ಕಾಂಗ್ರೆಸ್‌ಗೆ ತಟ್ಟಿದ ಬಂಡಾಯದ ಬಿಸಿ; ಸಮರ್ಥ್ ಶಾಮನೂರು ನಾಮಪತ್ರಕ್ಕೆ ಜಮೀರ್ ಗೈರು, ಸಾದಿಕ್ ಪೈಲ್ವಾನ್ ಅಖಾಡಕ್ಕೆ
ದಾವಣಗೆರೆ (ಮಾರ್ಚ್ 23): ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ರಂಗೇರಿದ್ದು, ಇಂದು (ಮಾರ್ಚ್ 23) ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಸಮರ್ಥ್ ಶಾಮನೂರು ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಅವರು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರೊಂದಿಗೆ ಅಧಿಕೃತವಾಗಿ ನಾಮಪತ್ರ ಸಲ್ಲಿಸಿದರು. ಆದರೆ, ಈ ಪ್ರಮುಖ ಕಾರ್ಯಕ್ರಮದಿಂದ ಸಚಿವ ಜಮೀರ್ ಅಹಮದ್ ಖಾನ್ ದೂರ ಉಳಿದಿರುವುದು ಕಾಂಗ್ರೆಸ್ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಇದರ ಮಧ್ಯೆ ಕಾಂಗ್ರೆಸ್ ಬಂಡಾಯದ ಅಭ್ಯರ್ಥಿಯಾಗಿ ಮುಸ್ಲಿಂ ಸಮುದಾಯದ…