All posts by nagaraj11081993

ನಾನು ಬಾರ್ ಮುಂದೆ ನಿಂತು ಕುಡಿದು ತೂರಾಡೋದನ್ನ ನೋಡಿದ್ದಿರಾ? ಕುಡುಕ ಎಂದ ಕಾಂಗ್ರೆಸ್​​​​​ ವಿರುದ್ಧ ಸಿಟಿ ರವಿ ಕೆಂಡಾಮಂಡಲ – Kannada News | BJP MLC CT Ravi Hits Back at Congress For KPCC Called Drunker

ರಾಯಚೂರು, (ಜುಲೈ 27): ಬಿಜೆಪಿ ವಿಧಾನಪರಿಷತ್ ಸದಸ್ಯ ಸಿಟಿ ರವಿ (CT Ravi) ಅವರನ್ನು ಕುಡುಕ ಎನ್ನುವ ರೀತಿ ಕೆಪಿಸಿಸಿ ಅಧಿಕೃತ ಖಾತೆಯಿಂದ ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಇದಕ್ಕೆ ಸಿಟಿ ರವಿ ಅವರು ಕೆಂಡಾಮಂಡಲರಾಗಿದ್ದಾರೆ. ಈ ಬಗ್ಗೆ ರಾಯಚೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಿಟಿ ರವಿ, ಆ ಪಕ್ಷದ ಅಧಿಕೃತ ಸೋಶಿಯಲ್ ಮಿಡಿಯಾದಲ್ಲಿ ಕುಡುಕ ಅಂತ ಹಾಕ್ತಾರೆ ಅಂದ್ರೆ, ಆ ಪಕ್ಷ ಚರಂಡಿ ನೀರಿಗಿಂತ ಕಡೆಯಾಗಿದೆ ಅನ್ನೋದಕ್ಕೆ ಸಾಕ್ಷಿ. ನಾನು ಹೇಗೆ ಅಂತ ಎಲ್ಲರಿಗೂ ಗೊತ್ತು. ನಾನು ಕಾಫೀ ಟೀ ಕುಡಿಯೋದಕ್ಕೂ ಹಿಂದೆ ಮುಂದೆ ನೋಡ್ತಿನಿ. ಆದ್ರೆ ನಾನು ಕುಡುಕ ಅಂತ ತೋರಿಸ್ತಾರೆ. ಅವರಿಗೆ ನಾಚಿಕೆ ಆಗ್ಬೇಕು. ನಾನು ಬಾರ್ ಮುಂದೆ ನಿಂತು ಕುಡಿದು ತೂರಾಡೋದನ್ನ ನೋಡಿದ್ದಿರಾ? ಒಬ್ಬ ವ್ಯಕ್ತಿಯನ್ನ ವೈಚಾರಿಕವಾಗಿ ಎದುರಿಸೋದಕ್ಕೆ ಆಗಲ್ವೋ ಆಗ ಅಪಪ್ರಚಾರ, ಅಪನಂಬಿಕೆ ಹುಟ್ಟುಹಾಕೋದನ್ನ ಮಾಡುತ್ತಾರೆ. ಇದಕ್ಕೆ ಅವರ ಅದೋಗತಿಯೇ ಸಾಕ್ಷಿ ಎಂದು ಕಿಡಿಕಾರಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಗೂಗಲ್ ಪೇನಿಂದ ಲಕ್ಷ ಲಕ್ಷ ಸಾಲ ಪಡೆಯಬಹುದು, ಹೀಗೆ ಅಪ್ಲೈ ಮಾಡಿ – Kannada News | Google Pay: How to get a loan on Google Pay

ಇತ್ತೀಚೆಗಿನ ದಿನಗಳಲ್ಲಿ ಗೂಗಲ್ ಪೇ, ಫೋನ್ ಪೇ ಮೂಲಕ ಆನ್ಲೈನ್ ಟ್ರಾನ್ಸಾಕ್ಷನ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಆದರೆ ಈ ಗೂಗಲ್ ಪೇ (Google Pay) ಮೂಲಕ ಹಣಕಾಸಿನ ವಹಿವಾಟಿನ ಜತೆಗೆ ಕರೆಂಟ್ ಬಿಲ್, ಗ್ಯಾಸ್ ಬಿಲ್, ಮೊಬೈಲ್ ಹಾಗೂ ಡಿಟಿಎಚ್ ರೀಚಾರ್ಜ್‌ಗಳನ್ನು ಕುಳಿತಲ್ಲಿಂದಲೇ ಮಾಡುತ್ತಿದ್ದಾರೆ. ಅದರ ಜತೆಗೆ ಗೂಗಲ್ ಪೇ ಮೂಲಕ ವೈಯಕ್ತಿಕ ಸಾಲ (Personal loan) ಪಡೆಯಬಹುದು ಎಂಬುದು ಎಷ್ಟೋ ಜನರಿಗೆ ತಿಳಿದಿಲ್ಲ. ಈ ಅಪ್ಲಿಕೇಶನ್ ನಲ್ಲಿ 30,000 ರೂ. 12,00,000 ರೂವರೆಗೆ ಸಾಲ ಸೌಲಭ್ಯ ಪಡೆಯಬಹುದು. ಆದರೆ ಈ ಅರ್ಹತೆ ಇದ್ದವರಿಗೆ ಮಾತ್ರ ಸಾಲ ದೊರೆಯುತ್ತದೆ. ಈ ಕುರಿತಾದ ಕಂಪ್ಲೀಟ್ ಮಾಹಿತಿ.

ಗೂಗಲ್ ಪೇನಲ್ಲಿ ಲೋನ್ ಪಡೆಯುವುದು ಹೇಗೆ?

ಹಂತ 1: ಮೊಬೈಲ್‌ನಲ್ಲಿ ಗೂಗಲ್ ಪೇ ಆ್ಯಪ್ ತೆರೆಯಿರಿ.

ಹಂತ 2: ಹಣ ಅಥವಾ ಬಿಸಿನೆಸ್ ವಿಭಾಗದಲ್ಲಿ ಲೋನ್ ಅಥವಾ ಪರ್ಸನಲ್ ಲೋನ್ ಮೇಲೆ ಟ್ಯಾಪ್ ಮಾಡಿ.

ಹಂತ 3: ನಿಮ್ಮ ಪ್ಯಾನ್ ಕಾರ್ಡ್ ಸಂಖ್ಯೆ, ಪಿನ್ ಕೋಡ್ ಮತ್ತು ಉದ್ಯೋಗದ ವಿವರಗಳನ್ನು ನಮೂದಿಸಿ.

ಹಂತ 4: ನಿಮ್ಮ ಅರ್ಹತೆಗೆ ತಕ್ಕಂತೆ ಲಭ್ಯವಿರುವ ಸಾಲದ ಮೊತ್ತ ಮತ್ತು ಇಎಂಐ ಯೋಜನೆಯನ್ನು ಆಯ್ಕೆಮಾಡಿ.

ಹಂತ 5: ನಿಮ್ಮ ವೈಯುಕ್ತಿಕ ವಿವರಗಳನ್ನು ಕೆವೈಸಿ ಮಾಡಿ ಹಾಗೂ ಸಾಲದ ಒಪ್ಪಂದಕ್ಕೆ ಸಹಿ ಹಾಕಿ.

ಹಂತ 6: ಇಎಂಐ ಪಾವತಿಗಾಗಿ e-Mandate (ಇ- ಮ್ಯಾಂಡೇಟ್) ಸೆಟ್ ಮಾಡಿ.

ಹಂತ 7: ಅನುಮೋದನೆಗೊಂಡ ಬಳಿಕ ಹಣ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮೆ ಆಗುತ್ತದೆ.

ಇದನ್ನೂ ಓದಿ: ಸಾಲವೆಂದರೆ ಮಾರುದೂರ ಹೋಗುತ್ತೀರಾ? ಕೆಟ್ಟಸಾಲ, ಒಳ್ಳೆಯ ಸಾಲದ ವ್ಯತ್ಯಾಸ ತಿಳಿದಿರಿ… ಇಲ್ಲಿವೆ ಕೆಲ ಟ್ರಿಕ್ಸ್

ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)

ಪ್ರಶ್ನೆ: ಗೂಗಲ್ ಪೇನಲ್ಲಿ ಸಾಲ ಸೌಲಭ್ಯ ಹೇಗೆ ಸಿಗುತ್ತದೆ?

ಉತ್ತರ: ಗೂಗಲ್ ಪೇನಲ್ಲಿ ನೇರವಾಗಿ ಸಾಲ ಸೌಲಭ್ಯ ಸಿಗುವುದಿಲ್ಲ. ಡಿಎಂಐ ಫೈನಾನ್ಸ್, ಕ್ಯಾಶ್ ಅಥವಾ ಮನಿ ವ್ಯೂ ಮುಂತಾದ ಅಧಿಕೃತ ಬ್ಯಾಂಕ್ ಮತ್ತು ಹಣಕಾಸು ಪಾಲುದಾರರೊಂದಿಗೆ ನಿಮ್ಮನ್ನು ಕೈ ಜೋಡಿಸುತ್ತದೆ.

ಪ್ರಶ್ನೆ: ಗೂಗಲ್ ಪೇನಲ್ಲಿ ಎಷ್ಟು ಲಕ್ಷ ಸಾಲ ಸೌಲಭ್ಯ ದೊರೆಯುತ್ತದೆ?

ಉತ್ತರ: ಗೂಗಲ್ ಪೇ ಅಪ್ಲಿಕೇಶನ್ ನಲ್ಲಿ 30,000 ರೂ. 12,00,000 ರೂವರೆಗೆ ಸಾಲ ಸೌಲಭ್ಯ ಪಡೆಯಬಹುದು.

ಪ್ರಶ್ನೆ: ಗೂಗಲ್ ಪೇನಿಂದ ಸಾಲ ಪಡೆಯಲು ಯಾವೆಲ್ಲಾ ದಾಖಲೆಗಳು ಬೇಕು?

ಉತ್ತರ: ಗೂಗಲ್ ಪೇನಿಂದ ಸಾಲ ಪಡೆಯಲು ಪ್ಯಾನ್ ಕಾರ್ಡ್ , ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಸ್ಟೇಟ್‌ಮೆಂಟ್ ವಿವರಗಳು ಬೇಕು

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:21 pm, Mon, 27 July 26

Source link

ಅಶ್ಲೀಲವಾಗಿ ಟ್ರೋಲ್ ಮಾಡಿದವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಧ್ರುವಂತ್ – Kannada News | BBK 12 fame Dhruvanth Charith Balappa files Police Complaint against Troll Pages for Vulgar posts

‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ರಿಯಾಲಿಟಿ ಶೋ ಖ್ಯಾತಿಯ ಕಿರುತೆರೆ ನಟ ಧ್ರುವಂತ್ ಅಲಿಯಾಸ್ ಚರಿತ್ ಬಾಳಪ್ಪ ಅವರು ಪೊಲೀಸ್ ಠಾಣೆಯ ಮೆಟ್ಟಿಲು ಏರಿದ್ದಾರೆ. ತಮ್ಮ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟಿದಾಗಿ ಟ್ರೋಲ್ ಮಾಡಿದವರ ವಿರುದ್ಧ ಅವರು ದೂರು ನೀಡಿದ್ದಾರೆ. ಇತ್ತೀಚೆಗೆ ಧ್ರುವಂತ್ (Dhruvanth) ಅವರು ನೀಡಿದ ಒಂದು ಸಂದರ್ಶನದ ತುಣುಕುಗಳನ್ನು ಇಟ್ಟುಕೊಂಡು ಅಶ್ಲೀಲವಾಗಿ ಟ್ರೋಲ್ ಮಾಡಲಾಗುತ್ತಿದೆ. ಅದರಿಂದ ಅಸಮಾಧಾನಗೊಂಡಿರುವ ಅವರು ಕೆಲವು ಟ್ರೋಲ್ (Troll) ಪೇಜ್​ಗಳ ವಿರುದ್ಧ ದೂರು ನೀಡಿದ್ದು, ದೂರಿನ ಪ್ರತಿ ಲಭ್ಯವಾಗಿದೆ.

‘ನಾನು ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ನಟನಾಗಿದ್ದು, ಬಿಗ್ ಬಾಸ್ ಕನ್ನಡ ಸೀಸನ್ 12 ರಿಯಾಲಿಟಿ ಶೋನ ಫೈನಲಿಸ್ಟ್ ಆಗಿ ಸಾರ್ವಜನಿಕ ವ್ಯಕ್ತಿಯಾಗಿ ಸಮಾಜದಲ್ಲಿ ಗೌರವ ಮತ್ತು ವಿಶ್ವಾಸವನ್ನು ಸಂಪಾದಿಸಿದ್ದೇನೆ. ಸಾಮಾಜಿಕ ಜಾಲತಾಣಗಳಾದ ಇನ್​ಸ್ಟಾಗ್ರಾಮ್ ಮತ್ತು ಫೇಸ್​ಬುಕ್ ಮೂಲಕ ಉದ್ದೇಶಪೂರ್ವಕವಾಗಿ ನನ್ನ ವಿರುದ್ಧ ನಿರಂತರವಾಗಿ ಅವಾಚ್ಯ, ಅಶ್ಲೀಲ, ಮಾನಹಾನಿಕಾರಕ ಹಾಗೂ ಬೆದರಿಕೆ ಹಾಕುವ ರೀತಿಯ ಪೋಸ್ಟ್​ಗಳು, ಕಾಮೆಂಟ್​ಗಳು ಮತ್ತು ಸಂದೇಶಗಳನ್ನು ಪ್ರಕಟಿಸುತ್ತಿದ್ದಾರೆ’ ಎಂದು ಧ್ರುವಂತ್ ಅವರು ದೂರಿನಲ್ಲಿ ತಿಳಿಸಿದ್ದಾರೆ.

‘ಗಂಭೀರ ಪರಿಣಾಮ ಬೀರಿದೆ’

‘ಈ ಕೃತ್ಯಗಳು ನನ್ನ ಮಾನಸಿಕ ನೆಮ್ಮದಿಗೆ ಧಕ್ಕೆ ಉಂಟುಮಾಡುವುದಲ್ಲದೇ ನನ್ನ ವೃತ್ತಿಜೀವನ, ಸಾರ್ವಜನಿಕ ಚಿತ್ರಣ, ಖ್ಯಾತಿ ಹಾಗೂ ಭವಿಷ್ಯದ ಉದ್ಯೋಗಾವಕಾಶಗಳ ಮೇಲೂ ಗಂಭೀರ ಪರಿಣಾಮ ಬೀರಿದೆ. ನಿರ್ಮಾಪಕರು, ನಿರ್ದೇಶಕರು, ಬ್ರಾಂಡ್​ಗಳು ಮತ್ತು ಇತರ ವೃತ್ತಿಪರರು ನನ್ನ ಬಗ್ಗೆ ತಪ್ಪು ಅಭಿಪ್ರಾಯ ಬೆಳೆಸುವಂತಹ ಪರಿಸ್ಥಿತಿಯನ್ನು ಸೃಷ್ಟಿಸಿವೆ’ ಎಂದು ಧ್ರುವಂತ್ ದೂರು ನೀಡಿದ್ದಾರೆ.

‘ವೃತ್ತಿಪರ ಬದುಕಿಗೆ ಧಕ್ಕೆ ಉಂಟುಮಾಡಿದೆ’

‘ನನ್ನ ಗೌರವವನ್ನು ಉದ್ದೇಶಪೂರ್ವಕವಾಗಿ ಹಾಳುಮಾಡಲು ಹಾಗೂ ಸಾರ್ವಜನಿಕರಲ್ಲಿ ನನ್ನ ಬಗ್ಗೆ ದ್ವೇಷ ಹಾಗೂ ಅವಿಶ್ವಾಸ ಮೂಡಿಸುವ ಈ ಕೃತ್ಯಗಳು ಕಾಣಿಸುತ್ತವೆ. ಅವರು ನಿರಂತರವಾಗಿ ಅವಾಚ್ಯ ಪದಗಳಿಂದ ನಿಂದನೆ ಮಾಡುವುದು, ಸುಳ್ಳು ಮತ್ತು ಮಾನಹಾನಿಕಾರಕ ಆರೋಪಗಳನ್ನು ಹರಡುವುದು, ಬೆದರಿಕೆ ಹಾಕುವುದು, ನನ್ನ ಸಾಮಾಜಿಕ ಹಾಗೂ ವೃತ್ತಿಪರ ಬದುಕಿಗೆ ಧಕ್ಕೆ ಉಂಟುಮಾಡುವುದು ಹಾಗೂ ಸಾರ್ವಜನಿಕವಾಗಿ ಅವಮಾನಿಸುವ ಉದ್ದೇಶದಿಂದ ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ’ ಎಂದಿದ್ದಾರೆ ಧ್ರುವಂತ್.

ಇದನ್ನೂ ಓದಿ: ‘ನಾನು ಕಪ್ ಗೆಲ್ಲದಿರಬಹುದು, ಶೋ ಗೆದ್ದಿದ್ದೇನೆ’; ಸೀಸನ್ ಚಪ್ಪಾಳೆ ಬದಲಿಸಿದ ಬಗ್ಗೆ ಧ್ರುವಂತ್ ಮಾತು

‘ಸೂಕ್ತ ಕ್ರಮ ಜರುಗಿಸಿ’

‘ಈ ಕೃತ್ಯಗಳಿಂದ ನನಗೆ ತೀವ್ರ ಮಾನಸಿಕ ಯಾತನೆ, ಸಾಮಾಜಿಕ ಅವಮಾನ ಉಂಟಾಗಿದೆ. ಆದ್ದರಿಂದ ಈ ರೀತಿ ಮಾಡುತ್ತಿರುವವರ ವಿರುದ್ಧ ಸೂಕ್ತ ಕ್ರಮ ಜರುಗಿಸಿ ನನ್ನ ತಂಟೆಗೆ ಬಾರದಂತೆ ಬಂದೋಬಸ್ತ್ ಮಾಡಿಕೊಡಬೇಕು’ ಎಂದು ಧ್ರುವಂತ್ ಅವರು ದೂರು ನೀಡಿದ್ದಾರೆ. ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ಹಾಗೂ ಬಸವೇಶ್ವರ ನಗರ ಸೈಬರ್ ಸೆಲ್​ನಲ್ಲಿ ಧ್ರುವಂತ್ ಅವರು ದೂರು ಸಲ್ಲಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಳಗಾವಿ ಕಾಂಗ್ರೆಸ್ ಕಚೇರಿಯಲ್ಲಿ ಹೈಡ್ರಾಮಾ: ಅಧ್ಯಕ್ಷರ ಆಯ್ಕೆ ಸಭೆಯಲ್ಲಿ ಕಾರ್ಯಕರ್ತರ ಗಲಾಟೆ! – Kannada News | High Drama in Belagavi Congress Office: Factional Feud & Clash During City President Election Meeting

ಬೆಳಗಾವಿ, ಜುಲೈ 27: ಇಲ್ಲಿನ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ನಗರ ಅಧ್ಯಕ್ಷರ ಆಯ್ಕೆ ಸಂಬಂಧ ನಡೆದ ಅಭಿಪ್ರಾಯ ಸಂಗ್ರಹ ಸಭೆ ರಣರಂಗವಾಗಿ ಮಾರ್ಪಟ್ಟಿದೆ. ಎಐಸಿಸಿ ವೀಕ್ಷಕ ಮನೋಜ್ ಚವ್ಹಾಣ್ ಅವರ ನೇತೃತ್ವದಲ್ಲಿ ಸಭೆ ನಡೆಯುತ್ತಿದ್ದಾಗಲೇ ನಗರ ಅಧ್ಯಕ್ಷ ಸ್ಥಾನಕ್ಕಾಗಿ ಕಾರ್ಯಕರ್ತರು ಕೈಕೈ ಮಿಲಾಯಿಸಿದ್ದಾರೆ. ವೀಕ್ಷಕರ ಎದುರಲ್ಲೇ ನಾಯಕರು ಹಾಗೂ ಕಾರ್ಯಕರ್ತರು ತೀವ್ರ ಗದ್ದಲ ಎಬ್ಬಿಸಿದ್ದು, ಮಾಜಿ ಶಾಸಕ ರಮೇಶ್ ಕುಡಚಿ ಆಪ್ತ ಹೇಮಂತ್ ಲಿಂಗಾಡೆ ಎಂಬಾತನ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಹೈಡ್ರಾಮಾದಿಂದಾಗಿ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಮಾರ್ಕೆಟ್ ಠಾಣೆಯ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸೀಮಿತ ಓವರ್​ಗಳ ಸರಣಿಗಾಗಿ ಬಾಂಗ್ಲಾ ಪ್ರವಾಸ ಮಾಡಲಿದೆ ಟೀಂ ಇಂಡಿಯಾ – Kannada News | Team India’s Bangladesh Tour Likely in Sept; BCCI BCB mend ties

ಸರಿಸುಮಾರು ಒಂದು ವರ್ಷಗಳ ಬಳಿಕ ಬಿಸಿಸಿಐ ಹಾಗೂ ಬಾಂಗ್ಲಾದೇಶ ಕ್ರಿಕೆಟ್ ಮಂಡಳ (BCCI BCB ) ನಡುವಿನ ಸಂಬಂಧಗಳು ಸುಧಾರಿಸುವ ಸುಳಿವು ಸಿಕ್ಕಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಖಂಡಿಸಿ ಬಿಸಿಸಿಐ, ಬಾಂಗ್ಲಾದೇಶ ಆಟಗಾರರನ್ನು ಐಪಿಎಲ್​​ನಿಂದ ನಿಷೇಧಿಸಿತ್ತು. ಇದರಿಂದಾಗಿ ಬಾಂಗ್ಲಾದೇಶ ತಂಡ ಭಾರತಕ್ಕೆ ಬರಲು ನಿರಾಕರಿಸಿತ್ತು. ಹೀಗಾಗಿ ಉಭಯ ದೇಶಗಳ ತಂಡಗಳ ನಡುವೆ ಅಂದಿನಿಂದ ಯಾವುದೇ ಸರಣಿಗಳು ನಡೆದಿರಲಿಲ್ಲ. ಇದರ ಪರಿಣಾಮವಾಗಿ ಒಂದು ವರ್ಷದ ಹಿಂದೆಯೇ ಉಭಯ ತಂಡಗಳ ನಡುವೆ ನಡೆಯಬೇಕಿದ್ದ ಸರಣಿ ರದ್ದಾಗಿತ್ತು. ಇದೀಗ ಉಭಯ ಮಂಡಳಿಗಳ ನಡುವಿನ ಸಂಬಂಧದಲ್ಲಿ ಸುಧಾರಣೆ ಕಂಡುಬಂದಿದ್ದು, ಕೆಲವೇ ದಿನಗಳಲ್ಲಿ ಸೀಮಿತ ಓವರ್​​ಗಳ ಸರಣಿ ನಡೆಯುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಸೆಪ್ಟೆಂಬರ್​ನಲ್ಲಿ ಸರಣಿ

ಟೈಮ್ಸ್ ಇಂಡಿಯಾ ವರದಿಯ ಪ್ರಕಾರ, ಸೆಪ್ಟೆಂಬರ್ ಮೊದಲ ವಾರದಲ್ಲಿ ಟೀಂ ಇಂಡಿಯಾದ ಬಾಂಗ್ಲಾದೇಶ ಪ್ರವಾಸವನ್ನು ನಿಗದಿಪಡಿಸುವ ಬಗ್ಗೆ ಎರಡೂ ಮಂಡಳಿಗಳು ಕೆಲಸ ಮಾಡುತ್ತಿವೆ. ಅಲ್ಲದೆ ಬಾಂಗ್ಲಾದೇಶದಲ್ಲಿ ಸರಣಿ ಆಯೋಜಿಸುವ ಸಲುವಾಗಿ ದೆಹಲಿಯಲ್ಲಿ ನಡೆಯಬೇಕಿದ್ದ ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯನ್ನು ಮುಂದೂಡಲು ಬಿಸಿಸಿಐ ಚಿಂತಿಸುತ್ತಿದೆ ಎಂದು ವರದಿಯಾಗಿದೆ. ಆದಾಗ್ಯೂ ಈ ಸರಣಿಗೆ ಅಂತಿಮ ಅನುಮೋದನೆ ಭಾರತ ಸರ್ಕಾರದಿಂದ ಬರಬೇಕಾಗಿದ್ದು, ಸರ್ಕಾರ ಹಸಿರು ನಿಶಾನೆ ನೀಡಿದರೆ ಮಾತ್ರ ಟೀಂ ಇಂಡಿಯಾ ಬಾಂಗ್ಲಾದೇಶ ಪ್ರವಾಸ ಮಾಡಲಿದೆ.

ಬಿಸಿಸಿಐ ಜೊತೆಗೆ ಸಂಬಂಧ ಸುಧಾರಣೆ

ಕಳೆದ ವರ್ಷ, ಭಾರತವು ರಾಜತಾಂತ್ರಿಕ ಉದ್ವಿಗ್ನತೆಯಿಂದಾಗಿ ಬಾಂಗ್ಲಾದೇಶ ಪ್ರವಾಸ ಮಾಡಲು ನಿರಾಕರಿಸಿತು. ತರುವಾಯ, ಮುಸ್ತಾಫಿಜುರ್ ರೆಹಮಾನ್ ಅವರನ್ನು ಐಪಿಎಲ್‌ನಿಂದ ಕೈಬಿಟ್ಟ ನಂತರ ಜನವರಿಯಲ್ಲಿ ಭಾರತದಲ್ಲಿ ನಡೆದ ಟಿ20 ವಿಶ್ವಕಪ್‌ನಿಂದ ಬಾಂಗ್ಲಾದೇಶ ಹಿಂದೆ ಸರಿದಿತ್ತು. ಇದೀಗ ಬಿಸಿಸಿಐ ಜೊತೆಗೆ ಸಂಬಂಧ ಸುಧಾರಿಸಿಕೊಳ್ಳಲು ಮುಂದಾಗಿರುವ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ, ಬಿಸಿಸಿಐಗೆ ಅನುಕೂಲಕರವಾಗುವಂತೆ ಸೆಪ್ಟೆಂಬರ್ 1 ರಿಂದ ತನ್ನ ತಂಡದ ಎಲ್ಲಾ ಸ್ಲಾಟ್​ಗಳನ್ನು ಖಾಲಿ ಇರಿಸಿದೆ. ಅಲ್ಲದೆ ಎಲ್ಲಾ ಪಂದ್ಯಗಳನ್ನು ಒಂದೇ ಸ್ಥಳದಲ್ಲಿ ನಡೆಸಲು ಸಹ ಬಿಸಿಬಿ ಸಿದ್ಧವಿದೆ ಎಂದು ಟೈಮ್ಸ್ ಇಂಡಿಯಾ ವರದಿ ಮಾಡಿದೆ.

2 ಸ್ಥಳಗಳಲ್ಲಿ ಸರಣಿ

ವರದಿ ಪ್ರಕಾರ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ಒಂದು ಸ್ಥಳದಲ್ಲಿ ಮೂರು ಪಂದ್ಯಗಳ ಟಿ20 ಸರಣಿ ಮತ್ತು ಇನ್ನೊಂದು ಸ್ಥಳದಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಯನ್ನು ನಡೆಸಲು ಮುಂದಾಗಿದೆ. ಢಾಕಾ ಮತ್ತು ಚಟ್ಟೋಗ್ರಾಮ್​ ಮೈದಾನಗಳನ್ನು ಈ ಸರಣಿಗಳಿಗೆ ನಿಗದಿಪಡಿಸಿಲಾಗಿದೆ. ಇತ್ತೀಚೆಗೆ ಲಂಡನ್‌ನಲ್ಲಿ ನಡೆದ ಐಸಿಸಿ ಸಭೆಯಲ್ಲಿ ಎರಡೂ ಮಂಡಳಿಗಳು ಈ ಬಗ್ಗೆ ಚರ್ಚಿಸಿವೆ ಎಂದು ಬಿಸಿಸಿಐ ಮೂಲವೊಂದು TOI ಗೆ ತಿಳಿಸಿದೆ.

‘ಆಗಲೇ ಈ ನಿರ್ಧಾರ ಮಾಡಬೇಕಿತ್ತು’; ಬಿಸಿಸಿಐ ವಿರುದ್ಧ ಭಾರತದ ಮಾಜಿ ಆಟಗಾರ ಗರಂ

ಭಾರತ-ಅಫ್ಘನ್ ಸರಣಿ ಮುಂದೂಡಿಕೆ

ಏತನ್ಮಧ್ಯೆ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ಸೆಪ್ಟೆಂಬರ್ 1 ರಿಂದ 13 ರವರೆಗೆ ಭಾರತದ ವಿರುದ್ಧ ಸರಣಿ ಆಯೋಜಿಸಲು ಉದ್ದೇಶಿಸಿದೆ ಎಂದು ಕ್ರಿಕ್‌ಬಜ್ ವರದಿ ಮಾಡಿದೆ. ಪ್ರವಾಸ ಅಂತಿಮವಾದರೆ, ಭಾರತ ಹಾಗೂ ಅಫ್ಘಾನಿಸ್ತಾನ ನಡುವೆ ದೆಹಲಿಯಲ್ಲಿ ನಡೆಯಬೇಕಿದ್ದ ಟಿ20 ಸರಣಿಯನ್ನು ಮುಂದೂಡಲಾಗುತ್ತದೆ. ಅಲ್ಲದೆ ಏಷ್ಯನ್ ಕ್ರೀಡಾಕೂಟವು ಸೆಪ್ಟೆಂಬರ್ 24 ರಂದು ಪ್ರಾರಂಭವಾಗಲಿದ್ದು, ವೆಸ್ಟ್ ಇಂಡೀಸ್ ತಂಡವು ಸೆಪ್ಟೆಂಬರ್ 27 ರಂದು ಭಾರತ ಪ್ರವಾಸ ಕೈಗೊಳ್ಳಲಿದೆ. ಆದ್ದರಿಂದ, ಈ ಬಿಡುವಿಲ್ಲದ ವೇಳಾಪಟ್ಟಿಯಲ್ಲಿ ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಟಿ20 ಸರಣಿ ಯಾವಾಗ ನಡೆಯುತ್ತದೆ ಎಂಬುದನ್ನು ಕಾದುನೋಡಬೇಕಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:00 pm, Mon, 27 July 26

Source link

ಪ್ರವಾಸಿಗರ ಸ್ವರ್ಗ ಮಡಿಕೇರಿಯೀಗ ರಸ್ತೆ ಗುಂಡಿಗಳಿಂದ ತುಂಬಿರೋ ನರಕ!: ಆಡಳಿತದ ನಿರ್ಲಕ್ಷ್ಯಕ್ಕೆ ವಾಹನ ಸವಾರರ ಹಿಡಿಶಾಪ – Kannada News | From Paradise to Pothole Hell: Dilapidated Roads in Tourist Hub Madikeri Trigger Public Outrage

ಮಡಿಕೇರಿ, ಜುಲೈ 27: ಮಂಜಿನ ನಗರಿ, ಪ್ರವಾಸಿಗರ ಸ್ವರ್ಗ ಎಂದೆಲ್ಲ ಕರೆಸಿಕೊಳ್ಳುವ ಮಡಿಕೇರಿ ನಗರದ ರಸ್ತೆಗಳು ಶೋಚನೀಯ ಸ್ಥಿತಿಗೆ ತಲುಪಿದ್ದು, ನಗರಕ್ಕೆ ಭೇಟಿ ನೀಡುವವರು ಮತ್ತು ಸ್ಥಳೀಯ ನಿವಾಸಿಗಳಿಗೆ ನಿತ್ಯ ನರಕ ದರ್ಶನ ಮಾಡಿಸಯತ್ತಿವೆ. ರೋಡ್​​ ಸಂಪೂರ್ಣ ಹದಗೆಟ್ಟು ನೂರಾರು ಗುಂಡಿಗಳು ಬಿದ್ದಿರುವ ಕಾರಣ ಸಂಚಾರಕ್ಕೆ ವಾಹನ ಸವಾರರು ಸರ್ಕಸ್​​ ನಡೆಸಬೇಕಿದೆ. ಜನರಲ್ ತಿಮ್ಮಯ್ಯ ವೃತ್ತದಿಂದ ರಾಜಾಸೀಟ್ ತೆರಳುವ ರಸ್ತೆ, ಹೊಸ ಖಾಸಗಿ ಬಸ್ ನಿಲ್ದಾಣ ರಸ್ತೆ, ಅಬ್ಬಿಫಾಲ್ಸ್ ರಸ್ತೆ, ಸಂಪಿಗೆ ಕಟ್ಟೆ ರಸ್ತೆ ಸೇರಿ ಪ್ರಮುಖ ಮಾರ್ಗಗಳಲ್ಲಿಯೇ ಗುಂಡಿ ಬಿದ್ದಿದ್ದು, ಮಳೆ ವೇಳೆ ಇವುಗಳಲ್ಲಿ ನೀರು ನಿಲ್ಲುತ್ತಿವೆ. ಹೀಗಾಗಿ ಗುಂಡಿ ಯಾವುದು ಎಂದು ಗೊತ್ತಾಗದೆ ಪ್ರಾಣ ಕೈಯಲ್ಲಿ ಹಿಡಿದು ಜನ ಸಂಚರಿಸಬೇಕಿದೆ.

ರಸ್ತೆ ದುರಸ್ತಿ ಮಾಡದೆ ನಿರ್ಲಕ್ಷ್ಯ

ಮಳೆಗಾಲ ಆರಂಭಕ್ಕೂ ಮೊದಲು ಈ ರಸ್ತೆಗಳಿಗೆ ಕನಿಷ್ಠ ತೇಪೆ ಹಾಕುವ ಕೆಲಸ ಮಾಡಬೇಕಿತ್ತು. ಆದ್ರೆ ಜೂನ್ ತಿಂಗಳಾಂತ್ಯದವರೆಗೆ ಈ ಬಾರಿ ಬಿಸಿಲಿದ್ದರೂ ಮಡಿಕೇರಿ ನಗರಸಭೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮಾತ್ರ ಎಚ್ಚೆತ್ತುಕೊಳ್ಳಲಿಲ್ಲ. ಹಾಗಾಗಿ ಇದೀಗ ರಸ್ತೆಗಳೆಲ್ಲ ದುಸ್ಥಿತಿ ತಲುಪಿವೆ. ಪರಿಣಾಮ ಈ ರಸ್ತೆಯಲ್ಲಿ ನಿತ್ಯ ಓಡಾಡುವ ಸಾವಿರಾರು ಸ್ಥಳೀಯರು, ಪ್ರವಾಸಿಗರು ನಗರಸಭೆಗೆ ಶಾಪ ಹಾಕುತ್ತಲೇ ತೆರಳುತ್ತಿದ್ದಾರೆ. ಗುಂಡಿ ತಪ್ಪಿಸಲು ಹೋಗಿ ಅಪಘಾತಗಳು ನಗರದಲ್ಲಿ ಮಾಮೂಲು ಎಂಬಂತಾಗಿದ್ದು, ಮಡಿಕೇರಿಯ ಸೌಂದರ್ಯ ಸವಿಯಲು ಆಗಮಿಸುವ ಪ್ರವಾಸಿಗರು ಕೂಡ ಇಲ್ಲಿನ ರಸ್ತೆ ದುಸ್ಥಿತಿ ಕಂಡು ಕಂಗಾಲಾಗಿದ್ದಾರೆ.

ಇದನ್ನೂ ಓದಿ: “ಅಮ್ಮ ಏಳಮ್ಮ…” ತಾಯಿಯ ಶವದ ಬಳಿ ಮರಿ ಆನೆಯ ಮೂಕರೋಧನೆ; ಕಣ್ಣೀರಿಟ್ಟ ಜನತೆ

ರಸ್ತೆಗಳನ್ನ ಉನ್ನತ ದರ್ಜೆಗೇರಿಸುವಂತೆ ಮನವಿ

ಜೋರಾಗಿ ಮಳೆ ಸುರಿಯುವ ವೇಳೆ ರಸ್ತೆ ತುಂಬ ನೀರು ತುಂಬಿಕೊಂಡು ಬಹಳ ಸಮಸ್ಯೆ ಆಗುತ್ತಿದೆ. ಹೀಗಾಗಿ ಶಾಸಕರು ಸರ್ಕಾರದ ಮೇಲೆ ಒತ್ತಡ ಹಾಕಿ ಹೆಚ್ಚಿನ ಅನುದಾನ ತಂದು ನಗರದ ರಸ್ತೆಗಳನ್ನ ಉನ್ನತ ದರ್ಜೆಗೇರಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಆ ಮೂಲಕ ನಗರ ಕುಖ್ಯಾತಿಗೆ ಪಾತ್ರವಾಗುತ್ತಿರೋದನ್ನು ತಪ್ಪಿಸಲು ಸಹಕರಿಸುವಂತೆ ಕೇಳಿಕೊಂಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 3:53 pm, Mon, 27 July 26

Source link

ಇಸ್ರೇಲ್ ಪ್ರಧಾನಿ ನೆತನ್ಯಾಹು ವಾಷಿಂಗ್ಟನ್ ಭೇಟಿ: ಡೊನಾಲ್ಡ್ ಟ್ರಂಪ್ ಭೇಟಿ ಮತ್ತು ನ್ಯೂಯಾರ್ಕ್ ಪ್ರವಾಸದ ಸುತ್ತ ರಾಜಕೀಯ ವಿವಾದ – Kannada News | Netanyahu’s US Visit: Trump Meeting, Iran Talks and ICC Warrant Controversy

ವಾಷಿಂಗ್ಟನ್, ಜುಲೈ 27: ಅಂತಾರಾಷ್ಟ್ರೀಯ ರಾಜಕೀಯ ಮತ್ತು ಭೌಗೋಳಿಕ ಉದ್ವಿಗ್ನತೆಗಳ ನಡುವೆಯೇ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಅವರನ್ನು ಭೇಟಿಯಾಗಲು ವಾಷಿಂಗ್ಟನ್‌ಗೆ ಆಗಮಿಸುತ್ತಿದ್ದಾರೆ. ಇತ್ತೀಚೆಗೆ ನಿಧನರಾದ ಇಸ್ರೇಲ್ ಬೆಂಬಲಿಗ ಸೆನೆಟರ್ ಲಿಂಡ್ಸೆ ಗ್ರಹಾಂ ಅವರ ಸ್ಮರಣಾರ್ಥ ಕಾರ್ಯಕ್ರಮದಲ್ಲೂ ಅವರು ಭಾಗವಹಿಸಲಿದ್ದಾರೆ.

ಇರಾನ್ ವಿರುದ್ಧದ ಯುದ್ಧ, ಪರಮಾಣು ಯೋಜನೆಗಳ ವಿನಾಶ ಹಾಗೂ ಲೆಬನಾನ್‌ನಲ್ಲಿ ಹಿಜ್ಬುಲ್ಲಾ ನಿಶ್ಶಸ್ತ್ರೀಕರಣದ ಕುರಿತು ಉಭಯ ನಾಯಕರು ನಿರ್ಣಾಯಕ ಚರ್ಚೆ ನಡೆಸಲಿದ್ದಾರೆ.ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ನೆತನ್ಯಾಹು, “ಇರಾನ್ ಅನ್ನು ದುರ್ಬಲಗೊಳಿಸುವ ಟ್ರಂಪ್ ಅವರ ಶ್ರಮಕ್ಕೆ ಸಂಪೂರ್ಣ ಬೆಂಬಲವಿದೆ. ಇರಾನ್ ಅಥವಾ ಅದರ ಬೆಂಬಲಿತ ಉಗ್ರ ಸಂಘಟನೆಗಳು ಮತ್ತೆ ಇಸ್ರೇಲ್ ಮೇಲೆ ದಾಳಿ ನಡೆಸಿದರೆ, ಅದು ಅವರು ಮಾಡುವ ದೊಡ್ಡ ತಪ್ಪಾಗಲಿದೆ” ಎಂದು ಎಚ್ಚರಿಸಿದ್ದಾರೆ.

ಇರಾನ್ ವಿರುದ್ಧದ ಮಿಲಿಟರಿ ದಾಳಿಗಳು, ಮಧ್ಯಪ್ರಾಚ್ಯದ ಭದ್ರತೆ, ಗಾಜಾದ ಮಾನವೀಯ ಪರಿಸ್ಥಿತಿ ಮತ್ತು ಅಮೆರಿಕ-ಇಸ್ರೇಲ್ ಮಿಲಿಟರಿ ಮೈತ್ರಿಕೂಟದ ಕುರಿತು ಉಭಯ ನಾಯಕರು ವಿಸ್ತೃತ ಚರ್ಚೆ ನಡೆಸಲಿದ್ದಾರೆ. ಇರಾನ್‌ನ ಪರಮಾಣು ಯೋಜನೆಗಳನ್ನು ತಡೆಯುವುದು ಹಾಗೂ ಸೌದಿ ಅರೇಬಿಯಾದಂತಹ ಅರಬ್ ದೇಶಗಳೊಂದಿಗೆ ರಾಜತಾಂತ್ರಿಕ ಒಪ್ಪಂದಗಳನ್ನು ವಿಸ್ತರಿಸುವುದು ಈ ಸಭೆಯ ಮುಖ್ಯ ಕಾರ್ಯಸೂಚಿಯಾಗಿದೆ.

ಮತ್ತಷ್ಟು ಓದಿ: ಇರಾನ್ ಜತೆ ಮಾತುಕತೆ ನಡೆಸಲು ನಮಗೆ ಆಸಕ್ತಿ ಇಲ್ಲ, ತೆರೆಮರೆಯ ಸಂಭಾಷಣೆ ತಿರಸ್ಕರಿಸಿದ ಟ್ರಂಪ್

ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (UNGA) ಭಾಗವಹಿಸಲು ನೆತನ್ಯಾಹು ನ್ಯೂಯಾರ್ಕ್‌ಗೆ ಭೇಟಿ ನೀಡಬೇಕಾಗಿದ್ದು, ಈ ಪ್ರವಾಸವು ಭಾರಿ ಕಾನೂನು ಮತ್ತು ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಗಾಜಾ ಯುದ್ಧದಲ್ಲಿ ಮಾನವೀಯತೆಯ ವಿರುದ್ಧ ಎಸಗಲಾದ ಆಪಾದಿತ ಯುದ್ಧ ಅಪರಾಧಗಳಿಗಾಗಿ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯವು (ICC) ನೆತನ್ಯಾಹು ಮತ್ತು ಇಸ್ರೇಲ್ ಮಾಜಿ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ವಿರುದ್ಧ ಬಂಧನ ವಾರಂಟ್ ಹೊರಡಿಸಿದೆ.

ಕ್ಯಾಸ್ಪಿಯನ್ ಸಮುದ್ರದಲ್ಲಿ ಇರಾನಿನ ವ್ಯಾಪಾರಿ ಹಡಗಿನ ಮೇಲೆ ನಡೆದ ದಾಳಿಯು ಇರಾನ್ ಮತ್ತು ಉಕ್ರೇನ್ ನಡುವೆ ನೇರ ಸಂಘರ್ಷದ ವಾತಾವರಣ ಸೃಷ್ಟಿಸಿದೆ. ಈ ಹಡಗು ಇರಾನ್‌ನಿಂದ ರಷ್ಯಾಕ್ಕೆ ತೆರಳುತ್ತಿತ್ತು ಎನ್ನಲಾಗಿದ್ದು, ಉಕ್ರೇನ್ ತಾನು ಆತ್ಮರಕ್ಷಣೆಗೆ ಈ ಕ್ರಮ ಕೈಗೊಂಡಿರುವುದಾಗಿ ಸಮರ್ಥಿಸಿಕೊಂಡಿದೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಇರಾನ್ ವಿರುದ್ಧದ ಯುದ್ಧದಲ್ಲಿ ಅಮೆರಿಕದ ಬೆಂಬಲ ಗಿಟ್ಟಿಸಲು ಈ ದಾಳಿಗಳನ್ನು ನಡೆಸುತ್ತಿರಬಹುದು ಎಂದು ರಾಜತಾಂತ್ರಿಕ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಅತ್ತ ಗಾಜಾದಲ್ಲಿ ಕಳೆದ ವರ್ಷದಿಂದಲೇ (ಅಕ್ಟೋಬರ್ 2025) ಕದನ ವಿರಾಮ ಜಾರಿಯಲ್ಲಿದ್ದರೂ, ಇಸ್ರೇಲ್ ಸೇನೆಯು ಶೇ. 70 ರಷ್ಟು ಪ್ರದೇಶವನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಂಡಿದೆ. ಖಾನ್ ಯೂನಿಸ್ ದಕ್ಷಿಣ ಭಾಗದ ನೆರವು ವಿತರಣಾ ಕೇಂದ್ರದ ಬಳಿ ಇಸ್ರೇಲ್ ಸೇನೆ ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಪ್ಯಾಲೆಸ್ಟೀನಿಯನ್ನರು ಮೃತಪಟ್ಟಿದ್ದಾರೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ. ದಕ್ಷಿಣ ಲೆಬನಾನ್‌ನಲ್ಲಿ ನೆಲೆಸಿರುವ ಹಿಜ್ಬುಲ್ಲಾ ತನ್ನ ಶಸ್ತ್ರಾಸ್ತ್ರಗಳನ್ನು ಶರಣಾಗುವಂತೆ ಮಾಡಲು ಲೆಬನಾನ್ ಮತ್ತು ಇಸ್ರೇಲ್ ನಡುವೆ ಮಧ್ಯಸ್ಥಿಕೆ ವಹಿಸಲು ಅಮೆರಿಕ ತೆರೆಮರೆಯ ರಾಜತಾಂತ್ರಿಕ ಪ್ರಯತ್ನಗಳನ್ನು ಮುಂದುವರೆಸಿದೆ.

ನ್ಯೂಯಾರ್ಕ್ ನಗರದ ಮೇಯರ್ ಜೊಹ್ರಾನ್ ಮಮ್ದಾನಿ ಅವರು ನಗರ ಆಡಳಿತಕ್ಕೆ ಸ್ವತಂತ್ರವಾಗಿ ನೆತನ್ಯಾಹು ಅವರನ್ನು ಬಂಧಿಸುವ ಕಾನೂನು ಅಧಿಕಾರವಿಲ್ಲದಿದ್ದರೂ, ಫೆಡರಲ್ ಸರ್ಕಾರವು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಪಾದಿಸಿದ್ದಾರೆ.

ಅಮೆರಿಕವು ಐಸಿಸಿಯ ನ್ಯಾಯವ್ಯಾಪ್ತಿಯನ್ನು ಒಪ್ಪಿಕೊಳ್ಳುವುದಿಲ್ಲ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನೆತನ್ಯಾಹು ಅವರನ್ನು ಅಮೆರಿಕದ ಮಣ್ಣಿನಲ್ಲಿ ಯಾವುದೇ ಕಾರಣಕ್ಕೂ ಬಂಧಿಸಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಇರಾನ್ ಜೊತೆಗಿನ ಉದ್ವಿಗ್ನತೆಯ ಜೊತೆಗೆ, ಲೆಬನಾನ್ ಗಡಿಯಲ್ಲಿ ಹಿಜ್ಬುಲ್ಲಾ ವಿರುದ್ಧದ ಸಂಘರ್ಷ ಮತ್ತು ಸೌದಿ ಅರೇಬಿಯಾದೊಂದಿಗೆ ‘ನಾಗರಿಕ ಪರಮಾಣು ಒಪ್ಪಂದ’ ಮಾಡಿಕೊಳ್ಳುವ ಅಮೆರಿಕದ ಪ್ರಯತ್ನಗಳಿಗೆ ಇಸ್ರೇಲ್ ಯಾವ ಷರತ್ತುಗಳನ್ನು ವಿಧಿಸಲಿದೆ ಎಂಬುದು ಈ ಶ್ವೇತಭವನದ ಸಭೆಯಲ್ಲಿ ನಿರ್ಣಾಯಕವಾಗಲಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ನಾನು ಬೀದಿ ಹೋರಾಟಗಾರ: ಜೈರಾಮ್ ರಮೇಶ್ ಹೇಳಿಕೆಗೆ ಧರ್ಮೇಂದ್ರ ಪ್ರಧಾನ್ ತಿರುಗೇಟು – Kannada News | Dharmendra Pradhan’s Street Fighter Reply to Jairam Ramesh Post NEET Resignation

ನವದೆಹಲಿ, ಜುಲೈ 27: ನೀಟ್(NEET) ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಬೆನ್ನಲ್ಲೇ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಮೊದಲ ಬಾರಿಗೆ ಸಂಸತ್ತಿಗೆ ಆಗಮಿಸಿದ ಧರ್ಮೇಂದ್ರ ಪ್ರಧಾನ್ ಅವರಿಗೆ ಎನ್‌ಡಿಎ ಸಂಸದರು ಭವ್ಯ ಸ್ವಾಗತ ಕೋರಿದರು. ಈ ವೇಳೆ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರ ಹೇಳಿಕೆಗೆ ಪ್ರಧಾನ್ ನೀಡಿದ ತಿರುಗೇಟು ಸಂಸತ್ತಿನ ಅಂಗಳದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಸಂಸತ್ತಿನ ಆವರಣದಲ್ಲಿ ಪ್ರಧಾನ್ ಅವರನ್ನು ಎದುರುಗೊಂಡ ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್, “ಇದೆಲ್ಲಾ ನಡೆಯುತ್ತಿರುತ್ತದೆ ಬಿಡಿ” ಎಂದು ವ್ಯಂಗ್ಯವಾಗಿ ಮಾತನಾಡಿ ಸಮಾಧಾನಪಡಿಸಲು ಯತ್ನಿಸಿದರು. ಇದಕ್ಕೆ ತಕ್ಷಣವೇ ಪ್ರತ್ಯುತ್ತರ ನೀಡಿದ ಪ್ರಧಾನ್, “ಏನೂ ಆಗಿಲ್ಲ, ನಾನು ಬೀದಿ ಹೋರಾಟಗಾರ , ಎಸಿ ಕೊಠಡಿಯಲ್ಲಿ ಕೂರುವ ಕಾರ್ಯಕರ್ತನಲ್ಲ ಎಂದು ಖಡಕ್ ಆಗಿ ತಿರುಗೇಟು ನೀಡಿದ್ದಾರೆ.

ಸಂಸತ್ತಿನಲ್ಲಿ ಭವ್ಯ ಸ್ವಾಗತ
ಸೋಮವಾರ ಪ್ರಧಾನ್ ಅವರು ಕಾರಿನಿಂದ ಇಳಿಯುತ್ತಿದ್ದಂತೆ ಎನ್‌ಡಿಎ ಸಂಸದರು “ಧರ್ಮೇಂದ್ರ ಪ್ರಧಾನ್ ಜಿಂದಾಬಾದ್” ಎಂದು ಜಯಘೋಷ ಕೂಗಿದರು. ಒಬ್ಬ ಸಂಸದರು ಸಾಂಪ್ರದಾಯಿಕ ಟೋಪಿ ಹಾಕಿ, ಶಾಲು ಹೊದಿಸಿ ಗೌರವಿಸಿದರು. ಯಾವುದೇ ನೇರ ಆರೋಪಗಳಿಲ್ಲದಿದ್ದರೂ ಯುವಕರ ಭವಿಷ್ಯಕ್ಕಾಗಿ ಹಾಗೂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ ಅವರ ನಿರ್ಧಾರವನ್ನು ಬಿಜೆಪಿ ನಾಯಕರು “ತ್ಯಾಗ ಮತ್ತು ರಾಜಕೀಯ ಹೊಣೆಗಾರಿಕೆಯ ಮಾದರಿ” ಎಂದು ಬಣ್ಣಿಸಿದ್ದಾರೆ.

ವಿಡಿಯೋ

ಒಡಿಶಾದ ಸಂಬಲ್ಪುರ ಕ್ಷೇತ್ರದ ಸಂಸದರಾಗಿರುವ ಧರ್ಮೇಂದ್ರ ಪ್ರಧಾನ್, ರಾಜ್ಯ ಬಿಜೆಪಿಯ ಅತ್ಯಂತ ಪ್ರಭಾವಿ ನಾಯಕರಾಗಿದ್ದಾರೆ. ಒಡಿಶಾದಲ್ಲಿ ಬಿಜೆಪಿ ಸರ್ಕಾರ ರಚನೆಯಾಗುವಲ್ಲಿ ಮತ್ತು 78 ಶಾಸಕರಲ್ಲಿ ಬಹುಪಾಲು ಶಾಸಕರನ್ನು ಬೆಳೆಸುವಲ್ಲಿ ಇವರ ಪಾತ್ರ ಪ್ರಮುಖವಾಗಿದೆ.

ಮತ್ತಷ್ಟು ಓದಿ: ನೀಟ್​ ಕೇಸ್ ಬಳಿಕ ಎಚ್ಚೆತ್ತ ಕೇಂದ್ರ: ಪರೀಕ್ಷಾ ವ್ಯವಸ್ಥೆ ಸುಧಾರಣೆಗೆ ದಿಟ್ಟ ನಿರ್ಧಾರ ಕೈಗೊಂಡ ಮೋದಿ, ಏನದು?

ಪ್ರಧಾನ್ ಅವರು ಕೇವಲ ಸಚಿವರಷ್ಟೇ ಅಲ್ಲದೆ, ಪಕ್ಷದ ಪ್ರಮುಖ ‘ಚುನಾವಣಾ ತಂತ್ರಜ್ಞ’ ಎಂದು ಹೆಸರು ಪಡೆದಿದ್ದಾರೆ. ಇತ್ತೀಚೆಗೆ ಹರಿಯಾಣ, ಬಿಹಾರ, ಉತ್ತರ ಪ್ರದೇಶ ಹಾಗೂ ಪಶ್ಚಿಮ ಬಂಗಾಳದ ಭವಾನಿಪುರ ಚುನಾವಣೆಯಲ್ಲಿ ಸುವೇಂದು ಅಧಿಕಾರಿ ಗೆಲುವಿನ ಹಿಂದೆ ಇವರ ಪರಿಶ್ರಮವಿತ್ತು. ಸಚಿವ ಸ್ಥಾನದಿಂದ ಕೆಳಗಿಳಿದಿರುವ ಪ್ರಧಾನ್ ಅವರಿಗೆ ಮುಂಬರುವ 5 ರಾಜ್ಯಗಳ ವಿಧಾನಸಭಾ ಚುನಾವಣೆಗಳ ಉಸ್ತುವಾರಿ ಅಥವಾ ಬಿಜೆಪಿ ಪಕ್ಷದ ಸಂಘಟನೆಯಲ್ಲಿ ಪ್ರಮುಖ ರಾಷ್ಟ್ರೀಯ ಹುದ್ದೆಯನ್ನು ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಹಾಸನ: ಪ್ರಿಯಕರನೊಂದಿಗೆ ಸೇರಿ ಸ್ವಂತ ಮನೆಗೆ ಕನ್ನ ಹಾಕಿದ ಸೊಸೆ; ಸಿಕ್ಕಿಬಿದ್ದಿದ್ಹೇಗೆ? – Kannada News | Hassan Robbery Case Solved: Daughter in Law and Her Lover Arrested, 56 Lakh Gold and Cash Recovered

ಪ್ರಾತಿನಿಧಿಕ ಚಿತ್ರImage Credit source: Getty images

ಹಾಸನ, ಜುಲೈ 27: ಮನೆಗೆ ನುಗ್ಗಿ ಬೀರುವಿನಲ್ಲಿದ್ದ ಭಾರೀ ಪ್ರಮಾಣದ ಚಿನ್ನಾಭರಣ ಹಾಗೂ ನಗದು ದೋಚಿದ್ದ (robbery) ಪ್ರಕರಣವನ್ನು ಹಾಸನ ಗ್ರಾಮಾಂತರ ಠಾಣೆ ಪೊಲೀಸರು ಒಂದೇ ದಿನದಲ್ಲಿ ಯಶಸ್ವಿಯಾಗಿ ಭೇದಿಸಿದ್ದಾರೆ. ಈ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಕೇಶವೇಗೌಡ ಅವರ ಸೊಸೆ ಅಮೃತಾ ಹಾಗೂ ಆಕೆಯ ಪ್ರಿಯಕರ ಪರಮೇಶ್ ಅಲಿಯಾಸ್ ಚೇತನ್​​ನನ್ನು ಪೊಲೀಸರು ಬಂಧಿಸಿದ್ದು, ಒಟ್ಟು 56,16,000 ಮೌಲ್ಯದ 441.5 ಗ್ರಾಂ ಚಿನ್ನಾಭರಣ ಹಾಗೂ 13,40,000 ರೂ ಹಣ ವಶಪಡಿಸಿಕೊಂಡಿದ್ದಾರೆ.

ನಡೆದಿದ್ದೇನು?

ಹಾಸನ ತಾಲೂಕಿನ ದೊಡ್ಡಹೊನ್ನೇನಹಳ್ಳಿ ಗ್ರಾಮದಲ್ಲಿ ಶನಿವಾರ ಹಾಡುಹಗಲೇ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಕೇಶವೇಗೌಡ, ಅವರ ಪತ್ನಿ ಜಯಲಕ್ಷ್ಮೀ ಹಾಗೂ ಮಗ ವೇಣುಗೋಪಾಲ್ ಜಮೀನಿನ ಕೆಲಸಕ್ಕೆ ತೆರಳಿದ್ದರು. ಮಗನನ್ನು ಶಾಲೆಗೆ ಕಳುಹಿಸಿ ಮನೆಯಲ್ಲೇ ಇದ್ದ ಸೊಸೆ ಅಮೃತಾ, ಸಂಚು ರೂಪಿಸಿ ತನ್ನ ಪ್ರಿಯಕರ ಪರಮೇಶ್‌ನನ್ನು ಮನೆಗೆ ಕರೆಸಿಕೊಂಡು ಕೃತ್ಯವೆಸಗಿದ್ದಾಳೆ.

ಕಳ್ಳತನಕ್ಕೆ ಪ್ರಿಯಕರ ಸಾಥ್​

ಮೂಲತಃ ಕೆ.ಹಿರೀಹಳ್ಳಿ ಗ್ರಾಮದವರಾದ ಅಮೃತಾ ಹಾಗೂ ಪ್ರಿಯಕರ ಪರಮೇಶ್​​ ಹಲವು ವರ್ಷಗಳಿಂದ ಪರಿಚಯವಿದ್ಧರು. ಮನೆಗೆ ಬಂದ ಪರಮೇಶ್​​ಗೆ ಬೀರುವಿನಲ್ಲಿದ್ದ ಚಿನ್ನ ಮತ್ತು ಹಣವನ್ನು ಆತನಿಗೆ ನೀಡಿದ್ದಾಳೆ. ನಂತರ ತನಗೇನೂ ತಿಳಿಯದಂತೆ ಮನೆಯ ಮುಂಬಾಗಿಲಿಗೆ ಬೀಗ ಹಾಕದೆ, ಕೊಟ್ಟಿಗೆಗೆ ಬೀಗ ಹಾಕಿಕೊಂಡು ಜಮೀನಿನತ್ತ ತೆರಳಿದ್ದಾಳೆ.

ಇದನ್ನೂ ಓದಿ: ಗದಗ ಪೊಲೀಸರಿಂದ ಭರ್ಜರಿ ಬೇಟೆ: ಮೂವರು ಅಂತಾರಾಜ್ಯ ಕಳ್ಳರ ಬಂಧನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ವಶಕ್ಕೆ

ಇತ್ತ ಸಂಜೆ ಜಮೀನಿನ ಕೆಲಸ ಮುಗಿಸಿಕೊಂಡು ಕೇಶವೇಗೌಡ ದಂಪತಿ ಮನೆಗೆ ಹಿಂತಿರುಗಿದಾಗ ಬೀರುವಿನಲ್ಲಿದ್ದ ಚಿನ್ನಾಭರಣ ಹಾಗೂ ಹಣ ಕಳುವಾಗಿರುವುದು ಬೆಳಕಿಗೆ ಬಂದಿದೆ. ಈ ವೇಳೆ ಅಮೃತಾ ಕಳ್ಳತನವಾಗಿರುವ ಬಗ್ಗೆ ತನಗೇನೂ ಗೊತ್ತಿಲ್ಲವೆಂಬಂತೆ ನಾಟಕವಾಡಿದ್ದಾಳೆ.

ಇದನ್ನೂ ಓದಿ: ಸರ್ಕಾರಿ ಕೆಲಸದ ಆಮಿಷ ಒಡ್ಡಿ ಬೆಂಗಳೂರಿನ ವ್ಯಕ್ತಿಗೆ 26 ಲಕ್ಷ ರೂ. ವಂಚನೆ: ನಾಲ್ವರ ವಿರುದ್ಧ ಎಫ್‌ಐಆರ್!

ಇನ್ನು ಈ ಹಿಂದೆ ಕೂಡ ಅಮೃತಾ ತನ್ನ ಅತ್ತೆ ಜೊತೆಗೆ ಜಗಳವಾಡಿ 100 ಗ್ರಾಂ ಚಿನ್ನಾಭರಣವನ್ನು ತೆಗೆದುಕೊಂಡು ಹೋಗಿದ್ದಳು. ಇನ್ನು ಘಟನೆ ನಡೆದಾಗ ಮನೆಯಲ್ಲಿ ಒಬ್ಬಳೇ ಇದ್ದ ಕಾರಣ ಅನುಮಾನ ವ್ಯಕ್ತವಾಗಿದೆ. ಹಿಗಾಗಿ ತನಿಖೆ ಕೈಗೆತ್ತಿಕೊಂಡ ಹಾಸನ ಗ್ರಾಮಾಂತರ ಪೊಲೀಸರು ಸಿಸಿಟಿವಿ ಪರಿಶೀಲಿಸಿದಾಗ ಓರ್ವ ವ್ಯಕ್ತಿ ಮನೆಗೆ ಬಂದು ಹೋಗಿರುವುದು ಪತ್ತೆ ಆಗಿದೆ. ಹಾಗಾಗಿ ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಬಯಲಾಗಿದ್ದು, ಅಮೃತಾ ಸೇರಿ ಪ್ರಿಯಕರ ಪರಮೇಶ್‌ನನ್ನು ಬಂಧಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 3:31 pm, Mon, 27 July 26

Source link

ಈ ಬಾರಿ ಮೈಸೂರು ದಸರಾ ಉದ್ಘಾಟಕರಾಗುತ್ತಾರಾ ಮಾಜಿ ಕ್ರಿಕೆಟರ್​​? ಇಬ್ಬರಲ್ಲಿ ಯಾರು? – Kannada News | Anil Kumble And Rahul Dravid Name In mysuru dasara 2026 inauguration Says yathindra siddaramaiah

ಮೈಸೂರು, (ಜುಲೈ 27): ವಿಶ್ವವಿಖ್ಯಾತ ಮೈಸೂರು ದಸರಾ 2026ರ (Mysuru Dasara 2026) ಉದ್ಘಾಟನೆಗೆ ಮುಹೂರ್ತ ಫಿಕ್ಸ್ ಆಗಿದೆ. ಅಕ್ಟೋಬರ್ 11ಕ್ಕೆ ಉದ್ಘಾಟನೆ ಹಾಗೂ ಅಕ್ಟೋಬರ್ 21ಕ್ಕೆ ಜಂಬೂ ಸವಾರಿ ನಡೆಯಲಿದೆ. ಹೀಗಾಗಿ ಈಗಿನಿಂದಲೆ ಸಕಲ ತಯಾರಿಗಳು ನಡೆದಿವೆ. ಈ ಸಂಬಂಧ ಸಚಿವ ಯತೀಂದ್ರ ಸಿದ್ದರಾಮಯ್ಯನವರು (yathindra siddaramaiah )(ಜುಲೈ 27) ಮೈಸೂರಿನಲ್ಲಿ ದಸರಾ ಕಾರ್ಯಕಾರಿ ಸಭೆ ಮಾಡಿದ್ದು, ಈ ಬಾರಿ 17 ಉಪ ಸಮಿತಿಗಳನ್ನು ರಚನೆ ಮಾಡಲು ನಿರ್ಧಾರ ಮಾಡಲಾಗಿದೆ. ಇನ್ನು ಈ ಸಭೆಯಲ್ಲಿ ಕಂಬಳ ಬಗ್ಗೆ ಯಾವುದೇ ಅಂತಿಮ ತೀರ್ಮಾನವಾಗಿಲ್ಲ. ಬದಲಿಗೆ ಸಿಎಂ ಡಿಕೆ ಶಿವಕುಮಾರ್ ನಿರ್ಧಾರಕ್ಕೆ ಬಿಡಲಾಗಿದೆ. ಇನ್ನು ಈ ಬಾರಿಯ ದಸರಾ ಉದ್ಘಾಟನೆ ಯಾರು ಮಾಡುತ್ತಾರೆ ಎನ್ನುವ ಕುತೂಹಲ ಇದ್ದು, ಇಬ್ಬರು ಮಾಜಿ ಕ್ರಿಕೆಟರ್ಸ್ ಅನಿಲ್ ಕುಂಬ್ಳೆ ಹಾಗೂ ರಾಹುಲ್ ದ್ರಾವಿಡ್  ಹೆಸರು ಕೇಳಿಬಂದಿವೆ.

ದಸರಾ ಕಾರ್ಯಕಾರಿ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಯತೀಂದ್ರ ಸಿದ್ದರಾಮಯ್ಯ,
ದಸರಾ ಕುರಿತು ಕಾರ್ಯಕಾರಿ ಸಭೆ ನಡೆಸಿದ್ದು, ಉಪ ಸಮಿತಿಗಳ ರಚನೆ ಕುರಿತು ಸಲಹೆಗಳನ್ನು ಪಡೆದಿದ್ದೇವೆ
17 ಉಪ ಸಮಿತಿಗಳನ್ನು ಈ ಬಾರಿ ರಚನೆ ಮಾಡಲು ನಿರ್ಧಾರ ಮಾಡಿದ್ದೇವೆ.ಕಂಬಳ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ. ಕಂಬಳ ಫೈನಲ್ ಆದರೆ ಇನ್ನೊಂದು ಉಪ ಸಮಿತಿ ಆಗತ್ತದೆ. ಕಂಬಳ ಮಾಡಿದರೆ ಸಾತಗಳ್ಳಿ ಅಲ್ಲೇ ಮಾಡುತ್ತಾರೆ. ಆದ್ರೆ ಸಿಎಂ ಇನ್ನೂ ಆ ಬಗ್ಗೆ ಫೈನಲ್ ಮಾಡಿಲ್ಲ. ಎಲ್ಲವೂ ಕೂಡ ಅವರ ಕೈನಲ್ಲಿ ಇದೆ ಎಂದು ಮಾಹಿತಿ ನೀಡಿದರು.

ದಸರಾ ಉದ್ಘಾಟನೆಗೆ ಇಬ್ಬರು ಮಾಜಿ ಕ್ರಿಕೆಟರ್ಸ್​​ ಹೆಸರು

ಇನ್ನು ಪ್ರಮುಖವಾಗಿ ಈ ಬಾರಿ ಮೈಸೂರು ದಸರಾವನ್ನು ಯಾರು ಉದ್ಘಾಟನೆ ಮಾಡುತ್ತಾರೆ ಎನ್ನುವುದು ತೀವ್ರ ಕುತೂಲಕ ಮೂಡಿಸಿದ್ದು, ಇದರ ಮಧ್ಯೆ ಇಬ್ಬರು ಮಾಜಿ ಕ್ರಿಕೆಟರ್ಸ್ ಹೆಸರುಗಳು ಕೇಳಿಬಂದಿವೆ. ಈ ಬಗ್ಗೆ ಯತೀಂದ್ರ ಪ್ರತಿಕ್ರಿಯಿಸಿದ್ದು, ದಸರಾ ಉದ್ಘಾಟಕರ ಆಯ್ಕೆ ಮಾಡಬೇಕೆನ್ನುವುದು ಸಿಎಂ ನಿರ್ಧಾರವೇ ಅಂತಿಮ. ನಾವೆಲ್ಲರೂ ಉದ್ಘಾಟಕರ ಆಯ್ಕೆ ಅವರಿಗೆ ಬಿಟ್ಟಿದ್ದೇವೆ. ಶಾಸಕರು ಒಂದಷ್ಟು ಸಲಹೆ ಕೊಟ್ಟಿದ್ದಾರೆ. ದಸರಾ ಉದ್ಘಾಟನೆಗೆ ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ಹೆಸರು ಮುಂಚೂಣಿಯಲ್ಲಿ ಎಂಬ ವಿಚಾರ
ನಾನು ಈಗಾಗಲೇ ಹೇಳಿದ್ದೇನೆ. ಯಾವುದೇ ಹೆಸರನ್ನು ಆಯ್ಕೆ ಮಾಡಿದ್ರು ಸಿಎಂ ಆಯ್ಕೆ ಮಾಡುತ್ತಾರೆ ಎಂದು ಸ್ಪಷ್ಟಪಡಿಸಿದರು.

ದಸರಾ ಪಾಸ್​​​ನಲ್ಲಿ ಗೊಂದಲವಾಗದಂತೆ ಸೂಚನೆ

ಇನ್ನು ದಸರಾ ಪಾಸ್ ಬಗ್ಗೆ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ, ದಸರಾ ಪಾಸ್ ವಿಚಾರವಾಗಿ ಕಳೆದ ಬಾರಿ ಗೊಂದಲ ಇತ್ತು. ಈ ಬಾರಿ ಯಾವುದೇ ಗೊಂದಲ ಆಗಬಾರದು ಅಂತ ಜಿಲ್ಲಾಡಳಿತಕ್ಕೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದೇನೆ. ಪಾಸ್ ವಿಚಾರದಲ್ಲಿ ಸಮಸ್ಯೆ ಆಗದಂತೆ ಕ್ರಮ ಆಗುತ್ತದೆ. ಪಾಸ್ ಬೇಡ ಎಂದು ಶಾಸಕರು ಹೇಳಿದ್ದಾರೆ. ಈ ವಿಚಾರವನ್ನು ಸಿಎಂಗೆ ತಿಳಿಸಿದ್ದು, ಆ ಬಗ್ಗೆ ಸೂಕ್ತ ತೀರ್ಮಾನ ಆಗುತ್ತದೆ. ಗೋಲ್ಡ್ ಕಾರ್ಡ್ ಜನರಿಗೆ ಮಾತ್ರ ಲಭ್ಯವಾಗಲಿದೆ. ಈ ಬಾರಿ ಗೋಲ್ಡ್ ಆಸನಗಳು ಎಷ್ಟಿರುತ್ತದೆ ಅಷ್ಟೇ ಆಸನಗಳ ವ್ಯವಸ್ಥೆ ಮಾಡಲಾಗುತ್ತದೆ.

ಇನ್ನು ಜಂಬುಸವಾರಿಗೆ ಆನೆಗಳ ಆಯ್ಕೆ ಪ್ರಕ್ರಿಯೆಯು ನಡೆಯುತ್ತಿದೆ. ಯಾವುದೇ ತೊಂದರೆ ಇಲ್ಲ. ಅರಣ್ಯ ಇಲಾಖೆ ಅಧಿಕಾರಿಗಳು ಈಗಾಗಲೇ ವರದಿ ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಆನೆಗಳ ಪಟ್ಟಿ ಬಿಡುಗಡೆಯಾಗುತ್ತೆ ಎಂದು ವಿವರಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link