Headlines

nagaraj11081993

ನೆಗೆಟಿವ್ ಟ್ರೋಲ್ ಮಾಡುವವರ ವಿರುದ್ಧ ‘ಪೆದ್ದಿ’ ಕಾನೂನು ಕ್ರಮ

ಇತ್ತೀಚೆಗೆ ಸಿನಿಮಾಗಳ (Cinema) ವಿರುದ್ಧ ಉದ್ದೇಶಪೂರ್ವಕ ನೆಗೆಟಿವ್ ವಿಮರ್ಶೆ, ಸುಳ್ಳು ಸುದ್ದಿ, ಸುಳ್ಳು ವಿಮರ್ಶೆಗಳನ್ನು ನೀಡುವ ಸಂಪ್ರದಾಯ ಹೆಚ್ಚಾಗಿದೆ. ಒಬ್ಬ ಸ್ಟಾರ್ ಹೀರೋ ಸಿನಿಮಾಕ್ಕೆ ಆತನ ಪ್ರತಿಸ್ಪರ್ಧಿ ನಾಯಕನ ಅಭಿಮಾನಿಗಳು ಉದ್ದೇಶಪೂರ್ವಕವಾಗಿ ನೆಗೆಟಿವ್ ರಿವ್ಯೂ ನೀಡುವುದು, ಕೆಟ್ಟದಾಗಿ ಟ್ರೋಲ್ ಮಾಡುವುದು, ಬುಕ್​​ಮೈಶೋ ಇನ್ನಿತರೆ ಕಡೆಗಳಲ್ಲಿ ಕಡಿಮೆ ಸ್ಟಾರ್ಸ್ ನೀಡುವುದು, ಕೆಟ್ಟ ರಿವ್ಯೂ ಕಮೆಂಟ್ ಹಾಕುವುದು ಇನ್ನಿತರೆ ಚಾಲ್ತಿಯಲ್ಲಿದೆ. ಇವುಗಳನ್ನು ಇದೀಗ ಚಿತ್ರತಂಡಗಳು ಗಂಭೀರವಾಗಿ ಪರಿಗಣಿಸಿ ಕ್ರಮಕ್ಕೆ ಮುಂದಾಗಿವೆ. ಇದೀಗ ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾ ಸಹ…

Read More

ಮಂಗಳೂರಿನ ಜನರೇ ಸಂಜೆ 6ರೊಳಗೆ ಮನೆಗೆ ತಲುಪಿ!: ಇಂದು ಕರಾವಳಿ ಹಾಗೂ ಬೆಂಗಳೂರಿನಲ್ಲಿ ಭಾರೀ ಮಳೆ

ಬೆಂಗಳೂರು, ಮೇ.29: ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯ ಮುನ್ಸೂಚನೆ ಹೆಚ್ಚಾಗಿದೆ. ಮುಂದಿನ 5 ದಿನಗಳ ಕಾಲ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಹಾಗೂ ಭಾರಿ ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಹಾಗೂ ಭಾರತೀಯ ಹವಾಮಾನ ಇಲಾಖೆ (IMD) ಜಂಟಿ ಮುನ್ನೆಚ್ಚರಿಕೆ ನೀಡಿದೆ. ವಿಶೇಷವಾಗಿ ಇಂದಿನಿಂದ (ಮೇ 29) ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಹೆಚ್ಚಾಗಲಿದ್ದು, ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ (Yellow Alert)…

Read More

Gold Rate: ಚಿನ್ನ, ಬೆಳ್ಳಿ ಬೆಲೆಗಳೆರಡೂ ಹೆಚ್ಚಳ; ಇಲ್ಲಿದೆ ದರಪಟ್ಟಿ

ನವದೆಹಲಿ, ಮೇ 29: ಸತತ ಇಳಿಕೆಯಾಗುತ್ತಿದ್ದ ಬಂಗಾರದ ಬೆಲೆ (Gold Rates) ಇವತ್ತು ಶುಕ್ರವಾರ ಗ್ರಾಮ್​ಗೆ 145 ರೂನಷ್ಟು ಏರಿಕೆ ಆಗಿದೆ. ಬೆಳ್ಳಿ ಬೆಲೆಯೂ ಇವತ್ತು 5 ರೂ ಹೆಚ್ಚಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,44,500 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,57,640 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 28,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,44,500 ರುಪಾಯಿ…

Read More

‘ಧುರಂಧರ್’ ಚಿತ್ರತಂಡದ ಸದಸ್ಯನ ಲೈಂಗಿಕ ದೌರ್ಜನ್ಯ ಕೃತ್ಯ ಸಾಬೀತು; ಕಠಿಣ ಕ್ರಮ

ಸೂಪರ್ ಹಿಟ್ ‘ಧುರಂಧರ್’ (Dhurandhar) ಚಿತ್ರದ ಪ್ರೊಡಕ್ಷನ್ ಡಿಸೈನರ್ ಸೈನಿ ಎಸ್. ಜೊಹ್ರೆ (Saini S Johray) ವಿರುದ್ಧ ಕೇಳಿಬಂದಿದ್ದ ಲೈಂಗಿಕ ಕಿರುಕುಳದ ಆರೋಪಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ಈಗಾಗಲೇ ಎಫ್‌ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು ಸೈನಿ ಎಸ್. ಜೊಹ್ರೆಯನ್ನು ಬಂಧಿಸಿದ್ದರು. ಇದರ ಬೆನ್ನಲ್ಲೇ, ಚಿತ್ರದ ಆಂತರಿಕ ಲೈಂಗಿಕ ಕಿರುಕುಳ ತಡೆ ಸಮಿತಿಯು (POSH Committee) ನಡೆಸಿದ ತನಿಖೆಯಲ್ಲಿ ಜೊಹ್ರೆ ತಪ್ಪಿತಸ್ಥ ಎಂದು ಸಾಬೀತಾಗಿದೆ. ಹಾಗಾಗಿ ‘ಯಶ್ ರಾಜ್ ಫಿಲ್ಮ್ಸ್’ ಸಂಸ್ಥೆಯ…

Read More

ರಾಜೀನಾಮೆ ಬಳಿಕವೂ ಸಿದ್ದರಾಮಯ್ಯ-ಡಿಕೆಶಿ ನಡುವೆ ಅನ್ಯೂನ್ಯತೆ ಹೇಗಿದೆ ನೋಡಿ

ನವದೆಹಲಿ, (ಮೇ 29): ಡಿಕೆ ಶಿವಕುಮಾರ್ ಗಾಗಿ ಸಿದ್ದರಾಮಯ್ಯನವರು ಸಿಎಂ ಕುರ್ಚಿ ತ್ಯಾಗ ಮಾಡಿದ್ದಾರೆ. ನಿನ್ನೆ(ಮೇ 28) ಹೈಕಮಾಂಡ್ ಹೇಳಿದಂತೆ ಲೋಕಭವನಕ್ಕೆ ತೆರಳಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಇದೀಗ ಹೊಸ ಸರ್ಕಾರದ ಬಗ್ಗೆ ಚರ್ಚೆಗಳು ಜೋರಾಗಿವೆ. ಈ ಸಂಬಂಧ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ದೆಹಲಿಯಲ್ಲಿದ್ದು, ಸಚಿವ ಸಂಪುಟ, ಕೆಪಿಸಿಸಿ ಅಧ್ಯಕ್ಷ ಸೇರಿದಂತೆ ಇತರೆ ವಿಚಾರಗಳ ಬಗ್ಗೆ ಹೈಕಮಾಂಡ್ ನಾಯಕರ ಜತೆ ಮಾತುಕಡೆ ನಡೆಸಿದ್ದಾರೆ. ಇದರ ಮಧ್ಯೆ ರಾಜೀನಾಮೆ ಬಳಿಕವೂ ಯಾವುದೇ ಕೋಪ, ಅಸಮಾಧಾನವಿಲ್ಲದೇ ಸಿದ್ದರಾಮಯ್ಯನವರು…

Read More

PM Kisan Scheme: ಪಿಎಂ ಕಿಸಾನ್ 23ನೇ ಕಂತಿನ ಹಣ ಜೂನ್​ನಲ್ಲಿ ಬರುತ್ತಾ? ಈ ಕಾರ್ಯ ಮಾಡದವರಿಗೆ ಸಿಕ್ಕೋದಿಲ್ಲಾ ಹಣ

ನವದೆಹಲಿ, ಮೇ 29: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (PM Kisan Scheme) 23ನೇ ಕಂತಿನ ಹಣ ಜೂನ್ ತಿಂಗಳಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ. 22ನೇ ಕಂತಿನ ಹಣ ಮಾರ್ಚ್ 13ರಂದು ರಿಲೀಸ್ ಆಗಿತ್ತು. 9 ಕೋಟಿಗೂ ಅಧಿಕ ಫಲಾನುಭವಿ ಸಂಖ್ಯೆ ಇರುವ ಈ ಯೋಜನೆಯಲ್ಲಿ ಸರ್ಕಾರ ಪ್ರತೀ ಕಂತಿನಲ್ಲಿ 2,000 ರೂ ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ರವಾನೆ ಮಾಡುತ್ತದೆ. ಈ ಸ್ಕೀಮ್​ನಲ್ಲಿ ರೈತರಿಗೆ (Farmers) ಸರ್ಕಾರ ಪ್ರತೀ ವರ್ಷ 3 ಕಂತುಗಳಲ್ಲಿ…

Read More

ನೂತನ ಮುಖ್ಯಮಂತ್ರಿ ಪದಗ್ರಹಣ ಸಮಾರಂಭಕ್ಕೆ ಸಜ್ಜಾಗುತ್ತಿದೆ ವಿಧಾನಸೌಧ: ಹೇಗಿದೆ ಗೊತ್ತಾ ಸಿದ್ಧತೆ?

ಬೆಂಗಳೂರು, ಮೇ 29: ಕರ್ನಾಟಕದ ನೂತನ ಮುಖ್ಯಮಂತ್ರಿ ಪದಗ್ರಹಣ ಸಮಾರಂಭಕ್ಕೆ ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್‌ನಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ. ಅಧಿಕಾರಿಗಳಿಗೆ ಈಗಾಗಲೇ ಅಗತ್ಯ ಸೂಚನೆಗಳನ್ನು ನೀಡಲಾಗಿದ್ದು, ವೇದಿಕೆ ನಿರ್ಮಾಣ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಂತ್​​ ಕುಮಾರ್ ಸಿಂಗ್ ನೇತೃತ್ವದಲ್ಲಿ ಮಹತ್ವದ ಭದ್ರತಾ ಸಭೆ ನಡೆದಿದ್ದು, ಬಂದೋಬಸ್ತ್‌ಗೆ ವ್ಯಾಪಕ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿದ ಹಿನ್ನೆಲೆ, ನಾಳೆ ಸಂಜೆ 4 ಗಂಟೆಗೆ ಕಾಂಗ್ರೆಸ್​​ ಶಾಸಕಾಂಗ ಪಕ್ಷದ…

Read More

ಪ್ರಾಣಿ ಪ್ರಿಯರಿಗೆ ಗುಡ್​​ನ್ಯೂಸ್​​: ದಕ್ಷಿಣ ಆಫ್ರಿಕಾದ ಚೀತಾಗಳು ಬನ್ನೇರುಘಟ್ಟದಲ್ಲಿ ಜೂನ್ 4ರಿಂದ ವೀಕ್ಷಣೆಗೆ ಲಭ್ಯ

ಬೆಂಗಳೂರು, ಮೇ 29: ಪ್ರಾಣಿ ಪ್ರಿಯರಿಗೆ ಅರಣ್ಯ ಇಲಾಖೆ ಗುಡ್​​ನ್ಯೂಸ್​​ ನೀಡಿದ್ದು, ಕಳೆದ ತಿಂಗಳು ಬೆಂಗಳೂರಿಗೆ (Bengaluru) ತರಲಾಗಿದ್ದ ದಕ್ಷಿಣ ಆಫ್ರಿಕಾದ ನಾಲ್ಕು ಚೀತಾಗಳು ಜೂನ್ 4ರಿಂದ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗಲಿವೆ. ಚೀತಾಗಳು ಕಡ್ಡಾಯ ಕ್ವಾರಂಟೈನ್ ಅವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಅವುಗಳನ್ನು ವೀಕ್ಷಿಸಲು ಅನುವು ಮಾಡಿಕೊಡಲಾಗಿದೆ. ಚೀತಾಗಳ ಸಹಜ ಚುರುಕು ಚಲನವಲನಗಳಿಗೆ ಅನುಗುಣವಾಗಿ ವಿಶೇಷವಾಗಿ ವಿನ್ಯಾಸಗೊಳಿಸಿದ ಹೊಸ ಎನ್‌ಕ್ಲೋಸರ್‌ನಲ್ಲಿ ಅವುಗಳನ್ನು ಬಿಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಖ್ಯಾಂಶಗಳು ಅರಣ್ಯ ಇಲಾಖೆಯಿಂದ ಪ್ರಾಣಿ…

Read More

ಆನ್‌ಲೈನ್ ಗೇಮಿಂಗ್ ನಿಷೇಧಕ್ಕೆ ಬೊಮ್ಮಾಯಿ ಸರ್ಕಾರ ತಂದಿದ್ದ ಕಾನೂನು ಎತ್ತಿ ಹಿಡಿದ ಸುಪ್ರೀಂ

ಸುಪ್ರಿಂಕೋರ್ಟ್, ಬಸವರಾಜ್ ಬೊಮ್ಮಾಯಿ ಬೆಂಗಳೂರು, (ಮೇ 29): ನನ್ನ ನೇತೃತ್ವದ ಬಿಜೆಪಿ ಸರ್ಕಾರದ (BJP Governmnet)  ಅವಧಿಯಲ್ಲಿ ಜಾರಿಗೆ ತಂದಿರುವ ಆನ್‌ಲೈನ್ ಗೇಮಿಂಗ್ (Online Gaming)  ನಿಷೇಧಿಸುವ ಕಾನೂನನ್ನು ಸುಪ್ರೀಂ ಕೋರ್ಟ್ (Supreme Court) ಎತ್ತಿ ಹಿಡಿದಿದ್ದು, ಆನ್‌ಲೈನ್ ಗೇಮಿಂಗ್ ತಡೆಯುವ ನಮ್ಮ ಉದ್ದೇಶಕ್ಕೆ ಜಯ ಸಿಕ್ಕಂತಾಗಿದ್ದು, ಸುಪ್ರೀಂ ಕೊರ್ಟ್‌ನ ಈ ಆದೇಶವನ್ನು ಸ್ವಾಗತಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ (Basavaraj bommai) ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು,…

Read More

ಸಿಕ್ಸರ್‌ಗಳ ಮಳೆಗರೆಯುವ ವೈಭವ್ ವಿರುದ್ಧ ಮೇಡನ್ ಓವರ್ ಎಸೆದ ಬೌಲರ್ ಯಾರು ಗೊತ್ತಾ?

2026 ರ ಐಪಿಎಲ್‌ನಲ್ಲಿ ವೈಭವ್ ಸೂರ್ಯವಂಶಿ ಎಂಬ ಬಿರುಗಾಳಿಯನ್ನು ಕಟ್ಟಿಹಾಕುವುದೇ ಎದುರಾಳಿ ತಂಡದ ಬೌಲರ್​ಗಳ ದೊಡ್ಡ ಸವಾಲಾಗಿದೆ. ಪಂದ್ಯದಿಂದ ಪಂದ್ಯಕ್ಕೆ ಉಗ್ರರೂಪಿಯಾಗುತ್ತಿರುವ ವೈಭವ್ ಏಕಾಂಗಿಯಾಗಿ ನಿಂತು ತಂಡಕ್ಕೆ ಗೆಲುವು ತಂದುಕೊಡುತ್ತಿದ್ದಾರೆ. ಇದರ ಪರಿಣಾಮವಾಗಿಯೇ ರಾಜಸ್ಥಾನ್ ರಾಯಲ್ಸ್ ತಂಡ ಇಂದು ಕ್ವಾಲಿಫೈಯರ್ 2 ಆಡಲು ಸಿದ್ಧವಾಗಿದೆ. ಗುಜರಾತ್ ವಿರುದ್ಧದ ಇಂದಿನ ಪಂದ್ಯದಲ್ಲಿ ರಾಜಸ್ಥಾನ್ ಗೆದ್ದರೆ ನೇರವಾಗಿ ಫೈನಲ್​ ಆಡಲಿದೆ. ಅದು ಸಾಧ್ಯವಾಗಬೇಕಾದರೆ ವೈಭವ್ ಸೂರ್ಯವಂಶಿ ಮತ್ತೊಮ್ಮೆ ಸ್ಫೋಟಕ ಇನ್ನಿಂಗ್ಸ್ ಆಡಬೇಕಾಗುತ್ತದೆ. ಆದರೆ ಅದಕ್ಕೂ ಮುನ್ನ ಮೊದಲ ಎಸೆತದಿಂದಲೇ ಸಿಕ್ಸರ್​ಗಳ…

Read More