All posts by nagaraj11081993

ಫೈನಲ್ ಪಂದ್ಯದಲ್ಲಿ ಕೈಗೆ ಗಮ್ ಹಾಕಿ ಬ್ಯಾಟಿಂಗ್ ಮಾಡ್ತೀರಾ?

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ ಇತಿಹಾಸದಲ್ಲಿ ಮೂರು ಬಾರಿ ಹಿಟ್​​ ವಿಕೆಟ್ ಆಗಿ ಔಟಾದ ಏಕೈಕ ಬ್ಯಾಟರ್ ಸಾಯಿ ಸುದರ್ಶನ್. ಅದರಲ್ಲೂ ಬ್ಯಾಕ್ ಟು ಬ್ಯಾಕ್ ಹೀಗೆ ವಿಕೆಟ್ ಒಪ್ಪಿಸಿದ ಏಕೈಕ ಆಟಗಾರ ಕೂಡ ಸಾಯಿ ಸುದರ್ಶನ್. ಮೊದಲ ಕ್ವಾಲಿಫೈಯರ್​ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ಹಿಟ್​ ವಿಕೆಟ್ ಆಗಿದ್ದ ಸಾಯಿ ದ್ವಿತೀಯ ಕ್ವಾಲಿಫೈಯರ್​ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಹಿಟ್ ವಿಕೆಟ್ ಆಗಿ ವಿಕೆಟ್ ಕೈಚೆಲ್ಲಿದ್ದಾರೆ. ಹೀಗಾಗಿಯೇ ಫೈನಲ್ ಪಂದ್ಯದಲ್ಲಿ ಕೈಗೆ ಗ್ಲೂ (ಗಮ್) ಹಾಕಿ ಬ್ಯಾಟಿಂಗ್ ಮಾಡ್ತೀರಾ?  ಎಂಬ ಪ್ರಶ್ನೆ ಮುಂದಿಡಲಾಗಿದೆ.

ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದ ಬಳಿಕ ಮಾತನಾಡಿದ ಸಾಯಿ ಸುದರ್ಶನ್​​ಗೆ, ಅಹಮದಾಬಾದ್​ನಲ್ಲಿ ನಡೆಯಲಿರುವ ಪಂದ್ಯದಲ್ಲಿ ನೀವು ಕೈಗೆ ಗಮ್ ಹಾಕಿ ಬ್ಯಾಟಿಂಗ್ ಮಾಡ್ತೀರಾ? ಎಂದು ನಿರೂಪಕರು ಕೇಳಿದ್ದಾರೆ. ಇದಕ್ಕೆ ನಗುತ್ತಾ ಉತ್ತರಿಸಿದ ಸಾಯಿ, ನಾನು ಹೊಸದಾಗಿ ಏನನ್ನಾದರೂ ಮಾಡಬೇಕಿದೆ. ಈ ಸಮಸ್ಯೆಗೆ ಪರಿಹಾರವಾಗಿ ಹೊಸದಾಗಿ ‘ಗ್ರಿಪ್ ಟೆಕ್’ ಬಳಸಿ ನೆಟ್ಸ್‌ನಲ್ಲಿ ಕೆಲವು ಎಸೆತಗಳನ್ನು ಎದುರಿಸಿ ಪರೀಕ್ಷಿಸಲು ನಿರ್ಧರಿಸಿದ್ದೇನೆ ಎಂದಿದ್ದಾರೆ.

ಇದೇ ವೇಳೆ ಎರಡು ಬಾರಿ ಹಿಟ್​ ವಿಕೆಟ್ ಆದ ಬಗ್ಗೆ ಬೇಸರ ವ್ಯಕ್ತಪಡಿಸಿದ ಸಾಯಿ ಸುದರ್ಶನ್, ಕಳೆದ ಪಂದ್ಯದಲ್ಲಿ ಚೆಂಡು ಬೌನ್ಸ್ ಆಗಿದ್ದ ಪರಿಣಾಮ ಬ್ಯಾಟ್ ಜಾರಿ ಸ್ಟಂಪ್​ಗೆ ಬಡಿಯಿತು. ಈ ಬಾರಿ ನಾನು ನೇರವಾಗಿ ಶಾಟ್ ಬಾರಿಸಲು ಬಯಸ್ಸಿದ್ದೆ. ದುರಾದೃಷ್ಟವಶಾತ್ ಹಿಟ್ ವಿಕೆಟ್ ಆದ ಎಂದರು.

ಇನ್ನು ಶುಭ್​ಮನ್ ಗಿಲ್ ಜೊತೆಗಿನ ಜೊತೆಯಾಟದ ಬಗ್ಗೆ ಮಾತನಾಡಿದ ಸಾಯಿ ಸುದರ್ಶನ್, ನಮ್ಮ ನಡುವೆ ಏನು ಮಾಡಬೇಕು ಎಂಬುದುರ ಬಗ್ಗೆ ಸ್ಪಷ್ಟತೆ ಇತ್ತು. ಮೊದಲ ಓವರ್​ನಿಂದಲೇ ಆಕ್ರಮಣಕಾರಿ ಆಟದೊಂದಿಗೆ ಬೌಲರ್​ಗಳಿಗೆ ಒತ್ತಡ ಹೇರುವುದು ನಮ್ಮ ಯೋಜನೆಯಾಗಿತ್ತು. ಅದರಂತೆ ಪವರ್​ಪ್ಲೇನಲ್ಲಿ ರನ್ ವೇಗ ಹೆಚ್ಚಿಸಲು ಯಶಸ್ವಿಯಾದೆವು. ಶುಭ್​ಮನ್ ಗಿಲ್ ಅತ್ಯದ್ಭುತವಾಗಿ ಬ್ಯಾಟ್ ಬೀಸಿದರು. ನಿಜ ಹೇಳಬೇಕೆಂದರೆ ನಾವೇನು ಅಂದುಕೊಂಡೆವು ಅದೆಲ್ಲಾವೂ ಸಾಧ್ಯವಾಯಿತು ಎಂದು ಸಾಯಿ ಸುದರ್ಶನ್ ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಆ ದಾಖಲೆ, ಈ ದಾಖಲೆ ಅಲ್ಲ… ಇದು ವೈಭವ್ ಸೂರ್ಯವಂಶಿ ವಿಶ್ವ ದಾಖಲೆ

ಈ ವೇಳೆ 215 ರನ್​ಗಳನ್ನು ಚೇಸ್ ಮಾಡಬಹುದು ಎಂದೆನಿಸಿತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಾಯಿ, ನಿಜ ಹೇಳಬೇಕೆಂದರೆ, ನಾವು ಸ್ಕೋರ್ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಸ್ಕೋರ್ ಎಷ್ಟೇ ಇರಲಿ. ನಮ್ಮ ಗಮನ ಕೇವಲ ಪ್ರತಿ ಎಸೆತದ ಮೇಲಿತ್ತು. ಪ್ರತಿ ಎಸೆತಗಳಲ್ಲೂ ರನ್​ಗಳಿಸಲು ನಿರ್ಧರಿಸಿದ್ದವು. ಇದುವೇ ನಮ್ಮನ್ನು ಯಶಸ್ಸಿನತ್ತ ಮುನ್ನಡೆಸಿದೆ ಎಂದು ಭಾವಿಸುತ್ತೇನೆ ಎಂದು ಸಾಯಿ ಸುದರ್ಶನ್ ಹೇಳಿದ್ದಾರೆ.

 

Source link

Daily Devotional: ದೇವಸ್ಥಾನಗಳಲ್ಲಿ ಮಹಿಳೆಯರು ಅರ್ಚಕರಾಗಬಹುದೇ? ಶಾಸ್ತ್ರಗಳು ಹೇಳುವುದೇನು?

ಅರ್ಚಕ ವೃತ್ತಿಗೆ ನಮ್ಮ ಸಂಸ್ಕೃತಿಯಲ್ಲಿ ಅತೀವ ಮಹತ್ವವಿದೆ. “ಅರ್ಚಕಸ್ಯ ಪ್ರಭಾವೇನ ಶಿಲಾಭವತಿ ಶಂಕರ” ಎಂಬ ಸೂಕ್ತಿ ಹೇಳುವಂತೆ, ಅರ್ಚಕರು ಮನಸ್ಸು ಮಾಡಿದರೆ ಒಂದು ಶಿಲೆಯಲ್ಲಿನ ಮೂರ್ತಿಯಲ್ಲೂ ಕೂಡ ಭಗವಂತನ ಶಕ್ತಿ ನೆಲೆಸುತ್ತದೆ. ಅರ್ಚಕರು ಭಗವಂತ ಮತ್ತು ನಮ್ಮ ನಡುವೆ ಇರುವ ಬಹುದೊಡ್ಡ ಶಕ್ತಿ. ಈ ವೃತ್ತಿಯು ಒಂದು ವಿಶೇಷವಾದ ಪುಣ್ಯದ ವೃತ್ತಿ. ಈ ಅರ್ಚಕ ವೃತ್ತಿಯಲ್ಲಿ ಮಹಿಳೆಯರು ಅರ್ಚಕರಾಗಬಹುದೇ ಎಂಬುದು ಪ್ರಸ್ತುತ ಪ್ರಶ್ನೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಕೆಲವು ದೇವಾಲಯಗಳಲ್ಲಿ, ಹಳ್ಳಿಗಳಲ್ಲಿ ಮಹಿಳೆಯರು ಬೆಳಗಿನ ಜಾವ ಎದ್ದು ಪೂಜೆ, ಅಭಿಷೇಕ, ಅಷ್ಟೋತ್ರಗಳನ್ನು ಮಾಡಿ ಭಗವಂತನಿಗೆ ಅರ್ಪಣೆ ಮಾಡುವ ಸಾಧ್ಯತೆಗಳನ್ನು ನಾವು ನೋಡಿದ್ದೇವೆ. ಆದರೆ, ಕೆಲವರ ಮನಸ್ಸಿನಲ್ಲಿ ಇದು ಸರಿನಾ ಎಂಬ ಗೊಂದಲವಿದೆ. ಆದರೆ, ಅರ್ಚಕ ವೃತ್ತಿಯಲ್ಲಿ ಪುರುಷಲಿಂಗ ಅಥವಾ ಸ್ತ್ರೀಲಿಂಗಕ್ಕೆ ಪ್ರಾಶಸ್ತ್ಯ ಎಂಬುದು ಎಲ್ಲೂ ಇಲ್ಲ. ಅರ್ಚಕರಿಗೆ ಪಂಡಿತ, ಪುರೋಹಿತ, ಪೂಜಾರಿ ಎಂದು ಹಲವು ಹೆಸರುಗಳಿಂದ ಕರೆಯಲಾಗುತ್ತದೆ.

ದೇವಾಲಯ ಪೂಜೆಗಳು, ದೊಡ್ಡ ಯಜ್ಞ ಯಾಗಾದಿಗಳು, ಹೋಮಗಳು, ಪ್ರತಿಷ್ಠಾಪನೆಗಳ ವಿಚಾರದಲ್ಲಿ ಮಹಿಳೆಯರು ಈ ವೃತ್ತಿಯನ್ನು ನಿರ್ವಹಿಸಬಹುದೇ ಎಂದು ನೋಡಿದರೆ, ಖಂಡಿತವಾಗಿಯೂ ಮಹಿಳೆಯರು ಈ ಎಲ್ಲಾ ಕಾರ್ಯಗಳನ್ನು ಮಾಡಬಹುದು. ಇಂತಹ ಕಾರ್ಯಗಳನ್ನು ಮಾಡಲು ಬೇಕಾದ ಯೋಗ ಮತ್ತು ಸಾಮರ್ಥ್ಯ ತಾಯಿಯಲ್ಲಿ ಇರುತ್ತದೆ. ಇದಕ್ಕೆ ಯಾವುದೇ ನಿಬಂಧನೆಗಳಿಲ್ಲ. ಅರ್ಹತೆ ಮಾತ್ರ ಮುಖ್ಯ. ಈ ಅರ್ಹತೆ ಎಂದರೆ ತಾಳ್ಮೆ, ಶಾಂತಿ ಮತ್ತು ಶುದ್ಧ ಮನಸ್ಸು. ಇದನ್ನೂ ಕೂಡ ಅರ್ಹತೆಯ ಒಂದು ಭಾಗವೆಂದು ಪರಿಗಣಿಸಬಹುದು.

ಇದನ್ನೂ ಓದಿ: ಜೂ.5 ಪಂಚಕ ಯೋಗ; ಈ 4 ರಾಶಿಯವರ ಅದೃಷ್ಟ ಬದಲಾಯಿಸಲಿದೆ ಗ್ರಹಗಳ ಅಪರೂಪದ ಸ್ಥಾನ!

ವೇದಗಳು ಮತ್ತು ಧಾರ್ಮಿಕ ಆಚರಣೆಗಳಲ್ಲಿ ಮಹಿಳೆಯರ ಪಾತ್ರ ಅಪಾರವಾಗಿದೆ ಎಂದು ಶಾಸ್ತ್ರಗಳಲ್ಲಿ ಉಲ್ಲೇಖವಿದೆ. ಹಿಂದೆ ಅನೇಕ ಮಹಿಳಾ ವಿದ್ವಾಂಸರು ಇದ್ದ ಉದಾಹರಣೆಗಳಿವೆ. ಋಷಿಮುನಿಗಳ ಪತ್ನಿಯರು ಕೂಡ ಮಹಾ ಮೇಧಾವಿಗಳು ಮತ್ತು ವಿದ್ವಾಂಸರಾಗಿದ್ದರು. ಯಾಜ್ಞವಲ್ಕ್ಯ ಋಷಿಗಳ ಮಗಳು ಮೈತ್ರೇಯಿ ಮತ್ತು ವೇದಗಳ ಸಂಕೀರ್ಣ ಸ್ತೋತ್ರಗಳನ್ನು ರಚಿಸಿದ ಲೋಪಮುದ್ರಾ ದೇವಿ ಇದಕ್ಕೆ ಉತ್ತಮ ಉದಾಹರಣೆಗಳು. ಆಧ್ಯಾತ್ಮಿಕ ವಿಷಯಗಳಲ್ಲಿ ಲಿಂಗಭೇದವಿಲ್ಲ. ಮಠಾಧೀಶರು ಪುರುಷರೇ ಆಗಬೇಕೆಂಬ ನಿಯಮವಿಲ್ಲ, ಸಾಕಷ್ಟು ಮಹಿಳೆಯರು ಈಗಾಗಲೇ ಮಠಾಧೀಶರಾಗಿ ಯಶಸ್ವಿಯಾಗಿ ಧರ್ಮ ರಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಲ್ಲಿ ಅರ್ಹತೆ ಮತ್ತು ಅಧ್ಯಯನಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ. ಆದ್ದರಿಂದ, ಮಹಿಳೆಯರು ಅರ್ಚಕರಾಗಬಹುದು, ಪೂಜಾರಿಗಳಾಗಬಹುದು, ಪಂಡಿತರಾಗಬಹುದು, ಹೋಮ ಯಜ್ಞ ಯಾಗಾದಿಗಳನ್ನು ಮಾಡಬಹುದು. ಅವರಿಗೆ ಅರ್ಹತೆ ಮತ್ತು ಯೋಗ ಇದ್ದಾಗ ಇದನ್ನು ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Bengaluru Air Quality: ಮೈಸೂರು, ಮಂಗಳೂರು ಸೇರಿ ಕರ್ನಾಟಕದ ಇಂದಿನ ಏರ್ ಕ್ವಾಲಿಟಿ ಹೇಗಿದೆ?

ಮೈಸೂರು, ಮಂಗಳೂರು ಸೇರಿ ಕರ್ನಾಟಕದ ಇಂದಿನ ಏರ್ ಕ್ವಾಲಿಟಿ ಹೇಗಿದೆ?

ಬೆಂಗಳೂರು, ಮೇ 30: ಇಂದು ಬೆಂಗಳೂರಿನ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕವು (AQI) 53 ರಿಂದ 71 ರ ಆಸುಪಾಸಿನಲ್ಲಿ ದಾಖಲಾಗಿದ್ದು, ಇದು ‘ಸಾಧಾರಣ’ (Moderate) ವಲಯಕ್ಕೆ ಸೇರುತ್ತದೆ. ಇತ್ತೀಚೆಗೆ ನಗರದ ಕೆಲವು ಭಾಗಗಳಲ್ಲಿ ಬಿದ್ದ ಮಳೆ ಮತ್ತು ಬೀಸುತ್ತಿರುವ ಗಾಳಿಯ ಕಾರಣದಿಂದಾಗಿ ವಾಯು ಮಾಲಿನ್ಯದ ಮಟ್ಟವು ನಿಯಂತ್ರಣದಲ್ಲಿದೆ.

ಮುಖ್ಯಾಂಶಗಳು

  • ಬೆಂಗಳೂರಿನ ಇಂದಿನ ವಾಯು ಗುಣಮಟ್ಟ ಸೂಚ್ಯಂಕವು ಸಾಧಾರಣ ಮಟ್ಟದಲ್ಲಿ ದಾಖಲಾಗಿದೆ.
  • ರಾಜ್ಯದ ಬಹುತೇಕ ಪ್ರಮುಖ ನಗರಗಳಲ್ಲಿ ವಾಯು ಮಾಲಿನ್ಯ ನಿಯಂತ್ರಣದಲ್ಲಿದೆ.
  • ಇತ್ತೀಚಿನ ಮಳೆಯು ಧೂಳನ್ನು ನಿಯಂತ್ರಿಸಿ ಗಾಳಿಯ ಗುಣಮಟ್ಟ ಸುಧಾರಿಸಲು ಸಹಕಾರಿಯಾಗಿದೆ.

ನಗರದ ಪ್ರಮುಖ ಮಾಲಿನ್ಯಕಾರಕ ಘಟಕಗಳಾದ PM2.5 ಮತ್ತು PM10 ಕಣಗಳು ನಿಯಂತ್ರಿತ ಮಟ್ಟದಲ್ಲಿವೆ. ಆದಾಗ್ಯೂ, ಬಿಟಿಎಂ ಲೇಔಟ್, ಬಸವನಗುಡಿ ಮತ್ತು ಪೀಣ್ಯ ಕೈಗಾರಿಕಾ ಪ್ರದೇಶಗಳಲ್ಲಿ ಎಕ್ಯೂಐ ಮಟ್ಟವು 65-74 ರಷ್ಟಿದ್ದು, ಉಳಿದ ವಸತಿ ಪ್ರದೇಶಗಳಲ್ಲಿ ವಾಯು ಗುಣಮಟ್ಟವು ಉತ್ತಮವಾಗಿದೆ (Good). ಉಸಿರಾಟದ ತೊಂದರೆ ಇರುವವರು ಮತ್ತು ಹಿರಿಯ ನಾಗರಿಕರು ಮುಂಜಾನೆ ಹೊರಾಂಗಣ ಚಟುವಟಿಕೆಗಳನ್ನು ಮಾಡುವಾಗ ಸ್ವಲ್ಪ ಜಾಗ್ರತೆ ವಹಿಸುವುದು ಸೂಕ್ತ.

ಕರ್ನಾಟಕದ ಇತರೆ ನಗರಗಳ ಎಕ್ಯೂಐ ಸ್ಥಿತಿಗತಿ

ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಇತರೆ ಪ್ರಮುಖ ನಗರಗಳಲ್ಲೂ ಇಂದು ವಾಯು ಗುಣಮಟ್ಟವು ತೃಪ್ತಿದಾಯಕ ಹಾಗೂ ಸಾಧಾರಣ ಮಟ್ಟದಲ್ಲಿದೆ. ಕರ್ನಾಟಕದ ಪ್ರಮುಖ ನಗರಗಳ ಇಂದಿನ ರಿಯಲ್-ಟೈಮ್ ಎಕ್ಯೂಐ (AQI) ವಿವರಗಳು ಈ ಕೆಳಗಿನಂತಿವೆ:

  • ಬಾಗಲಕೋಟೆ: 74 AQI (ಸಾಧಾರಣ)
  • ಮಡಿಕೇರಿ: 60 AQI (ಸಾಧಾರಣ)
  • ಮಂಗಳೂರು: 58 AQI (ಸಾಧಾರಣ)
  • ಬೆಳಗಾವಿ: 55 AQI (ಸಾಧಾರಣ)
  • ಮೈಸೂರು: 54 AQI (ಸಾಧಾರಣ)
  • ಕಲಬುರಗಿ: 46 AQI (ಉತ್ತಮ)

ರಾಜ್ಯದ ಬಹುತೇಕ ನಗರಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕವು 100 ರ ಒಳಗಿರುವುದರಿಂದ ಸಾರ್ವಜನಿಕ ಆರೋಗ್ಯಕ್ಕೆ ಯಾವುದೇ ಗಂಭೀರ ಆತಂಕವಿಲ್ಲ. ಪ್ರಸ್ತುತ ರಾಜ್ಯದಲ್ಲಿ ವರದಿಯಾಗುತ್ತಿರುವ ಪ್ರೀ-ಮಾನ್ಸೂನ್ (ಮುಂಗಾರು ಪೂರ್ವ) ಮಳೆಯು ಧೂಳಿನ ಕಣಗಳನ್ನು ನಿಯಂತ್ರಿಸಲು ಮತ್ತು ಗಾಳಿಯನ್ನು ಶುದ್ಧವಾಗಿಡಲು ಸಹಕಾರಿಯಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬೆಂಗಳೂರು ಹೃದಯ ಭಾಗದಲ್ಲೇ ಕಾರಾಗೃಹ ಇಲಾಖೆಯ 50 ಕೋಟಿ ರೂ. ಮೌಲ್ಯದ ಜಾಗ ಕಬ್ಜಾ: ಅಲೋಕ್ ಕುಮಾರ್ ಎಂಟ್ರಿ ಬೆನ್ನಲ್ಲೇ ಎಫ್‌ಐಆರ್

ಗಾಂಧಿನಗರದಲ್ಲಿರುವ ಕಾರಾಗೃಹ ಇಲಾಖೆಯ ಜಾಗImage Credit source: tv9

ಬೆಂಗಳೂರು, ಮೇ 30: ರಾಜಧಾನಿ ಬೆಂಗಳೂರಿನಲ್ಲಿ (Bengaluru) ಭೂ ಮಾಫಿಯಾ ಕೈಚಳಕ ಎಷ್ಟರಮಟ್ಟಿಗೆ ಬೆಳೆದಿದೆ ಎಂದರೆ, ಸಾರ್ವಜನಿಕರು ತಪ್ಪು ಮಾಡಿದರೆ ಜೈಲಿಗೆ ಹಾಕುವ ಕಾರಾಗೃಹ ಇಲಾಖೆಗೆ (Prisons Department) ಸೇರಿದ ಜಾಗವನ್ನೇ ಖದೀಮರ ತಂಡವೊಂದು ಅತಿಕ್ರಮಣ ಮಾಡಿಕೊಂಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ನಗರದ ಹೃದಯಭಾಗವಾದ ಗಾಂಧಿನಗರದಲ್ಲಿರುವ ಕಾರಾಗೃಹ ಇಲಾಖೆಯ ಬರೋಬ್ಬರಿ 10,000 ಚದರ ಅಡಿ ವಿಸ್ತೀರ್ಣದ ಪ್ರೈಮ್ ಲೊಕೇಶನ್ ಜಾಗವನ್ನು ಕಬಳಿಸಲು ಯತ್ನಿಸಲಾಗಿದೆ. ಈ ಕೋಟ್ಯಂತರ ರೂಪಾಯಿ ಮೌಲ್ಯದ ಜಾಗವನ್ನು ಅತಿಕ್ರಮಣ ಮಾಡಿಕೊಂಡಿದ್ದ ಆರೋಪಿಗಳ ವಿರುದ್ಧ ಕಾರಾಗೃಹ ಇಲಾಖೆ ನೀಡಿದ ದೂರಿನನ್ವಯ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಈಗ ಅಧಿಕೃತವಾಗಿ ಎಫ್‌ಐಆರ್ (FIR) ದಾಖಲಾಗಿದೆ.

ಮುಖ್ಯಾಂಶಗಳು

  • ಮೈಸೂರು ಅರಸರು ಕಾರಾಗೃಹ ಇಲಾಖೆಗೆ ದಾನವಾಗಿ ನೀಡಿದ್ದ 40 ರಿಂದ 50 ಕೋಟಿ ರೂ. ಮೌಲ್ಯದ 10 ಸಾವಿರ ಚದರ ಅಡಿ ಜಾಗದ ಮೇಲೆ ಭೂಮಾಫಿಯಾ ಕಣ್ಣು.
  • ಕಳೆದ 20 ವರ್ಷಗಳಿಂದ ಪಾಳುಬಿದ್ದಿದ್ದ ಜಾಗವನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಂಡು ಗುಜರಿ ಉದ್ಯಮ ನಡೆಸುತ್ತಿದ್ದ ಕಲೀಂ ಮತ್ತು ಅನಿಲ್ ಎಂಬ ಕಿಲಾಡಿಗಳು.
  • ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್ ಕುಮಾರ್ ಕಟ್ಟುನಿಟ್ಟಿನ ಆದೇಶದ ಬೆನ್ನಲ್ಲೇ ಉಪ್ಪಾರಪೇಟೆ ಪೊಲೀಸರಿಂದ ಆರೋಪಿಗಳಿಗೆ ನೋಟಿಸ್ ಜಾರಿ.

ಮೈಸೂರು ಅರಸರು ನೀಡಿದ್ದ ಆಸ್ತಿ ಮೇಲೆ ಕಣ್ಣಿಟ್ಟ ಖದೀಮರು

ಗಾಂಧಿನಗರದ 2ನೇ ಕ್ರಾಸ್‌ನಲ್ಲಿರುವ ರಾಮಮಂದಿರದ ಎದುರು ಇರುವ ಈ ಜಾಗಕ್ಕೆ ಬರೋಬ್ಬರಿ 70 ರಿಂದ 80 ವರ್ಷಗಳ ಇತಿಹಾಸವಿದೆ. ಹಿಂದೆ ಮೈಸೂರು ಮಹಾರಾಜರು ಈ ಜಾಗವನ್ನು ಕಾರಾಗೃಹ ಇಲಾಖೆಗೆ ದಾನವಾಗಿ ನೀಡಿದ್ದರು. ಇಲಾಖೆಯು ಇಲ್ಲಿ ಕೆಲವು ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ ಬಾಡಿಗೆಗೆ ನೀಡಿತ್ತು. ಆದರೆ, ಕಳೆದ 20 ವರ್ಷಗಳಿಂದ ಇಲಾಖೆಯ ಹಿರಿಯ ಅಧಿಕಾರಿಗಳು ಈ ಕಡೆ ಗಮನ ಹರಿಸದ ಕಾರಣ ಕಟ್ಟಡಗಳು ಹಳೆಯದಾಗಿ ಪಾಳು ಬಿದ್ದಿದ್ದವು. ಇದನ್ನೇ ಬಂಡವಾಳ ಮಾಡಿಕೊಂಡ ಕಲೀಂ ಮತ್ತು ಅನಿಲ್ ಎಂಬುವವರು ಜಾಗಕ್ಕೆ ಬೇಲಿ ಹಾಕಿ, ಗುಜರಿ ಸಾಮಗ್ರಿಗಳನ್ನು ಇಟ್ಟುಕೊಂಡು ಅಕ್ರಮವಾಗಿ ಕಬ್ಜಾ ಮಾಡಿಕೊಂಡಿದ್ದರು.

ಅಲೋಕ್ ಕುಮಾರ್ ಮಾಸ್ಟರ್ ಪ್ಲಾನ್​ನಿಂದ ಬಯಲಾದ ಅಕ್ರಮ!

ಇತ್ತೀಚೆಗೆ ಕಾರಾಗೃಹ ಇಲಾಖೆಯ ಮುಖ್ಯಸ್ಥರಾದ ಡಿಜಿಪಿ ಅಲೋಕ್ ಕುಮಾರ್ (DGP Alok Kumar) ಅವರ ಗಮನಕ್ಕೆ ಈ ಜಾಗದ ವಿಚಾರ ಬಂದಾಗ, ಅವರು ಸ್ಥಳ ಪರಿಶೀಲನೆ ನಡೆಸಿದ್ದರು. ಈ ಪ್ರೈಮ್ ಏರಿಯಾದಲ್ಲಿ ಇಲಾಖೆಯ ವತಿಯಿಂದ ಹೊಸ ಕಟ್ಟಡ ನಿರ್ಮಿಸಿ, ಜೈಲಿನ ಕೈದಿಗಳು ಸಿದ್ಧಪಡಿಸುವ ಬೇಕರಿ ತಿನಿಸುಗಳು ಹಾಗೂ ಬಟ್ಟೆಗಳ ಮಾರಾಟ ಮಳಿಗೆಯನ್ನು (Prison Outlet) ಆರಂಭಿಸಲು ಮಾಸ್ಟರ್ ಪ್ಲಾನ್ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಜಾಗ ಖಾಲಿ ಮಾಡುವಂತೆ ಅತಿಕ್ರಮಣದಾರರಿಗೆ ನೋಟಿಸ್ ನೀಡಲಾಗಿತ್ತಾದರೂ, ಅವರು ಜಾಗ ಖಾಲಿ ಮಾಡಲು ನಿರಾಕರಿಸಿದ್ದರು.

ಇದನ್ನೂ ಓದಿ: ಹಳದಿ ಮಾರ್ಗದಲ್ಲಿ ಮೆಟ್ರೋ ರೈಲುಗಳ ಕೊರತೆ ಹಿನ್ನೆಲೆ ನಿತ್ಯ ಪರದಾಟ: BMRCL ವಿರುದ್ಧ ಪ್ರಯಾಣಿಕರ ಆಕ್ರೋಶ

ಇದೀಗ ಕಠಿಣ ನಿಲುವು ತಳೆದಿರುವ ಇಲಾಖೆಯು ಉಪ್ಪಾರಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಇಬ್ಬರೂ ಆರೋಪಿಗಳಿಗೆ ತಕ್ಷಣ ಜಾಗ ಖಾಲಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದಾರೆ. ಸದ್ಯ ಮುನ್ನೆಚ್ಚರಿಕೆ ಕ್ರಮವಾಗಿ ಇಲಾಖೆಯು ಆ ಜಾಗದಲ್ಲಿ ‘ಇದು ಕಾರಾಗೃಹ ಇಲಾಖೆಗೆ ಸೇರಿದ ಸ್ವತ್ತು’ ಎಂದು ಬೋರ್ಡ್ ಅಳವಡಿಸಿ, ಇಬ್ಬರು ಸಶಸ್ತ್ರ ಭದ್ರತಾ ಸಿಬ್ಬಂದಿಯನ್ನು ಕಾವಲಿಗೆ ನಿಯೋಜಿಸಿದೆ. ಈ ಹಿಂದೆ ಮಲ್ಲೇಶ್ವರಂ ಮುಖ್ಯರಸ್ತೆಯಲ್ಲೂ ಪೊಲೀಸ್ ಇಲಾಖೆಯ ಒಂದು ಎಕರೆ ಜಾಗವನ್ನು ಕಬಳಿಸಲು ಯತ್ನಿಸಲಾಗಿತ್ತು. ರಕ್ಷಣೆ ನೀಡಬೇಕಾದ ಪೊಲೀಸ್ ಹಾಗೂ ಕಾರಾಗೃಹ ಇಲಾಖೆಯ ಆಸ್ತಿಗಳಿಗೇ ಈ ಪರಿಸ್ಥಿತಿ ಬಂದರೆ ಸಾಮಾನ್ಯ ಜನರ ಆಸ್ತಿಪಾಸ್ತಿಗಳ ಗತಿ ಏನು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನನ್ನಲ್ಲಿದ್ದ ಕೆಟ್ಟ ಅಭ್ಯಾಸಗಳನ್ನು ರಾಮಾಯಣ ದೂರ ಮಾಡಿದೆ ಎಂದ ರಣಬೀರ್

ನಿರ್ದೇಶಕ ನಿತೇಶ್ ತಿವಾರಿ ಅವರ ಮಹತ್ವಾಕಾಂಕ್ಷೆಯ ‘ರಾಮಾಯಣ’ ಚಿತ್ರದಲ್ಲಿ (Ramayana Movie) ಪ್ರಭು ಶ್ರೀರಾಮನ ಪಾತ್ರ ನಿರ್ವಹಿಸುತ್ತಿರುವ ನಟ ರಣಬೀರ್ ಕಪೂರ್, ಈ ಚಿತ್ರವು ತಮ್ಮ ವೃತ್ತಿಜೀವನ ಹಾಗೂ ವೈಯಕ್ತಿಕ ಜೀವನದ ಮೇಲೆ ಬೀರಿದ ಆಳವಾದ ಪ್ರಭಾವವನ್ನು ಹಂಚಿಕೊಂಡಿದ್ದಾರೆ. ಆರಂಭದಲ್ಲಿ ಈ ಐತಿಹಾಸಿಕ ಪಾತ್ರಕ್ಕೆ ತಾವು ನ್ಯಾಯ ಒದಗಿಸಬಲ್ಲರೇ ಎಂಬ ಆತಂಕ ತಮಗಿತ್ತೆಂದು ಅವರು ಒಪ್ಪಿಕೊಂಡಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ರಣಬೀರ್, ‘ರಾಮಾಯಣ ಸಿನಿಮಾ ನನ್ನ ಜೀವನವನ್ನೇ ಬದಲಾಯಿಸಿದೆ. ಶ್ರೀರಾಮನ ಪಾತ್ರ ನನ್ನ ಯೋಚನಾ ಲಹರಿ, ಮೌಲ್ಯಗಳು ಹಾಗೂ ಧರ್ಮವನ್ನು ನೋಡುವ ದೃಷ್ಟಿಕೋನವನ್ನೇ ಬದಲಿಸಿತು. ಇದು ನನ್ನಲ್ಲಿದ್ದ ಕೆಟ್ಟ ಅಭ್ಯಾಸಗಳನ್ನು ದೂರವಾಗಿಸಿ, ಒಬ್ಬ ಉತ್ತಮ ವ್ಯಕ್ತಿಯನ್ನಾಗಿ ರೂಪಿಸಿದೆ. ಮಗಳು ರಾಹಾ ನನ್ನ ಜೀವನಕ್ಕೆ ಬಂದ ಮೇಲೆ ನಾನು ಒಳ್ಳೆಯ ತಂದೆಯಾಗಬೇಕೆಂದು ಬಯಸಿದ್ದೆ, ಅದಕ್ಕೆ ಸರಿಯಾಗಿ ರಾಮಾಯಣ ಚಿತ್ರ ನನ್ನನ್ನು ರಾಹಾಳಿಗಾಗಿ ಮತ್ತಷ್ಟು ಉತ್ತಮ ಮಾನವನನ್ನಾಗಿ ಬದಲಾಯಿಸಿತು’ ಎಂದು ಭಾವನಾತ್ಮಕವಾಗಿ ಹೇಳಿದ್ದಾರೆ.

ಶ್ರೀರಾಮನ ಗುಣಗಳನ್ನು ಕೊಂಡಾಡಿದ ಅವರು, ‘ರಾಮನ ಅಸಲಿ ಶಕ್ತಿ ಅವನ ಸ್ನಾಯುಬಲ ಅಥವಾ ಅತಿಮಾನುಷ ಶಕ್ತಿಯಲ್ಲ; ಬದಲಿಗೆ ಅವನ ಶಾಂತತೆ, ಸಂಯಮ, ಕ್ಷಮಾಗುಣ ಮತ್ತು ಧರ್ಮಪಾಲನೆ. ಇಂದಿನ ಉದ್ವೇಗದ ಜಗತ್ತಿನಲ್ಲಿ ಅಹಂಕಾರ ಬದಿಗಿಟ್ಟು ಕರುಣೆಯಿಂದ ಪ್ರತಿಕ್ರಿಯಿಸುವ ಶ್ರೀರಾಮನ ಗುಣ ನಮಗೆ ದೊಡ್ಡ ಪಾಠ’ ಎಂದಿದ್ದಾರೆ. ನಮ್ಮ ಇತಿಹಾಸ ಮತ್ತು ಸಂಸ್ಕೃತಿಯನ್ನು ಅತ್ಯಂತ ಅಧಿಕೃತವಾಗಿ ತೆರೆಗೆ ತರುತ್ತಿರುವ ಈ ಚಿತ್ರದ ಭಾಗವಾಗಿರುವುದಕ್ಕೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಅಂದುಕೊಂಡಿದ್ದಕ್ಕಿಂತ ಮೊದಲೇ ಬರಲಿದೆ ‘ರಾಮಾಯಣ’ ಸಿನಿಮಾ; ‘ಟಾಕ್ಸಿಕ್’ ಮೇಲೆ ಒತ್ತಡ?

ಭಾರಿ ಬಜೆಟ್‌ನ ಈ ‘ರಾಮಾಯಣ’ ಚಿತ್ರ ಎರಡು ಭಾಗಗಳಲ್ಲಿ ಮೂಡಿಬರಲಿದ್ದು, ಮೊದಲ ಭಾಗವು ಅಕ್ಟೋಬರ್ 2026ರಲ್ಲಿ ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಹಾಗೂ ರಾಕಿಂಗ್ ಸ್ಟಾರ್ ಯಶ್ ರಾವಣನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪ್ರಸಿದ್ಧ ಸಂಗೀತ ನಿರ್ದೇಶಕರಾದ ಎ.ಆರ್. ರೆಹಮಾನ್ ಮತ್ತು ಹ್ಯಾನ್ಸ್ ಜಿಮ್ಮರ್ ಈ ಚಿತ್ರಕ್ಕೆ ಒಟ್ಟಾಗಿ ಸಂಗೀತ ನೀಡುತ್ತಿರುವುದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Karnataka Weather Forecast: ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ ಎಚ್ಚರಿಕೆ!

ಬೆಂಗಳೂರು, ಮೇ 30: ರಾಜ್ಯದ ಕರಾವಳಿ ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಹಗುರದಿಂದ ಸಾಧಾರಣ ಮಳೆಯಾಗುವ (Weather) ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ವರುಣನ ಆರ್ಭಟ ಹೆಚ್ಚಿರಲಿದ್ದು, ಕೆಲವು ಜಿಲ್ಲೆಗಳಲ್ಲಿ ಒಣ ಹವಾಮಾನ ಮುಂದುವರಿಯಲಿದೆ.

ಮುಖ್ಯಾಂಶಗಳು

  • ಕರಾವಳಿಯ ಮೂರು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
  • ಒಳನಾಡಿನ ಹಲವು ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯ ಮುನ್ಸೂಚನೆ.
  • ಸಾರ್ವಜನಿಕರು ಹಾಗೂ ರೈತರು ಸಿಡಿಲು ಮತ್ತು ಗಾಳಿಗೆ ಎಚ್ಚರಿಕೆ ವಹಿಸಿ.

ಎಲ್ಲೆಲ್ಲಿ ಮಳೆ?

ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಹಾವೇರಿ, ಗದಗ, ಕೊಪ್ಪಳ, ಧಾರವಾಡ ಮತ್ತು ರಾಯಚೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಬಿರುಗಾಳಿ (ಗಂಟೆಗೆ 40-50 ಕಿ.ಮೀ ವೇಗ) ಸಹಿತ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ. ಉಳಿದ ಜಿಲ್ಲೆಗಳಲ್ಲಿ ಒಣ ಹವಾಮಾನ ಮುಂದುವರಿಯಲಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಹಾಸನ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಗಂಟೆಗೆ 40 ರಿಂದ 50 ಕಿ.ಮೀ ವೇಗದ ಬಲವಾದ ಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.

ರಾಜ್ಯದ ಪ್ರಮುಖ ಭಾಗಗಳಲ್ಲಿ, ವಿಶೇಷವಾಗಿ ದಕ್ಷಿಣ ಒಳನಾಡಿನಲ್ಲಿ ವರುಣನ ಆರ್ಭಟ ಹೆಚ್ಚಿರಲಿದ್ದು, ಸಾರ್ವಜನಿಕರು ಮತ್ತು ರೈತರು ಬಿರುಗಾಳಿ ಹಾಗೂ ಸಿಡಿಲಿನ ಬಗ್ಗೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಉಳಿದಂತೆ ಉತ್ತರ ಒಣ ಹವೆಯೂ ಕೆಲವು ಜಿಲ್ಲೆಗಳಲ್ಲಿ ಮುಂದುವರಿಯಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಆ ದಾಖಲೆ, ಈ ದಾಖಲೆ ಅಲ್ಲ… ಇದು ವೈಭವ್ ಸೂರ್ಯವಂಶಿ ವಿಶ್ವ ದಾಖಲೆ

Source link

ಬಾಕ್ಸ್​ ಆಫೀಸ್​​ನಲ್ಲಿ ದಾಖಲೆ ಬರೆದ ‘ಕರುಪ್ಪು’ ಸಿನಿಮಾ; 300 ಕೋಟಿ ರೂಪಾಯಿ ಕಲೆಕ್ಷನ್

ಕಾಲಿವುಡ್ ನಟ ಸೂರ್ಯ ಮತ್ತು ಬಹುಭಾಷಾ ನಟಿ ತ್ರಿಷಾ ಅಭಿನಯದ ‘ಕರುಪ್ಪು’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಮೇ 15ರಂದು ಬಿಡುಗಡೆಯಾದ ಈ ಚಿತ್ರ ಪ್ರೇಕ್ಷಕರ ಮನಗೆದ್ದಿದೆ. ಇದೀಗ ವಿಶ್ವಾದ್ಯಂತ ಬರೋಬ್ಬರಿ 300 ಕೋಟಿ ರೂಪಾಯಿ ಗಳಿಕೆ ಮಾಡುವ ಮೂಲಕ ದಾಖಲೆ ಬರೆದಿದೆ. ನಟ ಸೂರ್ಯ ಮತ್ತು ತ್ರಿಷಾ ಜೋಡಿಯ ಈ ಅದ್ಭುತ ಯಶಸ್ಸನ್ನು ಚಿತ್ರತಂಡ ಸಂಭ್ರಮಿಸಿದೆ.

ನಿರ್ಮಾಣ ಸಂಸ್ಥೆ ‘ಡ್ರೀಮ್ ವಾರಿಯರ್ ಪಿಕ್ಚರ್ಸ್’ ಈ ಕುರಿತು ಪೋಸ್ಟರ್ ಹಂಚಿಕೊಂಡಿದ್ದು, ‘ಬಾಕ್ಸ್ ಆಫೀಸ್‌ನಲ್ಲಿ ಸೂರ್ಯ ಅವರ ಬಿಗ್ಗೆಸ್ಟ್ ಬ್ಲಾಸ್ಟ್ ಕರುಪ್ಪು ವಿಶ್ವಾದ್ಯಂತ 300 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದ್ದು, ಮೆಗಾ ಬ್ಲಾಕ್‌ಬಸ್ಟರ್ ಆಗಿ ಹೊರಹೊಮ್ಮಿದೆ’ ಎಂದು ಬರೆದುಕೊಂಡಿದೆ. ಭಾರತದಲ್ಲೇ ಈ ಸಿನಿಮಾ ಬರೋಬ್ಬರಿ 194.55 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ. ನೆಟ್ ಕಲೆಕ್ಷನ್ 168.15 ಕೋಟಿ ರೂ. ಆಗಿದೆ.

‘ಕರುಪ್ಪು’ ಸಿನಿಮಾ ಸೂರ್ಯ ಮತ್ತು ತ್ರಿಷಾ ಇಬ್ಬರ ಕೆರಿಯರ್‌ನಲ್ಲೂ ದೊಡ್ಡ ಮೈಲಿಗಲ್ಲಾಗಿದೆ. ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರವನ್ನು ಪ್ರೇಕ್ಷಕರು ಮುಗಿಬಿದ್ದು ನೋಡುತ್ತಿದ್ದು, ಇಬ್ಬರ ನಟನೆಗೆ ಮೆಚ್ಚುಗೆ ಸಿಗುತ್ತಿದೆ. ಆರ್. ಜೆ. ಬಾಲಾಜಿ ನಿರ್ದೇಶನದ ಈ ಚಿತ್ರಕ್ಕೆ ಸಾಯಿ ಅಭ್ಯಂಕರ್ ಸಂಗೀತ ನೀಡಿದ್ದು, ಜಿ. ಕೆ. ವಿಷ್ಣು ಅವರ ಛಾಯಾಗ್ರಹಣವಿದೆ. ಸೂರ್ಯ ಮತ್ತು ತ್ರಿಷಾ ಜೊತೆಗೆ ಇಂದ್ರನ್ಸ್ ಹಾಗೂ ಅನಘಾ ಮಾಯಾ ರವಿ ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದಾರೆ.

‘ಕರುಪ್ಪು 2’ ಸೀಕ್ವೆಲ್ ಬಗ್ಗೆ ನಿರ್ದೇಶಕರ ಪ್ಲಾನ್!

ಚಿತ್ರದ ಭರ್ಜರಿ ಗೆಲುವಿನ ಬೆನ್ನಲ್ಲೇ ನಿರ್ದೇಶಕ ಆರ್. ಜೆ. ಬಾಲಾಜಿ ಸೀಕ್ವೆಲ್ ಮಾಡುವ ಆಲೋಚನೆಯನ್ನು ಹಂಚಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ‘ಒಂದು ವೇಳೆ ಕರುಪ್ಪು ಚಿತ್ರಕ್ಕೆ ಸೀಕ್ವೆಲ್ ಸಾಧ್ಯವಾದರೆ, ಈ ಬಾರಿ ದೇವರು ಮತ್ತು ರಾಜಕೀಯ ನಡುವಿನ ಸಂಘರ್ಷವನ್ನು ತೋರಿಸಲು ಬಯಸುತ್ತೇನೆ. ನನ್ನ ಹಿಂದಿನ ಮೂಕುದಿ ಅಮ್ಮನ್ ಸಿನಿಮಾ ದೇವರು ಮತ್ತು ನಕಲಿ ಸ್ವಾಮೀಜಿ ನಡುವಿನ ಕಥೆಯಾಗಿತ್ತು. ಈಗಿನ ಕರುಪ್ಪು ಸಿನಿಮಾ ದೇವರು ಮತ್ತು ನ್ಯಾಯಾಂಗ ನಡುವಿನ ಹೋರಾಟವಾಗಿದೆ. ಮುಂದಿನ ಚಿತ್ರದಲ್ಲಿ ರಾಜಕೀಯವನ್ನು ತರಲಿದ್ದೇನೆ’ ಎಂದಿದ್ದಾರೆ ಅವರು.

ಇದನ್ನೂ ಓದಿ: ಇಳಯರಾಜಾ ಬಗ್ಗೆ ವ್ಯಂಗ್ಯ: ಕ್ಷಮೆಯಾಚಿಸಿದ ‘ಕರುಪ್ಪು’ ಚಿತ್ರತಂಡ

ಆದರೆ ಈ ಕಥೆಯ ಮೇಲೆ ಕೆಲಸ ಮಾಡಲು ತಮಗೆ ಇನ್ನೂ ಸ್ವಲ್ಪ ಸಮಯ ಬೇಕು ಎಂದಿರುವ ಅವರು, ಪ್ರೇಕ್ಷಕರು ಮೊದಲ ಭಾಗವನ್ನು ಮರೆತ ನತರವೇ ಅತ್ಯುತ್ತಮವಾದ ಸೀಕ್ವೆಲ್ ಕೊಡುವ ಯೋಜನೆ ನನ್ನದು ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅಜ್ಮೀರ್ ಹತ್ಯಾಕಾಂಡದಲ್ಲಿ ಟ್ವಿಸ್ಟ್​: ವೆಬ್​ ಸೀರೀಸ್ ನೋಡಿ ನಾಲ್ವರನ್ನು ಕೊಂದ 17ರ ಬಾಲಕ, ಸಿಕ್ಕಿಬಿದ್ದಿದ್ದು ಹೀಗೆ

ಅಜ್ಮೀರ್, ಮೇ 30: ರಾಜಸ್ಥಾನದ ಅಜ್ಮೀರ್​ ಜಿಲ್ಲೆಯ ಮಾಜಿ ಸರಪಂಚ್ ರಾಮ್ ಸಿಂಗ್ ಚೌಧರಿ ಸೇರಿದಂತೆ ಒಂದೇ ಕುಟುಂಬದ ನಾಲ್ವರ ಸಜೀವದಹನ ಪ್ರಕರಣಕ್ಕೆ ಇದೀಗ ದೊಡ್ಡ ತಿರುವುದು ಸಿಕ್ಕಿದೆ. ಆರಂಭದಲ್ಲಿ ಇದೊಂದು ಕಾರು ಅಪಘಾತ(Accident) ಎನ್ನಲಾಗಿತ್ತು. ಆದರೆ, ಪೊಲೀಸರ ಹದ್ದಿನ ಕಣ್ಣಿನ ತನಿಖೆಯಿಂದಾಗಿ ಇದು ಅಪರಾಧ ಜಗತ್ತಿನ ವೆಬ್ ಸೀರೀಸ್ ನೋಡಿ, ಆಸ್ತಿಗಾಗಿ 17 ವರ್ಷದ ಮಗನೇ ರೂಪಿಸಿದ ಭೀಕರ ಕೊಲೆ ಎಂಬ ಆಘಾತಕಾರಿ ಸತ್ಯ ಬಯಲಾಗಿದೆ.

ಚಹಾ ಕುಡಿಯುವಾಗ ಸಿಕ್ಕಿಬಿದ್ದ ಹಂತಕ

ಘಟನೆಯ ನಂತರ ಇಡೀ ಕುಟುಂಬ ಕಣ್ಣೀರಿಡುತ್ತಿದ್ದರೆ, ರಾಮ್ ಸಿಂಗ್ ಅವರ 17 ವರ್ಷದ ಅಪ್ರಾಪ್ತ ಮಗ ಮಾತ್ರ ಶಾಂತನಾಗಿದ್ದ. ತನ್ನ ತಾಯಿ ಪಕ್ಕದಲ್ಲಿ ಕುಳಿತು ಆಕೆಯನ್ನು ಸಮಾಧಾನಪಡಿಸುತ್ತಾ, ಅತ್ಯಂತ ನಿರಾಳವಾಗಿ ಚಹಾ ಕುಡಿಯುತ್ತಿದ್ದ. ಸಾವಿನ ಮನೆಯಲ್ಲಿ ಬಾಲಕನ ಈ ಅಸಹಜ ನಡವಳಿಕೆಯೇ ಪೊಲೀಸರಿಗೆ ಮೊದಲ ಅನುಮಾನ ಮೂಡಿಸಿತು.

ಅಪಘಾತದ ಕಥೆ ಫೇಲ್ ಆಗಿದ್ದು ಹೇಗೆ?

ಕೊಲೆಯನ್ನು ಅಪಘಾತವೆಂದು ಬಿಂಬಿಸಲು ಶವಗಳನ್ನು ಸ್ಕಾರ್ಪಿಯೋ ಕಾರಿನಲ್ಲಿಟ್ಟು ಬೆಂಕಿ ಹಚ್ಚಲಾಗಿತ್ತು. ಆದರೆ ಪೊಲೀಸರು ಸೂಕ್ಷ್ಮವಾಗಿ ಗಮನಿಸಿದಾಗ ಎರಡು ಪ್ರಮುಖ ಸಾಕ್ಷ್ಯಗಳು ಸಿಕ್ಕಿವೆ.

ಖಾಲಿ ಇದ್ದ ಮುಂಭಾಗದ ಸೀಟು: ಕಾರು ಅಪಘಾತವಾಗಿದ್ದರೆ ಯಾರಾದರೂ ಒಬ್ಬರು ಡ್ರೈವಿಂಗ್ ಸೀಟಿನಲ್ಲಿ ಇರಬೇಕಿತ್ತು, ಆದರೆ ಎಲ್ಲಾ ನಾಲ್ಕು ಶವಗಳು ಹಿಂಬದಿಯ ಸೀಟಿನಲ್ಲಿದ್ದವು.

ಇರಿತದ ಗಾಯಗಳು: ಮೃತರಲ್ಲಿ ಒಬ್ಬರಾದ ಎರಡನೇ ಪತ್ನಿ ಸರ್ಗ್ಯಾನ್ ದೇಹದ ಮೇಲೆ ಚೂರಿಯಿಂದ ಇರಿದ ಗಾಯಗಳಿದ್ದವು. ಇದರಿಂದಾಗಿ ಪೊಲೀಸರು ತನಿಖೆಯ ದಿಕ್ಕನ್ನು ಬದಲಿಸಿದರು.

5 ತಿಂಗಳ ಕ್ರಿಮಿನಲ್ ಸ್ಕೆಚ್ ಮತ್ತು ವೆಬ್ ಸೀರೀಸ್ ಗೀಳು

ಪೊಲೀಸ್ ವಿಚಾರಣೆಯಲ್ಲಿ ಬಾಲಕ ತನ್ನ ತಪ್ಪು ಒಪ್ಪಿಕೊಂಡಿದ್ದಾನೆ. ತಂದೆ ರಾಮ್ ಸಿಂಗ್ ಎರಡನೇ ಮದುವೆಯಾಗಿದ್ದರಿಂದ ಆಸ್ತಿ ಕೈತಪ್ಪುವ ಭಯ ಮತ್ತು ಮೊದಲ ತಾಯಿಗೆ ನೀಡುತ್ತಿದ್ದ ಕಿರುಕುಳದಿಂದಾಗಿ ಬಾಲಕ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದ.

ಕಳೆದ 5 ತಿಂಗಳುಗಳಿಂದ ಆತ ಅಪರಾಧ ಆಧಾರಿತ ವೆಬ್ ಸರಣಿಗಳು (Crime Web Series) ಮತ್ತು ಆನ್‌ಲೈನ್ ಗೇಮ್‌ಗಳನ್ನು ನೋಡಿ, ಪೊಲೀಸರಿಂದ ಹೇಗೆ ತಪ್ಪಿಸಿಕೊಳ್ಳಬೇಕು ಹಾಗೂ ಸಾಕ್ಷ್ಯಗಳನ್ನು ಹೇಗೆ ನಾಶಪಡಿಸಬೇಕು ಎಂದು ಸ್ಕೆಚ್ ಹಾಕಿದ್ದ.

ಮತ್ತಷ್ಟು ಓದಿ: ಬೆಳಗಾವಿ: ರಾಯಬಾಗದಲ್ಲಿ ಭೀಕರ ರಸ್ತೆ ಅಪಘಾತ, ಗೂಡ್ಸ್ ಆಟೋ ಡಿಕ್ಕಿಯಾಗಿ ಒಂದೇ ಕುಟುಂಬದ ಮೂವರ ದುರ್ಮರಣ

ಘಟನೆಯ ರಾತ್ರಿ ನಡೆದಿದ್ದೇನು?

ಘಟನೆಯ ರಾತ್ರಿ ತಂದೆ ರಾಮ್ ಸಿಂಗ್ ಮತ್ತು ಎರಡನೇ ಪತ್ನಿ ಬಿಯರ್ ಕುಡಿದು ಮಲಗಿದ್ದರು. ಮುಂಜಾನೆ 4 ಗಂಟೆಗೆ ಮೊಬೈಲ್‌ನಲ್ಲಿ ಗೇಮ್ ಆಡುತ್ತಿದ್ದ ಬಾಲಕ, ತಂದೆಯ ಕೋಣೆಗೆ ನುಗ್ಗಿ ಅವರ ಕಿವಿಯ ಬಳಿ ಚಾಕುವಿನಿಂದ ಇರಿದು ಕೊಂದಿದ್ದಾನೆ.

ಆದರೆ ಈ ಗಲಾಟೆಯಿಂದ ಎರಡನೇ ಪತ್ನಿ ಸರ್ಗ್ಯಾನ್ ಎಚ್ಚರಗೊಂಡು ಕಿರುಚಾಡಿದ್ದಾಳೆ. ಆಗ ಬಾಲಕನಿಗೆ ಸಹಾಯ ಮಾಡಲು ಆತನ ತಾಯಿ (ಮೊದಲ ಪತ್ನಿ ಸುನೀತಾ) ಮತ್ತು ಸಹೋದರಿ ಕೂಡ ಕೋಣೆಗೆ ಬಂದಿದ್ದಾರೆ. ನಂತರ ಎಲ್ಲರೂ ಸೇರಿ ಎರಡನೇ ಪತ್ನಿ ಸರ್ಗ್ಯಾನ್, ತಾಯಿ ಪುಸಿ ದೇವಿ ಮತ್ತು ಬ್ಯಾಂಕ್ ವ್ಯವಹಾರ ನೋಡಿಕೊಳ್ಳುತ್ತಿದ್ದ ಸೊಸೆ ಮಹಿಮಾಳನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಬಳಿಕ ಸಾಕ್ಷ್ಯ ನಾಶಕ್ಕೆ ಕಾರಿನೊಳಗೆ ಹಾಕಿ ಬೆಂಕಿ ಹಚ್ಚಿದ್ದರು.

ವೆಬ್ ಸೀರೀಸ್ ನೋಡಿ ಪರ್ಫೆಕ್ಟ್ ಮರ್ಡರ್ ಮಾಡಲು ಹೊರಟಿದ್ದ ಅಪ್ರಾಪ್ತ ಬಾಲಕ ಹಾಗೂ ಆತನ ತಾಯಿಯ ನಾಟಕವನ್ನು ಅಜ್ಮೀರ್ ಪೊಲೀಸರು ಯಶಸ್ವಿಯಾಗಿ ಪತ್ತೆಹಚ್ಚಿದ್ದು, ಆರೋಪಿಗಳನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Horoscope Today: ಇಂದು ಈ ರಾಶಿಯವರಿಗೆ ಖರ್ಚು ಹೆಚ್ಚಾಗುವ ಸಾಧ್ಯತೆ

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮೇ 30, ಶನಿವಾರದ ದ್ವಾದಶ ರಾಶಿಗಳ ಫಲಾಫಲವನ್ನು ನೀಡಿದ್ದಾರೆ. ಈ ದಿನದಂದು ಪರಾಭವನಾಮ ಸಂವತ್ಸರ, ಉತ್ತರಾಯಣ, ಅಧಿಕ ಜೇಷ್ಠ ಮಾಸ, ಗ್ರೀಷ್ಮ ಋತು, ಶುಕ್ಲ ಪಕ್ಷ, ಚತುರ್ದಶಿ, ಶಿವಯೋಗ, ವಣಿಕ ಕರಣ, ವಿಶಾಖ ನಕ್ಷತ್ರ ಇಂದಿನ ಪ್ರಮುಖ ಪಂಚಾಂಗ ವಿವರಗಳಾಗಿವೆ. ಈ ದಿನದ ರಾಹುಕಾಲ ಬೆಳಗ್ಗೆ 9:00 ರಿಂದ 10:40 ರವರೆಗೆ ಇದ್ದು, ಸಂಕಲ್ಪ ಕಾಲ ಮಧ್ಯಾಹ್ನ 1:53 ರಿಂದ 3:29 ರವರೆಗೆ ಇರುತ್ತದೆ. ಇಂದು ರವಿ ವೃಷಭ ರಾಶಿಯಲ್ಲಿ ಹಾಗೂ ಚಂದ್ರ ತುಲಾ ರಾಶಿಯ ವಿಶಾಖ ನಕ್ಷತ್ರದಲ್ಲಿ ಸಂಚಾರ ಮಾಡುತ್ತಿದ್ದಾನೆ. ಇದು ಪ್ರತಿ ರಾಶಿಯವರ ಮೇಲೆ ವಿಭಿನ್ನವಾಗಿ ಪ್ರಭಾವ ಬೀರಲಿದೆ ಎಂದು ಗುರೂಜಿ ಹೇಳಿದ್ದಾರೆ.

 

 

Source link