Headlines

nagaraj11081993

ಬೆಂಗಳೂರಿನಲ್ಲಿ ಕೋಟ್ಯಂತರ ರೂ ಮೌಲ್ಯದ ಬಿಡಿಎ ಸೈಟ್ ಕಬಳಿಕೆ ಪ್ರಕರಣ ಬೆಳಕಿಗೆ: ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಯಲು

ಬೆಂಗಳೂರು, ಮೇ 29: ನಕಲಿ ದಾಖಲೆ ಸೃಷ್ಟಿಸಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (BDA) ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಕಬಳಿಸಲು ಯತ್ನಿಸಿದ ಬೃಹತ್ ಭೂಗಳ್ಳತನ (Land)  ಹಗರಣವೊಂದು ಬೆಳಕಿಗೆ ಬಂದಿದೆ. ಈ ಸಂಬಂಧ ವಂಚಕ ಶಾಲೂಮ್ ಕುಮಾರ್ ಎಂಬಾತನನ್ನು ಪೊಲೀಸರು ತಡರಾತ್ರಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಸದ್ಯ ಶೇಷಾದ್ರಿಪುರಂ ಠಾಣೆಯಲ್ಲಿ ಈ ಕುರಿತು ಎಫ್​​ಐಆರ್​ ದಾಖಲಾಗಿದೆ. ಮುಖ್ಯಾಂಶಗಳು ಕೋಟ್ಯಂತರ ರೂಪಾಯಿ ಮೌಲ್ಯದ ಭೂಗಳ್ಳತನ ಪ್ರಕರಣ ರಿವೀಲ್​​ ನಕಲಿ ದಾಖಲೆ ಸೃಷ್ಟಿಸಿ ಬಿಡಿಎ ಆಸ್ತಿ ಕಬಳಿಸಲು ಯತ್ನ ಶೇಷಾದ್ರಿಪುರಂ…

Read More

ಒಟ್ಟಿಗೆ ಎರಡು ಸಿನಿಮಾಗಳಲ್ಲಿ ‘ಪಿಶಾಚಿ’ ಆಗಲಿದ್ದಾರೆ ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ (Rashmika Mandanna) ಸ್ಟಾರ್ ಪ್ಯಾನ್ ಇಂಡಿಯಾ ನಟಿ. ಒಟ್ಟೊಟ್ಟಿಗೆ ಮೂರು 1000 ಕೋಟಿ ಸಿನಿಮಾಗಳಲ್ಲಿ ನಟಿಸಿರುವ ಏಕೈಕ ನಟಿ ಎನಿಸಿಕೊಂಡಿದ್ದಾರೆ ಅವರು. ಪ್ರಸ್ತುತ ಚಿತ್ರರಂಗದ ಕ್ಯೂಟ್ ನಟಿಯರಲ್ಲಿ ಒಬ್ಬರು. ಹಲವು ಒಳ್ಳೆಯ ಪ್ರೇಮಕತೆಗಳು, ರೊಮ್ಯಾಂಟಿಕ್, ಗ್ಲಾಮರಸ್ ಸಿನಿಮಾಗಳು ಅವರಿಗೆ ಆಫರ್ ಆಗುತ್ತಿವೆ. ಆದರೆ ರಶ್ಮಿಕಾ ಇವುಗಳ ನಡುವೆ ಒಟ್ಟಿಗೆ ಎರಡು ಸಿನಿಮಾನಲ್ಲಿ ದೆವ್ವ-ಭೂತದ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ರಶ್ಮಿಕಾಗೆ ಹಾರರ್ ಸಿನಿಮಾ ಹೊಸದಲ್ಲ. ಕಳೆದ ವರ್ಷ ಬಿಡುಗಡೆ ಆಗಿದ್ದ ‘ಥಾಮ’ ಸಿನಿಮಾನಲ್ಲಿ ರಶ್ಮಿಕಾ ಮಂದಣ್ಣ ಅವರು…

Read More

ವೈಭವ್ ಮೇಲೆ ವಯಸ್ಸಿನ ವಂಚನೆಯ ಆರೋಪ; ಬಿಸಿಸಿಐ ಪರೀಕ್ಷೆಯಲ್ಲಿ ಹೊರಬಂದ ಸತ್ಯಾಂಶವೇನು?

ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ (GT  vs RR) ತಂಡಗಳು ಐಪಿಎಲ್‌ನ ಎರಡನೇ ಕ್ವಾಲಿಫೈಯರ್‌ನಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ. ಆದರೆ ಈ ಪಂದ್ಯಕ್ಕೂ ಮುನ್ನ ರಾಜಸ್ಥಾನ್ ರಾಯಲ್ಸ್ ತಂಡದ ಸ್ಫೋಟಕ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ (Vaibhav Sooryavanshi) ಬಗ್ಗೆ ಬಹಳ ವರ್ಷಗಳಿಂದ ಕೇಳಿಬರುತ್ತಿರುವ ಆರೋಪ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ವಾಸ್ತವವಾಗಿ ವೈಭವ್ ಅದ್ಭುತ ಪ್ರದರ್ಶನ ನೀಡಿದಾಗಲೆಲ್ಲ ಅವರ ವಯಸ್ಸಿನ ಬಗ್ಗೆಗಿನ ಆರೋಪಗಳು ಸದ್ದು ಮಾಡುತ್ತವೆ. ಇದೀಗ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಎಲಿಮಿನೆಟರ್ ಪಂದ್ಯದಲ್ಲಿ ವೈಭವ್ 29…

Read More

ಐಪಿಎಲ್ ಮುಗಿಯುವ ಮುನ್ನವೇ ರಿಷಭ್ ತಲೆದಂಡ..! ಲಕ್ನೋ ನಾಯಕತ್ವಕ್ಕೆ ಪಂತ್ ರಾಜೀನಾಮೆ

ಐಪಿಎಲ್ 2026 ರ ಎರಡನೇ ಕ್ವಾಲಿಫೈಯರ್ ಪಂದ್ಯ ಇಂದು ನಡೆಯಬೇಕಿದೆ. ಇದಾದ ಬಳಿಕ ಮೇ 30 ರಂದು ಐಪಿಎಲ್ ಫೈನಲ್ ಪಂದ್ಯ ನಡೆಯಲಿದೆ. ಆದರೆ ಆ ಪಂದ್ಯಕ್ಕೂ ಮುನ್ನವೇ ಲಕ್ನೋ ಸೂಪರ್​ಜೈಂಟ್ಸ್ ತಂಡದಿಂದ ಆಘಾತಕ್ಕಾರಿ ಮಾಹಿತಿಯೊಂದು ಹೊರಬಿದ್ದಿದೆ.. ಕಳೆದ ಎರಡು ಆವೃತ್ತಿಗಳಿಂದ ಲಕ್ನೋ ತಂಡದ ನಾಯಕತ್ವವಹಿಸಿದ್ದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ತಮ್ಮ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ವಾಸ್ತವವಾಗಿ ಈ ಆವೃತ್ತಿಯಲ್ಲಿ ಲಕ್ನೋ ತಂಡದ ಪ್ರದರ್ಶನ ತೀರ ಕಳಪೆಯಾಗಿತ್ತು. ಆಡಿದ 14 ಪಂದ್ಯಗಳಲ್ಲಿ ಕೇವಲ 4…

Read More

ಮೆಟ್ರೋ ಪ್ರಯಾಣಿಕರೇ ಗಮನಿಸಿ!: ಭಾನುವಾರ ನೇರಳೆ ಮಾರ್ಗದ ಈ ನಿಲ್ದಾಣಗಳ ನಡುವೆ ನಮ್ಮ ಮೆಟ್ರೋ ಸಂಚಾರ ತಾತ್ಕಾಲಿಕ ಸ್ಥಗಿತ!

ಬೆಂಗಳೂರು, ಮೇ.31: ಸಿಲಿಕಾನ್ ಸಿಟಿಯ ನಮ್ಮ ಮೆಟ್ರೋ ಪ್ರಯಾಣಿಕರೇ ಗಮನಿಸಿ. ಮುಂಬರುವ ಭಾನುವಾರ (ಮೇ 31, 2026) ನೇರಳೆ ಮಾರ್ಗದ (Purple Line) ಪ್ರಮುಖ ಮೆಟ್ರೋ ನಿಲ್ದಾಣಗಳ ನಡುವೆ ರೈಲು ಸಂಚಾರದಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಅಧಿಕೃತ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ. ನೇರಳೆ ಮಾರ್ಗದಲ್ಲಿರುವ ಅತ್ತಿಗುಪ್ಪೆ ಮತ್ತು ವಿಜಯನಗರ ಮೆಟ್ರೋ ನಿಲ್ದಾಣಗಳ ನಡುವಿನ ಭಾಗದಲ್ಲಿ ಅತ್ಯಗತ್ಯ ತುರ್ತು ನಿರ್ವಹಣಾ ಕಾಮಗಾರಿಗಳನ್ನು (Maintenance Works) ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಕಾಮಗಾರಿಗಳನ್ನು…

Read More

40ಕ್ಕೂ ಹೆಚ್ಚು ಶಾಸಕರಿಂದ ಮಂತ್ರಿಗಿರಿಗಾಗಿ ತೀವ್ರ ಲಾಬಿ: ಯಾರ್ಯಾರು? ಇಲ್ಲಿದೆ ಲಿಸ್ಟ್​

ಬೆಂಗಳೂರು, (ಮೇ 29): ಈಗಾಗಲೇ ಸಿದ್ದರಾಮಯ್ಯನವರ (Siddaramaiah) ರಾಜೀನಾಮೆಯನ್ನು ರಾಜ್ಯಪಾಲರು ಅಂಗೀಕರಿಸಿದ್ದಾರೆ. ಜೊತೆಗೆ ಸಚಿವ ಸಂಪುಟವನ್ನು ಸಹ ವಿಸರ್ಜನೆ ಮಾಡಲಾಗಿದೆ. ಹೀಗಾಗಿ ಹೊಸ ಸಿಎಂ ಹಾಗೂ ಸಚಿವರನ್ನು ಆಯ್ಕೆ ಮಾಡಬೇಕಿದ್ದು, ಈ ಸಂಬಂಧ ನಿಯೋಜಿತ ಸಿಎಂ ಡಿಕೆ ಶಿವಕುಮಾರ್ (DK Shivakumar) ಅವರು ದೆಹಲಿಯಲ್ಲಿ ಹೈಕಮಾಂಡ್ ನಾಯಕರ ಜೊತೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ಯಾರಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ ಕಟ್ಟಬೇಕು? ಯಾರಿಗೆ ಸಚಿವರನ್ನಾಗಿ ಮಾಡಬೇಕು? ಎನ್ನುವ ಬಗ್ಗೆ ಮಾತುಕತೆಗಳು ನಡೆದಿವೆ. ಮತ್ತೊಂದೆಡೆ ಸಚಿವ ಸ್ಥಾನದ ಆಕಾಂಕ್ಷಿಗಳ ಲಾಬಿ…

Read More

ಜಾಗತಿಕ ಸವಾಲುಗಳ ನಡುವೆಯೂ 2026-27ರಲ್ಲಿ ಭಾರತದ ಜಿಡಿಪಿ ಶೇ. 6.9 ವೃದ್ಧಿ: ಆರ್​ಬಿಐ ವಾರ್ಷಿಕ ವರದಿಯಲ್ಲಿ ಅಂದಾಜು

ಮುಂಬೈ, ಮೇ 29: ಜಾಗತಿಕ ಮಟ್ಟದಲ್ಲಿ ತಲೆದೋರಿರುವ ತೀವ್ರ ಭೂರಾಜಕೀಯ ಉದ್ವಿಗ್ನತೆ (Geopolitical Tensions) ಮತ್ತು ಹಣದುಬ್ಬರದ ಅಪಾಯಗಳ ನಡುವೆಯೂ, ಭಾರತದ ಆರ್ಥಿಕತೆಯು (Real GDP) ಮುಂಬರುವ 2026-27ರ ಹಣಕಾಸು ವರ್ಷದಲ್ಲಿ ಶೇ. 6.9 ರಷ್ಟು ಪ್ರಗತಿಯನ್ನು ಸಾಧಿಸಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ಇತ್ತೀಚಿನ ವಾರ್ಷಿಕ ವರದಿಯಲ್ಲಿ ಅಂದಾಜಿಸಿದೆ. ಜಾಗತಿಕ ಆರ್ಥಿಕ ಬೆಳವಣಿಗೆಯು ಮಂದಗತಿಯಲ್ಲಿದ್ದರೂ, ಪ್ರಬಲವಾದ ದೇಶೀಯ ಸ್ಥೂಲ ಆರ್ಥಿಕ ತಳಹದಿಯಿಂದಾಗಿ (Macro Economic Base) ಭಾರತದ ಆರ್ಥಿಕ ಮುನ್ನೋಟವು ಸಕಾರಾತ್ಮಕವಾಗಿದೆ ಎಂದು…

Read More

Video: ಕೆಳಗೆ ನೀರು, ಮೇಲೆ ಆಕಾಶ, ತುತ್ತ ತುದಿಯಲ್ಲಿ ನಿಂತೇ ಬಿಡ್ತು ರೋಲರ್ ಕೋಸ್ಟರ್, ಜೀವ ಕೈಯಲ್ಲಿ ಹಿಡಿದು ಕುಳಿತ ಜನ

ಟೆಕ್ಸಾಸ್, ಮೇ 29: ಅಮೆರಿಕದ ಟೆಕ್ಸಾಸ್​ನಲ್ಲಿ ರೋಲರ್ ಕೋಸ್ಟರ್ ತುತ್ತ ತುದಿ ತಲುಪುತ್ತಿದ್ದಂತೆ ಕೆಟ್ಟು ನಿಂತೇ ಬಿಟ್ಟಿತ್ತು. ಪರಿಣಾಮವಾಗಿ, ರೈಡ್‌ನಲ್ಲಿದ್ದ ಎಂಟು ಮಂದಿ ಪ್ರವಾಸಿಗರು ನೆಲದಿಂದ ಹಲವು ಮಹಡಿಗಳ ಎತ್ತರದಲ್ಲಿ, ನಡು ಆಕಾಶದಲ್ಲಿ ತಲೆಕೆಳಗಾಗಿ ತೂಗಾಡುವಂತಾಯಿತು. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಭೀಕರ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದರು.ಅಷ್ಟು ಎತ್ತರದಲ್ಲಿದ್ದ ಪ್ರವಾಸಿಗರನ್ನು ತಲುಪಲು ಅಗ್ನಿಶಾಮಕ ದಳದವರು ಅತ್ಯಂತ ಉದ್ದವಾದ ಏಣಿಯಿರುವ ಟ್ರಕ್ ಅನ್ನು ಬಳಸಿದರು. ಏಣಿಯ ತುದಿಯಲ್ಲಿದ್ದ ಬಾಸ್ಕೆಟ್ ಮೂಲಕ ಸಿಬ್ಬಂದಿ ಪ್ರತಿಯೊಬ್ಬ ಸವಾರನನ್ನು…

Read More

ಪ್ರತ್ಯಕ ಪಾಲಿಕೆ ಹೋರಾಟಕ್ಕೆ ತೆರೆ: ಹುಬ್ಬಳ್ಳಿ-ಧಾರವಾಡ ಬೃಹತ್ ಮಹಾನಗರ ಪಾಲಿಕೆ ಠರಾವು ರದ್ದು

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ Image Credit source: tv9 kannada ಹುಬ್ಬಳ್ಳಿ, ಮೇ 29: ರಾಜ್ಯದಲ್ಲೇ ಎರಡನೇ ದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆ ಪಡೆದಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ (HDMC)  ವಿಭಜನೆಗೆ ಸಾಕಷ್ಟು ಹೋರಾಟಗಳು ನಡೆದಿದ್ದವು. ಇತ್ತೀಚೆಗೆ ಪಾಲಿಕೆ ವಿಭಜನೆಗೆ ಷರತ್ತುಬದ್ಧ ಅನುಮೋದನೆ ಕೂಡ ದೊರೆತಿತ್ತು. ರಾಜ್ಯಪಾಲ ಥಾವರಚಂದ್ ಗೆಹ್ಲೋಟ್​ ಪ್ರತ್ಯಕ ಪಾಲಿಕೆ ಕಡಿತಕ್ಕೆ ಸಹಿ ಬೆನ್ನಲ್ಲೇ ಬೃಹತ್ ಮಹಾನಗರ ಪಾಲಿಕೆಯ ಠರಾವು ಅಸಿಂಧುಗೊಂಡಿದೆ. ಹೀಗಾಗಿ ಈ ಹಿಂದೆ ಕೈಗೊಳ್ಳಲಾಗಿದ್ದ ಹುಬ್ಬಳ್ಳಿ-ಧಾರವಾಡ ಬೃಹತ್ ಮಹಾನಗರ ಪಾಲಿಕೆಯ…

Read More

ಹಿಂದುಳಿದ ವರ್ಗದ ನಾಯಕತ್ವಕ್ಕೆ ಕೊಡಲಿ ಪೆಟ್ಟು: ಸಿದ್ದರಾಮಯ್ಯನವರನ್ನು ಗುಣಗಾನ ಮಾಡಿದ ಬೊಮ್ಮಾಯಿ

ಹಾವೇರಿ, (ಮೇ 29): ಸಿದ್ದರಾಮಯ್ಯನವರು (Siddaramaiah) ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಇದ ಅವರ ಆಪ್ತರಿಗೆ ಹಾಗು ಅಭಿಮಾನಿಗಳಿಗೆ ಬೇಸರ ತರಿಸಿದೆ. ಅದರಲ್ಲೂ ಮುಖ್ಯವಾಗಿ ಪಕ್ಷ ಬೇರೆ ಇದ್ದರೂ ಸಹ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಸಿದ್ದರಾಮಯ್ಯನವರ ರಾಜೀನಾಮೆಗೆ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಅವರ ಜೊತೆಗಿನ ರಾಜಕೀಯ ಹಳೇ ನೆನಪುಗಳನ್ನ ಮೆಲುಕು ಹಾಕಿದ್ದಾರೆ. ಅದರಂತೆ ಮಾಜಿ ಸಿಎಂ, ಸಂಸದ ಬಸವರಾಜ್ ಬೊಮ್ಮಾಯಿ (Basavaraj bommai) ಸಹ ಸಿದ್ದರಾಮಯ್ಯ ಜೊತೆಗಿನ ಒಡನಾಟವನ್ನು ಮೆಲುಕು ಹಾಕಿದ್ದಾರೆ. ಸಿದ್ದರಾಮಯ್ಯ ಅವರು ನಾಲ್ಕು…

Read More