Headlines

nagaraj11081993

International Day Of Potato: ಆಲೂಗಡ್ಡೆ ತಿನ್ನುವುದರಿಂದ ಆರೋಗ್ಯಕ್ಕಾಗುವ ಪ್ರಯೋಜನಗಳೇನು?

ಅಂತಾರಾಷ್ಟ್ರೀಯ ಆಲೂಗಡ್ಡೆ ದಿನImage Credit source: vecteezy ಆಲೂಗಡ್ಡೆಯನ್ನು (Potato) ತಿನ್ನಲು ಬಹುತೇಕ ಎಲ್ಲರೂ ಇಷ್ಟಪಡುತ್ತಾರೆ. ಆಲೂ ಟಿಕ್ಕಿ, ಆಲೂಗಡ್ಡೆ ಚಾಟ್‌, ಸಾಂಬರ್‌, ಕಟ್ಲೆಟ್‌, ಆಲೂ ಪರೋಠಾ ಸೇರಿದಂತೆ ಆಲೂಗಡ್ಡೆಯಿಂದ ಬಗೆ ಬಗೆಯ ಖಾದ್ಯಗಳನ್ನು ತಯಾರಿಸಿ ತಿನ್ನುತ್ತಾರೆ. ಬಹುತೇಕರ ನೆಚ್ಚಿನ ತರಕಾರಿಯಾಗಿರುವ ಆಲೂಗಡ್ಡೆಯನ್ನು ಮೊದಲು ದಕ್ಷಿಣ ಪೆರು ಮತ್ತು ಬೊಲಿವಿಯಾದ ವಾಯುವ್ಯ ಪ್ರದೇಶಗಳಲ್ಲಿ ಸಾವಿರಾರು ವರ್ಷಗಳ ಹಿಂದೆ ಬೆಳೆಸಲಾಯಿತು ಎಂದು ನಂಬಲಾಗಿದೆ. ಇಂದು ಈ ತರಕಾರಿಯನ್ನು ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ಹೇರಳವಾಗಿ ಬೆಳೆಯಲಾಗುತ್ತದೆ. ಈ ಆಲೂಗಡ್ಡೆ…

Read More

ತೋಳಲ್ಲೊಂದು ಮಗು, ಕೈಯಲ್ಲೊಂದು ಪುಸ್ತಕ, 9ನೇ ತರಗತಿ ಬಾಲಕಿ ಹೆಗಲ ಮೇಲಿರುವ ಜವಾಬ್ದಾರಿ ನೋಡಿ

ಕಠ್ಮಂಡು, ಮೇ 30: ಸಣ್ಣ ವಯಸ್ಸಿನಲ್ಲಿಯೇ ಕುಟುಂಬದ ಜವಾಬ್ದಾರಿ ಹೊತ್ತಿರುವ 9ನೇ ತರಗತಿ ಬಾಲಕಿಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತರಗತಿಯಲ್ಲಿ ಮಗುವನ್ನು ತೊಡೆಯ ಮೇಲೆ ಕೂರಿಸಿಕೊಂಡು ಬಾಲಕಿ ಪಾಠ ಕೇಳುತ್ತಿದ್ದಳು. ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ಇಡೀ ಕುಟುಂಬದ ಜವಾಬ್ದಾರಿಯನ್ನು ತನ್ನ ಪುಟ್ಟ ಹೆಗಲ ಮೇಲೆ ಹೊತ್ತುಕೊಂಡಿರುವ ಘಟನೆ ನೇಪಾಳದಲ್ಲಿ ನಡೆದಿದೆ. ಮನೆಯಲ್ಲಿ ತನ್ನ ಮೂವರು ಕಿರಿಯ ಒಡಹುಟ್ಟಿದವರನ್ನು ನೋಡಿಕೊಳ್ಳುವ ಸಂಪೂರ್ಣ ಜವಾಬ್ದಾರಿ ಈಕೆಯ ಮೇಲಿದೆ. ತಾಯಿ ಕೂಲಿ ಕೆಲಸಕ್ಕೆ ಹೋಗದಿದ್ದರೆ ಸಂಸಾರ ಸಾಗುವುದಿಲ್ಲ….

Read More

ಆರ್​ಸಿಬಿ ಅಭಿಮಾನಿಗಳೇ ಎಚ್ಚರ: ಕಪ್ ಗೆದ್ರೆ ಬೀದಿಗಿಳಿದು ಸಂಭ್ರಮ ಬೇಡ, ಪೊಲೀಸರು ಎತ್ಕೊಂಡು ಹೋದಾರು!

ಆರ್​ಸಿಬಿ ಅಭಿಮಾನಿಗಳ ಸಂಭ್ರಮಾಚರಣೆ (ಸಂಗ್ರಹ ಚಿತ್ರ)Image Credit source: tv9 ಬೆಂಗಳೂರು, ಮೇ 30: ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಭರ್ಜರಿಯಾಗಿ ಫೈನಲ್ ಪ್ರವೇಶಿಸಿದ್ದು, ಭಾನುವಾರ ಅಂತಿಮ ಹಣಾಹಣಿ ನಡೆಯಲಿದೆ. ಇತ್ತ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕ್ರಿಕೆಟ್ ಜ್ವರ ಗಗನಕ್ಕೇರಿದೆ. ಭಾನುವಾರ ನಡೆಯಲಿರುವ ಹೈವೋಲ್ಟೇಜ್ ಫೈನಲ್ ಪಂದ್ಯದ ನಂತರ ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಬೆಂಗಳೂರು ನಗರ ಪೊಲೀಸರು ಸಾರ್ವಜನಿಕರಿಗೆ ಹಾಗೂ ಆರ್‌ಸಿಬಿ ಅಭಿಮಾನಿಗಳಿಗೆ…

Read More

Maharashtra Accident: ಬೈಕ್​ಗೆ ಗುದ್ದಿದ ಖಾಸಗಿ ಬಸ್, ನಾಲ್ವರು ಯುವಕರು ಸ್ಥಳದಲ್ಲೇ ಸಾವು

ಪರ್ಭಾನಿ, ಮೇ 30: ಮಹಾರಾಷ್ಟ್ರದ ಪರ್ಭಾನಿ ಜಿಲ್ಲೆಯ ಮನ್ವತ್ ಪಟ್ಟಣದ ಬಳಿ ಶುಕ್ರವಾರ ರಾತ್ರಿ ಪರ್ಭಾನಿಯಿಂದ ಪುಣೆಗೆ ಹೋಗುತ್ತಿದ್ದ ಖಾಸಗಿ ಬಸ್ ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಯುವಕರು ಸಾವನ್ನಪ್ಪಿದ್ದಾರೆ. ಅಪಘಾತದ ತೀವ್ರತೆಗೆ ನಾಲ್ವರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೋಟಾರ್ ಸೈಕಲ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಪರ್ಭಾನಿ-ಪತ್ರಿ ಹೆದ್ದಾರಿಯಲ್ಲಿ ರಾಹುಲ್ ಗಿನ್ನಿಂಗ್ ಬಳಿಯ ಅಂಧರ್ವಾಡ್ ಮಾರುತಿ ದೇವಸ್ಥಾನ ಪ್ರದೇಶದ ಬಳಿ ಈ ಅಪಘಾತ ಸಂಭವಿಸಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಖಾಸಗಿ ಬಸ್ ಪುಣೆ ಕಡೆಗೆ ಪ್ರಯಾಣಿಸುತ್ತಿದ್ದಾಗ, ಎದುರುಗಡೆಯಿಂದ…

Read More

‘ಸಿಎಂ ಸ್ಥಾನ ಬಿಟ್ಟು ಹೋಗುವ ಮುನ್ನ ಆ 5,000 ಕೋಟಿ ರೂ. ಎಲ್ಲಿದೆ ಹೇಳಿ!’: ಸಿದ್ದರಾಮಯ್ಯಗೆ ಬಹಿರಂಗ ಪತ್ರ ಬರೆದ ಸುರೇಶ್ ಕುಮಾರ್

ಬೆಂಗಳೂರು, ಮೇ30: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಹೈಡ್ರಾಮಾ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಹೊಸ ನಾಯಕನ ಆಯ್ಕೆಯ ಕಸರತ್ತು ತೀವ್ರಗೊಂಡಿರುವ ಬೆನ್ನಲ್ಲೇ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ತಾವು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಡುವ ಮುನ್ನ, ರಾಜ್ಯದ 1.14 ಕೋಟಿ ಮಹಿಳೆಯರಿಗೆ ತಲುಪಬೇಕಾಗಿದ್ದ 5,000 ಕೋಟಿ ರೂ. ಹಣದ ಹಣೆಬರಹದ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ನಾಯಕ ಸುರೇಶ್​​ ಕುಮಾರ್ ಅವರು ಸಿದ್ದರಾಮಯ್ಯ ಅವರಿಗೆ ಕಟುವಾಗಿ…

Read More

ಆ ಹೀರೋ ಜೊತೆ ರೊಮ್ಯಾನ್ಸ್ ಮಾಡಲು ಎಲ್ಲರೂ ಕ್ಯೂನಲ್ಲಿ ನಿಲ್ಲುತ್ತಿದ್ದರು; ಖುಷ್ಬೂ

ದಕ್ಷಿಣ ಭಾರತದ ಖ್ಯಾತ ನಟಿ ಖುಷ್ಬೂ ಎರಡನೇ ಇನ್ನಿಂಗ್ಸ್‌ನಲ್ಲಿ ಪೋಷಕ ನಟಿಯಾಗಿ ಬ್ಯುಸಿಯಾಗಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಅವರು ಚಲನಚಿತ್ರೋದ್ಯಮದಲ್ಲಿನ ತಮ್ಮ ಸುದೀರ್ಘ ಪ್ರಯಾಣ ಹಾಗೂ ಅಂದಿನ ಟಾಪ್ ಹೀರೊಗಳೊಂದಿಗಿನ ಅಪರೂಪದ ಬಾಂಧವ್ಯದ ಕುರಿತು ಹಲವು ಆಸಕ್ತಿದಾಯಕ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಚಲನಚಿತ್ರ ಪ್ರಯಾಣ ಆರಂಭವಾಗಿದ್ದೇ ‘ಕಲಿಯುಗ ಪಾಂಡವುಲು’ ಚಿತ್ರದ ಮೂಲಕ ಎಂದು ನೆನಪಿಸಿಕೊಂಡ ಖುಷ್ಬೂ, ವಿಕ್ಟರಿ ವೆಂಕಟೇಶ್ ತಮ್ಮ ಮೊದಲ ನಾಯಕ ಮತ್ತು ಮೊದಲ ಸ್ನೇಹಿತ ಎಂದು ಹೇಳಿದ್ದಾರೆ. ವೆಂಕಟೇಶ್ ಅವರನ್ನು ತಮ್ಮ ಭಾವನಾತ್ಮಕ ವ್ಯಕ್ತಿ ಎಂದು…

Read More

‘ಶಾಂತಿ ಕ್ರಾಂತಿ’ ಸಿನಿಮಾದಿಂದ ಆದ ಸಾಲ ತೀರಿಸಲು ರವಿಚಂದ್ರನ್​​ಗೆ ಹಿಡಿದಿತ್ತು 15 ವರ್ಷ

ಕನ್ನಡ ಚಿತ್ರರಂಗದ ‘ಕನಸುಗಾರ’ ಎಂದೇ ಖ್ಯಾತರಾದ ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಅವರಿಗೆ ಇಂದು (ಮೇ 30) ಜನ್ಮದಿನದ ಸಂಭ್ರಮ. ಚಿತ್ರರಂಗದಲ್ಲಿ ಸದಾ ಹೊಸತನ, ಭವ್ಯತೆ ಹಾಗೂ ಅದ್ದೂರಿತನಕ್ಕೆ ಹೆಸರಾದ ರವಿಚಂದ್ರನ್ ಅವರ ಬದುಕಿನಲ್ಲಿ ‘ಶಾಂತಿ ಕ್ರಾಂತಿ’ ಸಿನಿಮಾ ದೊಡ್ಡ ಇತಿಹಾಸವನ್ನೇ ಸೃಷ್ಟಿಸಿದೆ. ಆರ್ಥಿಕವಾಗಿ ಈ ಚಿತ್ರ ರವಿಚಂದ್ರನ್ ಅವರನ್ನು ಸಾಲದ ಸುಳಿಗೆ ದೂಡಿತ್ತು. ಅವರ ಜನ್ಮದಿನದ ಈ ಸಂದರ್ಭದಲ್ಲಿ ಆ ದಿನಗಳ ಒಂದು ಮೆಲುಕು ಇಲ್ಲಿದೆ. 1991ರಲ್ಲಿ ತೆರೆಕಂಡ ‘ಶಾಂತಿ ಕ್ರಾಂತಿ’ ಚಿತ್ರವು ಕನ್ನಡ ಸೇರಿದಂತೆ ಒಟ್ಟು…

Read More

ಐಪಿಎಲ್ ಫೈನಲ್ ಯಾವಾಗ? ಎಷ್ಟು ಗಂಟೆಗೆ ಶುರು? ಇಲ್ಲಿದೆ ಮಾಹಿತಿ

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ ಹೈವೋಲ್ಟೇಜ್ ಕದನಕ್ಕೆ ವೇದಿಕೆ ಸಿದ್ಧವಾಗಿದೆ. ಈ ವೇದಿಕೆಯಲ್ಲಿ ಕಣಕ್ಕಿಳಿಯಲಿರುವುದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು. ಅಂದರೆ ಈ ಬಾರಿಯ ಐಪಿಎಲ್ ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸಿದ ತಂಡಗಳೇ ಫೈನಲ್​ಗೇರಿದೆ. ಹೀಗಾಗಿ ಉಭಯ ತಂಡಗಳಿಂದ ಜಿದ್ದಾಜಿದ್ದಿನ ಪೈಪೋಟಿ ನಿರೀಕ್ಷಿಸಬಹುದು. ಈ ಪಂದ್ಯದ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ… ಫೈನಲ್ ಪಂದ್ಯ ಯಾವಾಗ? ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ನಡುವಣ ಐಪಿಎಲ್​ ಫೈನಲ್…

Read More

ಟ್ರಂಪ್ ನೇತೃತ್ವದ ಇರಾನ್ ಸಭೆ ಅಪೂರ್ಣ: ಒಪ್ಪಂದಕ್ಕೆ ಒಪ್ಪದ ಅಮೆರಿಕ, ಇಂಧನ ದರ ಏರಿಕೆ ಆತಂಕ

ವಾಷಿಂಗ್ಟನ್, ಮೇ 30: ಇರಾನ್ ಜೊತೆಗಿನ ಉದ್ವಿಗ್ನತೆಯನ್ನು ಕೊನೆಗೊಳಿಸಲು ಮತ್ತು ಸಂಭಾವ್ಯ ಕದನ ವಿರಾಮ ಒಪ್ಪಂದವನ್ನು ಚರ್ಚಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಶ್ವೇತಭವನದ ಕರೆದಿದ್ದ ಉನ್ನತ ಮಟ್ಟದ ಸಭೆಯು ಯಾವುದೇ ನಿರ್ಧಾರವಿಲ್ಲದೆ ಮುಕ್ತಾಯಗೊಂಡಿದೆ. ಜಾಗತಿಕ ಇಂಧನ ಬೆಲೆಗಳು ವೇಗವಾಗಿ ಏರುತ್ತಿದ್ದರೂ ಮತ್ತು ನವೆಂಬರ್‌ನ ಮಧ್ಯಾವಧಿ ಚುನಾವಣೆ ಹತ್ತಿರ ಬರುತ್ತಿದ್ದರೂ, ಟ್ರಂಪ್ ತಮ್ಮ ಕಠಿಣ ನಿಲುವಿನಿಂದ ಹಿಂದೆ ಸರಿದಿಲ್ಲ. ಇರಾನ್ ಯಾವುದೇ ಕಾರಣಕ್ಕೂ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದುವಂತಿಲ್ಲ ಎಂಬುದು ಅಮೆರಿಕದ ಮೊದಲ ಷರತ್ತಾಗಿತ್ತು. ಒಪ್ಪಂದವು ಹತ್ತಿರದಲ್ಲಿದ್ದರೂ,…

Read More

ಅವರಿಗೆ ಅಧಿಕಾರದ ಚಿಂತೆ ನಮಗೆ ಮಳೆಗೆ ಬೆಂಗಳೂರು ರಸ್ತೆಯ ಚಿಂತೆ; ಮಂತ್ರಿಗಿರಿಗಾಗಿ ಲಾಬಿ ಮತ್ತೆ ಮಾಡಿ ಮೊದಲು ನಮ್ಮ ಕಷ್ಟ ನೋಡಿ

ಬೆಂಗಳೂರು, ಮೇ.30 : ಮಳೆಯಿಂದ ಜನರು ಪರದಾಡುತ್ತಿದ್ದಾರೆ. ಆದರೆ ಇದರ ಚಿಂತೆ ಜನಪ್ರತಿನನಿಧಿಗಳಿಗೆ ಇಲ್ಲದಂತೆ ಕಾಣಿಸುತ್ತಿದೆ. ಅವರಿಗೆ ಮಂತ್ರಿಗಿರಿಯ ಚಿಂತೆ ಇರುವಾಗ ಈ ಸಂಕಷ್ಟಗಳು ಕಾಣುವುದಿಲ್ಲ ಎಂದು ಸೋಶಿಯಲ್​ ಮೀಡಿಯಾದಲ್ಲಿ ನೆಟ್ಟಿಗರು ಅಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ ಮುಂಗಾರು ಪೂರ್ವ ಮಳೆಯ ಆರ್ಭಟ ತೀವ್ರಗೊಂಡಿದ್ದು, ಕೇವಲ ಒಂದೇ ಒಂದು ಭಾರಿ ಮಳೆಗೆ ರಾಜಧಾನಿಯ ಮೂಲಸೌಕರ್ಯದ ಅಸಲಿ ಬಣ್ಣ ಬಯಲಾಗಿದೆ. ನಗರದ ಪ್ರಮುಖ ಐಟಿ ಹಬ್ ಆಗಿರುವ ಮಹದೇವಪುರ ಮತ್ತು ರಾಜರಾಜೇಶ್ವರಿ ನಗರ (RR Nagar) ಸೇರಿದಂತೆ ಹಲವು…

Read More