Headlines

nagaraj11081993

Corporate Laws Amendment Bill: ಇಂದು ಲೋಕಸಭೆಯಲ್ಲಿ ಕಾರ್ಪೊರೇಟ್ ಕಾನೂನು ತಿದ್ದುಪಡಿ ಮಸೂದೆ ಮಂಡನೆ

ನವದೆಹಲಿ, ಮಾರ್ಚ್​ 23: ಕೇಂದ್ರ ಹಣಕಾಸು ಹಾಗೂ ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman) ಇಂದು(ಮಾರ್ಚ್​23) ಲೋಕಸಭೆಯಲ್ಲಿ ಕಾರ್ಪೊರೇಟ್ ಕಾನೂನುಗಳು(ತಿದ್ದುಪಡಿ)ಮಸೂದೆ 2026 ಅನ್ನು ಮಂಡಿಸಲಿದ್ದಾರೆ. ಪಾವತಿಸಿದ ಬಂಡವಾಳ ಮತ್ತು ಮೀಸಲು ಮೇಲಿನ ಶೇ.25 ನಿಯಮವನ್ನು ಸಡಿಲಿಸುವ ಮೂಲಕ ಮಸೂದೆಯು ಕೆಲವು ಕಂಪನಿಗಳಿಗೆ ಪರಿಹಾರವನ್ನು ನೀಡುತ್ತದೆ. ಇದು ಸಣ್ಣ ಮತ್ತು ಮಧ್ಯಮ ಗಾತ್ರದ ಕಂಪನಿಗಳಿಗೆ ಗಮನಾರ್ಹವಾಗಿ ಪ್ರಯೋಜನವನ್ನು ನೀಡುತ್ತದೆ. ಹೊಸ ಕಾರ್ಪೊರೇಟ್ ಕಾನೂನು ತಿದ್ದುಪಡಿ ಮಸೂದೆಯಲ್ಲಿ ಕಂಪನಿಯ ಸಿಎಸ್‌ಆರ್ ಮಿತಿಯನ್ನು 5 ಕೋಟಿ ರೂ.ಗಳಿಂದ 10 ಕೋಟಿ…

Read More

ಬೀದಿ ನಾಯಿ ಹಾವಳಿಗೆ ಬೇಸತ್ತು ದೇವರ ಮೊರೆ! ಅಪಾರ್ಟ್ಮೆಂಟ್ ನಿವಾಸಿಗಳಿಂದ ಕಾಲಭೈರವನಿಗೆ ಪೂಜೆ-ಪು‌ನಸ್ಕಾರ

ಬೆಂಗಳೂರು, ಮಾರ್ಚ್​ 23: ನಗರದಲ್ಲಿ ಬೀದಿ ನಾಯಿಗಳ (Dogs) ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜನರಲ್ಲಿ ಆತಂಕ ಹೆಚ್ಚುತ್ತಿದೆ. ಇದರಿಂದಾಗಿ ರಸ್ತೆಯಲ್ಲಿ ಓಡಾಡುವುದೂ ಕಷ್ಟವಾಗಿದೆ. ಪುಟ್ಟ ಮಕ್ಕಳು, ವೃದ್ಧರಿಗೇನಾದರೂ ಅಪಾಯವಾದರೆ ಎಂಬ ಭಯದ ವಾತಾವರಣವಿರುವ ನಡುವೆಯೇ ನಗರದ ಅಪಾರ್ಟ್ಮೆಂಟ್​ವೊಂದರ ನಿವಾಸಿಗಳು ದೇವರ ಮೊರೆ ಹೋಗಿದ್ದು ಆಶ್ಚರ್ಯ ಮೂಡಿಸಿದೆ. ಬೀದಿ ನಾಯಿ ಸಮಸ್ಯೆಗೆ ಶಾಂತಿಯುತ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ಜೆಪಿ ನಗರದ ಎಲಿಟಾ ಪ್ರೊಮೆನೇಡ್ ಅಪಾರ್ಟ್ಮೆಂಟ್ ನಿವಾಸಿಗಳು ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಿದ್ದು, ನಿವಾಸಿಗಳು ಕಾಲಭೈರವ ಮತ್ತು ದತ್ತಾತ್ರೇಯ ಸ್ವಾಮಿಗೆ ವಿಶೇಷ…

Read More

ರಕ್ಷಣಾ, ರೈಲ್ವೆ ವಲಯಕ್ಕೂ ತಟ್ಟಿದ ಯುದ್ಧದ ಬಿಸಿ: ಟೂಲ್ಸ್ ಪ್ರೊಪೈಲ್ ಕಚ್ಚಾವಸ್ತು ಸರಬರಾಜು ಮಾಡುವ ಆಟೋಮೊಬೈಲ್ ಇಂಡಸ್ಟ್ರಿ ಬಂದ್

ಬೆಂಗಳೂರು, ಮಾರ್ಚ್ 23: ಸಾವಿರಾರು ಕಿಲೋಮೀಟರ್ ದೂರದಲ್ಲಿ ನಡೆಯುತ್ತಿರುವ ಇರಾನ್-ಇಸ್ರೇಲ್ ಯುದ್ಧದ (US-Israel-Iran War) ಪರಿಣಾಮ ಇದೀಗ ಕರ್ನಾಟಕ ರಾಜಧಾನಿ ಬೆಂಗಳೂರಿಗೂ (Bangalore) ತಟ್ಟಿದೆ. ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದ ಕಚ್ಚಾ ತೈಲ ಬೆಲೆ ಏರಿಕೆಯಷ್ಟೇ ಅಲ್ಲ, ನಗರದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಮೇಲೂ ನೇರ ಪರಿಣಾಮ ಬೀಳುತ್ತಿದೆ. ಇದು ದೇಶದ ರಕ್ಷಣಾ ಕ್ಷೇತ್ರ ಮತ್ತು ರೈಲ್ವೆ ಇಲಾಖೆ ಮೇಲೂ ಪರಿಣಾಮ ಬೀರುತ್ತಿದೆ. ರಕ್ಷಣಾ ಇಲಾಖೆಯ ವಾಹನಗಳ ತಯಾರಿಕೆಗೆ ಹಾಗೂ ರೈಲ್ವೆ ಇಲಾಖೆಗೆ ಟೂಲ್ಸ್ ಪ್ರೊಪೈಲ್ ಕಚ್ಚಾವಸ್ತು ಸರಬರಾಜು ಮಾಡುತ್ತಿದ್ದ ಪೀಣ್ಯಾದಲ್ಲಿರುವ…

Read More

ಭಾನುವಾರ ಭರ್ಜರಿ ಗಳಿಕೆ ಮಾಡಿದ ‘ಲವ್ ಮಾಕ್ಟೇಲ್ 3’ ಸಿನಿಮಾ; ಒಟ್ಟಾರೆ ಕಲೆಕ್ಷನ್ ಎಷ್ಟು?

‘ಲವ್ ಮಾಕ್ಟೇಲ್ 3’ ಸಿನಿಮಾ (Love Mocktail 3) ‘ಧುರಂಧರ್ 2’ ಅಬ್ಬರದ ನಡುವೆಯೂ ಭರ್ಜರಿ ಗಳಿಕೆ ಮಾಡುತ್ತಿದೆ. ಈ ಮೊದಲು ಏಪ್ರಿಲ್​​ನಲ್ಲಿ ‘ಲವ್ ಮಾಕ್ಟೇಲ್ 3’ ಸಿನಿಮಾ ರಿಲೀಸ್ ಮಾಡೋದಾಗಿ ಘೋಷಿಸಲಾಗಿತ್ತು. ಆದರೆ, ‘ಟಾಕ್ಸಿಕ್’ ಸಿನಿಮಾ ರಿಲೀಸ್ ದಿನಾಂಕವನ್ನು ಮುಂದಕ್ಕೆ ಹಾಕಿಕೊಂಡ ಬಳಿಕ ಆ ದಿನಾಂಕಕ್ಕೆ ‘ಲವ್ ಮಾಕ್ಟೇಲ್ 3’ ಚಿತ್ರವನ್ನು ತರೋದಾಗಿ ಘೋಷಣೆ ಮಾಡಿದರು. ಮಾರ್ಚ್ 19ರಂದು ‘ಲವ್ ಮಾಕ್ಟೇಲ್ 3’ ಸಿನಿಮಾ ತೆರೆಗೆ ಬಂದಿದೆ. ಡಾರ್ಲಿಂಗ್ ಕೃಷ್ಣ ನಟನೆಯ ಈ ಸಿನಿಮಾ ಗಮನ…

Read More

ಬಡವರಿಗೆ ‘ಸರಿಗಮಪ’ದಲ್ಲಿ ಮಣೆ ಎಂದವರಿಗೆ ಪ್ರೋಮೋದಲ್ಲೇ ಖಡಕ್ ಉತ್ತರ

‘ಸರಿಗಮಪ’ ಶೋನಲ್ಲಿ ಪ್ರತಿ ಬಾರಿಯೂ ಸಿಂಪತಿಗಾಗಿ ಅನೇಕರನ್ನು ತರುತ್ತಾರೆ, ಆಡಿಷನ್ ನಡೆಸುವಾಗಲೇ ಆ ರೀತಿಯಲ್ಲಿ ಸ್ಪರ್ಧಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ ಎಂಬ ಆರೋಪ ಇದೆ. ಈಗ ಸರಿಗಮಪ ಹೊಸ ಸೀಸನ್ ಬರುತ್ತಿದೆ. ಪ್ರೋಮೋದಲ್ಲೇ ಈ ವಿಷಯದ ಬಗ್ಗೆ ಸ್ಪಷ್ಟನೆ ನೀಡಲಾಗಿದೆ. ಗಾಯಕ ಹಾಗೂ ಶೋ ಜಡ್ಜ್ ವಿಜಯ್ ಪ್ರಕಾಶ್ ಅವರು ಈ ವಿಷಯವಾಗಿ ಸ್ಪಷ್ಟನೆ ನೀಡುವ ರೀತಿಯಲ್ಲಿ ಪ್ರೋಮೋ ಮಾಡಲಾಗಿದೆ. ಶೀಘ್ರದಲ್ಲಿ ಜೀ ಕನ್ನಡದಲ್ಲಿ ಸರಿಗಮಪ ಲಿಟಲ್ ಚಾಂಪ್ಸ್ ಆರಂಭ ಆಗಲಿದೆ. ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​…

Read More

ಗರ್ಲ್​ಫ್ರೆಂಡ್ ಕೈಯಿಂದಲೇ ಹತ್ಯೆಯಾದ 18 ಮಕ್ಕಳ ತಂದೆ

ಪ್ರತಾಪ್​ಗಢ, ಮಾರ್ಚ್​ 23: ಗಲ್ಫ್ರೆಂಡ್ ಕೈಯಿಂದಲೇ ಗ್ರಾಮದ ಮಾಜಿ ಮುಖ್ಯಸ್ಥರೊಬ್ಬರು ಹತ್ಯೆ(Murder)ಯಾಗಿರುವ ಘಟನೆ ಉತ್ತರ ಪ್ರದೇಶದ ಪ್ರತಾಪ್​ಗಢದಲ್ಲಿ ನಡೆದಿದೆ. ಅವರ ಶವವನ್ನು ಕಾಲುವೆಯಿಂದ ವಶಪಡಿಸಿಕೊಳ್ಳಲಾಗಿದೆ. ಮೃತ ವ್ಯಕ್ತಿಗೆ 18 ಮಂದಿ ಮಕ್ಕಳಿದ್ದರು. ಚೀಲದಲ್ಲಿ ತುಂಬಿಸಿ ಅವರನ್ನು ಕಾಲುವೆಗೆ ಎಸೆಯಲಾಗಿತ್ತು.ಮಾರ್ಚ್ 18 ರಿಂದ ನಾಪತ್ತೆಯಾಗಿದ್ದರು. ಈ ಕೊಲೆಯನ್ನು ಮೃತ ವ್ಯಕ್ತಿಯ ಗೆಳತಿ ಸುಮನ್ ಮತ್ತು ಆಕೆಯ ಸಹಚರರು ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತನಿಖಾಧಿಕಾರಿಗಳ ಪ್ರಕಾರ, ಗುಲ್ಶನ್ ತಲೆಗೆ ರಾಡ್‌ನಿಂದ ಹಲ್ಲೆ ನಡೆಸಲಾಗಿದ್ದು, ಇದು ಅವರ ಸಾವಿಗೆ ಕಾರಣ…

Read More

ನಿರ್ದೇಶಕ ಆದಿತ್ಯ ಧಾರ್ ಮುಂದಿನ ಸಿನಿಮಾ ಯಾವ ಹೀರೋ ಜೊತೆ?

‘ಧುರಂಧರ್ 2’ ಚಿತ್ರದ ಹವಾ ಜೋರಾಗಿದೆ. ಯುಗಾದಿಗೆ ಉಡುಗೊರೆಯಾಗಿ ಬಿಡುಗಡೆಯಾದ ಈ ಚಿತ್ರವು ಬ್ಲಾಕ್‌ಬಸ್ಟರ್‌ನತ್ತ ಸಾಗುತ್ತಿದೆ. ಮೊದಲ ಭಾಗಕ್ಕಿಂತ ಹೆಚ್ಚು ಕಲೆಕ್ಷನ್ ಮಾಡುವ ಮೂಲಕ ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿಯುತ್ತಿದೆ. ಮಾರ್ಚ್ 19 ರಂದು ಬಿಡುಗಡೆಯಾದ ಧುರಂಧರ್ ದಿ ರಿವೆಂಜ್ ಕೇವಲ 4 ದಿನಗಳಲ್ಲಿ 450 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಇದರೊಂದಿಗೆ ನಿರ್ದೇಶಕ ಆದಿತ್ಯ ಧಾರ್ ಅವರ ಹೆಸರು ಮತ್ತೊಮ್ಮೆ ಚರ್ಚೆಯಾಗುತ್ತಿದೆ. ಅವರ ಮುಂದಿನ ಚಿತ್ರದ ಬಗ್ಗೆಯೂ ಚರ್ಚೆ ಜೋರಾಗಿದೆ. ‘ಉರಿ’ ಚಿತ್ರದ ಮೂಲಕ…

Read More

‘ನನ್ನ ನಿಶ್ಚಿತಾರ್ಥ ಆಯ್ತು, ಆದ್ರೆ ನನಗೆ ಹೋಗೋಕೆ ಆಗಿಲ್ಲ’; ವದಂತಿಗೆ ಅನುಪಮಾ ಸ್ಪಷ್ಟನೆ

ಅನುಪಮಾ ಗೌಡ ಅವರು (Anupama Gowda) ನಟಿ ಹಾಗೂ ನಿರೂಪಕಿ. ಕಲರ್ಸ್​​ ಶೋಗಳನ್ನು ಅವರು ಹೋಸ್ಟ್ ಮಾಡುತ್ತಾರೆ. ಈಗ ಅವರು ನಿರೂಪಣೆಯಲ್ಲಿ ಬ್ಯುಸಿ ಇದ್ದಾರೆ. ಈ ಮೊದಲು ಬಿಗ್ ಬಾಸ್ ಅಲ್ಲೂ ಅನುಪಮಾ ಗೌಡ ಅವರು ಮಿಂಚಿದ್ದರು. ಕಳೆದ ಕೆಲ ದಿನಗಳಿಂದ ಅವರ ನಿಶ್ಚಿತಾರ್ಥ ಎಂಬ ಸುದ್ದಿ ಹರಿದಾಡಿತ್ತು. ಇದಕ್ಕೆ ಸಂಬಂಧಿಸಿದಂತೆ ಅವರು ಸ್ಪಷ್ಟನೆ ನೀಡಿದ್ದಾರೆ. ಇತ್ತೀಚೆಗೆ ಅವರ ಗೆಳೆಯ ರಾಘವ್ ಜೊತೆ ಅನುಪಮಾ ಗೌಡ ಫೋಟೋ ಹಂಚಿಕೊಂಡಿದ್ದರು. ಈ ಫೋಟೋ ನೋಡಿದ ಅನೇಕರು ಅನುಪಮಾ ಗೌಡ…

Read More

‘ಧುರಂಧರ್ 2’ ಚಿತ್ರದ ಬಡೇ ಸಾಬ್ ಪಾತ್ರಕ್ಕೆ ಸಲ್ಲುಗೆ ಬಂದಿತ್ತು ಆಫರ್?

ಡಿಸೆಂಬರ್ 2025ರಲ್ಲಿ ಆದಿತ್ಯ ಧಾರ್ ನಿರ್ದೇಶನದ ‘ಧುರಂಧರ್’ ಚಿತ್ರವನ್ನು ಪ್ರೇಕ್ಷಕರು ನೋಡಿದಾಗ, ಅದರಲ್ಲಿ ಉಲ್ಲೇಖಿಸಲಾದ ‘ಬಡೆ ಸಹಾಬ್’ ನಿಖರವಾಗಿ ಯಾರು ಎಂಬ ಬಗ್ಗೆ ಸಾಕಷ್ಟು ಕುತೂಹಲವಿತ್ತು. ಸಾಮಾಜಿಕ ಮಾಧ್ಯಮಗಳಲ್ಲಿ ತುಂಬಾ ಚರ್ಚೆ ನಡೆದಿದ್ದು, ಬಡೆ ಸಹಾಬ್ ಪಾತ್ರದಲ್ಲಿ ಯಾವ ನಟ ಕಾಣಿಸಿಕೊಳ್ಳುತ್ತಾರೆ ಎಂಬ ಬಗ್ಗೆ ಚರ್ಚೆ ನಡೆದವು. ಈಗ, ಮಾರ್ಚ್ 19 ರಂದು ಚಿತ್ರ ಬಿಡುಗಡೆ ಆಗಿದೆ. ಬಡೆ ಸಾಹೇಬ್, ಅಂದರೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ. ನಟ ಡ್ಯಾನಿಶ್ ಇಕ್ಬಾಲ್ ಈ ಪಾತ್ರವನ್ನು ನಿರ್ವಹಿಸಿದ್ದಾರೆ. ಈ…

Read More

ಹಡಗುಗಳು ಹಾರ್ಮುಜ್ ಜಲಸಂಧಿ ದಾಟಲು 18 ಕೋಟಿ ರೂ. ಟೋಲ್ ಕಟ್ಬೇಕಾ?

ಟೆಹ್ರಾನ್, ಮಾರ್ಚ್​ 23: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಉದ್ವಿಗ್ನತೆ ಮಧ್ಯೆ, ಇರಾನ್(Iran) ಹಾರ್ಮುಜ್ ಜಲಸಂಧಿಗೆ ಸಂಬಂಧಿಸಿದಂತೆ ಹೊಸ ಕಾರ್ಯತಂತ್ರವನ್ನು ಅಭಿವೃದ್ಧಿಪಡಿಸುತ್ತಿದೆ. ಜಾಗತಿಕ ವ್ಯಾಪಾರ ಮತ್ತು ಕಡಲ ಆರ್ಥಿಕತೆಯ ದಿಕ್ಕನ್ನು ಬದಲಾಯಿಸಬಹುದಾದ ಯೋಜನೆಯಲ್ಲಿ ಇರಾನ್ ಕಾರ್ಯನಿರ್ವಹಿಸುತ್ತಿದೆ. ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ಹಡಗುಗಳ ಮೇಲೆ ಸುಂಕ ಅಥವಾ ಸಾರಿಗೆ ಶುಲ್ಕ ವಿಧಿಸಲು ಇರಾನ್ ಮುಂದಾಗಿದೆ. ಸುಮಾರು 18 ಕೋಟಿ ರೂ. ಶುಲ್ಕ ಕಟ್ಟಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಹಾರ್ಮುಜ್ ನೆಪ ಇಟ್ಟುಕೊಂಡು ಇರಾನ್ ಇಡೀ ಜಗತ್ತನ್ನು ಬ್ಲ್ಯಾಕ್​ಮೇಲ್ ಮಾಡಲು ಮುಂದಾದಂತೆ…

Read More