All posts by nagaraj11081993

‘ಧುರಂಧರ್ 2’ ನೋಡದಿದ್ದರೂ ಚಿತ್ರತಂಡದ ಸಾಧನೆಗೆ ಭೇಷ್ ಎಂದ ಆಮಿರ್ ಖಾನ್

‘ಧುರಂಧರ್ 2’ ನೋಡದಿದ್ದರೂ ಚಿತ್ರತಂಡದ ಸಾಧನೆಗೆ ಭೇಷ್ ಎಂದ ಆಮಿರ್ ಖಾನ್

ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮಿರ್ ಖಾನ್ ಅವರು ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿರುವ ‘ಧುರಂಧರ್: ದಿ ರಿವೆಂಜ್’ (Dhurandhar: The Revenge) ಚಿತ್ರದ ಯಶಸ್ಸನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಪ್ರೇಕ್ಷಕರಿಂದ ಪಡೆಯುತ್ತಿರುವ ಅಭೂತಪೂರ್ವ ಬೆಂಬಲಕ್ಕೆ ಆಮಿರ್ ಖಾನ್ (Aamir Khan) ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಿನಿಮಾದಲ್ಲಿ ರಣವೀರ್ ಸಿಂಗ್, ಸಾರಾ ಅರ್ಜುನ್, ಸಂಜಯ್ ದತ್, ಆರ್. ಮಾಧವನ್, ಅರ್ಜುನ್ ರಾಮ್​ಪಾಲ್, ರಾಕೇಶ್ ಬೇಡಿ ಮುಂತಾದವರು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಅನೇಕ ಸೆಲೆಬ್ರಿಟಿಗಳು ಹೊಗಳುತ್ತಿದ್ದಾರೆ.

ಸುದ್ದಿ ಸಂಸ್ಥೆ ಎಎನ್ಐ ಜೊತೆಗಿನ ಸಂವಾದದಲ್ಲಿ ಮಾತನಾಡಿದ ಆಮಿರ್ ಖಾನ್, ಇತ್ತೀಚಿನ ದಿನಗಳಲ್ಲಿ ಧುರಂಧರ್ ಫ್ರಾಂಚೈಸಿ ಒಂದು ಪ್ರಬಲ ವಾಣಿಜ್ಯ ಶಕ್ತಿಯಾಗಿ ಹೊರಹೊಮ್ಮುತ್ತಿರುವುದನ್ನು ಒಪ್ಪಿಕೊಂಡರು. ವಿಶೇಷವೆಂದರೆ, ಆಮಿರ್ ಅವರು ಈ ಎರಡನೇ ಭಾಗವನ್ನು ಇನ್ನೂ ನೋಡಿಲ್ಲದಿದ್ದರೂ, ಚಿತ್ರದ ಬಗ್ಗೆ ಕೇಳಿಬರುತ್ತಿರುವ ಸಕಾರಾತ್ಮಕ ಪ್ರತಿಕ್ರಿಯೆಗಳು ಅವರಿಗೆ ಸಂತಸ ತಂದಿವೆ.

‘ಧುರಂಧರ್ 2 ಸಿನಿಮಾ ಅದ್ಭುತವಾಗಿ ಪ್ರದರ್ಶನ ಕಾಣುತ್ತಿದೆ ಎಂದು ನಾನು ನಂಬುತ್ತೇನೆ. ನಾನು ಇನ್ನೂ ಚಿತ್ರವನ್ನು ನೋಡಿಲ್ಲ. ಆದರೆ ಎಲ್ಲೆಡೆ ಚಿತ್ರದ ಬಗ್ಗೆ ಕೇವಲ ಪ್ರಶಂಸೆಗಳೇ ಕೇಳಿಬರುತ್ತಿವೆ. ಧುರಂಧರ್ 1 ಮತ್ತು ಈಗ ಧುರಂಧರ್ 2 ಎರಡೂ ಸಿನಿಮಾಗಳು ಅಸಾಧಾರಣ ಯಶಸ್ಸು ಕಂಡಿವೆ. ಚಿತ್ರತಂಡಕ್ಕೆ ನನ್ನ ಕಡೆಯಿಂದ ಆಲ್ ದಿ ಬೆಸ್ಟ್’ ಎಂದು ಆಮೀರ್ ಖಾನ್ ಶುಭ ಹಾರೈಸಿದ್ದಾರೆ.

‘ಧುರಂಧರ್: ದಿ ರಿವೆಂಜ್’ ಚಿತ್ರವು ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಚಿತ್ರದ ರನ್‌ಟೈಮ್ (ಅವಧಿ) ಸ್ವಲ್ಪ ಹೆಚ್ಚಿದ್ದರೂ ಸಹ, ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಸಿನಿಮಾ ಯಶಸ್ವಿಯಾಗಿದೆ ಎಂದು ಟ್ರೇಡ್ ಅನಾಲಿಸ್ಟ್‌ಗಳು ಅಭಿಪ್ರಾಯಪಟ್ಟಿದ್ದಾರೆ. ಮೊದಲ ಭಾಗದ ಜನಪ್ರಿಯತೆ ಎರಡನೇ ಭಾಗಕ್ಕೆ ದೊಡ್ಡ ಮಟ್ಟದ ಮೈಲೇಜ್ ನೀಡಿದೆ.

ಇದನ್ನೂ ಓದಿ: ಶಿವಣ್ಣ ಬೆನ್ನು ತಟ್ಟಿದ್ದಕ್ಕೆ ಖುಷಿಯಾದ ‘ಧುರಂಧರ್ 2’ ನಿರ್ದೇಶಕ ಆದಿತ್ಯ ಧರ್

ಆಮಿರ್ ಖಾನ್ ಅವರ ವೃತ್ತಿಜೀವನದ ಬಗ್ಗೆ ನೋಡುವುದಾದರೆ, ಅವರು ನಿರ್ಮಾಣ ಮಾಡುತ್ತಿರುವ ‘ಲಾಹೋರ್ 1947’ ಸಿನಿಮಾದ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಹೆಚ್ಚಿದೆ. ರಾಜ್‌ಕುಮಾರ್ ಸಂತೋಷಿ ನಿರ್ದೇಶನದ ಈ ಚಿತ್ರವು ಆಗಸ್ಟ್ 13ರಂದು ತೆರೆಕಾಣಲಿದೆ. ಈ ಚಿತ್ರದಲ್ಲಿ ಸನ್ನಿ ಡಿಯೋಲ್, ಶಬಾನಾ ಆಜ್ಮಿ, ಪ್ರೀತಿ ಜಿಂಟಾ, ಅಲಿ ಫಜಲ್ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪುರುಷರಿಗಿಂತ ದುರ್ಬಲರೆಂದು ಭಾವಿಸುತ್ತಾರೆ: ಋತುಚಕ್ರ ರಜೆ ಆದೇಶ ರದ್ದು ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ ಮಹಿಳೆಯರು

ಬೆಂಗಳೂರು, ಮಾರ್ಚ್​ 26: ರಾಜ್ಯ ಸರ್ಕಾರ ಮಹಿಳಾ ನೌಕರರ ಆರೋಗ್ಯ ಮತ್ತು ಕಾರ್ಯದಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಋತುಚಕ್ರ ರಜೆ (Menstrual Leave) ಸೌಲಭ್ಯವನ್ನು ನೀಡಿದೆ. ಈ ಬಗ್ಗೆ ಇತ್ತೀಚೆಗೆ ಸರ್ಕಾರಿ ಪುರುಷ ನೌಕರರು ವಿರೋಧ ವ್ಯಕ್ತಪಡಿಸಿದ್ದರು. ಈ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ಆರ್ಥಿಕ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರದ ಮೂಲಕ ಮನವಿ ಮಾಡಲಾಗಿತ್ತು. ಈ ಬೆನ್ನಲ್ಲೇ ಇದೀಗ ಅಚ್ಚರಿ ಎಂಬಂತೆ ಋತುಚಕ್ರ ರಜೆ ಪ್ರಶ್ನಿಸಿ ವಿವಿಧ ಕಂಪನಿಗಳ ಮಹಿಳಾ ಉದ್ಯೋಗಿಗಳಿಂದಲೇ ಹೈಕೋರ್ಟ್‌ಗೆ (High Court) ರಿಟ್ ಅರ್ಜಿ ಸಲ್ಲಿಸಲಾಗಿದ್ದು, ಆದೇಶ ರದ್ದುಪಡಿಸುವಂತೆ ಮನವಿ ಮಾಡಲಾಗಿದೆ.

ಋತುಚಕ್ರದ ಕಾರಣಕ್ಕೆ ಕಡ್ಡಾಯ ರಜೆ ಅಗತ್ಯ

ಕಡ್ಡಾಯ ಋತುಚಕ್ರ ರಜೆ ಆದೇಶ ರದ್ದುಪಡಿಸುವಂತೆ ಶ್ರೀಮತಿ ವರ್ಷಾ ಸೇರಿ ವಿವಿಧ ಕಂಪನಿಗಳ 17 ಮಹಿಳೆಯರಿಂದ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಕೆ ಮಾಡಲಾಗಿದೆ. ರಾಜ್ಯ ಸರ್ಕಾರದ ಆದೇಶ ಸಮಾನತೆ ಹಕ್ಕಿಗೆ ವಿರುದ್ಧವಾಗಿದೆ. ಮಹಿಳಾ ಉದ್ಯೋಗಿಗಳ ನೇಮಕಕ್ಕೆ ಕಂಪನಿಗಳು ಹಿಂದೇಟು ಹಾಕುತ್ತಾರೆ. ಮಹಿಳೆಯರು ಪುರುಷರಿಗಿಂತ ದುರ್ಬಲರೆಂದು ಭಾವಿಸುತ್ತಾರೆ. ಹೀಗಾಗಿ ಋತುಚಕ್ರದ ಕಾರಣಕ್ಕೆ ಕಡ್ಡಾಯ ರಜೆ ನೀಡುವ ಅಗತ್ಯವಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಋತುಚಕ್ರ ರಜೆಗೆ ಪುರುಷ ನೌಕರರ ವಿರೋಧ, ಮರು ಪರಿಶೀಲನೆಗಾಗಿ ಸರ್ಕಾರಕ್ಕೆ ಪತ್ರ: ಇದಕ್ಕಿದೆ ಹಲವು ಕಾರಣ!

ಸರ್ಕಾರದ ಕ್ರಮ ಲಿಂಗ ತಾರತಮ್ಯಗೆ ಎಡೆ ಮಾಡಿಕೊಡುತ್ತದೆ. ಪ್ರತಿ ಮಹಿಳೆಗೂ ಋತುಚಕ್ರ ರಜೆ ಬೇಕೆಂದು ಸರ್ಕಾರ ಊಹೆ ಮಾಡಿದೆ. ನೀತಿ ರೂಪಿಸುವಾಗ ಸರ್ಕಾರ ಮಹಿಳೆಯರ ಅಭಿಪ್ರಾಯ ಪಡೆದಿಲ್ಲ. ಕಡ್ಡಾಯ ರಜೆಯಿಂದ ಸ್ಪರ್ಧಾತ್ಮಕ ವೃತ್ತಿಜೀವನದಲ್ಲಿ ಮಹಿಳೆಯರಿಗೆ ಹಿನ್ನಡೆ ಉಂಟಾಗಲಿದೆ.

ಇದನ್ನೂ ಓದಿ: ಋತುಚಕ್ರ ರಜೆ ಆದೇಶಕ್ಕೆ ನೀಡಿದ್ದ ತಡೆಯಾಜ್ಞೆಗೆ ತಾತ್ಕಾಲಿಕ ಮಾರ್ಪಾಡು ಮಾಡಿದ ಹೈಕೋರ್ಟ್

ಉದ್ಯೋಗದಾತರಿಗೆ ಹೊರೆ ಹೆಚ್ಚುತ್ತದೆ ಮತ್ತು ದಕ್ಷತೆ ಕಡಿಮೆಯಾಗುತ್ತದೆ. ಮಹಿಳೆಯರ ಸಬಲೀಕರಣಕ್ಕೂ ಋತುಚಕ್ರ ರಜೆ ಅಡ್ಡಿಯಾಗುತ್ತದೆ. ಹೀಗಾಗಿ ಕಡ್ಡಾಯ ಋತುಚಕ್ರ ರಜೆ ಆದೇಶ ರದ್ದುಪಡಿಸುವಂತೆ ಹೈಕೋರ್ಟ್‌ಗೆ ಮನವಿ ಮಾಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ತೆಲುಗು ಚಿತ್ರರಂಗಕ್ಕೆ ಗುಡ್ ಬೈ ಹೇಳಿದ ರಾಮ್ ಗೋಪಾಲ್ ವರ್ಮಾ

ರಾಮ್ ಗೋಪಾಲ್ ವರ್ಮಾ (Ram Gopal Varma) ಒಂದು ಕಾಲದ ಭಾರತದ ಸ್ಟಾರ್ ಸಿನಿಮಾ ನಿರ್ದೇಶಕ. ಸಿನಿಮಾ ನಿರ್ದೇಶನದಲ್ಲಿ ಹೊಸ ಮಾದರಿ ಹಾಕಿಕೊಟ್ಟ ನಿರ್ದೇಶಕ. ರಾಮ್ ಗೋಪಾಲ್ ವರ್ಮಾ ಹಾದಿ ಹಿಡಿದು ಬಂದ ಹಲವರು ಇಂದು ಸ್ಟಾರ್ ನಿರ್ದೇಶಕರುಗಳಾಗಿದ್ದಾರೆ. ಆದರೆ ಕಳೆದ ಕೆಲ ವರ್ಷಗಳಿಂದ ರಾಮ ಗೋಪಾಲ್ ವರ್ಮಾ ಸಿನಿಮಾಗಳಿಗಿಂತಲೂ ವಿವಾದಗಳಿಂದ, ಟ್ವೀಟ್​​ಗಳಿಂದ, ಸಂದರ್ಶನಗಳಿಂದ ಮಾತ್ರವೇ ಸದ್ದು, ಸುದ್ದಿ ಮಾಡುತ್ತಿದ್ದಾರೆ. ಆದರೆ ಇದೀಗ ವರ್ಮಾ, ಹೊಸ ಘೋಷಣೆ ಮಾಡಿದ್ದು, ತಾವು ತೆಲುಗು ಚಿತ್ರರಂಗವನ್ನು ತ್ಯಜಿಸುತ್ತಿರುವುದಾಗಿ ಘೋಷಿಸಿದ್ದಾರೆ.

ಗಲಾಟ ಪ್ಲಸ್ ಯೂಟ್ಯೂಬ್ ಚಾನೆಲ್ಲಿನ ಸಂದರ್ಶನಗಳಲ್ಲಿ ಈ ಬಗ್ಗೆ ಮಾತನಾಡಿರುವ ರಾಮ್ ಗೋಪಾಲ್ ವರ್ಮಾ, ಆದಿತ್ಯ ಧರ್ ನಿರ್ದೇಶನದ ‘ಧುರಂಧರ್ 2’ ಚಿತ್ರವು ಬಿಡುಗಡೆಯಾದ ನಂತರ ತಮ್ಮ ಆಲೋಚನಾ ಕ್ರಮವೇ ಬದಲಾಗಿದೆ ಎಂದಿದ್ದಾರೆ. ಈ ಚಿತ್ರದ ಮೇಕಿಂಗ್ ಮತ್ತು ರಿಯಲಿಸ್ಟಿಕ್ ಶೈಲಿಯನ್ನು ಕಂಡು ಬೆರಗಾಗಿರುವ ಅವರು, ‘ಈ ಚಿತ್ರವು ಭಾರತೀಯ ಚಿತ್ರರಂಗದ ಹಳೆಯ ಸೂತ್ರಗಳನ್ನು ಧೂಳೀಪಟ ಮಾಡಿದೆ’ ಎಂದು ಬಣ್ಣಿಸಿದ್ದಾರೆ.

ಅತಿರಂಜಿತ ಆಕ್ಷನ್, ಅತಿಯಾದ ಹೀರೋಗಿರಿ ಇರುವ ಸಿನಿಮಾಗಳ ಕಾಲ ಮುಗಿದಿದೆ ಎಂದು ಆರ್​​ಜಿವಿ ಅಭಿಪ್ರಾಯ ಪಟ್ಟಿದ್ದು, ‘ನಾನು ಈ ಹಿಂದೆ ಮಾಡಿದ ‘ಗಾಡ್ ಫಾದರ್’ ಮಾದರಿಯ ಸಿನಿಮಾಗಳು ಈಗ ಈ ಹೊಸ ತಲೆಮಾರಿನ ಸಿನಿಮಾಗಳ ಮುಂದೆ ಮಂಕಾಗಿ ಕಾಣುತ್ತಿವೆ’ ಎಂದು ಅವರು ಒಪ್ಪಿಕೊಂಡಿದ್ದಾರೆ. “ನಾನು ಈ ಹಿಂದೆ ಮಾಡಿದ ಸಿನಿಮಾಗಳನ್ನೆಲ್ಲಾ ಮರೆತು, ಧುರಂಧರ್ ನಂತರದ ಕಾಲಘಟ್ಟಕ್ಕೆ ತಕ್ಕಂತೆ ಹೊಸದಾಗಿ ಹುಟ್ಟಿದ ನಿರ್ದೇಶಕನಂತೆ ಕೆಲಸ ಮಾಡಲು ಬಯಸುತ್ತೇನೆ” ಎಂದಿದ್ದಾರೆ. ಅವರ ಪ್ರಕಾರ, ಈಗಿನ ಪ್ರೇಕ್ಷಕರು ಬುದ್ಧಿವಂತರಾಗಿದ್ದು, ಅವರಿಗೆ ಹಳೆಯ ಮಾದರಿಯ ಸಿನಿಮಾಗಳು ಇಷ್ಟವಾಗುವುದಿಲ್ಲ ಎಂದಿದ್ದಾರೆ.

ಇದನ್ನೂ ಓದಿ:‘ಧುರಂಧರ್ 2‘, ‘ಕೆಜಿಎಫ್ 2’ ಚಿತ್ರ ಟೀಕಿಸಿದ ಬಾಲಿವುಡ್ ನಟ

ಅದೇ ಸಂದರ್ಶನದಲ್ಲಿ ಮುಂದೆ ಮಾತನಾಡುತ್ತಾ, ತಾವು ಇನ್ನು ಮುಂದೆ ತೆಲುಗು ಸಿನಿಮಾಗಳನ್ನು ಮಾಡುವುದಿಲ್ಲ ಎಂದಿರುವ ಆರ್​​ಜಿವಿ, ಇದೇ ಕಾರಣಕ್ಕೆ ಹೈದರಾಬಾದ್ ಬಿಟ್ಟು ಮುಂಬೈಗೆ ಬಂದಿರುವುದಾಗಿ ಹೇಳಿದ್ದಾರೆ. ಆರ್​​ಜಿವಿ ಅವರು ಪ್ರಸ್ತುತ ಸಿದ್ಧಪಡಿಸುತ್ತಿರುವ ‘ಸಿಂಡಿಕೇಟ್’ ಹೆಸರಿನ ಸಿನಿಮಾ ನಿರ್ದೇಶನ ಮಾಡುವ ಉಮೇದಿನಲ್ಲಿದ್ದು, ಇದು ಜಾಗತಿಕ ಮಟ್ಟದ ಕಥಾಹಂದರ ಹೊಂದಿದ್ದು, ಅದನ್ನು ಹಿಂದಿ ಮತ್ತು ಅಂತರಾಷ್ಟ್ರೀಯ ಗುಣಮಟ್ಟದಲ್ಲಿ ರೂಪಿಸಲು ಅವರು ನಿರ್ಧರಿಸಿದ್ದಾರೆ. ಇದೇ ಕಾರಣಕ್ಕೆ ಅವರು ಹೈದರಾಬಾದ್​​ನಿಂದ ಮುಂಬೈಗೆ ವಾಸ್ತವ್ಯ ಬದಲಾಯಿಸಿದ್ದಾರಂತೆ.

ತಮ್ಮದೇ ಆದ ಹಳೆಯ ಹಿಟ್ ಚಿತ್ರಗಳು ಈಗಿನ ‘ಧುರಂಧರ್’ ಅಂತಹ ಸಿನಿಮಾಗಳ ಮುಂದೆ ಟಿವಿ ಸೀರಿಯಲ್‌ನಂತೆ ಕಾಣುತ್ತವೆ ಎಂದು ಅವರು ನೇರವಾಗಿ ಹೇಳಿದ್ದು, ತಮ್ಮ ಸಂಪೂರ್ಣ ಗಮನ ಈಗ ‘ಸಿಂಡಿಕೇಟ್’ ಸಿನಿಮಾ ಮಾಡುವುದರ ಮೇಲಿದೆ ಎಂದಿದ್ದಾರೆ ರಾಮ್ ಗೋಪಾಲ್ ವರ್ಮಾ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ವಂದೇ ಭಾರತ್ ರೈಲಿನ ಊಟದಲ್ಲಿ ಹುಳುಗಳು ಪತ್ತೆ; ಅಡುಗೆ ಕಂಪನಿಗೆ 50 ಲಕ್ಷ ರೂ. ದಂಡ

ನವದೆಹಲಿ, ಮಾರ್ಚ್ 26: ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ (Vande Bharat Express) ನೀಡಲಾದ ಊಟದಲ್ಲಿ ಮೊಸರಿನಲ್ಲಿ ಹುಳುಗಳು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ಐಆರ್‌ಸಿಟಿಸಿಗೆ 10 ಲಕ್ಷ ರೂ. ದಂಡ ವಿಧಿಸಿದೆ. ಹಾಗೇ, ಅಡುಗೆ ಒದಗಿಸುವವರಿಗೆ 50 ಲಕ್ಷ ರೂ. ದಂಡ ವಿಧಿಸಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿರುವ ಮೊಸರಿನಲ್ಲಿ ಹುಳುಗಳು ಕಂಡುಬಂದಿವೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ ಸಚಿವಾಲಯ ಕಠಿಣ ಕ್ರಮ ಕೈಗೊಂಡಿದೆ. IRCTCಗೆ 1 ಮಿಲಿಯನ್ (10 ಲಕ್ಷ) ಮತ್ತು ಅಡುಗೆ ಕಂಪನಿಗೆ 5 ಮಿಲಿಯನ್ (50 ಲಕ್ಷ) ದಂಡ ವಿಧಿಸಿದೆ.

ಮಾರ್ಚ್ 15ರಂದು ಪಾಟ್ನಾ-ಟಾಟಾನಗರ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ರಿತೇಶ್ ಕುಮಾರ್ ಸಿಂಗ್ ಅವರಿಗೆ ಊಟ ನೀಡಿದ ಸ್ವಲ್ಪ ಸಮಯದ ನಂತರ ಅವರು ತಮ್ಮ ಊಟದಲ್ಲಿ ಹುಳುಗಳಿವೆ ಎಂದು ಆರೋಪ ಮಾಡಿದ್ದರು. ಅಕ್ಕಪಕ್ಕದ ಸೀಟಿನವರು ಈ ಘಟನೆಯನ್ನು ಮೊಬೈಲಿನಲ್ಲಿ ರೆಕಾರ್ಡ್ ಮಾಡಿದ್ದರು. ಮೊಸರಿನ ಬಾಕ್ಸ್​ನಿಂದ ಹುಳುಗಳು ಹರಿದಾಡಿ ರಿತೇಶ್ ಸಿಂಗ್ ಅವರ ಪ್ಲೇಟಿನಲ್ಲೂ ಬಿದ್ದಿದ್ದನ್ನು ವಿಡಿಯೋದಲ್ಲಿ ತೋರಿಸಲಾಗಿತ್ತು. ಈ ವಿಡಿಯೋ ವೈರಲ್ ಆಗಿ ರೈಲ್ವೆ ಇಲಾಖೆ ನೀಡುವ ಆಹಾರದ ಗುಣಮಟ್ಟದ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

ಇದನ್ನೂ ಓದಿ: Vande Bharat Sleeper: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿನ ವಿಶೇಷತೆ, ಟಿಕೆಟ್ ದರ ಏನು?

ಈ ಘಟನೆಯ ಬಗ್ಗೆ ದೂರು ಸ್ವೀಕರಿಸಿದ ಕೂಡಲೇ ರೈಲ್ವೆ ಇಲಾಖೆ ತಕ್ಷಣ ಕ್ರಮ ಕೈಗೊಂಡು, ಅಡುಗೆ ಕಂಪನಿಯ ಒಪ್ಪಂದವನ್ನು ರದ್ದುಗೊಳಿಸಿ 5 ಮಿಲಿಯನ್ ದಂಡ ವಿಧಿಸಿತು. ಐಆರ್‌ಸಿಟಿಸಿಗೂ 1 ಮಿಲಿಯನ್ ದಂಡ ವಿಧಿಸಲಾಗಿದೆ. ಈ ಬಗ್ಗೆ ರೈಲ್ವೆ ಇಲಾಖೆ ಎಕ್ಸ್​ನಲ್ಲಿ ಪೋಸ್ಟ್ ಮಾಡಿದೆ.

“ಮಾರ್ಚ್ 15, 2026ರಂದು ರೈಲು ಸಂಖ್ಯೆ 21896 (ಪಾಟ್ನಾ-ಟಾಟಾನಗರ ವಂದೇ ಭಾರತ್ ಎಕ್ಸ್‌ಪ್ರೆಸ್)ರಲ್ಲಿ ನೀಡಲಾದ ಆಹಾರದ ಗುಣಮಟ್ಟದ ಕುರಿತು ಬಂದ ದೂರನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳಲಾಗಿದ್ದು, IRCTCಗೆ 10 ಲಕ್ಷ ರೂ. ಮತ್ತು ಅಡುಗೆ ಒದಗಿಸುವವರಿಗೆ 50 ಲಕ್ಷ ರೂ. ದಂಡ ವಿಧಿಸಲಾಗಿದೆ. ಅವರ ಒಪ್ಪಂದವನ್ನು ರದ್ದುಗೊಳಿಸಲು ಸಹ ಆದೇಶಿಸಲಾಗಿದೆ. ಪ್ರಯಾಣಿಕರ ಸುರಕ್ಷತೆ ಮತ್ತು ಗುಣಮಟ್ಟ ನಮ್ಮ ಪ್ರಮುಖ ಆದ್ಯತೆಗಳು” ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ: ಕರ್ನಾಟಕ ರೈಲ್ವೆ ಪ್ರಯಾಣಿಕರಿಗೆ ಗುಡ್‌ ನ್ಯೂಸ್! ಯಶವಂತಪುರ-ತಾಳಗುಪ್ಪ ಸೇರಿದಂತೆ ಇನ್ನು ಮುಂದೆ 19 ವಿಶೇಷ ರೈಲುಗಳ ಖಾಯಂ ಸೇವೆ

ಭಾರತೀಯ ರೈಲ್ವೆ ವಕ್ತಾರರು ಕೂಡ ಈ ವಿಷಯವನ್ನು ಹಗುರವಾಗಿ ಪರಿಗಣಿಸುವುದಿಲ್ಲ ಎಂದು ಹೇಳಿದ್ದಾರೆ. ಗುಣಮಟ್ಟದ ಸೇವೆಯನ್ನು ಕಾಪಾಡಿಕೊಳ್ಳುವುದು ನಮ್ಮ ಆದ್ಯತೆಯಾಗಿದೆ. ಅದರಲ್ಲೂ ವಿಶೇಷವಾಗಿ ವಂದೇ ಭಾರತ್‌ನಂತಹ ಪ್ರೀಮಿಯಂ ರೈಲುಗಳಲ್ಲಿ ಪ್ರಯಾಣಿಕರು ಉತ್ತಮ ಸೌಲಭ್ಯಗಳನ್ನು ನಿರೀಕ್ಷಿಸುವುದರಿಂದ ಉತ್ತಮ ಗುಣಮಟ್ಟದ ಸೇವೆ ಮತ್ತು ಶುಚಿತ್ವವನ್ನು ಒದಗಿಸಲು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಮಾಲಕಿಯ ಮೊಬೈಲ್ ಯಾರು ಮುಟ್ಟದಂತೆ ಕಾವಲಿಗೆ ನಿಂತ ಶ್ವಾನ

ಶ್ವಾನಗಳ (Dog) ನಿಷ್ಕಲ್ಮಶ ಪ್ರೀತಿ, ನಿಷ್ಠೆಗೆ ಸರಿಸಾಟಿ ಇಲ್ಲ. ಮನೆಯ ಸದಸ್ಯರಂತೆ ಇರುವ ಶ್ವಾನ ಮನೆಯ ಮಾಲೀಕರಿಗೆ (owner) ನಿಷ್ಠಾವಂತರಾಗಿರುತ್ತದೆ. ಮನೆಯವರ ಮಾತನ್ನು ಚಾಚು ತಪ್ಪದ್ದಂತೆ ಕೇಳುತ್ತದೆ. ಇದೀಗ ಈ ಮನೆ ಮಾಲಕಿ ಹೇಳಿದ ಮಾತನ್ನು ಚಾಚು ತಪ್ಪದ್ದಂತೆ ಈ ಶ್ವಾನವು ಪಾಲಿಸಿದೆ. ಮಾಲಕಿಯ ಮೊಬೈಲ್‌ ಯಾರು ಮುಟ್ಟದಂತೆ ಕಾವಲಿಗೆ ನಿಂತಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಈ ಶ್ವಾನದ ಕರ್ತವ್ಯ ನಿಷ್ಠೆಯನ್ನು ಮೆಚ್ಚಿಕೊಂಡಿದ್ದಾರೆ.

Rashmi Prajapati ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಶ್ವಾನದ ಸ್ವಾಮಿ ನಿಷ್ಠೆಯನ್ನು ಕಾಣಬಹುದು. ಶ್ವಾನವು ಮನೆ ಮಾಲಕಿಯ ಮೊಬೈಲ್ ಯಾರು ಮುಟ್ಟದಂತೆ ಕಾವಲಿಗೆ ನಿಂತಿರುವುದನ್ನು ನೀವು ಕಾಣಬಹುದು. ಮನೆ ಮಾಲಕಿಯ ಮಗಳು ಮೊಬೈಲ್ ಮುಟ್ಟಲು ಪ್ರಯತ್ನಿಸುತ್ತಿದ್ದಂತೆ ಜೋರಾಗಿ ಬೊಗಳಿ ಇಲ್ಲಿಂದ ಹೋಗುವಂತೆ ವಾರ್ನಿಂಗ್ ಕೊಟ್ಟಿರುವುದನ್ನು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಕಾಲೆರಡು ಸ್ವಾಧೀನ ಕಳೆದುಕೊಂಡ ಶ್ವಾನಕ್ಕೆ ರಸ್ತೆ ದಾಟಲು ನೆರವಾದ ವ್ಯಕ್ತಿ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಕಂಡಿದ್ದು, ಒಬ್ಬ ಬಳಕೆದಾರ ಮೊಬೈಲ್ ಮುಟ್ಟಲು ಹೋಗಿ ನಾಯಿ ಕೈಯಲ್ಲಿ ಕಚ್ಚಿಸಿಕೊಳ್ಳುತ್ತೀರಾ ಜೋಕೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ಇದು ಸರಿಯಾದ ಮಾರ್ಗವಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಆಹಾರ ಹಾಕಿ ಅದರ ಗಮನ ಬೇರೆಡೆ ಹರಿಸಿ ಮೊಬೈಲ್ ತೆಗೆದುಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತುಟಿಯಲ್ಲಿ ಬೀಡಿ, ಬೆನ್ನಲ್ಲಿ ಬ್ಯಾಗ್, ಕೈ ನೋಡುತ್ತಾ 2 ಗಂಟೆ ನಿಂತಲ್ಲೇ ನಿಂತ ಬ್ಲಿಂಕಿಟ್ ಡೆಲಿವರಿ ಏಜೆಂಟ್

ಚಂಡೀಗಢ, ಮಾರ್ಚ್​ 26: ಬ್ಲಿಂಕಿಟ್ ಡೆಲಿವರಿ ಏಜೆಂಟ್ ಡ್ರೆಗ್ ಮತ್ತಿನಲ್ಲಿ ಎರಡು ಗಂಟೆಗಳ ಕಾಲ ತುಟಿಯಲ್ಲಿ ಬೀಡಿ, ಬೆನ್ನಲ್ಲಿ ಬ್ಯಾಗ್ ಹಾಕಿಕೊಂಡು ಕೈ ನೋಡುತ್ತಾ ನಿಂತಲ್ಲೇ ನಿಂತಿದ್ದ. ನಿವಾಸಿಗಳು ಆತನನ್ನು ಗಮನಿಸಿ ಆತಂಕಗೊಂಡಿದ್ದರು. ಬಳಿಕ ಪೊಲೀಸರಿಗೆ ಕರೆ ಮಾಡಿದ್ದರು. ಸುತ್ತಲು ಏನು ನಡೆಯುತ್ತಿದೆ ಎನ್ನುವ ಪರಿವೇ ಆತನಿಗಿರಲಿಲ್ಲ. ಬಳಿಕ ಪೊಲೀಸರು ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.ಗಡಿಯಿಂದ ಝೊಂಬಿ ಡ್ರಗ್ ಬಂದಿರಬಹುದು ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.ಭಾರತದ ವೇಗವಾಗಿ ಬೆಳೆಯುತ್ತಿರುವ ಗಿಗ್ ಆರ್ಥಿಕತೆಯಲ್ಲಿ ವಿತರಣಾ ಕಾರ್ಮಿಕರು ಎದುರಿಸುತ್ತಿರುವ ಒತ್ತಡಗಳ ಕುರಿತು ಈ ಘಟನೆಯು ಮತ್ತೆ ಚರ್ಚೆಗೆ ಗ್ರಾಸವಾಗಿದೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಶಿವಣ್ಣ ಬೆನ್ನು ತಟ್ಟಿದ್ದಕ್ಕೆ ಖುಷಿಯಾದ ‘ಧುರಂಧರ್ 2’ ನಿರ್ದೇಶಕ ಆದಿತ್ಯ ಧರ್

‘ಧುರಂಧರ್ 2’ (Dhurandhar 2) ಸಿನಿಮಾ ವಿಶ್ವಾದ್ಯಂತ ಸಾವಿರಾರು ಕೋಟಿ ರೂಪಾಯಿ ಗಳಿಸಿ ಮುನ್ನುಗ್ಗುತ್ತಿದೆ. ಈ ಸಿನಿಮಾ ನೋಡಿರುವ ಶಿವರಾಜ್​ಕುಮಾರ್ (Shivarajkumar) ಅವರು ಮೆಚ್ಚಿಕೊಂಡಿದ್ದಾರೆ. ಎಕ್ಸ್ (ಟ್ವಿಟರ್) ಮೂಲಕ ಶಿವಣ್ಣ ಅವರು ತಮ್ಮ ವಿಮರ್ಶೆ ತಿಳಿಸಿದ್ದಾರೆ. ರಣವೀರ್ ಸಿಂಗ್ ಅವರ ನಟನೆ, ಆದಿತ್ಯ ಧರ್ ಅವರ ನಿರ್ದೇಶನಕ್ಕೆ ಶಿವಣ್ಣ ಭೇಷ್ ಎಂದಿದ್ದಾರೆ. ಇದರಿಂದಾಗಿ ‘ಧುರಂಧರ್ 2’ ಚಿತ್ರತಂಡಕ್ಕೆ ಬಲ ಹೆಚ್ಚಿದಂತಾಗಿದೆ. ಶಿವರಾಜ್​ಕುಮಾರ್ ಅವರ ವಿಮರ್ಶೆಗೆ ಆದಿತ್ಯ ಧರ್ (Aditya Dhar) ಪ್ರತಿಕ್ರಿಯೆ ನೀಡಿದ್ದಾರೆ.

‘ನಿಮ್ಮ ಈ ಮಾತುಗಳಿಗೆ ಧನ್ಯವಾದಗಳು ಸರ್. ನಿಮ್ಮಿಂದ ಈ ಮೆಚ್ಚುಗೆ ಬರುತ್ತಿರುವುದು ನಿಜಕ್ಕೂ ಬಹಳಷ್ಟು ಅರ್ಥಪೂರ್ಣವಾಗಿದೆ. ಪ್ರಾಮಾಣಿಕತೆ ಮತ್ತು ದೃಢನಿಶ್ಚಯದಿಂದ ಕಥೆಗಳನ್ನು ಹೇಳುವುದನ್ನು ಮುಂದುವರಿಸಲು ನಿಮ್ಮ ಬೆಂಬಲವು ನಮಗೆ ಪ್ರೋತ್ಸಾಹ ನೀಡುತ್ತದೆ. ನಿಮ್ಮ ಪ್ರೀತಿಗೆ ಧನ್ಯವಾದಗಳು’ ಎಂದು ಆದಿತ್ಯ ಧರ್ ಅವರು ಟ್ವೀಟ್ ಮಾಡಿದ್ದಾರೆ.

ಶಿವಣ್ಣ ಹೇಳಿದ್ದೇನು?

‘ಧುರಂಧರ್: ದಿ ರಿವೇಂಜ್’ ಸಿನಿಮಾ ಬಹಳ ಚೆನ್ನಾಗಿದೆ. ಈ ಸಿನಿಮಾದಲ್ಲಿನ ಪ್ರತಿಯೊಂದು ಅಂಶ ಕೂಡ ಇಷ್ಟ ಆಯಿತು. ರಣವೀರ್ ಸಿಂಗ್ ಬ್ರಿಲಿಯಂಟ್. ಹಳೇ ಸಾಂಗ್ ಬಳಸಿಕೊಂಡಿರುವ ಸಂಗೀತ ನಿರ್ದೇಶಕ ಶಾಶ್ವತ್ ಸಚ್​ದೇವ್ ಅವರ ಕೆಲಸ ಪರಿಣಾಮಕಾರಿ ಆಗಿದೆ. ನಿರ್ದೇಶಕ ಆದಿತ್ಯ ಧರ್ ಅವರ ಕೆಲಸಕ್ಕೆ ಗೌರವ ಸಲ್ಲಬೇಕು. ಸೈನಿಕನ ದೇಶಭಕ್ತಿಯೇ ಈ ಸಿನಿಮಾದ ಜೀವಾಳ. ಇಡೀ ಧುರಂಧರ್ 2 ಚಿತ್ರತಂಡಕ್ಕೆ ಅಭಿನಂದನೆಗಳು’ ಎಂದು ಶಿವರಾಜ್​ಕುಮಾರ್ ಅವರು ಮೆಚ್ಚುಗೆ ಸೂಚಿಸಿದ್ದಾರೆ.

ಈ ಹಿಂದೆ ‘ಧುರಂಧರ್’ ಮೊದಲ ಭಾಗವನ್ನು ವೀಕ್ಷಿಸಿದ್ದಾಗಲೂ ಶಿವರಾಜ್​ಕುಮಾರ್ ಅವರು ಹೊಗಳಿದ್ದರು. ‘ರಣವೀರ್ ಸಿಂಗ್ ಅವರು ಮಾಡಿದ ಪಾತ್ರ ಸುಲಭವಲ್ಲ. ಅದನ್ನು ಅವರು ಬಹಳ ಬ್ರಿಲಿಯಂಟ್ ಆಗಿ ನಿಭಾಯಿಸಿದ್ದಾರೆ’ ಎಂದು ಶಿವರಾಜ್​ಕುಮಾರ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಮುಂಬೈನಲ್ಲಿ ನಡೆದ ‘45’ ಸಿನಿಮಾದ ಸುದ್ದಿಗೋಷ್ಠಿ ವೇಳೆ ಅವರು ಈ ಮಾತು ಹೇಳಿದ್ದರು.

ಇದನ್ನೂ ಓದಿ: ‘ನಮ್ಮದು ಧುರಂಧರ್ ರೀತಿ ವಯಸ್ಕರ ಸಿನಿಮಾ ಅಲ್ಲ’: ಅಕ್ಷಯ್ ಕುಮಾರ್ ಹೀಗೆ ಹೇಳಿದ್ದು ಯಾಕೆ?

ರಣವೀರ್ ಸಿಂಗ್ ಜತೆ ‘ಧುರಂಧರ್ 2’ ಸಿನಿಮಾದಲ್ಲಿ ಸಾರಾ ಅರ್ಜುನ್, ಸಂಜಯ್ ದತ್, ಅರ್ಜುನ್ ರಾಮ್​ಪಾಲ್, ಕಬೀರ್ ಬೇಡಿ, ಆರ್. ಮಾಧವನ್ ಮುಂತಾದವರು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ರಿಷಬ್ ಶೆಟ್ಟಿ, ರಜನಿಕಾಂತ್, ಅಲ್ಲು ಅರ್ಜುನ್, ಮಹೇಶ್ ಬಾಬು, ರಾಮ್ ಚರಣ್, ರಾಜಮೌಳಿ ಮುಂತಾದ ಸೆಲೆಬ್ರಿಟಿಗಳು ಈ ಸಿನಿಮಾ ನೋಡಿ ಹೊಗಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

17 ನಗರ, 22 ಪಂದ್ಯಗಳು; ಟೀಂ ಇಂಡಿಯಾದ ತವರು ಸರಣಿಗಳ ವೇಳಾಪಟ್ಟಿ ಪ್ರಕಟ

19ನೇ ಆವೃತ್ತಿಯ ಐಪಿಎಲ್ (IPL 2026) ಇದೇ ಮಾರ್ಚ್​ 28 ರಿಂದ ಪ್ರಾರಂಭವಾಗುತ್ತಿದೆ. ಈ ಲೀಗ್​ಗೆ ಬಿಸಿಸಿಐ (BCCI) ಕೂಡ ಸರ್ವ ತಯಾರಿಯನ್ನು ಮಾಡಿಕೊಂಡಿದೆ. ಇತ್ತ ಎಲ್ಲಾ ಫ್ರಾಂಚೈಸಿಗಳು ತಮ್ಮ ತಮ್ಮ ಸಿದ್ಧತೆಗಳನ್ನು ಅಂತಿಮಗೊಳಿಸಿಕೊಂಡಿವೆ. ಟೂರ್ನಿಯ ಮೊದಲ ಪಂದ್ಯ ಹಾಲಿ ಚಾಂಪಿಯನ್ ಆರ್​ಸಿಬಿ ಹಾಗೂ ಸನ್‌ರೈಸರ್ಸ್ ಹೈದರಾಬಾದ್ (RCB vs SRH) ನಡುವೆ ನಡೆಯಲಿದೆ. ಇದೆಲ್ಲದರ ನಡುವೆ ಬಿಸಿಸಿಐ, ಟೀಂ ಇಂಡಿಯಾದ ತವರು ಸರಣಿಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ.

2026-27ರ ಕ್ರೀಡಾ ಕ್ಯಾಲೆಂಡರ್​ನಲ್ಲಿ ಭಾರತ ಪುರುಷರ ತಂಡ ತನ್ನ ತವರಿನಲ್ಲಿ ಆಡಲಿರುವ ಅಂತಾರಾಷ್ಟ್ರೀಯ ಪಂದ್ಯಗಳ ವೇಳಾಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದೆ. ಈ ವೇಳಾಪಟ್ಟಿಯ ಪ್ರಕಾರ ನಾಲ್ಕು ಬಲಿಷ್ಠ ತಂಡಗಳು ಭಾರತಕ್ಕೆ ಬರಲಿವೆ. ಅವುಗಳಲ್ಲಿ ವೆಸ್ಟ್ ಇಂಡೀಸ್, ಶ್ರೀಲಂಕಾ, ಜಿಂಬಾಬ್ವೆ ಮತ್ತು ಆಸ್ಟ್ರೇಲಿಯಾ ತಂಡಗಳು ಸೇರಿದ್ದು, ಈ ತಂಡಗಳು ಭಾರತದಲ್ಲಿ ಬಹು-ಸ್ವರೂಪದ ಸರಣಿಯನ್ನು ಆಡಲಿವೆ. ಈ ನಾಲ್ಕು ತಂಡಗಳಿಗೆ ಭಾರತದ 17 ನಗರಗಳು ಆತಿಥ್ಯವಹಿಸಲಿದ್ದು, ಇದರಲ್ಲಿ ಒಟ್ಟಾರೆ 22 ಅಂತರರಾಷ್ಟ್ರೀಯ ಪಂದ್ಯಗಳು ನಡೆಯಲಿವೆ.

ವೆಸ್ಟ್ ಇಂಡೀಸ್ ಪ್ರವಾಸ

ಸೆಪ್ಟೆಂಬರ್ 27, 2026 ರಂದು ವೆಸ್ಟ್ ಇಂಡೀಸ್‌ ಪ್ರವಾಸದೊಂದಿಗೆ ಈ ಸೀಸನ್ ಆರಂಭವಾಗಲಿದೆ. ಕೆರಿಬಿಯನ್ ತಂಡ ಮೊದಲಿಗೆ ಮೂರು ಪಂದ್ಯಗಳ ಏಕದಿನ ಸರಣಿಯನ್ನು ನಂತರ ಐದು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಅದರಂತೆ ಏಕದಿನ ಪಂದ್ಯಗಳು ತಿರುವನಂತಪುರ, ಗುವಾಹಟಿ ಮತ್ತು ನ್ಯೂ ಚಂಡೀಗಢದಲ್ಲಿ ನಡೆದರೆ, ಟಿ20 ಸರಣಿ ಲಕ್ನೋ, ರಾಂಚಿ, ಇಂದೋರ್, ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ನಡೆಯಲಿದೆ.

ವೆಸ್ಟ್ ಇಂಡೀಸ್ ಪ್ರವಾಸ

ಶ್ರೀಲಂಕಾ ಪ್ರವಾಸ

ನಂತರ ಡಿಸೆಂಬರ್ ತಿಂಗಳಲ್ಲಿ ಶ್ರೀಲಂಕಾ ತಂಡ ಮೂರು ಪಂದ್ಯಗಳ ಏಕದಿನ ಸರಣಿ ಮತ್ತು 3 ಪಂದ್ಯಗಳ ಟಿ20 ಸರಣಿಗಾಗಿ ಭಾರತಕ್ಕೆ ಬರಲಿದೆ. ಏಕದಿನ ಪಂದ್ಯಗಳು ದೆಹಲಿ, ಬೆಂಗಳೂರು ಮತ್ತು ಅಹಮದಾಬಾದ್‌ನಲ್ಲಿ ನಡೆಯಲಿದ್ದು, ರಾಜ್‌ಕೋಟ್, ಕಟಕ್ ಮತ್ತು ಪುಣೆಯಲ್ಲಿ ಟಿ20 ಪಂದ್ಯಗಳನ್ನು ಆಯೋಜಿಸಲಾಗುತ್ತದೆ.

ಶ್ರೀಲಂಕಾ ಪ್ರವಾಸ

ಜಿಂಬಾಬ್ವೆ ಪ್ರವಾಸ

ಹೊಸ ವರ್ಷದ ಆರಂಭದಲ್ಲಿ ಅಂದರೆ 2027 ರ ಜನವರಿಯಲ್ಲಿ ಜಿಂಬಾಬ್ವೆ ತಂಡ ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಭಾರತಕ್ಕೆ ಪ್ರವಾಸ ಕೈಗೊಳ್ಳಲಿದೆ. ಈ ಮೂರು ಪಂದ್ಯಗಳು ಕೋಲ್ಕತ್ತಾ, ಹೈದರಾಬಾದ್ ಮತ್ತು ಮುಂಬೈನಲ್ಲಿ ನಡೆಯಲಿವೆ.

ಜಿಂಬಾಬ್ವೆ ಪ್ರವಾಸ

ಆಸ್ಟ್ರೇಲಿಯಾ ಪ್ರವಾಸ

ಆಸ್ಟ್ರೇಲಿಯಾ ಪ್ರವಾಸ

ಆ ನಂತರ ಆಸ್ಟ್ರೇಲಿಯಾ ತಂಡ ಭಾರತಕ್ಕೆ ಬರಲಿದ್ದು, ಉಭಯ ತಂಡಗಳು ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಮುಖಾಮುಖಿಯಾಗಲಿವೆ. ಮೊದಲ ಪಂದ್ಯ ಜನವರಿ 21, 2027 ರಂದು ನಾಗ್ಪುರದಲ್ಲಿ ನಡೆಯಲಿದ್ದು, ಉಳಿದ ಪಂದ್ಯಗಳು ಕ್ರಮವಾಗಿ ಚೆನ್ನೈ, ಗುವಾಹಟಿ, ರಾಂಚಿ ಮತ್ತು ಅಹಮದಾಬಾದ್​ನಲ್ಲಿ ನಡೆಯಲಿವೆ. ಒಟ್ಟು ಐದು ಪಂದ್ಯಗಳ ಈ ಟೆಸ್ಟ್ ಸರಣಿಯ ಮುಕ್ತಾಯದೊಂದಿಗೆ ಈ ವೇಳಾಪಟ್ಟಿಯೂ ಅಂತ್ಯವಾಗಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರೈಲ್ವೆ ಹಳಿಯ ಮೇಲೆ ತಂಬಾಕು ಉಗುಳುವಾಗ ವಂದೇ ಭಾರತ್ ರೈಲು ಡಿಕ್ಕಿ; ವ್ಯಕ್ತಿ ಸಾವು!

ಪಾಟ್ನಾ, ಮಾರ್ಚ್ 26: ಬಿಹಾರದ ವ್ಯಕ್ತಿಯೊಬ್ಬರು ತಂಬಾಕು ಉಗುಳಲು ರೈಲ್ವೆ ಹಳಿಯ ಬಳಿ ಹೋದಾಗ ವಂದೇ ಭಾರತ್ ಎಕ್ಸ್​ಪ್ರೆಸ್ (Vande Bharat Express) ರೈಲು ಅವರಿಗೆ ಡಿಕ್ಕಿ ಹೊಡೆದು ಹೋಗಿದೆ. ಇದರಿಂದ ಆ ವ್ಯಕ್ತಿ ಮೃತಪಟ್ಟಿದ್ದಾರೆ. ಪ್ಲಾಟ್​​ಫಾರ್ಮ್​ನಿಂದ ರೈಲ್ವೆ ಹಳಿಯ ಮೇಲೆ ಜಾಸ್ತಿ ಬಾಗಿದ್ದರಿಂದ ಈ ಘಟನೆ ಸಂಭವಿಸಿದೆ. ಈ ಘಟನೆ ಮತ್ತೊಮ್ಮೆ ರೈಲ್ವೆ ಹಳಿಗಳ ಬಳಿ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಕ್ರಮ ಸಂಬಂಧ ಪ್ರಶ್ನಿಸಲು ಬಂದ ಅಕ್ಕ, ತಮ್ಮನ ಕೊಲೆ: 16 ವರ್ಷದ ಬಾಲಕನಿಂದ ಕೃತ್ಯ

ಬೆಂಗಳೂರು, ಮಾರ್ಚ್​ 26: ಪೀಣ್ಯದ ಹೆಚ್​ಎಂಟಿ ಲೇಔಟ್‌ನ​ ಮನೆಯೊಂದರಲ್ಲಿ 16 ವರ್ಷದ ಅಪ್ರಾಪ್ತ ಬಾಲಕನಿಂದ ಡಬಲ್ ಮರ್ಡರ್​​ (murder) ನಡೆದಿರುವಂತಹ ಘಟನೆ ನಡೆದಿದೆ. ಅಕ್ರಮ ಸಂಬಂಧ ಪ್ರಶ್ನಿಸಲು ಬಂದಿದ್ದ ಅಕ್ಕ ಮತ್ತು ತಮ್ಮನನ್ನ ಹತ್ಯೆ ಮಾಡಲಾಗಿದೆ. ಯಮುನಾ(36) ಮತ್ತು ಸುದೀಪ್(34) ಕೊಲೆಯಾದವರು. ಸ್ಥಳಕ್ಕೆ ಡಿಸಿಪಿ ನಾಗೇಶ್, ಎಫ್‌ಎಸ್‌ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ನಡೆದಿದ್ದೇನು?

ಆರೋಪಿ ತಾಯಿ ಛಾಯಾ ಹಾಗೂ ಯುಮುನಾ ಗಂಡನ ಮಧ್ಯೆ ಅಕ್ರಮ ಸಂಬಂಧ ಹಿನ್ನೆಲೆ ಇದನ್ನು ಪ್ರಶ್ನಿಸಲು ಛಾಯಾ ಮನೆಗೆ ಬಂದಿದ್ದ ಯಮುನಾ ಮತ್ತು ತಮ್ಮ ಸುದೀಪ್ ಜಗಳವಾಡುತ್ತಿದ್ದರು. ಈ ವೇಳೆ ಜಗಳದ ಮಧ್ಯೆ ಎಂಟ್ರಿಯಾದ ಛಾಯಾ ಪುತ್ರ ಚಾಕುವಿನಿಂದ ಇರಿದು ಇಬ್ಬರನ್ನು ಹತ್ಯೆಗೈದಿದ್ದಾನೆ.

ಅಪ್ರಾಪ್ತ ಬಾಲಕ ಇಬ್ಬರಿಗೂ ಹತ್ತಾರು ಬಾರಿ ಚಾಕುವಿನಿಂದ ಇರಿದಿದ್ದಾನೆ. ನಂತರ ಕೋಣೆ ಒಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದ. ಪೊಲೀಸರು ಬಂದರೂ ಬಾಗಿಲು ತೆಗೆದಿರಲಿಲ್ಲ. ತಂದೆ ಬಂದು ಹೇಳಿದಾಗ ಬಾಗಿಲು ತೆಗೆದು ಅಪ್ರಾಪ್ತ ಹೊರಬಂದಿದ್ದಾನೆ.

ಮಟ ಮಟ ಮಧ್ಯಾಹ್ನವೇ ನಡುರಸ್ತೆಯಲ್ಲಿ ಪತ್ನಿ ಕತ್ತು ಕೊಯ್ದ ಪತಿ

ಮಟ ಮಟ ಮಧ್ಯಾಹ್ನವೇ ನಡುರಸ್ತೆಯಲ್ಲಿ ಪತ್ನಿ ಕತ್ತು ಕೊಯ್ದ ಪತಿ ಕೊಲೆ ಮಾಡಿರುವಂತಹ ಘಟನೆ ಕಲಬುರಗಿ ಜಿಲ್ಲೆಯ ಬಳ್ಳೂರ್ಗಿ ಬಳಿ ಭೀಕರ ಹತ್ಯೆ ನಡೆದಿದೆ. ಪತಿ ಅಕ್ಷಯ್‌ನಿಂದ ಪತ್ನಿ ಶೈಲಾ (28)ರನ್ನ ಕೊಲೆ ಮಾಡಲಾಗಿದೆ.

ಇದನ್ನೂ ಓದಿ: ಧಾರವಾಡದ ಮಾಜಿ ಶಾಸಕನ ಪುತ್ರನ ಸಾವಿಗೆ ಬಿಗ್ ಟ್ವಿಸ್ಟ್! ಮಹಿಳೆಯೊಂದಿಗಿನ ಅಕ್ರಮ ಸಂಬಂಧಕ್ಕೆ ನಡೀತಾ ಕೊಲೆ?

ಕೊಲೆಯಾದ ಮಹಿಳೆ ಮಹಾರಾಷ್ಟ್ರ ಮೂಲದವರು. ಸ್ಥಳಕ್ಕೆ ಕಾರಿನಲ್ಲಿ ಪತ್ನಿಯನ್ನ ಕರೆದುಕೊಂಡು ಬಂದಿದ್ದ ಪತಿ ಬಳಿಕ ಕಾರಿನಿಂದ ಬಲವಂತವಾಗಿ ಕೆಳಗಿಳಿಸಿ ಕೊಲೆ ಮಾಡಿದ್ದಾರೆ. ಪತ್ನಿಯ ಕತ್ತು ಕೊಯುತ್ತಿರುವ ದೃಶ್ಯ ಸ್ಥಳಿಯರೊಬ್ಬರ ಮೊಬೈಲ್‌ನಲ್ಲಿ ಸೆರೆ ಆಗಿದೆ.

ಟೆಂಪೊ ಟ್ರಾವೆಲರ್ಸ್‌‌ ಹಾಗೂ ಕಾರು ಮುಖಾಮುಖಿ ಡಿಕ್ಕಿ: ಮಹಿಳೆ ಸಾವು

ಟೆಂಪೊ ಟ್ರಾವೆಲರ್ಸ್‌‌ ಹಾಗೂ ಕಾರು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಓರ್ವ ಮಹಿಳೆ ಸ್ಥಳದಲ್ಲೇ ಮೃತಪಟ್ಟ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ಮುದ್ದೇಬಿಹಾಳ ತಾಲೂಕಿನ ಮಾದಿನಾಳ ಕ್ರಾಸ್ ಬಳಿ ಈ ದುರಂತ ನಡೆದಿದೆ. ಟೆಂಪೊ ಟ್ರಾವೆಲರ್ಸ್​ನಲ್ಲಿದ್ದ ಕಸ್ತೂರಿಬಾಯಿ ಕೃಷ್ಣ ರಾಠೋಡ(50) ಮೃತ ಮಹಿಳೆ.

ಇದನ್ನೂ ಓದಿ: ಸಾರ್ವಜನಿಕವಾಗಿ ಪತ್ನಿಯನ್ನ ಗಂಡ ಹತ್ಯೆ ಮಾಡಿದ್ಯಾಕೆ? ಅಂತಹ ದ್ವೇಷ ಏನಿತ್ತು?

ಕಸ್ತೂರಿಬಾಯಿಯನ್ನು ಮುದ್ದೇಬಿಹಾಳ ತಾಲೂಕಿನ ಗೆದ್ದಲಮರಿ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದೆ. ಅಪಘಾತದ ವೇಳೆ ಕಾರು ಪಲ್ಟಿಯಾಗಿದೆ. ಇನ್ನು ಘಟನೆಯಲ್ಲಿ ಚಲಮಿ ತಾಂಡಾದ ಸಂಜಯ ಸುರಪುರ ಹಾಗೂ ಗುರಪ್ಪ ಚೌವ್ಹಾನ್ ಇವರಿಗೆ ಗಾಯಗಳಾಗಿದ್ದು, ಮುದ್ದೇಬಿಹಾಳ ತಾಲ್ಲೂಕಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಮುದ್ದೇಬಿಹಾಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link