Snake Village: ಈ ಗ್ರಾಮದ ಪ್ರತಿಯೊಂದು ಮನೆಯಲ್ಲೂ ಒಂದೊಂದು ಹಾವು; ವಿಷಕಾರಿ ಹಾವುಗಳನ್ನೇ ಸಾಕುಪ್ರಾಣಿಗಳಂತೆ ಸಾಕುವ ಗ್ರಾಮವಿದು!
ಮನುಷ್ಯ-ಹಾವುಗಳ ಅಪರೂಪದ ಸ್ನೇಹImage Credit source: Pinterest ಮಹಾರಾಷ್ಟ್ರದ ಪುಣೆ ನಗರದಿಂದ ಸುಮಾರು ಇನ್ನೂರು ಕಿಲೋಮೀಟರ್ ದೂರದಲ್ಲಿರುವ ಶೆಟ್‌ಪಾಲ್ (Shetphal) ಎಂಬ ಪುಟ್ಟ ಗ್ರಾಮವು ಜಗತ್ತಿನಲ್ಲಿಯೇ ಅತ್ಯಂತ ವಿಶಿಷ್ಟವಾದ ಸಂಪ್ರದಾಯಕ್ಕೆ ಹೆಸರಾಗಿದೆ. ಸಾಮಾನ್ಯವಾಗಿ ಹಾವು ಎಂದರೆ ಮನುಷ್ಯರು ಮೈಲಿ ದೂರ ಓಡುತ್ತಾರೆ, ಆದರೆ ಈ ಹಳ್ಳಿಯಲ್ಲಿ ಮಾತ್ರ ಪರಿಸ್ಥಿತಿ ಸಂಪೂರ್ಣ ಉಲ್ಟಾ. ಹೊರಗಿನವರು ಮೊದಲ ಬಾರಿಗೆ ಈ ಗ್ರಾಮಕ್ಕೆ ಭೇಟಿ ನೀಡಿದರೆ ಮುಕ್ತವಾಗಿ ಓಡಾಡುವ ಹಾವುಗಳನ್ನು ನೋಡಿ ಖಂಡಿತವಾಗಿಯೂ ಹೆದರುತ್ತಾರೆ. ಆದರೆ ಸ್ಥಳೀಯರ ಧೈರ್ಯ, ಪ್ರೀತಿ ಮತ್ತು…