All posts by nagaraj11081993

ಕರ್ನಾಟಕ ಹವಾಮಾನ ವರದಿ: ಕರಾವಳಿ ಸೇರಿದಂತೆ ರಾಜ್ಯದೆಲ್ಲೆಡೆ ಇಂದು ವರುಣಾರ್ಭಟ ಸಾಧ್ಯತೆ! 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​

ಕರ್ನಾಟಕ ಹವಾಮಾನ ವರದಿ: ಕರಾವಳಿ ಸೇರಿದಂತೆ ರಾಜ್ಯದೆಲ್ಲೆಡೆ ಇಂದು ವರುಣಾರ್ಭಟ ಸಾಧ್ಯತೆ! 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​

ಬೆಂಗಳೂರು, ಮಾರ್ಚ್​ 24: ನಿನ್ನೆ ಒಣಹವೆಯಿಂದ ಕೂಡಿದ್ದ ರಾಜ್ಯದ ಹವಾಮಾನ (Weather Forecast)ಇಂದು ಹಠಾತ್ತನೆ ಬದಲಾಗಿದೆ. ಕರಾವಳಿಯೂ ಸೇರಿದಂತೆ ರಾಜ್ಯದ ಹತ್ತಾರು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ, 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಸೂಚಿಸಿದೆ.

ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​

ಬೀದರ್, ಕಲಬುರ್ಗಿ, ವಿಜಯಪುರ, ಯಾದಗಿರಿ, ರಾಯಚೂರು, ಬಾಗಲಕೋಟೆ, ಬೆಳಗಾವಿ, ಬಳ್ಳಾರಿ, ಕೊಪ್ಪಳ, ಗದಗ, ಧಾರವಾಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್​

ಎಲ್ಲೆಲ್ಲಿ ಮಳೆಯಾಗುವ ಸಾಧ್ಯತೆ?

ಕರಾವಳಿಯ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ 30-40 ಕಿ.ಮೀ/ಸೆ ವೆಗದ ಗಾಳಿಯೊಂದಿಗೆ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ. ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲ್ಬುರ್ಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿಯೂ ವರುಣಾರ್ಭಟವಿರಲಿದ್ದು, ಉಳಿದೆಡೆ ಒಣ ಹವೆಯಿರಲಿದೆ.

ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ಮೈಸೂರು, ಚಾಮರಾಜನಗರ, ದಾವಣಗೆರೆ, ಬಳ್ಳಾರಿ, ವಿಜಯನಗರ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿಯೂ ಗುಡುಗು ಸಿಡಿಲು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ಹೇಳಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Colombia Plane Crash: ಕೊಲಂಬಿಯಾದಲ್ಲಿ ಸೇನಾ ವಿಮಾನ ಪತನ, 30ಕ್ಕೂ ಅಧಿಕ ಮಂದಿ ಸಾವು

ಕೊಲಂಬಿಯಾ, ಮಾರ್ಚ್​ 24: ಕೊಲಂಬಿಯಾದಲ್ಲಿ 124 ಜನರಿದ್ದ ವಾಯುಪಡೆಯ ವಿಮಾನ ಪತ್ನಗೊಂಡಿದ್ದು, 30ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ವಿಮಾನ ಸೋಮವಾರ ಟೇಕ್ ಆಫ್ ಆದ ನಂತರ ಪತನಗೊಂಡಿದ್ದು, 34 ಜನರು ಸಾವನ್ನಪ್ಪಿದ್ದಾರೆ, ಸುಮಾರು 20ಕ್ಕೂ ಅಧಿಕ ಮಂದಿ ಕಾಣೆಯಾಗಿದ್ದಾರೆ. ರಕ್ಷಣಾ ಮತ್ತು ಶೋಧ ಕಾರ್ಯಾಚರಣೆ ನಡೆಯುತ್ತಿದೆ.

ಕೊಲಂಬಿಯಾದ ವಾಯುಪಡೆಯ ಇತ್ತೀಚಿನ ಇತಿಹಾಸದಲ್ಲಿ ಅತ್ಯಂತ ಮಾರಕವಾದ ಅಪಘಾತ ಇದಾಗಿದೆ. ಈ ದುರಂತವು ಲಾಕ್‌ಹೀಡ್ ಮಾರ್ಟಿನ್ ನಿರ್ಮಿತ ಹರ್ಕ್ಯುಲಸ್ ಸಿ -130 ಸಾರಿಗೆ ವಿಮಾನವು ಪೆರುವಿನ ಗಡಿಯಲ್ಲಿರುವ ಪೋರ್ಟೊ ಲೆಗುಯಿಜಾಮೊದಿಂದ ಹಾರುತ್ತಿದ್ದಾಗ ಸಂಭವಿಸಿದೆ ಎಂದು ರಕ್ಷಣಾ ಸಚಿವ ಪೆಡ್ರೊ ಸ್ಯಾಂಚೆಜ್ ಎಕ್ಸ್‌ನಲ್ಲಿ ತಿಳಿಸಿದ್ದಾರೆ.

ವಿಮಾನವು ಮದ್ದುಗುಂಡುಗಳನ್ನು ಹೊತ್ತೊಯ್ಯುತ್ತಿತ್ತು, ವಿಮಾನವು ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ನೆಲಕ್ಕೆ ಅಪ್ಪಳಿಸಿ ನಂತರ ಅದು ಸ್ಫೋಟಗೊಂಡಿತು ಮತ್ತು ಪರಿಣಾಮವಾಗಿ, ವಿಮಾನವು ಬೆಂಕಿಗೆ ಆಹುತಿಯಾಯಿತು.

ವಿಮಾನ ಪತನ

ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ವೀಡಿಯೊಗಳು ವಿಮಾನ ಅಪಘಾತದ ಅವಶೇಷಗಳು ಇನ್ನೂ ಉರಿಯುತ್ತಿರುವುದನ್ನು ತೋರಿಸುತ್ತವೆ, ಆದರೆ ರಕ್ಷಣಾ ಕಾರ್ಯಕರ್ತರು ಬದುಕುಳಿದವರನ್ನು ಹುಡುಕಲು ಪ್ರಯತ್ನಿಸುತ್ತಿದ್ದಾರೆ. ಒಂದು ದೃಶ್ಯವು ದಟ್ಟವಾದ ಹುಲ್ಲು ಮತ್ತು ಕಾಡಿನಿಂದ ಆವೃತವಾದ ಅವಶೇಷಗಳಿಂದ ದಟ್ಟವಾದ ಹೊಗೆ ಏರುತ್ತಿರುವುದನ್ನು ತೋರಿಸಿದೆ.

ಮತ್ತೊಂದು ವೀಡಿಯೊವು ವಿಮಾನವು ಟೇಕ್ ಆಫ್ ಆದ ಕೆಲವೇ ಸೆಕೆಂಡುಗಳಲ್ಲಿ ನೆಲಕ್ಕೆ ಅಪ್ಪಳಿಸುವುದನ್ನು ಕಾಣಬಹುದು. ಪುಟುಮಾಯೊ ಇಲಾಖೆಯ ಗವರ್ನರ್ ಜಾನ್ ಗೇಬ್ರಿಯಲ್ ಮೋಲಿನಾ ಸ್ಥಳೀಯ ಸುದ್ದಿ ಸಂಸ್ಥೆಗೆ ತಿಳಿಸಿದ್ದು, 34 ಜನರು ಸಾವನ್ನಪ್ಪಿದ್ದಾರೆ, 70 ಜನರು ಗಾಯಗೊಂಡಿದ್ದಾರೆ ಮತ್ತು 21 ಜನರು ಕಾಣೆಯಾಗಿದ್ದಾರೆ ಎಂದು ಹೇಳಲಾಗಿದೆ.

ಹಲವಾರು ಜನರು ಇನ್ನೂ ಕಾಣೆಯಾಗಿರುವುದರಿಂದ ಸಾವಿನ ಸಂಖ್ಯೆ ಬದಲಾಗಬಹುದು ಎಂದು ಅವರು ಹೇಳಿದ್ದಾರೆ. ಸೋಮವಾರ ಸಂಜೆ ವೇಳೆಗೆ ಸಾವಿನ ಸಂಖ್ಯೆ ದ್ವಿಗುಣಗೊಂಡು 66ಕ್ಕೆ ತಲುಪಿತ್ತು ಎಂದು ರಾಯಿಟರ್ಸ್​ ವರದಿ ಮಾಡಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಆಮಿರ್ ಖಾನ್ ಪುತ್ರನ ಬಳಿ ಇಲ್ಲ ಕಾರು, ಬಸ್​ ಅಲ್ಲೇ ಓಡಾಡ್ತಾನೆ ಈ ನಟ

ಆಮಿರ್ ಖಾನ್ ಅವರು ಬಾಲಿವುಡ್​​ನ ಶ್ರೀಮಂತ ನಟರಲ್ಲಿ ಒಬ್ಬರು. ಅವರು ಬಾಲಿವುಡ್​​ನಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಅವರು ಸಿನಿಮಾ ಮಾಡುವುದರಲ್ಲಿ ಚ್ಯೂಸಿ ಆಗಿದ್ದಾರೆ. ಅವರು ಕುಟುಂಬಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಅವರು ಈಗ ತಮ್ಮ ಮಗ ಜುನೈದ್ ಖಾನ್ ಬಗ್ಗೆ ಮಾತನಾಡಿದ್ದಾರೆ. ಮಗ ಯಾವ ರೀತಿ ಎಂದು ಹೇಳಿದ್ದಾರೆ. ಕಾರಿನಲ್ಲಿ ಓಡಾಡುವುದೇ ಇಲ್ಲ ಎಂದು ಹೇಳಿದ್ದಾರೆ. ಅವರು ಸಾರ್ವಜನಿಕ ಸಾರಿಗೆಯನ್ನು ಬಳಸುತ್ತಾರಂತೆ.

‘ನನ್ನ ಮೂವರು ಮಕ್ಕಳೂ ತುಂಬಾ ಸೂಕ್ಷ್ಮ. ಕೊವಿಡ್ ಸಮಯದಲ್ಲಿ ರೀನಾಳ ಹೆತ್ತವರಿಬ್ಬರಿಗೂ ವೈರಸ್ ತಗುಲಿತು. ಆಗ ಜುನೈದ್ ತಕ್ಷಣ ಅವರೊಂದಿಗೆ ವಾಸಿಸಲು ಮುಂದಾದ. ಎರಡು ವಾರಗಳ ಕಾಲ ಅವನು ಚೆನ್ನಾಗಿರುವಂತೆ ನೋಡಿಕೊಂಡ. ಇದು ಜುನೈದ್ ಖಾನ್’ ಎಂದು ಹೇಳಿದ್ದಾರೆ ಆಮಿರ್ ಖಾನ್.

‘ಜುನೈದ್ ಖಾನ್​​ ಬಳಿ ಕಾರು ತೆಗೆದುಕೊಳ್ಳುವಂತೆ ನಾನು ಹೇಳಿ ಹೇಳಿ ಸಾಕಾಗಿದೆ. ಅವನು ಈವರೆಗೆ ಕಾರು ಖರೀದಿಸಿಲ್ಲ. ಎರಡು ಸಿನಿಮಾ ಮಾಡಿದ್ದಾನೆ. ಅವನು ಓಲಾದಲ್ಲಿ ಹೋಗುತ್ತಾನೆ ಅಥವಾ ಬಸ್​​ನಲ್ಲಿ ಓಡಾಡುತ್ತಾನೆ’ ಎಂದು ಆಮಿರ್ ಖಾನ್ ಅವರು ಎಮ್ಮೆಯಿಂದ ಹೇಳಿದ್ದಾರೆ.

ಇದನ್ನೂ ಓದಿ: ಮಾಜಿ ಪತ್ನಿ, ಹೊಸ ಪ್ರೇಯಸಿ ಜತೆ ಆಮಿರ್ ಖಾನ್ ಹುಟ್ಟುಹಬ್ಬ 

‘ಅವನು ಒಮ್ಮೆ ಕೇರಳದಲ್ಲಿದ್ದ.ಬೆಂಗಳೂರಿನಲ್ಲಿ ಸ್ನೇಹಿತನ ಮದುವೆಗೆ ಹಾಜರಾಗಬೇಕಾಯಿತು. ನಾನು ಅವನ ಬಳಿ ಯಾವ ವಿಮಾನದಲ್ಲಿ ಪ್ರಯಾಣಿಸುತ್ತಿದ್ದೀರಿ ಎಂದು ಕೇಳಿದೆ. ಅವನು ರಾಜ್ಯ ಸಾರಿಗೆ ಬಸ್‌ನಲ್ಲಿ ಪ್ರಯಾಣಿಸುತ್ತಿರುವುದಾಗಿ ಹೇಳಿದ. ಅವನು ಅಸಾಮಾನ್ಯ ರೀತಿಯ ವ್ಯಕ್ತಿ. ಆದರೆ ಅವರನ್ನು ಎಂದಿಗೂ ಭೌತಿಕವಾದಿಗಳಾಗಿ ಬೆಳೆಸಲಾಗಿಲ್ಲ. ನನಗೆ ಹಣದ ಬಗ್ಗೆ ಹೆಚ್ಚು ಕಾಳಜಿ ಇಲ್ಲ’ ಎಂದಿದ್ದಾನೆ ಆಮಿರ್ ಖಾನ್. ಆಮಿರ್ ಖಾನ್ ಅವರು ಸದ್ಯ ಸಿನಿಮಾಗಳಲ್ಲಿ ಹೆಚ್ಚು ಆ್ಯಕ್ಟೀವ್ ಆಗಿಲ್ಲ. ಅವರು ನಟನೆಯಲ್ಲಿ ಹೆಚ್ಚು ಬ್ಯುಸಿ ಆಗಿಲ್ಲ. ಈಗಾಗಲೇ ಎರಡು ಬಾರಿ ವಿಚ್ಛೇದನ ಪಡೆದಿರೋ ಅವರು ಗೌರಿ ಹೆಸರಿನ ಯುವತಿ ಜೊತೆ ಓಡಾಡುತ್ತಿದ್ದಾರೆ. ಅವರು ಸದ್ಯಕ್ಕೆ ಮದುವೆ ಆಗುವ ಆಲೋಚನೆ ಹೊಂದಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Horoscope Today 24th​​ March​: ಇಂದು ಈ ರಾಶಿಯವರಿಗೆ ದೂರದ ಪ್ರಯಾಣ ಯೋಗ

ಟಿವಿ9​​ ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮಾರ್ಚ್​ 24, ಮಂಗಳವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ಪರಾಭವ ನಾಮ ಸಂವತ್ಸರ, ಉತ್ತರಾಯಣ, ಚೈತ್ರ ಮಾಸ, ವಸಂತ ಋತು, ಶುಕ್ಲ ಪಕ್ಷ, ಷಷ್ಠಿ ತಿಥಿಯಿದ್ದು, ರಾಹುಕಾಲ 3 ಗಂಟೆ 27 ನಿಮಿಷದಿಂದ 4 ಗಂಟೆ 58 ನಿಮಿಷದ ತನಕ ರಾಹುಕಾಲವಿರುತ್ತದೆ ಎಂದು ಗುರೂಜಿ ಹೇಳಿದ್ದಾರೆ.

ಇಂದು ಸ್ಕಂದ ದವನಾರ್ಪಣೆಯ ದಿನ. ಇಂದು ರವಿ ಮೀನ ರಾಶಿಯಲ್ಲಿ, ಚಂದ್ರ ವೃಷಭ ರಾಶಿಯ ರೋಹಿಣಿ ನಕ್ಷತ್ರದಲ್ಲಿ, ಅದರ ಜೊತೆಗೆ ಷಷ್ಠಿ ಬೇರೆ, ಮಂಗಳವಾರ ಬಂದಿರತಕ್ಕಂತ ಷಷ್ಠಿ ವಿಶೇಷವಾದ ಷಷ್ಠಿ ಕೂಡ ಇದಾಗಿರುತ್ತದೆ. ಹಾಗೆ ಇಂದಿನ ದಿನ ರೋಹಿಣಿ ನಕ್ಷತ್ರದಲ್ಲಿ ಚಂದ್ರನ ಸಂಚಾರದ ಫಲಾಫಲ ನೋಡಿದಾಗ, ಆರ್ಥಿಕ ವಿಷಯಗಳಲ್ಲಿ ಆತುರದ ನಿರ್ಧಾರಗಳು ಸ್ವಲ್ಪ ಹೆಚ್ಚುಕಡಿಮೆ ಆಗಬಹುದು. ಸ್ವಲ್ಪ ಹುಷಾರಾಗಿರಬೇಕಾಗಿರುತ್ತದೆ ಎಂದು ಬಸವರಜ ಗುರೂಜಿ ಹೇಳಿದ್ದಾರೆ.

 

 

 

Source link

‘ಅಮೃತಧಾರೆ’ ಧಾರಾವಾಹಿ: ಮಲ್ಲಿ ವಿವಾಹ ನಡೆಯೋದೆ ಅನುಮಾನ?

‘ಅಮೃತಧಾರೆ’ (Amruthadhare) ಧಾರಾವಾಹಿಯಲ್ಲಿ ಈಗ ಒಂದು ಪ್ರಮುಖ ಬೆಳವಣಿಗೆ ನಡೆದಿದೆ ಎಂದೇ ಹೇಳಬಹುದು. ಏಕೆಂದರೆ, ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿ ಮದುವೆ ಸಂಭ್ರಮ ನಡೆಯುತ್ತಿದೆ. ಈ ಸಂಭ್ರಮಕ್ಕೆ ಬ್ರೇಕ್ ಬೀಳುವ ಸಮಯ ಕೂಡ ಬಂದಿದೆ. ಹೌದು, ಅಮೃತಧಾರೆ ಧಾರಾವಾಹಿಯಲ್ಲಿ ಈಗ ದೊಡ್ಡ ಟ್ವಿಸ್ಟ್ ಇದೆ. ಜಯದೇವ್ ಕಳ್ಳಾಟವು ಬಯಲಾಗುವ ಸಮಯವು ಸಮೀಪಿಸಿದೆ .

‘ಅಮೃತಧಾರೆ’ ಧಾರಾವಾಹಿಯ ಜಯದೇವ್ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಆತ ತುಂಬಾನೇ ಖಿಲಾಡಿ. ಆತ ನಿಜವಾಗಿಯೂ ಕೆಟ್ಟವನು ಮತ್ತು ಈ ವಿಷಯ ಎಲ್ಲರಿಗೂ ತಿಳಿದಿದೆ. ಆದರೆ, ಯಾರಿಂದಲೂ ಆತನನ್ನು ಹಾಗೂ ಆತ ಮಾಡುವ ಕೆಟ್ಟ ಕೆಲಸವನ್ನು ತಡೆಯಲು ಸಾಧ್ಯವಾಗಲೇ ಇಲ್ಲ. ಹೀಗಿರುವಾಗಲೇ ಜಯದೇವ್ ಒಂದು ದೊಡ್ಡ ನಿರ್ಧಾರ ಮಾಡಿದ್ದಾನೆ.

ಆತ ಮಲ್ಲಿ ವಿರುದ್ಧ ಸಂಚು ರೂಪಿಸುತ್ತಿದ್ದಾನೆ. ಮೊದಲು ತನ್ನ ಬಲಗೈ ಬಂಟ ಸುನಿಯನ್ನು ಅವನ ಹಿಂದೆ ಬಿಟ್ಟಿದ್ದಾನೆ. ಇದಕ್ಕೆ ಸರಿಯಾದ ಸಮಯಕ್ಕೆ ಆತ ಕಾಯುತ್ತಿದ್ದ. ಈಗ ಅಂತಹ ಸಮಯ ಬಂದಿದೆ. ಹೌದು, ಸುನಿಯನ್ನು ಮಲ್ಲಿ ಹಿಂದೆ ಬಿಟ್ಟಿರೋ ಜಯದೇವ್ ಮಜಾ ತೆಗೆದುಕೊಳ್ಳುತ್ತಿದ್ದಾನೆ. ಮುಂದೊಂದು ದಿನ ಎಲ್ಲವನ್ನೂ ಬದಲಿಸಬೇಕು ಎಂಬುದು ಆತನ ಉದ್ದೇಶ. ಮದುವೆ ಆಗದಂತೆ ಕೊನೆ ಕ್ಷಣದಲ್ಲಿ ನಿಲ್ಲಿಸಬೇಕು ಎಂಬುದು ಆತನ ಉದ್​ದೇಶ ಆಗಿತ್ತು. ಆದರೆ, ಭೂಮಿಕಾಳೇ ಮದುವೆ ನಿಲ್ಲಿಸುತ್ತೇನೆ ಎಂದು ಹೊರಟಿದ್ದಾಳೆ.

ಇದನ್ನೂ ಓದಿ:  ‘ಅಮೃತಧಾರೆ’:ಕಳೆದುಕೊಂಡಿದ್ದಕ್ಕಿಂತ 10 ಪಟ್ಟು ಹೆಚ್ಚು ಗಳಿಸ್ತೀನಿ; ಗೌತಮ್ ಚಾಲೆಂಜ್

ಆದರೆ, ಈ ಪ್ಲ್ಯಾನ್ ಫ್ಲಾಪ್ ಆಗುವ ಸೂಚನೆ ಸಿಕ್ಕಿದೆ. ಸುನಿ ಯಾರು ಹಾಗೂ ಆತನ ಹಿನ್ನೆಲೆ ಏನು ಎಂಬುದು ಭೂಮಿಕಾಗೆ ಗೊತ್ತಾಗಿ ಹೋಗಿದೆ. ಈ ಕಾರಣಕ್ಕೆ ಯಾವುದೇ ಕಾರಣಕ್ಕೂ ಇಬ್ಬರ ಮದುವೆ ನಡೆಯದಂತೆ ನೋಡಿಕೊಳ್ಳುವ ಪ್ಲ್ಯಾನ್ ಅಲ್ಲಿದ್ದಾಳೆ. ಇದರಿಂದ ಆತನಿಗೆ ಸಾಕಷ್ಟು ಹಿನ್ನಡೆ ಆಗುವ ಎಲ್ಲಾ ಲಕ್ಷಣ ಇದೆ. ಒಂದೊಮ್ಮೆ ಈ ಮದುವೆ ನಡೆದು ಹೋದರೆ ಜಯದೇವ್​​ಗೆ ದೊಡ್ಡ ಹಿನ್ನಡೆ ಆಗೋದು ಪಕ್ಕಾ ಎನ್ನಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

 

Source link

Video: ಪ್ರಪೋಸ್ ಮಾಡಿದ ಯುವಕನ ಮೇಲೆ ಟೀ ಟ್ರೇ ಎಸೆದ ಯುವತಿ, ಆಮೇಲೇನಾಯ್ತು ನೋಡಿ

ಹರಿಯಾಣ, ಮಾರ್ಚ್​ 24: ಪ್ರಪೋಸ್ ಮಾಡಲು ದಿನ, ಗಳಿಗೆಗಳೆಲ್ಲವನ್ನು ಯಾರೂ ನೋಡುವುದಿಲ್ಲ, ಮನಸ್ಸಿನಲ್ಲಿ ಅವರೇ ಸಂಗಾತಿಯಾಗಬೇಕೆಂದು ಬಯಸಿದರೆ ಅವರು ಇಷ್ಟ ಪಡುತ್ತಾರೋ ಇಲ್ಲವೋ ಗೊತ್ತಿಲ್ಲ ಪ್ರಪೋಸ್ ಮಾಡಿಬಿಡೋದೆ. ಕೆಲವೊಮ್ಮೆ ಅದು ಅಕ್ಸೆಪ್ಟ್ ಆಗುತ್ತೆ, ಕೆಲವೊಮ್ಮೆ ರಿಜೆಕ್ಟ್​ ಆಗುತ್ತೆ. ಹಾಗೆಯೇ ಹರಿಯಾಣದಲ್ಲಿ ರಸ್ತೆಯಲ್ಲಿ ಎಲ್ಲರೆದುರು ಯುವಕ ಯುವತಿಯೊಬ್ಬಳಿಗೆ ಪ್ರಪೋಸ್ ಮಾಡಿದ್ದಾನೆ, ಆಗ ಆಕೆ ಅಲ್ಲೇ ಇರುವ ಟೀ ಟ್ರೇಯನ್ನು ಆತನ ಮೈಗೆ ಎಸೆದಿದ್ದಾಳೆ. ಕೂಡಲೇ ಕೋಪಗೊಂಡ ವ್ಯಕ್ತಿ ಅಲ್ಲೇ ಶುಚಿಗೊಳಿಸಲು ಇಟ್ಟಿದ ಮಾಪ್​ನ ಕೋಲಿನಿಂದ ಆಕೆಗೆ ಥಳಿಸಿರುವ ವಿಡಿಯೋ ವೈರಲ್ ಆಗಿದೆ.

 

ವಿಡಿಯೋ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Daily Devotional: ಜಾತಕದ ಪ್ರಕಾರ ಸಿಹಿ ಹಾಗೂ ಖಾರ ಹೇಗೆ ಸೇವಿಸಬೇಕು?

ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಜಾತಕದ ಪ್ರಕಾರ ಸಿಹಿ ಹಾಗೂ ಖಾರ ಹೇಗೆ ಸೇವಿಸಬೇಕು ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ನಮ್ಮ ದೇಹಕ್ಕೆ ಆಹಾರ ಅತ್ಯಗತ್ಯ. ಆದರೆ ಕೆಲವರು ಸಿಹಿ ಇಷ್ಟಪಟ್ಟರೆ, ಮತ್ತೆ ಕೆಲವರು ಖಾರವನ್ನು ಹೆಚ್ಚು ಸೇವಿಸಲು ಬಯಸುತ್ತಾರೆ. ಈ ಆಹಾರದ ಆಯ್ಕೆಯು ಕೇವಲ ರುಚಿಯಲ್ಲ, ಬದಲಿಗೆ ಜಾತಕದಲ್ಲಿರುವ ಗ್ರಹಗಳ ಸ್ಥಿತಿಗಳ ಮೇಲೆ ಅವಲಂಬಿತವಾಗಿರುತ್ತದೆ ಎಂದು ಆಧ್ಯಾತ್ಮಿಕವಾಗಿ ಹೇಳಲಾಗುತ್ತದೆ. ಸಿಹಿ ಪ್ರಿಯರಾಗಲು ಗುರು ಮತ್ತು ಶುಕ್ರ ಗ್ರಹಗಳ ಪ್ರಭಾವ ಮುಖ್ಯವಾಗಿರುತ್ತದೆ. ಇಂತಹ ವ್ಯಕ್ತಿಗಳು ಸಾಮಾನ್ಯವಾಗಿ ಸಾತ್ವಿಕ ಸ್ವಭಾವದವರು, ತಾಳ್ಮೆಯುಳ್ಳವರು, ನಿಧಾನವಾಗಿ ಮಾತನಾಡುವವರು ಮತ್ತು ಸಂಬಂಧಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವವರು ಆಗಿರುತ್ತಾರೆ.

ಇದೇ ರೀತಿ, ಖಾರವನ್ನು ಹೆಚ್ಚು ಇಷ್ಟಪಡುವವರ ಮೇಲೆ ಕುಜ ಮತ್ತು ರವಿ ಗ್ರಹಗಳ ಅನುಗ್ರಹ ಇರುತ್ತದೆ. ಇವರು ಶಕ್ತಿವಂತರು, ಧೈರ್ಯಶಾಲಿಗಳು ಮತ್ತು ಯಾವುದೇ ಸವಾಲುಗಳನ್ನು ಎದುರಿಸಲು ಸಿದ್ಧರಿರುತ್ತಾರೆ. ಆದರೆ ಕೆಲವೊಮ್ಮೆ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆಗಳಿರುತ್ತವೆ ಎಂದು ಡಾ.ಬಸವರಾಜ ಗುರೂಜಿ ಹೇಳಿದ್ದಾರೆ.

Source link

ಐಪಿಎಲ್ 2026ರಲ್ಲಿ ನಿವೃತ್ತಿ ಘೋಷಿಸಲಿದ್ದಾರೆ ಈ ಐದು ಆಟಗಾರರು

2026ರ ಐಪಿಎಲ್ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಬಾರಿ ಬೆಂಗಳೂರಿನಲ್ಲಿ ಮೊದಲ ಪಂದ್ಯ ನಡೆಯುತ್ತಿರುವುದು ವಿಶೇಷ. ಹಾಲಿ ಚಾಂಪಿಯನ್ಸ್ ಆರ್​​ಸಿಬಿ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಈ ಬಾರಿ ಎಲ್ಲಾ ತಂಡಗಳಲ್ಲಿ ಕೆಲವು ಬದಲಾವಣೆಗಳನ್ನು ಕೂಡ ಮಾಡಲಾಗಿದೆ. ಪ್ರಮುಖ ಆಟಗಾರರು ಬೇರೆ ಬೇರೆ ತಂಡ ಸೇರಿದ್ದಾರೆ. ಈ ಮಧ್ಯೆ ಈ ಬಾರಿಯ ಐಪಿಎಲ್ ಬಳಿಕ ಐದು ಆಟಗಾರರು ಐಪಿಎಲ್​​ನಿಂದ ಹೊರ ಹೋಗಲಿದ್ದಾರೆ ಎನ್ನುವ ಮಾತಿದೆ.

ಎಂಎಸ್ ಧೋನಿ

ಐಪಿಎಲ್ ಇತಿಹಾಸದಲ್ಲಿ ಹಲವು ದಾಖಲೆ ಬರೆದ ಎಂಎಸ್​ ಧೋನಿ ಈಗ 45ನೇ ವಯಸ್ಸಿಗೆ ಕಾಲಿಡುತ್ತಿದ್ದಾರೆ. ಅವರು ಈಗ ಆಡುತ್ತಿರುವುದು 19ನೇ ಸೀಸನ್. ಇಲ್ಲಿಯವರೆಗೆ ಟೂರ್ನಿಯಲ್ಲಿ ಅತಿ ಹೆಚ್ಚು ಪಂದ್ಯಗಳನ್ನು (278) ಆಡಿರುವುದು ಧೋನಿ ಹೆಚ್ಚುಗಾರಿಕೆ. ಅವರ ನಿವೃತ್ತಿ ಬಗ್ಗೆ ಆಗಾಗ ಸುದ್ದಿಗಳು ಹರಿದಾಡಿಯೇ ಇತ್ತು. ಆದರೆ, ಅದು ನಿಜವಾಗಿಲ್ಲ. ಇದು ಅವರ ಕೊನೆಯ ಸೀಸನ್ ಆಗಬಹುದು. ಈಗಾಗಲೇ ತಮ್ಮ ಎನರ್ಜಿ ಕಡಿಮೆ ಆಗುತ್ತಿರುವುದಾಗಿ ಧೋನಿ ಹೇಳಿಕೆ ನೀಡಿದ್ದಾರೆ. ರುತುರಾಜ್ ಗಾಯಕ್ವಾಡ್ ನಾಯಕನಾಗಿದ್ದು, ಸಂಜು ಸ್ಯಾಮ್ಸನ್ ಕೂಡ ಸಿಎಸ್​ಕೆ ಆಗಮಿಸಿದ್ದಾರೆ.

ಮಿಚೆಲ್ ಸ್ಟಾರ್ಕ್

ಆಸ್ಟ್ರೇಲಿಯಾದ ಲೆಜೆಂಡರಿ ಬೌಲರ್ ಎನಿಸಿಕೊಂಡಿರೋ ಮಿಚೆಲ್ ಸ್ಟಾರ್ಕ್ ಎಷ್ಟೋ ಪಂದ್ಯಗಳ ದಿಕ್ಕನ್ನೇ ಬದಲಿಸಿದ್ದಾರೆ. ಈಗಾಗಲೇ ಅಂತರರಾಷ್ಟ್ರೀಯ ಟಿ20 ಪಂದ್ಯಗಳಿಂದ ನಿವೃತ್ತರಾಗಿದ್ದಾರೆ. ಅವರು ಮುಂಬರುವ ವಿಶ್ವಕಪ್ ಪರಿಗಣಿಸಿ, ಅವರು ಈ ವರ್ಷದ ಬಳಿಕ ಐಪಿಎಲ್​​​ನಿಂದ ಹೊರ ಹೋಗಬಹುದು. ಅವರು ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿದ್ದಾರೆ. ಅವರ ಆಗಮನಕ್ಕೆ ಇನ್ನೂ ಗ್ರೀನ್ ಸಿಗ್ನಲ್ ಸಿಗದ ಕಾರಣ ಆರಂಭದ ಕೆಲ ಪಂದ್ಯಗಳನ್ನು ಅವರು ಮಿಸ್ ಮಾಡಿಕೊಳ್ಳಬಹುದು.

ಇಶಾಂತ್ ಶರ್ಮಾ

ಭಾರತದ ಅನುಭವಿ ವೇಗಿ ಇಶಾಂತ್ ಶರ್ಮಾ ಅವರದ್ದು ಕೂಡ ಇದು ಕೊನೆಯ ಸೀಸನ್ ಎನ್ನಲಾಗುತ್ತಿದೆ. 37 ವರ್ಷದ ಇಶಾಂತ್ ಶರ್ಮಾ ಮೊದಲ ಸೀಸನ್‌ನಿಂದ ಐಪಿಎಲ್​ ಆಡುತ್ತಿದ್ದಾರೆ. ಅವರು ಗುಜರಾತ್ ಟೈಟನ್ಸ್​​ನಲ್ಲಿ ಇದ್ದು, ಅವರು ಐಪಿಎಲ್​ಗೆ ನಿವೃತ್ತಿ ಘೋಷಿಸೋ ಸಾಧ್ಯತೆ ಇದೆ.

ಇದನ್ನೂ ಓದಿ: 60 ವರ್ಷದವರೆಗೆ ಐಪಿಎಲ್ ಆಡಬೇಕು ಎಂದಿದ್ದಕ್ಕೆ ಧೋನಿ ಏನಂದ್ರು?

ಮನೀಶ್ ಪಾಂಡೆ

ಐಪಿಎಲ್‌ನಲ್ಲಿ ಶತಕ ಗಳಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಮನೀಶ್ ಪಾಂಡೆ. ಕಳೆದ ನಾಲ್ಕೈದು ವರ್ಷಗಳಲ್ಲಿ ಅವರು ಸಾಕಷ್ಟು ಏರಿಳಿತ ಕಂಡಿದ್ದಾರೆ. ಕಳೆದ ಐದು ಸೀಸನ್​​ಗಳಿಂದ ಅವರು ಕಣಕ್ಕೆ ಇಳಿದಿದ್ದು ಕೇವಲ 28 ಪಂದ್ಯಗಳಲ್ಲಿ ಮಾತ್ರ. ಐದು ಸೀಸನ್​​ಗಳಲ್ಲಿ ನಾಲ್ಕು ವಿಭಿನ್ನ ತಂಡಗಳನ್ನು ಪ್ರತಿನಿಧಿಸಿದ್ದಾರೆ. 36 ವರ್ಷದ ಮನೀಶ್ ಪಾಂಡೆ ಕೆಕೆಆರ್‌ನಲ್ಲಿದ್ದಾರೆ. ಅವರು ನಿವೃತ್ತಿ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಸುನಿಲ್ ನರೈನ್

ಮನೀಶ್ ಪಾಂಡೆ ಜೊತೆಗೆ, ಕೆಕೆಆರ್‌ನ ಅನುಭವಿ ಆಲ್‌ರೌಂಡರ್ ಸುನಿಲ್ ನರೈನ್‌ಗೆ ಇದು ಕೊನೆಯ ಸೀಸನ್ ಆಗಬಹುದು ಎನ್ನಲಾಗುತ್ತಿದೆ. ಅವರು ಈ ಬಾರಿ ಐಪಿಲ್​​ನಿಂದ ನಿವೃತ್ತಿ ಘೋಷಿಸುತ್ತಾರಾ ಎನ್ನುವ ಕುತೂಹಲ ಮೂಡಿದೆ. ಈ ಸೀಸನ್‌ನಲ್ಲಿ ಅವರ ಬ್ಯಾಟಿಂಗ್ ಮತ್ತು ಬಾಲ್ ಎರಡರಲ್ಲೂ ಪ್ರದರ್ಶನ ನೀಡದಿದ್ದರೆ, ಇದು ಅವರ ಕೊನೆಯ ಸೀಸನ್ ಆಗಬಹುದು.

ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

ಆ ಮೂಕ ಪ್ರಾಣಿ ನಿಮಗೇನು ಮಾಡಿತ್ತು? ಕೋತಿಯ ಕುತ್ತಿಗೆಗೆ ಬಾಣ ಬಿಟ್ಟ ದುಷ್ಟರು

ಥಾಣೆ, ಮಾರ್ಚ್​ 24: ಕೋತಿ(Monkey)ಯ ಕುತ್ತಿಗೆಗೆ ಯಾರೋ ದುಷ್ಟರು ಬಾಣಗಳಿಂದ ದಾಳಿ ನಡೆಸಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ. ಆ ಮೂಕ ಪ್ರಾಣಿ ಅವರಿಗೇನು ಮಾಡಿತ್ತು ಎನ್ನುವ ಪ್ರಶ್ನೆ ಉದ್ಭವವಾಗಿದೆ. ನಾಲ್ಕು ದಿನಗಳಲ್ಲಿ ಇದು ಎರಡನೇ ಘಟನೆಯಾಗಿದೆ.ಮಂಗನ ಕುತ್ತಿಗೆ ಮತ್ತು ದವಡೆಯಲ್ಲಿ ಬಾಣ ಪತ್ತೆಯಾಗಿದೆ. ಈ ಪ್ರಕರಣಗಳು ಪ್ರಾಣಿ ಕಲ್ಯಾಣ ಗುಂಪುಗಳು ಮತ್ತು ವನ್ಯಜೀವಿ ಅಧಿಕಾರಿಗಳಲ್ಲಿ ಕಳವಳವನ್ನು ಹುಟ್ಟುಹಾಕಿವೆ. ಮೂಕ ಪ್ರಾಣಿಗಳ ಬಗ್ಗೆ ನಮಗೆ ಕರುಣೆ ಇರಬೇಕು ಎಂದು ಹೇಳಿದ್ದಾರೆ.

ಬೇಟೆಗಾರನ ಕಾರಣದಿಂದಾಗಿ, ಕಾಡಿನಲ್ಲಿ ಗಸ್ತು ಹೆಚ್ಚಿಸಲು ನಿರ್ಧರಿಸಲಾಗಿದೆ. ಹಸುಗಳು ಮತ್ತು ಮಂಗಗಳನ್ನು ಧಾರ್ಮಿಕ ದೃಷ್ಟಿಕೋನದಿಂದ ಬಹಳ ಗೌರವದಿಂದ ಕಾಣಲಾಗುತ್ತದೆ.ಗಾಯಗೊಂಡ ಕೋತಿಯನ್ನು ಮೊದಲು ಸ್ಥಳೀಯ ನಿವಾಸಿಗಳು ನೋಡಿದ್ದರು.ಯೌರ್ ವಲಯ ಅರಣ್ಯ ಇಲಾಖೆಯ ಅಧಿಕಾರಿಗಳ ಸಹಾಯದಿಂದ ರಕ್ಷಣಾ ತಂಡವು ಗಾಯಗೊಂಡ ಕೋತಿಯನ್ನು 10-15 ನಿಮಿಷಗಳಲ್ಲಿ ಪಶುವೈದ್ಯಕೀಯ ಆಸ್ಪತ್ರೆಗೆ ಸಾಗಿಸಿತು.

ಕೋತಿ ಪ್ರಸ್ತುತ ಆಸ್ಪತ್ರೆಯ ಐಸಿಯುನಲ್ಲಿದೆ ಮತ್ತು ವೈದ್ಯರ ತಂಡವು ಅದರ ಮೇಲೆ ನಿಗಾ ಇಡುತ್ತಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣವನ್ನು ತನಿಖೆ ಮಾಡಲಾಗುತ್ತಿದೆ. ದಾಳಿಕೋರನನ್ನು ಪತ್ತೆಹಚ್ಚಲು ಅರಣ್ಯ ಅಧಿಕಾರಿಗಳು ಹತ್ತಿರದ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.

ಮತ್ತಷ್ಟು ಓದಿ: ಕೋತಿ ಕಿತಾಪತಿಗೆ ಹೆಜ್ಜೇನು ದಾಳಿ: ಜೀವ ಬಿಟ್ಟ ಕಾರು ಶೋರೂಂ ಮೇಲ್ವಿಚಾರಕ!

ಗಾಯಗೊಂಡ ಮಂಗವು ಮರಗಳ ಮೇಲೆ ಎತ್ತರದಲ್ಲಿ ಕುಳಿತಿದ್ದರಿಂದ, ರಕ್ಷಣೆ ಕಷ್ಟಕರವಾಗಿತ್ತು. ರಕ್ಷಣಾ ತಂಡವು ಧೈರ್ಯಗೆಡದೆ, ಮಂಗವನ್ನು ಕೆಳಗಿಳಿಸಿ ಆಸ್ಪತ್ರೆಗೆ ಕರೆದೊಯ್ಯುವಲ್ಲಿ ಯಶಸ್ವಿಯಾಯಿತು.
ಮಹಾರಾಷ್ಟ್ರ ಅರಣ್ಯ ಇಲಾಖೆಯ ಥಾಣೆ ವಲಯದ ಅಧಿಕಾರಿಗಳು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಬೇಟೆಗಾರನನ್ನು ಗುರುತಿಸಲು ಅವನ ಕಾರ್ಯವೈಖರಿ ತಿಳಿಯುವ ಪ್ರಯತ್ನ ನಡೆಯುತ್ತಿದೆ.

ಕೇವಲ ನಾಲ್ಕು ದಿನಗಳ ಹಿಂದೆ, ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವನದ ಬಳಿ ಮತ್ತೊಂದು ಮಂಗ ತೀವ್ರವಾಗಿ ಗಾಯಗೊಂಡಿರುವುದು ಕಂಡುಬಂದಿದೆ. ಆ ಘಟನೆಯಲ್ಲಿ, ಬಾಣವು ಕೋತಿಯ ಹೊಟ್ಟೆಯನ್ನು ಚುಚ್ಚಿತ್ತು.

ಬಾಣವು ಕುತ್ತಿಗೆಯ ಮೂಲಕ ಪ್ರವೇಶಿಸಿ ದವಡೆಯ ಬಳಿ ಹೊರಬಂದಿತ್ತು. ಕೋತಿಯನ್ನು ಐಸಿಯು ಸೌಲಭ್ಯಕ್ಕೆ ಸ್ಥಳಾಂತರಿಸಲಾಗಿದ್ದು, ಪಶುವೈದ್ಯಕೀಯ ತಜ್ಞರು ಅದರ ಚಿಕಿತ್ಸೆಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ.ಬೇಟೆಗಾರನೇ ಈ ದಾಳಿ ನಡೆಸಿರಬಹುದು ಎಂದು ಅರಣ್ಯ ಅಧಿಕಾರಿಗಳು ಶಂಕಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

ಪ್ರಜ್ಞೆ ತಪ್ಪಿತೆಂದು ಹಿಡಿಯಲು ಹೋದಾಗ ದಿಢೀರ್ ಎದ್ದು ದಾಳಿ ಮಾಡಿದ ಹುಲಿ! ಆಮೇಲಾಗಿದ್ದೇ ಬೇರೆ

ಚಾಮರಾಜನಗರ, ಮಾರ್ಚ್ 24: ಹುಲಿ ಸೆರೆಗೆ ಹಮ್ಮಿಕೊಳ್ಳಲಾಗಿದ್ದ ‘ಆಪರೇಷನ್ ಬೀಸ್ಟ್ (Operation Beast)’ ಕಾರ್ಯಾಚರಣೆಯ ಎರಡನೇ ಹಂತ ಯಶಸ್ವಿಯಾಗಿ ಪೂರ್ಣಗೊಂಡ ಬೆನ್ನಲ್ಲೇ ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದ ಅವಘಡವೊಂದು ಸಂಭವಿಸಿರುವುದು ಬೆಳಕಿಗೆ ಬಂದಿದೆ. ಚಾಮರಾಜನಗರ (Chamarajanagar) ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಭೀಮನ ಬೀಡು ಗ್ರಾಮದಲ್ಲಿ ನಡೆದ ಕಾರ್ಯಾಚರಣೆಯ ವೇಳೆ, ಬಂಡೀಪುರ (Bandipur) ಅರಣ್ಯ ಸಿಬ್ಬಂದಿ ಕೂಂಬಿಂಗ್ ವೇಳೆ ಅನುಸರಿಸಬೇಕಾದ ನಿಯಮಗಳನ್ನು ಪಾಲಿಸದೇ ಇರುವುದು ಗೊತ್ತಾಗಿದೆ. ಇದರಿಂದ ಸಿಬ್ಬಂದಿಯೊಬ್ಬರ ಪ್ರಾಣಕ್ಕೆ ಸಂಚಕಾರ ಎದುರಾಗಿದ್ದು, ಅದೃಷ್ಟವಶಾತ್ ಅನಾಹುತವೊಂದು ತಪ್ಪಿದೆ.

ಹುಲಿ ಸೆರೆ ಕಾರ್ಯಾಚರಣೆಯಲ್ಲಿ ಎಡವಟ್ಟು

ಹುಲಿಗೆ ಅರವಳಿಕೆ (ಡಾಟ್) ನೀಡಿದ ನಂತರ ಅದು ಸಂಪೂರ್ಣವಾಗಿ ಪ್ರಜ್ಞೆ ತಪ್ಪುವ ಮುನ್ನವೇ ಸೆರೆ ಹಿಡಿಯಲು ಸಿಬ್ಬಂದಿ ಮುಂದಾಗಿದ್ದರು. ನಿಯಮ ಪ್ರಕಾರ, ಹಿರಿಯ ಅಧಿಕಾರಿಗಳು ಮತ್ತು ಪಶುವೈದ್ಯರ ಮೇಲ್ವಿಚಾರಣೆಯಲ್ಲಿ ಮಾತ್ರ ಮುಂದಿನ ಕ್ರಮ ಕೈಗೊಳ್ಳಬೇಕಾಗಿದ್ದರೂ, ಈ ಸಂದರ್ಭದಲ್ಲಿ ಆತುರದ ನಿರ್ಧಾರ ಕೈಗೊಳ್ಳಲಾಗಿತ್ತು ಎನ್ನಲಾಗಿದೆ. ಸಿಬ್ಬಂದಿ ಸೆರೆ ಹಿಡಿಯಲು ಬರುತ್ತಿದ್ದಂತೆಯೇ ಗಾಬರಿಗೊಂಡ ಹುಲಿ ರಿವರ್ಸ್ ಅಟ್ಯಾಕ್ ನಡೆಸಿ, ಫಾರೆಸ್ಟ್ ಗಾರ್ಡ್ ಬಸವೇಗೌಡ ಮೇಲೆ ದಾಳಿ ನಡೆಸಿದೆ. ಹುಲಿಯ ಒಂದೇ ಹೊಡೆತಕ್ಕೆ ಅವರ ಕೈಗೆ ಗಂಭೀರ ಗಾಯವಾಗಿದೆ.

ಕಾರ್ಯಾಚರಣೆ ವೇಳೆ ಸ್ಥಳದಲ್ಲಿದ್ದ ಜನರ ಕೂಗಾಟ ಮತ್ತು ಗದ್ದಲದಿಂದ ಹುಲಿ ಇನ್ನಷ್ಟು ಗಾಬರಿಗೊಂಡಿತ್ತು. ಅರವಳಿಕೆ ಮದ್ದು ನೀಡಿದ ಬಳಿಕವೂ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿರಲಿಲ್ಲ ಎಂಬುದು ತಿಳಿದುಬಂದಿದೆ. ಗಾಯಗೊಂಡ ಫಾರೆಸ್ಟ್ ಗಾರ್ಡ್ ಬಸವೇಗೌಡರನ್ನು ತಕ್ಷಣವೇ ಗುಂಡ್ಲುಪೇಟೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ನಿಯಮ ಉಲ್ಲಂಘನೆ ಆರೋಪ

ಹಿರಿಯ ಅಧಿಕಾರಿಗಳು ಸ್ಥಳದಲ್ಲಿರದೇ ಕಾರ್ಯಾಚರಣೆ ನಡೆಸಿದ ಆರೋಪ ಕೇಳಿಬಂದಿದ್ದು, ಅರಣ್ಯ ಇಲಾಖೆಯ ಕಾರ್ಯವಿಧಾನಗಳ ಬಗ್ಗೆ ಪ್ರಶ್ನೆಗಳು ಉದ್ಭವಿಸಿವೆ.

ಇದನ್ನೂ ಓದಿ: ಚಾಮರಾಜನಗರ: ವಿದ್ಯುತ್ ಶಾಕ್​​ಗೆ ಹೆಣ್ಣು ಹುಲಿ ಬಲಿ; ಅರಣ್ಯಾಧಿಕಾರಿಗಳ ಕಳ್ಳಾಟಕ್ಕೆ ರೊಚ್ಚಿಗೆದ್ದ ರೈತರು

ಒಟ್ಟಿನಲ್ಲಿ, ಕಾಡುಪ್ರಾಣಿಗಳ ಸೆರೆ ಕಾರ್ಯಾಚರಣೆಯಲ್ಲಿ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳನ್ನು ಲೆಕ್ಕಿಸದ ಪರಿಣಾಮ ಈ ಅವಘಡ ಸಂಭವಿಸಿದ್ದು, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಅಗತ್ಯವಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link