ಭಾರಿ ಸಂಭಾವನೆ ಡಿಮ್ಯಾಂಡ್: ಬ್ಯಾಕ್ ಟು ಬ್ಯಾಕ್ ಆಫರ್ ಕಳೆದುಕೊಳ್ಳುತ್ತಿದ್ದಾರಾ ಪೂಜಾ ಹೆಗ್ಡೆ? – Kannada News | Pooja Hegde’s Stiff Salary Demand: Why Tollywood Producers Are Turning Away?
ಸಾಮಾನ್ಯವಾಗಿ ನಟ-ನಟಿಯರು ನಿರಂತರ ಫ್ಲಾಪ್ ಕೊಟ್ಟರೆ ಬೇಡಿಕೆ ಕಡಿಮೆ ಆಗುತ್ತದೆ. ಆ ಸಂದರ್ಭದಲ್ಲಿ ಸಂಭಾವನೆ ತಗ್ಗಿಸಿಕೊಂಡರೆ ಆಫರ್ಗಳು ಬರುತ್ತವೆ. ಆದರೆ, ನನಗೆ ಇಷ್ಟೇ ಹಣ ಬೇಕು ಎಂದು ಕುಳಿತರೆ ಸಿಕ್ಕ ಆಫರ್ ಕೂಡ ಕೈ ತಪ್ಪುತ್ತದೆ. ಈಗ ನಟಿ ಪೂಜಾ ಹೆಗ್ಡೆ ಅವರಿಗೂ (Pooja Hegde) ಇದೇ ರೀತಿ ಆಗಿದೆಯೇ ಎನ್ನುವ ಪ್ರಶ್ನೆ ಅಭಿಮಾನಿಗಳಿಗೆ ಮೂಡಿದೆ. ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಪೂಜಾ ಹೆಗ್ಡೆ ಸದ್ಯ ತೆಲುಗು ಚಿತ್ರರಂಗದಲ್ಲಿ ಸಾಲು ಸಾಲು ಅವಕಾಶಗಳನ್ನು ಕಳೆದುಕೊಳ್ಳುತ್ತಿದ್ದಾರೆ ಎಂಬ…