ವಿಶ್ವ ದಾಖಲೆ… ಪೊಲಾರ್ಡ್ಗೆ 652 ಇನಿಂಗ್ಸ್, ವೈಭವ್ಗೆ ಜಸ್ಟ್ 33 ಇನಿಂಗ್ಸ್!
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ನೊಂದಿಗೆ ಸಂಚಲನ ಸೃಷ್ಟಿಸಿರುವ ವೈಭವ್ ಸೂರ್ಯವಂಶಿ (Vaibhav Sooryavanshi) ಭರ್ಜರಿ ದಾಖಲೆಯೊಂದನ್ನು ತಮ್ಮದಾಗಿಸಿಕೊಂಡಿದ್ದಾರೆ. ಅದು ಕೂಡ ಕೀರನ್ ಪೊಲಾರ್ಡ್ 652 ಇನಿಂಗ್ಸ್ಗಳ ಮೂಲಕ ಮಾಡಿದ್ದನ್ನು ಕೇವಲ 33 ಇನಿಂಗ್ಸ್ಗಳಲ್ಲಿ ಸಾಧಿಸಿ ತೋರಿಸುವ ಮೂಲಕ ಎಂಬುದು ವಿಶೇಷ. (PC: IPL) ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಆರ್ಭಟಿಸಿದ ವೈಭವ್ ಸೂರ್ಯವಂಶಿ ಕೇವಲ 29 ಎಸೆತಗಳಲ್ಲಿ 12 ಸಿಕ್ಸರ್ ಹಾಗೂ 5 ಫೋರ್ಗಳೊಂದಿಗೆ 97 ರನ್ ಚಚ್ಚಿದ್ದರು. ಅಂದರೆ ಬರೋಬ್ಬರಿ 334.48 ಸ್ಟ್ರೈಕ್ ರೇಟ್ನಲ್ಲಿ…