Headlines

nagaraj11081993

‘ನಿಮ್ಮ ಲೀಡರ್​​ಶಿಪ್ ಇಷ್ಟ’; ಧೋನಿ ಹಾಡಿ ಹೊಗಳಿದ ಶಿವಕಾರ್ತಿಕೇಯನ್

ನಟ ಶಿವಕಾರ್ತಿಕೇಯನ್ ಅವರು ‘ಸಿಎಸ್​​ಕೆ’ ಅನ್  ಬಾಕ್ಸಿಂಗ್ ಈವೆಂಟ್​​ಗೆ ತೆರಳಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಧೋನಿ ಹಾಗೂ ಸಿಎಸ್​​ಕೆ ಚಾರ್ಮ್​ ಅನ್ನು ಅವರು ಹಾಡಿ ಹೊಗಳಿದ್ದಾರೆ. ಚೆನ್ನೈ ಸ್ಟೇಡಿಯಂನಿಂದ ತಮ್ಮ ಮನೆ 25 ಕಿ.ಮೀ ದೂರ ಇದೆ ಎಂದು ಅವರು ಹೇಳಿದ್ದಾರೆ. ಅಷ್ಟೆಲ್ಲ ದೂರ ಇದ್ದರೂ ಸ್ಟೇಡಿಯಂನಲ್ಲಿ ನಡೆಯುವ ಸೆಲೆಬ್ರೇಷನ್ ಶಬ್ದ ತಮ್ಮ ಮನೆಯವರಿಗೂ ಕೇಳುತ್ತದೆ ಎಂದು ಹೇಳಿದರು ಶಿವಕಾರ್ತಿಕೇಯನ್.  ಧೋನಿ ಲೀಡರ್​​ಶಿಪ್​ನ ಹೊಗಳಿದರು ಶಿವಕಾರ್ತಿಕೇಯನ್. ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ….

Read More

ರಸ್ತೆ ದಾಟುತ್ತಿದ್ದ ಬಾಲಕನಿಗೆ ಕಾರು ಡಿಕ್ಕಿ: ಡ್ಯಾಶ್‌ಕ್ಯಾಮ್‌ನಲ್ಲಿ ಸೆರೆಯಾಯಿತು ಎದೆ ಝಲ್​​ ಎನಿಸೋ ದೃಶ್ಯ

ತೆಲಂಗಾಣ, ಮಾ.23: ಡ್ಯಾಶ್‌ಕ್ಯಾಮ್‌ನಲ್ಲಿ ಸೆರೆಯಾದ ಭೀಕರ ರಸ್ತೆ ಅಪಘಾತದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಒಬ್ಬ ಬಾಲಕ ಓಡುತ್ತಾ ರಸ್ತೆ ದಾಟಲು ಯತ್ನಿಸುವಾಗ ವೇಗವಾಗಿ ಬರುತ್ತಿದ್ದ ಕಾರು ಡಿಕ್ಕಿ ಹೊಡೆದು, ಅವನು ಸ್ಪಲ್ಪ ದೂಎಕ್ಕೆ ಹೋಗಿ ಬಿದ್ದಿರುವ ದೃಶ್ಯ ಸೆರೆಯಾಗಿದೆ. ಇನ್ನು ಈ ವಿಡಿಯೋವನ್ನು @KarnatakaPortfolio ಎಂಬ ಎಕ್ಸ್​​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಕೆಲವು ವರದಿಗಳ ಪ್ರಕಾರ, ಈ ಬಾಲಕ 11 ವರ್ಷದ ಅನಿರುದ್ಧ ಎಂದು ಹೇಳಲಾಗುತ್ತಿದ್ದು, ಘಟನೆ ತೆಲಂಗಾಣ ರಾಜ್ಯದ ಯಾದಾದ್ರಿ ಭುವನಗಿರಿ ಜಿಲ್ಲೆಯ…

Read More

ನ್ಯೂಯಾರ್ಕ್​​ ವಿಮಾನ ನಿಲ್ದಾಣದ ರನ್​ವೇನಲ್ಲಿ ಟ್ರಕ್​ಗೆ ಡಿಕ್ಕಿ ಹೊಡೆದ ಏರ್ ಕೆನಡಾ ವಿಮಾನ

ನ್ಯೂಯಾರ್ಕ್​, ಮಾರ್ಚ್​ 23:ನ್ಯೂಯಾರ್ಕ್​ನ ಲಾ ಗಾರ್ಡಿಯಾ ವಿಮಾನ ನಿಲ್ದಾಣದಲ್ಲಿ ಏರ್ ಕೆನಡಾ ವಿಮಾನ ಟ್ರಕ್​ಗೆ ಡಿಕ್ಕಿ ಹೊಡೆದಿರುವ ಘಟನೆ ವರದಿಯಾಗಿದೆ. ವಿಮಾನ ನಿಲ್ದಾಣದ ರನ್‌ವೇ 4 ರಲ್ಲಿ ಏರ್ ಕೆನಡಾ ಎಕ್ಸ್‌ಪ್ರೆಸ್ ಮತ್ತು ಅಗ್ನಿಶಾಮಕ ಟ್ರಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಹಲವು ಮಂದಿ ಗಾಯಗೊಂಡಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ. ಘಟನೆಯ ಬಗ್ಗೆ ಇನ್ನೂ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.ವಿಮಾನ ನಿಲ್ದಾಣದಲ್ಲಿ ಸ್ಥಳಾಂತರಿಸುವಿಕೆ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವುದನ್ನು ತೋರಿಸುವ ಡಿಕ್ಕಿಯ ಹಲವಾರು ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿವೆ….

Read More

Martyrs Day 2026: ಮಾರ್ಚ್‌ 23 ರಂದು ಆಚರಿಸಲಾಗುವ ಹುತಾತ್ಮರ ದಿನದ ಮಹತ್ವವೇನು ಗೊತ್ತಾ?

ಮಾರ್ಚ್‌ 23 ರಂದು ಆಚರಿಸಲಾಗುವ ಹುತಾತ್ಮರ ದಿನವು (Martyrs’ Day) ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದೆ. ಮಾರ್ಚ್ 23, 1931 ರಂದು, ಬ್ರಿಟಿಷ್ ಸರ್ಕಾರವು ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರನ್ನು ಲಾಹೋರ್ ಜೈಲಿನಲ್ಲಿ ಗಲ್ಲಿಗೇರಿಸಿತು. ಸಣ್ಣ ವಯಸ್ಸಿನಲ್ಲಿಯೇ  ಈ ಮೂವರು ಕ್ರಾಂತಿಕಾರಿಗಳು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದರು. ತಮ್ಮ ಧೈರ್ಯ ಮತ್ತು ದೇಶಭಕ್ತಿಯ ಮೂಲಕ, ಈ ಮೂವರು ಕ್ರಾಂತಿಕಾರಿಗಳು ದೇಶಾದ್ಯಂತ ಸ್ವಾತಂತ್ರ್ಯ ಹೋರಾಟದ ಹೊಸ ಚೈತನ್ಯವನ್ನು ಜಾಗೃತಗೊಳಿಸಿದರು. ಇವರ ಈ ತ್ಯಾಗ ಮತ್ತು ಬಲಿದಾನವನ್ನು…

Read More

ರಸ್ತೆ ಹೇಗೆ ದಾಟ್ಬೇಕು ಗೊತ್ತಾ? ಮನುಷ್ಯರಿಗೇ ಪಾಠ ಹೇಳಿದ ಕಾಡಾನೆ ಹಿಂಡು! ವಿಡಿಯೋ ವೈರಲ್

ಮೈಸೂರು, ಮಾರ್ಚ್ 23: ನಾಗರಹೊಳೆ ಅರಣ್ಯ ವ್ಯಾಪ್ತಿಯ ರಸ್ತೆಯಲ್ಲಿ ಕಾಡಾನೆ ಹಿಂಡೊಂದು ಶಿಸ್ತಿನಿಂದ ಗುಂಪಾಗಿ ರಸ್ತೆ ದಾಟಿದ ದೃಶ್ಯ ಈಗ ಎಲ್ಲರ ಗಮನ ಸೆಳೆದಿದೆ. ಯಾವುದೇ ಗದ್ದಲವಿಲ್ಲದೆ, ಯಾರಿಗೂ ತೊಂದರೆ ಮಾಡದೆ ಕಾಡಾನೆಗಳು ಶಿಸ್ತಿನಿಂದ ರಸ್ತೆ ದಾಟಿದ ದೃಶ್ಯವನ್ನು ವನ್ಯಜೀವಿ ಛಾಯಾಗ್ರಾಹಕ ಕಿರಣ್ ಮೆಟೊಯ್ ರೆಕಾರ್ಡ್ ಮಾಡಿದ್ದಾರೆ. ​ಆನೆಗಳ ಆಗಮನ ಕಂಡು ವಾಹನ ಸವಾರರು ಕೂಡ ರಸ್ತೆಯ ಎರಡೂ ಬದಿಗಳಲ್ಲಿ ವಾಹನ ನಿಲ್ಲಿಸಿ ಸುಮ್ಮನಾಗಿ, ಅವು ರಸ್ತೆ ದಾಟುವ ವರೆಗೆ ಮೌನವಾಗಿ ಕಾಯುತ್ತಿರುವುದು ವಿಡಿಯೋದಲ್ಲಿದೆ. ಅಲ್ಲದೆ,. ಸದ್ಯ…

Read More

ಮಗನ ಕೊಲ್ಲಲು ಸುಪಾರಿ ಕೊಟ್ಟಿದ್ದ ಮಹಿಳೆಯನ್ನೇ ಕೊಂದು ಹಣ ದೋಚಿದ್ದ ವ್ಯಕ್ತಿ ಅರೆಸ್ಟ್​

ರಾಯ್​ಪುರ್, ಮಾರ್ಚ್​ 23: ತಾನು ಬಿಟ್ಟ ಬಾಣ ತನಗೇ ಮುಳುವಾಯ್ತು, ಸ್ವಂತ ಮಗನನ್ನು ಕೊಲ್ಲಲು ಸುಪಾರಿಕೊಟ್ಟಿದ್ದ ಮಹಿಳೆಯನ್ನೇ ಕೊಲೆ(Murder) ಮಾಡಿ ಹಣ ದೋಚಿದ್ದ ಹಿಟ್​ಮ್ಯಾನ್​ ಅನ್ನು ಐದು ವರ್ಷಗಳ ಬಳಿಕ ಪೊಲೀಸರು ಬಂಧಿಸಿದ್ದಾರೆ. ಛತ್ತೀಸ್‌ಗಢದ ರಾಯ್‌ಪುರದಲ್ಲಿ 2021 ರಲ್ಲಿ ನಡೆದ ಕೊಲೆ ಮತ್ತು ದರೋಡೆ ಪ್ರಕರಣವನ್ನು ಭೇದಿಸಿದ ಪೊಲೀಸರು ಆರೋಪಿ ಅಜಯ್ ಮಿಶ್ರಾ ಎಂಬಾತನನ್ನು ಅಹಮದಾಬಾದ್ ಅಪರಾಧ ವಿಭಾಗವು ನರೋಡಾ ಪ್ರದೇಶದಲ್ಲಿ ಬಂಧಿಸಿದ್ದಾರೆ. ಶಕುಂತಲಾ ಯಾದವ್ ಮತ್ತು ಅವರ ಕಿರಿಯ ಮಗ ಅಮಿತ್ ಯಾದವ್, ತಮ್ಮ ಹಿರಿಯ…

Read More

‘ಧುರಂಧರ್ 2’ ಚಿತ್ರದಲ್ಲಿ ಆದಿತ್ಯ ಧಾರ್​ ಮಾಡಿದ್ರು ದೊಡ್ಡ ತಪ್ಪು; ವೈರಲ್ ಆಯ್ತು ಪೋಸ್ಟ್

‘ಧುರಂಧರ್ 2’ ಸಿನಿಮಾನ ಎಲ್ಲರೂ ಹಾಡಿ ಹೊಗಳುತ್ತಿದ್ದಾರೆ. ರಣವೀರ್ ಸಿಂಗ್ ನಟನೆಯ, ಆದಿತ್ಯ ಧಾರ್ (Aditya Dhar) ನಿರ್ದೇಶನದ ಈ ಚಿತ್ರದಲ್ಲಿ ಸಣ್ಣ ಸಣ್ಣ ವಿಷಯಕ್ಕೂ ಆದಿತ್ಯಧಾರ್ ಅವರು ಸಾಕಷ್ಟು ಪ್ರಾಮುಖ್ಯತೆ ನೀಡಿದ್ದಾರೆ. ಇದು ಸಿನಿಮಾದಲ್ಲಿ ಸ್ಪಷ್ಟವಾಗಿದೆ. ಈ ಕಾರಣಕ್ಕೆ ಎಲ್ಲರೂ ಆದಿತ್ಯಧಾರ್ ಅವರನ್ನು ಹೊಗಳುತ್ತಿದ್ದಾರೆ. ಆದರೆ, ಈಗ ಅವರು ಮಾಡಿದ ತಪ್ಪೊಂದು ಎದ್ದು ಕಾಣಿಸಿದೆ. ಆದಿತ್ಯಧಾರ್ ಅವರು ಸಣ್ಣ ಸಣ್ಣ ವಿಷಯಗಳನ್ನೂ ಗಮನ ಇಟ್ಟು ಸಿನಿಮಾ ಮಾಡುತ್ತಾರೆ. ಇದೇ ಕಾರಣಕ್ಕೆ ‘ಪೀಕ್ ಡೀಟೇಲಿಂಗ್ ಆಫ್ ಆದಿತ್ಯಧಾರ್’…

Read More

World Meteorological Day 2026: ಹವಾಮಾನ ದಿನವನ್ನು ಆಚರಿಸುವುದೇಕೆ? ಏನಿದರ ಉದ್ದೇಶ ತಿಳಿಯಿರಿ

ಹವಾಮಾನ ವೈಪರಿತ್ಯಗಳು ನಿಸರ್ಗ ಸಹಜ ಪ್ರಕ್ರಿಯೆಯಾಗಿದ್ದು, ಹವಾಮಾನ (climate) ಬದಲಾವಣೆಯ ಕಾರಣದಿಂದಾಗಿ ಪ್ರಕೃತಿಯಲ್ಲಿ ಏನೆಲ್ಲಾ ನೈಸರ್ಗಿಕ ವಿಕೋಪಗಳು ಸಂಭವಿಸುತ್ತದೆ ಎಂಬುದನ್ನು ಯಾರಿಂದಲೂ ಊಹಿಸಲು ಸಾಧ್ಯವಿಲ್ಲ. ಬದಲಾಗುವಂತಹ ಹವಾಮಾನ ಪರಿಸ್ಥಿತಿಗಳು ಮಾನವ ಜೀವನ, ಕೃಷಿ, ಆರೋಗ್ಯ ಮತ್ತು ಪರಿಸರದ ಮೇಲೆ ನೇರ ಪರಿಣಾಮವನ್ನು ಬೀರುತ್ತವೆ. ಹವಾಮಾನ ಬದಲಾವಣೆಯಿಂದ ಏನೆಲ್ಲಾ ಅಪಾಯಗಳು ಸಂಭವಿಸಬಹುದು ಎಂಬುದನ್ನು ಮುನ್ಸುಚಿಸಲು ಮತ್ತು ಸಾರ್ವಜನಿಕರು ಅಗತ್ಯವಾದ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲು ಸೂಕ್ತ ಮಾಹಿತಿಯನ್ನು ಹವಾಮಾನ ಶಾಸ್ತ್ರ, ಹವಾಮಾನ ಇಲಾಖೆ ಒದಗಿಸುತ್ತವೆ. ಪ್ರಪಂಚದಾದ್ಯಂತ ಇರುವ ಈ ಹವಾಮಾನ…

Read More

ಅಡುಗೆ ಗ್ಯಾಸ್ ಸ್ಟಾಕ್ ಮಾಡುವ ಮುನ್ನ ಎಚ್ಚರ: ಇಷ್ಟು ದಿನದೊಳಗೆ ಬಳಸಿ ಮುಗಿಸಬೇಕು!

ಮನೆಯಲ್ಲಿ ಅಥವಾ ವಾಣಿಜ್ಯ ಬಳಕೆಗೆ ಅಡುಗೆ ಗ್ಯಾಸ್ (LPG) ಸಿಲಿಂಡರ್ ಅನ್ನು ಸಂಗ್ರಹಿಸಿಡುವಾಗ (Stock) ಅಥವಾ ಬಳಸುವಾಗ ಸುರಕ್ಷತೆಯ ದೃಷ್ಟಿಯಿಂದ ಕೆಲವು ನಿಯಮಗಳನ್ನು ಪಾಲಿಸುವುದು ಅತ್ಯಗತ್ಯ. ಸಿಲಿಂಡರ್ ಎಷ್ಟು ದಿನಗಳ ಒಳಗೆ ಖಾಲಿಯಾಗಬೇಕು ಮತ್ತು ಅದರ ಮೇಲೆ ನಮೂದಿಸಿರುವ ‘ಎಕ್ಸ್‌ಪೈರಿ ಡೇಟ್’ (Expiry Date) ಅನ್ನು ಹೇಗೆ ಗುರುತಿಸಬೇಕು ಎಂಬ ಮಾಹಿತಿ ಇಲ್ಲಿದೆ ನೋಡಿ. ಪ್ರತಿ ಗ್ಯಾಸ್ ಸಿಲಿಂಡರ್‌ನ ಮೇಲ್ಭಾಗದ ಮೂರು ಕಬ್ಬಿಣದ ಪಟ್ಟಿಗಳಲ್ಲಿ ಒಂದರ ಒಳಭಾಗದಲ್ಲಿ ಇಂಗ್ಲಿಷ್ ಅಕ್ಷರ ಮತ್ತು ಅಂಕಿಗಳನ್ನು ಬರೆಯಲಾಗಿರುತ್ತದೆ (ಉದಾಹರಣೆಗೆ: A-26,…

Read More

ಡಿಕೆ ಶಿವಕುಮಾರ್ ಆಪ್ತ, ಮಾಜಿ ಎಂಎಲ್‌ಸಿ ಕರಿಯಣ್ಣ ಸಂಗಟಿ ನಿಧನ

ಕೊಪ್ಪಳ,ಮಾರ್ಚ್​ 23: ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರ ಆಪ್ತರಾಗಿದ್ದ ಕರಿಯಣ್ಣ ಸಂಗಟಿ (60) ಅನಾರೋಗ್ಯದಿಂದ ನಿಧನರಾಗಿದ್ದಾರೆ. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಬಹು ಅಂಗಾಗ ವೈಫಲ್ಯದಿಂದ ಬಳಲುತ್ತಿದ್ದ ಸಂಗಟಿ ಕರಿಯಣ್ಣ ಸಂಗಟಿ ಅವರು ರಾಜಕೀಯವಾಗಿ ಸಕ್ರಿಯರಾಗಿದ್ದು, ಎರಡು ಬಾರಿ ಕೊಪ್ಪಳ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಸರಳ ವ್ಯಕ್ತಿತ್ವ ಮತ್ತು…

Read More