Headlines

nagaraj11081993

‘ನನ್ನ ನಿಶ್ಚಿತಾರ್ಥ ಆಯ್ತು, ಆದ್ರೆ ನನಗೆ ಹೋಗೋಕೆ ಆಗಿಲ್ಲ’; ವದಂತಿಗೆ ಅನುಪಮಾ ಸ್ಪಷ್ಟನೆ

ಅನುಪಮಾ ಗೌಡ ಅವರು (Anupama Gowda) ನಟಿ ಹಾಗೂ ನಿರೂಪಕಿ. ಕಲರ್ಸ್​​ ಶೋಗಳನ್ನು ಅವರು ಹೋಸ್ಟ್ ಮಾಡುತ್ತಾರೆ. ಈಗ ಅವರು ನಿರೂಪಣೆಯಲ್ಲಿ ಬ್ಯುಸಿ ಇದ್ದಾರೆ. ಈ ಮೊದಲು ಬಿಗ್ ಬಾಸ್ ಅಲ್ಲೂ ಅನುಪಮಾ ಗೌಡ ಅವರು ಮಿಂಚಿದ್ದರು. ಕಳೆದ ಕೆಲ ದಿನಗಳಿಂದ ಅವರ ನಿಶ್ಚಿತಾರ್ಥ ಎಂಬ ಸುದ್ದಿ ಹರಿದಾಡಿತ್ತು. ಇದಕ್ಕೆ ಸಂಬಂಧಿಸಿದಂತೆ ಅವರು ಸ್ಪಷ್ಟನೆ ನೀಡಿದ್ದಾರೆ. ಇತ್ತೀಚೆಗೆ ಅವರ ಗೆಳೆಯ ರಾಘವ್ ಜೊತೆ ಅನುಪಮಾ ಗೌಡ ಫೋಟೋ ಹಂಚಿಕೊಂಡಿದ್ದರು. ಈ ಫೋಟೋ ನೋಡಿದ ಅನೇಕರು ಅನುಪಮಾ ಗೌಡ…

Read More

‘ಧುರಂಧರ್ 2’ ಚಿತ್ರದ ಬಡೇ ಸಾಬ್ ಪಾತ್ರಕ್ಕೆ ಸಲ್ಲುಗೆ ಬಂದಿತ್ತು ಆಫರ್?

ಡಿಸೆಂಬರ್ 2025ರಲ್ಲಿ ಆದಿತ್ಯ ಧಾರ್ ನಿರ್ದೇಶನದ ‘ಧುರಂಧರ್’ ಚಿತ್ರವನ್ನು ಪ್ರೇಕ್ಷಕರು ನೋಡಿದಾಗ, ಅದರಲ್ಲಿ ಉಲ್ಲೇಖಿಸಲಾದ ‘ಬಡೆ ಸಹಾಬ್’ ನಿಖರವಾಗಿ ಯಾರು ಎಂಬ ಬಗ್ಗೆ ಸಾಕಷ್ಟು ಕುತೂಹಲವಿತ್ತು. ಸಾಮಾಜಿಕ ಮಾಧ್ಯಮಗಳಲ್ಲಿ ತುಂಬಾ ಚರ್ಚೆ ನಡೆದಿದ್ದು, ಬಡೆ ಸಹಾಬ್ ಪಾತ್ರದಲ್ಲಿ ಯಾವ ನಟ ಕಾಣಿಸಿಕೊಳ್ಳುತ್ತಾರೆ ಎಂಬ ಬಗ್ಗೆ ಚರ್ಚೆ ನಡೆದವು. ಈಗ, ಮಾರ್ಚ್ 19 ರಂದು ಚಿತ್ರ ಬಿಡುಗಡೆ ಆಗಿದೆ. ಬಡೆ ಸಾಹೇಬ್, ಅಂದರೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ. ನಟ ಡ್ಯಾನಿಶ್ ಇಕ್ಬಾಲ್ ಈ ಪಾತ್ರವನ್ನು ನಿರ್ವಹಿಸಿದ್ದಾರೆ. ಈ…

Read More

ಹಡಗುಗಳು ಹಾರ್ಮುಜ್ ಜಲಸಂಧಿ ದಾಟಲು 18 ಕೋಟಿ ರೂ. ಟೋಲ್ ಕಟ್ಬೇಕಾ?

ಟೆಹ್ರಾನ್, ಮಾರ್ಚ್​ 23: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಉದ್ವಿಗ್ನತೆ ಮಧ್ಯೆ, ಇರಾನ್(Iran) ಹಾರ್ಮುಜ್ ಜಲಸಂಧಿಗೆ ಸಂಬಂಧಿಸಿದಂತೆ ಹೊಸ ಕಾರ್ಯತಂತ್ರವನ್ನು ಅಭಿವೃದ್ಧಿಪಡಿಸುತ್ತಿದೆ. ಜಾಗತಿಕ ವ್ಯಾಪಾರ ಮತ್ತು ಕಡಲ ಆರ್ಥಿಕತೆಯ ದಿಕ್ಕನ್ನು ಬದಲಾಯಿಸಬಹುದಾದ ಯೋಜನೆಯಲ್ಲಿ ಇರಾನ್ ಕಾರ್ಯನಿರ್ವಹಿಸುತ್ತಿದೆ. ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ಹಡಗುಗಳ ಮೇಲೆ ಸುಂಕ ಅಥವಾ ಸಾರಿಗೆ ಶುಲ್ಕ ವಿಧಿಸಲು ಇರಾನ್ ಮುಂದಾಗಿದೆ. ಸುಮಾರು 18 ಕೋಟಿ ರೂ. ಶುಲ್ಕ ಕಟ್ಟಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಹಾರ್ಮುಜ್ ನೆಪ ಇಟ್ಟುಕೊಂಡು ಇರಾನ್ ಇಡೀ ಜಗತ್ತನ್ನು ಬ್ಲ್ಯಾಕ್​ಮೇಲ್ ಮಾಡಲು ಮುಂದಾದಂತೆ…

Read More

Karnataka by-elections: ಕಾಂಗ್ರೆಸ್​ಗೆ ಪೈಲ್ವಾನ್ ಸವಾಲಿನ ಬೆನ್ನಲ್ಲೇ ಹೈಡ್ರಾಮಾಕ್ಕೆ ಸಜ್ಜಾದ ದಾವಣಗೆರೆ ಅಖಾಡ

ದಾವಣಗೆರೆ, ಮಾರ್ಚ್ 23: ದಾವಣಗೆರೆ ನಗರದಲ್ಲಿ ಇಂದು ರಾಜಕೀಯ ಹೈಡ್ರಾಮಾ ನಡೆಯುವ ಸಾಧ್ಯತೆ ತೀವ್ರವಾಗಿದೆ. ದಾವಣಗೆರೆ (Davanagere) ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ನಡೆಯಲಿರುವ ಉಪಚುನಾವಣೆಗೆ ಕಾಂಗ್ರೆಸ್ (Congress) ಟಿಕೆಟ್ ಅಲ್ಪಸಂಖ್ಯಾತರಿಗೆ ಸಿಗದ ಹಿನ್ನೆಲೆ ಅಸಮಾಧಾನ ಭುಗಿಲೆದ್ದಿದ್ದು, ಹಲವು ಅಭ್ಯರ್ಥಿಗಳು ಸ್ವತಂತ್ರವಾಗಿ ಮತ್ತು ಬೇರೆ ಪಕ್ಷಗಳಿಂದ ಕಣಕ್ಕಿಳಿಯಲು ತಯಾರಿ ನಡೆಸಿದ್ದಾರೆ. ಅಲ್ಪಸಂಖ್ಯಾತ ಸಮುದಾಯದ ನಾಯಕರು ಕಾಂಗ್ರೆಸ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಎಐಎಂಐಎಂ, ಎಸ್‌ಡಿಪಿಐ, ಆಮ್ ಆದ್ಮಿ ಪಕ್ಷ ಹಾಗೂ ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಲು ನಿರ್ಧರಿಸಿದ್ದಾರೆ. ವಿಶೇಷವಾಗಿ…

Read More

ಕರ್ನಾಟಕ ಹವಾಮಾನ ವರದಿ: ರಾಜ್ಯದೆಲ್ಲೆಡೆ ಇಂದು ಒಣ ಹವೆಯ ಮುನ್ಸೂಚನೆ

ಬೆಂಗಳೂರು, ಮಾರ್ಚ್​ 23: ಇತ್ತೀಚಿಗೆ ಕೆಲ ಜಿಲ್ಲೆಗಳಲ್ಲಿ ಗುಡುಗು-ಸಿಡಿಲು ಸಹಿತ ಸಾಧಾರಣ ಮಳೆಯಾಗಿದ್ದು, ಬೆಂಗಳೂರಿನಿಂದ ಬೀದರ್​ವರೆಗೆ ಒಟ್ಟೂ 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಸೂಚಿಸಲಾಗಿತ್ತು. ಆದರೆ ಇಂದು ಮತ್ತೊಮ್ಮೆ ರಾಜ್ಯದೆಲ್ಲೆಡೆ ಶುಷ್ಕ (Weather Forecast) ವಾತಾವರಣ ಆವರಿಸಿದೆ. ಇನ್ನೂ ಎರಡು ದಿನ ಇದೇ ವಾತಾವರಣದೊಂದಿಗೆ ಅಲ್ಲಲ್ಲಿ ಮಳೆಯಾಗಬಹುದೆಂಬ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಎಲ್ಲೆಲ್ಲಿ ಒಣ ಹವೆ? ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ,…

Read More

ಬಿನ್ ಲ್ಯಾಡನ್​​ನನ್ನು ಬೇಟೆಯಾಡಿದ್ದ ಮಾಜಿ ಸಿಐಎ ಮುಖ್ಯಸ್ಥ ಟ್ರಂಪ್ ಹಾಗೂ ಯುದ್ಧದ ಬಗ್ಗೆ ಹೇಳಿದ್ದೇನು?

ವಾಷಿಂಗ್ಟನ್, ಮಾರ್ಚ್​ 23: ಇರಾನ್ ವಿರುದ್ಧ ಅಮೆರಿಕದ ಯುದ್ಧ ಆರಂಭವಾಗಿ ಮೂರು ವಾರಗಳಿಗೂ ಹೆಚ್ಚು ಸಮಯ ಕಳೆದಿದೆ. ಆದರೆ ಅದು ಕೊನೆಗೊಳ್ಳುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್(Donald Trump)​​ಗೆ ಸುಲಭವಾದ ದಾರಿಯೂ ಕೂಡ ಗೋಚರಿಸುತ್ತಿಲ್ಲ. ಯುದ್ಧ ಮುಂದುವರೆದಂತೆ , ತಮ್ಮ ದೇಶದಲ್ಲೂ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಅಮೆರಿಕದ ಮಾಜಿ ರಕ್ಷಣಾ ಕಾರ್ಯದರ್ಶಿ ಮತ್ತು ಮಾಜಿ ಸಿಐಎ ಮುಖ್ಯಸ್ಥ ಲಿಯಾನ್ ಪನೆಟ್ಟಾ, ಪ್ರಸ್ತುತ ಪರಿಸ್ಥಿತಿಗೆ ಕಾರಣವಾಗಿರುವ ಟ್ರಂಪ್​​ರನ್ನು ಟೀಕಿಸಿದ್ದಾರೆ. ಬ್ರಿಟಿಷ್ ಪತ್ರಿಕೆ ಗಾರ್ಡಿಯನ್‌ಗೆ ಮಾತನಾಡಿದ ಪನೆಟ್ಟಾ,…

Read More

Horoscope Today 23rd​​ March​: ಇಂದು ಈ ರಾಶಿಯ ಪತಿ-ಪತ್ನಿಯರಲ್ಲಿ ಭಿನ್ನಾಭಿಪ್ರಾಯ!

ಟಿವಿ9​​ ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮಾರ್ಚ್​ 23, ಸೋಮವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ಪರಾಭವ ನಾಮ ಸಂವತ್ಸರ, ಉತ್ತರಾಯಣ, ಚೈತ್ರ ಮಾಸ, ವಸಂತ ಋತು, ಶುಕ್ಲ ಪಕ್ಷ, ಪಂಚಮಿ, ಕೃತಿಕಾ ನಕ್ಷತ್ರ, ವಿಷ್ಕಂಭ ಯೋಗ, ಭವಕರಣೆ ಇರತಕ್ಕಂತ ಈ ದಿನದ ರಾಹುಕಾಲವು ಬೆಳಗ್ಗೆ 7:52 ರಿಂದ 9:23 ರವರೆಗೆ ಇರುತ್ತದೆ. ಸರ್ವಸಿದ್ಧಿ ಕಾಲ, ಸಂಕಲ್ಪ ಕಾಲ, ಶುಭಕಾಲವು ಬೆಳಗ್ಗೆ 9:24 ರಿಂದ…

Read More

Daily Devotional: ತುಳಸಿ ಕಟ್ಟೆ ಪ್ರದಕ್ಷಿಣೆ ಹಾಗೂ ಇದರ ಮಹತ್ವವೇನು ಗೊತ್ತಾ?

ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ತುಳಸಿ ಕಟ್ಟೆ ಪ್ರದಕ್ಷಿಣೆ ಹಾಗೂ ಇದರ ಮಹತ್ವವೇನು ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ.ವೃಕ್ಷಗಳು ನಮ್ಮ ವಂಶ ಪಾರಂಪರ್ಯವಾಗಿ ಸಹಾಯ ಮಾಡುತ್ತಲೇ ಇವೆ. ಆಹಾರ, ನೆರಳು, ಆಶ್ರಯ ನೀಡುವ ಈ ಮರಗಳಲ್ಲಿ ತುಳಸಿ ಗಿಡವು ಅತ್ಯಂತ ಪೂಜ್ಯನೀಯ ಸ್ಥಾನ ಪಡೆದಿದೆ. ಅರಳೀಮರದಂತೆ ತುಳಸಿ ಗಿಡವನ್ನು ಸಹ ಪೂಜಿಸಲಾಗುತ್ತದೆ. ಪ್ರತಿ ಮನೆಯಲ್ಲೂ ತುಳಸಿ ಗಿಡವಿರಬೇಕು ಎಂಬುದು ಹಿಂದೂ ಸಂಪ್ರದಾಯ. ತುಳಸಿಗೆ ನೀರು ಹಾಕಿ ಪೂಜೆ ಮಾಡುವುದರ ಜೊತೆಗೆ, ಪ್ರತಿದಿನ ಬೆಳಿಗ್ಗೆ ಐದು ನಿಮಿಷಗಳ ಕಾಲ…

Read More

92 ಸಾವಿರ ಶೋ, 450 ಕೋಟಿ ಗಳಿಕೆ; ದಾಖಲೆಯ ಕಲೆಕ್ಷನ್ ಮಾಡಿದ ‘ಧುರಂಧರ್ 2’

ರಣವೀರ್ ಸಿಂಗ್ ನಟನೆಯ ‘ಧುರಂದರ್ 2’ ಸಿನಿಮಾ (Dhurandhar 2) ಸೂಪರ್ ಹಿಟ್ ಆಗಿದೆ. ಹಿಂದೆ ಯಾವ ಸಿನಿಮಾಗಳೂ ಮಾಡದಷ್ಟು ಅಬ್ಬರದಲ್ಲಿ ಸಿನಿಮಾ ರಿಲೀಸ್ ಆಗಿದೆ. ಹಲವು ದಾಖಲೆಗಳನ್ನು ಸಿನಿಮಾ ಉಡೀಸ್ ಮಾಡಿದೆ. ನಾಲ್ಕು ದಿನಕ್ಕೆ 450 ಕೋಟಿ ರೂಪಾಯಿ ಆಗಿದೆ. ಹೀಗೆ ಮುಂದುವರಿದರೆ ಚಿತ್ರದ ಒಟ್ಟಾರೆ ಕಲೆಕ್ಷನ್ ಎಷ್ಟು ಕೋಟಿ ರೂಪಾಯಿ ಆಗುತ್ತದೆ ಎನ್ನುವ ಕುತೂಹಲ ಮೂಡಿದೆ. ವಿಶ್ವ ಮಟ್ಟದಲ್ಲಿ ಚಿತ್ರದ ಗಳಿಕೆ 700 ಕೋಟಿ ರೂಪಾಯಿ ಸಮೀಪಿಸಿದೆ. ‘ಧುರಂಧರ್ 2’ ಚಿತ್ರ ಮಾರ್ಚ್ 19ರಂದು…

Read More

ರಾಮನಗರ: ಸಂಕಲಗೆರೆ ಬಳಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ, ನಾಲ್ವರು ಸ್ಥಳದಲ್ಲೇ ಸಾವು

ರಾಮನಗರ, ಮಾರ್ಚ್ 23: ಬೆಳ್ಳಂಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ ದುರ್ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ (Ramanagara) ವ್ಯಾಪ್ತಿಯಲ್ಲಿ ಸಂಭವಿಸಿದೆ. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ (Bangalore Mysore Expressway) ಚನ್ನಪಟ್ಟಣ ತಾಲೂಕಿನ ಸಂಕಲಗೆರೆ (Sankalagere) ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ. ಕೇರಳದಿಂದ ಬೆಂಗಳೂರಿನತ್ತ ಬರುತ್ತಿದ್ದ ಬಸ್, ನಿದ್ರೆ ಮಂಪರಿನಿಂದ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಪೆನ್ಸಿಂಗ್‌ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಬಸ್‌ನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಾಹಿತಿ ತಿಳಿದ ತಕ್ಷಣ ಚನ್ನಪಟ್ಟಣ…

Read More