Headlines

nagaraj11081993

ಬಾಗಲಕೋಟೆ ಬೈ ಎಲೆಕ್ಷನ್ ಟಿಕೆಟ್ ಮೇಟಿ ಕುಟುಂಬಕ್ಕೆ ಕೊಟ್ಟಿರುವ ಹಿಂದಿನ ಕಾರಣ ಬಿಚ್ಚಿಟ್ಟ ಸಿಎಂ

ಬಾಗಲಕೋಟೆ (ಮಾರ್ಚ್ 23): ದಾವಣಗೆರೆ ದಕ್ಷಿಣ (Davanagere South By Election) ಹಾಗೂ ಬಾಗಲಕೋಟೆ (Bagalkot) ಉಪ ಚುನಾವಣೆ ಕಾಂಗ್ರೆಸ್‌ ಅಧಿಕೃತ ಟಿಕೆಟ್‌ ಘೋಷಣೆಯಾಗಿದೆ. ಸಮರ್ಥ್ ಶಾಮನೂರು, ಉಮೇಶ್‌ ಮೇಟಿಯನ್ನು ಅಭ್ಯರ್ಥಿ ಎಂದು ಎಐಸಿಸಿ ಪ್ರಕಟಣೆ ಹೊರಡಿಸಿದ್ದು, ಇಂದು (ಮಾರ್ಚ್ 23) ಸಮರ್ಥ್ ಹಾಗೂ ಉಮೇಶ್ ಮೇಟಿ ನಾಮಪತ್ರ ಸಲ್ಲಿಸಿದರು. ಇದರೊಂದಿಗೆ ಕಾಂಗ್ರೆಸ್‌ ಕುಟುಂಬಕ್ಕೆ ಅನುಕಂಪದ ಆಧಾರದಲ್ಲಿ ಟಿಕೆಟ್‌ ನೀಡಿದೆ. ಶಮನೂರು ಶಿವಶಂಕರಪ್ಪ ನಿಧನದಿಂದಾಗಿ ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ ಅವರ ಮೊಮ್ಮಗ ಸಮರ್ಥ್​​ಗೆ ನೀಡಿದ್ದರೆ, ಇತ್ತ…

Read More

IPL 2026: ಉಳಿದ ಪಂದ್ಯಗಳ ವೇಳಾಪಟ್ಟಿ ಯಾವಾಗ ಪ್ರಕಟ? ಪಂದ್ಯಗಳ ಸಂಖ್ಯೆ ಹೆಚ್ಚಾಗುತ್ತಾ?

2026 ರ ಐಪಿಎಲ್ (IPL 2026) ಆರಂಭಕ್ಕೆ ಒಂದು ವಾರಕ್ಕಿಂತ ಕಡಿಮೆ ಸಮಯ ಉಳಿದಿದೆ. ಆದರೆ ಇದುವರೆಗೂ ಪೂರ್ಣ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ಕೆಲವು ದಿನಗಳ ಹಿಂದೆ ಬಿಸಿಸಿಐ (BCCI), ಮಾರ್ಚ್ 28 ರಿಂದ ಏಪ್ರಿಲ್ 12 ರವರೆಗಿನ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಇದರಲ್ಲಿ ಕೇವಲ 20 ಪಂದ್ಯಗಳು ಮಾತ್ರ ಸೇರಿವೆ. ಇದೀಗ ಲೀಗ್ ಆರಂಭಕ್ಕೆ ದಿನಗಣನೆ ಶುರುವಾಗಿದ್ದು, ಉಳಿದ ಪಂದ್ಯಗಳ ವೇಳಾಪಟ್ಟಿ ಯಾವಾಗ ಪ್ರಕಟವಾಗಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ವಾಸ್ತವವಾಗಿ ಐಪಿಎಲ್ ಪಂದ್ಯಗಳು ನಡೆಯುವ ರಾಜ್ಯದಲ್ಲಿ…

Read More

Video: ಎರಡು ವಾರಗಳ ಕಾಲ ಆಫೀಸಿನಿಂದ ಮನೆಗೆ 2.7 ಕಿಮೀ ನಡಿಗೆ; ಸಾಧಕ ಬಾಧಕ ಬಿಚ್ಚಿಟ್ಟ ಬೆಂಗಳೂರಿನ ಮಹಿಳೆ

ಬೆಂಗಳೂರು, ಮಾರ್ಚ್ 23: ಬೆಂಗಳೂರು (Bengaluru) ಅಂದ್ರೆ ಮೊದಲು ನೆನಪಿಗೆ ಬರುವುದೇ ಟ್ರಾಫಿಕ್. ಈ ಟ್ರಾಫಿಕ್‌ನಲ್ಲಿ ಸಿಲುಕಿ ಟೈಮ್ ವೇಸ್ಟ್ ಮಾಡೋದಕ್ಕಿಂತ ನಡೆದುಕೊಂಡು ಹೋಗೋದೇ ಬೆಸ್ಟ್ ಎನ್ನುವ ಅಭಿಪ್ರಾಯವಿದ್ರೂ ಅಂತಹ ಸಾಹಸಕ್ಕೆ ಯಾರು ಕೈ ಹಾಕಲ್ಲ. ಬೆಂಗಳೂರಿನ ಮಹಿಳೆಯೊಬ್ಬರು ಎರಡು ವಾರಗಳ ಕಾಲ ಪ್ರತಿದಿನ ಸಂಜೆ ಆಫೀಸಿನಿಂದ ಮನೆಗೆ ನಡೆದುಕೊಂಡೇ ಹೋಗಿದ್ದಾರೆ. ಈ ವೇಳೆ ತನಗಾದ ಅನುಭವ ಹಂಚಿಕೊಂಡಿದ್ದು, ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಶಿಲ್ಪಾ (silly_fied) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ…

Read More

ಇಂಧನದ ಬೆಲೆ ಕಡಿಮೆ ಮಾಡುವ ಪ್ಲಾನ್; ಟ್ರಂಪ್ ಜೊತೆ ಯಾವ ಮಾತುಕತೆಯೂ ನಡೆದಿಲ್ಲ ಎಂದ ಇರಾನ್

ಟೆಹ್ರಾನ್, ಮಾರ್ಚ್ 23: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಇರಾನ್ ಜೊತೆ ‘ಪ್ರೊಡಕ್ಟಿವ್ ಮಾತುಕತೆ’ ನಡೆಸಿದ್ದೇವೆ ಎಂಬ ಹೇಳಿಕೆಯನ್ನು ಇರಾನ್ ತಳ್ಳಿಹಾಕಿದೆ. ಇಂಧನದ ಬೆಲೆಗಳನ್ನು ಕಡಿಮೆ ಮಾಡುವ ಪ್ರಯತ್ನಗಳ ಭಾಗವಾಗಿ ಅಮೆರಿಕ ಈ ರೀತಿಯ ಹೇಳಿಕೆ ನೀಡಿದೆ ಎಂದು ಇರಾನ್ ಟೀಕಿಸಿದೆ. ಇರಾನ್ ಮೇಲೆ ನಡೆಸಲು ಯೋಚಿಸಲಾಗಿದ್ದ ಮಿಲಿಟರಿ ದಾಳಿಗಳಿಗೆ ವಿರಾಮ ನೀಡುವುದಾಗಿ ಟ್ರಂಪ್ ಘೋಷಿಸಿದ ಸ್ವಲ್ಪ ಸಮಯದ ನಂತರ ಇರಾನ್ ರಾಯಭಾರ ಕಚೇರಿ ಈ ಹೇಳಿಕೆ ಬಿಡುಗಡೆ ಮಾಡಿದೆ. “ಇರಾನ್‌ನ ದೃಢ ಎಚ್ಚರಿಕೆಯ…

Read More

ಎಐ ಮೂಲಕ ಬದಲಾಯ್ತು ‘ಧುರಂಧರ್ 2’ ಕ್ಲೈಮಾಕ್ಸ್; ಪ್ರೇಕ್ಷಕರ ಬಯಕೆಯಂತೆ ಕಥೆ ಅಂತ್ಯ

ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ ಅಭಿನಯ ಮತ್ತು ಆದಿತ್ಯ ಧರ್ ನಿರ್ದೇಶನದ ‘ಧುರಂಧರ್ 2’ (Dhurandhar 2) ಸಿನಿಮಾ ದೇಶಾದ್ಯಂತ ಭಾರಿ ಸದ್ದು ಮಾಡುತ್ತಿದೆ. ಸಿನಿಮಾ ನೋಡಿದ ಪ್ರೇಕ್ಷಕರು ರಣವೀರ್ (Ranveer Singh) ನಟನೆ ಮತ್ತು ಆದಿತ್ಯ ಧರ್ ಅವರ ನಿರ್ದೇಶನಕ್ಕೆ ಫಿದಾ ಆಗಿದ್ದಾರೆ. ಆದರೆ, ಚಿತ್ರದ ಕ್ಲೈಮ್ಯಾಕ್ಸ್ ಬಗ್ಗೆ ಅಭಿಮಾನಿಗಳಲ್ಲಿ ಸಣ್ಣದೊಂದು ಬೇಸರವಿತ್ತು. ಈಗ ಆ ಬೇಸರವನ್ನು ಕೃತಕ ಬುದ್ಧಿಮತ್ತೆ (AI) ದೂರ ಮಾಡಿದೆ. ಪ್ರೇಕ್ಷಕರ ಬಯಕೆಯಂತೆ ಒಂದು ಎಐ ವಿಡಿಯೋ ಮಾಡಲಾಗಿದ್ದು, ಅದನ್ನು ನೋಡಿದ…

Read More

Oil Prices: ಟ್ರಂಪ್ ವರಸೆ ಬದಲು; ಕಚ್ಛಾ ತೈಲ ಬೆಲೆ ದಿಢೀರ್ ಇಳಿಕೆ

ನವದೆಹಲಿ, ಮಾರ್ಚ್ 23: ಇರಾನ್ ಮೇಲೆ ಅಮೆರಿಕ ದಾಳಿ ಮಾಡಿದ ಪರಿಣಾಮ ಗಗನಕ್ಕೇರಿದ್ದ ತೈಲ ಬೆಲೆಗಳು (crude oil prices) ಇದೀಗ ತಗ್ಗಿವೆ. ಸೋಮವಾರ ಬ್ರೆಂಟ್ ಕ್ರೂಡ್ ಶೇ 11ರಷ್ಟು ಕಡಿಮೆ ಆಗಿದೆ. ಒಂದು ಬ್ಯಾರಲ್ ತೈಲದ ಬೆಲೆ 100 ಡಾಲರ್​ಗಿಂತ ಕಡಿಮೆಗೆ ಇಳಿದಿದೆ. ತೈಲ ಬೆಲೆ ಏರಲು ಕಾರಣವಾಗಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ಟ್ರೂತ್ ಸೋಷಿಯಲ್​ನಲ್ಲಿ ಪೋಸ್ಟ್ ಹಾಕಿದ ಬಳಿಕ ತೈಲ ಬೆಲೆ ಕೆಳ ಜಾರಿದೆ. ಬ್ರೆಂಟ್ ಮತ್ತು ಡಬ್ಲ್ಯುಟಿಐ…

Read More

ಹಾರ್ಮುಜ್ ಜಲಸಂಧಿ ಮುಚ್ಚುವಿಕೆಯನ್ನು ಒಪ್ಪಲಾಗದು; ಲೋಕಸಭೆಯಲ್ಲಿ ಪ್ರಧಾನಿ ಮೋದಿ ಖಂಡನೆ

ನವದೆಹಲಿ, ಮಾರ್ಚ್ 23: ಇಂದು ಲೋಕಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಬಗ್ಗೆ ಪ್ರಸ್ತಾಪಿಸಿದರು. “ಇರಾನ್ ಮತ್ತು ಅಮೆರಿಕ-ಇಸ್ರೇಲ್ ಮೈತ್ರಿಕೂಟದ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವುದರಿಂದ ಪರಿಸ್ಥಿತಿ ಚಿಂತಾಜನಕವಾಗಿದೆ. ಬಿಕ್ಕಟ್ಟು ಈ ಪ್ರದೇಶಕ್ಕೆ ಮಾತ್ರ ಸೀಮಿತವಾಗಿಲ್ಲ, ಇಡೀ ಪ್ರಪಂಚದ ಮೇಲೆ ಪರಿಣಾಮ ಬೀರುತ್ತಿದೆ. ಪಶ್ಚಿಮ ಏಷ್ಯಾದಲ್ಲಿನ ಬಿಕ್ಕಟ್ಟು ವಿಶ್ವದ ಜನರು ಮತ್ತು ಆರ್ಥಿಕತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ” ಎಂದು ಅವರು ಹೇಳಿದರು. ಸಂಸತ್ತಿನ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ…

Read More

ಮುತ್ತಪ್ಪ ರೈ ಪುತ್ರ ರಿಕ್ಕಿ ರೈನಿಂದಲೇ ಕಾರ್ ಡ್ರೈವಿಂಗ್, ಸಿಸಿಟಿವಿ ದೃಶ್ಯದಲ್ಲಿ ಸೆರೆ

ಬೆಂಗಳೂರು, (ಮಾರ್ಚ್ 23): ಇದೇ ಮಾರ್ಚ್ 21ರ ಮಧ್ಯರಾತ್ರಿ 3ರ ಸುಮಾರಿಗೆ ಬೆಂಗಳೂರಿನ ಅನಿಲ್ ಕುಂಬ್ಳೆ ಸರ್ಕಲ್ ಬಳಿ ಲ್ಯಾಂಬೋರ್ಗಿನಿ ಕಾರು ಡ್ರಿಫ್ಟಿಂಗ್ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಿವಂಗತ ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಹೆಸರು ಕೇಳಿಬಂದಿತ್ತು. ಬಳಿಕ ಪೊಲೀಸರು ಕಾರನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಗಮನಿಸಿದಾಗ ಕಾರು ಡ್ರಿಫ್ಟಿಂಗ್‌ ಮಾಡಿರುವುದು ರಿಕ್ಕಿ ರೈ ಎನ್ನುವುದು ಪತ್ತೆಯಾಗಿದೆ. ಹೀಗಾಗಿ ರಿಕ್ಕಿ ರೈ ವಿರುದ್ಧ ಕಬ್ಬನ್…

Read More

ಹೆಚ್ಚು ಕಮ್ಮಿಯಾದ್ರೆ ನಮ್ಮನ್ನು ದೂಷಿಸಬೇಡಿ; ವಿದೇಶಿ ಆಟಗಾರರಾಗಿ ಪಾಕ್ ಉಗ್ರ ಸಂಘಟನೆಯಿಂದ ಎಚ್ಚರಿಕೆ

11ನೇ ಆವೃತ್ತಿಯ ಪಾಕಿಸ್ತಾನ ಸೂಪರ್ ಲೀಗ್ (PSL 2026) ಆರಂಭಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (PCB) ಸಮಸ್ಯೆಗಳು ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಒಂದೆಡೆ ಪಿಸಿಬಿಗೆ, ವಿದೇಶಿ ಆಟಗಾರರ ಅಲಭ್ಯತೆ ದೊಡ್ಡ ತಲೆನೋವಾಗಿದ್ದರೆ, ಮತ್ತೊಂದೆಡೆ ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ದೇಶದಲ್ಲಿ ಉಂಟಾಗಿರುವ ಅನಿಲ ಬಿಕ್ಕಟ್ಟು ಹಾಗೂ ಅಪ್ಘಾನಿಸ್ತಾನ ದಾಳಿ ಮಾಡುವ ಆತಂಕ ಮತ್ತೊಂದು ಸವಾಲಾಗಿದೆ. ಇದೀಗ ಇದೆಲ್ಲದರ ನಡುವೆ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಯೊಂದು ವಿದೇಶಿ ಆಟಗಾರರು ಈ ಲೀಗ್​ನಲ್ಲಿ ಪಾಲ್ಗೊಳ್ಳದಂತೆ ಎಚ್ಚರಿಕೆ ನೀಡಿದೆ….

Read More

ಮೂಡಬಿದ್ರೆ ಇನ್ಸ್​ಪೆಕ್ಟರ್​​​ ಕಾಮಕಾಂಡ ಕೇಸ್​ ಸಿಐಡಿಗೆ ಹಸ್ತಾಂತರ: ‘ಪೋಲಿ’ಸಪ್ಪಗೆ ಮತ್ತೆ ಸಂಕಷ್ಟ

ಮಂಗಳೂರು, ಮಾರ್ಚ್​ 23: ಮೂಡಬಿದ್ರೆ ಪೊಲೀಸ್ ಇನ್ಸ್​ಪೆಕ್ಟರ್​​ ಸಂದೇಶ್ (Inspector Sandesh) ಕಾಮಕಾಂಡದ ಸುದ್ದಿ ಹೊರಬೀಳುತ್ತಲೇ ಅಮಾನತು ಮಾಡಲಾಗಿತ್ತು. ಅವರ ವಿರುದ್ಧ ಆರೋಪ ಮಾಡಿದ್ದ ಸುಮತಿ ನಾಯಕ್ ಮತ್ತು ಅವಿತಾ ಮಿನೇಜಸ್​ ಮಾಡಿದ್ದ ಆರೋಪಗಳು ಸುಳ್ಳು ಅಂತಾ ಪೊಲೀಸ್ ತನಿಖೆ ಹೇಳಿತ್ತು. ಇದೆಲ್ಲದರ ಮಧ್ಯೆ ಇದೀಗ ರಾಜ್ಯ ಸರ್ಕಾರ ಸಿಐಡಿಗೆ ವರ್ಗಾಯಿಸಿ ಸೋಮವಾರ ಆದೇಶ ಹೊರಡಿಸಿದೆ. ಆ ಮೂಲಕ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸರ್ಕಾರ ಆದೇಶ ಬೆನ್ನಲ್ಲೇ ಸದ್ಯ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಪ್ರಕರಣವನ್ನು…

Read More