ಸೂರ್ಯ ನಟನೆಯ ಹಿಟ್ ಸಿನಿಮಾಕ್ಕೆ ‘ಕಾಂತಾರ’, ‘ಸಪ್ತ ಸಾಗರದಾಚೆ’ ಸ್ಪೂರ್ತಿ
ಸೂರ್ಯ (Suriya) ಹಾಗೂ ತ್ರಿಷಾ (Trisha Krishnan) ನಟಿಸಿ ಆರ್ಜೆ ಬಾಲಾಜಿ ನಿರ್ದೇಶನ ಮಾಡಿರುವ ‘ಕರುಪ್ಪು’ ಸಿನಿಮಾ ಕೆಲ ವಾರಗಳ ಹಿಂದಷ್ಟೆ ಬಿಡುಗಡೆ ಆಗಿದ್ದು, ದೊಡ್ಡ ಹಿಟ್ ಆಗಿದೆ. ಸತತ ಸೋಲು ಕಾಣುತ್ತಿದ್ದ ಸೂರ್ಯಗೆ ಮತ್ತೆ ಮರು ಜೀವ ನೀಡಿದೆ ಈ ಸಿನಿಮಾ. ಬಾಕ್ಸ್ ಆಫೀಸ್ನಲ್ಲಿ ಈಗಾಗಲೇ 200 ಕೋಟಿಗೂ ಹೆಚ್ಚು ಮೊತ್ತ ಗಳಿಸಿದ್ದು, ಭರ್ಜರಿ ಗಳಿಕೆಯನ್ನು ಮುಂದುವರೆಸಿದೆ. ಭಿನ್ನ ಕತೆಯುಳ್ಳ ಈ ಸಿನಿಮಾಕ್ಕೆ ಕನ್ನಡದ ಎರಡು ಸೂಪರ್ ಹಿಟ್ ಸಿನಿಮಾಗಳು ಸ್ಪೂರ್ತಿಯಂತೆ. ಈ ಬಗ್ಗೆ ಖುದ್ದು…