nagaraj11081993

ಎಸ್ಟಿಯವರ ಜಮೀನಿನಲ್ಲಿ ಎಸ್ಸಿ ಯುವಕ ನೀರು ಕುಡಿದಿದ್ದಕ್ಕೆ ಭಾರೀ ಗಲಾಟೆ; 24 ಮಂದಿಗೆ ಗಾಯ!

ಗದಗ, ಮಾರ್ಚ್​ 24: ಇಂದಿಗೂ ಸಮಾಜದಲ್ಲಿ ಜಾತಿಯಲ್ಲಿ ಮೇಲು ಕೀಳು ಎಂಬ ಭಾವನೆ ಜೀವಂತವಾಗಿದೆ ಎನ್ನುವುದಕ್ಕೆ ಹಲವು ಉದಾಹರಣೆಗಳು ಕಂಡು ಬಂದಿವೆ. ಈ ಹಿಂದೆಯೂ ಜಾತಿ ವಿಷಯಕ್ಕೆ, ಅಸ್ಪರ್ಷತೆ ವಿಚಾರಕ್ಕೆ ಸವರ್ಣೀಯರು ದಲಿತರನ್ನು ನಿಂದಿಸಿದ, ಅವರೊಂದಿಗೆ ಹೊಡೆದಾಟಕ್ಕಿಳಿದ (caste conflict) ನಿದರ್ಶನಗಳಿವೆ. ಆದರೆ ಎಸ್ಟಿಯವರ ಜಮೀನಿನಲ್ಲಿ ಎಸ್ಸಿ ಯುವಕ ನೀರು ಕುಡಿದ ಎಂಬ ವಿಚಾರಕ್ಕೆ ಮಾರಾಮಾರಿ ನಡೆದಿದ್ದು, 24 ಜನರು ಗಾಯಗೊಂಡ ಘಟನೆ ಗದಗ (Gadag) ಜಿಲ್ಲೆಯ ಮುಂಡರಗಿ ತಾಲೂಕಿನ ಚಿಕ್ಕವಡ್ಡಟ್ಟಿ ಗ್ರಾಮದಲ್ಲಿ ನಡೆದಿದೆ. ಕೊಡ್ಲಿ, ಕಲ್ಲಿನಿಂದ…

Read More

‘ಬಂದರೋ ಬಂದರೋ ಭಾವ ಬಂದರೋ’ ಎಂದು ರಿಕ್ಕಿ ರೈ ಲಾಯರ್ ಕಾಲೆಳೆದ ಪೊಲೀಸರು!

ಬೆಂಗಳೂರು, ಮಾರ್ಚ್​ 24: ಲ್ಯಾಂಬೋರ್ಗಿನಿ ಕಾರ್ ಡ್ರಿಫ್ಟಿಂಗ್ ಪ್ರಕರಣದಲ್ಲಿ ರಿಕ್ಕಿ ರೈ ವಿರುದ್ಧ ಪ್ರಕರಣ ದಾಖಲಾದ ಬೆನ್ನಲ್ಲೇ ಹೊಸ ವಿವಾದ ಸೃಷ್ಟಿಯಾಗಿದೆ. ಜಾಮೀನು ಪಡೆದು ವಿಚಾರಣೆಗೆ ಹಾಜರಾದ ರಿಕ್ಕಿ ರೈ ಪರ ವಕೀಲ ನಾರಾಯಣಸ್ವಾಮಿ, ಚಾಲಕನ ಸೃಜನಶೀಲತೆಯಿಂದ ಕಾರು ಸ್ಕಿಡ್ ಆಗಿದೆ ಎಂದು ಸಮರ್ಥಿಸಿಕೊಂಡಿದ್ದರು. ರಸ್ತೆ ಇತ್ತೀಚೆಗೆ ದುರಸ್ತಿ ಮಾಡಿದ್ದರಿಂದ ಬ್ರೇಕ್ ಹೊಡೆದಾಗ ನಿಯಂತ್ರಣ ತಪ್ಪಿದೆ ಎಂದೂ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಬೆಂಗಳೂರು ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯವಾಗಿ ಪೋಸ್ಟ್ ಮಾಡಿ, ಸೃಜನಶೀಲತೆ ಪ್ರದರ್ಶನಕ್ಕೆ ಸಿಗ್ನಲ್‌ಗಳು ವೇದಿಕೆಯಲ್ಲ…

Read More

Bomb Threat: ವಿಧಾನಸಭಾ ಸ್ಪೀಕರ್​ಗೆ ಬಾಂಬ್ ಬೆದರಿಕೆ, ಮೆಟ್ರೋ ನಿಲ್ದಾಣವನ್ನೂ ಸ್ಫೋಟಿಸುವುದಾಗಿ ಬಂತು ಇ-ಮೇಲ್

ನವದೆಹಲಿ, ಮಾರ್ಚ್​ 24: ದೆಹಲಿ ವಿಧಾನಸಭಾ ಸ್ಪೀಕರ್ ವಿಜೇಂದರ್ ಗುಪ್ತಾ ಅವರಿಗೆ ಬಾಂಬ್ ಬೆದರಿಕೆ(Bomb Threat) ಇ-ಮೇಲ್ ಬಂದಿದೆ. ವಿಧಾನಸಭೆ ಕಟ್ಟಡ ಮತ್ತು ದೆಹಲಿ ಮೆಟ್ರೋ ನಿಲ್ದಾಣವನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿದೆ. ದೆಹಲಿ ವಿಧಾನಸಭಾ ಸ್ಪೀಕರ್ ಕಚೇರಿಯ ಪ್ರಕಾರ, ಲೆಫ್ಟಿನೆಂಟ್ ಗವರ್ನರ್ ತರಂಜಿತ್ ಸಿಂಗ್ ಸಂಧು ಅವರಿಗೂ ಬೆದರಿಕೆ ಹಾಕಲಾಗಿದೆ. ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಮತ್ತು ಸಚಿವ ಮಂಜಿಂದರ್ ಸಿಂಗ್ ಸಿರ್ಸಾ ಅವರಿಗೂ ಬೆದರಿಕೆ ಹಾಕಲಾಗಿದೆ. ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು…

Read More

‘ಧುರಂಧರ್ 2’ ಬ್ಯಾನ್ ಮಾಡಿ, ವಕೀಲನಿಂದ ಹೈಕೋರ್ಟ್​​ಗೆ ಅರ್ಜಿ

ರಣ್ವೀರ್ ಸಿಂಗ್ (Ranveer Singh) ನಟಿಸಿ, ಆದಿತ್ಯ ಧರ್ ನಿರ್ದೇಶನ ಮಾಡಿರುವ ‘ಧುರಂಧರ್ 2’ ಸಿನಿಮಾ ಬಿಡುಗಡೆ ಆಗಿ ಕೆಲ ದಿನಗಳಾಗಿದ್ದು, ಎಲ್ಲೆಡೆ ಸಿನಿಮಾಕ್ಕೆ ಭರ್ಜರಿ ರೆಸ್ಪಾನ್ಸ್ ಧಕ್ಕುತ್ತಿದೆ. ಕೆಲವೇ ದಿನಗಳಲ್ಲಿ ಸಿನಿಮಾ 500 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದೆ. ಮಲ್ಟಿಪ್ಲೆಕ್ಸ್​​ಗಳಲ್ಲಿ ಬೆಳಿಗಿನಿಂದ ಮಧ್ಯ ರಾತ್ರಿ ವರೆಗೆ ಸತತವಾಗಿ ಶೋಗಳನ್ನು ಪ್ರದರ್ಶನ ಮಾಡಲಾಗುತ್ತಿದೆ. ಕೆಲವರು ಸಿನಿಮಾ ಬಗ್ಗೆ ಅಸಮಾಧಾನ ಸಹ ವ್ಯಕ್ತಪಡಿಸಿದ್ದಾರೆ. ಆದರೆ ಇದೀಗ ಚೆನ್ನೈನ ವಕೀಲರೊಬ್ಬರು, ಸಿನಿಮಾ ವಿರುದ್ಧ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದು, ಸಿನಿಮಾದ…

Read More

‘ಧುರಂಧರ್ 2’ ಮೂಲಕ ಪ್ರತೀಕಾರ ತೀರಿಸಿಕೊಂಡ ಅರ್ಜುನ್ ರಾಂಪಾಲ್

‘ಧುರಂಧರ್ 2’ ಚಿತ್ರದ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. ನಟ ಅರ್ಜುನ್ ರಾಂಪಾಲ್ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಚಿತ್ರದಲ್ಲಿ ಅರ್ಜುನ್ ಮೇಜರ್ ಇಕ್ಬಾಲ್ ಪಾತ್ರದಲ್ಲಿ ನಟಿಸಿದ್ದಾರೆ. ನಟನಿಗೆ ‘ಧುರಂಧರ್’ ಚಿತ್ರ ಕೇವಲ ಒಂದು ಸಿನಿಮಾ ಮಾತ್ರವಲ್ಲ, 2008 ರಲ್ಲಿ ಪಾಕಿಸ್ತಾನಿ ಭಯೋತ್ಪಾದಕರು ಮುಂಬೈ ಮೇಲೆ ನಡೆಸಿದ ದಾಳಿಗೆ ಪ್ರತೀಕಾರವೂ ಆಗಿದೆ. ಮುಂಬೈ ಮೇಲಿನ ದಾಳಿಯಲ್ಲಿ ಅನೇಕ ಜನರು ಪ್ರಾಣ ಕಳೆದುಕೊಂಡರು. ದಾಳಿ ನಡೆದಾಗ ನಟ ಅರ್ಜುನ್ ರಾಂಪಾಲ್ ಎಲ್ಲಿ ಮತ್ತು ಯಾವ ಸ್ಥಿತಿಯಲ್ಲಿದ್ದರು ಎಂಬುದರ…

Read More

Video: ಎಳನೀರಿನ ಗೆರಟೆಯಲ್ಲಿ ಮಗನಿಂದ ಮೂತ್ರ ಮಾಡಿಸಿ ರಸ್ತೆಗೆ ಎಸೆದ ಮಹಿಳೆ

ಸೋಶಿಯಲ್ ಮೀಡಿಯಾದಲ್ಲಿ (social media) ವೈರಲ್ ಆಗುವ ಕೆಲ ದೃಶ್ಯಗಳನ್ನು ಕಂಡಾಗ ನಮ್ಮ ಸಮಾಜ ಎತ್ತ ಸಾಗುತ್ತಿದೆ ಎಂದೆನಿಸುವುದು ಸಹಜ. ತಿಳಿದವರೇ ಈ ರೀತಿ ಮಾಡಿದ್ರೆ ಏನು ಅರಿಯದವರೇ ಯಾವ ರೀತಿ ವರ್ತಿಸಬೇಕು. ಇಲ್ಲೊಬ್ಬ ಮಹಿಳೆ (Woman) ನಾಗರಿಕ ಪ್ರಜ್ಞೆ ಮರೆತು ನಡೆದುಕೊಂಡಿದ್ದು, ಎಳನೀರಿನ ಗೆರಟೆಯಲ್ಲಿ ಮಗನಿಂದ ಮೂತ್ರ ಮಾಡಿಸಿ ರಸ್ತೆಗೆ ಎಸೆದಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೇಹಾ (Neha) ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಕ್ಲಿಪಿಂಗ್‌ನಲ್ಲಿ ಮಹಿಳೆಯೊಬ್ಬರು ಎಳನೀರು ಕುಡಿದ…

Read More

ಏರ್ ಕೆನಡಾ ವಿಮಾನ ಅಪಘಾತ, 300 ಅಡಿ ಎತ್ತರದಿಂದ ಬಿದ್ದರೂ ಉಸಿರು ಉಳಿಸಿಕೊಂಡ ವಿಮಾನ ಸಿಬ್ಬಂದಿ

ನ್ಯೂಯಾರ್ಕ್​, ಮಾರ್ಚ್​ 24: ನ್ಯೂಯಾರ್ಕ್​​ನ ಲಾಗ್ವಾರ್ಡಿಯಾ ವಿಮಾನ ನಿಲ್ದಾಣದಲ್ಲಿ ಭಾನುವಾರ(ಮಾರ್ಚ್​ 22)ರ ತಡರಾತ್ರಿ ಸಂಭವಿಸಿದ ಏರ್ ಕೆನಡಾ ವಿಮಾನ ಅಪಘಾತ(Plane Crash)ದಲ್ಲಿ 330 ಅಡಿಯಿಂದ ಬಿದ್ದರೂ ವಿಮಾನ ಸಿಬ್ಬಂದಿ ಪವಾಡದಂತೆ ಬದುಕುಳಿದಿದ್ದಾರೆ. ವಿಮಾನದಿಂದ 330 ಅಡಿ ದೂರಕ್ಕೆ ಎಸೆಯಲ್ಪಟ್ಟರು, ಆದರೆ ಅವರು ತಮ್ಮ ಜಂಪ್ ಸೀಟಿನಲ್ಲಿ ಸಿಲುಕಿಕೊಂಡಿದ್ದರು ಎಂದು ವರದಿಯಾಗಿದೆ . ಸೋಲಾಂಜ್ ಟ್ರೆಂಬ್ಲೇ ಅವರ ಒಂದು ಕಾಲಿನಲ್ಲಿ ಮುರಿತಗಳಾಗಿವೆ. ಅವರಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ಮಗಳು ಸಾರಾ ಲೆಪಿನ್ ತಿಳಿಸಿದ್ದಾರೆ. ಅವರು ಕೆಳಗೆ ಬಿದ್ದಾಗಲೂ ಇನ್ನೂ…

Read More

ರಘು ಜಿಮ್ ಅಲ್ಲಿ ಫಿಟ್ನೆಸ್​ ಎಕ್ಸ್​​ಪರ್ಟ್ ಆದ ರಕ್ಷಿತಾ ಶೆಟ್ಟಿ

ರಕ್ಷಿತಾ ಶೆಟ್ಟಿ ಅವರು ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಪಡೆದವರು. ಯೂಟ್ಯೂಬ್ ಮಾಡಿ ಮೆಚ್ಚುಗೆ ಪಡೆದರು. ಬಿಗ್ ಬಾಸ್ ಮನೆಯಲ್ಲಿ ಇರುವಾಗ ರಘು ಜೊತೆ ಅವರಿಗೆ ಒಳ್ಳೆಯ ಒಡನಾಟ ಇತ್ತು. ಅದು ಹೊರಗೂ ಮುಂದುವರಿದಿದೆ. ರಕ್ಷಿತಾ ಅವರು ರಘು ಜಿಮ್ ಅಲ್ಲಿ ವರ್ಕೌಟ್ ಮಾಡಿದ್ದಾರೆ. ಈ ವೇಳೆ ಅವರು ಟಿಪ್ಸ್ ಕೂಡ ನೀಡಿದ್ದಾರೆ. ರಕ್ಷಿತಾ ಅವರನ್ನು ಜಿಮ್ ಎಕ್ಸ್​ಪರ್ಟ್ ಎಂದು ರಘು ಹೇಳಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ. ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ…

Read More

ಕೆಐಎಡಿಬಿ ಕಚೇರಿಯಲ್ಲಿ 16 ಕೋಟಿ ಲೂಟಿ! ಗುತ್ತಿಗೆ ನೌಕರ ಸೇರಿ ಏಳು ಮಂದಿ ಮೇಲೆ ಎಫ್ಐಆರ್

ಬಳ್ಳಾರಿ, ಮಾರ್ಚ್​ 24: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಬಳ್ಳಾರಿ ವಲಯ ಕಚೇರಿಯಲ್ಲಿ ಭಾರೀ ಆರ್ಥಿಕ ಅವ್ಯವಹಾರ ಬೆಳಕಿಗೆ ಬಂದಿದೆ. ಈ ವರ್ಷದ ಆಂತರಿಕ ಆಡಿಟ್ ವೇಳೆ ಒಟ್ಟೂ 16 ಕೋಟಿ ರೂ.ಗೂ ಹೆಚ್ಚು ಹಣ ಅಕ್ರಮವಾಗಿ ವರ್ಗಾವಣೆಯಾಗಿರುವುದು ತಿಳಿದುಬಂದಿದೆ. ಈ ಹಿನ್ನೆಲೆ ಮಂಡಳಿಯ ಎಕ್ಸಿಕ್ಯೂಟಿವ್ ಇಂಜಿನಿಯರ್ ಪೊಲೀಸರಿಗೆ ದೂರು ನೀಡಿದ್ದು, ಏಳು ಮಂದಿ ಮೇಲೆ ಎಫ್​ಐಆರ್ ದಾಖಲಾಗಿದೆ. ಅಧಿಕಾರಿಗಳ ಸಹಿ ಫೋರ್ಜರಿ ಮಾಡಿದ್ದ ಆರೋಪಿ 2022ರಿಂದ 2026ರವರೆಗೆ ನಾಲ್ಕು ವರ್ಷಗಳ ಅವಧಿಯಲ್ಲಿ ಒಟ್ಟು 16…

Read More

‘ಧುರಂಧರ್ 2’ ಎಫೆಕ್ಟ್​​: ಪಾಕ್​​ನಲ್ಲಿ ಭಾರತೀಯ ಸ್ಪೈಗಾಗಿ ಹುಡುಕಾಟ? ವಿಡಿಯೋ ವೈರಲ್

ರಣವೀರ್ ಸಿಂಗ್ ನಟನೆಯ ‘ಧುರಂಧರ್ 2’ ಸಿನಿಮಾ (Dhurandhar 2) ಬಾಕ್ಸ್ ಆಫೀಸ್​​ನಲ್ಲಿ ರಿಲೀಸ್ ಆಗಿ ಯಶಸ್ಸು ಕಂಡಿದೆ. ಈ ಚಿತ್ರ ಐದು ದಿನಕ್ಕೆ ಭಾರತದಲ್ಲಿ 500 ಕೋಟಿ ರೂಪಾಯಿ ಗಳಿಸಿ ಗಮನ ಸೆಳೆದಿದೆ. ಈ ಚಿತ್ರದಲ್ಲಿ ಭಾರತದವರು ಪಾಕಿಸ್ತಾನಕ್ಕೆ ತೆರಳಿ, ಸ್ಪೈ ಮಾಡಿ ಅಲ್ಲಿನ ಭಯೋತ್ಪಾದನಾ ಲೋಕವನ್ನು ನಾಶ ಮಾಡುವ ರೀತಿಯಲ್ಲಿ ‘ಧುರಂಧರ್ 2’ ಸಿನಿಮಾದಲ್ಲಿ ತೋರಿಸಲಾಗಿದೆ. ಈ ಬೆನ್ನಲ್ಲೇ ಪಾಕಿಸ್ತಾನದಲ್ಲಿ ಭಾರತದ ಗೂಢಚಾರಿಗಳಿಗಾಗಿ ಹುಡುಕಾಟ ನಡೆದಿದೆ. ಜಸ್ಕಿರತ್ ಸಿಂಗ್ ರಂಗಿ ಅಮೆರಿಕಕ್ಕೆ ತೆರಳಿ ಹಮ್ಜಾ…

Read More