All posts by nagaraj11081993

International Day Of Potato: ಆಲೂಗಡ್ಡೆ ತಿನ್ನುವುದರಿಂದ ಆರೋಗ್ಯಕ್ಕಾಗುವ ಪ್ರಯೋಜನಗಳೇನು?

ಅಂತಾರಾಷ್ಟ್ರೀಯ ಆಲೂಗಡ್ಡೆ ದಿನImage Credit source: vecteezy

ಆಲೂಗಡ್ಡೆಯನ್ನು (Potato) ತಿನ್ನಲು ಬಹುತೇಕ ಎಲ್ಲರೂ ಇಷ್ಟಪಡುತ್ತಾರೆ. ಆಲೂ ಟಿಕ್ಕಿ, ಆಲೂಗಡ್ಡೆ ಚಾಟ್‌, ಸಾಂಬರ್‌, ಕಟ್ಲೆಟ್‌, ಆಲೂ ಪರೋಠಾ ಸೇರಿದಂತೆ ಆಲೂಗಡ್ಡೆಯಿಂದ ಬಗೆ ಬಗೆಯ ಖಾದ್ಯಗಳನ್ನು ತಯಾರಿಸಿ ತಿನ್ನುತ್ತಾರೆ. ಬಹುತೇಕರ ನೆಚ್ಚಿನ ತರಕಾರಿಯಾಗಿರುವ ಆಲೂಗಡ್ಡೆಯನ್ನು ಮೊದಲು ದಕ್ಷಿಣ ಪೆರು ಮತ್ತು ಬೊಲಿವಿಯಾದ ವಾಯುವ್ಯ ಪ್ರದೇಶಗಳಲ್ಲಿ ಸಾವಿರಾರು ವರ್ಷಗಳ ಹಿಂದೆ ಬೆಳೆಸಲಾಯಿತು ಎಂದು ನಂಬಲಾಗಿದೆ. ಇಂದು ಈ ತರಕಾರಿಯನ್ನು ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ಹೇರಳವಾಗಿ ಬೆಳೆಯಲಾಗುತ್ತದೆ. ಈ ಆಲೂಗಡ್ಡೆ ಕೃಷಿ ಆರ್ಥಿಕತೆಯಲ್ಲಿ ವಹಿಸುವ ಪಾತ್ರದ ಬಗ್ಗೆ ಹಾಗೂ ಆಲೂಗಡ್ಡೆಯ ಆರೋಗ್ಯ ಪ್ರಯೋಜನಗಳ ಬಗ್ಗೆ ಜನರಿಗೆ ತಿಳಿಸಲು ಪ್ರತಿವರ್ಷ ಮೇ 30 ರಂದು ಅಂತಾರಾಷ್ಟ್ರೀಯ ಆಲೂಗಡ್ಡೆ ದಿನವನ್ನು ಆಚರಿಸಲಾಗುತ್ತದೆ.

ಅಂತಾರಾಷ್ಟ್ರೀ ಆಲೂಗಡ್ಡೆ ದಿನದ ಇತಿಹಾಸವೇನು?

ಡಿಸೆಂಬರ್ 2023 ರಲ್ಲಿ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಆಲೂಗಡ್ಡೆಯ ಬಹು ಪೌಷ್ಟಿಕಾಂಶ, ಆರ್ಥಿಕ, ಪರಿಸರ ಮತ್ತು ಸಾಂಸ್ಕೃತಿಕ ಮೌಲ್ಯಗಳು ಹಾಗೂ  ಗ್ರಾಮೀಣ ಕುಟುಂಬಗಳು ಮತ್ತು ಉತ್ಪಾದಕರಿಗೆ ಅಮೂಲ್ಯವಾದ ಆಹಾರ ಸಂಪನ್ಮೂಲ ಮತ್ತು ಆದಾಯದ ಮೂಲವಾಗಿರುವ  ಆಲೂಗಡ್ಡೆಯ  ಕೊಡುಗೆ ಮತ್ತು ಮಹತ್ವದ  ಬಗ್ಗೆ ಜಾಗೃತಿ ಮೂಡಿಸಲು, ಮೇ 30 ರಂದು ಅಂತಾರಾರಾಷ್ಟ್ರೀಯ ಆಲೂಗಡ್ಡೆ ದಿನವನ್ನಾಗಿ ಆಚರಿಸುವುದಾಗಿ ಘೋಷಿಸಿತು. ಅಂದಿನಿಂದ ಪ್ರತಿವರ್ಷ ಮೇ 30 ರಂದು ಅಂತಾರಾಷ್ಟ್ರೀಯ ಆಲೂಗಡ್ಡೆ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.

ಅಂತಾರಾಷ್ಟ್ರೀಯ ಆಲೂಗಡ್ಡೆ ದಿನದ ಮಹತ್ವವೇನು?

  • ಆಲೂಗಡ್ಡೆಯ ಆರ್ಥಿಕ, ಸಾಮಾಜಿಕ ಪ್ರಾಮುಖ್ಯತೆ ಮತ್ತು ಆಹಾರ ಭದ್ರತೆ, ಪೋಷಣೆಯಲ್ಲಿ ಅದರ ಕೊಡುಗೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅಂತಾರಾಷ್ಟ್ರೀಯ ಆಲೂಗಡ್ಡೆ ದಿನವನ್ನು ಆಚರಿಸಲಾಗುತ್ತದೆ.
  • ಈ ದಿನವು ಆಹಾರ ಅಭದ್ರತೆಯನ್ನು ನಿಭಾಯಿಸುವಲ್ಲಿ, ಪೌಷ್ಟಿಕಾಂಶವನ್ನು ಸುಧಾರಿಸುವಲ್ಲಿ ಮತ್ತು ಜಗತ್ತಿನಾದ್ಯಂತ ಜೀವನೋಪಾಯವನ್ನು ಬೆಂಬಲಿಸುವಲ್ಲಿ ಆಲೂಗಡ್ಡೆಯ ಅಗತ್ಯ ಪಾತ್ರವನ್ನು ಎತ್ತಿ ತೋರಿಸುತ್ತದೆ.
  • ಆಲೂಗಡ್ಡೆಯ ಪೌಷ್ಟಿಕಾಂಶದ ಮೌಲ್ಯದಿಂದ ಹಿಡಿದು ಅದರ ಆರ್ಥಿಕ, ಪರಿಸರ ಮತ್ತು ಸಾಂಸ್ಕೃತಿಕ ಮಹತ್ವದವರೆಗೆ ಅದರ ಪ್ರಯೋಜನಗಳ ಬಗ್ಗೆ ಜನರಿಗೆ ಈ ದಿನ ತಿಳಿಸಲಾಗುತ್ತದೆ.

ಇದನ್ನೂ ಓದಿ: ಜೂನ್‌ ತಿಂಗಳಲ್ಲಿ ಆಚರಿಸಲಾಗುವ ರಾಷ್ಟ್ರೀಯ-ಅಂತಾರಾಷ್ಟ್ರೀಯ ಕಾರ್ಯಕ್ರಮಗಳ ಪಟ್ಟಿ

ಆಲೂಗಡ್ಡೆಯ ಆರೋಗ್ಯ ಪ್ರಯೋಜನಗಳೇನು?

  • ಆಲೂಗಡ್ಡೆಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು, ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಆಲೂಗಡ್ಡೆ ಫೈಬರ್ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಸಹ ಹೊಂದಿದ್ದು, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
  • ಆಲೂಗಡ್ಡೆ ವಿಟಮಿನ್ ಬಿ ಮತ್ತು ನಿಯಾಸಿನ್ (ವಿಟಮಿನ್ ಬಿ-3) ಅನ್ನು ಹೊಂದಿದ್ದು, ಇದು ಗ್ಯಾಸ್ ಅನ್ನು ನಿವಾರಿಸಲು ಸಹಾಯ ಮಾಡುತ್ತದೆ.
  • ಆಲೂಗಡ್ಡೆ ಫೈಬರ್‌ನಲ್ಲಿ ಸಮೃದ್ಧವಾಗಿದೆ, ಇದು ನಿಮಗೆ ಹೆಚ್ಚು ಸಮಯದವರೆಗೆ ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ಇದು ಆಗಾಗ್ಗೆ ಆಹಾರ ಸೇವನೆ ಮಾಡುವುದನ್ನು ಮತ್ತು ಹೆಚ್ಚುವರಿ ಕ್ಯಾಲೋರಿ ಸೇವನೆಯನ್ನು ತಡೆಯಲು ಸಹಾಯ ಮಾಡುತ್ತದೆ.
  • ಆಲೂಗಡ್ಡೆ ಕ್ಯಾಲ್ಸಿಯಂ, ಕ್ಯಾಲೋರಿಗಳು ಮತ್ತು ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿದ್ದು, ಇದು ಮೂಳೆಗಳಿಗೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.
  • ಆಲೂಗಡ್ಡೆಯನ್ನು ಮಿತವಾಗಿ ತಿನ್ನುವುದರಿಂದ ಜೀರ್ಣಕ್ರಿಯೆಯ ಸಮಸ್ಯೆಗಳು ನಿವಾರಣೆಯಾಗುತ್ತವೆ. ಆಲೂಗಡ್ಡೆಯಲ್ಲಿ ಕಾರ್ಬೋಹೈಡ್ರೇಟ್‌ಗಳಿದ್ದು, ಇದು ಶಕ್ತಿಯನ್ನು ನೀಡುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
  • ಆಲೂಗಡ್ಡೆಯಲ್ಲಿ ಫೈಬರ್ ಮತ್ತು ವಿಟಮಿನ್ ಸಿ ಕೂಡ ಇದ್ದು, ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ ಮತ್ತು ಮಲಬದ್ಧತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.
  • ಆಲೂಗಡ್ಡೆ ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುವ ಹಲವಾರು ಪ್ರಮುಖ ಪೋಷಕಾಂಶಗಳನ್ನು ಹೊಂದಿದೆ. ಆಲೂಗಡ್ಡೆ ಪೊಟ್ಯಾಸಿಯಮ್‌ನಲ್ಲಿ ಸಮೃದ್ಧವಾಗಿದೆ, ಇದು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಆರೋಗ್ಯಕರ ಹೃದಯ ಕಾರ್ಯವನ್ನು ಖಚಿತಪಡಿಸುತ್ತದೆ.
  • ಆಲೂಗಡ್ಡೆಯಲ್ಲಿ ಉತ್ಕರ್ಷಣ ನಿರೋಧಕಗಳು ಇರುತ್ತವೆ, ಇದು ಜೀವಕೋಶಗಳಿಗೆ ಹಾನಿ ಮಾಡುವ ಹಾನಿಕಾರಕ ಸ್ವತಂತ್ರ ರಾಡಿಕಲ್‌ಗಳಿಂದ ದೇಹವನ್ನು ರಕ್ಷಿಸುತ್ತದೆ. ಇದು ಹೃದಯಾಘಾತ ಮತ್ತು ಕ್ಯಾನ್ಸರ್‌ನಂತಹ ವಿವಿಧ ದೀರ್ಘಕಾಲದ ಕಾಯಿಲೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತೋಳಲ್ಲೊಂದು ಮಗು, ಕೈಯಲ್ಲೊಂದು ಪುಸ್ತಕ, 9ನೇ ತರಗತಿ ಬಾಲಕಿ ಹೆಗಲ ಮೇಲಿರುವ ಜವಾಬ್ದಾರಿ ನೋಡಿ

ಕಠ್ಮಂಡು, ಮೇ 30: ಸಣ್ಣ ವಯಸ್ಸಿನಲ್ಲಿಯೇ ಕುಟುಂಬದ ಜವಾಬ್ದಾರಿ ಹೊತ್ತಿರುವ 9ನೇ ತರಗತಿ ಬಾಲಕಿಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತರಗತಿಯಲ್ಲಿ ಮಗುವನ್ನು ತೊಡೆಯ ಮೇಲೆ ಕೂರಿಸಿಕೊಂಡು ಬಾಲಕಿ ಪಾಠ ಕೇಳುತ್ತಿದ್ದಳು. ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ಇಡೀ ಕುಟುಂಬದ ಜವಾಬ್ದಾರಿಯನ್ನು ತನ್ನ ಪುಟ್ಟ ಹೆಗಲ ಮೇಲೆ ಹೊತ್ತುಕೊಂಡಿರುವ ಘಟನೆ ನೇಪಾಳದಲ್ಲಿ ನಡೆದಿದೆ.

ಮನೆಯಲ್ಲಿ ತನ್ನ ಮೂವರು ಕಿರಿಯ ಒಡಹುಟ್ಟಿದವರನ್ನು ನೋಡಿಕೊಳ್ಳುವ ಸಂಪೂರ್ಣ ಜವಾಬ್ದಾರಿ ಈಕೆಯ ಮೇಲಿದೆ. ತಾಯಿ ಕೂಲಿ ಕೆಲಸಕ್ಕೆ ಹೋಗದಿದ್ದರೆ ಸಂಸಾರ ಸಾಗುವುದಿಲ್ಲ. ಹೀಗಾಗಿ, ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಯಾರೂ ಇಲ್ಲದ ಕಾರಣ, ಈ ಬಾಲಕಿ ತನ್ನ ಅತಿ ಕಿರಿಯ ಮಗುವನ್ನು ಎತ್ತಿಕೊಂಡು ಶಾಲೆಗೆ ಬರಲು ಆರಂಭಿಸಿದ್ದಾಳೆ. ಒಂದು ಕೈಯಲ್ಲಿ ಮಗುವನ್ನು ಸಮಾಧಾನಪಡಿಸುತ್ತಾ, ಮತ್ತೊಂದು ಕೈಯಲ್ಲಿ ಪುಸ್ತಕ ಹಿಡಿದು ಪಾಠ ಕೇಳುವ ಈಕೆಯ ಸ್ಥಿತಿ ಎಲ್ಲರ ಕಣ್ಣನ್ನು ತೇವಗೊಳಿಸುವಂತಿದೆ.

ಇತ್ತೀಚೆಗೆ ಶಾಲೆಯಲ್ಲಿ ಅತಿಯಾದ ಆಯಾಸ ಮತ್ತು ಜವಾಬ್ದಾರಿಗಳ ಭಾರವನ್ನು ತಾಳಲಾರದೆ ಆಕೆ ತರಗತಿಯಲ್ಲೇ ಕಣ್ಣೀರು ಹಾಕಿದ್ದಾಳೆ. ಕೇವಲ ಒಂಬತ್ತನೇ ತರಗತಿಯಲ್ಲಿ ಓದುತ್ತಿರುವ ಬಾಲಕಿಯೊಬ್ಬಳು ಶಿಕ್ಷಣದ ಆಸೆಯೊಂದಿಗೆ, ಕೌಟುಂಬಿಕ ಪರಿಸ್ಥಿತಿಯ ಅಡಿಯಲ್ಲಿ ನಲುಗುತ್ತಿರುವ ಈ ಚಿತ್ರ ಇಡೀ ಸಾಮಾಜಿಕ ಜಾಲತಾಣಗಳಲ್ಲಿ ಜನರ ಹೃದಯವನ್ನು ಕಲಕಿದೆ. ಬಾಲಕಿಯ ಈ ಪರಿಸ್ಥಿತಿಯನ್ನು ಕಂಡು ನೆಟ್ಟಿಗರು ಆಕೆಗೆ ಸಹಾಯ ಹಸ್ತ ಚಾಚುವಂತೆ ಸ್ಥಳೀಯ ಸಂಸ್ಥೆಗಳಿಗೆ ಮನವಿ ಮಾಡುತ್ತಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಆರ್​ಸಿಬಿ ಅಭಿಮಾನಿಗಳೇ ಎಚ್ಚರ: ಕಪ್ ಗೆದ್ರೆ ಬೀದಿಗಿಳಿದು ಸಂಭ್ರಮ ಬೇಡ, ಪೊಲೀಸರು ಎತ್ಕೊಂಡು ಹೋದಾರು!

ಆರ್​ಸಿಬಿ ಅಭಿಮಾನಿಗಳ ಸಂಭ್ರಮಾಚರಣೆ (ಸಂಗ್ರಹ ಚಿತ್ರ)Image Credit source: tv9

ಬೆಂಗಳೂರು, ಮೇ 30: ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಭರ್ಜರಿಯಾಗಿ ಫೈನಲ್ ಪ್ರವೇಶಿಸಿದ್ದು, ಭಾನುವಾರ ಅಂತಿಮ ಹಣಾಹಣಿ ನಡೆಯಲಿದೆ. ಇತ್ತ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕ್ರಿಕೆಟ್ ಜ್ವರ ಗಗನಕ್ಕೇರಿದೆ. ಭಾನುವಾರ ನಡೆಯಲಿರುವ ಹೈವೋಲ್ಟೇಜ್ ಫೈನಲ್ ಪಂದ್ಯದ ನಂತರ ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಬೆಂಗಳೂರು ನಗರ ಪೊಲೀಸರು ಸಾರ್ವಜನಿಕರಿಗೆ ಹಾಗೂ ಆರ್‌ಸಿಬಿ ಅಭಿಮಾನಿಗಳಿಗೆ ಅತ್ಯಂತ ಕಠಿಣ ಸುರಕ್ಷತಾ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದಾರೆ. ಪಂದ್ಯದ ಫಲಿತಾಂಶದ ಬಳಿಕ ಸಾರ್ವಜನಿಕ ಸ್ಥಳಗಳಲ್ಲಿ ಅತಿರೇಕದ ಸಂಭ್ರಮಾಚರಣೆ ಮಾಡುವುದು, ರಸ್ತೆ ತಡೆದು ಬೈಕ್ ರ‍್ಯಾಲಿ ಅಥವಾ ಸ್ಟಂಟ್‌ಗಳನ್ನು ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದ್ದು, ನಿಯಮ ಮೀರಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಎಚ್ಚರಿಸಿದ್ದಾರೆ.

ಮುಖ್ಯಾಂಶಗಳು

  • ಐಪಿಎಲ್ ಫೈನಲ್ ಮುಕ್ತಾಯದ ನಂತರ ಸಾರ್ವಜನಿಕ ರಸ್ತೆಗಳು ಹಾಗೂ ಓಣಿಗಳಲ್ಲಿ ಯಾವುದೇ ರೀತಿಯ ಅತಿರೇಕದ ಆಚರಣೆ ಅಥವಾ ಪಟಾಕಿ ಸಿಡಿಸುವಿಕೆಗೆ ನಿಷೇಧ.
  • ಅನುಮತಿ ಇಲ್ಲದೆ ಪಬ್, ಮಾಲ್ ಅಥವಾ ರಸ್ತೆ ಬದಿಯಲ್ಲಿ ಸಾರ್ವಜನಿಕರಿಗೆ ಕಾಣಿಸುವಂತೆ ದೊಡ್ಡ ಎಲ್‌ಇಡಿ (LED) ಸ್ಕ್ರೀನ್ ಅಳವಡಿಸಿ ಪಂದ್ಯ ಪ್ರಸಾರ ಮಾಡುವಂತಿಲ್ಲ.
  • ವ್ಹೀಲಿಂಗ್, ರೇಸಿಂಗ್, ಕರ್ಕಶ ಹಾರ್ನ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಇತರ ತಂಡಗಳ ಅಭಿಮಾನಿಗಳನ್ನು ಪ್ರಚೋದಿಸುವ ಪೋಸ್ಟ್‌ಗಳನ್ನು ಹಾಕಿದರೆ ಕಠಿಣ ಕೇಸ್.

ಸಂಭ್ರಮದ ಹೆಸರಲ್ಲಿ ಹುಚ್ಚಾಟಕ್ಕಿಳಿದರೆ ಬೀಳುತ್ತೆ ಲಾಠಿ ಏಟು!

ನಗರ ಪೊಲೀಸರು ಹೊರಡಿಸಿರುವ ಅಧಿಕೃತ ಪ್ರಕಟಣೆಯ ಪ್ರಕಾರ, ಸಾರ್ವಜನಿಕ ಪ್ರದೇಶಗಳಲ್ಲಿ ಜನದಟ್ಟಣೆ ನಿರ್ವಹಿಸಲು ಮತ್ತು ಶಾಂತಿ ಕಾಪಾಡಲು ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿದೆ. ವಿಶೇಷವಾಗಿ ಸಂಚಾರ ಪೊಲೀಸರ (Traffic Police) ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಬೈಕ್ ಸ್ಟಂಟ್‌ಗಳು, ಅತಿ ವೇಗದ ಚಾಲನೆ, ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಸೇವನೆ ಮಾಡಿ ಗಲಾಟೆ ಮಾಡುವುದು ಅಥವಾ ಇತರರೊಂದಿಗೆ ಅನುಚಿತವಾಗಿ ವರ್ತಿಸುವುದನ್ನು ಸಂಪೂರ್ಣವಾಗಿ ಬ್ಯಾನ್ ಮಾಡಲಾಗಿದೆ. ಇದರೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬೇರೆ ತಂಡಗಳ ಅಭಿಮಾನಿಗಳನ್ನು ಅವಮಾನಿಸುವ ಅಥವಾ ಜಗಳಕ್ಕೆ ಪ್ರಚೋದನೆ ನೀಡುವಂತಹ ಪೋಸ್ಟ್‌ಗಳನ್ನು ಹಂಚಿಕೊಳ್ಳಬಾರದು ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಕಳೆದ ವರ್ಷದ ಕಹಿ ಘಟನೆ ಮರೆಯಬೇಡಿ

ಆರ್‌ಸಿಬಿ ಅಭಿಮಾನಿಗಳಿಗೆ ಪೊಲೀಸರು ಈ ಮಟ್ಟದ ಖಡಕ್ ಎಚ್ಚರಿಕೆ ನೀಡಲು ಕಳೆದ ವರ್ಷ ನಡೆದ ಕಹಿ ಘಟನೆಯೇ ಪ್ರಮುಖ ಕಾರಣವಾಗಿದೆ. ಕಳೆದ ಸೀಸನ್‌ನಲ್ಲಿ ಐಪಿಎಲ್ ಪಂದ್ಯದ ಗೆಲುವಿನ ಬಳಿಕ ತಂಡವು ಬೆಂಗಳೂರಿಗೆ ಆಗಮಿಸಿದಾಗ (2025 ಜೂನ್ 4 ರಂದು) ನಗರದ ಚಿನ್ನಸ್ವಾಮಿ ಸ್ಟೇಡಿಯಂ, ಎಂಜಿ ರಸ್ತೆ, ವಿಧಾನಸೌಧ ಮುಂಭಾಗದ ರಸ್ತೆಗಳಲ್ಲಿ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದರು. ನಂತರ ಸ್ಟೇಡಿಯಂ ಹೊರಗೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟಿದ್ದರು. ಘಟನೆಯು ಇಡೀ ಐಪಿಎಲ್ ಇತಿಹಾಸದಲ್ಲೇ ಕಪ್ಪುಚುಕ್ಕೆಯಾಗಿ ಪರಿಣಮಿಸಿತ್ತು. ಕರ್ನಾಟಕ ಸರ್ಕಾರಕ್ಕೂ ಸಂಕಷ್ಟದ ಸನ್ನಿವೇಶ ತಂದೊಡ್ಡಿತ್ತು.

ಇದನ್ನೂ ಓದಿ:

ಈ ಬಾರಿ ಅಂತಹ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ತಡೆಯಲು ಮುನ್ನೆಚ್ಚರಿಕೆಯಾಗಿ ಈ ಗೈಡ್‌ಲೈನ್ಸ್ ಬಿಡುಗಡೆ ಮಾಡಲಾಗಿದ್ದು, ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Maharashtra Accident: ಬೈಕ್​ಗೆ ಗುದ್ದಿದ ಖಾಸಗಿ ಬಸ್, ನಾಲ್ವರು ಯುವಕರು ಸ್ಥಳದಲ್ಲೇ ಸಾವು

ಪರ್ಭಾನಿ, ಮೇ 30: ಮಹಾರಾಷ್ಟ್ರದ ಪರ್ಭಾನಿ ಜಿಲ್ಲೆಯ ಮನ್ವತ್ ಪಟ್ಟಣದ ಬಳಿ ಶುಕ್ರವಾರ ರಾತ್ರಿ ಪರ್ಭಾನಿಯಿಂದ ಪುಣೆಗೆ ಹೋಗುತ್ತಿದ್ದ ಖಾಸಗಿ ಬಸ್ ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಯುವಕರು ಸಾವನ್ನಪ್ಪಿದ್ದಾರೆ. ಅಪಘಾತದ ತೀವ್ರತೆಗೆ ನಾಲ್ವರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೋಟಾರ್ ಸೈಕಲ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಪರ್ಭಾನಿ-ಪತ್ರಿ ಹೆದ್ದಾರಿಯಲ್ಲಿ ರಾಹುಲ್ ಗಿನ್ನಿಂಗ್ ಬಳಿಯ ಅಂಧರ್ವಾಡ್ ಮಾರುತಿ ದೇವಸ್ಥಾನ ಪ್ರದೇಶದ ಬಳಿ ಈ ಅಪಘಾತ ಸಂಭವಿಸಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಖಾಸಗಿ ಬಸ್ ಪುಣೆ ಕಡೆಗೆ ಪ್ರಯಾಣಿಸುತ್ತಿದ್ದಾಗ, ಎದುರುಗಡೆಯಿಂದ ಬರುತ್ತಿದ್ದ ಬೈಕ್​ಗೆ ಡಿಕ್ಕಿ ಹೊಡೆದಿದೆ ಎಂದು ಹೇಳಲಾಗಿದೆ.

ಡಿಕ್ಕಿಯು ಆ ಪ್ರದೇಶದಲ್ಲಿ ಭೀತಿಯನ್ನು ಉಂಟುಮಾಡಿತ್ತು, ಜೋರಾದ ಡಿಕ್ಕಿ ಶಬ್ದ ಕೇಳಿದ ನಂತರ ಸ್ಥಳೀಯ ನಿವಾಸಿಗಳು ಸ್ಥಳಕ್ಕೆ ಧಾವಿಸಿದರು. ಡಿಕ್ಕಿಯ ರಭಸಕ್ಕೆ ಸವಾರರು ಬೈಕ್​ನಿಂದ ಕೆಳಗೆ ಬಿದ್ದಿದ್ದರು, ಮಾರಣಾಂತಿಕ ಗಾಯಗಳಾಗಿದ್ದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ಸಿಎಂ ಸ್ಥಾನ ಬಿಟ್ಟು ಹೋಗುವ ಮುನ್ನ ಆ 5,000 ಕೋಟಿ ರೂ. ಎಲ್ಲಿದೆ ಹೇಳಿ!’: ಸಿದ್ದರಾಮಯ್ಯಗೆ ಬಹಿರಂಗ ಪತ್ರ ಬರೆದ ಸುರೇಶ್ ಕುಮಾರ್

ಬೆಂಗಳೂರು, ಮೇ30: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಹೈಡ್ರಾಮಾ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಹೊಸ ನಾಯಕನ ಆಯ್ಕೆಯ ಕಸರತ್ತು ತೀವ್ರಗೊಂಡಿರುವ ಬೆನ್ನಲ್ಲೇ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ತಾವು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಡುವ ಮುನ್ನ, ರಾಜ್ಯದ 1.14 ಕೋಟಿ ಮಹಿಳೆಯರಿಗೆ ತಲುಪಬೇಕಾಗಿದ್ದ 5,000 ಕೋಟಿ ರೂ. ಹಣದ ಹಣೆಬರಹದ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ನಾಯಕ ಸುರೇಶ್​​ ಕುಮಾರ್ ಅವರು ಸಿದ್ದರಾಮಯ್ಯ ಅವರಿಗೆ ಕಟುವಾಗಿ ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡಿದ್ದಾರೆ.

“ಚುನಾವಣೆಯಲ್ಲಿ ಮತ ಗಳಿಸಲು ಸಾಧನವಾಗಿದ್ದ ಗೃಹಲಕ್ಷ್ಮಿ ಯೋಜನೆಯ ಹಣ 1.14 ಕೋಟಿ ಮಹಿಳೆಯರ ಕೈ ಸೇರದಿರುವುದು ಸಣ್ಣ ಪ್ರಮಾದವಲ್ಲ, ಇದು ರಾಜ್ಯದ ತಿಜೋರಿಯನ್ನೇ ಲೂಟಿ ಹೊಡೆದಿರುವ ಸ್ಪಷ್ಟ ಉದಾಹರಣೆ. ಈ ಪ್ರಸ್ತಾವನೆ ನಡೆದು 5 ತಿಂಗಳು ಕಳೆದರೂ ಇಂದಿಗೂ ರಾಜ್ಯದ ಗೃಹಲಕ್ಷ್ಮಿಯರಿಗೆ ಆ ಹಣ ತಲುಪಿಲ್ಲ. ಸಚಿವರು ಹಣ ಪಾವತಿಯಾಗಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಹಾಗಾದರೆ ಈ ಭಾರಿ ಮೊತ್ತದ ಹಣ ಎಲ್ಲಿ ಹೋಯಿತು? ಯಾರ ಜೇಬು ಸೇರಿತು?” ಎಂದು ಪತ್ರದಲ್ಲಿ ನೇರವಾಗಿ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Karnataka CM News Live: ಕೆಪಿಸಿಸಿ ಅಧ್ಯಕ್ಷ ಗಾದಿಗೆ ಮತ್ತೊರ್ವರ ಹೆಸರು ಸಪ್ರೈಸ್​ ಎಂಟ್ರಿ!

ಇಲ್ಲಿದೆ ನೋಡಿ ಸುರೇಶ್​ ಕುಮಾರ್​​ ಬಹಿರಂಗ ಪತ್ರ:

“ಇಡೀ ದೇಶದಲ್ಲೇ ದಾಖಲೆ ಸಂಖ್ಯೆಯ ಬಜೆಟ್ ಮಂಡಿಸಿರುವ ನೀವು ರಾಜ್ಯದ ಆರ್ಥಿಕ ತಜ್ಞರು ಹಾಗೂ ತಿಜೋರಿಯ ಸಂಪೂರ್ಣ ನಿಯಂತ್ರಣ ಹೊಂದಿದ್ದವರು. ಸಾರ್ವಜನಿಕರ ತೆರಿಗೆ ಹಣದ ಪಾವಿತ್ರ್ಯತೆಯನ್ನು ಕಾಯುವುದು ಹಾಗೂ ಪ್ರತಿಯೊಂದು ಪೈಸೆಗೂ ಉತ್ತರದಾಯಿತ್ವ ವಹಿಸುವುದು ನಿಮ್ಮ ನೈತಿಕ ಜವಾಬ್ದಾರಿಯಾಗಿದೆ. ಆದ್ದರಿಂದ ಸಿಎಂ ಸ್ಥಾನದಿಂದ ನಿರ್ಗಮಿಸುವ ಮುನ್ನ ಈ 5,000 ಕೋಟಿ ರೂ ಹಣದ ಅಸಲಿ ಸತ್ಯ ಮತ್ತು ಸ್ಥಿತಿಗತಿಯನ್ನು ರಾಜ್ಯದ ನಾಗರಿಕರಿಗೆ ಸ್ಪಷ್ಟಪಡಿಸಬೇಕು” ಎಂದು ಬಹಿರಂಗ ಪತ್ರದ ಮೂಲಕ ಕಟುವಾಗಿ ಆಗ್ರಹಿಸಲಾಗಿದೆ. ಈ ಪತ್ರವು ಸದ್ಯ ಕರ್ನಾಟಕ ರಾಜಕೀಯ ವಲಯದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆ ಹೀರೋ ಜೊತೆ ರೊಮ್ಯಾನ್ಸ್ ಮಾಡಲು ಎಲ್ಲರೂ ಕ್ಯೂನಲ್ಲಿ ನಿಲ್ಲುತ್ತಿದ್ದರು; ಖುಷ್ಬೂ

ದಕ್ಷಿಣ ಭಾರತದ ಖ್ಯಾತ ನಟಿ ಖುಷ್ಬೂ ಎರಡನೇ ಇನ್ನಿಂಗ್ಸ್‌ನಲ್ಲಿ ಪೋಷಕ ನಟಿಯಾಗಿ ಬ್ಯುಸಿಯಾಗಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಅವರು ಚಲನಚಿತ್ರೋದ್ಯಮದಲ್ಲಿನ ತಮ್ಮ ಸುದೀರ್ಘ ಪ್ರಯಾಣ ಹಾಗೂ ಅಂದಿನ ಟಾಪ್ ಹೀರೊಗಳೊಂದಿಗಿನ ಅಪರೂಪದ ಬಾಂಧವ್ಯದ ಕುರಿತು ಹಲವು ಆಸಕ್ತಿದಾಯಕ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ತಮ್ಮ ಚಲನಚಿತ್ರ ಪ್ರಯಾಣ ಆರಂಭವಾಗಿದ್ದೇ ‘ಕಲಿಯುಗ ಪಾಂಡವುಲು’ ಚಿತ್ರದ ಮೂಲಕ ಎಂದು ನೆನಪಿಸಿಕೊಂಡ ಖುಷ್ಬೂ, ವಿಕ್ಟರಿ ವೆಂಕಟೇಶ್ ತಮ್ಮ ಮೊದಲ ನಾಯಕ ಮತ್ತು ಮೊದಲ ಸ್ನೇಹಿತ ಎಂದು ಹೇಳಿದ್ದಾರೆ. ವೆಂಕಟೇಶ್ ಅವರನ್ನು ತಮ್ಮ ಭಾವನಾತ್ಮಕ ವ್ಯಕ್ತಿ ಎಂದು ಕರೆದಿರುವ ಅವರು, ನಾವು ಪ್ರತಿದಿನ ಮಾತನಾಡದಿದ್ದರೂ, ಯಾವುದೇ ಸಮಸ್ಯೆ ಎದುರಾದಾಗ ಪರಸ್ಪರ ಬೆಂಬಲವಾಗಿ ನಿಲ್ಲುತ್ತೇವೆ ಎಂದಿದ್ದಾರೆ.

ನಟ ನಾಗಾರ್ಜುನ ಅವರ ಫಿಟ್‌ನೆಸ್ ಮತ್ತು ಸ್ಟೈಲ್ ಅನ್ನು ಖುಷ್ಬೂ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. 1986ರ ‘ಕ್ಯಾಪ್ಟನ್ ನಾಗಾರ್ಜುನ’ ಚಿತ್ರದ ಸಮಯದಲ್ಲಿ ಕಾರ್ಗೋ ಪ್ಯಾಂಟ್‌ನಲ್ಲಿ ಅವರು ಕಾಣಿಸುತ್ತಿದ್ದ ರೀತಿಗೆ ಪ್ರತಿಯೊಬ್ಬ ಮಹಿಳೆಯೂ ಫಿದಾ ಆಗುತ್ತಿದ್ದರು. ನಾಗಾರ್ಜುನ ಇಂದಿಗೂ ಅಷ್ಟೇ ಫಿಟ್ ಮತ್ತು ಹ್ಯಾಂಡ್ಸಮ್ ಆಗಿ ಉಳಿದಿದ್ದಾರೆ ಎಂದು ಅವರು ಬಣ್ಣಿಸಿದ್ದಾರೆ. ಆಗಿನ ಕಾಲದಲ್ಲಿ ಎಲ್ಲಾ ನಾಯಕಿಯರು ಇವರ ಜೊತೆ ರೊಮ್ಯಾನ್ಸ್ ಮಾಡಬೇಕು ಎಂದುಕೊಳ್ಳುತ್ತಿದ್ದರಂತೆ.

ಮೆಗಾಸ್ಟಾರ್ ಸರಳತೆಗೆ ಸಾಟಿ ಇಲ್ಲ:

ಮೆಗಾಸ್ಟಾರ್ ಚಿರಂಜೀವಿ ಅವರನ್ನು ದಂತಕಥೆ ಎಂದು ಕರೆದಿರುವ ಖುಷ್ಬೂ, ಅವರ ವಿನಮ್ರತೆ ಮತ್ತು ಕೆಲಸದ ಮೇಲಿನ ಸಮರ್ಪಣೆ ಅದ್ಭುತ ಎಂದು ಹೇಳಿದ್ದಾರೆ. ಇಂದಿಗೂ ಪ್ರತಿದಿನ ಸೆಟ್‌ನಲ್ಲಿ ಹೊಸದನ್ನು ಕಲಿಯಲು ಚಿರಂಜೀವಿ ಶ್ರಮಿಸುತ್ತಾರೆ, ಅದಕ್ಕಾಗಿಯೇ ಅವರು ಸದಾ ಮೆಗಾಸ್ಟಾರ್ ಆಗಿ ಮಿಂಚುತ್ತಿದ್ದಾರೆ ಎಂದು ಹೇಳಿದ್ದಾರೆ.

ರಾಜೇಂದ್ರ ಪ್ರಸಾದ್ ‘ಶಾಶ್ವತ ಸೋದರ ಮಾವ’:

ಹಿರಿಯ ನಟ ರಾಜೇಂದ್ರ ಪ್ರಸಾದ್ ಅವರನ್ನು ತಾವೆಂದೂ ಪ್ರೀತಿಯಿಂದ “ಅಳಿಯ” ಎಂದೇ ಕರೆಯುವುದಾಗಿ ಖುಷ್ಬೂ ತಿಳಿಸಿದ್ದಾರೆ. ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ ಒಟ್ಟಿಗೆ ಓದಿದ ದಿನಗಳಿಂದ ಆರಂಭವಾದ ಇವರ ಸ್ನೇಹ, ಇಂದಿಗೂ ಒಂದು ವಿಶೇಷ ಬಾಂಧವ್ಯವಾಗಿ ಮುಂದುವರಿದಿದೆ ಎಂದಿದ್ದಾರೆ.

ಇದನ್ನೂ ಓದಿ: ಚುನಾವಣೆ ಗೆದ್ದರೆ ಮಾಂಸ ಮಾರಾಟ ಬ್ಯಾನ್ ಮಾಡ್ತಾರಾ ಖುಷ್ಬೂ ಪತಿ ಸುಂದರ್? ಸಿಕ್ತು ಸ್ಪಷ್ಟನೆ

ಕಮಲ್-ರಜನಿ ಶಿಸ್ತಿಗೆ ಸಲಾಂ:

ಕಮಲ್ ಹಾಸನ್ ಅವರನ್ನು ತಮ್ಮ ಆತ್ಮೀಯ ಗೆಳೆಯ ಎಂದು ಕರೆದಿರುವ ಖುಷ್ಬೂ, ಅವರ ಮೇಲಿರುವ ಗೌರವವನ್ನು ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಸೂಪರ್‌ಸ್ಟಾರ್ ರಜನಿಕಾಂತ್ ಅವರ ಸಮಯಪ್ರಜ್ಞೆಯನ್ನು ಕೊಂಡಾಡಿದ ಅವರು, ‘ಬೆಳಿಗ್ಗೆ 7 ಗಂಟೆಗೆ ಕಾಲ್ ಶೀಟ್ ಇದ್ದರೆ, ರಜನಿಕಾಂತ್ 6:50 ರ ಹೊತ್ತಿಗೆ ಮೇಕಪ್ ಮುಗಿಸಿ ಸೆಟ್‌ನಲ್ಲಿರುತ್ತಾರೆ. ನಿರ್ದೇಶಕರು ಬ್ರೇಕ್ ಕೊಟ್ಟರೂ ಸೆಟ್ ಬಿಟ್ಟು ಕದಲದೆ ಚಿತ್ರೀಕರಣದ ಸೂಕ್ಷ್ಮತೆಗಳನ್ನು ಗಮನಿಸುತ್ತಾರೆ’ ಎಂದು ಅವರ ಶಿಸ್ತಿನ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ಶಾಂತಿ ಕ್ರಾಂತಿ’ ಸಿನಿಮಾದಿಂದ ಆದ ಸಾಲ ತೀರಿಸಲು ರವಿಚಂದ್ರನ್​​ಗೆ ಹಿಡಿದಿತ್ತು 15 ವರ್ಷ

ಕನ್ನಡ ಚಿತ್ರರಂಗದ ‘ಕನಸುಗಾರ’ ಎಂದೇ ಖ್ಯಾತರಾದ ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಅವರಿಗೆ ಇಂದು (ಮೇ 30) ಜನ್ಮದಿನದ ಸಂಭ್ರಮ. ಚಿತ್ರರಂಗದಲ್ಲಿ ಸದಾ ಹೊಸತನ, ಭವ್ಯತೆ ಹಾಗೂ ಅದ್ದೂರಿತನಕ್ಕೆ ಹೆಸರಾದ ರವಿಚಂದ್ರನ್ ಅವರ ಬದುಕಿನಲ್ಲಿ ‘ಶಾಂತಿ ಕ್ರಾಂತಿ’ ಸಿನಿಮಾ ದೊಡ್ಡ ಇತಿಹಾಸವನ್ನೇ ಸೃಷ್ಟಿಸಿದೆ. ಆರ್ಥಿಕವಾಗಿ ಈ ಚಿತ್ರ ರವಿಚಂದ್ರನ್ ಅವರನ್ನು ಸಾಲದ ಸುಳಿಗೆ ದೂಡಿತ್ತು. ಅವರ ಜನ್ಮದಿನದ ಈ ಸಂದರ್ಭದಲ್ಲಿ ಆ ದಿನಗಳ ಒಂದು ಮೆಲುಕು ಇಲ್ಲಿದೆ.

1991ರಲ್ಲಿ ತೆರೆಕಂಡ ‘ಶಾಂತಿ ಕ್ರಾಂತಿ’ ಚಿತ್ರವು ಕನ್ನಡ ಸೇರಿದಂತೆ ಒಟ್ಟು 3 ಭಾಷೆಗಳಲ್ಲಿ ಏಕಕಾಲದಲ್ಲಿ ಅದ್ದೂರಿಯಾಗಿ ನಿರ್ಮಾಣವಾಗಿತ್ತು. ಚಿತ್ರದ ಭವ್ಯತೆಗೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡಲಾಗಿತ್ತು. ಆದರೆ, ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಯಶಸ್ಸು ಕಾಣದಿದ್ದಾಗ ರವಿಚಂದ್ರನ್ ಅವರು ದೊಡ್ಡ ಸಾಲದ ಸುಳಿಗೆ ಸಿಲುಕಿದರು. ಆರಂಭದಲ್ಲಿ ಸಿನಿಮಾ ವರ್ಕ್ ಆಗಲ್ಲ ಎಂಬುದು ಗೊತ್ತಾದಾಗ ಚಿತ್ರೀಕರಣವನ್ನು ಅರ್ಧಕ್ಕೇ ನಿಲ್ಲಿಸಿಬಿಡುವ ಆಲೋಚನೆ ಹಾಗೂ ಯೋಜನೆಗಳೂ ಕೂಡ ಮೂಡಿದ್ದವು. ಆದರೆ ತಂದೆಯ ನಿರ್ದೇಶನದಂತೆ ಛಲ ಬಿಡದೆ ಸಿನಿಮಾ ಪೂರ್ಣಗೊಳಿಸಿದ್ದರು.

ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದ ರವಿಚಂದ್ರನ್, ‘ಶಾಂತಿ ಕ್ರಾಂತಿ ಚಿತ್ರದಿಂದ ಆದ ಸಾಲ ಸಣ್ಣದೇನಲ್ಲ. ಆ ಸಾಲವನ್ನು ಸಂಪೂರ್ಣವಾಗಿ ತೀರಿಸಲು ನನಗೆ ಬರೋಬ್ಬರಿ 15 ವರ್ಷಗಳ ಸುದೀರ್ಘ ಸಮಯ ಬೇಕಾಯಿತು’ ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಸಿನಿಮಾ ಸೋತರೂ ಧೃತಿಗೆಡದ ಅವರು ಸತತ ಪರಿಶ್ರಮ ಹಾಗೂ ಮುಂದಿನ ಚಿತ್ರಗಳ ಮೂಲಕ ಆ ಸಾಲವನ್ನು ಮೆಟ್ಟಿ ನಿಂತರು.

ಇದನ್ನೂ ಓದಿ: ‘ಸಿಂಪತಿ ಬೇಡ, ಸೋಲು ಪದ ಕೇಳಿದ್ರೆ ಸಿಟ್ಟು ಬರುತ್ತೆ’; ರವಿಚಂದ್ರನ್

ಸಿನಿಮಾ ಮೇಲಿನ ಅತಿಯಾದ ಪ್ರೀತಿಯಿಂದಾಗಿ ಇಂತಹ ನಷ್ಟಗಳನ್ನು ಎದುರಿಸಿದರೂ, ಕನ್ನಡ ಚಿತ್ರರಂಗದ ಭವ್ಯತೆಯನ್ನು ದೇಶಮಟ್ಟಕ್ಕೆ ಕೊಂಡೊಯ್ದ ಹೆಗ್ಗಳಿಕೆ ರವಿಚಂದ್ರನ್ ಅವರದ್ದು. ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನೆಚ್ಚಿನ ನಟನಿಗೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 9:03 am, Sat, 30 May 26

Source link

ಐಪಿಎಲ್ ಫೈನಲ್ ಯಾವಾಗ? ಎಷ್ಟು ಗಂಟೆಗೆ ಶುರು? ಇಲ್ಲಿದೆ ಮಾಹಿತಿ

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ ಹೈವೋಲ್ಟೇಜ್ ಕದನಕ್ಕೆ ವೇದಿಕೆ ಸಿದ್ಧವಾಗಿದೆ. ಈ ವೇದಿಕೆಯಲ್ಲಿ ಕಣಕ್ಕಿಳಿಯಲಿರುವುದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು. ಅಂದರೆ ಈ ಬಾರಿಯ ಐಪಿಎಲ್ ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸಿದ ತಂಡಗಳೇ ಫೈನಲ್​ಗೇರಿದೆ. ಹೀಗಾಗಿ ಉಭಯ ತಂಡಗಳಿಂದ ಜಿದ್ದಾಜಿದ್ದಿನ ಪೈಪೋಟಿ ನಿರೀಕ್ಷಿಸಬಹುದು. ಈ ಪಂದ್ಯದ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ…

ಫೈನಲ್ ಪಂದ್ಯ ಯಾವಾಗ?

  • ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ನಡುವಣ ಐಪಿಎಲ್​ ಫೈನಲ್ ಪಂದ್ಯವು ಮೇ 31 ರಂದು ನಡೆಯಲಿದೆ.

ಫೈನಲ್ ಮ್ಯಾಚ್ ನಡೆಯುವುದು ಎಲ್ಲಿ?

  • ಈ ಬಾರಿಯ ಫೈನಲ್ ಪಂದ್ಯವು ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಜರುಗಲಿದೆ. ಅಂದರೆ ಗುಜರಾತ್ ಟೈಟಾನ್ಸ್ ತಂಡದ ತವರು ಮೈದಾನದಲ್ಲಿಅಂತಿಮ ಪಂದ್ಯ ನಡೆಯುತ್ತಿರುವುದು ವಿಶೇಷ.

ಎಷ್ಟು ಗಂಟೆಗೆ ಮ್ಯಾಚ್ ಶುರು?

  • ಫೈನಲ್ ಪಂದ್ಯವು ರಾತ್ರಿ 7.30 ರಿಂದ ಶುರುವಾಗಲಿದೆ. ಹಾಗೆಯೇ ಟಾಸ್ ಪ್ರಕ್ರಿಯೆ 7 ಗಂಟೆಗೆ ನಡೆಯಲಿದೆ.

ಉಭಯ ತಂಡಗಳು ಈ ಕೆಳಗಿನಂತಿದೆ:

ಗುಜರಾತ್ ಟೈಟಾನ್ಸ್ ತಂಡ: ಶುಭಮನ್ ಗಿಲ್ (ನಾಯಕ), ಸಾಯಿ ಸುದರ್ಶನ್, ಕುಮಾರ್ ಕುಶಾಗ್ರಾ, ಅನುಜ್ ರಾವತ್, ಜೋಸ್ ಬಟ್ಲರ್, ನಿಶಾಂತ್ ಸಿಂಧು, ವಾಷಿಂಗ್ಟನ್ ಸುಂದರ್, ಗ್ಲೆನ್ ಫಿಲಿಪ್ಸ್, ಅರ್ಷದ್ ಖಾನ್, ಶಾರುಖ್ ಖಾನ್, ರಾಹುಲ್ ತೆವಾಟಿಯಾ, ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಇಶಾಂತ್ ಶರ್ಮಾ, ಗುರ್ನೂರ್ ಸಿಂಗ್ ಬ್ರಾರ್, ರಶೀದ್ ಖಾನ್, ಮಾನವ್ ಸುತಾರ್, ಸಾಯಿ ಕಿಶೋರ್, ಜಯಂತ್ ಯಾದವ್, ಅಶೋಕ್ ಶರ್ಮಾ, ಜೇಸನ್ ಹೋಲ್ಡರ್, ಟಾಮ್ ಬ್ಯಾಂಟನ್, ಪೃಥ್ವಿ ರಾಜ್ ಯಾರ್ರಾ, ಲ್ಯೂಕ್ ವುಡ್.

ಇದನ್ನೂ ಓದಿ: ಅದೆಂತಹ ನೋವು… ಕಣ್ಣೀರಿಟ್ಟ ವೈಭವ್ ಸೂರ್ಯವಂಶಿ!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ಜೇಕಬ್ ಬೆಥೆಲ್, ಜೋಶ್ ಹೇಝಲ್​ವುಡ್, ಯಶ್ ದಯಾಲ್, ಭುವನೇಶ್ವರ್ ಕುಮಾರ್, ಯಶ್ ದಯಾಳ್, ರಾಸಿಖ್ ಸಲಾಂ, ವೆಂಕಟೇಶ್ ಅಯ್ಯರ್, ಅಭಿನಂದನ್ ಸಿಂಗ್, ಸುಯಶ್ ಶರ್ಮಾ, ಜೇಕಬ್ ಡಫಿ, ಸಾತ್ವಿಕ್ ದೇಸ್ವಾಲ್, ಮಂಗೇಶ್ ಯಾದವ್, ಜೋರ್ಡನ್ ಕಾಕ್ಸ್, ವಿಕಿ ಓಸ್ತ್ವಾಲ್, ವಿಹಾನ್ ಮಲ್ಹೋತ್ರಾ, ಕಾನಿಷ್ಕ್ ಚೌಹಾನ್, ರಿಚರ್ಡ್ ಗ್ಲೀಸನ್.

 

 

Source link

ಟ್ರಂಪ್ ನೇತೃತ್ವದ ಇರಾನ್ ಸಭೆ ಅಪೂರ್ಣ: ಒಪ್ಪಂದಕ್ಕೆ ಒಪ್ಪದ ಅಮೆರಿಕ, ಇಂಧನ ದರ ಏರಿಕೆ ಆತಂಕ

ವಾಷಿಂಗ್ಟನ್, ಮೇ 30: ಇರಾನ್ ಜೊತೆಗಿನ ಉದ್ವಿಗ್ನತೆಯನ್ನು ಕೊನೆಗೊಳಿಸಲು ಮತ್ತು ಸಂಭಾವ್ಯ ಕದನ ವಿರಾಮ ಒಪ್ಪಂದವನ್ನು ಚರ್ಚಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಶ್ವೇತಭವನದ ಕರೆದಿದ್ದ ಉನ್ನತ ಮಟ್ಟದ ಸಭೆಯು ಯಾವುದೇ ನಿರ್ಧಾರವಿಲ್ಲದೆ ಮುಕ್ತಾಯಗೊಂಡಿದೆ. ಜಾಗತಿಕ ಇಂಧನ ಬೆಲೆಗಳು ವೇಗವಾಗಿ ಏರುತ್ತಿದ್ದರೂ ಮತ್ತು ನವೆಂಬರ್‌ನ ಮಧ್ಯಾವಧಿ ಚುನಾವಣೆ ಹತ್ತಿರ ಬರುತ್ತಿದ್ದರೂ, ಟ್ರಂಪ್ ತಮ್ಮ ಕಠಿಣ ನಿಲುವಿನಿಂದ ಹಿಂದೆ ಸರಿದಿಲ್ಲ.

ಇರಾನ್ ಯಾವುದೇ ಕಾರಣಕ್ಕೂ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದುವಂತಿಲ್ಲ ಎಂಬುದು ಅಮೆರಿಕದ ಮೊದಲ ಷರತ್ತಾಗಿತ್ತು. ಒಪ್ಪಂದವು ಹತ್ತಿರದಲ್ಲಿದ್ದರೂ, ಇರಾನ್‌ನ ಮುಟ್ಟುಗೋಲು ಹಾಕಿಕೊಳ್ಳಲಾದ ಹಣವನ್ನು ಬಿಡುಗಡೆ ಮಾಡುವ ವಿಷಯದಲ್ಲಿ ಇನ್ನೂ ಭಿನ್ನಾಭಿಪ್ರಾಯಗಳು ಮುಂದುವರೆದಿವೆ ಎಂದು ಹಿರಿಯ ಆಡಳಿತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಟ್ರೂತ್ ಸೋಶಿಯಲ್‌ನಲ್ಲಿ ಟ್ರಂಪ್ ಪೋಸ್ಟ್
ಸಭೆಯ ನಂತರ ತಮ್ಮ ‘ಟ್ರೂತ್ ಸೋಶಿಯಲ್’ ಜಾಲತಾಣದಲ್ಲಿ ಬರೆದುಕೊಂಡಿರುವ ಡೊನಾಲ್ಡ್ ಟ್ರಂಪ್, ಒಪ್ಪಂದಕ್ಕೆ ಮುನ್ನ ಇರಾನ್ ಅನುಸರಿಸಬೇಕಾದ ಕ್ರಮಗಳನ್ನು ಬಿಚ್ಚಿಟ್ಟಿದ್ದಾರೆ.

ಸಮುದ್ರ ಮಾರ್ಗ ಮುಕ್ತ: ಇರಾನ್ ಹಾರ್ಮುಜ್ ಜಲಸಂಧಿಯಲ್ಲಿ ಅಳವಡಿಸಿರುವ ಕಡಲ ಗಣಿಗಳನ್ನು (Mines) ತೆಗೆದುಹಾಕಬೇಕು. ಆಗ ಅಮೆರಿಕ ತನ್ನ ನೌಕಾ ದಿಗ್ಬಂಧನವನ್ನು ಹಿಂಪಡೆಯಲಿದ್ದು, ಹಡಗುಗಳ ಸಂಚಾರ ಪುನರಾರಂಭಗೊಳ್ಳಲಿದೆ.

ಯುರೇನಿಯಂ ನಾಶ: ಇರಾನ್ ಬಳಿ ಇರುವ ಅತಿ ಹೆಚ್ಚು ಪುಷ್ಟೀಕರಿಸಿದ ಯುರೇನಿಯಂ ಅನ್ನು ಹೊರತೆಗೆದು ನಾಶಪಡಿಸಬೇಕು.

ಹಣ ಬಿಡುಗಡೆ ಇಲ್ಲ: ಮುಂದಿನ ಸೂಚನೆ ಬರುವವರೆಗೂ ಇರಾನ್‌ಗೆ ಯಾವುದೇ ಹಣ ವರ್ಗಾವಣೆ ಮಾಡುವುದಿಲ್ಲ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ. ಮಾತುಕತೆ ಮುಂದುವರಿಯುವ ಮುನ್ನ ತನ್ನ 12 ಬಿಲಿಯನ್ ಡಾಲರ್ ಫ್ರೀಜ್ ಆಗಿರುವ ಆಸ್ತಿಯನ್ನು ಬಿಡುಗಡೆ ಮಾಡಬೇಕೆಂಬ ಇರಾನ್ ಬೇಡಿಕೆಯನ್ನು ಟ್ರಂಪ್ ತಿರಸ್ಕರಿಸಿದ್ದಾರೆ.

ಮತ್ತಷ್ಟು ಓದಿ: ಐ ಲವ್ ಇಂಡಿಯಾ, ನಾನು ಪಿಎಂ ಮೋದಿಯ ದೊಡ್ಡ ಅಭಿಮಾನಿ ಎಂದ ಡೊನಾಲ್ಡ್​ ಟ್ರಂಪ್

ಇರಾನ್ ಹೇಳುವುದೇನು?
ಈ ಕುರಿತು ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಘೈ ಪ್ರತಿಕ್ರಿಯಿಸಿದ್ದು, ಅಮೆರಿಕದೊಂದಿಗೆ ಇನ್ನೂ ಯಾವುದೇ ಒಪ್ಪಂದ ಅಂತಿಮಗೊಂಡಿಲ್ಲ, ಕೇವಲ ಸಂದೇಶಗಳ ವಿನಿಮಯ ನಡೆಯುತ್ತಿದೆ ಎಂದಿದ್ದಾರೆ.

ಸದ್ಯಕ್ಕೆ ಯುದ್ಧ ನಿಲ್ಲಿಸುವುದಷ್ಟೇ ಇರಾನ್‌ನ ಮೊದಲ ಆದ್ಯತೆಯಾಗಿದ್ದು, ಯುರೇನಿಯಂ ಪುಷ್ಟೀಕರಣದ ಬಗ್ಗೆ ಈಗ ಚರ್ಚಿಸುತ್ತಿಲ್ಲ ಎಂದು ಅವರು ಹೇಳಿದ್ದಾರೆ. ಅಲ್ಲದೆ, ಹಾರ್ಮುಜ್ ಜಲಸಂಧಿಯ ನಿರ್ವಹಣೆಯು ಕೇವಲ ಇರಾನ್ ಮತ್ತು ಒಮಾನ್‌ ದೇಶಗಳಿಗೆ ಮಾತ್ರ ಸಂಬಂಧಿಸಿದ್ದು ಎಂದು ಅವರು ಪ್ರತಿಪಾದಿಸಿದ್ದಾರೆ. ಒಟ್ಟಾರೆ ಉಭಯ ದೇಶಗಳ ಹಠಮಾರಿ ಧೋರಣೆಯಿಂದಾಗಿ ಸದ್ಯಕ್ಕೆ ಬಿಕ್ಕಟ್ಟು ಶಮನಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಅವರಿಗೆ ಅಧಿಕಾರದ ಚಿಂತೆ ನಮಗೆ ಮಳೆಗೆ ಬೆಂಗಳೂರು ರಸ್ತೆಯ ಚಿಂತೆ; ಮಂತ್ರಿಗಿರಿಗಾಗಿ ಲಾಬಿ ಮತ್ತೆ ಮಾಡಿ ಮೊದಲು ನಮ್ಮ ಕಷ್ಟ ನೋಡಿ

ಬೆಂಗಳೂರು, ಮೇ.30 : ಮಳೆಯಿಂದ ಜನರು ಪರದಾಡುತ್ತಿದ್ದಾರೆ. ಆದರೆ ಇದರ ಚಿಂತೆ ಜನಪ್ರತಿನನಿಧಿಗಳಿಗೆ ಇಲ್ಲದಂತೆ ಕಾಣಿಸುತ್ತಿದೆ. ಅವರಿಗೆ ಮಂತ್ರಿಗಿರಿಯ ಚಿಂತೆ ಇರುವಾಗ ಈ ಸಂಕಷ್ಟಗಳು ಕಾಣುವುದಿಲ್ಲ ಎಂದು ಸೋಶಿಯಲ್​ ಮೀಡಿಯಾದಲ್ಲಿ ನೆಟ್ಟಿಗರು ಅಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ ಮುಂಗಾರು ಪೂರ್ವ ಮಳೆಯ ಆರ್ಭಟ ತೀವ್ರಗೊಂಡಿದ್ದು, ಕೇವಲ ಒಂದೇ ಒಂದು ಭಾರಿ ಮಳೆಗೆ ರಾಜಧಾನಿಯ ಮೂಲಸೌಕರ್ಯದ ಅಸಲಿ ಬಣ್ಣ ಬಯಲಾಗಿದೆ. ನಗರದ ಪ್ರಮುಖ ಐಟಿ ಹಬ್ ಆಗಿರುವ ಮಹದೇವಪುರ ಮತ್ತು ರಾಜರಾಜೇಶ್ವರಿ ನಗರ (RR Nagar) ಸೇರಿದಂತೆ ಹಲವು ಭಾಗಗಳು ಸಂಪೂರ್ಣ ಜಲಾವೃತಗೊಂಡಿದ್ದು, ರಸ್ತೆಗಳು ವಾಹನ ಸವಾರರ ಪಾಲಿಗೆ ನರಕಸದೃಶವಾಗಿ ಮಾರ್ಪಟ್ಟಿವೆ. ಬಿಬಿಎಂಪಿ (BBMP) ಹಾಗೂ ನಗರಾಭಿವೃದ್ಧಿ ಸಚಿವರ ‘ಬ್ರ್ಯಾಂಡ್ ಬೆಂಗಳೂರು’ (Brand Bengaluru) ಪರಿಕಲ್ಪನೆಯನ್ನು ನಾಗರಿಕರು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಮಹದೇವಪುರದ ಮುಖ್ಯ ರಸ್ತೆಗಳು ಮತ್ತು ಲೇಔಟ್‌ಗಳು ಮಳೆನೀರಿನಿಂದ ತುಂಬಿ ತುಳುಕುತ್ತಿದ್ದು, ರಸ್ತೆಗಳು ಇಟಲಿಯ ವೆನಿಸ್ ನಗರದ ಕಾಲುವೆಗಳಂತೆ ಕಾಣಿಸುತ್ತಿವೆ. “ನಮ್ಮ ಇಲಾಖೆಗಳು ರಸ್ತೆಗಳನ್ನು ರಿಪೇರಿ ಮಾಡದಿದ್ದರೂ ನಮಗೆ ರಸ್ತೆಯಲ್ಲೇ ಬೀಚ್ ವೈಬ್ಸ್ (Beach Vibes) ಸಿಗುವಂತೆ ಮಾಡಿದ್ದಾರೆ” ಎಂದು ನಾಗರಿಕರು ವ್ಯಂಗ್ಯವಾಡಿದ್ದಾರೆ. ಸರಿಯಾದ ರಸ್ತೆ ಯೋಜನೆ ಇಲ್ಲದಿರುವುದು ಹಾಗೂ ಮಳೆಗಾಲಕ್ಕೂ ಮುನ್ನ ರಾಜಕಾಲುವೆ ಮತ್ತು ಡ್ರೈನೇಜ್‌ಗಳನ್ನು ಸಮರ್ಪಕವಾಗಿ ಸ್ವಚ್ಛಗೊಳಿಸದ ಕಾರಣ, ನೀರು ಸರಾಗವಾಗಿ ಹರಿದು ಹೋಗದೆ ರಸ್ತೆಯ ಮೇಲೆಯೇ ನಿಲ್ಲುತ್ತಿದ್ದು, ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಸೃಷ್ಟಿಸುತ್ತಿದೆ. ಈ ಬಗ್ಗೆ ಕೆಲವೊಂದು ವಿಡಿಯೋಗಳನ್ನು @Karnataka Portfolio ಎಂಬ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ವರುಣಾರ್ಭಟ: ರಸ್ತೆಗಳು ಜಲಾವೃತ, ಸಂಚಾರ ವ್ಯತ್ಯಯ

ಇದು ಆರ್​​​ಆರ್​​​ ನಗರದ ವಿಡಿಯೋ:

ಬೆಂಗಳೂರಿನಲ್ಲಿ ಹೊಸ ‘ಹಿಡನ್ ಲೇಕ್ಸ್’:

ಮಹಾದೇವಪುರದ ಸ್ಥಿತಿ ಹೇಗಿದೆ ನೋಡಿ:

“ಬೆಂಗಳೂರಿನ ಮಳೆಗಾಲದಲ್ಲಿ ನೀವು ಎಲ್ಲೂ ಹೋಗಬೇಕಾಗಿಲ್ಲ, ಬಿಬಿಎಂಪಿಯ ಅಭಿವೃದ್ಧಿ ಕಾಮಗಾರಿಗಳ ದಯೆಯಿಂದ ರಸ್ತೆಗಳಲ್ಲೇ ಹೊಸ ‘ಹಿಡನ್ ಲೇಕ್ಸ್’ (Hidden Lakes) ಸೃಷ್ಟಿಯಾಗಿವೆ, ಇವುಗಳನ್ನು ಒಮ್ಮೆ ವಿಸಿಟ್ ಮಾಡಿ!” ಎಂದು ಸಾರ್ವಜನಿಕರು ಆಡಳಿತ ವ್ಯವಸ್ಥೆಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಕೋಟ್ಯಂತರ ರೂಪಾಯಿ ತೆರಿಗೆ ಪಾವತಿಸುವ ನಾಗರಿಕರಿಗೆ ಪ್ರತಿ ಮಳೆಗಾಲದಲ್ಲೂ ಇಂತಹ ಜಲಾವೃತ ರಸ್ತೆಗಳೇ ಸಿಗುತ್ತಿರುವುದು ದುರ್ದೈವದ ಸಂಗತಿಯಾಗಿದೆ. ಬಿಬಿಎಂಪಿ ಮತ್ತು ಮುನ್ಸಿಪಲ್ ಅಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಂಡು ನೀರು ನಿಲ್ಲುವ ಹಾಟ್‌ಸ್ಪಾಟ್‌ಗಳನ್ನು ಮುಕ್ತಗೊಳಿಸಬೇಕೆಂದು ಸಾರ್ವಜನಿಕರು ಕಟ್ಟುನಿಟ್ಟಿನ ಆಗ್ರಹ ಮಾಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:50 am, Sat, 30 May 26

Source link