ಹುಟ್ಟುಹಬ್ಬದ ದಿನವೇ ನಿವೃತ್ತ ಸೈನಿಕನಿಗೆ ಸೈಬರ್ ಶಾಕ್: ‘ಗಿಫ್ಟ್’ ಆಸೆಗೆ ಬಿದ್ದ ಯೋಧನಿಗೆ 2.82 ಲಕ್ಷ ರೂ. ವಂಚನೆ – Kannada News | Tumakuru Cybercrime: Fake Birthday Gift Offer Dupes Retired Soldier of 2.82 Lakh
ತುಮಕೂರು, ಜೂ.20: ನಿವೃತ್ತರಾಗಿದ್ದ ಯೋಧರೊಬ್ಬರಿಗೆ ಅವರ ಹುಟ್ಟುಹಬ್ಬದ ದಿನದಂದೇ ಸೈಬರ್ ಖದೀಮರು ಬರೋಬ್ಬರಿ ಲಕ್ಷಾಂತರ ರೂಪಾಯಿ ವಂಚಿಸಿರುವ ಆಘಾತಕಾರಿ ಘಟನೆ ತುಮಕೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಹ್ಯಾಪಿ ಬರ್ತ್‌ಡೇ ಎಂದು ಶುಭಕೋರಿ, ಗಿಫ್ಟ್ ಕಳುಹಿಸುವ ನೆಪದಲ್ಲಿ ನಿವೃತ್ತ ಯೋಧನಿಗೆ ಬರೋಬ್ಬರಿ 2.82 ಲಕ್ಷ ರೂಪಾಯಿ ನಾಮ ಹಾಕಿದ್ದಾರೆ. ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿ ಗ್ರಾಮದ ನಿವಾಸಿ, ನಿವೃತ್ತ ಯೋಧ ಶಿವಕುಮಾರ್ ವಂಚನೆಗೊಳಗಾದವರು. ಜೂನ್ 20ರಂದು ನಿವೃತ್ತ ಯೋಧ ಶಿವಕುಮಾರ್ ಅವರ ಹುಟ್ಟುಹಬ್ಬವಿತ್ತು. ಇದೇ ದಿನ ಮುಂಜಾನೆ…