All posts by nagaraj11081993

ಐಪಿಎಲ್​​ ಆರಂಭಕ್ಕೂ ಮುನ್ನ ಶಾಕ್​​​​​: ಈ ಬಾರಿ ಆರ್​ಸಿಬಿ ತಂಡದಲ್ಲಿರಲ್ಲ ಯಶ್ ದಯಾಳ್

ಐಪಿಎಲ್​​ ಆರಂಭಕ್ಕೂ ಮುನ್ನ ಶಾಕ್​​​​​: ಈ ಬಾರಿ ಆರ್​ಸಿಬಿ ತಂಡದಲ್ಲಿರಲ್ಲ ಯಶ್ ದಯಾಳ್

ಯಶ್ ದಯಾಳ್ ಈ ಬಾರಿ ಆರ್​ಸಿಬಿ ತಂಡದಲ್ಲಿ ಇರುವುದಿಲ್ಲ ಎಂದು ಆರ್​ಸಿಬಿ ನಿರ್ದೇಶಕ ಮೋ ಬೋಬಾಟ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅವರಿಗೆ ಏನು ಸಹಕಾರ ನೀಡಬೇಕು ಅದನ್ನು ಆರ್​ಸಿಬಿ ಮಾಡುತ್ತಿದೆ. ಜೋಶ್ ಹ್ಯಾಜಲ್‌ವುಡ್ ಮುಂದಿನ ದಿನಗಳಲ್ಲಿ ತಂಡಕ್ಕೆ ಸೇರುತ್ತಾರೆ ಎಂದು ಮಾಹಿತಿ ನೀಡಿದ್ದಾರೆ.

ಮತ್ತಷ್ಟು ಮಾಹಿತಿ ಅಪ್​ಡೇಟ್​ ಆಗಲಿದೆ.

Source link

ಇರಾನ್ ಯುದ್ಧದ ನಡುವೆ ಹಾರ್ಮುಜ್ ಜಲಸಂಧಿ ದಾಟಿದೆ ಎಲ್​ಪಿಜಿ ಹೊತ್ತ 2 ಹಡಗುಗಳು

ನವದೆಹಲಿ, ಮಾರ್ಚ್ 24: ಇರಾನ್ ಹಾಗೂ ಇಸ್ರೇಲ್, ಅಮೆರಿಕದ ಯುದ್ಧದ ನಡುವೆ ಮತ್ತೆರಡು ಎಲ್​ಪಿಜಿ ಹಡಗುಗಳು ಹಾರ್ಮುಜ್ ಜಲಸಂಧಿಯನ್ನು ದಾಟಿ ಭಾರತದತ್ತ ಆಗಮಿಸುತ್ತಿವೆ. ಹೀಗಾಗಿ, ದೇಶದಲ್ಲಿ ಎಲ್​ಪಿಜಿ ಬಿಕ್ಕಟ್ಟಿನ ಬಗ್ಗೆ ಆತಂಕಪಡಬೇಕಾದ ಅಗತ್ಯವಿಲ್ಲ. 92,612.59 ಮೆಟ್ರಿಕ್ ಟನ್ ಎಲ್‌ಪಿಜಿಯನ್ನು ಹೊತ್ತ ಎರಡು ಭಾರತೀಯ ಎಲ್‌ಪಿಜಿ ವಾಹಕಗಳಾದ ಜಗ್ ವಸಂತ್ ಮತ್ತು ಪೈನ್ ಗ್ಯಾಸ್ ಹಾರ್ಮುಜ್ ಜಲಸಂಧಿಯ ಮೂಲಕ ಭಾರತದತ್ತ ಸಾಗಿವೆ. ಜಗ್ ವಸಂತ್ ಹಡಗಿನಲ್ಲಿ 33 ಮತ್ತು ಪೈನ್ ಗ್ಯಾಸ್ ಹಡಗಿನಲ್ಲಿ 27 ಭಾರತೀಯ ನಾವಿಕರು ಇದ್ದಾರೆ. ಈ ಹಡಗುಗಳು ಮಾರ್ಚ್ 26 ಮತ್ತು 28ರ ನಡುವೆ ಭಾರತದ ಬಂದರುಗಳನ್ನು ತಲುಪುವ ಸಾಧ್ಯತೆಯಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Viral: ಬೆಂಗಳೂರಿಗೆ ಹೋಗಲು ಇಷ್ಟವಿಲ್ಲ; 34 ಲಕ್ಷ ರೂ ಸಂಬಳದ ಜಾಬ್ ಆಫರ್ ತಿರಸ್ಕರಿಸಿದ ಯುವಕ

ಉದ್ಯೋಗ (employment) ಎಲ್ಲರಿಗೂ ಅತ್ಯವಶ್ಯಕ. ಆದರೆ ಈಗಿನ ಕಾಲದಲ್ಲಿ ಎಷ್ಟೇ ಓದಿಕೊಂಡಿದ್ದರೂ ಕೈ ತುಂಬಾ ಸಂಬಳ ಸಿಗುವ ಒಂದೊಳ್ಳೆ ಉದ್ಯೋಗ ಗಿಟ್ಟಿಸಿಕೊಳ್ಳುವುದು ತುಂಬಾನೇ ಕಷ್ಟ. ತಾವು ಓದಿರುವುದಕ್ಕೆ ತಕ್ಕ ಉದ್ಯೋಗವಿಲ್ಲದೇ ಸಿಕ್ಕ ಕೆಲಸವನ್ನೇ ಅನಿವಾರ್ಯ ಕಾರಣಕ್ಕಾಗಿ ಮಾಡುವವರೇ ಹೆಚ್ಚು. ಆದರೆ ದೆಹಲಿಯ ಗುರುಗ್ರಾಮ ಮೂಲದ  ಇಂಜಿನಿಯರ್‌ರೊಬ್ಬ ಬೆಂಗಳೂರಿಗೆ (Bengaluru) ಶಿಫ್ಟ್ ಆಗೋಕೆ ಆಗಲ್ಲ ಎನ್ನುವ ಒಂದೇ ಒಂದು ಕಾರಣಕ್ಕೆ 34 ಲಕ್ಷ ರೂ ವಾರ್ಷಿಕ ಸಂಬಳ ಸಿಗುವ ಕೆಲಸದ ಆಫರ್ ತಿರಸ್ಕರಿಸಿದ್ದಾನೆ. ಉದ್ಯೋಗದ ಕುರಿತು ಈ ಯುವಕ ಮಾಡಿದ ಪೋಸ್ಟ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Gaurav Sharan ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ, ಇತ್ತೀಚೆಗೆ ನನಗೆ ಬೆಂಗಳೂರಿನಲ್ಲಿ 35 ಲಕ್ಷ ರೂ ಪ್ಯಾಕೇಜ್ ಕೆಲಸದ ಆಫರ್ ಲಭಿಸಿತು. ಪ್ಯಾಕೇಜ್ ಹಾಗೂ ಕಂಪನಿಯು ಚೆನ್ನಾಗಿತ್ತು. ಆದರೆ ಬೇರೆಡೆಗೆ ಸ್ಥಳಾಂತರವಾಗುವಂತೆ ಬೇಡಿಕೆ ಇರಿಸಲಾಗಿತ್ತು. ಆದರೆ ಈ ಆಫರ್ ಅನ್ನು ನಾನು ತಿರಸ್ಕರಿಸಿದ್ದೇನೆ. ಏಕೆಂದರೆ ನನಗೆ ಎಂದಿಗೂ ಬೆಂಗಳೂರಿಗೆ ಹೋಗಲು ಇಷ್ಟವಿಲ್ಲ ಎಂದು ಬರೆದುಕೊಂಡಿರುವುದನ್ನು ಕಾಣಬಹುದು.

ವೈರಲ್ ಪೋಸ್ಟ್‌ ಇಲ್ಲಿದೆ

ಇದನ್ನೂ ಓದಿ: ಬಾಸ್‌ನಿಂದ ಕಾಲ್ ಬಂದದ್ದೇ ತಡ ಮೆಟ್ರೋದೊಳಗೆ ಲ್ಯಾಪ್ ಟಾಪ್ ತೆರೆದು ಕೆಲಸ ಮಾಡಲು ಕುಳಿತ ಯುವಕ

ಮಾರ್ಚ್ 21 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ ಮೂರು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಬೆಂಗಳೂರಿಗೆ ಹೋಗದಿರಲು ನಿರ್ದಿಷ್ಟ ಕಾರಣವೇನು ಎಂದು ಹೇಳಿದ್ದಾರೆ. ಇನ್ನೊಬ್ಬರು, ಅದ್ಭುತ, ದಯವಿಟ್ಟು ನಿಮ್ಮ ಭರವಸೆಯನ್ನು ಜೀವಮಾನವಿಡೀ ಉಳಿಸಿಕೊಳ್ಳಿ ಮತ್ತು ಬೆಂಗಳೂರಿಗೆ ಎಂದಿಗೂ ಬರಬೇಡಿ ಎಂದು ಖಾರವಾಗಿ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಒಳ್ಳೆಯ ನಿರ್ಧಾರ. ಬೆಂಗಳೂರಿಗರು ನಿಮಗೆ ಸದಾ ಆಭಾರಿಯಾಗಿರುತ್ತಾರೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

‘ಧುರಂಧರ್’ ನಿರ್ದೇಶಕ ಆದಿತ್ಯ ಧರ್ ಪತ್ನಿಗೆ ಇದೆ ಸ್ಯಾಂಡಲ್​​ವುಡ್ ಕನೆಕ್ಷನ್

‘ಧುರಂಧರ್’ ಮತ್ತು ‘ಧುರಂಧರ್ 2’ (Dhurandhar 2) ಸಿನಿಮಾ ಭಾರಿ ದೊಡ್ಡ ಹಿಟ್ ಆಗಿದೆ. ದೊಡ್ಡ ಸೆಲೆಬ್ರಿಟಿಗಳು ಸಹ ಸಿನಿಮಾವನ್ನು ಕೊಂಡಾಡುತ್ತಿದ್ದಾರೆ. ಸಿನಿಮಾದ ನಿರ್ದೇಶಕ ಆದಿತ್ಯ ಧರ್ ಅವರ ಪ್ರತಿಭೆಯನ್ನು ಕೊಂಡಾಡುತ್ತಿದ್ದಾರೆ. ಆದಿತ್ಯ ಧರ್ ಅಚಾನಕ್ಕಾಗಿ ಭಾರತದ ಟಾಪ್ ನಿರ್ದೇಶಕರಾಗಿ ಸ್ಥಾನ ಪಡೆದುಕೊಂಡಿದ್ದಾರೆ. ಆದಿತ್ಯ ಧರ್ ಅವರ ಈ ಅದ್ಭುತ ಯಶಸ್ಸಿನ ಹಿಂದೆ ಪತ್ನಿ, ನಟಿ ಯಾಮಿ ಗೌತಮ್ ಅವರ ಪಾಲು ಸಹ ಇದೆ. ಈಗ ಈ ಜೋಡಿ ಬಾಲಿವುಡ್‌ನ ‘ಪವರ್ ಕಪಲ್’ ಆಗಿ ಹೊರಹೊಮ್ಮಿದೆ. ಹಿಮಾಚಲ ಪ್ರದೇಶದ ಸುಂದರಿ ಯಾಮಿಗೂ ಕರ್ನಾಟಕಕ್ಕೂ ಒಂದು ಗಾಢವಾದ ಮತ್ತು ಮರೆಯಲಾಗದ ಸಂಬಂಧವಿದೆ.

ಇಂದು ಬಾಲಿವುಡ್‌ನ ಅತ್ಯಂತ ಪ್ರತಿಭಾವಂತ ನಟಿಯರಲ್ಲಿ ಒಬ್ಬರಾಗಿರುವ ಯಾಮಿ ಗೌತಮ್ ಅವರ ಬೆಳ್ಳಿಪರದೆಯ ಪಯಣ ಆರಂಭವಾಗಿದ್ದು ಮುಂಬೈನಲ್ಲಲ್ಲ, ಬದಲಾಗಿ ಬೆಂಗಳೂರಿನಲ್ಲಿ. ಯಾಮಿ ಗೌತಮ್ ಅವರು ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ್ದು 2010ರಲ್ಲಿ ಬಿಡುಗಡೆಯಾದ ‘ಉಲ್ಲಾಸ ಉತ್ಸಾಹ’ ಎಂಬ ಕನ್ನಡ ಚಿತ್ರದ ಮೂಲಕ. ಈ ಚಿತ್ರದಲ್ಲಿ ಅವರು ಗೋಲ್ಡನ್ ಸ್ಟಾರ್ ಗಣೇಶ್ ಅವರೊಟ್ಟಿಗೆ ನಾಯಕಿಯಾಗಿ ನಟಿಸಿದ್ದರು.

ಈ ಚಿತ್ರದ ಚಿತ್ರೀಕರಣದ ಸಮಯದಲ್ಲಿ ತಮಗೆ ಗಣೇಶ್ ಅವರ ಸ್ಟಾರ್‌ಡಮ್ ಬಗ್ಗೆ ಅರಿವಿರಲಿಲ್ಲ ಎಂದು ಯಾಮಿ ಹಲವು ಸಂದರ್ಶನಗಳಲ್ಲಿ ನೆನಪಿಸಿಕೊಂಡಿದ್ದಾರೆ. ಮಾತ್ರವಲ್ಲದೆ ತಮ್ಮ ಜೀವನಕ್ಕೆ ತಿರುವು ನೀಡಿದ್ದು ಬೆಂಗಳೂರು ಎಂದು ಸಹ ಅವರು ಹೇಳಿಕೊಂಡಿದ್ದಿದೆ. ‘ಬೆಂಗಳೂರಿನ ಚಿತ್ರಮಂದಿರವೊಂದರಲ್ಲಿ ನನ್ನ ತಾಯಿಯ ಜೊತೆ ಕುಳಿತು ಈ ಸಿನಿಮಾ ನೋಡಿದಾಗ, ನಾನು ಚಿತ್ರರಂಗದಲ್ಲಿ ಉಳಿಯಲು ಬಂದಿದ್ದೇನೆ ಎಂಬ ಆತ್ಮವಿಶ್ವಾಸ ಮೂಡಿತು’ ಎಂದು ಅವರು ಹೇಳಿಕೊಂಡಿದ್ದರು.

ಇದನ್ನೂ ಓದಿ:ಮುನ್ನೆಚ್ಚರಿಕೆಯ ಹೊರತಾಗಿಯೂ ‘ಧುರಂಧರ್ 2’ ಸಿನಿಮಾಕ್ಕೆ ಭಾರಿ ನಷ್ಟ

ಯಾಮಿ ಗೌಥಮ್ ಅವರ ವೃತ್ತಿ ಜೀವನದಲ್ಲಿ ದಕ್ಷಿಣ ಭಾರತ ಚಿತ್ರರಂಗದ ಕೊಡುಗೆ ಅಪಾರವಾಗಿದೆ. ಯಾಮಿ ಅವರು ಬಾಲಿವುಡ್​​ಗೆ ಹೋಗುವ ಮುನ್ನ ದಕ್ಷಿಣದ ಭಾಷೆಗಳಲ್ಲಿ ನಟಿಸಿ ಅನುಭವ ಪಡೆದುಕೊಂಡಿದ್ದರು. ಕನ್ನಡದ ‘ಉಲ್ಲಾಸ ಉತ್ಸಾಹ’ ಸಿನಿಮಾದ ಬಳಿಕ ತೆಲುಗಿನಲ್ಲಿ ‘ನುವ್ವಿಲಾ’ ಸಿನಿಮಾನಲ್ಲಿ ನಟಿಸಿದ್ದರು, ಅದೇ ಸಿನಿಮಾನಲ್ಲಿ ವಿಜಯ್ ದೇವರಕೊಂಡ ಸಹ ಇದ್ದರು, ಮಲಯಾಳಂನಲ್ಲಿ ಪೃಥ್ವಿರಾಜ್ ಸುಕುಮಾರ್ ಜೊತೆಗೆ ‘ಹೀರೋ’ ಮತ್ತು ತಮಿಳಿನಲ್ಲಿ ‘ಗೌರವಂ’ ಚಿತ್ರಗಳಲ್ಲಿ ನಟಿಸಿದರು. ‘ಗೌರವಂ’ ಸಿನಿಮಾವನ್ನು ಪ್ರಕಾಶ್ ರೈ ನಿರ್ಮಾಣ ಮಾಡಿದ್ದರು. ಅವರ ಮೊದಲ ಹಿಂದಿ ಸಿನಿಮಾ ‘ವಿಕ್ಕಿ ಡೋನರ್’ ಆ ಸಿನಿಮಾ ಸಹ ಸೂಪರ್ ಹಿಟ್ ಆಯ್ತು.

ಯಾಮಿ ಗೌತಮ್ ಇಂದಿಗೂ ದಕ್ಷಿಣ ಭಾರತದ ಚಿತ್ರರಂಗದ ಕಾರ್ಯವೈಖರಿ ಮತ್ತು ಅಲ್ಲಿನ ಜನರ ಒಗ್ಗಟ್ಟನ್ನು ಶ್ಲಾಘಿಸುತ್ತಾರೆ. ‘ದಕ್ಷಿಣದ ಚಿತ್ರರಂಗದಲ್ಲಿ ಯಾರೂ ಸಿನಿಮಾ ಬಗ್ಗೆ ನೆಗೆಟಿವಿಟಿ ಹರಡಲು ಧೈರ್ಯ ಮಾಡುವುದಿಲ್ಲ, ಯಾಕೆಂದರೆ ಅಲ್ಲಿನ ಇಂಡಸ್ಟ್ರಿ ಒಂದಾಗಿ ನಿಲ್ಲುತ್ತದೆ’ ಎಂಬ ಅವರ ಮಾತುಗಳು ಅವರು ಇಂದಿಗೂ ಸ್ಯಾಂಡಲ್‌ವುಡ್ ಮತ್ತು ಇತರ ದಕ್ಷಿಣ ಭಾಷೆಗಳ ಮೇಲೆ ಹೊಂದಿರುವ ಪ್ರೀತಿಯನ್ನು ತೋರಿಸುತ್ತದೆ.

‘ಧುರಂಧರ್’ ನಿರ್ದೇಶಕ ಆದಿತ್ಯ ಧರ್ ಅವರ ವೃತ್ತಿ ಜೀವನದ ಮೇಲೂ ಯಾಮಿ ಗೌಥಮ್ ಪ್ರಭಾವ ಇದೆ. ಆದಿತ್ಯ ನಿರ್ದೇಶಿಸಿದ ಮೊದಲ ಸಿನಿಮಾ ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಸಿನಿಮಾನಲ್ಲಿ ಯಾಮಿ ನಟಿಸಿದ್ದರು. ಪಲ್ಲವಿ ಶರ್ಮಾ ಎಂಬ ಗುಪ್ತಚರ ಅಧಿಕಾರಿಯ ಪಾತ್ರ ಮಾಡಿದ್ದ ಯಾಮಿ, ಆದಿತ್ಯ ಅವರ ಕೆಲಸದ ಶಿಸ್ತು ಮತ್ತು ಶಾಂತ ಸ್ವಭಾವಕ್ಕೆ ಮಾರುಹೋದರು. 2021ರಲ್ಲಿ ಇವರು ಸರಳವಾಗಿ ವಿವಾಹವಾದರು.

ಸಿನಿಮಾ ನಿರ್ಮಾಣದ ಒತ್ತಡದ ಸಮಯದಲ್ಲಿ ಯಾಮಿ ಅವರು ಆದಿತ್ಯ ಅವರಿಗೆ ದೊಡ್ಡ ಬೆಂಬಲವಾಗಿ ನಿಂತಿದ್ದಾರೆ. ಇತ್ತೀಚೆಗೆ ‘ಧುರಂಧರ್ 2’ ಬಿಡುಗಡೆಯ ಮುನ್ನ ಬಾಲಿವುಡ್‌ನಲ್ಲಿ ನಡೆಯುವ ‘ಪೇಯ್ಡ್ ಹೈಪ್’ ಪ್ರಚಾರದ ವಿರುದ್ಧ ಯಾಮಿ ಧ್ವನಿ ಎತ್ತಿದ್ದರು. ತನ್ನ ಪತಿ ಮತ್ತು ತಂಡದ ಪ್ರಾಮಾಣಿಕ ಶ್ರಮವನ್ನು ರಕ್ಷಿಸಲು ಅವರು ದಕ್ಷಿಣ ಭಾರತದ ಚಿತ್ರರಂಗದ ಒಗ್ಗಟ್ಟನ್ನು ಉದಾಹರಣೆಯಾಗಿ ನೀಡಿ ಬಾಲಿವುಡ್‌ಗೆ ಬುದ್ಧಿ ಹೇಳಿದ್ದರು. ‘ಧುರಂಧರ್ 2’ ನಲ್ಲಿಯೂ ಸಹ ಯಾಮಿ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಯಾಮಿ ಅವರು ಶಾಜಿಯಾ ಬಾನೋ ಎಂಬ ಹೆಸರಿನಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಕೇವಲ ಒಂದು ಸಣ್ಣ ದೃಶ್ಯವಾದರೂ, ಕಥೆಗೆ ಒಂದು ದೊಡ್ಡ ತಿರುವು ನೀಡುವ ಪಾತ್ರ ಆಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಇಲಿಗಳಲ್ಲೂ ಅಕ್ಕರೆ ಕಂಡ ವೃದ್ಧ: ಪ್ರೀತಿ ನೀಡಲು ಪ್ರಾಣಿಯೇ ಆಗಬೇಕಿಲ್ಲ, ಮನುಷ್ಯತ್ವವೊಂದಿದ್ದರೆ ಸಾಕು!

ಪ್ರೀತಿ ಎನ್ನುವುದು ಕೇವಲ ಮನುಷ್ಯರ ನಡುವೆ ಮಾತ್ರ ಇರುವುದಿಲ್ಲ, ಅದು ಪ್ರಕೃತಿಯ ಎಲ್ಲ ಜೀವಿಗಳ ನಡುವೆಯೂ ಇರಬಹುದು ಎಂಬುದಕ್ಕೆ ಈ ವೀಡಿಯೊ ಒಂದು ಜೀವಂತ ಉದಾಹರಣೆ. ನಗರದ ಬಿಡುವಿಲ್ಲದ ರಸ್ತೆಯ ಬದಿಯಲ್ಲಿ ವಯೋವೃದ್ಧರೊಬ್ಬರು ಅಲ್ಲಿನ ಇಲಿಗಳೊಂದಿಗೆ ಅಕ್ಕರೆಯಿಂದ ಸಮಯ ಕಳೆಯುತ್ತಾ, ಅವುಗಳಿಗೆ ತಿಂಡಿ ತಿನ್ನಿಸುತ್ತಿರುವ ದೃಶ್ಯ ಎಲ್ಲರ ಹೃದಯ ಗೆಲ್ಲುತ್ತಿದೆ. ಸಾಮಾನ್ಯವಾಗಿ ಮನುಷ್ಯರನ್ನು ಕಂಡರೆ ದೂರ ಓಡುವ ಇಲಿಗಳು, ಈ ವೃದ್ಧರ ಬಳಿ ಯಾವುದೇ ಭಯವಿಲ್ಲದೆ ಬಂದು ತಿಂಡಿ ತಿನ್ನುತ್ತಿವೆ. ಇದು ಅವರು ಆ ಪ್ರಾಣಿಗಳೊಂದಿಗೆ ಬೆಳೆಸಿಕೊಂಡಿರುವ ವಿಶ್ವಾಸವನ್ನು ತೋರಿಸುತ್ತದೆ.”ನನ್ನನ್ನು ಪ್ರೀತಿಸಿದರೆ ನಾನು ನಿಮ್ಮನ್ನು ಪ್ರೀತಿಸುತ್ತೇನೆ” ಎಂಬ ಪ್ರಾಣಿಗಳ ಸಹಜ ಗುಣವನ್ನು ಈ ವೀಡಿಯೊ ಪ್ರತಿಬಿಂಬಿಸುತ್ತದೆ. ಯಾರು ಯಾರನ್ನೂ ಕೇಳದ ಈ ಜಗತ್ತಿನಲ್ಲಿ, ಕಿಲುಬು ಕಾಂಚಾಣದ ಹಂಗಿಲ್ಲದ ಈ ಪ್ರೀತಿ ಅನನ್ಯ. ಈ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದ್ದು, “ನಿಜವಾದ ಪ್ರೀತಿ ಎಂದರೆ ಇದೇ” ಎಂದು ಸಾವಿರಾರು ಜನರು ಕಾಮೆಂಟ್ ಮಾಡುತ್ತಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಡುಗೆ ಮಾಡುವಾಗ ಸಿಲಿಂಡರ್ ಸ್ಫೋಟಗೊಂಡು ಅಣ್ಣ-ತಂಗಿ ಸಾವು

ವಾರಾಣಸಿ, ಮಾರ್ಚ್ 24: ಉತ್ತರ ಪ್ರದೇಶದ ವಾರಾಣಸಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಮನೆ ಕುಸಿದು ಅಣ್ಣ-ತಂಗಿ ಸಾವನ್ನಪ್ಪಿದ್ದಾರೆ. ಇಂದು ವಾರಾಣಸಿಯ (Varanasi) ಲಹರ್ತಾರಾ ಪ್ರದೇಶದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟದ ನಂತರ ಮನೆ ಕುಸಿದು 30 ವರ್ಷದ ವ್ಯಕ್ತಿ ಮತ್ತು ಅವರ ತಂಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಎಲ್​ಪಿಜಿ ಸಿಲಿಂಡರ್ ಸ್ಫೋಟದಿಂದಾಗಿ ಮನೆ ಕುಸಿದು ಇಡೀ ಕುಟುಂಬದ ಸದಸ್ಯರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡರು.

ಪೊಲೀಸರು, ಅಗ್ನಿಶಾಮಕ ಸೇವೆಗಳು ಮತ್ತು ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (SDRF) ತಂಡಗಳು ಸ್ಥಳಕ್ಕೆ ಧಾವಿಸಿ, ಸ್ಥಳೀಯರ ಸಹಾಯದಿಂದ ಗಿರಿಜಾ ದೇವಿ, ಅವರ ಇಬ್ಬರು ಪುತ್ರರು ಮತ್ತು ಮಗಳನ್ನು ಅವಶೇಷಗಳಿಂದ ಹೊರಗೆಳೆದರು. ಅವರನ್ನು ತಕ್ಷಣ ಚಿಕಿತ್ಸೆಗಾಗಿ ಬನಾರಸ್ ಹಿಂದೂ ವಿಶ್ವವಿದ್ಯಾಲಯಕ್ಕೆ ಕರೆದೊಯ್ಯಲಾಯಿತು.

ಇದನ್ನೂ ಓದಿ: ಕೋರ್ಟ್​ ಉದ್ಯೋಗ ಕೊಡಿಸುವುದಾಗಿ 25 ಲಕ್ಷ ರೂ. ಪಡೆದು ವಂಚಿಸಿದ ಖತರ್ನಾಕ್ ದಂಪತಿ ಅಂದರ್!

ಗಿರಿಜಾ ದೇವಿ ಮತ್ತು ಅವರ ಒಬ್ಬ ಪುತ್ರ ಗಾಯಗೊಂಡಿದ್ದು, ಅವರ ಇನ್ನೊಬ್ಬ ಮಗ ಅಮನ್ ಚೌಧರಿ (30) ಮತ್ತು ಮಗಳು ಪ್ರೀತಿ (28) ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ರಾತ್ರಿಯಿಂದ ಗ್ಯಾಸ್ ಸಿಲಿಂಡರ್ ಸೋರಿಕೆಯಾಗುತ್ತಿದ್ದು, ಗಿರಿಜಾ ದೇವಿ ಬೆಳಿಗ್ಗೆ ಸ್ಟೌವ್ ಹಚ್ಚಲು ಹೋದಾಗ ಅದು ಸ್ಫೋಟಗೊಂಡಿದೆ ಎನ್ನಲಾಗಿದೆ.

ಇದನ್ನೂ ಓದಿ: ಮೊಬೈಲ್ ಟಾರ್ಚ್ ಬೆಳಕಲ್ಲಿ ಆಪರೇಷನ್; 12 ವರ್ಷಗಳ ಬಳಿಕ ವೈದ್ಯರ ವಿರುದ್ಧ ಪ್ರಕರಣ ದಾಖಲು

ಕಾಶಿ ವಿಶ್ವನಾಥ ದೇವಸ್ಥಾನದಿಂದ ಸುಮಾರು 7 ಕಿಲೋಮೀಟರ್ ದೂರದಲ್ಲಿರುವ ಲಹರ್ತಾರಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಸ್ಫೋಟ ಎಷ್ಟು ತೀವ್ರವಾಗಿತ್ತು ಎಂದರೆ ಹತ್ತಿರದ ಹಲವಾರು ಮನೆಗಳಲ್ಲಿಯೂ ಬಿರುಕುಗಳು ಉಂಟಾಗಿವೆ. ಭಯಭೀತರಾಗಿ ಅಕ್ಕಪಕ್ಕದ ನಿವಾಸಿಗಳು ತಮ್ಮ ಮನೆಗಳಿಂದ ಹೊರಗೆ ಓಡಿ ಬಂದು ರಕ್ಷಣಾ ಕಾರ್ಯಗಳಿಗೆ ಸಹಾಯ ಮಾಡಲು ಒಟ್ಟುಗೂಡಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಐಪಿಎಲ್​​ ಆರಂಭಕ್ಕೂ ಮುನ್ನ ಶಾಕ್​​​​​: ಈ ಬಾರಿ ಆರ್​ಸಿಬಿ ತಂಡದಲ್ಲಿರಲ್ಲ ಯಶ್ ದಯಾಳ್

ಯಶ್ ದಯಾಳ್ ಈ ಬಾರಿ ಆರ್​ಸಿಬಿ ತಂಡದಲ್ಲಿ ಇರುವುದಿಲ್ಲ ಎಂದು ಆರ್​ಸಿಬಿ ನಿರ್ದೇಶಕ ಮೋ ಬೋಬಾಟ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅವರಿಗೆ ಏನು ಸಹಕಾರ ನೀಡಬೇಕು ಅದನ್ನು ಆರ್​ಸಿಬಿ ಮಾಡುತ್ತಿದೆ. ಜೋಶ್ ಹ್ಯಾಜಲ್‌ವುಡ್ ಮುಂದಿನ ದಿನಗಳಲ್ಲಿ ತಂಡಕ್ಕೆ ಸೇರುತ್ತಾರೆ ಎಂದು ಮಾಹಿತಿ ನೀಡಿದ್ದಾರೆ.

ಮತ್ತಷ್ಟು ಮಾಹಿತಿ ಅಪ್​ಡೇಟ್​ ಆಗಲಿದೆ.

Source link

PM Modi Speech in Rajya Sabha: ನಾವು ಇರಾನ್, ಇಸ್ರೇಲ್ ಮತ್ತು ಅಮೆರಿಕದೊಂದಿಗೆ ಸಂಪರ್ಕದಲ್ಲಿದ್ದೇವೆ: ಪ್ರಧಾನಿ ಮೋದಿ

ನವದೆಹಲಿ, ಮಾರ್ಚ್​ 24: ನಾವು ಇರಾನ್, ಇಸ್ರೇಲ್ ಮತ್ತು ಅಮೆರಿಕದೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದ್ದಾರೆ.  ರಾಜ್ಯಸಭೆಯಲ್ಲಿ ಮಧ್ಯಪ್ರಾಚ್ಯದ ಸಂಘರ್ಷದ ಕುರಿತು ಮಾತನಾಡಿ,  ಸಂವಾದ ಮತ್ತು ರಾಜತಾಂತ್ರಿಕತೆಯ ಮೂಲಕ ಈ ಪ್ರದೇಶದಲ್ಲಿ ಶಾಂತಿಯನ್ನು ಪುನಃಸ್ಥಾಪಿಸುವುದು ನಮ್ಮ ಗುರಿಯಾಗಿದೆ. ಹಾರ್ಮುಜ್ ಜಲಸಂಧಿಯನ್ನು ತೆರೆಯಲು ನಾವು ಕರೆ ನೀಡಿದ್ದೇವೆ.

ಅಲ್ಲಿನ ದಾಳಿಗಳು ಸ್ವೀಕಾರಾರ್ಹವಲ್ಲ. ನಾಗರಿಕರು, ನಾಗರಿಕ ಮೂಲಸೌಕರ್ಯ ಮತ್ತು ಇಂಧನ ಮೂಲಸೌಕರ್ಯಗಳ ಮೇಲಿನ ದಾಳಿಯನ್ನು ಭಾರತ ವಿರೋಧಿಸುತ್ತದೆ. ಹಡಗುಗಳ ಚಲನೆಯನ್ನು ಖಚಿತಪಡಿಸಿಕೊಳ್ಳಲು ಭಾರತ ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ. ಭಾರತವು ಮುಂದಿನ ಏಕೈಕ ಮಾರ್ಗವಾಗಿ ಸಂವಾದವನ್ನು ಸೂಚಿಸಿದೆ ಎಂದು ಪ್ರಧಾನಿ ಹೇಳಿದ್ದಾರೆ.

ಯುದ್ಧದ ಕಾರಣದಿಂದಾಗಿ, ವಿಶೇಷವಾಗಿ ಈ ಪ್ರದೇಶದ ಮೂಲಕ ಹೆಚ್ಚಿನ ಪ್ರಮಾಣದ ಕಚ್ಚಾ ತೈಲ ಮತ್ತು ರಸಗೊಬ್ಬರ ಸಾಗಣೆ ಸವಾಲಿನದ್ದಾಗಿದೆ. ನಮ್ಮ ಸರ್ಕಾರವು ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಸಲಹೆ ನೀಡಿದೆ. ಈ ಸರಕುಗಳು ಎಲ್ಲಿದ್ದರೂ ಭಾರತವನ್ನು ಸುಲಭವಾಗಿ ತಲುಪುವಂತೆ ನೋಡಿಕೊಳ್ಳುವುದು ನಮ್ಮ ಗುರಿಯಾಗಿದೆ.

ಕಳೆದ ಕೆಲವು ದಿನಗಳಲ್ಲಿ, ಕಚ್ಚಾ ತೈಲ ಮತ್ತು ಎಲ್‌ಪಿಜಿಯನ್ನು ಸಾಗಿಸುವ ಹಡಗುಗಳು ಪ್ರಪಂಚದಾದ್ಯಂತದ ಅನೇಕ ದೇಶಗಳಿಂದ ಭಾರತಕ್ಕೆ ಬಂದಿವೆ. ಮುಂದಿನ ದಿನಗಳಲ್ಲಿ ಈ ಪ್ರಯತ್ನಗಳು ಮುಂದುವರರೆಯಲಿವೆ.

ಈ ಬಿಕ್ಕಟ್ಟಿನ ಸಂದರ್ಭದಲ್ಲಿ, ಗಲ್ಫ್ ದೇಶಗಳಲ್ಲಿ ಸಿಲುಕಿರುವ ಭಾರತೀಯರ ಸುರಕ್ಷತೆ ನಮ್ಮ ಪ್ರಮುಖ ಆದ್ಯತೆಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಯುದ್ಧದ ನಂತರ, 375,000 ಭಾರತೀಯರು ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದಾರೆ. 1,000 ಕ್ಕೂ ಹೆಚ್ಚು ಭಾರತೀಯರು ಇರಾನ್‌ನಿಂದ ಮರಳಿದ್ದಾರೆ. ಅವರಲ್ಲಿ 700 ಕ್ಕೂ ಹೆಚ್ಚು ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳು ಇದ್ದಾರೆ.

ದಾಳಿಯಿಂದಾಗಿ ಕೆಲವು ಭಾರತೀಯರು ಸಾವನ್ನಪ್ಪಿದ್ದಾರೆ ಮತ್ತು ಇತರರು ಕಾಣೆಯಾಗಿದ್ದಾರೆ ಎಂಬುದು ತೀವ್ರ ದುಃಖಕರವಾಗಿದೆ. ಗಾಯಗೊಂಡವರಿಗೆ ಸಾಧ್ಯವಾದಷ್ಟು ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ.

ಮತ್ತಷ್ಟು ಓದಿ: ಹಾರ್ಮುಜ್ ಜಲಸಂಧಿ ಮುಚ್ಚುವಿಕೆಯನ್ನು ಒಪ್ಪಲಾಗದು; ಲೋಕಸಭೆಯಲ್ಲಿ ಪ್ರಧಾನಿ ಮೋದಿ ಖಂಡನೆ

ಹಾರ್ಮುಜ್ ಜಲಸಂಧಿಯನ್ನು ತೆರೆಯುವ ಬಗ್ಗೆಯೂ ನಾವು ಚರ್ಚಿಸಿದ್ದೇವೆ, ಈ ಅಡಚಣೆ ಸ್ವೀಕಾರಾರ್ಹವಲ್ಲ. ನಾಗರಿಕರು, ನಾಗರಿಕ ಸ್ಥಾಪನೆಗಳು ಮತ್ತು ವಿದ್ಯುತ್ ಸ್ಥಾವರಗಳ ಮೇಲಿನ ದಾಳಿಯನ್ನು ಭಾರತ ವಿರೋಧಿಸಿದೆ. ಸುರಕ್ಷಿತ ಸಂಚಾರಕ್ಕಾಗಿ ಭಾರತ ನಿರಂತರವಾಗಿ ಶ್ರಮಿಸುತ್ತಿದೆ. ಈ ಸಮಸ್ಯೆಯನ್ನು ಪರಿಹರಿಸಲು ಮಾತುಕತೆಯನ್ನು ಒಂದು ಮಾರ್ಗವಾಗಿ ಭಾರತ ಸೂಚಿಸಿದೆ. ಎಲ್ಲಾ ಪಕ್ಷಗಳು ಶಾಂತಿಯುತ ಪರಿಹಾರವನ್ನು ಪಡೆಯಲು ಪ್ರೋತ್ಸಾಹಿಸುವುದು ಭಾರತದ ನಿರಂತರ ಪ್ರಯತ್ನವಾಗಿದೆ.

ಭಾರತದ ಒಗ್ಗಟ್ಟಿನ ಧ್ವನಿ ಜಗತ್ತನ್ನು ತಲುಪಲಿ: ಪ್ರಧಾನಿ ಮೋದಿ
ಹಾರ್ಮುಜ್‌ನಲ್ಲಿ ಹಲವಾರು ಭಾರತೀಯ ಹಡಗುಗಳು ಸಿಲುಕಿಕೊಂಡಿವೆ ಮತ್ತು ಅವರಲ್ಲಿ ಹೆಚ್ಚಿನ ಸಂಖ್ಯೆಯ ಭಾರತೀಯ ಸಿಬ್ಬಂದಿ ಇದ್ದಾರೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ, ಶಾಂತಿ ಮತ್ತು ಸಂವಾದಕ್ಕಾಗಿ ಭಾರತದ ಮೇಲ್ಮನೆಯ ಒಗ್ಗಟ್ಟಿನ ಧ್ವನಿ ಪ್ರಪಂಚದೊಂದಿಗೆ ಪ್ರತಿಧ್ವನಿಸುವುದು ಅತ್ಯಗತ್ಯ. ಸಂಘರ್ಷ ಪ್ರಾರಂಭವಾದಾಗಿನಿಂದ, ನಾನು ಪಶ್ಚಿಮ ಏಷ್ಯಾದ ಹೆಚ್ಚಿನ ದೇಶಗಳ ಮುಖ್ಯಸ್ಥರೊಂದಿಗೆ ಎರಡು ಸುತ್ತಿನ ಮಾತುಕತೆ ನಡೆಸಿದ್ದೇನೆ.

ಈ ಯುದ್ಧ ನಮ್ಮ ವ್ಯಾಪಾರ ಮಾರ್ಗಗಳ ಮೇಲೆ ಪರಿಣಾಮ ಬೀರುತ್ತಿದೆ:  ಮೋದಿ
ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಅವರು, ಈ ಯುದ್ಧವು ನಮ್ಮ ವ್ಯಾಪಾರ ಮಾರ್ಗಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಹೇಳಿದರು. ಪೆಟ್ರೋಲ್, ಡೀಸೆಲ್, ಅನಿಲ ಮತ್ತು ರಸಗೊಬ್ಬರಗಳಂತಹ ಅಗತ್ಯ ವಸ್ತುಗಳ ನಿಯಮಿತ ಪೂರೈಕೆಯಲ್ಲಿ ಅಡಚಣೆ ಉಂಟಾಗುತ್ತಿದೆ. ಸುಮಾರು 10 ಮಿಲಿಯನ್ ಭಾರತೀಯರು ಗಲ್ಫ್ ದೇಶಗಳಲ್ಲಿ ವಾಸಿಸುತ್ತಿದ್ದಾರೆ. ಇದು ಭಾರತಕ್ಕೆ ಪ್ರಮುಖ ಕಳವಳವಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಹರಿಹರ ಪಂಚಮಸಾಲಿ ಮಠದಲ್ಲಿ ‘ಲೆಕ್ಕ ಕೊಡಿ’ ಅಭಿಯಾನ: ಕೋಟಿಗಟ್ಟಲೆ ಅವ್ಯವಹಾರದ ಶಂಕೆ

ದಾವಣಗೆರೆ, ಮಾ,24: ಹರಿಹರದ ಹನಗವಾಡಿ ಸಮೀಪವಿರುವ ಪಂಚಮಸಾಲಿ ಗುರುಪೀಠದಲ್ಲಿ ಆಡಳಿತ ಮಂಡಳಿ ಮತ್ತು ಭಕ್ತರ ನಡುವಿನ ಸಂಘರ್ಷ ತಾರಕಕ್ಕೇರಿದೆ. 2008ರಿಂದ ಮಠದಲ್ಲಿ ನಡೆದಿರುವ ಪ್ರತಿಯೊಂದು ಪೈಸೆಗೂ ಲೆಕ್ಕ ನೀಡುವಂತೆ ಆಗ್ರಹಿಸಿ ಭಕ್ತರು ‘ಲೆಕ್ಕ ಕೊಡಿ’ ಅಭಿಯಾನವನ್ನು ತೀವ್ರಗೊಳಿಸಿದ್ದಾರೆ.ಮಾರ್ಚ್ 10ರಂದು ನಡೆದ ಧರ್ಮದರ್ಶಿಗಳ ಸಭೆಯಲ್ಲಿ ಲೆಕ್ಕ ಕೇಳುವ ವಿಚಾರಕ್ಕೆ ಸಂಬಂಧಿಸಿದಂತೆ ದೊಡ್ಡ ಮಟ್ಟದ ಗದ್ದಲ ಉಂಟಾಗಿದೆ. ಈ ವೇಳೆ ಮಠದ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ಡಿವಿಆರ್ (DVR) ಅನ್ನು ಕಿತ್ತುಕೊಂಡು ಹೋಗಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಮಠದ ಆಡಳಿತಾಧಿಕಾರಿ ಡಾ. ರಾಜಕುಮಾರ ಹಾಗೂ ಧರ್ಮದರ್ಶಿ ಮಂಡಳಿಯ ಪ್ರಧಾನ ಧರ್ಮದರ್ಶಿ ಬಿಸಿ ಉಮಾಪತಿ, ಕಾರ್ಯದರ್ಶಿ ಜ್ಯೋತಿ ಪ್ರಕಾಶ, ಧರ್ಮದರ್ಶಿ ಚಂದ್ರಶೇಖರ ಪೂಜಾರ ನಡುವೆ ನೇರ ಸಂಘರ್ಷ ಏರ್ಪಟ್ಟಿದೆ. ಸುಡು ಬಿಸಿಲನ್ನೂ ಲೆಕ್ಕಿಸದೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದ ನೂರಾರು ಭಕ್ತರು ಮಠದ ಆವರಣದಲ್ಲಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ. ಇಂದು ನಿಗದಿಯಾಗಿದ್ದ ಸಭೆಗೆ ಟ್ರಸ್ಟಿಗಳು ಬಾರದಿರುವುದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಈ ಅವ್ಯವಹಾರದಲ್ಲಿ ಶ್ರೀ ವಚನಾನಂದ ಸ್ವಾಮೀಜಿ ಅವರ ಪಾತ್ರವಿಲ್ಲ. ಸ್ವಾಮೀಜಿಗಳೇ ಸ್ವತಃ ಲೆಕ್ಕ ಕೇಳುತ್ತಿರುವುದರಿಂದ ಟ್ರಸ್ಟಿಗಳಿಗೆ ಅವರು ಬೇಡವಾಗಿದ್ದಾರೆ ಎಂದು ಪ್ರತಿಭಟನಾ ನಿರತ ಮುಖಂಡರು ಆರೋಪಿಸಿದ್ದಾರೆ. ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ರಾಣೆಬೆನ್ನೂರು ಮಾಜಿ ಶಾಸಕ ಅರುಣ ಕುಮಾರ ಪೂಜಾರಿ, ಗಡಿನಾಡು ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಹಾಗೂ ಹರಿಹರದ ಮುಖಂಡ ಪರಮೇಶ್ವರ ಗೌಡ ಪ್ರತಿಭಟನೆಯ ನೇತೃತ್ವ ವಹಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೀದಿ ನಾಯಿ ಪರಚಿದ್ದಕ್ಕೆ ಲಸಿಕೆ ಪಡೆಯಲು ಭಯಪಟ್ಟ ಬಾಲಕಿ, ರೇಬಿಸ್​ನಿಂದ ಸಾವು

ಮುಂಬೈ, ಮಾರ್ಚ್​ 24: ಬಾಲಕಿಯೊಬ್ಬಳು ರೇಬಿಸ್(Rabies)​​ನಿಂದ ಸಾವನ್ನಪ್ಪಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಭಯದಿಂದಾಗಿ ಲಸಿಕೆ ಪಡೆಯಲು ಭಯಪಟ್ಟಿದ್ದೇ ಆಕೆಯ ಸಾವಿಗೆ ಕಾರಣವಾಗಿದೆ. 4ನೇ ತರಗತಿ ವಿದ್ಯಾರ್ಥಿನಿ ಕಶಿಶ್ ಸಹಾನಿ ಎಂಬ ಬಾಲಕಿ ಸುಮಾರು ಆರು ತಿಂಗಳ ಹಿಂದೆ ತನ್ನ ಅಜ್ಜನೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಬೀಗಿ ನಾಯಿ ಆಕೆಯನ್ನು ಪರಚಿತ್ತು.

ನಂತರ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು, ಆದರೆ ರೇಬಿಸ್ ಚುಚ್ಚುಮದ್ದನ್ನು ಪಡೆಯಲು ಆಕೆ ಹೆದರಿದ್ದಳು. ಆಕೆ ಕೆಲವೇ ದಿನಗಳಲ್ಲಿ ಚೇತರಿಸಿಕೊಂಡಿದ್ದಳು. ಆದ್ದರಿಂದ ಆಕೆಯ ಕುಟುಂಬ ಕೂಡಾ ಹೆಚ್ಚು ಬಲವಂತ ಮಾಡಿರಲಿಲ್ಲ.

ಆದರೆ ಕೆಲವು ದಿನಗಳ ಹಿಂದೆ ಕಶಿಶ್ ಆರೋಗ್ಯ ಹದಗೆಟ್ಟಿತ್ತು, ಊಟ ಮಾಡುವುದನ್ನು, ಕುಡಿಯುವುದನ್ನು ಕೂಡ ಬಿಟ್ಟಿದ್ದಳು, ಕಣ್ಣುಗಳು ಕೆಂಪಾಗಿದ್ದವು. ಆಕೆಯ ಸ್ಥಿತಿ ಗಂಭೀರವಾಗುತ್ತಿದ್ದಂತೆ, ಆಕೆಯ ಕುಟುಂಬವು ಆಕೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮುಂಬೈನ ಕಸ್ತೂರಬಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು, ಆದರೆ ಸೋಮವಾರ(ಮಾರ್ಚ್​ 23)ರಂದು ಆಕೆ ಕೊನೆಯುಸಿರೆಳೆದಿದ್ದಾಳೆ.

ಮತ್ತಷ್ಟು ಓದಿ: ನಾಯಿ ಕಡಿತ: ರೇಬಿಸ್​ ರೋಗದಿಂದ ಬೆಂಗಳೂರಿನಲ್ಲಿ 17 ಜನರ ಸಾವು

ಆಕೆಯ ಸಾವಿನ ಬಳಿಕ ಪುರಸಭೆಯು ಅವರ ಕುಟುಂಬ ಸದಸ್ಯರು ಮತ್ತು ಅವರೊಂದಿಗೆ ಸಂಪರ್ಕಕ್ಕೆ ಬಂದ ನೆರೆಹೊರೆಯವರ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಿದೆ. ನಾಯಿ ಅಥವಾ ಬೆಕ್ಕುಗಳಿಂದ ಕಚ್ಚುವಿಕೆ ಅಥವಾ ಸಣ್ಣ ಗೀರುಗಳನ್ನು ಸಹ ಜನರು ನಿರ್ಲಕ್ಷಿಸಬಾರದು ಮತ್ತು ಚಿಕಿತ್ಸೆ ಪಡೆಯಬೇಕು ಎಂದು ವೈದ್ಯರು ಹೇಳಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link