ಬೆಂಗಳೂರು ಹೃದಯ ಭಾಗದಲ್ಲೇ ಕಾರಾಗೃಹ ಇಲಾಖೆಯ 50 ಕೋಟಿ ರೂ. ಮೌಲ್ಯದ ಜಾಗ ಕಬ್ಜಾ: ಅಲೋಕ್ ಕುಮಾರ್ ಎಂಟ್ರಿ ಬೆನ್ನಲ್ಲೇ ಎಫ್‌ಐಆರ್
ಗಾಂಧಿನಗರದಲ್ಲಿರುವ ಕಾರಾಗೃಹ ಇಲಾಖೆಯ ಜಾಗImage Credit source: tv9 ಬೆಂಗಳೂರು, ಮೇ 30: ರಾಜಧಾನಿ ಬೆಂಗಳೂರಿನಲ್ಲಿ (Bengaluru) ಭೂ ಮಾಫಿಯಾ ಕೈಚಳಕ ಎಷ್ಟರಮಟ್ಟಿಗೆ ಬೆಳೆದಿದೆ ಎಂದರೆ, ಸಾರ್ವಜನಿಕರು ತಪ್ಪು ಮಾಡಿದರೆ ಜೈಲಿಗೆ ಹಾಕುವ ಕಾರಾಗೃಹ ಇಲಾಖೆಗೆ (Prisons Department) ಸೇರಿದ ಜಾಗವನ್ನೇ ಖದೀಮರ ತಂಡವೊಂದು ಅತಿಕ್ರಮಣ ಮಾಡಿಕೊಂಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ನಗರದ ಹೃದಯಭಾಗವಾದ ಗಾಂಧಿನಗರದಲ್ಲಿರುವ ಕಾರಾಗೃಹ ಇಲಾಖೆಯ ಬರೋಬ್ಬರಿ 10,000 ಚದರ ಅಡಿ ವಿಸ್ತೀರ್ಣದ ಪ್ರೈಮ್ ಲೊಕೇಶನ್ ಜಾಗವನ್ನು ಕಬಳಿಸಲು ಯತ್ನಿಸಲಾಗಿದೆ. ಈ ಕೋಟ್ಯಂತರ…