All posts by nagaraj11081993

ಡಿಕೆ ಶಿವಕುಮಾರ್​​​​​​​ ಸಿಎಂ ಆಗಲು ಆಕೆಯೇ ಕಾರಣ! ಅವರ ಜೀವನದ ಅದೃಷ್ಟ ಲಕ್ಷ್ಮಿ ಎಂದ ಸುಧಾಕರ್

ಬೆಂಗಳೂರು, ಮೇ.29: ಚಿಕ್ಕಬಳ್ಳಾಪುರದ ಬಿಜೆಪಿ ಸಂಸದ ಡಾ. ಕೆ. ಸುಧಾಕರ್ ಅವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಭವಿಷ್ಯ ಮತ್ತು ಇತ್ತೀಚಿನ ವೈಯಕ್ತಿಕ ಘಟನೆಗಳ ಕುರಿತು ಮಾತನಾಡಿದ್ದಾರೆ. ಸಿದ್ದರಾಮಯ್ಯ ಅವರು ರಾಜ್ಯ ರಾಜಕಾರಣದಲ್ಲೇ ಮುಂದುವರಿಯುವ ನಿರ್ಧಾರ ಡಿ.ಕೆ. ಶಿವಕುಮಾರ್ ಅವರ ಆಡಳಿತಕ್ಕೆ ಒಂದು ರೀತಿಯಲ್ಲಿ ಎಚ್ಚರಿಕೆ ಗಂಟೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಡಾ. ಸುಧಾಕರ್ ಪ್ರಕಾರ, ಸಿದ್ದರಾಮಯ್ಯ ಅವರನ್ನು ಜೊತೆಗೆ ಕರೆದುಕೊಂಡು ಮುಂದಿನ ಎರಡು ವರ್ಷಗಳನ್ನು ಪೂರೈಸುವುದು ಮತ್ತು 2028ರ ಚುನಾವಣೆಯಲ್ಲಿ ಅವರ ಸಹಕಾರ ಪಡೆಯುವುದು ಡಿ.ಕೆ. ಶಿವಕುಮಾರ್ ಅವರಿಗೆ ದೊಡ್ಡ ಸವಾಲುಗಳು. ಸಚಿವ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಅವರು ಎದುರಿಸಬೇಕಾದ ಒತ್ತಡಗಳ ಬಗ್ಗೆಯೂ ಅವರು ಉಲ್ಲೇಖಿಸಿದ್ದಾರೆ. ಅದೇ ಸಮಯದಲ್ಲಿ, ಡಿ.ಕೆ. ಶಿವಕುಮಾರ್ ಅವರ ಹೋರಾಟ ಮತ್ತು ದೃಢಸಂಕಲ್ಪವನ್ನು ಸುಧಾಕರ್ ಶ್ಲಾಘಿಸಿದ್ದಾರೆ. ಇತ್ತೀಚೆಗೆ ಎಸ್.ಎಂ. ಕೃಷ್ಣ ಅವರ ಹುಟ್ಟುಹಬ್ಬದಂದೇ ಡಿ.ಕೆ. ಶಿವಕುಮಾರ್ ಅವರ ಮೊಮ್ಮಗಳು ಜನಿಸಿರುವುದನ್ನು ಪ್ರಸ್ತಾಪಿಸಿದ ಸುಧಾಕರ್, ಈ ಘಟನೆ ಅವರಿಗೆ “ಅದೃಷ್ಟ ಲಕ್ಷ್ಮಿ” ಯನ್ನು ತಂದಿದೆ ಎಂದು ಹೇಳಿ, ಡಿ.ಕೆ. ಶಿವಕುಮಾರ್ ಅವರಿಗೆ ಶುಭ ಹಾರೈಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಅಪ್ಪನಿಗೆ ಚಿನ್ನದ ಉಂಗುರ ಉಡುಗೊರೆ ನೀಡಿದ ಪುಟ್ಟ ಬಾಲಕಿ; ಹೃದಯಸ್ಪರ್ಶಿ ವೀಡಿಯೊ ವೈರಲ್

ತನ್ನ ಯೂಟ್ಯೂಬ್‌ ಆದಾಯದ ಮೊದಲ ಸಂಪಾದನೆಯಿಂದ ತಂದೆಗೆ ಚಿನ್ನದ ಉಂಗುರವನ್ನು ಉಡುಗೊರೆಯಾಗಿ ನೀಡಿದ ಪುಟ್ಟ ಬಾಲಕಿಯ ಹೃದಯಸ್ಪರ್ಶಿ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿ ನೆಟ್ಟಿಗರ ಮನ ಗೆದ್ದಿದೆ. ವಿಡಿಯೊದಲ್ಲಿ ಮುದ್ದಾದ ಬಾಲಕಿ ತಂದೆಯ ಮುಂದೆ ಮಂಡಿಯೂರಿ ಪ್ರೀತಿಯಿಂದ ಉಂಗುರ ತೊಡಿಸುತ್ತಿರುವ ದೃಶ್ಯ ಎಲ್ಲರ ಗಮನ ಸೆಳೆಯುತ್ತದೆ. ಮಗಳ ಮುಖದಲ್ಲಿನ ಹೆಮ್ಮೆ ಮತ್ತು ಸಂತೋಷ ಸ್ಪಷ್ಟವಾಗಿ ಕಾಣುತ್ತಿದ್ದರೆ, ಆಕೆಯ ಈ ಅಮೂಲ್ಯ ಉಡುಗೊರೆಯನ್ನು ಕಂಡ ತಂದೆ ಭಾವುಕರಾಗಿ ಮಗಳ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆಯುವ ಕ್ಷಣ ನೋಡುಗರ ಕಣ್ಣೀರನ್ನು ತರಿಸುತ್ತದೆ. ಬಳಿಕ ತಂದೆಯ ಆಶೀರ್ವಾದ ಪಡೆದುಕೊಂಡ ಬಾಲಕಿ ಸಂತೋಷದಿಂದ ಸಣ್ಣದಾಗಿ ನೃತ್ಯ ಮಾಡುವ ದೃಶ್ಯ ವಿಡಿಯೊಗೆ ಇನ್ನಷ್ಟು ಮಧುರತೆಯನ್ನು ತುಂಬಿದೆ. ಮಗಳು-ತಂದೆಯ ನಡುವಿನ ಅಪಾರ ಪ್ರೀತಿ, ಕೃತಜ್ಞತೆ ಮತ್ತು ಬಾಂಧವ್ಯದ ಈ ಅಪೂರ್ವ ಕ್ಷಣವನ್ನು ಕಂಡ ನೆಟ್ಟಿಗರು ಭಾವುಕರಾಗಿ ಮೆಚ್ಚುಗೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕೊನೆಗೂ ಗೆದ್ದ ಸಲ್ಮಾನ್ ಖಾನ್? ‘ಮಾತೃಭೂಮಿ’ ಚಿತ್ರಕ್ಕೆ ಭರ್ಜರಿ ಪಾಸಿಟಿವ್ ವಿಮರ್ಶೆ

ಸಲ್ಮಾನ್ ಖಾನ್ ಅವರು ಇತ್ತೀಚೆಗೆ ಅದೆಷ್ಟು ಸೋಲುಗಳನ್ನು ಕಂಡರೋ. ಬಹುಶಃ ಅವರಿಗೂ ಅದರ ಲೆಕ್ಕ ತಪ್ಪಿ ಹೋಗಿರಬಹುದು. ಒಂದು ಕಾಲದಲ್ಲಿ ಬಾಲಿವುಡ್​​ನಲ್ಲಿ ದೊಡ್ಡ ಮಟ್ಟದಲ್ಲಿ ಪಾರುಪತ್ಯ ನಡೆಸಿದ್ದ ಅವರು, ಈಗ ಗೆಲ್ಲಲು ಹಾತೊರೆಯುತ್ತಿದ್ದಾರೆ. ಈಗ ಸಲ್ಮಾನ್ ಖಾನ್ ಅವರು ‘ಮಾತೃಭೂಮಿ’ ಸಿನಿಮಾ ಮೂಲಕ ದೊಡ್ಡ ಗೆಲುವು ಕಾಣುವ ನಿರೀಕ್ಷೆಯಲ್ಲಿ ಇದ್ದಾರೆ. ಹೀಗಿರುವಾಗಲೇ ಸಿನಿಮಾಗೆ ಪಾಸಿಟಿವ್ ವಿಮರ್ಶೆ ಸಿಕ್ಕಿದೆ.

‘ಮಾತೃಭೂಮಿ: ಮೇ ವಾರ್ ರೆಸ್ಟ್ ಇನ್ ಪೀಸ್​’ ಅನ್ನೋದು ಸಿನಿಮಾದ ಹೆಸರು. ಈ ಚಿತ್ರವನ್ನು ಅಪೂರ್ವ ಲಖಿಯಾ ಅವರು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿರುವಾಗಲೇ ಸಲ್ಮಾನ್ ಖಾನ್ ಆಪ್ತ ಬಳಗದವರು ಚಿತ್ರವನ್ನು ವೀಕ್ಷಣೆ ಮಾಡಿದ್ದಾರೆ.

ನಿರ್ದೇಶಕ ಸುಭಾಷ್ ಘಾಯ್, ಕಬೀರ್ ಖಾನ್, ರಿತೇಶ್ ದೇಶ್​ಮುಖ್, ಸಲ್ಮಾನ್ ಖಾನ್ ಸೇರಿದಂತೆ ಅನೇಕರು ಸಿನಿಮಾ ವೀಕ್ಷಣೆ ಮಾಡಿದ್ದಾರೆ. ನಿರ್ಮಾಪಕ ಸಿದ್ಧಾರ್ಥ್ ರಾಯ್ ಕಪೂರ್ ಕೂಡ ಸಿನಿಮಾ ಪ್ರದರ್ಶನದ ವೇಳೆ ಇದ್ದರು. ಈ ಸಿನಿಮಾ ನೋಡಿದ ಬಳಿಕ ಸುಭಾಷ್ ಅವರು ತಮ್ಮ ವಿಮರ್ಶೆ ತಿಳಿಸಿದ್ದಾರೆ.

‘ನನ್ನ ನೆಚ್ಚಿನ ನಿರ್ದೇಶಕರೆಲ್ಲರೂ ಇಂದು ಫುಡ್ ಸ್ಕ್ವೇರ್​ನಲ್ಲಿ ಒಂದಾಗಿ, ಅಪೂರ್ವ ಲಖಿಯಾ ಅವರ ‘ಮಾತೃಭೂಮಿ’ ಚಿತ್ರದ ಪ್ರಾಥಮಿಕ ಆವೃತ್ತಿ ವೀಕ್ಷಿಸಿದೆವು. ಸಿನಿಮಾ ಅದ್ಭುತವಾಗಿದೆ. ಭಾರತ ಮತ್ತು ಚೀನಾದ ಸೈನಿಕರು ತಮ್ಮ ದೇಶ ಹಾಗೂ ಕುಟುಂಬಗಳ ಮೇಲಿಟ್ಟಿರುವ ಶಾಂತಿ-ಗೌರವದ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಮತ್ತು ಚಿತ್ರಾಂಗದಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ’ ಎಂದು ಅವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ರಣವೀರ್ ಸಿಂಗ್‌, ಫರ್ಹಾನ್ ಅಖ್ತರ್ ನಡುವಿನ ಜಗಳ ಬಿಡಿಸಲು ಸಲ್ಮಾನ್ ಖಾನ್ ಎಂಟ್ರಿ?

ಸಿನಿಮಾದ ಕಥಾವಸ್ತು ಬದಲಾವಣೆ ಹಾಗೂ ಚಿತ್ರ ಪದೇ ಪದೇ ತಡವಾಗುತ್ತಿರುವ ಬಗ್ಗೆ ಅನೇಕರು ಟೀಕೆ ಹೊರಹಾಕಿದ್ದರು. ಹೀಗಿರುವಾಗಲೇ ಸಿನಿಮಾ ಬಗ್ಗೆ ಪಾಸಿಟಿವ್ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದು ಸಲ್ಮಾನ್ ಖಾನ್ ಚಿತ್ರಕ್ಕೆ ದೊಡ್ಡ ಶಕ್ತಿ ನೀಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ArivuPro Academy: ಸಿಎ, ಎಸಿಸಿಎ ಸೇರಿದಂತೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಕೋರ್ಸ್​ಗಳಿಗೆ ಗುಣಮಟ್ಟದ ತರಬೇತಿ ನೀಡುವ ಅರಿವುಪ್ರೋ

ಅರಿವುಪ್ರೋ ಅಕಾಡೆಮಿ ವಿದ್ಯಾರ್ಥಿಗಳುImage Credit source: Arivupro Academy

ಇಂದಿನ ತೀವ್ರ ಸ್ಪರ್ಧಾತ್ಮಕ ಶೈಕ್ಷಣಿಕ ವಲಯದಲ್ಲಿ, ವಿದ್ಯಾರ್ಥಿಗಳು ಕೇವಲ ಸಾಂಪ್ರದಾಯಿಕ ಪದವಿಗಳಿಗಷ್ಟೇ ಸೀಮಿತವಾಗದೆ ಕೌಶಲ್ಯಾಧಾರಿತ ಕಲಿಕೆ, ಜಾಗತಿಕ ಮನ್ನಣೆ ಹೊಂದಿರುವ ಕೋರ್ಸ್‌ಗಳು ಮತ್ತು ಉತ್ತಮ ವೃತ್ತಿಜೀವನದ ಅವಕಾಶಗಳ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಈ ಬದಲಾವಣೆಯನ್ನು ಮನಗಂಡಿರುವ ‘ಅರಿವುಪ್ರೋ ಅಕಾಡೆಮಿ’ (ArivuPro Academy), ಹಣಕಾಸು (Finance) ಮತ್ತು ಅಕೌಂಟಿಂಗ್ ಕ್ಷೇತ್ರಗಳಲ್ಲಿ ಯಶಸ್ವಿ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಸಾವಿರಾರು ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಪ್ರಮುಖ ವೃತ್ತಿಪರ ಶಿಕ್ಷಣ ಸಂಸ್ಥೆಯಾಗಿ ಹೊರಹೊಮ್ಮಿದೆ.

ದಕ್ಷಿಣ ಭಾರತದಾದ್ಯಂತ ವಿದ್ಯಾರ್ಥಿಗಳ ನೆಚ್ಚಿನ ತಾಣವಾಗಿರುವ ಅರಿವುಪ್ರೋ ಅಕಾಡೆಮಿಯು (arivupro.com/) CA, CS, CMA, ACCA, US CMA, CPA, CFA, FRM ಮತ್ತು CIA ನಂತಹ ಪ್ರತಿಷ್ಠಿತ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ವೃತ್ತಿಪರ ಕೋರ್ಸ್‌ಗಳಿಗೆ ಸಮಗ್ರ ತರಬೇತಿಯನ್ನು ನೀಡುತ್ತಿದೆ.

ಅರಿವುಪ್ರೋ ಅಕಾಡೆಮಿ ವಿದ್ಯಾರ್ಥಿಗಳು

ವೃತ್ತಿ ಕೇಂದ್ರಿತ ಕಲಿಕೆಗೆ ಆದ್ಯತೆ

ಸಾಂಪ್ರದಾಯಿಕ ಕೋಚಿಂಗ್ ಸೆಂಟರ್‌ಗಳಿಗಿಂತ ಭಿನ್ನವಾಗಿ, ಅರಿವುಪ್ರೋ ಅಕಾಡೆಮಿಯು ವಿದ್ಯಾರ್ಥಿಗಳ ವೃತ್ತಿಜೀವನದ ಬೆಳವಣಿಗೆ ಮತ್ತು ಉದ್ಯಮಕ್ಕೆ ಅಗತ್ಯವಿರುವ ಸಿದ್ಧತೆಗಳಿಗೆ ಹೆಚ್ಚಿನ ಒತ್ತು ನೀಡುತ್ತದೆ. ಪ್ರತಿ ವಿದ್ಯಾರ್ಥಿಯ ಸಾಮರ್ಥ್ಯವನ್ನು ಗುರುತಿಸಿ, ಅವರ ವೃತ್ತಿಪರ ಗುರಿಗಳಿಗೆ ಅನುಗುಣವಾಗಿ ವೈಯಕ್ತಿಕ ಮಾರ್ಗದರ್ಶನವನ್ನು ಇಲ್ಲಿ ನೀಡಲಾಗುತ್ತದೆ. ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಫೈನಾನ್ಸ್ ಮತ್ತು ಅಕೌಂಟಿಂಗ್ ವೃತ್ತಿಪರರಿಗೆ ಬೇಡಿಕೆ ಹೆಚ್ಚುತ್ತಿರುವುದರಿಂದ, ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನ, ಉದ್ಯಮದ ಪರಿಚಯ ಮತ್ತು ಪರೀಕ್ಷಾ ಕೇಂದ್ರಿತ ತರಬೇತಿಯನ್ನು ನೀಡುವ ಮೂಲಕ ಅವರ ಉದ್ಯೋಗಾವಕಾಶಗಳನ್ನು ಸಂಸ್ಥೆಯು ಹೆಚ್ಚಿಸುತ್ತಿದೆ.

‘ಅರಿವುಪ್ರೋ ಒನ್’ ಸಮಗ್ರ ಕಲಿಕಾ ವೇದಿಕೆ

ವೃತ್ತಿಪರ ಶಿಕ್ಷಣವನ್ನು ಹೆಚ್ಚು ಸುಲಭ ಮತ್ತು ಪರಿಣಾಮಕಾರಿಯಾಗಿಸಲು, ಅಕಾಡೆಮಿಯು ‘ಅರಿವುಪ್ರೋ ಒನ್’ (ArivuPro One) ಎಂಬ ಸಂಯೋಜಿತ ಡಿಜಿಟಲ್ ಲರ್ನಿಂಗ್ ಪ್ಲಾಟ್​ಫಾರ್ಮ್ ಪರಿಚಯಿಸಿದೆ. ಈ ಒಂದೇ ವೇದಿಕೆಯಡಿ ವಿದ್ಯಾರ್ಥಿಗಳಿಗೆ ಈ ಕೆಳಗಿನ ಸೌಲಭ್ಯಗಳು ಲಭ್ಯವಿವೆ:

  • ಲೈವ್ (Live) ಕ್ಲಾಸ್​ಗಳು ಮತ್ತು ರೆಕಾರ್ಡೆಡ್ ಕ್ಲಾಸ್​ಗಳು
  • ಸಂಶಯ ನಿವಾರಣೆಗಾಗಿ ಪ್ರತ್ಯೇಕ ಸೆಷನ್‌ಗಳು.
  • ಮಾದರಿ ಪರೀಕ್ಷೆಗಳು (Mock Tests) ಮತ್ತು ಕಾರ್ಯಕ್ಷಮತೆಯ ವಿಶ್ಲೇಷಣೆ.
  • ವೈಯಕ್ತಿಕ ಮಾರ್ಗದರ್ಶನ (Mentorship) ಮತ್ತು ಪ್ರಗತಿ ಟ್ರ್ಯಾಕಿಂಗ್.
  • ವೃತ್ತಿಜೀವನದ ಮಾರ್ಗದರ್ಶನ ಮತ್ತು ಬೆಂಬಲ.

ಅರಿವುಪ್ರೋ ಅಕಾಡೆಮಿಯ ಸಾಧಕ ವಿದ್ಯಾರ್ಥಿಗಳು

ಪದವಿ ಮತ್ತು ವೃತ್ತಿಪರ ಕೋರ್ಸ್‌ಗಳ ಸಮನ್ವಯ

ಅರಿವುಪ್ರೋ ಅಕಾಡೆಮಿಯು ವಿದ್ಯಾರ್ಥಿಗಳಿಗೆ ತಮ್ಮ ಪದವಿ ಶಿಕ್ಷಣದ ಜೊತೆಯಲ್ಲೇ ವೃತ್ತಿಪರ ಅರ್ಹತೆಗಳನ್ನು ಪಡೆಯಲು ನೆರವಾಗುವ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿದೆ. ವಿದ್ಯಾರ್ಥಿಗಳು ಆನ್‌ಲೈನ್ ಬಿ.ಕಾಂ (Online BCom) ಪದವಿಯೊಂದಿಗೆ ಸಿಎ, ಸಿಎಸ್, ಸಿಎಂಎ, ಎಸಿಸಿಎ, ಯುಎಸ್ ಸಿಎಂಎ, ಇಎ, ಸಿಐಎ ಮತ್ತು ಎಫ್‌ಆರ್‌ಎಂ ನಂತಹ ವೃತ್ತಿಪರ ಕೋರ್ಸ್‌ಗಳನ್ನು ಒಟ್ಟಿಗೇ ಕಲಿಯಬಹುದು. ಈ ವಿನ್ಯಾಸವು ವಿದ್ಯಾರ್ಥಿಗಳು ಪದವಿ ಮತ್ತು ವೃತ್ತಿಪರ ಪರೀಕ್ಷೆಗಳೆರಡನ್ನೂ ಸಮರ್ಥವಾಗಿ ಬ್ಯಾಲೆನ್ಸ್ ಮಾಡಲು ಮತ್ತು ವೃತ್ತಿಜೀವನದಲ್ಲಿ ವೇಗವಾಗಿ ಮುನ್ನಡೆಯಲು ಸಹಕಾರಿಯಾಗಿದೆ.

ಅನುಭವಿ ತಜ್ಞರ ಮಾರ್ಗದರ್ಶನ

ಉದ್ಯಮದ ಪರಿಣಿತರು ಮತ್ತು ಅರ್ಹ ವೃತ್ತಿಪರರನ್ನೊಳಗೊಂಡ ಬೋಧಕ ಮಂಡಳಿಯು ಅರಿವುಪ್ರೋ ಅಕಾಡೆಮಿಯ ಪ್ರಮುಖ ಶಕ್ತಿಯಾಗಿದೆ. ಕೇವಲ ತರಗತಿಯ ಬೋಧನೆಗಷ್ಟೇ ಸೀಮಿತವಾಗದೆ, ಪರೀಕ್ಷಾ ತಂತ್ರಗಳು, ಸಮಯ ನಿರ್ವಹಣೆ, ವೃತ್ತಿ ಯೋಜನೆ ಮತ್ತು ಉದ್ಯಮದ ನಿರೀಕ್ಷೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ಮಾರ್ಗದರ್ಶನ ನೀಡಲಾಗುತ್ತದೆ. ಈ ಯಶಸ್ವಿ ಮೆಂಟರ್‌ಶಿಪ್ ಮಾದರಿಯೇ ವಿದ್ಯಾರ್ಥಿಗಳ ಉತ್ತಮ ಫಲಿತಾಂಶಕ್ಕೆ ಕಾರಣವಾಗಿದೆ.

ಅರಿವುಪ್ರೋ ಅಕಾಡೆಮಿಯ ಕ್ಲಾಸ್​ರೂಂ

ದಕ್ಷಿಣ ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಬ್ರ್ಯಾಂಡ್

ಬೆಂಗಳೂರು, ಚೆನ್ನೈ ಮತ್ತು ಕೊಯಮತ್ತೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ತನ್ನ ಶಾಖೆಗಳನ್ನು ವಿಸ್ತರಿಸಿರುವ ಅರಿವುಪ್ರೋ, ಸಾವಿರಾರು ವಿದ್ಯಾರ್ಥಿಗಳ ವಿಶ್ವಾಸ ಗಳಿಸಿದೆ. ಸಂಸ್ಥೆಯು ಆನ್‌ಲೈನ್ ಮತ್ತು ಆಫ್‌ಲೈನ್ ಎರಡೂ ಮಾದರಿಗಳಲ್ಲಿ ತರಬೇತಿ ನೀಡುತ್ತಿದ್ದು, ದೇಶದ ಯಾವುದೇ ಮೂಲೆಯ ವಿದ್ಯಾರ್ಥಿಗಳಿಗೂ ಗುಣಮಟ್ಟದ ವೃತ್ತಿಪರ ಶಿಕ್ಷಣ ಲಭ್ಯವಾಗುವಂತೆ ಮಾಡಿದೆ.

ಶಿಕ್ಷಣವು ಕೇವಲ ಪರೀಕ್ಷೆಗಳನ್ನು ಪಾಸು ಮಾಡುವುದಕ್ಕೆ ಮಾತ್ರ ಸೀಮಿತವಾಗಿರದೆ, ದೀರ್ಘಕಾಲೀನ ಯಶಸ್ವಿ ವೃತ್ತಿಜೀವನಕ್ಕೆ ನಾಂದಿಯಾಗಬೇಕು ಎಂದು ನಂಬಿರುವ ಅರಿವುಪ್ರೋ ಅಕಾಡೆಮಿಯು ಭಾರತದಲ್ಲಿ ವೃತ್ತಿಪರ ಶಿಕ್ಷಣದ ಭವಿಷ್ಯವನ್ನು ರೂಪಿಸುತ್ತಿದೆ.

ಅರಿವುಪ್ರೋ ಅಕಾಡೆಮಿ ಸಿಬ್ಬಂದಿಯ ಎಐ ಸೃಷ್ಟಿತ ಚಿತ್ರ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

  • ಅಧಿಕೃತ ವೆಬ್‌ಸೈಟ್: ಅರಿವುಪ್ರೋ ಅಕಾಡೆಮಿಯ ಅಧಿಕೃತ ವೆಬ್‌ಸೈಟ್‌ಗೆ (www.arivupro.com/) ಭೇಟಿ ನೀಡಿ ಅಥವಾ ಹತ್ತಿರದ ಶಾಖೆಯನ್ನು ಸಂಪರ್ಕಿಸಬಹುದು.
  • ಫೋನ್ ಸಂಖ್ಯೆ: +91 9686665253
  • ಇಮೇಲ್: help@arivupro.com

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಆಪ್ತರನ್ನೇ ಅನ್​ಫಾಲೋ ಮಾಡಿದ್ದಕ್ಕೆ ಕಾರಣ ತಿಳಿಸಿದ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್

ಬಾಲಿವುಡ್‌ನ ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ಕರಣ್ ಜೋಹರ್ (Karan Johar) ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ದಿಢೀರನೆ ಚಿತ್ರರಂಗದ ಹಲವು ಸ್ಟಾರ್‌ ನಟ-ನಟಿಯರು ಹಾಗೂ ಆಪ್ತ ಸ್ನೇಹಿತರನ್ನು ಅನ್‌ಫಾಲೋ (Unfollow) ಮಾಡುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದ್ದರು. ಇದೀಗ ಈ ಎಲ್ಲಾ ಚರ್ಚೆಗಳಿಗೆ ಸ್ವತಃ ಕರಣ್ ಜೋಹರ್ ಅವರೇ ತೆರೆ ಎಳೆದಿದ್ದು, ತಮ್ಮ ಈ ನಡೆಗೆ ಅಸಲಿ ಕಾರಣವನ್ನು ಸ್ಪಷ್ಟಪಡಿಸಿದ್ದಾರೆ. ಗುರುವಾರ (ಮೇ 28) ಕರಣ್ ಜೋಹರ್ ಅವರು ಇನ್‌ಸ್ಟಾಗ್ರಾಮ್ ಫಾಲೋಯಿಂಗ್ ಲಿಸ್ಟ್‌ನಿಂದ ಶಾರುಖ್ ಖಾನ್ (Shah Rukh Khan), ಕರೀನಾ ಕಪೂರ್, ಮಲೈಕಾ ಅರೋರಾ, ಕಾರ್ತಿಕ್ ಆರ್ಯನ್, ಅನನ್ಯಾ ಪಾಂಡೆ ಮತ್ತು ತಮ್ಮ ದಶಕಗಳ ಆಪ್ತ ಸ್ನೇಹಿತ-ವಸ್ತ್ರವಿನ್ಯಾಸಕ ಮನೀಶ್ ಮಲ್ಹೋತ್ರಾ ಸೇರಿದಂತೆ ಹಲವರನ್ನು ತೆಗೆದುಹಾಕಿದ್ದರು.

ಅಷ್ಟೇ ಅಲ್ಲದೆ, ತಮ್ಮದೇ ಗರಡಿಯಲ್ಲಿ ಬೆಳೆದ ಆಲಿಯಾ ಭಟ್, ವರುಣ್ ಧವನ್ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರನ್ನೂ ಸಹ ಅವರು ಅನ್‌ಫಾಲೋ ಮಾಡಿದ್ದರು. ಆದರೆ, ಈ ಪಟ್ಟಿಯಲ್ಲಿ ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ ಅವರ ಹೆಸರು ಮಾತ್ರ ಇನ್ನೂ ಹಾಗೇ ಉಳಿದಿರುವುದು ನೆಟ್ಟಿಗರ ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು. ಸದ್ಯ ಕರಣ್ ಅವರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕೇವಲ 78 ಜನರನ್ನು ಮಾತ್ರ ಫಾಲೋ ಮಾಡುತ್ತಿರುವುದು ಕಾಣಿಸುತ್ತಿದೆ.

ಬಾಲಿವುಡ್ ವಲಯದಲ್ಲಿ ಈ ಅನ್‌ಫಾಲೋ ಸಂಗತಿ ಬಗ್ಗೆ ನಾನಾ ರೀತಿಯ ವದಂತಿಗಳು ಮತ್ತು ಗಾಸಿಪ್‌ಗಳು ಹರಡಲಾರಂಭಿಸಿದವು. ಚಿತ್ರರಂಗದ ಆಪ್ತರ ನಡುವೆ ಏನಾದರೂ ಬಿರುಕು ಮೂಡಿದೆಯೇ ಎಂಬ ಚರ್ಚೆಗಳೂ ನಡೆದವು. ಈ ಎಲ್ಲಾ ಗೊಂದಲಗಳಿಗೆ ಗುರುವಾರ ರಾತ್ರಿ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಕರಣ್ ಜೋಹರ್ ನೇರ ಉತ್ತರ ನೀಡಿದ್ದಾರೆ.

‘ಇದು ಕೇವಲ ಡಿಜಿಟಲ್ ಡಿಟಾಕ್ಸ್ ಅಷ್ಟೇ! ಸೋಶಿಯಲ್ ಮೀಡಿಯಾದಲ್ಲಿ ನನ್ನ ಸಮಯ ಮತ್ತು ಶಕ್ತಿಯನ್ನು ವ್ಯರ್ಥ ಮಾಡುವುದನ್ನು ಕಡಿಮೆ ಮಾಡಿಕೊಳ್ಳಲು ನಾನು ಎಲ್ಲರನ್ನೂ ಅನ್‌ಫಾಲೋ ಮಾಡುತ್ತಿದ್ದೇನೆ’ ಎಂದು ಕರಣ್ ಜೋಹರ್ ಅವರು ಸ್ಪಷ್ಟನೆ ನೀಡಿದ್ದಾರೆ. ತಮ್ಮ ವೈಯಕ್ತಿಕ ನಿರ್ಧಾರವನ್ನು ಮಾಧ್ಯಮಗಳು ದೊಡ್ಡ ಸುದ್ದಿಯನ್ನಾಗಿ ಮಾಡುತ್ತಿರುವುದಕ್ಕೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬದಲಾದ ಕರಣ್ ಜೋಹರ್; ಬಾಲಿವುಡ್ ನೆಪೋ ಕಿಡ್ಸ್ ಕಳ್ಳಾಟ ಬಯಲು ಮಾಡಿದ ನಿರ್ಮಾಪಕ

‘ದಯವಿಟ್ಟು ಇದನ್ನು ರಾಷ್ಟ್ರೀಯ ಸುದ್ದಿ ಮಾಡಬೇಡಿ. ಜನರನ್ನು ಸೆಳೆಯಲು ಬೇರೆ ಯಾವುದಾದರೂ ವಿಷಯ ಹುಡುಕಿಕೊಳ್ಳಿ! ಇದು ತೀರಾ ಅಪ್ರಸ್ತುತವಾದ ವಿಚಾರ’ ಎಂದು ಕರಣ್ ಜೋಹರ್ ಅವರು ಟೀಕೆ ಮಾಡಿದ್ದಾರೆ. ಅನ್‌ಫಾಲೋ ಮಾಡಿದ್ದರ ಹಿಂದೆ ಯಾವುದೇ ವೈಯಕ್ತಿಕ ದ್ವೇಷ ಅಥವಾ ಮುನಿಸು ಇಲ್ಲ ಎಂಬುದು ಈ ಸ್ಪಷ್ಟನೆಯಿಂದ ತಿಳಿದಂತಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಎಸ್ಟೇಟ್​​​ನಲ್ಲಿ ಬೀಡುಬಿಟ್ಟ ಕಾಡಾನೆಗಳ ಹಿಂಡು: ಗಜಪಡೆ ಕಂಡು ಸಾರ್ವಜನಿಕರು ಕಂಗಾಲು

ಚಿಕ್ಕಮಗಳೂರು, ಮೇ 29: ಜಿಲ್ಲೆಯಲ್ಲಿ ಕಾಡಾನೆ ಉಪಟಳ ಮುಂದುವರಿದಿದ್ದು, ಕಡವಂತಿಯ ವಡ್ಡಿಗುಡ್ಡ ಎಸ್ಟೇಟ್​ನಲ್ಲಿ ಗಜಪಡೆ ಪ್ರತ್ಯಕ್ಷವಾಗಿದೆ. ಕಡವಂತಿ, ಬಿಳಗೊಳ, ಹ್ಯಾರಂಬಿಪುರ, ಪುರ, ಮಲ್ಲಿಗೆಖಾನ್, ಬೇರಣಗೋಡು ಸುತ್ತಮುತ್ತವೇ ಕಾಡಾನೆಗಳು ಸಂಚಾರ ಮಾಡುತ್ತಿದ್ದು, ಇವುಗಳ ಹಾವಳಿ ತಡೆಗಟ್ಟುವಂತೆ ಸ್ಥಳೀಯ ನಿವಾಸಿಗಳು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ. ಬಾಳೆಹೊನ್ನೂರು ವಲಯ ಅರಣ್ಯ ವ್ಯಾಪ್ತಿಯಲ್ಲಿ ಆನೆಗಳು ಜನವಸತಿ ಪ್ರದೇಶಗಳ ಸಮೀಪವೇ ಪ್ರತ್ಯಕ್ಷವಾಗ್ತಿರೋದು ಸಾರ್ವಜನಿಕರ ಆತಂಕ ಹೆಚ್ಚಿಸಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕೊನೆಗೂ ದಿಲ್ಲಿಯಲ್ಲಿ ಮೌನ ಮುರಿದ ಡಿಕೆ ಶಿವಕುಮಾರ್, ಪ್ರಮಾಣವಚನದ ಬಗ್ಗೆ ಹೇಳಿದ್ದಿಷ್ಟು

ನವದೆಹಲಿ, (ಮೇ 29): ಕಳೆದ ಎರಡ್ಮೂರು ದಿನಗಳಿಂದ ಮೌನಕ್ಕೆ ಶರಣಾಗಿದ್ದ ಡಿಕೆ ಶಿವಕುಮಾರ್ (DK Shivakumar) ಕೊನೆಗೂ ತುಟಿ ಬಿಚ್ಚಿ ಮಾತನಾಡಿದ್ದಾರೆ. ಸಿದ್ದರಾಮಯ್ಯ (Siddaramaiah) ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡದ ಬೆನ್ನಲ್ಲೇ ಡಿಕೆ ಶಿವಕುಮಾರ್ ಸಹ ದೆಹಲಿಯಲ್ಲಿ ಬೀಡು ಬಿಟ್ಟಿದ್ದು, ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಹೊಸ ಸಚಿವ ಸಂಪುಟದ ಬಗ್ಗೆ ಚರ್ಚೆ ನಡೆಸಿದ್ದಾರೆ. ಇನ್ನು ಇದೇ ವೇಳೆ ಮೊದಲ ಬಾರಿಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಡಿಕೆ ಶಿವಕುಮಾರ್, ನಾಳೆ (ಮೇ 30) ಸಿಎಲ್ ಪಿ ಸಭೆ (ಕಾಂಗ್ರೆಸ್ ಶಾಸಕಾಂಗ ಸಭೆ) ಕರೆದಿದ್ದು, ಹೈಕಮಾಂಡ್ ನಾಯಕರು ವೀಕ್ಷಕರಾಗಿ ಬರಲಿದ್ದಾರೆ. ಹೀಗಾಗಿ ಯಾವುದೇ ಶಾಸಕರು ದೆಹಲಿಗೆ ಬರಬೇಡಿ ಎಂದು ಹೇಳಿದ್ದೇವೆ. ಕೆಲ ವಿಚಾರಗಳನ್ನ ಸಿದ್ದರಾಮಯ್ಯನವರ ನಾವು ಚರ್ಚೆ ಮಾಡಿದ್ದೇವೆ. ಸಿಎಲ್ ಪಿ ಬಳಿಕ ಪ್ರಮಾಣ ವಚನಕ್ಕೆ ದಿನ ನಿಗಧಿಯಾಗಲಿದೆ ಎಂದು ಸ್ಪಷ್ಟಪಡಿಸಿದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಹಳದಿ ಶಾಸ್ತ್ರದ ವೇಳೆ ಅವಘಡ, ಯುವತಿ ದೇಹ ಸುಟ್ಟಿದ್ದರೂ ಆಕೆಯನ್ನೇ ಮದುವೆಯಾದ ವರ

ಕಾನ್ಪುರ, ಮೇ 29: ಹಳದಿ ಶಾಸ್ತ್ರದ ವೇಳೆ ಸಂಭವಿಸಿದ ಸ್ಫೋಟದಲ್ಲಿ ಯುವತಿ ದೇಹ ಸುಟ್ಟು ಹೋಗಿದ್ದರೂ, ವರ ಆಕೆಯೇ ಬೇಕೆಂದು ಹಠ ತೊಟ್ಟು ಮದುವೆಯಾಗಿರುವ ಘಟನೆ ಕಾನ್ಪುರದಲ್ಲಿ ನಡೆದಿದೆ. ಮದುವೆಯ ಮುನ್ನಾದಿನದ ಹಳದಿ (Haldi) ಶಾಸ್ತ್ರದ ಸಂಭ್ರಮದಲ್ಲಿದ್ದಾಗ, ದಿಢೀರನೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ವಧು ಸೇರಿದಂತೆ ಹಲವರು ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದರು. ದೇಹ ಸುಟ್ಟುಹೋಗಿದ್ದರಿಂದ ವಧುವಿನ ಕುಟುಂಬಸ್ಥರು ಮದುವೆ ಮುರಿದುಬೀಳಬಹುದು ಎಂಬ ಆತಂಕದಲ್ಲಿದ್ದರು.
ಆದರೆ, ಕಷ್ಟದ ಸಮಯದಲ್ಲಿ ಕೈಬಿಡದ ವರ, ರೂಪಕ್ಕಿಂತ ಗುಣವೇ ಮುಖ್ಯ ಎಂದು ಆಸ್ಪತ್ರೆಯಲ್ಲೇ ಆಕೆಯ ಕೈ ಹಿಡಿದು ಮದುವೆಯಾಗಿದ್ದಾನೆ. ವರನ ನಿರ್ಧಾರ ಮತ್ತು ಧೈರ್ಯಕ್ಕೆ ದೇಶಾದ್ಯಂತ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದ್ದು, ಈ ದಂಪತಿ ನಿಜವಾದ ಪ್ರೀತಿಗೆ ಅತ್ಯಮೂಲ್ಯ ಉದಾಹರಣೆಯಾಗಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಉಪ ರಾಷ್ಟ್ರಪತಿಗಳಿಂದ ಶ್ರೀ ರವಿಶಂಕರ್​​ ಗುರೂಜಿ ಗುಣಗಾನ: ವಿಶೇಷ ಅಂಚೆ ಚೀಟಿ ಬಿಡುಗಡೆ

ಆರ್ಟ್​​ ಆಫ್​​ ಲಿವಿಂಗ್​​ ಕಾರ್ಯಕ್ರಮದಲ್ಲಿ ಭಾಗಿಯಾದ ಉಪ ರಾಷ್ಟ್ರಪತಿಗಳು

ಬೆಂಗಳೂರು,ಮೇ 29 : ದಿ ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಯುವ ಅಭಿವೃದ್ಧಿ, ಉದ್ಯಮಶೀಲತೆ, ಸುಸ್ಥಿರತೆ, ಪ್ರಜ್ಞೆಯ ಅಧ್ಯಯನಗಳು ಮತ್ತು ಶಿಕ್ಷಣವನ್ನು ಒಳಗೊಂಡ ಐದು ಪ್ರಮುಖ ಉಪಕ್ರಮಗಳಿಗೆ ಭಾರತದ ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಚಾಲನೆ ನೀಡಿದ್ದಾರೆ. ದಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ 45 ವರ್ಷಗಳ ಮಾನವೀಯ ಸೇವೆ ಮತ್ತು ಈ ತಿಂಗಳು 70 ವರ್ಷಕ್ಕೆ ಕಾಲಿಟ್ಟ ಶ್ರೀ ರವಿ ಶಂಕರ್ ಗುರೂಜಿ ಅವರ ಜೀವನಪರ್ಯಂತ ಶಾಂತಿ, ಯೋಗಕ್ಷೇಮ ಮತ್ತು ಮಾನವೀಯ ಮೌಲ್ಯಗಳಿಗೆ ನೀಡಿದ ಕೊಡುಗೆಯನ್ನು ಸ್ಮರಿಸುವ ಕಾರ್ಯಕ್ರಮ ಇದಾಗಿದೆ.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ , ಇಂದು ನಡೆಯುತ್ತಿರುವುದು ಒಂದು ಶ್ರೇಷ್ಠ ದೃಷ್ಟಿಯ ಆಚರಣೆಯಾಗಿದ್ದು, ಇದು ಖಂಡಗಳಾದ್ಯಂತ ಲಕ್ಷಾಂತರ ಜನರ ಜೀವನವನ್ನು ಸ್ಪರ್ಶಿಸಿದೆ. ದಿ ಆರ್ಟ್ ಆಫ್ ಲಿವಿಂಗ್ 182 ದೇಶಗಳಲ್ಲಿ ಇರುವುದು ನನಗೆ ಆಶ್ಚರ್ಯವನ್ನುಂಟು ಮಾಡಿದೆ. ಮಾನವ ವರ್ಗದ ಬಹುತೇಕ ನಾಗರಿಕತೆಯು ಈ ಆಂದೋಲನದ ಮೂಲಕ ಸಂಪರ್ಕಗೊಳ್ಳುತ್ತಿದೆ ಎಂದಿದ್ದಾರೆ. ಸಂಘರ್ಷ ಮತ್ತು ಅನಿಶ್ಚಿತತೆಯಿಂದ ಗುರುತಿಸಲ್ಪಟ್ಟ ಜಗತ್ತಿನಲ್ಲಿ, ಶ್ರೀ ರವಿ ಶಂಕರ್ ಗುರೂಜಿ ಅವರು ವಿವೇಕ, ಅರಿವು, ಶಾಂತಿ ಮತ್ತು ಸೌಹಾರ್ದತೆಯ ಮೌಲ್ಯಗಳೊಂದಿಗೆ ಮಾನವೀಯತೆಯನ್ನು ಪ್ರೇರೇಪಿಸುವುದನ್ನು ಮುಂದುವರೆಸಿರೋದಾಗಿ ಶ್ಲಾಘಿಸಿದ್ದಾರೆ. ರವಿಶಂಕರ್​​ ಗುರೂಜಿ ಅವರ ಸರಳತೆ ಮತ್ತು ಪ್ರಭಾವವನ್ನು ಶ್ಲಾಘಿಸಿದ ರಾಧಾಕೃಷ್ಣನ್, ಅವರ ನಗು, ವಿನಮ್ರತೆ ಮತ್ತು ಪ್ರೀತಿ ಪ್ರತಿಯೊಬ್ಬರ ಹೃದಯವನ್ನೂ ಸ್ಪರ್ಶಿಸುತ್ತದೆ. ಅವರ ಕೊಡುಗೆಯನ್ನು ಅಸಾಧಾರಣವಾಗಿಸುವುದು ಅವರು ಸಾಕಾರವಾಗಿಸಿರುವ ವಿನಯ ಮತ್ತು ಮಾನವೀಯತೆ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಧ್ಯಾನ ಮೂಲಭೂತ ಅವಶ್ಯಕತೆ’

ಉಪ ರಾಷ್ಟ್ರಪತಿಗಳನ್ನು ಸ್ವಾಗತಿಸಿ ಮಾತನಾಡಿದ ಶ್ರೀ ರವಿಶಂಕರ್​​ ಗುರೂಜಿ, ಧ್ಯಾನವು ಈಗ ಕೇವಲ ಐಷಾರಾಮವಾಗಿ ಉಳಿದಿಲ್ಲ ಎಂಬುದನ್ನು ಇಂದು ಪ್ರಪಂಚ ಗುರುತಿಸಿದೆ. ವಿಶ್ವ ಧ್ಯಾನ ದಿನವನ್ನು ಘೋಷಿಸಲು 192 ದೇಶಗಳು ಒಗ್ಗೂಡಿರುವುದರಿಂದ, ಧ್ಯಾನವು ಆರೋಗ್ಯಕರ, ಸಂತೋಷದ ಮತ್ತು ಒತ್ತಡ-ಮುಕ್ತ ಜೀವನಕ್ಕೆ ಒಂದು ಮೂಲಭೂತ ಅವಶ್ಯಕತೆ ಎಂಬ ತಿಳುವಳಿಕೆ ಹೆಚ್ಚುತ್ತಿದೆ ಎಂದಿದ್ದಾರೆ. ಜೊತೆಗೆ ಜ್ಞಾನ, ಧ್ಯಾನ ಮತ್ತು ಸಂಗೀತ ಎಂಬ ಮೂರು ವಿಷಯಗಳು ಯಾವಾಗಲೂ ನಮ್ಮೊಂದಿಗೆ ಜೀವನದುದ್ದಕ್ಕೂ ಇರಬೇಕು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಆರ್ಟ್ ಆಫ್ ಲಿವಿಂಗ್​ನ ಪರಿಶ್ರಮದಿಂದ ಮಹಿಮಾಪುರ ಗುಡ್ಡ ಈಗ ಹಸಿರುಮಯ

ಸಭೆಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಈ ಜಾಗತಿಕ ಆಂದೋಲನದ ಬೇರುಗಳು ನಮ್ಮ ಪುಣ್ಯಭೂಮಿಗೆ ಸಂಪರ್ಕಗೊಂಡಿರುವುದು ಕರ್ನಾಟಕಕ್ಕೆ ಹೆಮ್ಮೆಯ ವಿಷಯವಾಗಿದೆ. ನಾಲ್ಕು ದಶಕಗಳಿಗಿಂತಲೂ ಹೆಚ್ಚು ಕಾಲ, ದಿ ಆರ್ಟ್ ಆಫ್ ಲಿವಿಂಗ್ ವಿವಿಧ ಕಾರ್ಯಕ್ರಮಗಳ ಮೂಲಕ ವೈಯಕ್ತಿಕ, ಸಮುದಾಯ ಮತ್ತು ಜಾಗತಿಕ ಮಟ್ಟದಲ್ಲಿ ಶಾಂತಿ ಮತ್ತು ಯೋಗಕ್ಷೇಮವನ್ನು ಉತ್ತೇಜಿಸುತ್ತಿದೆ. ಮಾನವೀಯ ಸೇವೆಗೆ ಮೀರಿ, ಶ್ರೀ ರವಿಶಂಕರ ಗುರೂಜಿ ಅವರ ಶಾಂತಿ ನಿರ್ಮಾಣದ ಪ್ರಯತ್ನಗಳು ದೀರ್ಘಕಾಲದ ಸಂಘರ್ಷಗಳನ್ನು ಪರಿಹರಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿವೆ. ಮಾನವೀಯ ಮೌಲ್ಯಗಳ ಪುನರುಜ್ಜೀವನದ ಮೂಲಕ ಹಿಂಸಾಚಾರ ಮುಕ್ತ ಮತ್ತು ಒತ್ತಡ ಮುಕ್ತ ಸಮಾಜದ ಅವರ ದೃಷ್ಟಿಯು ಪ್ರಪಂಚದಾದ್ಯಂತ ಮೆಚ್ಚುಗೆ ಮತ್ತು ಮನ್ನಣೆಯನ್ನು ಪಡೆದಿದೆ ಎಂದಿದ್ದಾರೆ.

ಅಂಚೆ ಚೀಟಿ ಅನಾವರಣ

ದಿ ಆರ್ಟ್ ಆಫ್ ಲಿವಿಂಗ್‌ ವೈಯಕ್ತಿಕ ಯೋಗಕ್ಷೇಮ, ಸಾಮಾಜಿಕ ಪರಿವರ್ತನೆ ಮತ್ತು ಜಾಗತಿಕ ಶಾಂತಿಗೆ ನೀಡಿದ 45 ವರ್ಷಗಳ ಕೊಡುಗೆಯನ್ನು ಗುರುತಿಸುವ ಸ್ಮರಣಾರ್ಥ ಅಂಚೆ ಚೀಟಿಯನ್ನೂ ಇದೇ ವೇಳೆ ಉಪ ರಾಷ್ಟ್ರಪತಿಗಳು ಗಣ್ಯರೊಂದಿಗೆ ಅನಾವರಣಗೊಳಿಸಿದ್ದಾರೆ.

ವಿದ್ಯಾರ್ಥಿಗಳ ಜೊತೆ ಸಂವಾದ

ಆಶ್ರಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಉಪ ರಾಷ್ಟ್ರಪತಿಗಳು ಸಂಸ್ಥೆಯ ವಿವಿಧ ಸೌಲಭ್ಯಗಳನ್ನು ವೀಕ್ಷಿಸಿದ್ದಾರೆ. ಗುರುಕುಲಕ್ಕೆ ಭೇಟಿ ನೀಡಿ, ವಿದ್ಯಾರ್ಥಿಗಳೊಂದಿಗೆ ಸಂವಾದವನ್ನೂ ನಡೆಸಿದ್ದಾರೆ. ಶ್ರೀ ಪ್ರತಾಪ ಗಣಪತಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಅವರು, ಶ್ರೀ ಸೋಮನಾಥ ಜ್ಯೋತಿರ್ಲಿಂಗದ ಪವಿತ್ರ ಅಂಶಗಳ ದರ್ಶನ ಪಡೆಯುವ ಜೊತೆಗೆ ಸುಮಾರು 1,600 ಸ್ಥಳೀಯ ಹಸುಗಳಿರುವ ಗೋಶಾಲೆಗೆ ಭೇಟಿ ನೀಡಿದ್ದಾರೆ.

ಚಾಲನೆ ನೀಡಲಾದ ಉಪಕ್ರಮಗಳಲ್ಲಿ ಯುವ ವೃತ್ತಿ ಶ್ರೇಷ್ಠತಾ ಕಾರ್ಯಕ್ರಮ (Youth Career Excellence Program), ಪೂರ್ವ ಜ್ಞಾನ ವ್ಯವಸ್ಥೆಗಳ ಅಧ್ಯಾಪಕರು (Faculty of Eastern Knowledge Systems), ಆರ್ಟ್ ಆಫ್ ಲಿವಿಂಗ್ ಇನ್ನೋವೇಶನ್ ಮತ್ತು ಉದ್ಯಮಶೀಲತಾ ಇನ್‌ಕ್ಯುಬೇಶನ್ (Art of Living Innovation and Entrepreneurship Incubation), ಪ್ರಜ್ಞೆಯ ಅಧ್ಯಯನಗಳು ಮತ್ತು ಮಾನವ ಸಾಮರ್ಥ್ಯದ ಉತ್ಕೃಷ್ಟತಾ ಕೇಂದ್ರ (Centre of Excellence on Consciousness Studies and Human Potential), ಮತ್ತು ಇಕೋ ಶಾಂತಿ (Eco Shanti) ಸೇರಿವೆ.

ಈ ಸಮಾರಂಭದೊಂದಿಗೆ ದಿ ಆರ್ಟ್ ಆಫ್ ಲಿವಿಂಗ್ ಅಂತರಾಷ್ಟ್ರೀಯ ಕೇಂದ್ರದಲ್ಲಿ ಒಂದು ತಿಂಗಳ ಕಾಲ ನಡೆದ ಆಚರಣೆಯು ಮುಕ್ತಾಯಗೊಂಡಿದೆ. ಭಾರತ ಮತ್ತು ಪ್ರಪಂಚದಾದ್ಯಂತದ ರಾಜಕೀಯ ವಲಯದ ರಾಷ್ಟ್ರೀಯ ನಾಯಕರು, ವ್ಯಾಪಾರ ದಿಗ್ಗಜರು, ಕ್ರೀಡಾಪಟುಗಳು, ಉದ್ಯಮಿಗಳು, ಶಿಕ್ಷಣ ತಜ್ಞರು, ಧರ್ಮ ಗುರುಗಳು, ರಾಜತಾಂತ್ರಿಕರು, ಕಲಾವಿದರು ಮತ್ತು ಸಾಮಾಜಿಕ ಪರಿವರ್ತನಾಕಾರರು ಸೇರಿದಂತೆ 678 ಗಣ್ಯ ಅತಿಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ವಿಶೇಷ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 2:29 pm, Fri, 29 May 26

Source link

ಸಿದ್ದರಾಮಯ್ಯ ಆಪ್ತರೇ ಸಹಿ ಸಂಗ್ರಹಿಸಿ ಬೆನ್ನಿಗೆ ಚೂರಿ ಹಾಕಿದ್ರಾ? ಜಾರಕಿಹೊಳಿ ಏನಂದ್ರು ನೋಡಿ

ಬೆಂಗಳೂರು, ಮೇ 29: ಸಿದ್ದರಾಮಯ್ಯ ಬೆನ್ನಿಗೆ ಅವರ ಆಪ್ತರು ಚೂರಿ ಹಾಕಿದ ಆರೋಪಗಳಿಗೆ ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ. ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಹೈಕಮಾಂಡ್‌ನ ಪೂರ್ವ ನಿರ್ಧರಿತ ಒಪ್ಪಂದದಂತೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ. ಇದು ಯಾವುದೇ ರೀತಿಯ ಆಂತರಿಕ ರಾಜಕೀಯ ಸಂಘರ್ಷದ ಪ್ರಶ್ನೆಯೇ ಅಲ್ಲ ಎಂದು ಜಾರಕಿಹೊಳಿ ದೃಢಪಡಿಸಿದ್ದಾರೆ. ಸಿದ್ದರಾಮಯ್ಯನವರ ವಿರುದ್ಧ ಸಹಿ ಸಂಗ್ರಹ ಅಭಿಯಾನ ನಡೆದಿರುವ ವರದಿಗಳನ್ನು, ಆರೋಪಗಳನ್ನು ಸುಳ್ಳು ಎಂದು ಜಾರಕಿಹೊಳಿ ತಳ್ಳಿಹಾಕಿದರು. ಅಂತಹ ಯಾವುದೇ ಸಹಿ ಹೈಕಮಾಂಡ್‌ಗೆ ತಲುಪಿಲ್ಲ ಅಥವಾ ಅದರ ಬಗ್ಗೆ ಚರ್ಚೆಯೂ ನಡೆದಿಲ್ಲ ಎಂದರು. ಇದು ಯಾರೋ ವಾಟ್ಸ್‌ಆ್ಯಪ್ ಅಥವಾ ಟ್ವೀಟರ್‌ನಲ್ಲಿ ಹರಿಬಿಟ್ಟ ಸುಳ್ಳು ಸುದ್ದಿ ಎಂದು ಅವರು ಹೇಳಿದರು.

ಸಿದ್ದರಾಮಯ್ಯ ಅನುಪಸ್ಥಿತಿ ಕಾಂಗ್ರೆಸ್‌ಗೆ ಕಾಡುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅವರು ರಾಜ್ಯ ರಾಜಕಾರಣದಲ್ಲಿಯೇ ಇರಲಿದ್ದಾರೆ ಎಂದರು. 2028ರಲ್ಲಿ ಪಕ್ಷವನ್ನು ಗೆಲ್ಲಿಸಲು ಕೆಲಸ ಮಾಡುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಹೊಸ ಮುಖ್ಯಮಂತ್ರಿ ಮತ್ತು ಸಚಿವ ಸಂಪುಟ ರಚನೆಯಾದ ನಂತರ ಅವರ ಅನುಭವವನ್ನು ಪಕ್ಷವು ಸೂಕ್ತ ಸಮಯದಲ್ಲಿ ಬಳಸಿಕೊಳ್ಳಲಿದೆ ಎಂದು ಜಾರಕಿಹೊಳಿ ಸ್ಪಷ್ಟಪಡಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link