Headlines

nagaraj11081993

PSL 2026: ಐಪಿಎಲ್‌ಗಾಗಿ ಪಿಎಸ್‌ಎಲ್‌ ತೊರೆದ ಮತ್ತೊಬ್ಬ ಸ್ಟಾರ್ ಆಟಗಾರ

ಐಪಿಎಲ್ ಜೊತೆಗೆ ಪಿಎಸ್‌ಎಲ್ ನಡೆಸಬೇಕೆಂಬ ಹಠಕ್ಕೆ ಬಿದ್ದಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಸಂಕಷ್ಟಗಳ ಮೇಲೆ ಸಂಕಷ್ಟಗಳು ಎದುರಾಗುತ್ತಿವೆ. ವಾಸ್ತವವಾಗಿ ಕಳೆದ ಆವೃತ್ತಿಯಿಂದ ಪಾಕಿಸ್ತಾನ ಸೂಪರ್ ಲೀಗ್, ಐಪಿಎಲ್ ಜೊತೆಗೆ ಆರಂಭವಾಗುತ್ತಿದೆ. ಕಳೆದ ಆವೃತ್ತಿಯ ಪಿಎಸ್​ಎಲ್ ಹೆಚ್ಚಿನ ತೊಂದರೆಗಳಿಲ್ಲದೆ ಮುಗಿದಿತ್ತು. ಆದರೆ ಈ ಆವೃತ್ತಿ, ಆರಂಭಕ್ಕೂ ಮುನ್ನವೇ ಸಂಕಷ್ಟಕ್ಕೆ ಸಿಲುಕಿದೆ. ಈ ಬಾರಿಯ ಪಾಕಿಸ್ತಾನ ಸೂಪರ್ ಲೀಗ್ ಮಾರ್ಚ್ 26 ರಂದು ಪ್ರಾರಂಭವಾಗಲಿದೆ. ಆದರೆ ಅದಕ್ಕೂ ಮೊದಲೇ ಅನೇಕ ವಿದೇಶಿ ಆಟಗಾರರು ಈ ಲೀಗ್​ನಿಂದ ತಮ್ಮ ಹೆಸರುಗಳನ್ನು ಹಿಂತೆಗೆದುಕೊಳ್ಳುತ್ತಿದ್ದಾರೆ….

Read More

ಶುಕ್ರನ ದೆಸೆಯಿಂದ ಸಂಗಾತಿಯೊಂದಿಗೆ ರೋಮ್ಯಾಂಟಿಕ್ ಕ್ಷಣ ಕಳೆಯಬಹುದು, ಆದರೆ ಈ ತಪ್ಪು ಮಾಡಬೇಡಿ

ಮಾರ್ಚ್ 22ರಿಂದ ಮಾರ್ಚ್ 28ರವರೆಗೆ ನಾಲ್ಕನೇ ವಾರವಾಗಿದ್ದು ಶುಕ್ರನು ಮೇಷ ರಾಶಿಯನ್ನು ಪ್ರವೇಶಿಸುವನು.‌ ಮಿತ್ರನ ರಾಶಿಯಾದ ಕಾರಣ ಸ್ತ್ರೀ-ಪುರುಷರ ವ್ಯವಹಾರ ದಾರಿ ತಪ್ಪಬಹುದು. ಕುಜನ ಮೇಲೆ ಗುರು ದೃಷ್ಟಿ ಇದ್ದರೂ ಅವಗಡ ಸಾಧ್ಯತೆವಿದೆ. ದಾಂಪತ್ಯದಲ್ಲಿ ಸುಖಮಯ ವಾತಾವರಣ ವೃದ್ಧಿಯಾಗುವುದು. ಮೇಷ: ಈ ವಾರ ಪ್ರೇಮ ಜೀವನದಲ್ಲಿ ಉತ್ಸಾಹ ಹೆಚ್ಚಲಿದೆ. ಸಂಗಾತಿಯೊಂದಿಗೆ ಸಣ್ಣ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ. ಅವಿವಾಹಿತರಿಗೆ ಹೊಸ ಸಂಬಂಧಗಳು ಕೂಡಿಬರಲಿವೆ. ಹಳೆಯ ಭಿನ್ನಾಭಿಪ್ರಾಯಗಳು ದೂರವಾಗಿ ಬಾಂಧವ್ಯ ಗಟ್ಟಿಯಾಗುವುದು. ​ವೃಷಭ: ನಿಮಗೆ ಶುಕ್ರನ ಕೃಪೆಯಿಂದ ಪ್ರೇಮ…

Read More

ಕಾಂಗ್ರೆಸ್‌ಗೆ ತಟ್ಟಿದ ಬಂಡಾಯದ ಬಿಸಿ; ಸಮರ್ಥ್ ಶಾಮನೂರು ನಾಮಪತ್ರಕ್ಕೆ ಜಮೀರ್ ಗೈರು, ಸಾದಿಕ್ ಪೈಲ್ವಾನ್ ಅಖಾಡಕ್ಕೆ

ದಾವಣಗೆರೆ (ಮಾರ್ಚ್ 23): ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ರಂಗೇರಿದ್ದು, ಇಂದು (ಮಾರ್ಚ್ 23) ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಸಮರ್ಥ್ ಶಾಮನೂರು ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಅವರು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರೊಂದಿಗೆ ಅಧಿಕೃತವಾಗಿ ನಾಮಪತ್ರ ಸಲ್ಲಿಸಿದರು. ಆದರೆ, ಈ ಪ್ರಮುಖ ಕಾರ್ಯಕ್ರಮದಿಂದ ಸಚಿವ ಜಮೀರ್ ಅಹಮದ್ ಖಾನ್ ದೂರ ಉಳಿದಿರುವುದು ಕಾಂಗ್ರೆಸ್ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಇದರ ಮಧ್ಯೆ ಕಾಂಗ್ರೆಸ್ ಬಂಡಾಯದ ಅಭ್ಯರ್ಥಿಯಾಗಿ ಮುಸ್ಲಿಂ ಸಮುದಾಯದ…

Read More

ಬೆಳಗಾವಿ: ಪ್ರೀತಿಸಿ ಮದುವೆಯಾದ ಹೆಂಡತಿಗೆ ಚಟ್ಟಕಟ್ಟಿದ ಪತಿ

ಬೆಳಗಾವಿ, ಮಾರ್ಚ್​​ 23: ಹೆಂಡತಿ ಮಲಗಿರುವಾಗಲೇ ಎಳೆದೊಯ್ದು ನಡುರಸ್ತೆಯಲ್ಲಿ ಕಲ್ಲಿನಿಂದ ಜಜ್ಜಿ ಗಂಡ ಬರ್ಬರವಾಗಿ ಹತ್ಯೆ (kill) ಮಾಡಿರುವಂತಹ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಗೋವನಕೊಪ್ಪ ಗ್ರಾಮದಲ್ಲಿ ನಡೆದಿದೆ. ತಾಯಿಗೆ ಬೈದಿದ್ದಕ್ಕೆ ಮತ್ತು ಪತ್ನಿ ಶೀಲ ಶಂಕಿಸಿ ಕೊಲೆ  ಬಸವರಾಜ ಜೋಡಳ್ಳಿಯಿಂದ ಶಿವಕ್ಕ ಜೋಡಳ್ಳಿ( 33)ಯ ಕೊಲೆ ಮಾಡಲಾಗಿದೆ. ಈ ಭಯಾನಕ ಘಟನೆಗೆ ಗೋವನಕೊಪ್ಪ ಗ್ರಾಮವೇ ಬೆಚ್ಚಿಬಿದ್ದಿದೆ. ದೊಡವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರೀತಿಸಿ ಮದುವೆಯಾದ ಹೆಂಡತಿಗೆ ಚಟ್ಟಕಟ್ಟಿದ ಪತಿ ಮೊದಲ ಗಂಡ ಅಕಾಲಿಕ…

Read More

ಒಂದಂಕಿಯಲ್ಲಿ ಕುಂಟಿದ ‘ಉಸ್ತಾದ ಭಗತ್ ಸಿಂಗ್’ ಕಲೆಕ್ಷನ್; ‘ಹರಿ ಹರ ವೀರ ಮಲ್ಲು’ಗಿಂತ ಹೀನಾಯ

ಪವನ್ ಕಲ್ಯಾಣ್ ನಟನೆಯ ‘ಉಸ್ತಾದ ಭಗತ್ ಸಿಂಗ್’ ಸಿನಿಮಾದ ಗಳಿಕೆ ಹೀನಾಯ ಮಟ್ಟ ತಲುಪಿದೆ. ನಾಲ್ಕು ದಿನಕ್ಕೆ ಚಿತ್ರ ಅಂದುಕೊಂಡಷ್ಟು ಗಳಿಕೆ ಮಾಡಿಲ್ಲ. ನಾಲ್ಕು ದಿನಕ್ಕೆ 60 ಕೋಟಿ ರೂಪಾಯಿ ಗಳಿಕೆ ದಾಟಲು ಕೂಡ ಚಿತ್ರದ ಬಳಿ ಸಾಧ್ಯವಾಗಿಲ್ಲ. ಇನ್ನು, ಎರಡನೇ ದಿನದಿಂದ ಸಿಂಗಲ್ ಡಿಜಿಟಲ್​ನಲ್ಲೇ ಸಿನಿಮಾ ಕುಂಟುತ್ತಾ ಸಾಗುತ್ತಿದೆ. ಈ ಮೊದಲು ರಿಲೀಸ್ ಆಗಿ ಸೋತ ‘ಹರಿ ಹರ ವೀರ ಮಲ್ಲು’ ಚಿತ್ರಕ್ಕಿಂತ ಈ ಸಿನಿಮಾದ ಸ್ಥಿತಿ ಹೀನಾಯವಾಗಿದೆ. ‘ಧುರಂಧರ್ 2’ ಸಿನಿಮಾ ಸೂಪರ್ ಹಿಟ್…

Read More

ಧುರಂಧರ್ 2 ಸಿನಿಮಾ ರಿಯಾಲಾ? ಎಸ್‌ಪಿ ಅಸ್ಲಾಂ ಸಾವಿನ ದೃಶ್ಯದ ಹಿಂದೆ ಅಡಗಿದೆ 2014ರ ಭೀಕರ ನೈಜ ಘಟನೆ!

ಆದಿತ್ಯ ಧರ್ ನಿರ್ದೇಶನದ ‘ಧುರಂಧರ್ 2’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿರುವುದಷ್ಟೇ ಅಲ್ಲದೆ, ಅದರ ‘ಪೀಕ್ ಡಿಟೇಲಿಂಗ್’ (Peak Detailing) ನಿಂದಾಗಿ ಸಿನೆಮಾ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಅದರಲ್ಲೂ ಎಸ್‌ಪಿ ಅಸ್ಲಾಂ ಅವರ ಹತ್ಯೆಯ ದೃಶ್ಯವು 2014ರಲ್ಲಿ ನಡೆದ ನೈಜ ಘಟನೆಯನ್ನು ಯಥಾವತ್ತಾಗಿ ಪ್ರತಿಬಿಂಬಿಸಿದೆ ಎಂಬುದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಸಿನಿಮಾದಲ್ಲಿ ಎಸ್‌ಪಿ ಅಸ್ಲಾಂ ಅವರನ್ನು ಗುರಿಯಾಗಿಸಿಕೊಂಡು ನಡೆದ ದಾಳಿಯ ಪ್ರತಿಯೊಂದು ಹಂತವು  2014ರ ಸಿಸಿಟಿವಿ/ಡ್ಯಾಶ್‌ಕ್ಯಾಮ್ ದೃಶ್ಯಗಳನ್ನೇ ಹೋಲುತ್ತದೆ. ನಿರ್ದೇಶಕ ಆದಿತ್ಯ ಧರ್…

Read More

ಪರೀಕ್ಷೆ ತ್ಯಜಿಸಿ ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ಕರೆತಂದ ಅಧಿಕಾರಿಗಳು!

ಗದಗ, ಮಾರ್ಚ್​ 23: ಬಡತನದ ಕಾರಣದಿಂದ ಹಲವಡೆ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳನ್ನು ಬಿಟ್ಟು ಕೂಲಿ ಕೆಲಸಕ್ಕೆ ಹೋಗುತ್ತಾರೆ. ಓದಿ, ಪರೀಕ್ಷೆ ಬರೆದು ವಿದ್ಯಾವಂತರಾಗಬೇಕಾದ ಸಮಯದಲ್ಲಿ ಕುಟುಂಬಕ್ಕೆ ನೆರವಾಗಿ ಶಿಕ್ಷಣದಿಂದ (Education) ವಂಚಿತರಾಗುತ್ತಾರೆ. ಇದೇ ರೀತಿಯ ಘಟನೆ ಗದಗದಲ್ಲೂ ನಡೆದಿದ್ದು, ಶಿಕ್ಷಣ ಇಲಾಖೆಯ ಅಧಿಕಾರಿಗಳ ನಡೆಗೆ ಈಗ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ವಿಜ್ಞಾನ ಪರೀಕ್ಷೆಯನ್ನು ಯಶಸ್ವಿಯಾಗಿ ಬರೆದ ವಿದ್ಯಾರ್ಥಿನಿ ಜಿಲ್ಲೆಯ ಮುಂಡರಗಿ ತಾಲೂಕಿನ ಪೇಠಾಲೂರು ಗ್ರಾಮದಲ್ಲಿ ಬಡತನದ ಕಾರಣ ಎಸ್‌ಎಸ್‌ಎಲ್‌ಸಿ ಪರೀಕ್ಷೆ ತ್ಯಜಿಸಿ ಕೂಲಿ ಕೆಲಸಕ್ಕೆ ತೆರಳಿದ್ದ ವಿದ್ಯಾರ್ಥಿನಿಯನ್ನು…

Read More

PM Modi on Fertilizers: ಭಾರತದಲ್ಲಿ ಸಾಕಷ್ಟು ರಸಗೊಬ್ಬರ ದಾಸ್ತಾನಿದೆ, ರೈತರಿಗೆ ತೊಂದರೆಯಾಗಲು ಬಿಡುವುದಿಲ್ಲ: ಮೋದಿ ಭರವಸೆ

ನವದೆಹಲಿ, ಮಾರ್ಚ್​ 23: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡೆಯುತ್ತಿರುವ ಕಾರಣ ಎಲ್​ಪಿಜಿ, ಪೆಟ್ರೋಲ್ ಹಾಗೂ ರಸಗೊಬ್ಬರಗಳ ಮೇಲೆ ಸ್ವಲ್ಪ ಪ್ರಮಾಣದ ಪರಿಣಾಮ ಬೀರಿದೆ. ಆದರೆ ದೇಶದಲ್ಲಿ ರಸಗೊಬ್ಬರಗಳ ಸಾಕಷ್ಟು ಸಂಗ್ರಹವಿದ್ದು, ಯಾವುದೇ ಕಾರಣಕ್ಕೂ ರೈತರಿಗೆ ತೊಂದರೆಯಾಗಲು ಬಿಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಭರವಸೆ ನೀಡಿದ್ದಾರೆ. ಲೋಕಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ರೈತರು ಈಗ ಡೀಸೆಲ್ ಮೇಲಿನ ಅವಲಂಬನೆ ಕಡಿಮೆಯಾಗಿದೆ ಎಂದು ಹೇಳಿದ್ದಾರೆ. ಜಾಗತಿಕ ಆರ್ಥಿಕತೆ ಮೇಲೆ ದುಷ್ಪರಿಣಾಮ ಯುದ್ಧವು ಇಡೀ ಜಾಗತಿಕ ಆರ್ಥಿಕತೆಯ ಮೇಲೆ ಪರಿಣಾಮ…

Read More

ಕಲಬುರ್ಗಿ ವಿಶ್ವವಿದ್ಯಾಲಯದಲ್ಲಿ ಟ್ರೆಷರಿ ಹಣಕ್ಕೆ ಕನ್ನ; ಕೋಟ್ಯಂತರ ರೂ. ವಂಚನೆ ನಡೆದರೂ ದೂರು ನೀಡದ ಆಡಳಿತ ಮಂಡಳಿ

ಕಲಬುರ್ಗಿ, ಮಾರ್ಚ್​ 23: ಜಿಲ್ಲೆಯ ವಿಶ್ವವಿದ್ಯಾಲಯದ ಖಜಾನೆಗೆ ಕನ್ನ ಬಿದ್ದಿದ್ದು, ಸಿಬ್ಬಂದಿಗೆ ಸಂಬಳ ನೀಡುವ ಜವಾಬ್ದಾರಿ ಹೊತ್ತ ಅಕೌಂಟಂಟ್​ನಿಂದಲೇ ಈ ವಂಚನೆ (Fraud) ನಡೆದಿದೆ. ಆತ ತನ್ನ ವೈಯಕ್ತಿಕ ಖಾತೆಗೆ ಲಕ್ಷಾಂತರ ಹಣ ವರ್ಗಾಯಿಸಿಕೊಂಡಿದ್ದಾನೆ ಎಂದು ಆರೋಪಿಸಲಾಗಿದ್ದು, ಈ ಬಗ್ಗೆ ಯಾವುದೇ ದೂರು ದಾಖಲಾಗದೇ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಅನುಮಾನಕ್ಕೆ ಎಡೆಮಾಡಿಕೊಟ್ಟ ಕುಲಪತಿಗಳ ಹೇಳಿಕೆ! ಕಲಬುರ್ಗಿ ವಿವಿಯ ಎಲ್ಲಾ ಸಿಬ್ಬಂದಿಗೆ ಸಂಬಳ ಕೊಡಬೇಕಾದ ಅಕೌಂಟೆಂಟ್ ಶರಣು, ತನ್ನ ವೈಯಕ್ತಿಕ ಖಾತೆಗೆ ಲಕ್ಷಾಂತರ ರೂಪಾಯಿ ವರ್ಗಾವಣೆ ಮಾಡಿಕೊಂಡಿದ್ದು…

Read More

PM Modi speech: ಸಾಧ್ಯವಿರುವೆಡೆಯೆಲ್ಲಾ ತೈಲ ಮತ್ತು ಅನಿಲ ಪಡೆಯುತ್ತಿದ್ದೇವೆ- ಪ್ರಧಾನಿ ಮೋದಿ

ನವದೆಹಲಿ, ಮಾರ್ಚ್ 23: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಜಾಗತಿಕವಾಗಿ ಆಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆತಂಕ ವ್ಯಕ್ತಪಡಿಸಿದ್ದಾರೆ. ಸಂಸತ್​ನಲ್ಲಿ ಇಂದು ಪ್ರಧಾನಿಗಳು ಪಶ್ಚಿಮ ಏಷ್ಯಾ ಯುದ್ಧ ಹಾಗೂ ತೈಲ ಬಿಕ್ಕಟ್ಟಿನ ಕುರಿತು ಮಾತನಾಡುತ್ತಾ, ತಮ್ಮ ಸರ್ಕಾರ ಈ ಬಿಕ್ಕಟ್ಟು ಎದುರಿಸಲು ಮಾಡುತ್ತಿರುವ ಪ್ರಯತ್ನಗಳನ್ನು ವಿವರಿಸಿದ್ದಾರೆ. ಹಾರ್ಮುಜ್ ಸ್ಟ್ರೇಟ್​ಗೆ ತಡೆಯಾಗಿರುವುದರಿಂದ ತೈಲ ಮತ್ತು ಅನಿಲ ಪೂರೈಕೆಯನ್ನು ಸಾಧ್ಯವಿರುವೆಡೆಯೆಲ್ಲಾ ಪಡೆಯಲಾಗುತ್ತಿದೆ ಎಂದು ಹೇಳಿದ್ದಾರೆ. ಯುದ್ಧ ನಡೆಯುತ್ತಿರುವ ಪ್ರದೇಶದಲ್ಲಿ ಭಾರತದ ಜಾಗತಿಕ ವ್ಯಾಪಾರದ ಪ್ರಮುಖ ಮಾರ್ಗ ಇದೆ. ಭಾರತಕ್ಕೆ…

Read More