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಮತ್ತು ಹಿರಿಯ ನಾಯಕ ಹೆಚ್.ಸಿ. ಮಹದೇವಪ್ಪ ಸೇರಿದಂತೆ ಹಲವು ಮುಖಂಡರು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರೊಂದಿಗೆ ದೆಹಲಿಗೆ ಪ್ರಯಾಣಿಸಿದ್ದಾರೆ.

ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಮತ್ತು ರಾಜಕೀಯ ಸ್ಥಿತ್ಯಂತರಗಳ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮತ್ತು ರಣದೀಪ್ ಸುರ್ಜೇವಾಲಾ ಅವರೊಂದಿಗೆ ಚರ್ಚೆಗಳು ನಡೆಯಲಿವೆ ಎಂದು ಮೂಲಗಳು ತಿಳಿಸಿವೆ. ಈ ಉನ್ನತ ಮಟ್ಟದ ಭೇಟಿ ರಾಜ್ಯ ರಾಜಕೀಯದಲ್ಲಿ ಮುಂದಿನ ಬೆಳವಣಿಗೆಗಳಿಗೆ ನಿರ್ಣಾಯಕವಾಗಬಹುದು. ಈ ಭೇಟಿಯು ಕರ್ನಾಟಕದಲ್ಲಿ ಸ್ಥಿರ ಸರ್ಕಾರ ರಚನೆಗೆ ಅಡಿಪಾಯ ಹಾಕುವ ಸಾಧ್ಯತೆಯಿದೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Video: ಬಾಲಕಿಯ ಅಪಹರಿಸಿ, ಅತ್ಯಾಚಾರ ನಡೆಸಲು ವ್ಯಕ್ತಿಯ ಯತ್ನ, ಬಾಲಕನ ಸಮಯಪ್ರಜ್ಞೆಯಿಂದ ಉಳೀತು ಆಕೆಯ ಜೀವ

ರಷ್ಯಾ, ಜೂನ್ 01: ರಷ್ಯಾದಲ್ಲಿ 44 ವರ್ಷದ ವ್ಯಕ್ತಿಯೊಬ್ಬ ಕಿರುಚುತ್ತಿದ್ದ 5 ವರ್ಷದ ಪುಟ್ಟ ಹೆಣ್ಣು ಮಗಳನ್ನು ಬಲವಂತವಾಗಿ ಎತ್ತಿಕೊಂಡು ಕಟ್ಟಡದ ಒಳಗೆ ಹೋಗಲು ಯತ್ನಿಸಿದ್ದಾನೆ. ಆದರೆ ಅಲ್ಲಿಯೇ ಇದ್ದ ಸಣ್ಣ ಬಾಲಕನೊಬ್ಬ ತಕ್ಷಣವೇ ಎಚ್ಚೆತ್ತುಕೊಂಡು, ಕಟ್ಟಡದ ಮುಖ್ಯ ಬಾಗಿಲು ಮುಚ್ಚದಂತೆ ಗಟ್ಟಿಯಾಗಿ ಹಿಡಿದುಕೊಂಡು ಜೋರಾಗಿ ಕೂಗಿ ಇತರರ ಸಹಾಯ ಬೇಡಿದ್ದಾನೆ. ಬಾಲಕನ ಈ ಸಮಯಪ್ರಜ್ಞೆ ಮತ್ತು ಧೈರ್ಯದಿಂದಾಗಿ ಅಪಹರಣಕಾರನ ಸಂಚು ವಿಫಲಗೊಂಡಿದ್ದು, ಮಗು ಸುರಕ್ಷಿತವಾಗಿ ಪಾರಾಗಿದೆ. ಸಾರ್ವಜನಿಕರ ಸಹಾಯದಿಂದ ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನದಲ್ಲಿಟ್ಟಿದ್ದಾರೆ. ಸಮಯಕ್ಕೆ ಸರಿಯಾಗಿ ಧೈರ್ಯ ತೋರಿದ ಆ ಪುಟ್ಟ ಬಾಲಕನ ಸಾಹಸಕ್ಕೆ ಜಗತ್ತಿನಾದ್ಯಂತ ಭಾರಿ ಶ್ಲಾಘನೆ ವ್ಯಕ್ತವಾಗುತ್ತಿದೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

 

Source link

ಬೆಂಗಳೂರು: ಗಾಂಧಿ ಬಜಾರ್ ಹೈಟೆಕ್ ಪಾರ್ಕಿಂಗ್ ಲಾಟ್‌ ಕಾರು ಶೋರೂಂಗೆ ಬಾಡಿಗೆಗೆ! ವಾಹನ ಸವಾರರ ತೀವ್ರ ಆಕ್ರೋಶ

ಗಾಂಧಿ ಬಜಾರ್ ಹೈಟೆಕ್ ಪಾರ್ಕಿಂಗ್ ಲಾಟ್‌Image Credit source: tv9

ಬೆಂಗಳೂರು, ಜೂನ್ 1: ಬೆಂಗಳೂರಿನ (Bengaluru) ಅತ್ಯಂತ ಜನನಿಬಿಡ ವಾಣಿಜ್ಯ ಪ್ರದೇಶವಾದ ಬಸವನಗುಡಿಯ ಗಾಂಧಿ ಬಜಾರ್‌ನಲ್ಲಿ ವಾಹನ ಸವಾರರ ಪಾರ್ಕಿಂಗ್ ಸಮಸ್ಯೆಗೆ ಮುಕ್ತಿ ನೀಡಲು ನಿರ್ಮಿಸಲಾಗಿದ್ದ ಹೈಟೆಕ್ ಮಲ್ಟಿಲೆವೆಲ್ ಪಾರ್ಕಿಂಗ್ ಲಾಟ್ ಈಗ ವಿವಾದದ ಕೇಂದ್ರಬಿಂದುವಾಗಿದೆ. ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆಯಡಿ ಬರೋಬ್ಬರಿ 27 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ನಾಲ್ಕು ಅಂತಸ್ತಿನ ಈ ಬೃಹತ್ ಪಾರ್ಕಿಂಗ್ ಸಂಕೀರ್ಣವನ್ನು ಕಳೆದ ತಿಂಗಳಷ್ಟೇ ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿತ್ತು. ಆದರೆ, ಇದರ ಗುತ್ತಿಗೆ ಪಡೆದಿರುವ ಮಾಲೀಕ ಸಾರ್ವಜನಿಕ ವಾಹನಗಳಿಗೆ ಜಾಗ ನೀಡುವ ಬದಲಿಗೆ ಇಡೀ ಪಾರ್ಕಿಂಗ್ ಲಾಟ್ ಅನ್ನು ಐಷಾರಾಮಿ ‘ಬೆಂಜ್ ಕಾರ್ ಶೋರೂಂ’ನ ಹೊಸ ಕಾರುಗಳ ನಿಲುಗಡೆಗೆ ಅಕ್ರಮವಾಗಿ ಬಾಡಿಗೆಗೆ ನೀಡಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಬಗ್ಗೆ ಸ್ಥಳೀಯರು ಮತ್ತು ವಾಹನ ಸವಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಖ್ಯಾಂಶಗಳು

  • ಸಾರ್ವಜನಿಕರ ಬಳಕೆಗೆ ಮೀಸಲಾಗಿರಬೇಕಿದ್ದ ಹೈಟೆಕ್ ಪಾರ್ಕಿಂಗ್ ಲಾಟ್ ಅನ್ನು ಕಾರ್ ಶೋರೂಂಗೆ ಅಕ್ರಮವಾಗಿ ಬಾಡಿಗೆ ನೀಡಿದ ಗುತ್ತಿಗೆದಾರ.
  • ಪಾರ್ಕಿಂಗ್ ಸಂಕೀರ್ಣದಲ್ಲಿ ಜಾಗ ಸಿಗದೆ ರಸ್ತೆ, ಫುಟ್‌ಪಾತ್ ಹಾಗೂ ಸ್ಥಳೀಯರ ಮನೆಗಳ ಮುಂದೆ ವಾಹನ ನಿಲುಗಡೆ.
  • ಗಾಂಧಿ ಬಜಾರ್‌ನಲ್ಲಿ ಹೆಚ್ಚಿದ ಟ್ರಾಫಿಕ್ ಕಿರಿಕಿರಿ.

ಮನೆಗಳ ಮುಂದೆ ವಾಹನ ನಿಲುಗಡೆ, ನಿವಾಸಿಗಳಿಗೆ ತಲೆನೋವು

ಗಾಂಧಿ ಬಜಾರ್ ಮಾರುಕಟ್ಟೆಗೆ ಪ್ರತಿದಿನ ಸಾವಿರಾರು ಗ್ರಾಹಕರು ಮತ್ತು ವ್ಯಾಪಾರಿಗಳು ಆಗಮಿಸುತ್ತಾರೆ. ಇಲ್ಲಿ ದಶಕಗಳಿಂದ ಇದ್ದ ಪಾರ್ಕಿಂಗ್ ಸಮಸ್ಯೆಗೆ ಪರಿಹಾರವಾಗಿ ಈ ಬೃಹತ್ ಕಟ್ಟಡ ತಲೆಯೆತ್ತಿತ್ತು. ಆದರೆ, ಗುತ್ತಿಗೆದಾರನ ದುರಾಶೆಯಿಂದಾಗಿ ಸಾರ್ವಜನಿಕರಿಗೆ ಇಲ್ಲಿ ವಾಹನ ನಿಲ್ಲಿಸಲು ಅವಕಾಶವೇ ಸಿಗುತ್ತಿಲ್ಲ. ಇದರಿಂದ ಬೇಸತ್ತ ವಾಹನ ಸವಾರರು ಅನಿವಾರ್ಯವಾಗಿ ಗಾಂಧಿ ಬಜಾರ್ ಸುತ್ತಮುತ್ತಲಿನ ನಿವಾಸಿಗಳ ಮನೆಗಳ ಮುಂದೆ ಹಾಗೂ ಅಂಗಡಿ ಮುಂಗಟ್ಟುಗಳ ಎದುರು ತಮ್ಮ ಕಾರು, ಬೈಕ್‌ಗಳನ್ನು ನಿಲ್ಲಿಸಿ ಹೋಗುತ್ತಿದ್ದಾರೆ. ಇದು ಸ್ಥಳೀಯ ನಿವಾಸಿಗಳ ನೆಮ್ಮದಿ ಕೆಡಿಸಿದ್ದು, ನಿವಾಸಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಟ್ರಾಫಿಕ್ ಸಮಸ್ಯೆ ಮತ್ತು ಸ್ಮಾರ್ಟ್ ಸಿಟಿ ಯೋಜನೆಗೆ ಧಕ್ಕೆ

‘ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಾಣ ಮಾಡಲಾದ ಪಾರ್ಕಿಂಗ್ ಜಾಗವನ್ನು ಖಾಸಗಿ ಕಾರ್ ಶೋರೂಂನ ಗೋಡೌನ್ ತರಹ ಬಳಸಿ ಲೂಟಿ ಹೊಡೆಯಲಾಗುತ್ತಿದೆ’ ಎಂದು ಹೆರಿಟೇಜ್ ಬಸವನಗುಡಿ ಸಂಸ್ಥೆಯ ಕಾರ್ಯದರ್ಶಿ ಗುರುಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾರ್ಕಿಂಗ್ ಸಂಕೀರ್ಣದ ಒಳಗೆ ಜಾಗ ಸಿಗದ ಕಾರಣ ಸವಾರರು ರಸ್ತೆ ಮತ್ತು ಫುಟ್‌ಪಾತ್‌ಗಳ ಮೇಲೆಯೇ ವಾಹನಗಳನ್ನು ಪಾರ್ಕ್ ಮಾಡುತ್ತಿದ್ದು, ಗಾಂಧಿ ಬಜಾರ್‌ನಲ್ಲಿ ಸಂಚಾರ ದಟ್ಟಣೆ ಮತ್ತಷ್ಟು ಹದಗೆಟ್ಟಿದೆ.

ಇದನ್ನೂ ಓದಿ: 35 ಸಾವಿರ ರೂಗೆ ಬೆಂಗಳೂರಿನಲ್ಲಿ ಆರಾಮ ಜೀವನ ನಡೆಸ್ಬಹುದು; ತಿಂಗಳ ಖರ್ಚು ವೆಚ್ಚ ಬಿಚ್ಚಿಟ್ಟ ಸಾಫ್ಟ್‌ವೇರ್‌ ಇಂಜಿನಿಯರ್

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸ್ಮಾರ್ಟ್ ಸಿಟಿ ಯೋಜನೆಯ ಉದ್ದೇಶವನ್ನೇ ಗುತ್ತಿಗೆದಾರ ಗಾಳಿಗೆ ತೂರಿದ್ದು, ಬಿಬಿಎಂಪಿ ಮತ್ತು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಮಧ್ಯಪ್ರವೇಶಿಸಿ ಅಕ್ರಮ ಬಾಡಿಗೆ ದಂಧೆಯನ್ನು ನಿಲ್ಲಿಸಬೇಕು ಹಾಗೂ ಗುತ್ತಿಗೆದಾರನ ಪರವಾನಗಿಯನ್ನು ರದ್ದುಗೊಳಿಸಬೇಕು ಎಂದು ಸಾರ್ವಜನಿಕರು ಕಟ್ಟುನಿಟ್ಟಾಗಿ ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Virat Kohli: ಯುವ ಆಟಗಾರರ ಸವಾಲಿಗೆ ನಾನು ರೆಡಿ!

ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಆರ್​ಸಿಬಿ ತಂಡದ ಈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದು ವಿರಾಟ್ ಕೊಹ್ಲಿ (Virat Kohli).

ಗುಜರಾತ್ ಟೈಟಾನ್ಸ್ ನೀಡಿದ 155 ರನ್​ಗಳ ಸವಾಲನ್ನು ಬೆನ್ನತ್ತಿದ ಆರ್​ಸಿಬಿ ಪರ ವಿರಾಟ್ ಕೊಹ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರು. ಆರಂಭಿಕನಾಗಿ ಕಣಕ್ಕಿಳಿದ ಕೊಹ್ಲಿ 42 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 9 ಫೋರ್​ಗಳೊಂದಿಗೆ ಅಜೇಯ 75 ರನ್ ಬಾರಿಸಿದರು. ಈ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ಈ ಪ್ರಶಸ್ತಿ ಸ್ವೀಕರಿಸಿದ ಬಳಿಕ ನಡೆದ ಸಂದರ್ಶನದಲ್ಲಿ ವಿರಾಟ್ ಕೊಹ್ಲಿಗೆ ಬ್ಯಾಟಿಂಗ್ ಶೈಲಿಯ ಬದಲಾವಣೆ ಬಗ್ಗೆ ಪ್ರಶ್ನೆ ಮುಂದಿಡಲಾಗಿತ್ತು. ಇದಕ್ಕೆ ಉತ್ತರಿಸಿದ ಕೊಹ್ಲಿ, “ಇಂದಿನ ಕ್ರಿಕೆಟ್‌ನ ಬೇಡಿಕೆ ಎಷ್ಟಿದೆಯೆಂದರೆ, ತೀರಾ ಕಿರಿಯ ವಯಸ್ಸಿನ (ಸೂಪರ್ ಯಂಗ್) ಆಟಗಾರರು ಸಹ ನೀವು ನಿಮ್ಮ ಆಟದ ಮಟ್ಟವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವಂತೆ ಪ್ರೇರೇಪಿಸುತ್ತಿದ್ದಾರೆ ಮತ್ತು ಒತ್ತಡ ಹೇರುತ್ತಿದ್ದಾರೆ. ಇದಕ್ಕಾಗಿ ನಾನು ಕೂಡ ಬದಲಾಗಿದ್ದೇನೆ” ಎಂದರು.

ಇಂತಹದೊಂದು ಪ್ರಶ್ನೆ ಮುಂದಿಡಲು ಮುಖ್ಯ ಕಾರಣ ಈ ಪಂದ್ಯದಲ್ಲಿ ಕೊಹ್ಲಿ ಕೇವಲ 25 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದು. ಅಂದರೆ ಇದೇ ಮೊದಲ ಬಾರಿಗೆ ಕಿಂಗ್ ಕೊಹ್ಲಿ 26 ಕ್ಕಿಂತ ಕಡಿಮೆ ಎಸೆತಗಳಲ್ಲಿ ಹಾಫ್ ಸೆಂಚುರಿ ಸಿಡಿಸಿದ್ದಾರೆ. ಹಾಗೆಯೇ ಈ ಬಾರಿಯ ಐಪಿಎಲ್​ನಲ್ಲಿ ಕೊಹ್ಲಿ ಬ್ಯಾಟ್ ಬೀಸಿರುವುದು 165.84 ಸ್ಟ್ರೈಕ್ ರೇಟ್​ನಲ್ಲಿ. ಇದು ಕಐಪಿಎಲ್ ಇತಿಹಾಸದಲ್ಲೇ ವಿರಾಟ್ ಕೊಹ್ಲಿ ಅವರ ಗರಿಷ್ಠ ಸ್ಟ್ರೈಕ್ ರೇಟ್​ ಎಂಬುದು ವಿಶೇಷ.

ಹೀಗೆ ಈ ಬಾರಿಯ ಐಪಿಎಲ್​ನಲ್ಲಿ ಆಕ್ರಮಣಕಾರಿ ಬ್ಯಾಟಿಂಗ್​ಗೆ ಒತ್ತು ನೀಡಿರುವ ಕೊಹ್ಲಿಗೆ ಇಂತಹದೊಂದು ಬದಲಾವಣೆಗೆ ಕಾರಣವೇನು ಎಂದು ಕೇಳಿದ್ದಾರೆ. ಈ ವೇಳೆ ಯುವ ದಾಂಡಿಗರ ಆರ್ಭಟದ ಮುಂದೆ ಹಾಗೂ ಅವರ ಸವಾಲನ್ನು ಸ್ವೀಕರಿಸಲು ಈ ರೀತಿಯಾಗಿ ಬದಲಾಗಿರುವುದಾಗಿ ಕಿಂಗ್ ಕೊಹ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಪ್ರತಿದಿನ ಎಷ್ಟು ಹಾಲು ಕುಡೀತಿಯಾ? ವೈಭವ್ ಸೂರ್ಯವಂಶಿ ಉತ್ತರ ಹೀಗಿತ್ತು!

ಹೀಗಾಗಿ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲೂ ವಿರಾಟ್ ಕೊಹ್ಲಿ ಕಡೆಯಿಂದ ಭರ್ಜರಿ ಬ್ಯಾಟಿಂಗ್ ನಿರೀಕ್ಷಿಸಬಹುದು. ಅದರಲ್ಲೂ ಈ ಬಾರಿ 165.84ರ ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬಿಸಿರುವ ಕೊಹ್ಲಿ ಮುಂದಿನ ಸೀಸನ್​ನಲ್ಲಿ 170ರ ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿದರೂ ಅಚ್ಚರಿಪಡಬೇಕಿಲ್ಲ.

Source link

ಪಹಲ್ಗಾಮ್ ದಾಳಿ ತನಿಖೆಯಲ್ಲಿ ಮಹತ್ವದ ಸುಳಿವು: ಉಗ್ರರು ಬಳಸಿದ್ದ ಫೋನ್​ಗೆ ಪಾಕಿಸ್ತಾನ ಬ್ಯಾಂಕ್​ ಲಿಂಕ್

ಶ್ರೀನಗರ, ಜೂನ್ 01: ಕಳೆದ ವರ್ಷ ದಕ್ಷಿಣ ಕಾಶ್ಮೀರದ ಪಹಲ್ಗಾಮ್‌(Pahalgam)ನಲ್ಲಿ ನಡೆದ ಭಯೋತ್ಪಾದಕ ದಾಳಿಯ ತನಿಖೆಯನ್ನು ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮತ್ತು ಜಮ್ಮು-ಕಾಶ್ಮೀರ ಪೊಲೀಸರಿಗೆ ಅತ್ಯಂತ ಪ್ರಮುಖ ಸುಳಿವು ಲಭ್ಯವಾಗಿದೆ. ದಾಳಿ ನಡೆಸಿದ ಉಗ್ರರು ಬಳಸಿದ್ದ ಎರಡು ಪ್ರಮುಖ ಮೊಬೈಲ್ ಫೋನ್‌ಗಳ ಮೂಲವನ್ನು ಪತ್ತೆಹಚ್ಚಲಾಗಿದ್ದು, ಅದರಲ್ಲಿ ಒಂದು ಫೋನ್‌ಗೆ ಪಾಕಿಸ್ತಾನದ ಕರಾಚಿ ಮೂಲದ ಪ್ರಮುಖ ಬ್ಯಾಂಕ್‌ವೊಂದು ಹಣಕಾಸು ನೆರವು ನೀಡಿರುವುದು ತನಿಖೆಯಲ್ಲಿ ಬಯಲಾಗಿದೆ . ಈ ಕುರಿತು ಇಂಡಿಯನ್ ಎಕ್ಸ್​ಪ್ರೆಸ್​ ವರದಿ ಮಾಡಿದೆ. ದಾಳಿಕೋರರ ಡಿಜಿಟಲ್ ಹೆಜ್ಜೆಗುರುತುಗಳನ್ನು ಯಶಸ್ವಿಯಾಗಿ ಬೆನ್ನಟ್ಟಿರುವ ಭದ್ರತಾ ಪಡೆಗಳು, ಶತ್ರುಗಳ ಜಾಲವನ್ನು ಭೇದಿಸುವಲ್ಲಿ ದೊಡ್ಡ ಯಶಸ್ಸು ಕಂಡಿವೆ.

ಬ್ಯಾಂಕ್ ಲಿಂಕ್ ಪತ್ತೆಯಾದದ್ದು ಹೇಗೆ?
2025ರ ಜುಲೈ 28ರಂದು ಜಮ್ಮು ಮತ್ತು ಕಾಶ್ಮೀರದ ಡಚಿಗಮ್ ಅರಣ್ಯ ವ್ಯಾಪ್ತಿಯ ಮುಲ್ನಾರ್ ಮಹಾದೇವ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ಉಗ್ರರಾದ ಫೈಸಲ್ ಜಟ್, ಹಬೀಬ್ ತಾಹಿರ್ ಮತ್ತು ಹಮ್ಜಾ ಅಫ್ಘಾನಿಯನ್ನು ಸೇನೆ ಹೊಡೆದುರುಳಿಸಿತ್ತು. ಇವರಿಂದ ವಶಪಡಿಸಿಕೊಳ್ಳಲಾದ ಎರಡು ಶಿಯೋಮಿ (Xiaomi) ರೆಡ್‌ಮಿ ಫೋನ್‌ಗಳ ತಪಾಸಣೆಯಿಂದ ಈ ಕೆಳಗಿನ ಸತ್ಯಗಳು ಹೊರಬಂದಿವೆ:

ಕರಾಚಿಯ ಕನೆಕ್ಷನ್: ಶಿಯೋಮಿ ಗ್ಲೋಬಲ್ ಸಂಸ್ಥೆ ನೀಡಿದ ಮಾಹಿತಿಯ ಪ್ರಕಾರ, ಉಗ್ರರ ಬಳಿಯಿದ್ದ ಒಂದು ‘ರೆಡ್‌ಮಿ 9T’ ಫೋನ್ ಅನ್ನು 2021ರ ಜನವರಿಯಲ್ಲಿ ಪಾಕಿಸ್ತಾನದ ‘ಟೆಕ್ ಸಿರಾಟ್ ಪ್ರೈವೇಟ್ ಲಿಮಿಟೆಡ್’ ಕಂಪನಿಯು ಆಮದು ಮಾಡಿಕೊಂಡಿತ್ತು. ಈ ಆಮದಿಗೆ ಕರಾಚಿಯ ಶಹ್ರಾ-ಇ-ಫೈಸಲ್‌ನಲ್ಲಿರುವ ಪ್ರಮುಖ ಇಸ್ಲಾಮಿಕ್ ಬ್ಯಾಂಕ್ ಆದ ‘ಫೈಸಲ್ ಬ್ಯಾಂಕ್ ಲಿಮಿಟೆಡ್’ ಹಣಕಾಸು ಒದಗಿಸಿತ್ತು.

ಮತ್ತಷ್ಟು ಓದಿ: ಪಾಕಿಸ್ತಾನದಲ್ಲಿ ಕುಳಿತು ಪಹಲ್ಗಾಮ್​ನಲ್ಲಿ ಲಷ್ಕರ್ ಉಗ್ರರು ಭಯೋತ್ಪಾದಕ ದಾಳಿ ನಡೆಸಿದ್ಹೇಗೆ? ಎನ್​ಐಎ ಚಾರ್ಜ್​ಶೀಟ್​​ನಲ್ಲೇನಿದೆ?

ರಹಸ್ಯ ಕಳ್ಳಸಾಗಣೆ: ಈ ಫೋನ್ ಅನ್ನು 2021 ರಲ್ಲಿ ಆಮದು ಮಾಡಿಕೊಂಡಿದ್ದರೂ, ಏಪ್ರಿಲ್ 22, 2025 ರಂದು ಪಹಲ್ಗಾಮ್ ದಾಳಿ ನಡೆಯುವವರೆಗೂ ಒಮ್ಮೆಯೂ ಸ್ವಿಚ್ ಆನ್ ಮಾಡಲಾಗಿರಲಿಲ್ಲ. ಅಂದರೆ, ಲಷ್ಕರ್-ತೊಯ್ಬಾ (LeT) ಉಗ್ರರಿಗೆ ಹಸ್ತಾಂತರಿಸುವ ಉದ್ದೇಶದಿಂದಲೇ ಇದನ್ನು ರಹಸ್ಯವಾಗಿ ಎತ್ತಿಡಲಾಗಿತ್ತು ಎಂಬುದು ಸಾಬೀತಾಗಿದೆ.

ಎರಡನೇ ಫೋನ್: ಉಗ್ರರ ಬಳಿಯಿದ್ದ ಮತ್ತೊಂದು ‘ರೆಡ್‌ಮಿ ನೋಟ್ 12’ ಫೋನ್ ಅನ್ನು ಲಾಹೋರ್‌ನ ‘ಏರ್ ಲಿಂಕ್ ಕಮ್ಯುನಿಕೇಷನ್ಸ್’ ಸಂಸ್ಥೆ ಆಮದು ಮಾಡಿಕೊಂಡಿತ್ತು. ಇದನ್ನು ಸಹ ದಾಳಿಗೆ ಮುನ್ನ ಎಂದೂ ಆನ್ ಮಾಡಿರಲಿಲ್ಲ.

ಈ ಹಿಂದೆಯೂ ಭಯೋತ್ಪಾದನಾ ತನಿಖೆಯಲ್ಲಿದ್ದ ಬ್ಯಾಂಕ್
ಪಹಲ್ಗಾಮ್ ದಾಳಿಯಲ್ಲಿ ಈ ಬ್ಯಾಂಕ್‌ನ ನೇರ ಪಾತ್ರದ ಬಗ್ಗೆ ಪುರಾವೆಗಳಿಲ್ಲದಿದ್ದರೂ, ಜಾಗತಿಕ ಭಯೋತ್ಪಾದನಾ ನಿಧಿಯ ತನಿಖೆಗಳಲ್ಲಿ ಈ ಬ್ಯಾಂಕ್ ಹೆಸರು ಈ ಹಿಂದೆಯೂ ಕೇಳಿಬಂದಿತ್ತು. 9/11 ದಾಳಿಯ ನಂತರ ನ್ಯೂಯಾರ್ಕ್ ಟೈಮ್ಸ್ ವರದಿಯ ಪ್ರಕಾರ, ಭಾರತದ ವಿರುದ್ಧ ಹೋರಾಡುವ ಲಷ್ಕರ್-ಎ-ತೊಯ್ಬಾ(LeT) ಮತ್ತು ಅಲ್-ಖೈದಾ ಒಡನಾಟ ಹೊಂದಿರುವ ಕುವೈತ್ ಮೂಲದ ಲಜ್ನತ್ ಅಲ್-ದವಾ ಸಂಸ್ಥೆಗಳು ಇದೇ ಫೈಸಲ್ ಬ್ಯಾಂಕ್‌ನಲ್ಲಿ ಠೇವಣಿ ಖಾತೆಗಳನ್ನು ಹೊಂದಿದ್ದವು. 2002ರ ವರದಿಗಳ ಪ್ರಕಾರ ಪಾಕಿಸ್ತಾನದ ಎಫ್‌ಐಎ (FIA) ತನಿಖೆ ನಡೆಸಿದಾಗ ಜೈಶ್-ಎ-ಮೊಹಮ್ಮದ್ ಸೇರಿ ಹಲವು ನಿಷೇಧಿತ ಗುಂಪುಗಳು ಇಲ್ಲಿ ಖಾತೆ ಹೊಂದಿದ್ದು ಪತ್ತೆಯಾಗಿತ್ತು.

ರೇಡಿಯೋ ಮತ್ತು ಫೋಟೋಗಳ ಜಪ್ತಿ
ತನಿಖಾಧಿಕಾರಿಗಳ ಪ್ರಕಾರ, ಉಗ್ರರು ಸೆಲ್ಯುಲಾರ್ ನೆಟ್‌ವರ್ಕ್ ಅಥವಾ ಇಂಟರ್ನೆಟ್ ಬಳಸದೆ, ಸುರಕ್ಷಿತವಾಗಿ ಸಂವಹನ ನಡೆಸಲು ‘ಲಾಂಗ್ ರೇಂಜ್ ರೇಡಿಯೋ ಕಮ್ಯುನಿಕೇಷನ್ ತಂತ್ರಜ್ಞಾನ’ ಬಳಸುತ್ತಿದ್ದರು. ಹೀಗಾಗಿ ಫೋನ್‌ಗಳಲ್ಲಿ ಯಾವುದೇ ಕರೆ ಡೇಟಾ ಸಿಕ್ಕಿಲ್ಲ.

ಆದರೆ, ಭದ್ರತಾ ಪಡೆಗಳು ಫೋನ್‌ನಲ್ಲಿದ್ದ ಡಿಜಿಟಲ್ ದತ್ತಾಂಶಗಳನ್ನು ಯಶಸ್ವಿಯಾಗಿ ಮರುಪಡೆದಿದ್ದು (Data Recovery), ಅದರಲ್ಲಿ ಪಹಲ್ಗಾಮ್‌ನ ಬೈಸರನ್ ಕಣಿವೆಯ ನಕ್ಷೆಗಳು ಮತ್ತು ಫೋಟೋಗಳು ಲಭ್ಯವಾಗಿವೆ. ದಾಳಿಗೆ ಮುನ್ನ ಮಾರ್ಚ್ 30, 2025 ರಂದು ಉಗ್ರರು ಎತ್ತರದ ಪ್ರದೇಶದಲ್ಲಿ ಹೂಡಿದ್ದ ರಹಸ್ಯ ಟೆಂಟ್‌ನ ಫೋಟೋ ಕೂಡ ಇದರಲ್ಲಿ ಪತ್ತೆಯಾಗಿದ್ದು, ತನಿಖೆಗೆ ದೊಡ್ಡ ಶಕ್ತಿ ನೀಡಿದೆ. ಶತ್ರುಗಳ ಪ್ರತಿ ನಡೆಯನ್ನು ಭೇದಿಸುತ್ತಿರುವ ತನಿಖಾ ಸಂಸ್ಥೆಗಳ ಈ ಪ್ರಗತಿ ದೇಶದ ಸುರಕ್ಷತೆಯ ದೃಷ್ಟಿಯಿಂದ ಪ್ರಮುಖ ಹೆಜ್ಜೆಯಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link