Headlines

nagaraj11081993

PM Modi speech: ಸಾಧ್ಯವಿರುವೆಡೆಯೆಲ್ಲಾ ತೈಲ ಮತ್ತು ಅನಿಲ ಪಡೆಯುತ್ತಿದ್ದೇವೆ- ಪ್ರಧಾನಿ ಮೋದಿ

ನವದೆಹಲಿ, ಮಾರ್ಚ್ 23: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಜಾಗತಿಕವಾಗಿ ಆಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆತಂಕ ವ್ಯಕ್ತಪಡಿಸಿದ್ದಾರೆ. ಸಂಸತ್​ನಲ್ಲಿ ಇಂದು ಪ್ರಧಾನಿಗಳು ಪಶ್ಚಿಮ ಏಷ್ಯಾ ಯುದ್ಧ ಹಾಗೂ ತೈಲ ಬಿಕ್ಕಟ್ಟಿನ ಕುರಿತು ಮಾತನಾಡುತ್ತಾ, ತಮ್ಮ ಸರ್ಕಾರ ಈ ಬಿಕ್ಕಟ್ಟು ಎದುರಿಸಲು ಮಾಡುತ್ತಿರುವ ಪ್ರಯತ್ನಗಳನ್ನು ವಿವರಿಸಿದ್ದಾರೆ. ಹಾರ್ಮುಜ್ ಸ್ಟ್ರೇಟ್​ಗೆ ತಡೆಯಾಗಿರುವುದರಿಂದ ತೈಲ ಮತ್ತು ಅನಿಲ ಪೂರೈಕೆಯನ್ನು ಸಾಧ್ಯವಿರುವೆಡೆಯೆಲ್ಲಾ ಪಡೆಯಲಾಗುತ್ತಿದೆ ಎಂದು ಹೇಳಿದ್ದಾರೆ. ಯುದ್ಧ ನಡೆಯುತ್ತಿರುವ ಪ್ರದೇಶದಲ್ಲಿ ಭಾರತದ ಜಾಗತಿಕ ವ್ಯಾಪಾರದ ಪ್ರಮುಖ ಮಾರ್ಗ ಇದೆ. ಭಾರತಕ್ಕೆ…

Read More

ಬೆಂಗಳೂರು ರಸ್ತೆಯಲ್ಲಿ ಯುವಕರ ‘ಬಿಯರ್’ ದರ್ಬಾರ್: ಟ್ರಿಪಲ್ ರೈಡಿಂಗ್, ಮದ್ಯಪಾನ ಮಾಡಿದ ವಿಡಿಯೋ ವೈರಲ್

ಬೆಂಗಳೂರು, ಮಾ.23: ಸಿಲಿಕಾನ್ ಸಿಟಿಯ ಬಿಟಿಎಂ ರಸ್ತೆಯಲ್ಲಿ (BTM Road) ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿದ ಯುವಕರ ಗುಂಪೊಂದು ಅತಿರೇಖಾದ ವರ್ತನೆ ತೋರಿದ್ದಾರೆ. ಸ್ಕೂಟರ್‌ನಲ್ಲಿ ಮೂವರು ಯುವಕರು ಹೆಲ್ಮೆಟ್ ಇಲ್ಲದೆ ‘ಟ್ರಿಪಲ್ ರೈಡಿಂಗ್’ ಮಾಡುತ್ತಿರುವುದಲ್ಲದೆ, ಚಲಿಸುವ ವಾಹನದಲ್ಲೇ ಬಿಯರ್ ಕುಡಿಯುತ್ತಾ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಮೂವರು ಯುವಕರು ಯಾವುದೇ ಭಯವಿಲ್ಲದೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದು, ಹಿಂಬದಿ ಕುಳಿತಿದ್ದ ಯುವಕ ಬಿಯರ್ ಬಾಟಲಿ ಹಿಡಿದು ಮದ್ಯಪಾನ ಮಾಡುತ್ತಾ ವಿಕೃತವಾಗಿ ಕೈ…

Read More

ಮುಸ್ಲಿಮರೂ ನಮ್ಮ ಜತೆಗಿದ್ದಾರೆ: ದಾವಣಗೆರೆಯಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಿದ ಸಿದ್ದರಾಮಯ್ಯ, ಡಿಕೆಶಿ

ದಾವಣಗೆರೆ, ಮಾರ್ಚ್ 23: ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡದ ಕಾರಣ ದಾವಣಗೆರೆ (Davanagere) ದಕ್ಷಿಣ ಉಪಚುನಾವಣೆಯಲ್ಲಿ ಬಂಡಾಯದ ಬಿಸಿ ಎದುರಿಸುತ್ತಿರುವ ಕಾಂಗ್ರೆಸ್ (Congress), ಇವುಗಳೆಲ್ಲದರ ನಡುವೆಯೂ ಸೋಮವಾರ ಒಗ್ಗಟ್ಟು ಪ್ರದರ್ಶನ ಮಾಡಿತು. ಮಾಜಿ ಸಚಿವ, ಶಾಸಕ ಶಾಮನೂರು ಶಿವಶಂಕರಪ್ಪ ಮೊಮ್ಮಗ ಸಮರ್ಥ್ ಶಾಮನೂರು (Samarth Shamanur) ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಇದೇ ವೇಳೆ, ಸಿಎಂ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಸಚಿವರು ಒಗ್ಗಟ್ಟು ಪ್ರದರ್ಶಿಸಿದರು. ಅಲ್ಪಸಂಖ್ಯಾತ ನಮ್ಮ ಜತೆಗಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರೆ, ಮುಸ್ಲಿಮರು…

Read More

PM Modi Speech Today Live: ಲೋಕಸಭೆಯಲ್ಲಿ ಮಧ್ಯಪ್ರಾಚ್ಯದ ಸಂಘರ್ಷದ ಕುರಿತು ಪ್ರಧಾನಿ ಮೋದಿ ಮಾತು

ನವದೆಹಲಿ, ಮಾರ್ಚ್​ 23: ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿ ಮಧ್ಯಪ್ರಾಚ್ಯದ ಸಂಘರ್ಷದ ಕುರಿತು ಮಾತು ಆರಂಭಿಸಿದ್ದಾರೆ. ಇರಾನ್ ಜೊತೆ ನಡೆಯುತ್ತಿರುವ ಅಮೆರಿಕ-ಇಸ್ರೇಲ್ ಸಂಘರ್ಷದ ಪ್ರಮುಖ ಅಂಶಗಳು ಮತ್ತು ಈ ವಿಷಯದ ಬಗ್ಗೆ ಭಾರತದ ನಿಲುವನ್ನು ಪ್ರಧಾನಿ ಮೋದಿ ವಿವರಣೆ ನೀಡಿದ್ದಾರೆ. ಅಮೆರಿಕ-ಇಸ್ರೇಲ್-ಇರಾನ್ ಯುದ್ಧದ ನಡುವೆ ಅಗತ್ಯ ವಸ್ತುಗಳ ಪೂರೈಕೆ ಮತ್ತು ಇಂಧನ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ದೀರ್ಘ ಮತ್ತು ಅಲ್ಪಾವಧಿಯ ಕ್ರಮಗಳ ಕುರಿತು ಚರ್ಚಿಸಲು ಪ್ರಧಾನಿ ಮೋದಿ ಅವರು ಸಂಪುಟ ಭದ್ರತಾ ಸಮಿತಿಯ (ಸಿಸಿಎಸ್) ಸಭೆ ನಡೆಸಿದ ಒಂದು…

Read More

‘ಟಾಕ್ಸಿಕ್’ ಎದುರು ಬರ್ತಿದೆ ‘ಧುರಂಧರ್ 3’ ಸಿನಿಮಾ? ವೈರಲ್ ಪೋಸ್ಟ್ ಅಸಲಿಯತ್ತೇನು?

‘ಧುರಂಧರ್ 2’ vs ‘ಟಾಕ್ಸಿಕ್’ (Toxic Movie) ಎಂಬ ಪರಿಸ್ಥಿತಿ ನಿರ್ಮಾಣ ಆಗಿತ್ತು. ಆದರೆ, ಯಶ್ ನಟನೆಯ ‘ಟಾಕ್ಸಿಕ್’ ಚಿತ್ರ ತನ್ನ ರಿಲೀಸ್ ದಿನಾಂಕವನ್ನು ಮುಂದಕ್ಕೆ ಹಾಕಿಕೊಂಡಿತ್ತು. ಈಗ ‘ಧುರಂಧರ್ 2’ ಸಿನಿಮಾ ರಿಲೀಸ್ ಆಗಿ ಅಬ್ಬರಿಸುತ್ತಿದೆ. ವಿಶೇಷ ಎಂದರೆ, ಈ ಚಿತ್ರ ಕೇವಲ ನಾಲ್ಕು ದಿನಕ್ಕೆ 450 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಚಿತ್ರದ ಎದುರು ‘ಟಾಕ್ಸಿಕ್’ ತೆರೆಗೆ ಬಂದಿದ್ದರೆ ಏನಾಗುತ್ತಿತ್ತು ಎಂಬ ಪ್ರಶ್ನೆಯನ್ನು ಕೆಲವರು ಕೇಳುತ್ತಿದ್ದಾರೆ. ಈ ಮಧ್ಯೆ ‘ಟಾಕ್ಸಿಕ್’ ಸಿನಿಮಾ ಎದುರು…

Read More

ಹೋಟೆಲ್ ಮಾಲೀಕರ ಗಮನಕ್ಕೆ: ವಾಣಿಜ್ಯ ಸಿಲಿಂಡರ್ ಬೇಕಿದ್ದರೆ ಒಂದು ವಾರದೊಳಗೆ ಈ ಕೆಲಸ ಮಾಡಿ!

ಬೆಂಗಳೂರು, ಮಾ.23: ಕರ್ನಾಟಕದಲ್ಲಿ ವಾಣಿಜ್ಯ ಸಿಲಿಂಡರ್‌ಗಳ ಸಮಸ್ಯೆ ಬಗೆಹರಿಯುವ ಲಕ್ಷಣಗಳು ಕಾಣುತ್ತಿಲ್ಲ. ಈ ಹಿನ್ನೆಲೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಕಚೇರಿಯಲ್ಲಿ ಸಚಿವ ಕೆ.ಎಚ್. ಮುನಿಯಪ್ಪ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. IOC, HP, GAIL ಮತ್ತು ಭಾರತ್ ಪೆಟ್ರೋಲಿಯಂ ಕಂಪನಿಗಳ ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರ ಹೆಚ್ಚುವರಿ 20% ಸಿಲಿಂಡರ್‌ಗಳನ್ನು ಪೂರೈಸಲು ಒಪ್ಪಿಗೆ ನೀಡಿದೆ ಎಂದು ಸಚಿವ ಮುನಿಯಪ್ಪ ತಿಳಿಸಿದ್ದಾರೆ. ಆದರೆ, ಬ್ಲಾಕ್​​​ನಲ್ಲಿ ಮಾರಾಟ ಮಾಡುವುದನ್ನು…

Read More

ರುಪಾಯಿ ಮತ್ತಷ್ಟು ಕುಸಿತ; ಪ್ರಪ್ರಥಮ ಬಾರಿಗೆ 94ರ ಮಟ್ಟಕ್ಕೆ ಇಳಿಕೆ; ಭಾರತೀಯ ಕರೆನ್ಸಿ ಮೌಲ್ಯ ಕುಸಿಯಲು ಏನು ಕಾರಣ?

ನವದೆಹಲಿ, ಮಾರ್ಚ್ 23: ಅಮೆರಿಕನ್ ಡಾಲರ್ ಎದುರು ಭಾರತದ ಕರೆನ್ಸಿಯಾದ ರುಪಾಯಿಯ ದುರ್ಬಲ ಸಾಧನೆ (Dollar vs Rupee) ಮುಂದುವರಿದಿದೆ. ಡಾಲರ್​ಗೆ ರುಪಾಯಿ ಮೌಲ್ಯ 94 ರು ಮಟ್ಟಕ್ಕಿಂತ ಕೆಳಗೆ ಕುಸಿದಿದೆ. ಈ ಮಟ್ಟಕ್ಕೆ ರುಪಾಯಿ ಇಳಿದ್ದು ಇತಿಹಾಸದಲ್ಲಿ ಇದೇ ಪ್ರಥಮ. ಇವತ್ತು ಸೋಮವಾರ (ಮಾ. 23) ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರುಪಾಯಿ 93.83ರಲ್ಲಿ ಆರಂಭಗೊಂಡಿತು. ನಂತರದ ವಹಿವಾಟಿನಲ್ಲಿ ಅದು 94ರ ಮಟ್ಟ ದಾಟಿ ಹೋಯಿತು. ರುಪಾಯಿ ಮೌಲ್ಯ ಕುಸಿತಕ್ಕೆ ಏನು ಕಾರಣಗಳು? ಕಚ್ಛಾ ತೈಲ…

Read More

ಗಂಡನ ಕಳೆದುಕೊಂಡವರೇ ಟಾರ್ಗೆಟ್! ಐವರು ಮಹಿಳೆಯರ ಜತೆ ದೈಹಿಕ ಸಂಪರ್ಕ ಬೆಳೆಸಿ ವಂಚಿಸಿದ ಖಾಸಗಿ ಕಂಪನಿ ಎಂಡಿ!

ಬೆಂಗಳೂರು, ಮಾರ್ಚ್​ 23: ಬೆಂಗಳೂರು ನಗರದ ಸೂರ್ಯ ಮ್ಯಾನೇಜ್ಮೆಂಟ್ ಸರ್ವಿಸ್ ಸಂಸ್ಥೆಯ ಮಾಲೀಕ ರಾಮಾಂಜಿ ಎಂಬಾತ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮತ್ತು ಇತರ ಮಹಿಳೆಯರಿಗೆ ಮದುವೆಯಾಗುವ ನೆಪದಲ್ಲಿ ವಂಚಿಸಿರುವ ಆರೋಪದ ಮೇಲೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 38 ವರ್ಷದ ರಾಮಾಂಜಿ ಐವರು ಹೆಣ್ಣುಮಕ್ಕಳಿಗೆ ಮೋಸ ಮಾಡಿದ್ದಾನೆ ಎಂದು ದೂರುದಾರರು ಆರೋಪಿಸಿದ್ದಾರೆ. ಪತಿ ಕಳೆದುಕೊಂಡವರು, ಪತಿಯಿಂದ ವಿಚ್ಛೇದನ ಪಡೆದು ದೂರವಾದವರು ಅಥವಾ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಮಹಿಳೆಯರನ್ನು ಈತ ಬಲೆಗೆ ಕೆಡವುತ್ತಿದ್ದ ಎನ್ನಲಾಗಿದೆ. ಮದುವೆಯ ಭರವಸೆ…

Read More

’ಧುರಂಧರ್ 2’ ಗೆಲುವಿನ ಖುಷಿಯಲ್ಲಿ ಮೀನೂಟ ಮಾಡಿದ ರಣವೀರ್-ದೀಪಿಕಾ

ಆದಿತ್ಯ ಧಾರ್ ನಿರ್ದೇಶನದ ‘ಧುರಂಧರ್: ದಿ ರಿವೆಂಜ್’ ಚಿತ್ರವು ಪ್ರಸ್ತುತ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿದೆ. ಬಿಡುಗಡೆಯಾದ ಕೇವಲ ನಾಲ್ಕು ದಿನಗಳಲ್ಲಿ, ಚಿತ್ರವು 400 ಕೋಟಿ ರೂ.ಗಳನ್ನು ದಾಟಿದೆ. ಚಿತ್ರದಲ್ಲಿನ ರಣವೀರ್ ಸಿಂಗ್ ಅವರ ಅಭಿನಯವನ್ನು ಹೆಚ್ಚು ಪ್ರಶಂಸಿಸಲಾಗುತ್ತಿದೆ. ಅಭಿಮಾನಿಗಳಿಂದ ಹಿಡಿದು ಸೆಲೆಬ್ರಿಟಿಗಳವರೆಗೆ, ಅನೇಕರು ಸಾಮಾಜಿಕ ಮಾಧ್ಯಮದಲ್ಲಿ ಅವರಿಗಾಗಿ ಪೋಸ್ಟ್‌ಗಳನ್ನು ಬರೆದಿದ್ದಾರೆ. ಏತನ್ಮಧ್ಯೆ, ರಣವೀರ್ ಅವರ ಪತ್ನಿ ಮತ್ತು ನಟಿ ದೀಪಿಕಾ ಪಡುಕೋಣೆ ‘ಧುರಂಧರ್ 2’ ಯಶಸ್ಸಿನ ಬಗ್ಗೆ ಯಾವುದೇ ಕಾಮೆಂಟ್ ಮಾಡದಿದ್ದಾಗ ಕೆಲವು ಅಭಿಮಾನಿಗಳು ಅಸಮಾಧಾನಗೊಂಡರು….

Read More

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ RCB vs SRH ಹೈವೋಲ್ಟೇಜ್ ಪಂದ್ಯ! ನಿಮಗೂ ಟಿಕೆಟ್​​ ಬೇಕಾ? ಬೆಲೆ ಎಷ್ಟು? ಎಲ್ಲಿ ಬುಕ್ ಮಾಡಬೇಕು?

ಬೆಂಗಳೂರು. ಮಾ.23: ಐಪಿಎಲ್ 2026ರ ಉದ್ಘಾಟನಾ ಪಂದ್ಯ ಮಾರ್ಚ್ 28ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಆರ್‌ಸಿಬಿ ಮತ್ತು ಎಸ್‌ಆರ್‌ಎಚ್ ನಡುವಿನ ಪಂದ್ಯದ ಟಿಕೆಟ್ ಬೆಲೆ ಎಷ್ಟು? ಎಲ್ಲಿ ಬುಕ್ ಮಾಡಬೇಕು? ಮೆಟ್ರೋ ಪ್ರಯಾಣ ಉಚಿತವೇ? ಇಲ್ಲಿದೆ ಕಂಪ್ಲೀಟ್ ಮಾಹಿತಿ ಇಲ್ಲಿದೆ ನೋಡಿ. ಇನ್ನು ಟಿಕೆಟ್​​​​ ಖರೀದಿಯ ಬಗ್ಗೆ RCB ಮಹತ್ವದ ಹೇಳಿಕೆಯನ್ನು ಕೂಡ ನೀಡಿದೆ. ವಂಚನೆಯ ವಿರುದ್ಧ ಎಚ್ಚರಿಕೆ ನೀಡಿದೆ ಮತ್ತು shop.royalchallengers.com ಮೂಲಕ ಖರೀದಿಸಿದ ಟಿಕೆಟ್‌ಗಳು ಮಾತ್ರ ಮಾನ್ಯವಾಗಿರುತ್ತವೆ ಎಂದು ಹೇಳಿದೆ. RCB IPL 2026 ಟಿಕೆಟ್‌ಗಳನ್ನು…

Read More