ಅಣ್ಣಾವ್ರ ಹುಟ್ಟೂರಲ್ಲಿ ಕಿಚ್ಚ ಸುದೀಪ್ಗೆ ಗುಡಿ ಕಟ್ಟಿ ನಿತ್ಯ ಆರಾಧನೆ ಮಾಡ್ತಾರೆ ಈ ಅಭಿಮಾನಿ!
ಚಾಮರಾಜನಗರ, ಮಾರ್ಚ್ 23: ಅಣ್ಣಾವ್ರ ಹುಟ್ಟೂರಾಗಿರುವ, ಕರ್ನಾಟಕ-ತಮಿಳುನಾಡು ಗಡಿ ಭಾಗದ ತಾಳವಾಡಿ ತಾಲೂಕಿನ ದೊಡ್ಡ ಗಾಜನೂರಿನಲ್ಲಿ ನಟ ಕಿಚ್ಚ ಸುದೀಪ್ ಅಭಿಮಾನಿಯೊಬ್ಬರು ಇದೀಗ ಕನ್ನಡಿಗರ ಗಮನ ಸೆಳೆಯುವಂತೆ ಮಾಡಿದ್ದಾರೆ. ದೊಡ್ಡ ಗಾಜನೂರು ಗ್ರಾಮದ ಸಿದ್ದರಾಜು ಎಂಬ ಅಭಿಮಾನಿ, ಸುದೀಪ್ ಮೇಲೆ ಅಪಾರ ಭಕ್ತಿ ಹೊಂದಿದ್ದಾರೆ. ಐಸ್ ಕ್ಯಾಂಡಿ ಮಾರಾಟ ಮಾಡುತ್ತಾ ಜೀವನ ನಡೆಸುವ ಸಿದ್ದರಾಜುಗೆ ‘ಕಿಚ್ಚ’ ಸುದೀಪ್ ಎಂದರೆ ಪಂಚಪ್ರಾಣ. ಇದಕ್ಕಾಗಿ ಅವರು ಮನೆ ಬಳಿ ಸುದೀಪ್‌ಗಾಗಿ ಗುಡಿ ನಿರ್ಮಿಸಿದ್ದು, ಪ್ರತಿದಿನವೂ ನಿತ್ಯ ಆರಾಧನೆ ಮಾಡುತ್ತಾರೆ! ಸೋಮವಾರ…