All posts by nagaraj11081993

ನೂತನ ಮುಖ್ಯಮಂತ್ರಿ ಪದಗ್ರಹಣ ಸಮಾರಂಭಕ್ಕೆ ಸಜ್ಜಾಗುತ್ತಿದೆ ವಿಧಾನಸೌಧ: ಹೇಗಿದೆ ಗೊತ್ತಾ ಸಿದ್ಧತೆ?

ಬೆಂಗಳೂರು, ಮೇ 29: ಕರ್ನಾಟಕದ ನೂತನ ಮುಖ್ಯಮಂತ್ರಿ ಪದಗ್ರಹಣ ಸಮಾರಂಭಕ್ಕೆ ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್‌ನಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ. ಅಧಿಕಾರಿಗಳಿಗೆ ಈಗಾಗಲೇ ಅಗತ್ಯ ಸೂಚನೆಗಳನ್ನು ನೀಡಲಾಗಿದ್ದು, ವೇದಿಕೆ ನಿರ್ಮಾಣ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಂತ್​​ ಕುಮಾರ್ ಸಿಂಗ್ ನೇತೃತ್ವದಲ್ಲಿ ಮಹತ್ವದ ಭದ್ರತಾ ಸಭೆ ನಡೆದಿದ್ದು, ಬಂದೋಬಸ್ತ್‌ಗೆ ವ್ಯಾಪಕ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿದ ಹಿನ್ನೆಲೆ, ನಾಳೆ ಸಂಜೆ 4 ಗಂಟೆಗೆ ಕಾಂಗ್ರೆಸ್​​ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ನೂತನ ಶಾಸಕಾಂಗ ಪಕ್ಷದ ನಾಯಕರ ಆಯ್ಕೆ ನಡೆಯಲಿದೆ. ಹೈಕಮಾಂಡ್ ಸೂಚನೆಯಂತೆ ಬಹುತೇಕ ಡಿ.ಕೆ. ಶಿವಕುಮಾರ್ ಅವರೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದ್ದು, ವಿಧಾನಸೌಧದ ಮುಂಭಾಗದಲ್ಲೇ ಪದಗ್ರಹಣ ಮಾಡಬೇಕು ಎಂಬುದು ಅವರ ಅಭಿಲಾಷೆಯಾಗಿದೆ. ಹೀಗಾಗಿ, ಪ್ರಮಾಣ ವಚನ ಸಮಾರಂಭಕ್ಕೆ ಬೇಕಾದ ಎಲ್ಲಾ ಪೂರ್ವ ಸಿದ್ಧತೆಗಳು ತೀವ್ರ ಗತಿಯಲ್ಲಿ ನಡೆಯುತ್ತಿವೆ ಎನ್ನಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಪ್ರಾಣಿ ಪ್ರಿಯರಿಗೆ ಗುಡ್​​ನ್ಯೂಸ್​​: ದಕ್ಷಿಣ ಆಫ್ರಿಕಾದ ಚೀತಾಗಳು ಬನ್ನೇರುಘಟ್ಟದಲ್ಲಿ ಜೂನ್ 4ರಿಂದ ವೀಕ್ಷಣೆಗೆ ಲಭ್ಯ

ಬೆಂಗಳೂರು, ಮೇ 29: ಪ್ರಾಣಿ ಪ್ರಿಯರಿಗೆ ಅರಣ್ಯ ಇಲಾಖೆ ಗುಡ್​​ನ್ಯೂಸ್​​ ನೀಡಿದ್ದು, ಕಳೆದ ತಿಂಗಳು ಬೆಂಗಳೂರಿಗೆ (Bengaluru) ತರಲಾಗಿದ್ದ ದಕ್ಷಿಣ ಆಫ್ರಿಕಾದ ನಾಲ್ಕು ಚೀತಾಗಳು ಜೂನ್ 4ರಿಂದ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗಲಿವೆ. ಚೀತಾಗಳು ಕಡ್ಡಾಯ ಕ್ವಾರಂಟೈನ್ ಅವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಅವುಗಳನ್ನು ವೀಕ್ಷಿಸಲು ಅನುವು ಮಾಡಿಕೊಡಲಾಗಿದೆ. ಚೀತಾಗಳ ಸಹಜ ಚುರುಕು ಚಲನವಲನಗಳಿಗೆ ಅನುಗುಣವಾಗಿ ವಿಶೇಷವಾಗಿ ವಿನ್ಯಾಸಗೊಳಿಸಿದ ಹೊಸ ಎನ್‌ಕ್ಲೋಸರ್‌ನಲ್ಲಿ ಅವುಗಳನ್ನು ಬಿಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಖ್ಯಾಂಶಗಳು

  • ಅರಣ್ಯ ಇಲಾಖೆಯಿಂದ ಪ್ರಾಣಿ ಪ್ರಿಯರಿಗೆ ಶುಭಸುದ್ದಿ
  • ಸಾರ್ವಜನಿಕರಿಗೆ ಆಫ್ರಿಕಾ ಚೀತಾಗಳ ವೀಕ್ಷಣೆಗೆ ಅವಕಾಶ
  • ಬನ್ನೇರುಘಟ್ಟದಲ್ಲಿ ಜೂನ್ 4ರಿಂದ ವೀಕ್ಷಣೆಗೆ ವ್ಯವಸ್ಥೆ

ದಕ್ಷಿಣ ಆಫ್ರಿಕಾದ ಇಂಡುನಾ ಪ್ರೈಮೇಟ್ ಮತ್ತು ಪ್ಯಾರಟ್ ಪಾರ್ಕ್‌ನಿಂದ ಬೆಂಗಳೂರಿಗೆ ಏಪ್ರಿಲ್​​ 18ರಂದು ಎರಡು ಗಂಡು ಹಾಗೂ ಎರಡು ಹೆಣ್ಣು ಸೇರಿ ನಾಲ್ಕು ಚೀತಾಗಳನ್ನು ಕರೆತರಲಾಗಿತ್ತು. ಪ್ರಾಣಿ ವಿನಿಮಯ ಕಾರ್ಯಕ್ರಮದಡಿ ಅವುಗಳನ್ನು ಸ್ಥಳಾಂತರಿಸಲಾಗಿತ್ತು. ಇವುಗಳನ್ನು ಭಾರತಕ್ಕೆ ಕರೆತರುವ ಮೊದಲು ದಕ್ಷಿಣ ಆಫ್ರಿಕಾದಲ್ಲೇ ಆರೋಗ್ಯ ತಪಾಸಣೆ ಹಾಗೂ ಕ್ವಾರಂಟೈನ್​​ ಮಾಡಲಾಗಿತ್ತು. ಬಳಿಕ ಬೆಂಗಳೂರಿಗೆ ಬಂದ ನಂತರವೂ 30 ದಿನಗಳಿಗಿಂತ ಹೆಚ್ಚು ಕಾಲ ಕಟ್ಟುನಿಟ್ಟಿನ ಕ್ವಾರಂಟೈನ್‌ನಲ್ಲಿ ಇವನ್ನು ಇಡಲಾಗಿದ್ದು, ಪಶುವೈದ್ಯರ ವಿಶೇಷ ತಂಡವು ಅವುಗಳ ಆರೋಗ್ಯ ಮತ್ತು ಪರಿಸರ ಹೊಂದಾಣಿಕೆಯನ್ನು 24 ಗಂಟೆಗಳ ಕಾಲ ಮೇಲ್ವಿಚಾರಣೆ ಮಾಡಿತ್ತು.

ಇದನ್ನೂ ಓದಿ: ಬನ್ನೇರುಘಟ್ಟಕ್ಕೆ ನಾಲ್ಕು ಆಫ್ರಿಕನ್ ಚೀತಾಗಳ ಎಂಟ್ರಿ! ವಿದೇಶಿ ಅತಿಥಿಗಳಿಗೆ ಸಚಿವ ಖಂಡ್ರೆ ಅದ್ದೂರಿ ಸ್ವಾಗತ!

ಕರ್ನಾಟಕದಲ್ಲಿ ‘ಶಿವಂಗಿ’ ಎಂದು ಕರೆಯಲ್ಪಡುತ್ತಿದ್ದ ಏಷ್ಯಾಟಿಕ್ ಚೀತಾಗಳು ಡೆಕ್ಕನ್ ಸಮತಟ್ಟು ಪ್ರದೇಶಗಳಲ್ಲಿ ಕಂಡುಬರುತ್ತಿದ್ದವು. ಆದರೆ ಅತಿಯಾದ ಬೇಟೆ ಮತ್ತು ವಾಸಸ್ಥಳ ನಾಶದಿಂದಾಗಿ ಅವು ನಾಮಾಶೇಷಾಗಿವೆ. ಭಾರತದಲ್ಲಿ ಏಷ್ಯಾಟಿಕ್ ಚೀತಾ ಸಂಪೂರ್ಣವಾಗಿ ಅಳಿದುಹೋಗಿದ್ದರೂ, ಇದೀಗ ಆಫ್ರಿಕನ್ ಚೀತಾಗಳನ್ನು ರಾಜ್ಯದ ಪ್ರಮುಖ ಜೈವಿಕ ಉದ್ಯಾನವನಲ್ಲಿ ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶ ನೀಡಿರೋದು ಪ್ರಾಣಿ ಪ್ರಿಯರ ಸಂತಸ ಹೆಚ್ಚಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 3:54 pm, Fri, 29 May 26

Source link

ಆನ್‌ಲೈನ್ ಗೇಮಿಂಗ್ ನಿಷೇಧಕ್ಕೆ ಬೊಮ್ಮಾಯಿ ಸರ್ಕಾರ ತಂದಿದ್ದ ಕಾನೂನು ಎತ್ತಿ ಹಿಡಿದ ಸುಪ್ರೀಂ

ಸುಪ್ರಿಂಕೋರ್ಟ್, ಬಸವರಾಜ್ ಬೊಮ್ಮಾಯಿ

ಬೆಂಗಳೂರು, (ಮೇ 29): ನನ್ನ ನೇತೃತ್ವದ ಬಿಜೆಪಿ ಸರ್ಕಾರದ (BJP Governmnet)  ಅವಧಿಯಲ್ಲಿ ಜಾರಿಗೆ ತಂದಿರುವ ಆನ್‌ಲೈನ್ ಗೇಮಿಂಗ್ (Online Gaming)  ನಿಷೇಧಿಸುವ ಕಾನೂನನ್ನು ಸುಪ್ರೀಂ ಕೋರ್ಟ್ (Supreme Court) ಎತ್ತಿ ಹಿಡಿದಿದ್ದು, ಆನ್‌ಲೈನ್ ಗೇಮಿಂಗ್ ತಡೆಯುವ ನಮ್ಮ ಉದ್ದೇಶಕ್ಕೆ ಜಯ ಸಿಕ್ಕಂತಾಗಿದ್ದು, ಸುಪ್ರೀಂ ಕೊರ್ಟ್‌ನ ಈ ಆದೇಶವನ್ನು ಸ್ವಾಗತಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ (Basavaraj bommai) ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಇಂದು ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಮೂರ್ತಿಗಳಾದ ಜೆಬಿ ಪರ್ಡಿವಾಲಾ ಮತ್ತು ಆರ್. ಮಹದೇವನ್ ಅವರ ಡಬಲ್ ಬೆಂಚ್ ನನ್ನ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕರ್ನಾಟಕ ಸರ್ಕಾರ ಆನ್‌ಲೈನ್ ಗ್ಯಾಂಬ್ಲಿಂಗ್ ವಿರುದ್ಧ ತಂದಿರುವ ಕಾನೂನನ್ನು ಎತ್ತಿ ಹಿಡಿದಿದ್ದಾರೆ. ನನ್ನ ಸರ್ಕಾರ ಇದ್ದಾಗ ಕರ್ನಾಟಕ ಪೊಲಿಸ್ ಅಮೆಂಡ್‌ಮೆಂಟ್ ಆಕ್ಟ್ 2021 ತಂದಿದ್ದು, ಅದರಲ್ಲಿ ಕನಾಟಕ ಪೊಲಿಸ್ ಆಕ್ಟ್ 1963ಗೆ ಹಲವಾರು ಬದಲಾವಣೆ ತಂದು ಗ್ಯಾಂಬ್ಲಿಂಗ್ ವ್ಯಾಖ್ಯಾನ ವಿಸ್ತರಣೆ ಮಾಡಿ ಆನ್‌ಲೈನ್‌ ಗೇಮಿಂಗ್‌ನ್ನು ಜಾಮೀನು ರಹಿತ ಅಪರಾಧ ಅಂತ ಕಾನೂನು ತಿದ್ದುಪಡಿ ತಂದು ಆನ್‌ಲೈನ್‌ಗೆ ಸಂಪೂರ್ಣ ಕಡಿವಾಣ ಹಾಕಲು ಕಾನೂನು ತಂದಿದ್ದೇವು. ಅದಕ್ಕೆ ಹೈಕೋರ್ಟ್ ತಡೆ ನೀಡಿತ್ತು. ಅದರ ವಿರುದ್ಧ ನಾವು ಸುಪ್ರೀಂ ಕೊರ್ಟ್‌ಗೆ ಹೋಗಿದ್ದೇವು. ಈಗ ಸುಪೀಂ ಕೋರ್ಟ್ ನಮ್ಮ ಕಾನೂನು ಮತ್ತು ತಮಿಳುನಾಡಿನ ಕಾನೂನು ಎತ್ತಿ ಹಿಡಿಯುವ ಮೂಲಕ ಆನ್‌ಲೈನ್ ಗೇಮಿನಿಂದ ಹಲವಾರು ಜನರು ಮತ್ತು ಬಡವರು ಆರ್ಥಿಕವಾಗಿ ನಷ್ಟ ಹೊಂದಿ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆಯುವ ಉದ್ದೇಶಕ್ಕೆ ಜಯ ಸಿಕ್ಕಿದೆ.

ಇದನ್ನೂ ಓದಿ: ಆನ್​ಲೈನ್​ ಬೆಟ್ಟಿಂಗ್​, ಗ್ಯಾಂಬ್ಲಿಂಗ್​ಗೆ ಕಡಿವಾಣ ಹಾಕಲು ಮುಂದಾದ ಸರ್ಕಾರ: ಬರಲಿದೆ ಹೊಸ ಕಾನೂನು

ಸುಪ್ರೀಂ ಕೋರ್ಟ್ ಆದೇಶವನ್ನು ಸ್ವಾಗತ ಮಾಡುತ್ತೇನೆ. ಈಗಿರುವ ಕರ್ನಾಟಕ ಸರ್ಕಾರ ಇದನ್ನು ಅತ್ಯಂತ ಕಟ್ಟುನಿಟ್ಟಾಗಿ ಜಾರಿ ಮಾಡಬೇಕು. ಆನ್‌ಲೈನ್ ಗೆಮಿಂಗ್ ತಡೆಗಟ್ಟಿ ಹಲವಾರು ಸಂಸಾರಗಳು ತೊಂದರೆಗೆ ಒಳಗಾಗುವುದನ್ನು ತಪ್ಪಿಸಬೇಕು ಎಂದು ಆಗ್ರಹಿಸುತ್ತೇನೆ ಎಂದು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸಿಕ್ಸರ್‌ಗಳ ಮಳೆಗರೆಯುವ ವೈಭವ್ ವಿರುದ್ಧ ಮೇಡನ್ ಓವರ್ ಎಸೆದ ಬೌಲರ್ ಯಾರು ಗೊತ್ತಾ?

2026 ರ ಐಪಿಎಲ್‌ನಲ್ಲಿ ವೈಭವ್ ಸೂರ್ಯವಂಶಿ ಎಂಬ ಬಿರುಗಾಳಿಯನ್ನು ಕಟ್ಟಿಹಾಕುವುದೇ ಎದುರಾಳಿ ತಂಡದ ಬೌಲರ್​ಗಳ ದೊಡ್ಡ ಸವಾಲಾಗಿದೆ. ಪಂದ್ಯದಿಂದ ಪಂದ್ಯಕ್ಕೆ ಉಗ್ರರೂಪಿಯಾಗುತ್ತಿರುವ ವೈಭವ್ ಏಕಾಂಗಿಯಾಗಿ ನಿಂತು ತಂಡಕ್ಕೆ ಗೆಲುವು ತಂದುಕೊಡುತ್ತಿದ್ದಾರೆ. ಇದರ ಪರಿಣಾಮವಾಗಿಯೇ ರಾಜಸ್ಥಾನ್ ರಾಯಲ್ಸ್ ತಂಡ ಇಂದು ಕ್ವಾಲಿಫೈಯರ್ 2 ಆಡಲು ಸಿದ್ಧವಾಗಿದೆ. ಗುಜರಾತ್ ವಿರುದ್ಧದ ಇಂದಿನ ಪಂದ್ಯದಲ್ಲಿ ರಾಜಸ್ಥಾನ್ ಗೆದ್ದರೆ ನೇರವಾಗಿ ಫೈನಲ್​ ಆಡಲಿದೆ. ಅದು ಸಾಧ್ಯವಾಗಬೇಕಾದರೆ ವೈಭವ್ ಸೂರ್ಯವಂಶಿ ಮತ್ತೊಮ್ಮೆ ಸ್ಫೋಟಕ ಇನ್ನಿಂಗ್ಸ್ ಆಡಬೇಕಾಗುತ್ತದೆ. ಆದರೆ ಅದಕ್ಕೂ ಮುನ್ನ ಮೊದಲ ಎಸೆತದಿಂದಲೇ ಸಿಕ್ಸರ್​ಗಳ ಮಳೆ ಸುರಿಸಲು ನೋಡುವ ವೈಭವ್​ಗೆ ಒಂದು ಓವರ್​ನಲ್ಲಿ ಒಂದೇ ಒಂದು ಸಿಕ್ಸರ್ ಇರಲಿ, ಒಂದೇ ಒಂದು ರನ್ ಕೂಡ ನೀಡದ ಬೌಲರ್​ ಬಗ್ಗೆ ತಿಳಿಯೋಣ.

11 ಎಸೆತಗಳಲ್ಲಿ 8 ರನ್ ಬಾರಿಸಿದ್ದ ವೈಭವ್

ವಾಸ್ತವವಾಗಿ ಏಪ್ರಿಲ್ 22 ರಂದು ನಡೆದಿದ್ದ ರಾಜಸ್ಥಾನ್ ರಾಯಲ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ನಡುವೆ 32ನೇ ಲೀಗ್ ಪಂದ್ಯ ನಡೆದಿತ್ತು. ಅಂದಿನ ಪಂದ್ಯದಲ್ಲಿ ರಾಜಸ್ಥಾನ್ ಗೆಲುವು ಸಾಧಿಸಿತ್ತಾದರೂ, ವೈಭವ್ ಸೂರ್ಯವಂಶಿಗೆ ಒಂದಂಕಿ ದಾಟಲು ಸಾಧ್ಯವಾಗಿರಲಿಲ್ಲ. ಆ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ರಾಜಸ್ಥಾನ್​ಗೆ ಕೇವಲ 159 ರನ್ ಕಲೆಹಾಕಲಷ್ಟೇ ಸಾಧ್ಯವಾಯಿತು. ಆ ಪಂದ್ಯದಲ್ಲೂ ಆರಂಭಿಕನಾಗಿ ಆಡಿದ್ದ ವೈಭವ್ 11 ಎಸೆತಗಳನ್ನು ಎದುರಿಸಿ ಕೇವಲ 8 ರನ್ ಬಾರಿಸಿ ಔಟಾಗಿದ್ದರು. ವೈಭವ್ ಅವರ ಈ ರನ್ ಬರಕ್ಕೆ ಕಾರಣವಾಗಿದ್ದ ಲಕ್ನೋ ತಂಡದ ವೇಗಿ ಮೊಹ್ಸಿನ್ ಖಾನ್.

ಮೇಡನ್ ಓವರ್ ಎಸೆದಿದ್ದ ಮೊಹ್ಸಿನ್

ರಾಜಸ್ಥಾನ್ ಇನ್ನಿಂಗ್ಸ್​ನ 4ನೇ ಓವರ್ ಬೌಲ್ ಮಾಡುವ ಜವಾಬ್ದಾರಿ ಮೊಹ್ಸಿನ್ ಖಾನ್​ಗೆ ನೀಡಲಾಯಿತು. ಆ ಓವರ್​ನಲ್ಲಿ ಸ್ಟ್ರೈಕ್​ನಲ್ಲಿ ಇದ್ದದ್ದು ವೈಭವ್ ಸೂರ್ಯವಂಶಿ. ಆ ಹೊತ್ತಿಗೆ ವೈಭವ್ 5 ಎಸೆತಗಳನ್ನು ಎದುರಿಸಿ 8 ರನ್ ಬಾರಿಸಿದ್ದರು. ಇದರಲ್ಲಿ 2 ಬೌಂಡರಿಗಳು ಸೇರಿದ್ದವು. ಹೀಗಾಗಿ ರನ್ ಗಳಿಸಬೇಕಾದ ಒತ್ತಡ ವೈಭವ್ ಮೇಲಿತ್ತು. ಆದರೆ ಇದಕ್ಕೆ ಮೊಹ್ಸಿನ್ ಖಾನ್ ಅವಕಾಶ ಮಾಡಿಕೊಡಲಿಲ್ಲ.

ಮೊಹ್ಸಿನ್ ಖಾನ್ ಎಸೆತದ 4ನೇ ಓವರ್​ನಲ್ಲಿ ವೈಭವ್​ಗೆ ಒಂದೇ ಒಂದು ರನ್ ಬಾರಿಸಲು ಸಾಧ್ಯವಾಗಲಿಲ್ಲ. ಈ ಓವರ್​ನ 6 ಎಸೆತಗಳನ್ನು ವೈಭವ್ ಎದುರಿಸಿದರು. ಇದರಲ್ಲಿ ಮೊದಲ ಐದು ಎಸೆತಗಳಲ್ಲಿ ವೈಭವ್ ದೊಡ್ಡ ಹೊಡೆತಕ್ಕೆ ಕೈ ಹಾಕಿದರಾದರೂ ಅದರಲ್ಲಿ ಯಶಸ್ವಿಯಾಗಲಿಲ್ಲ. ಹೀಗಾಗಿ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಲು ಯತ್ನಿಸಿದ ವೈಭವ್ ಕವರ್ಸ್​ ದಿಕ್ಕಿನಲ್ಲಿ ದಿಗ್ವೇಶ್ ರಾಠಿಗೆ ಕ್ಯಾಚಿತ್ತು ನಿರ್ಗಮಿಸಿದರು. ಅಂದರೆ ಮೊಹ್ಸಿನ್ ಖಾನ್ ಮೇಡನ್ ಓವರ್ ಬೌಲ್ ಮಾಡುವುದರ ಜೊತೆಗೆ ವೈಭವ್ ಅವರ ವಿಕೆಟ್ ಕೂಡ ಉರುಳಿಸಿದರು. ಈ ಮೂಲಕ ಈ ಬಾರಿಯ ಐಪಿಎಲ್‌ನಲ್ಲಿ ವೈಭವ್ ಸೂರ್ಯವಂಶಿ ಎದುರು ಮೇಡನ್ ಓವರ್ ಬೌಲ್ ಮಾಡಿ ವಿಕೆಟ್ ಉರುಳಿಸಿದ ಏಕೈಕ ವೇಗಿ ಎಂಬ ದಾಖಲೆ ಮೊಹ್ಸಿನ್ ಖಾನ್ ಹೆಸರಿನಲ್ಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿಪಕ್ಷ ಬಿಜೆಪಿಯ ಸಮೀಕರಣ ಬದಲಿಸಲಿದ್ಯಾ ಸಿದ್ದರಾಮಯ್ಯ ರಾಜೀನಾಮೆ?: ಹೀಗೊಂದು ಲೆಕ್ಕಾಚಾರ

ವಿಪಕ್ಷ ಬಿಜೆಪಿಯ ಸಮೀಕರಣ ಬದಲಿಸಲಿದ್ಯಾ ಸಿದ್ಧರಾಮಯ್ಯ ರಾಜೀನಾಮೆ?Image Credit source: PTI

ಬೆಂಗಳೂರು, ಮೇ 29: ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ (Siddaramaiah) ರಾಜೀನಾಮೆ ನೀಡಿರೋದು ರಾಜ್ಯ ರಾಜಕಾರಣದಲ್ಲಿ ಹತ್ತು ಹಲವು ಬದಲಾವಣೆಗಳಿಗೆ ನಾಂದಿ ಹಾಡಿದೆ. ನೂತನ ಮುಖ್ಯಮಂತ್ರಿಯ ಆಯ್ಕೆ, ಸಚಿವ ಸಂಪುಟ ಹೀಗೆ ನಾನಾ ಚರ್ಚೆಗಳಲ್ಲಿ ಕಾಂಗ್ರೆಸ್​​ ಹೈಕಮಾಂಡ್​​ ಇದ್ದರೆ ಇತ್ತ ಬಿಜೆಪಿ ಕೂಡ ತನ್ನದೇ ಆದ ತಂತ್ರ ಹೆಣೆಯಲು ಸಿದ್ಧತೆ ನಡೆಸಿದೆ. ಸಿದ್ದರಾಮಯ್ಯ ರಾಜೀನಾಮೆ ರಾಜ್ಯ ಬಿಜೆಪಿಯಲ್ಲಿನ ರಾಜಕೀಯ ಲೆಕ್ಕಾಚಾರ ಬದಲು ಮಾಡುವ ಸಾಧ್ಯತೆ ಇದ್ದು, ಜಾತಿ ಸಮೀಕರಣದ ಆಧಾರದಲ್ಲಿ ಕೆಲ ನಿರ್ಧಾರಗಳು ಹೊರಬರುವ ಸಾಧ್ಯತೆ ಬಗ್ಗೆ ಅಂದಾಜಿಸಲಾಗಿದೆ.

ಮುಖ್ಯಾಂಶಗಳು

  • ಸಿದ್ದರಾಮಯ್ಯ ರಾಜೀನಾಮೆ ಬೆನ್ನಲ್ಲೇ ಬಿಜೆಪಿ ಅಲರ್ಟ್​​
  • ಡಿಕೆಶಿ ಸಿಎಂ ಆದ್ರೆ ಭಾಜಪಾದಲ್ಲಿಯೂ ಬದಲಾವಣೆ ಫಿಕ್ಸ್​​?
  • ಜಾತಿ ಸಮೀಕರಣದಲ್ಲಿ ನಾಯಕತ್ವ ಹಂಚಿಕೆ ಬಗ್ಗೆ ಚಿಂತನೆ

ಇನ್ನು ಸಿದ್ದರಾಮಯ್ಯನವರ ರಾಜೀನಾಮೆ ಹಿನ್ನೆಲೆ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್​​ ನೇಮಕ ಬಹುತೇಕ ಕನ್ಫರ್ಮ್​​ ಆಗಿದೆ. ಹೀಗಾದಲ್ಲಿ ಸಿಎಂ ಮತ್ತು ವಿಪಕ್ಷ ನಾಯಕ ಇಬ್ಬರೂ ಒಂದೇ ಸಮುದಾಯದವರಾಗಲಿದ್ದಾರೆ. ಡಿ.ಕೆ.ಶಿವಕುಮಾರ್ ಮತ್ತು ಆರ್​​.ಅಶೋಕ್ ಒಕ್ಕಲಿಗ ಸಮುದಾಯಕ್ಕೆ ಸೇರಿರುವ ಕಾರಣ, ಕಾಂಗ್ರೆಸ್​ನಲ್ಲಿ ಅಧಿಕಾರ ಬದಲಾಗುತ್ತಿದ್ದಂತೆ ರಾಜ್ಯ ಬಿಜೆಪಿಯಲ್ಲಿ ಜಾತಿ ಸಮೀಕರಣ ನಡೆಯುವ ಸಾಧ್ಯತೆ ಇದೆ. ಲಿಂಗಾಯತ, ಒಕ್ಕಲಿಗ, ದಲಿತ ಸಮೀಕರಣದಲ್ಲಿ ನಾಯಕತ್ವ ಹಂಚಿಕೆ ಆಗಬಹುದೆಂಬ ಸುಳಿವು ಸಿಕ್ಕಿದೆ.

ಇದನ್ನೂ ಓದಿ:

ಒಬಿಸಿ, ಕುರುಬ ಸಮುದಾಯ ಫೋಕಸ್​​

ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ನಾಯಕರ ಕೊರತೆ ಎದುರಿಸುತ್ತಿರವ ಕಾರಣ ಒಬಿಸಿ ಮತ್ತು ಕುರುಬ ಸಮುದಾಯ ಫೋಕಸ್​ಗೆ ಬಿಜೆಪಿ ಮುಂದಾಗುವ ಸಾಧ್ಯತೆ ಇದೆ. 63 ಬಿಜೆಪಿ ಶಾಸಕರಲ್ಲಿ ಕೇವಲ 13 ಮಂದಿ ಒಬಿಸಿ ಸಮುದಾಯದವರಿದ್ದರೆ, 36 ಶಾಸಕರು ಮೇಲ್ವರ್ಗಕ್ಕೆ ಸೇರಿದವರು. ಆ ಪೈಕಿ 19 ಲಿಂಗಾಯತ, 11 ಒಕ್ಕಲಿಗ, 6 ಬ್ರಾಹ್ಮಣ ಶಾಸಕರನ್ನು ಬಿಜೆಪಿ ಹೊಂದಿದೆ. ರಾಜ್ಯದಲ್ಲಿ ಕುರುಬ ಸಮುದಾಯ ಮತಗಳು ಶೇ.7ರಿಂದ ಶೇ.8ರಷ್ಟಿದ್ದು, ಈಶ್ವರಪ್ಪ ಪಕ್ಷ ತ್ಯಜಿಸಿದ ಬಳಿಕ ಬಿಜೆಪಿಯಲ್ಲಿ ಕುರುಬ ನಾಯಕರ ಕೊರತೆ ಎದುರಾಗಿದೆ. ಭೈರತಿರನ್ನು ಲಾಂಚ್ ಮಾಡುವ ಪ್ರಯತ್ನದಲ್ಲಿ ಬಿಜೆಪಿ ಇತ್ತಾದರೂ ಆ ಕಾರ್ಯಕದಲ್ಲಿ ಬಿಜೆಪಿ ವಿಫಲವಾಗಿದೆ. ಹೀಗಾಗಿ ಸದ್ಯ ಲಿಂಗಾಯತ, ಒಕ್ಕಲಿಗ ಮತ್ತು ದಲಿತ ಸಮೀಕರಣದಲ್ಲಿ ನಾಯಕತ್ವ ಹಂಚಿಕೆ ಬಗ್ಗೆ ಚಿಂತನೆ ನಡೆದಿದೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 3:17 pm, Fri, 29 May 26

Source link

ನೋಟು ಹಾಳಾಗುವ ಭಯ ಬೇಡ; ಕಾಗದದ ಬದಲು ಪಾಲಿಮರ್ ನೋಟು ಮುದ್ರಿಸಲು ಸರ್ಕಾರದ ಆಲೋಚನೆ

ನವದೆಹಲಿ, ಮೇ 29: ಭಾರತೀಯ ರಿಸರ್ವ್ ಬ್ಯಾಂಕ್ (RBI) ದೇಶದಲ್ಲಿ ಚಾಲ್ತಿಯಲ್ಲಿರುವ ಸಾಂಪ್ರದಾಯಿಕ ಕಾಗದದ ನೋಟುಗಳ ಬದಲಿಗೆ ಪ್ಲಾಸ್ಟಿಕ್ ಅಥವಾ ಪಾಲಿಮರ್ ಬ್ಯಾಂಕ್‌ನೋಟುಗಳನ್ನು (Polymer Banknotes) ಪರಿಚಯಿಸಲು ಗಂಭೀರ ಚಿಂತನೆ ನಡೆಸಿದೆ. ನೋಟು ಮುದ್ರಣದ ವೆಚ್ಚವನ್ನು ಕಡಿಮೆ ಮಾಡುವುದು ಮತ್ತು ನಕಲಿ ನೋಟುಗಳ ಹಾವಳಿಗೆ ಬ್ರೇಕ್ ಹಾಕುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಆರಂಭದಲ್ಲಿ ದೇಶದ ಐದು ಆಯ್ದ ನಗರಗಳಲ್ಲಿ (ವಿವಿಧ ಹವಾಮಾನ ವಲಯಗಳನ್ನು ಆಧರಿಸಿ) ₹10 ಮುಖಬೆಲೆಯ ಪಾಲಿಮರ್ ನೋಟುಗಳನ್ನು ಪ್ರಾಯೋಗಿಕವಾಗಿ (Pilot Project) ಚಲಾವಣೆಗೆ ತರಲು ಸಿದ್ಧತೆಗಳು ನಡೆದಿವೆ.

ಕಾಗದದ ನೋಟುಗಳನ್ನು ಮುದ್ರಿಸಲು ಸರ್ಕಾರಕ್ಕೆ ಸಾಕಷ್ಟು ವೆಚ್ಚವಾಗುತ್ತದೆ. ಆರ್​ಬಿಐ ದತ್ತಾಂಶದ ಪ್ರಕಾರ 2023-24ರಲ್ಲಿ ನೋಟುಗಳ ಮುದ್ರಣಕ್ಕೆ 5,101.4 ಕೋಟಿ ರೂ ವೆಚ್ಚವಾಗಿತ್ತು. 2024-25ರಲ್ಲಿ ಇದು 6,372.8 ಕೋಟಿ ರೂಗೆ ಏರಿತ್ತು. ಪಾಲಿಮರ್​ನಿಂದ ನೋಟು ತಯಾರಿಸುವುದರಿಂದ ಸಾಕಷ್ಟು ಹಣ ಉಳಿಸಬಹುದು. ಇದರ ಜೊತೆಗೆ ಇನ್ನೂ ಹಲವು ರೀತಿಯ ಅನುಕೂಲಗಳನ್ನು ಪ್ಲಾಸ್ಟಿಕ್ ನೋಟುಗಳು ಒದಗಿಸುತ್ತವೆ.

ಇದನ್ನೂ ಓದಿ: ಭಾರತಕ್ಕೆ ಬರಲಿದೆ ಅತ್ಯಾಧುನಿಕ ಸಬ್‌ಸ್ಟ್ರೇಟ್ ತಂತ್ರಜ್ಞಾನ: ಒಡಿಶಾ ಸರ್ಕಾರ, ಇಂಟೆಲ್ ಮತ್ತು 3DGS ಒಪ್ಪಂದಕ್ಕೆ ಅಶ್ವಿನಿ ವೈಷ್ಣವ್ ಶ್ಲಾಘನೆ

ಕಾಗದದ ನೋಟುಗಳಿಗಿಂತ ಪಾಲಿಮರ್ ನೋಟುಗಳು ಹೇಗೆ ಉತ್ತಮ?

  • ದೀರ್ಘ ಬಾಳಿಕೆ: ಭಾರತದಲ್ಲಿ ಕಾಗದದ ನೋಟುಗಳ ಸರಾಸರಿ ಆಯಸ್ಸು ತುಂಬಾ ಕಡಿಮೆ. ಆದರೆ ಪ್ಲಾಸ್ಟಿಕ್ ನೋಟುಗಳು ಕಾಗದದ ನೋಟುಗಳಿಗಿಂತ ಕನಿಷ್ಠ 2 ರಿಂದ 4 ಪಟ್ಟು ಹೆಚ್ಚು ದಿನ ಬಾಳಿಕೆ (Durability) ಬರುತ್ತವೆ. ಇವುಗಳನ್ನು ಸುಲಭವಾಗಿ ಹರಿಯಲು ಅಥವಾ ಮಡಚಲು ಸಾಧ್ಯವಿಲ್ಲ.
  • ವಾಟರ್​ಪ್ರೂಫ್ ಮತ್ತು ಸ್ವಚ್ಛ: ಪಾಲಿಮರ್ ನೋಟುಗಳು ಸಂಪೂರ್ಣವಾಗಿ ಜಲನಿರೋಧಕ (Waterproof) ಆಗಿರುತ್ತವೆ. ಆಕಸ್ಮಿಕವಾಗಿ ಬಟ್ಟೆ ಒಗೆಯುವಾಗ ಜೇಬಿನಲ್ಲಿ ಉಳಿದರೂ ಇವು ಹಾಳಾಗುವುದಿಲ್ಲ. ಇವುಗಳ ಮೇಲ್ಮೈ ನಯವಾಗಿರುವುದರಿಂದ ಕೊಳಕು, ಎಣ್ಣೆ ಅಥವಾ ಬೆವರು ಇವುಗಳಿಗೆ ಅಂಟಿಕೊಳ್ಳುವುದಿಲ್ಲ. ಹೀಗಾಗಿ ಇವು ಕಾಗದದ ನೋಟುಗಳಿಗಿಂತ ಹೆಚ್ಚು ಸ್ವಚ್ಛವಾಗಿರುತ್ತವೆ.
  • ನಕಲಿ ನೋಟು ತಡೆ: ಪ್ಲಾಸ್ಟಿಕ್ ನೋಟುಗಳನ್ನು ನಕಲು ಮಾಡುವುದು (Counterfeit) ಅತ್ಯಂತ ಕಷ್ಟಕರ. ಇದರಲ್ಲಿ ಪಾರದರ್ಶಕ ವಿಂಡೋಗಳು (Transparent Windows), ಅಡಗಿದ ಅಕ್ಷರಗಳು ಮತ್ತು ಅತ್ಯಾಧುನಿಕ ಮೆಟಾಮೆರಿಕ್ ಶಾಯಿಗಳನ್ನು (Metameric Inks) ಬಳಸಲಾಗುವುದರಿಂದ ಸುರಕ್ಷತೆ ಹೆಚ್ಚಾಗಿರುತ್ತದೆ.
  • ಪರಿಸರ ಸ್ನೇಹಿ: ಈ ನೋಟುಗಳು ಹಳೆಯದಾದಾಗ ಅಥವಾ ಚಲಾವಣೆಯಿಂದ ಹೊರಗುಳಿದಾಗ ಇವುಗಳನ್ನು ಕರಗಿಸಿ ಮರುಬಳಕೆ (Recycle) ಮಾಡಬಹುದು. ಇದರಿಂದ ಪ್ಲಾಸ್ಟಿಕ್ ಬಕೆಟ್ ಅಥವಾ ಮಗ್‌ಗಳಂತಹ ಇತರ ವಸ್ತುಗಳನ್ನು ತಯಾರಿಸಬಹುದು. ಇವುಗಳ ಸಂಪೂರ್ಣ ಜೀವಿತಾವಧಿಯಲ್ಲಿ ಹಸಿರುಮನೆ ಅನಿಲಗಳ (Greenhouse Gases) ಹೊರಸೂಸುವಿಕೆ ಕಡಿಮೆಯಿರುತ್ತದೆ. ಈ ಮೂಲಕ ಪ್ಲಾಸ್ಟಿಕ್ ನೋಟುಗಳು ಪರಿಸರಸ್ನೇಹಿ (Eco-Friendly) ಕೂಡ ಹೌದು.
  • ಎಟಿಎಂ ಯಂತ್ರಗಳಿಗೆ ಸೂಕ್ತ: ಪ್ಲಾಸ್ಟಿಕ್ ನೋಟುಗಳು ಎಟಿಎಂ (ATM) ಮತ್ತು ನೋಟು ಎಣಿಕೆ ಯಂತ್ರಗಳಲ್ಲಿ ಅತ್ಯಂತ ಸುಗಮವಾಗಿ ಕಾರ್ಯನಿರ್ವಹಿಸುತ್ತವೆ. ಇವು ಹರಿದು ಯಂತ್ರಗಳಲ್ಲಿ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆ ಇರುವುದಿಲ್ಲ.

ಇದನ್ನೂ ಓದಿ: ಶೇರುಗಳಂತೆ ರಿಯಲ್ ಎಸ್ಟೇಟ್ ಆಸ್ತಿಯಲ್ಲಿ ಪಾಲು ಖರೀದಿಸಿ… ಇದು REITs ಮತ್ತು InvITs ಕೊಡುವ ಅವಕಾಶ

ಯಾವೆಲ್ಲಾ ದೇಶಗಳಲ್ಲಿ ಪ್ಲಾಸ್ಟಿಕ್ ನೋಟುಗಳಿವೆ?

ವಿಶ್ವದಲ್ಲೇ ಮೊದಲ ಬಾರಿಗೆ 1988 ರಲ್ಲಿ ಆಸ್ಟ್ರೇಲಿಯಾ ದೇಶವು ಪಾಲಿಮರ್ ನೋಟುಗಳನ್ನು ಪರಿಚಯಿಸಿತು. ಪ್ರಸ್ತುತ ಬ್ರಿಟನ್ (UK), ಕೆನಡಾ, ನ್ಯೂಜಿಲೆಂಡ್, ರೊಮೇನಿಯಾ, ವಿಯೆಟ್ನಾಂ ಮತ್ತು ಮಾಲ್ಡೀವ್ಸ್ ಸೇರಿದಂತೆ 20 ಕ್ಕೂ ಹೆಚ್ಚು ದೇಶಗಳು ಸಂಪೂರ್ಣವಾಗಿ ಅಥವಾ ಭಾಗಶಃ ಪ್ಲಾಸ್ಟಿಕ್ ಕರೆನ್ಸಿಯನ್ನು ಬಳಸುತ್ತಿವೆ.

ಭಾರತದಲ್ಲಿರುವ ಸವಾಲುಗಳೇನು?

ಭಾರತದಂತಹ ವೈವಿಧ್ಯಮಯ ಹವಾಮಾನ ಮತ್ತು ಅತಿ ಹೆಚ್ಚು ತಾಪಮಾನ ಹೊಂದಿರುವ ದೇಶದಲ್ಲಿ ಪ್ಲಾಸ್ಟಿಕ್ ನೋಟುಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದು ಪ್ರಮುಖ ಸವಾಲಾಗಿದೆ. ಅತಿಯಾದ ಉಷ್ಣಾಂಶಕ್ಕೆ ಇವು ಹಾನಿಗೊಳಗಾಗದಂತೆ ತಡೆಯಲು ಆರ್‌ಬಿಐ ದೀರ್ಘಾವಧಿಯ ಸಂಶೋಧನೆಗಳನ್ನು ನಡೆಸುತ್ತಿದೆ. ಮೊದಲ ಹಂತದ ಪ್ರಾಯೋಗಿಕ ಪರೀಕ್ಷೆಯು ಯಶಸ್ವಿಯಾದರೆ, ಮುಂದಿನ ದಿನಗಳಲ್ಲಿ ಭಾರತೀಯರ ಕೈಯಲ್ಲೂ ಪ್ಲಾಸ್ಟಿಕ್ ರೂಪಾಯಿ ನೋಟುಗಳು ಓಡಾಡಲಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

‘ಎತೊ ಕ ನಾಯ್’: ಜೆನ್ ಜಿ ಪ್ರೇಕ್ಷಕರಿಗಾಗಿ ಹೊಸ ಸಿನಿಮಾ ಘೋಷಿಸಿದ ‘ಹೊಂಬಾಳೆ ಫಿಲ್ಮ್ಸ್’

‘ಕೆಜಿಎಫ್’, ‘ಸಲಾರ್’ ರೀತಿಯ ಕಮರ್ಷಿಯಲ್ ಬ್ಲಾಕ್‌ಬಸ್ಟರ್‌ಗಳು, ನಮ್ಮ ಮಣ್ಣಿನ ಸೊಗಡಿನ ‘ಕಾಂತಾರ’ ಹಾಗೂ ಭವ್ಯ ಅನಿಮೇಷನ್ ಲೋಕದ ‘ಮಹಾವತಾರ ನರಸಿಂಹ’ ಚಿತ್ರಗಳ ಮೂಲಕ ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ ಬರೆದಿರುವ ಹೆಮ್ಮೆಯ ನಿರ್ಮಾಣ ಸಂಸ್ಥೆ ‘ಹೊಂಬಾಳೆ ಫಿಲ್ಮ್ಸ್’ (Hombale Films) ಈಗ ಮತ್ತೊಂದು ವಿಭಿನ್ನ ಪ್ರಯೋಗಕ್ಕೆ ಕೈಹಾಕಿದೆ. ಸದಾ ಹೊಸತನಕ್ಕೆ ಒತ್ತು ನೀಡುವ ಈ ಸಂಸ್ಥೆ, ಇದೀಗ ಇಂದಿನ ಯುವ ಪೀಳಿಗೆ ಹಾಗೂ ‘ಜೆನ್ ಜಿ’ (Gen Z) ಪ್ರೇಕ್ಷಕರನ್ನು ಸೆಳೆಯಲು ಸಂಪೂರ್ಣ ಕಂಟೆಂಟ್ ಆಧಾರಿತ ಹಿಪ್-ಹಾಪ್ ಮ್ಯೂಸಿಕಲ್ ಕಥಾಹಂದರ ಹೊಂದಿರುವ ‘ಎತೊ ಕ ನಾಯ್’ (Yeto Ka Naay) ಸಿನಿಮಾವನ್ನು ಘೋಷಿಸಿದೆ.

ಸಂಪೂರ್ಣವಾಗಿ ಮುಂಬೈ ನಗರದ ಹಿನ್ನೆಲೆಯಲ್ಲಿ ಮೂಡಿಬರಲಿರುವ ಈ ಚಿತ್ರದ ಹಿಂದಿ ಅವತರಣಿಕೆಯನ್ನು ‘ವೈಕೆಎನ್ ಪೆಹಲಾ ವಾರ್’ ಹೆಸರಿನಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದೆ. ಇದು ಭಾರತೀಯ ಸಿನಿಮಾ ರಂಗದಲ್ಲಿ ಹೊಸದೊಂದು ಸಂಗೀತದ ಜರ್ನಿಗೆ ಮುನ್ನುಡಿ ಬರೆಯಲಿದೆ ಎಂದು ನಿರೀಕ್ಷಿಸಲಾಗಿದೆ. ತಾಂತ್ರಿಕ ತಂಡದ ಬಗ್ಗೆಯೂ ಮಾಹಿತಿ ಸಿಕ್ಕಿದೆ.

ಈ ಸಿನಿಮಾಗೆ ವಿಜಯ್ ಕಿರಗಂದೂರು ಅವರು ಬಂಡವಾಳ ಹೂಡುತ್ತಿದ್ದಾರೆ. ಸಾರಂಗ್ ಸಂಜೀವ್ ಸಾಠಾಯೆ ಅವರು ನಿರ್ದೇಶನ ಮಾಡುತ್ತಿದ್ದಾರೆ. ಸಾರಂಗ್ ಸಾಠಾಯೆ, ಸುಜಯ್ ಜಾಧವ್, ಸೃಷ್ಟಿ ತಾವಡೆ ಮತ್ತು ಶ್ರೇಯಸ್ ಸಾಗ್ವೇಕರ್ ಅವರು ಚಿತ್ರಕಥೆ ಬರೆದಿದ್ದಾರೆ. ಎ.ವಿ. ಪ್ರಫುಲ್ಲಚಂದ್ರ ಅವರ ಸಂಗೀತ, ಹರ್ಷವೀರ್ ಒಬೆರಾಯ್ ಅವರ ಛಾಯಾಗ್ರಹಣ ಈ ಚಿತ್ರಕ್ಕೆ ಇರಲಿದೆ.

‘ಎತೊ ಕ ನಾಯ್’ ಮೋಷನ್ ಪೋಸ್ಟರ್:

ಸದ್ಯಕ್ಕೆ ಮುಂಬೈನಲ್ಲಿ ಈ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಇದೇ ವರ್ಷದ ಅಂತ್ಯದೊಳಗೆ ಸಿನಿಮಾವನ್ನು ಬೆಳ್ಳಿತೆರೆಗೆ ತರಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ನಿರ್ಮಾಣ ಸಂಸ್ಥೆಯ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮೋಷನ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಸಿನಿಮಾದ ಶೀರ್ಷಿಕೆಯನ್ನು ಅನಾವರಣ ಮಾಡಲಾಗಿದೆ.

ಇದನ್ನೂ ಓದಿ: ‘ದೇವಿ‌ ಮಹಾತ್ಮೆ’ ಸಿನಿಮಾದ ಆಡಿಯೋ ರೈಟ್ಸ್ ಖರೀದಿಸಿದ ‘ಹೊಂಬಾಳೆ ಮ್ಯೂಸಿಕ್’

ಈ ಹೊಸ ಸಿನಿಮಾದ ಘೋಷಣೆಯ ಬೆನ್ನಲ್ಲೇ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ಆಂತರಿಕ ಮೂಲಗಳಿಂದ ಮಹತ್ವದ ಮಾಹಿತಿಯೊಂದು ಲಭ್ಯವಾಗಿದೆ. ಸದ್ಯ ಸಂಸ್ಥೆಯು ಕನ್ನಡದ ವೈವಿಧ್ಯಮಯ ಹಾಗೂ ವಿಭಿನ್ನ ಕಥಾಹಂದರಗಳನ್ನು ಸತತವಾಗಿ ಆಲಿಸುತ್ತಿದೆ. ಸ್ಯಾಂಡಲ್‌ವುಡ್‌ನಲ್ಲಿ ಶೀಘ್ರದಲ್ಲೇ ಕಂಟೆಂಟ್ ಆಧಾರಿತ ವಿಶಿಷ್ಟ ಕನ್ನಡ ಚಿತ್ರಗಳನ್ನು ಪ್ರಕಟಿಸಲು ಸಂಸ್ಥೆಯು ಯೋಜಿಸುತ್ತಿದ್ದು, ಕನ್ನಡಿಗರಿಗೆ ಮತ್ತಷ್ಟು ಉನ್ನತ ಗುಣಮಟ್ಟದ ಸಿನಿಮಾಗಳನ್ನು ನೀಡಲು ಹೊಂಬಾಳೆ ಫಿಲ್ಮ್ಸ್ ಸಜ್ಜಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ಧುರಂಧರ್’ ಯಶಸ್ಸು ಸಹಿಸದವರಿಂದ ರಣ್ವೀರ್ ಸಿಂಗ್ ವಿರುದ್ಧ ಪಿತೂರಿ’

ಡಾನ್ 3’ (Don 3) ಸಿನಿಮಾದ ಒಪ್ಪಂದ ಮುರಿದು ಚಿತ್ರದಿಂದ ಹೊರನಡೆದ ಕಾರಣ ನಟ ರಣವೀರ್ ಸಿಂಗ್ (Ranveer Singh) ವಿರುದ್ಧ ಅಸಹಕಾರವನ್ನು ಸಿನಿಮಾ ನೌಕರರ ಸಂಘ ಘೋಷಿಸಿದೆ. ರಣ್ವೀರ್ ಸಿಂಗ್ ಅವರು ಒಪ್ಪಂದ ಮುರಿದಿದ್ದು ಮಾತ್ರವಲ್ಲದೆ ಸಿನಿಮಾದ ಪ್ರೀ ಪ್ರೊಡಕ್ಷನ್​​ಗೆ ಆಗಿರುವ ಖರ್ಚನ್ನು ಕೊಡಲು ನಿರಾಕರಿಸಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಸಿನಿಮಾದ ನಿರ್ಮಾಪಕ ಫರ್ಹಾನ್ ಅಖ್ತರ್ ಸಿನಿಮಾ ಒಕ್ಕೂಟಕ್ಕೆ ದೂರು ನೀಡಿದ್ದರು. ಈಗ ರಣ್ವೀರ್ ಸಿಂಗ್ ಮೇಲೆ ಹೇರಲಾಗಿರುವ ಅನಧಿಕೃತ ನಿಷೇಧದ ಬಗ್ಗೆ ಚಿತ್ರರಂಗಕ್ಕೆ ಸಂಬಂಧಿಸಿದವರು ನಾನಾ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಖ್ಯಾತ ಲೇಖಕಿ ಶೋಭಾ ಡೇ ಸಹ ಈ ಬಗ್ಗೆ ಮಾತನಾಡಿದ್ದು, ‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾಗಳ ಯಶಸ್ಸನ್ನು ತಡೆದುಕೊಳ್ಳಲಾಗದು ಕೆಲವರು ರಣ್ವೀರ್ ಸಿಂಗ್ ವಿರುದ್ಧ ಹೀಗೆ ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿರುವ ಶೋಭಾ ಡೇ, ಫರ್ಹಾನ್ ಅಖ್ತರ್ ಅವರೊಂದಿಗಿನ ಈ ವಿವಾದವನ್ನು ರಣವೀರ್ ಸಿಂಗ್ ಅತ್ಯಂತ ಪ್ರಬುದ್ಧತೆಯಿಂದ ನಿಭಾಯಿಸುತ್ತಿರುವುದನ್ನು ಶ್ಲಾಘಿಸಿದ್ದಾರೆ. ಚಲನಚಿತ್ರ ಕಾರ್ಮಿಕರ ಒಕ್ಕೂಟವಾದ ಎಫ್​​ಡಬ್ಲುಐಸಿಇ (FWICE) ರಣವೀರ್ ವಿರುದ್ಧ ಕೈಗೊಂಡಿರುವ ಅಸಹಕಾರ ನಿರ್ಧಾರವು ಕೇವಲ ರಣವೀರ್ ಅವರನ್ನಷ್ಟೇ ಅಲ್ಲದೆ, ಇತ್ತೀಚೆಗೆ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ನಿರ್ದೇಶಕ ಆದಿತ್ಯ ಧರ್ ಮತ್ತು ಅವರ ತಂಡವನ್ನು ಗುರಿಯಾಗಿಸಿಕೊಂಡು ಮಾಡುತ್ತಿರುವ ವ್ಯವಸ್ಥಿತ ಸಂಚು ಎಂದು ಅವರು ಹೇಳಿದ್ದಾರೆ.

ತಮ್ಮ ವಿಡಿಯೋದಲ್ಲಿ ಈ ವಿವಾದವನ್ನು ದೆಹಲಿಯ ಪ್ರಸಿದ್ಧ ‘ಜಿಮ್ಖಾನಾ ಕ್ಲಬ್’ ವಿವಾದಕ್ಕೆ ಹೋಲಿಸಿರುವ ಶೋಭಾ ಡೇ, ‘ಇದೆಲ್ಲವೂ ಅಧಿಕಾರ, ನಿಯಂತ್ರಣ ಮತ್ತು ಜನರನ್ನು ಹತ್ತಿಕ್ಕುವ ಆಟವಾಗಿದೆ. ರಣವೀರ್ ಸಿಂಗ್ ಅತ್ಯಂತ ಬುದ್ಧಿವಂತ ಮತ್ತು ಸರಿಯಾದ ಮಾರ್ಗದರ್ಶನ ಹೊಂದಿರುವ ನಟ. ಅವರು ಈ ವಿಷಯದಲ್ಲಿ ಸಂಪೂರ್ಣ ಮೌನ ಕಾಯ್ದುಕೊಂಡಿದ್ದಾರೆ. ತಮ್ಮ ಅಭಿಮಾನಿಗಳೇ ತಮ್ಮ ಪರವಾಗಿ ಹೋರಾಡುವಂತೆ ಮಾಡುತ್ತಿದ್ದಾರೆ’ ಎಂದಿದ್ದಾರೆ.

ಒಕ್ಕೂಟವು ದೇಶದ ಅತ್ಯಂತ ಯಶಸ್ವಿ ನಟನಿಗೆ ಸ್ಟುಡಿಯೋ ಪ್ರವೇಶಿಸದಂತೆ ತಡೆಯುವ ಮೂಲಕ ತಮಗೆ ತಾವೇ ಪ್ರಾಮುಖ್ಯತೆ ತಂದುಕೊಳ್ಳಲು ಯತ್ನಿಸುತ್ತಿದೆ. ಆದರೆ ಇದರಿಂದಾಗಿ ಯಾವುದೇ ತಪ್ಪಿಲ್ಲದ ಎಷ್ಟೋ ತಂತ್ರಜ್ಞರು ಮತ್ತು ಕಾರ್ಮಿಕರು ಕೆಲಸ ಕಳೆದುಕೊಳ್ಳುವಂತಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ‘ಒಂದು ವೇಳೆ ಎಕ್ಸೆಲ್ ಎಂಟರ್‌ಟೈನ್‌ಮೆಂಟ್, ಫರ್ಹಾನ್ ಅಖ್ತರ್ ಮತ್ತು ರಣವೀರ್ ನಡುವೆ ಭಿನ್ನಾಭಿಪ್ರಾಯಗಳಿದ್ದರೆ, ಅವರು ವಕೀಲರನ್ನು ನೇಮಿಸಿಕೊಂಡು ನ್ಯಾಯಾಲಯಕ್ಕೆ ಹೋಗಬೇಕಿತ್ತೇ ವಿನಃ ಇಂತಹ ಚಿತ್ರರಂಗದ ಸಂಘಟನೆಗಳನ್ನು ಮಧ್ಯೆ ತರಬಾರದಿತ್ತು’ ಎಂದು ಶೋಭಾ ಡೇ ಕಿಡಿಕಾರಿದ್ದಾರೆ.

ಇದನ್ನೂ ಓದಿ:

‘ಧುರಂಧರ್’ ಚಿತ್ರದ ಭಾರಿ ಯಶಸ್ಸಿನ ನಂತರ ನಿರ್ದೇಶಕ ಆದಿತ್ಯ ಧರ್ ಅವರು ಬಾಲಿವುಡ್‌ನ ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಗೆ ದೊಡ್ಡ ಬೆದರಿಕೆಯಾಗಿ ಮಾರ್ಪಟ್ಟಿದ್ದಾರೆಯೇ? ಎಂದು ಪ್ರಶ್ನಿಸಿರುವ ಶೋಭಾ, ರಣವೀರ್ ಮೌನವಾಗಿರುವುದೇ ಅವರ ಬ್ರ್ಯಾಂಡ್ ಮೌಲ್ಯ ಮತ್ತು ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಕೊನೆಯಲ್ಲಿ ಅವರು ಫರ್ಹಾನ್ ಅಖ್ತರ್ ಅವರಿಗೆ ಈ ಸಮಸ್ಯೆಯನ್ನು ಕಾನೂನುಬದ್ಧವಾಗಿ ನ್ಯಾಯಾಲಯದಲ್ಲೇ ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ.

‘ಡಾನ್ 3’ ಚಿತ್ರಕ್ಕೆ ರಣವೀರ್ ಸಿಂಗ್ ಅವರನ್ನು ನಾಯಕನನ್ನಾಗಿ 2023 ರಲ್ಲಿ ಘೋಷಿಸಲಾಗಿತ್ತು. ಆದರೆ, ಆದಿತ್ಯ ಧರ್ ಅವರ ‘ಧುರಂಧರ್’ ಚಿತ್ರದ ದೊಡ್ಡ ಯಶಸ್ಸಿನ ನಂತರ, ಡಿಸೆಂಬರ್ 2025 ರಲ್ಲಿ ರಣವೀರ್ ಸಿಂಗ್ ಹಠಾತ್ ಆಗಿ ‘ಡಾನ್ 3’ ಚಿತ್ರದಿಂದ ಹೊರನಡೆದರು. ಇದರಿಂದ ತಮಗೆ 45 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ನಿರ್ಮಾಪಕ ಫರ್ಹಾನ್ ಅಖ್ತರ್ ಕಳೆದ ಏಪ್ರಿಲ್‌ನಲ್ಲಿ ಸಿನಿಮಾ ನೌಕರರ ಒಕ್ಕೂಟದ ಮೊರೆ ಹೋಗಿದ್ದರು. ಇದರ ಬೆನ್ನಲ್ಲೇ ಒಕ್ಕೂಟವು ರಣವೀರ್ ಸಿಂಗ್ ವಿರುದ್ಧ ಅಸಹಕಾರದ ನಿರ್ದೇಶನವನ್ನು ಹೊರಡಿಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕಾರಾಗೃಹ ಇಲಾಖೆಯ ಕೋಟ್ಯಂತರ ರೂ ಮೌಲ್ಯದ ಕಟ್ಟಡವನ್ನೇ ಕಬ್ಜ ಮಾಡಿದ ಭಲೇ ಕಿಲಾಡಿಗಳು

ಕಾರಾಗೃಹ ಇಲಾಖೆಯ ಕಟ್ಟಡImage Credit source: tv9 kannada

ಬೆಂಗಳೂರು, ಮೇ 29: ಸುಮಾರು 40ರಿಂದ 50 ಕೋಟಿ ರೂ ಮೌಲ್ಯದ ಕಾರಾಗೃಹ ಇಲಾಖೆಯ ಕಟ್ಟಡದ ಮೇಲೆ ಖದೀಮರು ಕಣ್ಣು ಹಾಕಿದ್ದಾರೆ. ಸ್ವತ್ತು ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯ ಅಧೀನದಲ್ಲಿರುವ ಗಾಂಧಿನಗರದ 2ನೇ ಅಡ್ಡರಸ್ತೆಯಲ್ಲಿರುವ ಮೈಸೂರು ಡಿಸ್ಮಾರ್ಜ್ ಪ್ರಿಸನರ್ಸ್ ಏಡ್ ಸೊಸೈಟಿಯ ಆಸ್ತಿಯನ್ನು (Property) ಕಬ್ಜ ಮಾಡಲಾಗಿದೆ. ಈ ಬಗ್ಗೆ ಉಪ್ಪಾರ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.

ಮುಖ್ಯಾಂಶಗಳು

  • ಮೈಸೂರು ಕಾರಾಗೃಹ ಆಸ್ತಿ ಕಬ್ಜ: ಕೋಟಿ ರೂ. ಮೌಲ್ಯದ ಜಾಗದ ಮೇಲೆ ಖದೀಮರ ಕಣ್ಣು
  • ಖಾಸಗಿ ವ್ಯಕ್ತಿಗಳ ಮೇಲೆ ದೂರು, ಪೊಲೀಸರಿಂದ ನೋಟಿಸ್​
  • ಕೆಲಸ ಮಾಡಿಸಲು ಮುಂದಾದ ಸಮಯದಲ್ಲಿ ಅತಿಕ್ರಮಣ ಬೆಳಕಿಗೆ

ಖಾಸಗಿ ವ್ಯಕ್ತಿಗಳ ವಿರುದ್ಧ ದೂರು

ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆಗೆ ಸೇರಿದ ಆಸ್ತಿಯನ್ನು ಖಾಸಗಿ ವ್ಯಕ್ತಿಗಳಾದ ಖಲಿಂ ಹಾಗೂ ಅನಿಲ್ ಎಂಬುವವರು ಕಳೆದ ಒಂದು ವರ್ಷದಿಂದಲೂ ಬಳಕೆ ಮಾಡುತ್ತಿದ್ದರು. ಶ್ರೀಶೈಲ್​​ ಎಸ್​ ಮೇಟಿ ಎಂಬುವವರು ಇಬ್ಬರ ವಿರುದ್ಧ ದೂರು ನೀಡಿದ್ದಾರೆ.

ಇದನ್ನೂ ಓದಿ: ಕೈದಿಗಳಿಗೆ ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ

ಕಳೆದ ಒಂದು ವರ್ಷದಿಂದಲೂ ಕಾರಾಗೃಹ ಇಲಾಖೆಯ ಆಸ್ತಿಯನ್ನು ಅನುಮತಿ ಪಡೆಯದೇ ಕಟ್ಟಡದ ಒಂದನೇ ಮಹಡಿಯನ್ನು ಅನಿಲ್ ಅತಿಕ್ರಮಣ ಮಾಡಿದ್ದು, ಖಲಿಂ ಹಳೆಯ ಸಾಮಗ್ರಿಗಳನ್ನು ಕಾರಾಗೃಹ ಇಲಾಖೆಗೆ ಸೇರಿದ ಆಸ್ತಿಯಲ್ಲಿ ತಂದು ಹಾಕಿದ್ದಾನೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸದ್ಯ ಇಬ್ಬರಿಗೂ ನೋಟಿಸ್​​ ನೀಡಿರುವ ಪೊಲೀಸರು ವಿಚಾರಣೆಗೆ ಕರೆದಿದ್ದಾರೆ.

ಜಾಗ ಅತಿಕ್ರಮಣವಾಗಿದ್ದು ಗೊತ್ತಾಗಿದ್ದು ಹೇಗೆ?

ಜೈಲಿನಲ್ಲಿ ತಯಾರಾಗುವ ಬೇಕರಿ ತಿನಿಸುಗಳು ಹಾಗೂ ಬಟ್ಟೆ ವ್ಯಾಪಾರ ಮಳಿಗೆ ತೆರೆಯಲು ಕಾರಾಗೃಹ ಇಲಾಖೆ ಸಜ್ಜಾಗಿತ್ತು. ಹೀಗಾಗಿ ಕಟ್ಟಡ ಹಳೆಯದಾದ ಹಿನ್ನೆಲೆ ಹೊಸದಾಗಿ ಕಟ್ಟಡ ನಿರ್ಮಾಣ ಮಾಡಿ ಜೈಲು ಉತ್ಪನ್ನಗಳ ಮಾರಾಟ ಮಳಿಗೆ ತೆರೆಯಲು ಮುಂದಾಗಿದೆ. ಈ ವೇಳೆ ಅತಿಕ್ರಮಣ ಆಗಿರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಜೈಲುಗಳಲ್ಲಿ ಅಕ್ರಮ ಚಟುವಟಿಕೆ ತಡೆಗೆ ಅಲೋಕ್ ಕುಮಾರ್ ದಿಟ್ಟ ಕ್ರಮ: ಕೈದಿಗಳ ಭೇಟಿಗೆ ಹೊಸ ರೂಲ್ಸ್

ಇನ್ನು ಮೈಸೂರು ಮಹಾರಾಜರು ಕಾರಾಗೃಹ ಇಲಾಖೆಗೆ ಹತ್ತು ಸಾವಿರ ಚದರ ಅಡಿ ಜಾಗವನ್ನು ದಾನವಾಗಿ ಕೊಟ್ಟಿದ್ದಾರೆ. ಇಂದಿನ ಮಾರುಕಟ್ಟೆಯ ಬೆಲೆ ಪ್ರಕಾರ 40ರಿಂದ 50 ಕೋಟಿ ರೂ ಮೌಲ್ಯ ಎನ್ನಲಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಡಿಕೆ ಶಿವಕುಮಾರ್​​​​​​​ ಸಿಎಂ ಆಗಲು ಆಕೆಯೇ ಕಾರಣ! ಅವರ ಜೀವನದ ಅದೃಷ್ಟ ಲಕ್ಷ್ಮಿ ಎಂದ ಸುಧಾಕರ್

ಬೆಂಗಳೂರು, ಮೇ.29: ಚಿಕ್ಕಬಳ್ಳಾಪುರದ ಬಿಜೆಪಿ ಸಂಸದ ಡಾ. ಕೆ. ಸುಧಾಕರ್ ಅವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಭವಿಷ್ಯ ಮತ್ತು ಇತ್ತೀಚಿನ ವೈಯಕ್ತಿಕ ಘಟನೆಗಳ ಕುರಿತು ಮಾತನಾಡಿದ್ದಾರೆ. ಸಿದ್ದರಾಮಯ್ಯ ಅವರು ರಾಜ್ಯ ರಾಜಕಾರಣದಲ್ಲೇ ಮುಂದುವರಿಯುವ ನಿರ್ಧಾರ ಡಿ.ಕೆ. ಶಿವಕುಮಾರ್ ಅವರ ಆಡಳಿತಕ್ಕೆ ಒಂದು ರೀತಿಯಲ್ಲಿ ಎಚ್ಚರಿಕೆ ಗಂಟೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಡಾ. ಸುಧಾಕರ್ ಪ್ರಕಾರ, ಸಿದ್ದರಾಮಯ್ಯ ಅವರನ್ನು ಜೊತೆಗೆ ಕರೆದುಕೊಂಡು ಮುಂದಿನ ಎರಡು ವರ್ಷಗಳನ್ನು ಪೂರೈಸುವುದು ಮತ್ತು 2028ರ ಚುನಾವಣೆಯಲ್ಲಿ ಅವರ ಸಹಕಾರ ಪಡೆಯುವುದು ಡಿ.ಕೆ. ಶಿವಕುಮಾರ್ ಅವರಿಗೆ ದೊಡ್ಡ ಸವಾಲುಗಳು. ಸಚಿವ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಅವರು ಎದುರಿಸಬೇಕಾದ ಒತ್ತಡಗಳ ಬಗ್ಗೆಯೂ ಅವರು ಉಲ್ಲೇಖಿಸಿದ್ದಾರೆ. ಅದೇ ಸಮಯದಲ್ಲಿ, ಡಿ.ಕೆ. ಶಿವಕುಮಾರ್ ಅವರ ಹೋರಾಟ ಮತ್ತು ದೃಢಸಂಕಲ್ಪವನ್ನು ಸುಧಾಕರ್ ಶ್ಲಾಘಿಸಿದ್ದಾರೆ. ಇತ್ತೀಚೆಗೆ ಎಸ್.ಎಂ. ಕೃಷ್ಣ ಅವರ ಹುಟ್ಟುಹಬ್ಬದಂದೇ ಡಿ.ಕೆ. ಶಿವಕುಮಾರ್ ಅವರ ಮೊಮ್ಮಗಳು ಜನಿಸಿರುವುದನ್ನು ಪ್ರಸ್ತಾಪಿಸಿದ ಸುಧಾಕರ್, ಈ ಘಟನೆ ಅವರಿಗೆ “ಅದೃಷ್ಟ ಲಕ್ಷ್ಮಿ” ಯನ್ನು ತಂದಿದೆ ಎಂದು ಹೇಳಿ, ಡಿ.ಕೆ. ಶಿವಕುಮಾರ್ ಅವರಿಗೆ ಶುಭ ಹಾರೈಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link