Headlines

nagaraj11081993

ಈ ಲಕ್ಷಣಗಳು ದೇಹದಲ್ಲಿ ಕಂಡುಬಂದ್ರೆ ನಿಮಗೆ ಹೃದಯದಲ್ಲಿ ಬ್ಲಾಕೇಜ್ ಇರಬಹುದು ಎಚ್ಚರ!

ಇತ್ತೀಚೆಗೆ ಹೃದಯ ಸಂಬಂಧ ಕಾಯಿಲೆಗಳು ಹೆಚ್ಚಾಗಿ ಕಂಡುಬರುತ್ತಿವೆ. ಅದರಲ್ಲೂ ಹೃದಯಾಘಾತ ಕೇಸ್ಗಳು ಯುವಕರಲ್ಲೂ ಗಣನೀಯವಾಗಿ ಹೆಚ್ಚುತ್ತಿವೆ. ಈ ಹಾರ್ಟ್ ಅಟ್ಯಾಕ್ಗೆ ಹೃದಯದ ನರಗಳಲ್ಲಿ ಉಂಟಾಗುವ ಬ್ಲಾಕೇಜ್ ಕೂಡ ಪ್ರಮುಖ ಕಾರಣಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಅಷ್ಟಕ್ಕೂ ಹೃದಯದಲ್ಲಿ ಬ್ಲಾಕೇಜ್ ಏಕೆ ಉಂಟಾಗುತ್ತದೆ? ಅದರ ಆರಂಭಿಕ ಲಕ್ಷಣಗಳು ಯಾವುವು ಮತ್ತು ಅದನ್ನು ಹೇಗೆ ನಿಯಂತ್ರಿಸಬಹುದು? ಎಂಬುದನ್ನು ತಿಳಿದುಕೊಳ್ಳುವ ಅಗತ್ಯ ಇಂದಿಗಿದೆ. ಹೃದಯದ ನರಗಳಲ್ಲಿ ಕೊಬ್ಬು (ಫ್ಯಾಟ್) ಅಥವಾ ಕೊಲೆಸ್ಟ್ರಾಲ್ ಶೇಖರೆಯಾಗುವುದರಿಂದ ರಕ್ತದ ಹರಿವು ಸರಿಯಾಗಿ ಆಗುವುದಿಲ್ಲ. ಇದರಿಂದ ಹೃದಯಕ್ಕೆ…

Read More

Video: ರಸ್ತೆ ದಾಟಲು ಸಹಾಯ ಮಾಡಿದ ವ್ಯಕ್ತಿಗೆ ಸೊಂಡಿಲೆತ್ತಿ ಧನ್ಯವಾದ ತಿಳಿಸಿದ ಆನೆಗಳ ಹಿಂಡು

ಆನೆಗಳ (elephants) ಆಟ ತುಂಟಾಟಗಳ ಮನಸ್ಸಿಗೆ ಹೇಗೆ ಖುಷಿ ಕೊಡುತ್ತದೆ. ಕೆಲವೊಮ್ಮೆ ಮನುಷ್ಯರೊಂದಿಗೆ ಈ ಆನೆಗಳು ಮುದ್ದಾಗಿ ವರ್ತಿಸುತ್ತವೆ. ಗಜರಾಜ ಹಾಗೂ ಮನುಷ್ಯನ ನಡುವಿನ ಮುದ್ದಾದ ವಿಡಿಯೋ ನೆಟ್ಟಿಗರ ಹೃದಯ ಗೆಲ್ಲುತ್ತವೆ. ಇದೀಗ ಇಂತಹದ್ದೇ ವಿಡಿಯೋ ವೈರಲ್ ಆಗಿದ್ದು, ರಸ್ತೆ ದಾಟಲು ಅನುವು ಮಾಡಿಕೊಟ್ಟ ವ್ಯಕ್ತಿಯೊಬ್ಬನಿಗೆ ತಾಯಿ ಆನೆಗಳು ಸೊಂಡಿಲೆತ್ತಿ ನಮಸ್ಕರಿಸಿ ಕೃತಜ್ಞತೆ ಸಲ್ಲಿಸಿದೆ. ಈ ಹೃದಯಸ್ಪರ್ಶಿ ವಿಡಿಯೋ ನೋಡಿ ನೆಟ್ಟಿಗರು ಕಳೆದೇ ಹೋಗಿದ್ದಾರೆ. ನಿವೃತ್ತ ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಸಂತಾ ನಂದಾ ಅವರು ತಮ್ಮ…

Read More

ನಗರದಲ್ಲಿ ಹೆಚ್ಚಿದ ಡಿಜಿಟಲ್ ಅರೆಸ್ಟ್ ಸ್ಕ್ಯಾಮ್; ನಿವೃತ್ತ ಸಂಶೋಧಕನಿಗೆ 5 ಕೋಟಿ ರೂ. ವಂಚನೆ!

ಬೆಂಗಳೂರು, ಮಾರ್ಚ್​ 23: ನಗರದಲ್ಲಿ ಡಿಜಿಟಲ್ ಅರೆಸ್ಟ್   (Digital Arrest) ಹೆಸರಿನ ವಂಚನೆ ಜಾಲ ಬೆಳೆಯುತ್ತಲೇ ಇದೆ. ಕೆಲ ದಿನಗಳ ಹಿಂದೆಯಷ್ಟೇ ವೃದ್ಧ ಉದ್ಯಮಿಗೆ ಇದೇ ರೀತಿ 15 ಕೋಟಿ ರೂ. ವಂಚಿಸಲಾಗಿತ್ತು. ಇದೀಗ ಮತ್ತೊಮ್ಮೆ ಅದೇ ರೀತಿಯ ಸೈಬರ್ ವಂಚನೆಯ ಪ್ರಕರಣ ಬೆಳಕಿಗೆ ಬಂದಿದೆ. ನಗರದ ನಿವೃತ್ತ ಸಂಶೋಧಕರೊಬ್ಬರಿಗೆ ಬರೋಬ್ಬರಿ 5 ಕೋಟಿ ರೂ. ಸೈಬರ್ ವಂಚನೆ ಮಾಡಿದ್ದು, ವೃದ್ಧನನ್ನು ಬೆದರಿಸಿ ಹಣ ವರ್ಗಾಯಿಸಿಕೊಳ್ಳಲಾಗಿದೆ ಎನ್ನಲಾಗಿದೆ. ಮಾನವ ಕಳ್ಳಸಾಗಾಣಿಗೆ ಮಾಡಿದ್ದೀರೆಂದು ನಕಲಿ ಎಫ್​ಐಆರ್​ ಕಳಿಸಿದ ವಂಚಕರು 94…

Read More

ಮನೆಯಲ್ಲಿ ಶಿಶುವನ್ನು ಬಿಟ್ಟು ಭಿಕ್ಷೆ ಬೇಡಲು ಹೋದ ಪೋಷಕರು, ಹಸಿವಿನಿಂದ ಒಂದು ತಿಂಗಳ ಮಗು ಸಾವು

ಬರೇಲಿ, ಮಾರ್ಚ್​ 23: ನವಜಾತ ಶಿಶುವನ್ನು ಮನೆಯಲ್ಲಿ ಬಿಟ್ಟು ಪೋಷಕರು ಭಿಕ್ಷೆ ಬೇಡಲೆಂದು ಹೋಗಿದ್ದು, ಹಿಂದಿರುಗುವಷ್ಟರಲ್ಲಿ ಮಗು(Baby) ಹಸಿವಿನಿಂದ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ಕಂಟೋನ್ಮೆಂಟ್ ಪ್ರದೇಶದಲ್ಲಿ ಮನೆಯೊಳಗೆ ಒಂದು ತಿಂಗಳ ಮಗುವೊಂದು ಶವವಾಗಿ ಪತ್ತೆಯಾಗಿದ್ದು, ಶಿಶು ಅನಾರೋಗ್ಯದಿಂದ ಸಾವನ್ನಪ್ಪಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಕಿಲಾ ಪ್ರದೇಶದಲ್ಲಿ ಪೊಲೀಸರು ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ ಎಂದು ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಸುಭಾಷ್…

Read More

‘ನಿಮ್ಮ ಲೀಡರ್​​ಶಿಪ್ ಇಷ್ಟ’; ಧೋನಿ ಹಾಡಿ ಹೊಗಳಿದ ಶಿವಕಾರ್ತಿಕೇಯನ್

ನಟ ಶಿವಕಾರ್ತಿಕೇಯನ್ ಅವರು ‘ಸಿಎಸ್​​ಕೆ’ ಅನ್  ಬಾಕ್ಸಿಂಗ್ ಈವೆಂಟ್​​ಗೆ ತೆರಳಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಧೋನಿ ಹಾಗೂ ಸಿಎಸ್​​ಕೆ ಚಾರ್ಮ್​ ಅನ್ನು ಅವರು ಹಾಡಿ ಹೊಗಳಿದ್ದಾರೆ. ಚೆನ್ನೈ ಸ್ಟೇಡಿಯಂನಿಂದ ತಮ್ಮ ಮನೆ 25 ಕಿ.ಮೀ ದೂರ ಇದೆ ಎಂದು ಅವರು ಹೇಳಿದ್ದಾರೆ. ಅಷ್ಟೆಲ್ಲ ದೂರ ಇದ್ದರೂ ಸ್ಟೇಡಿಯಂನಲ್ಲಿ ನಡೆಯುವ ಸೆಲೆಬ್ರೇಷನ್ ಶಬ್ದ ತಮ್ಮ ಮನೆಯವರಿಗೂ ಕೇಳುತ್ತದೆ ಎಂದು ಹೇಳಿದರು ಶಿವಕಾರ್ತಿಕೇಯನ್.  ಧೋನಿ ಲೀಡರ್​​ಶಿಪ್​ನ ಹೊಗಳಿದರು ಶಿವಕಾರ್ತಿಕೇಯನ್. ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ….

Read More

ರಸ್ತೆ ದಾಟುತ್ತಿದ್ದ ಬಾಲಕನಿಗೆ ಕಾರು ಡಿಕ್ಕಿ: ಡ್ಯಾಶ್‌ಕ್ಯಾಮ್‌ನಲ್ಲಿ ಸೆರೆಯಾಯಿತು ಎದೆ ಝಲ್​​ ಎನಿಸೋ ದೃಶ್ಯ

ತೆಲಂಗಾಣ, ಮಾ.23: ಡ್ಯಾಶ್‌ಕ್ಯಾಮ್‌ನಲ್ಲಿ ಸೆರೆಯಾದ ಭೀಕರ ರಸ್ತೆ ಅಪಘಾತದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಒಬ್ಬ ಬಾಲಕ ಓಡುತ್ತಾ ರಸ್ತೆ ದಾಟಲು ಯತ್ನಿಸುವಾಗ ವೇಗವಾಗಿ ಬರುತ್ತಿದ್ದ ಕಾರು ಡಿಕ್ಕಿ ಹೊಡೆದು, ಅವನು ಸ್ಪಲ್ಪ ದೂಎಕ್ಕೆ ಹೋಗಿ ಬಿದ್ದಿರುವ ದೃಶ್ಯ ಸೆರೆಯಾಗಿದೆ. ಇನ್ನು ಈ ವಿಡಿಯೋವನ್ನು @KarnatakaPortfolio ಎಂಬ ಎಕ್ಸ್​​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಕೆಲವು ವರದಿಗಳ ಪ್ರಕಾರ, ಈ ಬಾಲಕ 11 ವರ್ಷದ ಅನಿರುದ್ಧ ಎಂದು ಹೇಳಲಾಗುತ್ತಿದ್ದು, ಘಟನೆ ತೆಲಂಗಾಣ ರಾಜ್ಯದ ಯಾದಾದ್ರಿ ಭುವನಗಿರಿ ಜಿಲ್ಲೆಯ…

Read More

ನ್ಯೂಯಾರ್ಕ್​​ ವಿಮಾನ ನಿಲ್ದಾಣದ ರನ್​ವೇನಲ್ಲಿ ಟ್ರಕ್​ಗೆ ಡಿಕ್ಕಿ ಹೊಡೆದ ಏರ್ ಕೆನಡಾ ವಿಮಾನ

ನ್ಯೂಯಾರ್ಕ್​, ಮಾರ್ಚ್​ 23:ನ್ಯೂಯಾರ್ಕ್​ನ ಲಾ ಗಾರ್ಡಿಯಾ ವಿಮಾನ ನಿಲ್ದಾಣದಲ್ಲಿ ಏರ್ ಕೆನಡಾ ವಿಮಾನ ಟ್ರಕ್​ಗೆ ಡಿಕ್ಕಿ ಹೊಡೆದಿರುವ ಘಟನೆ ವರದಿಯಾಗಿದೆ. ವಿಮಾನ ನಿಲ್ದಾಣದ ರನ್‌ವೇ 4 ರಲ್ಲಿ ಏರ್ ಕೆನಡಾ ಎಕ್ಸ್‌ಪ್ರೆಸ್ ಮತ್ತು ಅಗ್ನಿಶಾಮಕ ಟ್ರಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಹಲವು ಮಂದಿ ಗಾಯಗೊಂಡಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ. ಘಟನೆಯ ಬಗ್ಗೆ ಇನ್ನೂ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.ವಿಮಾನ ನಿಲ್ದಾಣದಲ್ಲಿ ಸ್ಥಳಾಂತರಿಸುವಿಕೆ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವುದನ್ನು ತೋರಿಸುವ ಡಿಕ್ಕಿಯ ಹಲವಾರು ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿವೆ….

Read More

Martyrs Day 2026: ಮಾರ್ಚ್‌ 23 ರಂದು ಆಚರಿಸಲಾಗುವ ಹುತಾತ್ಮರ ದಿನದ ಮಹತ್ವವೇನು ಗೊತ್ತಾ?

ಮಾರ್ಚ್‌ 23 ರಂದು ಆಚರಿಸಲಾಗುವ ಹುತಾತ್ಮರ ದಿನವು (Martyrs’ Day) ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದೆ. ಮಾರ್ಚ್ 23, 1931 ರಂದು, ಬ್ರಿಟಿಷ್ ಸರ್ಕಾರವು ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರನ್ನು ಲಾಹೋರ್ ಜೈಲಿನಲ್ಲಿ ಗಲ್ಲಿಗೇರಿಸಿತು. ಸಣ್ಣ ವಯಸ್ಸಿನಲ್ಲಿಯೇ  ಈ ಮೂವರು ಕ್ರಾಂತಿಕಾರಿಗಳು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದರು. ತಮ್ಮ ಧೈರ್ಯ ಮತ್ತು ದೇಶಭಕ್ತಿಯ ಮೂಲಕ, ಈ ಮೂವರು ಕ್ರಾಂತಿಕಾರಿಗಳು ದೇಶಾದ್ಯಂತ ಸ್ವಾತಂತ್ರ್ಯ ಹೋರಾಟದ ಹೊಸ ಚೈತನ್ಯವನ್ನು ಜಾಗೃತಗೊಳಿಸಿದರು. ಇವರ ಈ ತ್ಯಾಗ ಮತ್ತು ಬಲಿದಾನವನ್ನು…

Read More

ರಸ್ತೆ ಹೇಗೆ ದಾಟ್ಬೇಕು ಗೊತ್ತಾ? ಮನುಷ್ಯರಿಗೇ ಪಾಠ ಹೇಳಿದ ಕಾಡಾನೆ ಹಿಂಡು! ವಿಡಿಯೋ ವೈರಲ್

ಮೈಸೂರು, ಮಾರ್ಚ್ 23: ನಾಗರಹೊಳೆ ಅರಣ್ಯ ವ್ಯಾಪ್ತಿಯ ರಸ್ತೆಯಲ್ಲಿ ಕಾಡಾನೆ ಹಿಂಡೊಂದು ಶಿಸ್ತಿನಿಂದ ಗುಂಪಾಗಿ ರಸ್ತೆ ದಾಟಿದ ದೃಶ್ಯ ಈಗ ಎಲ್ಲರ ಗಮನ ಸೆಳೆದಿದೆ. ಯಾವುದೇ ಗದ್ದಲವಿಲ್ಲದೆ, ಯಾರಿಗೂ ತೊಂದರೆ ಮಾಡದೆ ಕಾಡಾನೆಗಳು ಶಿಸ್ತಿನಿಂದ ರಸ್ತೆ ದಾಟಿದ ದೃಶ್ಯವನ್ನು ವನ್ಯಜೀವಿ ಛಾಯಾಗ್ರಾಹಕ ಕಿರಣ್ ಮೆಟೊಯ್ ರೆಕಾರ್ಡ್ ಮಾಡಿದ್ದಾರೆ. ​ಆನೆಗಳ ಆಗಮನ ಕಂಡು ವಾಹನ ಸವಾರರು ಕೂಡ ರಸ್ತೆಯ ಎರಡೂ ಬದಿಗಳಲ್ಲಿ ವಾಹನ ನಿಲ್ಲಿಸಿ ಸುಮ್ಮನಾಗಿ, ಅವು ರಸ್ತೆ ದಾಟುವ ವರೆಗೆ ಮೌನವಾಗಿ ಕಾಯುತ್ತಿರುವುದು ವಿಡಿಯೋದಲ್ಲಿದೆ. ಅಲ್ಲದೆ,. ಸದ್ಯ…

Read More

ಮಗನ ಕೊಲ್ಲಲು ಸುಪಾರಿ ಕೊಟ್ಟಿದ್ದ ಮಹಿಳೆಯನ್ನೇ ಕೊಂದು ಹಣ ದೋಚಿದ್ದ ವ್ಯಕ್ತಿ ಅರೆಸ್ಟ್​

ರಾಯ್​ಪುರ್, ಮಾರ್ಚ್​ 23: ತಾನು ಬಿಟ್ಟ ಬಾಣ ತನಗೇ ಮುಳುವಾಯ್ತು, ಸ್ವಂತ ಮಗನನ್ನು ಕೊಲ್ಲಲು ಸುಪಾರಿಕೊಟ್ಟಿದ್ದ ಮಹಿಳೆಯನ್ನೇ ಕೊಲೆ(Murder) ಮಾಡಿ ಹಣ ದೋಚಿದ್ದ ಹಿಟ್​ಮ್ಯಾನ್​ ಅನ್ನು ಐದು ವರ್ಷಗಳ ಬಳಿಕ ಪೊಲೀಸರು ಬಂಧಿಸಿದ್ದಾರೆ. ಛತ್ತೀಸ್‌ಗಢದ ರಾಯ್‌ಪುರದಲ್ಲಿ 2021 ರಲ್ಲಿ ನಡೆದ ಕೊಲೆ ಮತ್ತು ದರೋಡೆ ಪ್ರಕರಣವನ್ನು ಭೇದಿಸಿದ ಪೊಲೀಸರು ಆರೋಪಿ ಅಜಯ್ ಮಿಶ್ರಾ ಎಂಬಾತನನ್ನು ಅಹಮದಾಬಾದ್ ಅಪರಾಧ ವಿಭಾಗವು ನರೋಡಾ ಪ್ರದೇಶದಲ್ಲಿ ಬಂಧಿಸಿದ್ದಾರೆ. ಶಕುಂತಲಾ ಯಾದವ್ ಮತ್ತು ಅವರ ಕಿರಿಯ ಮಗ ಅಮಿತ್ ಯಾದವ್, ತಮ್ಮ ಹಿರಿಯ…

Read More