ಬೆಳಗಾವಿಯಲ್ಲಿ ಪೆಟ್ರೋಲ್, ಡಿಸೇಲ್ ಅಭಾವ? ಬಂಕ್ಗಳಿಗೆ ಏಕಾಏಕಿ ಮುಗಿಬಿದ್ದ ಜನ
ಬೆಳಗಾವಿ, ಮಾರ್ಚ್ 24: ಬೆಳಗಾವಿ ನಗರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ಗಾಗಿ ಭಾರೀ ಜನಸಂದಣಿ ಕಂಡುಬಂದಿದೆ. ‘ನಾಲ್ಕು ದಿನಗಳ ಕಾಲ ಪೆಟ್ರೋಲ್ ಸಿಗುವುದಿಲ್ಲ’ ಎಂಬ ವದಂತಿಯು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಇದರಿಂದ ಜನತೆ ಭಯಭೀತರಾಗಿ ಇಂಧನ ಬಂಕ್‌ಗಳತ್ತ ಧಾವಿಸಿದರು. ಅಜಮ್ ನಗರ, ಕೊಲ್ಲಾಪುರ ಸರ್ಕಲ್, ನೆಹರು ನಗರ, ವೈಭವ ನಗರ, ಮತ್ತು ಗಾಂಧಿನಗರದಂತಹ ಪ್ರಮುಖ ಬಂಕ್‌ಗಳಲ್ಲಿ ವಾಹನ ಸವಾರರು ಮುಗಿಬಿದ್ದರು. ಜನರು ತಮ್ಮ ವಾಹನಗಳಿಗೆ ಇಂಧನ ತುಂಬಿಸಿಕೊಳ್ಳುವುದರ ಜೊತೆಗೆ ಬಾಟಲಿಗಳು ಮತ್ತು ಆಯಿಲ್ ಕ್ಯಾನ್‌ಗಳಲ್ಲಿ ಪೆಟ್ರೋಲ್ ತುಂಬಿಸಿಕೊಳ್ಳುತ್ತಿರುವುದು ಕಂಡುಬಂದಿದೆ….