ರಮೇಶ್ ಅರವಿಂದ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಈಗ ಅವರ ಹೊಸ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಅವರು ಅಭಿಮಾನಿಗಳ ಭವಿಷ್ಯ ಹೇಳೋದಾಗಿ ಹೇಳಿದ್ದಾರೆ. ಈ ವಿಡಿಯೋ ಹಂಚಿಕೊಳ್ಳೋಕೆ ಕಾರಣ ಯುಗಾದಿ. ಹಿಂದೂಗಳು ಯುಗಾದಿಯನ್ನು ಹೊಸ ವರ್ಷ ಎಂದು ಪರಿಗಣಿಸುತ್ತಾರೆ. ಹೀಗಾಗಿ, ವಿಡಿಯೋ ಮಾಡಿರೋ ರಮೇಶ್ ಅರವಿಂದ್, ಹೊಸ ವರ್ಷ ಎಲ್ಲರಿಗೂ ಒಳ್ಳೆಯದನ್ನು ಮಾಡುತ್ತೆ ಎಂದಿದ್ದಾರೆ.
ದೆಹಲಿ, ಮಾ.19: ಚಾಂದ್ರಮಾನ ಯುಗಾದಿ ಮತ್ತು ಹೊಸ ವರ್ಷದ ಈ ಶುಭ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶವಾಸಿಗಳಿಗೆ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದ್ದಾರೆ. ವಸಂತ ಋತುವಿನ ಆಗಮನವು ಹೊಸ ಚೈತನ್ಯ ಮತ್ತು ಸಾಧ್ಯತೆಗಳನ್ನು ಹೊತ್ತು ತರಲಿ ಎಂದು ಅವರು ಹಾರೈಸಿದ್ದಾರೆ. “ಪವಿತ್ರ ಯುಗಾದಿಯ ಸಂದರ್ಭದಲ್ಲಿ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಸುಖಮಯ ಹೊಸ ವರ್ಷದ ಶುಭಾಶಯಗಳು” ಎಂದು ಪ್ರಧಾನಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ವಸಂತ ಕಾಲದ ಹಸಿರು, ಹೂವುಗಳ ಸುಗಂಧ ಮತ್ತು ಹಣ್ಣುಗಳ ಆಗಮನವು ಹೊಸ ಶಕ್ತಿಯ ಸಂಕೇತವಾಗಿದೆ ಎಂದು ಅವರು ಬಣ್ಣಿಸಿದ್ದಾರೆ. ಯುಗಾದಿಯು ಹೊಸ ಕೃಷಿ ಚಟುವಟಿಕೆಗಳ ಆರಂಭದ ಕಾಲ. ಈ ಸಮಯದಲ್ಲಿ ನಮ್ಮ ದೇಶದ ಕಷ್ಟಜೀವಿ ರೈತರು ಹೊಸ ಆಶಾವಾದದೊಂದಿಗೆ ಮುಂದಿನ ಕೃಷಿ ಚಕ್ರಕ್ಕೆ ಸಜ್ಜಾಗುತ್ತಿರುವುದನ್ನು ಪ್ರಧಾನಿ ಶ್ಲಾಘಿಸಿದ್ದಾರೆ.
ಜೀವನದ ಸಿಹಿ-ಕಹಿಗಳನ್ನು ಸಮಾನವಾಗಿ ಸ್ವೀಕರಿಸಬೇಕು ಎಂಬ ಯುಗಾದಿಯ ಸಾಂಪ್ರದಾಯಿಕ ಸಂದೇಶವನ್ನು ಪ್ರಧಾನಿ ನೆನಪಿಸಿದ್ದಾರೆ. ಸವಾಲುಗಳನ್ನು ಧೈರ್ಯದಿಂದ ಎದುರಿಸಿ, ಯಶಸ್ಸನ್ನು ಕೃತಜ್ಞತೆಯಿಂದ ಸ್ವೀಕರಿಸಲು ಈ ಹಬ್ಬ ಪ್ರೇರಣೆ ನೀಡುತ್ತದೆ ಎಂದಿದ್ದಾರೆ. ಮುಂಬರುವ ವರ್ಷವು ಎಲ್ಲರ ಜೀವನದಲ್ಲಿ ಉತ್ತಮ ಆರೋಗ್ಯ, ಸುಖ ಮತ್ತು ಶಾಂತಿಯನ್ನು ತರಲಿ ಎಂದು ಮೋದಿ ಅವರು ಪ್ರಾರ್ಥಿಸಿದ್ದಾರೆ.
ಯುಗಾದಿ ಹಬ್ಬದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ಜನತೆಗೆ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣ ‘X’ (ಟ್ವಿಟರ್) ಮೂಲಕ ಅವರು ಹಂಚಿಕೊಂಡಿರುವ ಸಂದೇಶದಲ್ಲಿ ಕನ್ನಡಿಗರ ಸಂಸ್ಕೃತಿ ಮತ್ತು ಹೊಸ ಆರಂಭದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಕರ್ನಾಟಕದ ನನ್ನ ಎಲ್ಲಾ ಸಹೋದರ ಸಹೋದರಿಯರಿಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು” ಎಂದು ಪ್ರಧಾನಿ ಮೋದಿಯವರು ಕನ್ನಡ ಭಾಷೆಯಲ್ಲೇ ಸಂದೇಶ ನೀಡುವ ಮೂಲಕ ಕನ್ನಡಿಗರ ಮನ ಗೆದ್ದಿದ್ದಾರೆ. ಯುಗಾದಿಯು ಹೊಸ ಭರವಸೆ ಮತ್ತು ಚೈತನ್ಯದ ಹಬ್ಬವಾಗಿದ್ದು, ಇದು ಪ್ರತಿಯೊಬ್ಬರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರಲಿ ಎಂದು ಅವರು ಹಾರೈಸಿದ್ದಾರೆ.ಮುಂಬರುವ ವರ್ಷವು ಕರ್ನಾಟಕದ ಮನೆಮನಗಳಲ್ಲಿ ಸುಖ, ಶಾಂತಿ, ಆರೋಗ್ಯ ಮತ್ತು ಐಶ್ವರ್ಯವನ್ನು ತುಂಬಲಿ ಎಂದು ಅವರು ಪ್ರಾರ್ಥಿಸಿದ್ದಾರೆ.
ಇದನ್ನೂ ಓದಿ: ಯುಗಾದಿ ಹಬ್ಬದ ಸಂಭ್ರಮ; ನಿಮ್ಮ ಪ್ರೀತಿಪಾತ್ರರಿಗೆ ಶುಭಾಶಯಗಳನ್ನು ತಿಳಿಸಲು ಇಲ್ಲಿವೆ ಸಂದೇಶ
ಉತ್ತರ ಭಾರತದ ರಾಜ್ಯಗಳಿಗೆ ಪ್ರಧಾನಿ ಮೋದಿ ವಿಶೇಷ ಪತ್ರ
ವಿಕ್ರಮ ಸಂವತ್ 2083 ಮತ್ತು ಚೈತ್ರ ನವರಾತ್ರಿಯ ಶುಭ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶ, ಉತ್ತರಾಖಂಡ, ಮಧ್ಯಪ್ರದೇಶ, ಛತ್ತೀಸ್‌ಗಢ, ಬಿಹಾರ, ಜಾರ್ಖಂಡ್, ಹಿಮಾಚಲ ಪ್ರದೇಶ ಮತ್ತು ದೆಹಲಿಯ ಜನತೆಗೆ ವೈಯಕ್ತಿಕ ಪತ್ರಗಳನ್ನು ಬರೆದಿದ್ದಾರೆ. ಭಾರತೀಯ ಸಂಸ್ಕೃತಿಯಲ್ಲಿ ಈ ದಿನಕ್ಕೆ ಇರುವ ಐತಿಹಾಸಿಕ ಮತ್ತು ಆಧ್ಯಾತ್ಮಿಕ ಪ್ರಾಮುಖ್ಯತೆಯನ್ನು ಅವರು ಶ್ಲಾಘಿಸಿದ್ದಾರೆ.ಭಾರತೀಯ ಕಾಲಗಣನೆಯ ಸಂಕೇತವಾದ ವಿಕ್ರಮ ಸಂವತ್ 2083ರ ಆರಂಭವು ದೇಶದಾದ್ಯಂತ ಹೊಸ ಭರವಸೆ ಮತ್ತು ಸಮೃದ್ಧಿಯನ್ನು ತರಲಿ ಎಂದು ಪ್ರಧಾನಿ ಹಾರೈಸಿದ್ದಾರೆ.
ಕಲಿಯುಗದ ಕಾಲಗಣನೆಯಾದ ಯುಗಾಬ್ದ 5128ನೇ ವರ್ಷಕ್ಕೆ ನಾವು ಕಾಲಿಡುತ್ತಿರುವುದು ನಮ್ಮ ಪುರಾತನ ನಾಗರಿಕತೆಯ ಜೀವಂತಿಕೆಗೆ ಸಾಕ್ಷಿ ಎಂದು ಅವರು ಉಲ್ಲೇಖಿಸಿದ್ದಾರೆ. ಶಕ್ತಿ ದೇವತೆಯ ಆರಾಧನೆಯಾದ ಚೈತ್ರ ನವರಾತ್ರಿಯು ದೇಶದ ಜನರಲ್ಲಿ ಆತ್ಮವಿಶ್ವಾಸ ಮತ್ತು ದೃಢತೆಯನ್ನು ತುಂಬಲಿ ಎಂದು ಅವರು ಪ್ರಾರ್ಥಿಸಿದ್ದಾರೆ. ಉತ್ತರ ಭಾರತದ ವಿವಿಧ ಭಾಗಗಳಲ್ಲಿ ಈ ದಿನವನ್ನು ‘ನವ ವರ್ಷ’ವನ್ನಾಗಿ ಆಚರಿಸುವ ಪರಂಪರೆಯನ್ನು ಸ್ಮರಿಸಿರುವ ಅವರು, ಇದು ಭಾರತದ ಸಾಂಸ್ಕೃತಿಕ ಏಕತೆಯ ಪ್ರತಿಬಿಂಬ ಎಂದಿದ್ದಾರೆ.ಹೊಸ ವರ್ಷವು ‘ವಿಕಸಿತ ಭಾರತ’ದ ಸಂಕಲ್ಪವನ್ನು ಈಡೇರಿಸಲು ಎಲ್ಲರಿಗೂ ಶಕ್ತಿ ನೀಡಲಿ ಎಂದು ಮೋದಿ ಅವರು ತಮ್ಮ ಪತ್ರದಲ್ಲಿ ಆಶಿಸಿದ್ದಾರೆ.
ಇಸ್ಲಾಮಾಬಾದ್, ಮಾರ್ಚ್ 19: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಹಲವು ದೇಶಗಳಲ್ಲಿ ತೈಲ ಬಿಕ್ಕಟ್ಟು ಎದುರಾಗಿದೆ. ಅದರಲ್ಲಿ ಪಾಕಿಸ್ತಾನ(Pakistan)ಕೂಡ ಒಂದು. ತೈಲ ಕೊರತೆಯಿಂದಾಗಿ ಮಾರ್ಚ್ 23 ರಂದು ನಿಗದಿಯಾಗಿದ್ದ ಗಣರಾಜ್ಯೋತ್ಸವ ಪರೇಡ್ ಅನ್ನು ಕೂಡ ಸರ್ಕಾರ ರದ್ದುಗೊಳಿಸಿದೆ.
ಪ್ರಧಾನಿ ಶೆಹಬಾಜ್ ಷರೀಫ್ ಅವರ ಕಚೇರಿ ಮಂಗಳವಾರ ಇದನ್ನು ಪ್ರಕಟಿಸಿದೆ. ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧದಿಂದಾಗಿ ಉಂಟಾದ ಗಲ್ಫ್ ತೈಲ ಬಿಕ್ಕಟ್ಟಿನಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದೆ.
ಗಲ್ಫ್ ತೈಲ ಬಿಕ್ಕಟ್ಟು ಮತ್ತು ಸರ್ಕಾರ ಘೋಷಿಸಿದ ಕಠಿಣ ಕ್ರಮಗಳನ್ನು ಗಮನದಲ್ಲಿಟ್ಟುಕೊಂಡು, ಮಾರ್ಚ್ 23 ರಂದು ಪಾಕಿಸ್ತಾನ ದಿನಾಚರಣೆ ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲಾ ಆಚರಣೆಗಳನ್ನು ನಡೆಸಲಾಗುವುದಿಲ್ಲ ಎಂದು ಸರ್ಕಾರಿ ಹೇಳಿಕೆಯಲ್ಲಿ ನಿರ್ಧರಿಸಲಾಗಿದೆ. ಬದಲಾಗಿ, ಸರಳ ಧ್ವಜಾರೋಹಣ ಸಮಾರಂಭವನ್ನು ಮಾತ್ರ ನಡೆಸಲಾಗುವುದು. ಮತ್ತೊಂದೆಡೆ ಹಬ್ಬ ಮುಗಿದ ಮೇಲೆ ಯುದ್ಧ ಮುಂದುವರೆಸೋಣ ಎಂದು ಅಫ್ಘಾನ್ ಬಳಿ ಕೇಳಿದೆ.
ಎಲ್ಲಾ ಸಚಿವಾಲಯಗಳು, ಇಲಾಖೆಗಳು ಮತ್ತು ಘಟಕಗಳು ಈ ಸಂದರ್ಭವನ್ನು ಸರಳ ಮತ್ತು ಘನತೆಯಿಂದ ಆಚರಿಸಬೇಕೆಂದು ಹೇಳಿಕೆಯಲ್ಲಿ ನಿರ್ದೇಶಿಸಲಾಗಿದೆ.
ಮಾರ್ಚ್‌ನಲ್ಲಿ, ಪ್ರಧಾನಿ ಶಹಬಾಜ್ ಷರೀಫ್, ಅಮೆರಿಕ-ಇಸ್ರೇಲ್-ಇರಾನ್ ಯುದ್ಧದಿಂದ ಉಂಟಾದ ತೀವ್ರ ಇಂಧನ ಬಿಕ್ಕಟ್ಟು ಮತ್ತು ಆರ್ಥಿಕ ಅಸ್ಥಿರತೆಯನ್ನು ಪರಿಹರಿಸಲು ವ್ಯಾಪಕವಾದ ಕಠಿಣ ಕ್ರಮಗಳನ್ನು ಘೋಷಿಸಿದರು. ಜಾಗತಿಕ ತೈಲ ಬೆಲೆಗಳು ಗಗನಕ್ಕೇರುತ್ತಿದ್ದಂತೆ ಸರ್ಕಾರಿ ವೆಚ್ಚವನ್ನು ತೀವ್ರವಾಗಿ ಕಡಿಮೆ ಮಾಡುವುದು ಮತ್ತು ಇಂಧನವನ್ನು ಉಳಿಸುವ ಗುರಿಯನ್ನು ಈ ತುರ್ತು ಕ್ರಮಗಳು ಹೊಂದಿವೆ.
ಯುದ್ಧ ಪ್ರಾರಂಭವಾಗಿ ಎರಡು ವಾರಗಳಿಗಿಂತ ಹೆಚ್ಚು ಸಮಯ ಕಳೆದಿದೆ, ಈ ಅವಧಿಯಲ್ಲಿ ಇರಾನ್ ಕೊಲ್ಲಿಯಲ್ಲಿ ಹಲವಾರು ಹಡಗುಗಳ ಮೇಲೆ ದಾಳಿ ಮಾಡಿದೆ, ವಿಶ್ವದ ಐದನೇ ಒಂದು ಭಾಗದಷ್ಟು ಕಚ್ಚಾ ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲದ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ವಾಸ್ತವಿಕವಾಗಿ ಮುಚ್ಚಿದೆ.
ಪಾಕಿಸ್ತಾನವು ಗಲ್ಫ್ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುವ ಕಚ್ಚಾ ತೈಲ ಮತ್ತು ಸಂಸ್ಕರಿಸಿದ ಇಂಧನದ ಮೇಲೆ ಹೆಚ್ಚು ಅವಲಂಬಿತವಾಗಿದೆ, ಹೆಚ್ಚಾಗಿ ಹಾರ್ಮುಜ್ ಜಲಸಂಧಿಯ ಮೂಲಕವೇ ಆಗಿತ್ತು.
ಪಾಕಿಸ್ತಾನ ಸರ್ಕಾರ ಸೀಮೆಎಣ್ಣೆ ಮತ್ತು ಲಘು ಡೀಸೆಲ್ ಎಣ್ಣೆ (LDO) ಬೆಲೆಗಳನ್ನು ಹೆಚ್ಚಿಸಿದೆ. ರಂಜಾನ್ ಸಮಯದಲ್ಲಿ ಇಂಧನ ಬೆಲೆಗಳಲ್ಲಿನ ತೀವ್ರ ಏರಿಕೆ ಇನ್ನಷ್ಟು ನೋವಿನಿಂದ ಕೂಡಿದೆ. ಪಾಕಿಸ್ತಾನದ ಬಜೆಟ್ ಈಗಾಗಲೇ ಬಿಕ್ಕಟ್ಟಿನಲ್ಲಿದೆ ಮತ್ತು ಮೂಲಭೂತ ಅವಶ್ಯಕತೆಗಳ ಬೆಲೆಗಳ ಏರಿಕೆ ಮಧ್ಯಮ ವರ್ಗದ ಕುಟುಂಬಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ.
ಮಾರ್ಚ್ 23 ಪಾಕಿಸ್ತಾನಕ್ಕೆ ಐತಿಹಾಸಿಕ ದಿನ. 1940 ರ ಈ ದಿನದಂದು, ಲಾಹೋರ್ ನಿರ್ಣಯವನ್ನು ಮಂಡಿಸಲಾಯಿತು. ಈ ನಿರ್ಣಯವು ಪ್ರತ್ಯೇಕ ಮುಸ್ಲಿಂ ತಾಯ್ನಾಡನ್ನು ಒತ್ತಾಯಿಸಿತು, ಇದು ನಂತರ 1947 ರಲ್ಲಿ ಭಾರತದ ವಿಭಜನೆಗೆ ಕಾರಣವಾಯಿತು. ನಂತರ, ಮಾರ್ಚ್ 23, 1956 ರಂದು, ಪಾಕಿಸ್ತಾನವು ತನ್ನ ಮೊದಲ ಸಂವಿಧಾನವನ್ನು ಅಂಗೀಕರಿಸಿತು ಮತ್ತು ತನ್ನನ್ನು ತಾನು ಗಣರಾಜ್ಯವೆಂದು ಘೋಷಿಸಿತು.
ಈ ಬಿಕ್ಕಟ್ಟು ಹಣದುಬ್ಬರದ ಮೇಲೂ ಪರಿಣಾಮ ಬೀರಿದೆ ಮತ್ತು ಗಲ್ಫ್ ದೇಶಗಳಲ್ಲಿ ಕೆಲಸ ಮಾಡುತ್ತಿರುವ ಸುಮಾರು 47 ಲಕ್ಷ ಪಾಕಿಸ್ತಾನಿಗಳಿಂದ ಬರುವ ಹಣಕ್ಕೂ ಅಪಾಯವಿದೆ.
ಬೆಂಗಳೂರು, ಮಾ.19: ರಾಜ್ಯ ರಾಜಕೀಯದಲ್ಲಿ ಕುತೂಹಲ ಕೆರಳಿಸಿರುವ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಏಪ್ರಿಲ್ 9ರಂದು ನಡೆಯಲಿರುವ ಈ ಚುನಾವಣೆಗೆ ಬಿಜೆಪಿ ಹಳೆಯ ಹುಲಿ ಮತ್ತು ಹೊಸ ಮುಖಕ್ಕೆ ಅವಕಾಶ ನೀಡಿದೆ. ಬಾಗಲಕೋಟೆಯಲ್ಲಿ ವೀರಣ್ಣ ಚರಂತಿಮಠ್ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಘೋಷಣೆಯಾಗಿದೆ. ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ ವೀರಣ್ಣ ಚರಂತಿಮಠ್ ಅವರಿಗೆ ಬಿಜೆಪಿ ಮತ್ತೆ ಮಣೆ ಹಾಕಿದೆ. ಕ್ಷೇತ್ರದಲ್ಲಿ ಲಿಂಗಾಯತ ಮತಗಳ ಪ್ರಾಬಲ್ಯ ಹೆಚ್ಚಿರುವುದರಿಂದ ಬಿಜೆಪಿ ಈ ನಿರ್ಧಾರ ತೆಗೆದುಕೊಂಡಿದೆ. ಬಾಗಲಕೋಟೆಯಲ್ಲಿ ಮಾಜಿ ಶಾಸಕ ಎಚ್.ವೈ. ಮೇಟಿ ಅವರ ನಿಧನ ನಂತರ ಉಪಚುನಾವಣೆ ಘೋಷಣೆಯಾದ ನಂತರ ಕಾಂಗ್ರೆಸ್ನಲ್ಲಿ ಭಾರೀ ಗದ್ದಲ ಉಂಟಾಗಿದೆ. ಇದರ ನಡುವೆ ಬಿಜೆಪಿ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡುವ ಮೂಲಕ ರಾಜಕೀಯ ನೇರ ಪೈಪೋಟಿಗೆ ವೇದಿಕೆ ಸಿದ್ಧ ಮಾಡಿದೆ.
ಇನ್ನು ದಾವಣಗೆರೆ ದಕ್ಷಿಣ ಕ್ಷೇತ್ರ ಅಭ್ಯರ್ಥಿಯಾಗು ಬಿಜೆಪಿ ಶ್ರೀನಿವಾಸ್ ಟಿ. ದಾಸಕರಿಯಪ್ಪ ಅವರಿಗೆ ಟಿಕೆಟ್ ನೀಡಿದೆ. ಇಲ್ಲಿ ಬಿಜೆಪಿ ‘ವಾಲ್ಮೀಕಿ’ (ST) ಸಮುದಾಯಕ್ಕೆ ಆದ್ಯತೆ ನೀಡಿದೆ. ಎಸ್.ಟಿ ಮತಗಳನ್ನು ಸೆಳೆಯುವ ಉದ್ದೇಶದಿಂದ ಶ್ರೀನಿವಾಸ್ ದಾಸಕರಿಯಪ್ಪ ಅವರನ್ನು ಕಣಕ್ಕಿಳಿಸಲಾಗಿದ್ದು, ಕ್ಷೇತ್ರದಲ್ಲಿ ಸಾಮಾಜಿಕ ಸಮತೋಲನ ಕಾಪಾಡಲು ಬಿಜೆಪಿ ಪ್ರಯತ್ನಿಸಿದೆ ಎಂದು ಹೇಳಲಾಗಿದೆ. ಇಲ್ಲಿಯೂ ಕೂಡ ಈ ಹಿಂದೆ ಕಾಂಗ್ರೆಸ್ ಪ್ರಬಲ್ಯ ಇತ್ತು. ಕಾಂಗ್ರೆಸ್ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ನಿಧನವಾದ ನಂತರ ಇಲ್ಲಿಯೂ ಕೂಡ ಕಾಂಗ್ರೆಸ್ಗೆ ಇಲ್ಲಿ ಅಭ್ಯರ್ಥಿ ಆಯ್ಕೆ ತಲೆನೋವಾಗಿದೆ.
2026ರ ಯುಗಾದಿ ಭವಿಷ್ಯದ ಪ್ರಕಾರ, ಮೇಷ ರಾಶಿಯವರಿಗೆ ಈ ವರ್ಷ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತುತಜ್ಞ ವೇದಬ್ರಹ್ಮ ಶ್ರೀ ಕೆ. ವೆಂಕಟೇಶ್ ಶರ್ಮಾ ಗುರೂಜಿ ಅವರು ವಿವರವಾದ ಭವಿಷ್ಯವನ್ನು ನೀಡಿದ್ದಾರೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಲಾಭದ ಸಾಧ್ಯತೆಗಳಿವೆ. ಖರ್ಚುಗಳು ಸ್ವಲ್ಪ ಹೆಚ್ಚಾಗಬಹುದಾದರೂ, ಆದಾಯವೂ ಹೆಚ್ಚಾಗಲಿದೆ. ಕುಟುಂಬದಲ್ಲಿ ಸಣ್ಣ ಭಿನ್ನಾಭಿಪ್ರಾಯಗಳು ಉಂಟಾಗಬಹುದು.
ಗ್ರಹಗಳ ಸ್ಥಾನಗಳ ಪರಿಣಾಮಗಳ ಕುರಿತು ಹೇಳುವುದಾದರೆ, ಮೂರನೇ ಗುರು ಆರೋಗ್ಯವನ್ನು ಸ್ವಲ್ಪ ಕೆಡಿಸಬಹುದು, ಇದಕ್ಕೆ ಗುರು ಆರಾಧನೆ ಅಗತ್ಯ. ಐದನೇ ಕೇತು ಕೆಲವು ಕಷ್ಟಗಳನ್ನು ತರಬಹುದಾಗಿದ್ದು, ಗಣಪತಿ ಆರಾಧನೆಯಿಂದ ಪರಿಹಾರ ದೊರೆಯಲಿದೆ. ಆರನೇ ಚಂದ್ರ ಮತ್ತು ಹನ್ನೊಂದನೇ ರಾಹು ದ್ರವ್ಯಲಾಭವನ್ನು ನೀಡಿದರೆ, ಹತ್ತನೇ ಬುಧ ಸಂತೋಷವನ್ನು ತರಲಿದ್ದಾನೆ. ಹನ್ನೆರಡನೇ ಸ್ಥಾನದಲ್ಲಿರುವ ಶನಿ ಖರ್ಚುಗಳನ್ನು ಹೆಚ್ಚಿಸಿ, ಶತ್ರುಭಯವನ್ನು ಉಂಟುಮಾಡಬಹುದು. ಇದಕ್ಕೆ ಆಂಜನೇಯ ಸ್ವಾಮಿ ಮತ್ತು ಲಕ್ಷ್ಮೀನರಸಿಂಹರ ಪ್ರಾರ್ಥನೆ ಮಾಡುವುದು ಉತ್ತಮ. ಶುಕ್ರನು ಸೌಖ್ಯವನ್ನು ನೀಡಲಿದ್ದಾನೆ.
ಮೇಷ ರಾಶಿಯ ಅಶ್ವಿನಿ, ಭರಣಿ, ಕೃತಿಕ ಒಂದನೇ ಪಾದದವರು ಈ ಭವಿಷ್ಯವನ್ನು ಅನುಸರಿಸಬಹುದು. ಪರಿಹಾರವಾಗಿ “ಭೂಮಿಪುತ್ರೋ ಮಹಾತೇಜಾ…” ಮಂತ್ರ ಅಥವಾ “ಓಂ ಮಂಗಳಾಯ ನಮಃ” ಜಪಿಸುವುದು ಉತ್ತಮ. ತೊಗರಿಬೇಳೆ, ಹುರುಳಿಕಾಳು, ಎಳ್ಳು ದಾನ ಮಾಡುವುದರಿಂದ ಶುಭ ಫಲ ಸಿಗುತ್ತದೆ. ಮೇಷ ರಾಶಿಯವರಿಗೆ ದಕ್ಷಿಣ ದಿಕ್ಕು ಶುಭವಾಗಿದ್ದು, 1, 2, 3, 9 ಶುಭ ಸಂಖ್ಯೆಗಳು. ಕೆಂಪು, ಹಳದಿ, ಕೇಸರಿ ಬಣ್ಣಗಳು ಶುಭಕಾರಿ. 1, 10, 17ನೇ ತಾರೀಖುಗಳಲ್ಲಿ ಕೈಗೊಂಡ ಕೆಲಸಗಳಲ್ಲಿ ಯಶಸ್ಸು ದೊರೆಯಲಿದೆ.
ಡಾರ್ಲಿಂಗ್ ಕೃಷ್ಣ ಅವರು ನಟಿಸಿ, ನಿರ್ದೇಶನ ಮಾಡಿದ ‘ಲವ್ ಮಾಕ್ಟೇಲ್’ ಚಿತ್ರಕ್ಕೆ ಪ್ರತ್ಯೇಕ ಫ್ಯಾನ್ ಬೇಸ್ ಇದೆ. ಇದರ ಮೂರನೇ ಇನ್ಸ್ಟಾಲ್ಮೆಂಟ್ ಈಗ ಬಿಡುಗಡೆ ಆಗಿದೆ. ಹೌದು, ಮಾರ್ಚ್ 19ರಂದು ‘ಲವ್ ಮಾಕ್ಟೇಲ್ 3’ (Love Mocktail 3) ತೆರೆಕಂಡಿದೆ. ಟ್ರೇಲರ್ನಲ್ಲಿ ಕಥೆಯ ಬಗ್ಗೆ ಹೆಚ್ಚೇನೂ ಬಿಟ್ಟುಕೊಟ್ಟಿರಲಿಲ್ಲ. ಚಿತ್ರಮಂದಿರಕ್ಕೆ ಬಂದ ಪ್ರೇಕ್ಷಕರಿಗೆ ಅಪ್ಪ-ಮಗಳ ಎಮೋಷನಲ್ ಕಹಾನಿ ಕಾಣಿಸುತ್ತದೆ. ಎಮೋಷನಲ್ ದೃಶ್ಯಗಳ ಜೊತೆಗೆ ಕಾಮಿಡಿಗೂ ಕೊರತೆ ಮಾಡಿಲ್ಲ. ‘ಲವ್ ಮಾಕ್ಟೇಲ್ 3’ ವಿಮರ್ಶೆ (Love Mocktail 3 Movie Review) ಇಲ್ಲಿದೆ..
ಯಾವುದೇ ಸಿನಿಮಾಗೆ ಸೀಕ್ವೆಲ್ ಮಾಡಿದಾಗ ಸೇಮ್ ಶೈಲಿಯನ್ನು ಮುಂದುವರಿಸುವುದು ಸಹಜ. ಆದರೆ ಡಾರ್ಲಿಂಗ್ ಕೃಷ್ಣ ಅವರು ಪ್ರತಿ ಸೀಕ್ವೆಲ್ ಮಾಡಿದಾಗಲೂ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡುತ್ತಾರೆ. ‘ಲವ್ ಮಾಕ್ಟೇಲ್’ ಚಿತ್ರದ ಕಥೆ ‘ಲವ್ ಮಾಕ್ಟೇಲ್ 2’ ಸಿನಿಮಾದಲ್ಲಿ ಮುಂದುವರಿಯಿತು. ಆದರೆ ಸ್ವಲ್ಪ ಗಂಭೀರತೆಯನ್ನು ಪಡೆದುಕೊಂಡಿತ್ತು. ಈಗ ‘ಲವ್ ಮಾಕ್ಟೇಲ್ 3’ ಚಿತ್ರದಲ್ಲಿ ಕೂಡ ಕಥೆ ಮತ್ತು ಪಾತ್ರಗಳು ಮುಂದುವರಿದಿವೆ. ಈ ಬಾರಿ ಪ್ರೇಕ್ಷಕರಿಗೆ ಬೇರೆಯದೇ ಫೀಲ್ ನೀಡಲು ಡಾರ್ಲಿಂಗ್ ಕೃಷ್ಣ ಅವರು ಪ್ರಯತ್ನಿಸಿದ್ದಾರೆ.
ಪತ್ನಿಯನ್ನು ಕಳೆದುಕೊಂಡು ಒಂಟಿಯಾಗಿದ್ದ ಆದಿ, ಒಂದು ಹೆಣ್ಣು ಮಗುವನ್ನು ದತ್ತು ಪಡೆದುಕೊಳ್ಳುವಲ್ಲಿಗೆ ‘ಲವ್ ಮಾಕ್ಟೇಲ್ 2’ ಕಥೆ ಮುಗಿದಿತ್ತು. ನಂತರ ಆದಿ ಬದುಕಿನಲ್ಲಿ ಏನೆಲ್ಲ ಬದಲಾವಣೆ ಆಗುತ್ತದೆ ಎಂಬುದನ್ನು ‘ಲವ್ ಮಾಕ್ಟೇಲ್ 3’ ಸಿನಿಮಾದಲ್ಲಿ ತೋರಿಸಲಾಗಿದೆ. ಇಡೀ ಸಿನಿಮಾದಲ್ಲಿ ತಂದೆ-ಮಗಳ ಪ್ರೀತಿಯೇ ಹೈಲೈಟ್ ಆಗಿದೆ. ‘ಲವ್ ಮಾಕ್ಟೇಲ್’ ಚಿತ್ರದಲ್ಲಿ ಹುಡುಗಾಟಿಕೆ ಮಾಡುತ್ತಿದ್ದ ಆದಿ ಪಾತ್ರ ‘ಲವ್ ಮಾಕ್ಟೇಲ್ 3’ ಬರುವ ವೇಳೆಗೆ ತುಂಬಾ ಮಾಗಿದೆ. ಹೆಣ್ಣು ಮಗುವಿನ ತಂದೆಯಾಗಿ ನೋಡುಗರ ಕಣ್ಣುಗಳನ್ನು ತೇವವಾಗಿಸುವ ಆದಿ, ಈ ಬಾರಿ ಫ್ಯಾಮಿಲಿ ಪ್ರೇಕ್ಷಕರಿಗೆ ಹೆಚ್ಚು ಇಷ್ಟ ಆಗುತ್ತಾನೆ.
‘ಲವ್ ಮಾಕ್ಟೇಲ್ 3’ ಸಿನಿಮಾದ ಮೊದಲಾರ್ಧಕ್ಕೂ ದ್ವಿತೀಯಾರ್ಧಕ್ಕೂ ಬಹಳ ವ್ಯತ್ಯಾಸ ಇದೆ. ಫಸ್ಟ್ ಹಾಫ್ನಲ್ಲಿ ಮಗಳ ತರಲೆ, ತುಂಟತನ, ತಮಾಷೆಗಳೇ ತುಂಬಿಕೊಂಡಿವೆ. ಈ ಪಾತ್ರವನ್ನು ಬಾಲನಟಿ ಸಂವೃತಾ ನಿಭಾಯಿಸಿದ್ದಾಳೆ. ಆಕೆಗೆ ಹೆಚ್ಚು ಸ್ಕ್ರೀನ್ ಸ್ಪೇಸ್ ಸಿಕ್ಕಿದೆ. ಆಕೆಯ ಪಾತ್ರಕ್ಕೆ ಎರಡು ಹೆಸರಿದೆ. ಒಂದು ನಿಧಿಮಾ, ಇನ್ನೊಂದು ರಮ್ಯಾ. ಸಿನಿಮಾದಲ್ಲಿ ಎಲ್ಲಿಯವರೆಗೆ ಆ ಪಾತ್ರ ನಿಧಿಮಾ ಆಗಿರುತ್ತದೋ ಅಲ್ಲಿಯವರೆಗೂ ಪ್ರೇಕ್ಷಕ ನಗುತ್ತಾನೆ. ಆ ಪಾತ್ರದ ಹೆಸರು ರಮ್ಯಾ ಎಂದು ಬದಲಾಗುವ ಸಮಯ ಬಂದಾಗ ಪ್ರೇಕ್ಷಕ ಎಮೋಷನಲ್ ಆಗುತ್ತಾನೆ! ಯಾಕೆ ಎಂಬುದನ್ನು ಸಿನಿಮಾದಲ್ಲಿಯೇ ನೋಡಿ ತಿಳಿಯಬೇಕು.
ಮೊದಲಾರ್ಧ ಸ್ವಲ್ಪ ಜಾಳು ಎನಿಸಿದರೂ ದ್ವಿತೀಯಾರ್ಧವನ್ನು ಬಿಗಿಯಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಡಾರ್ಲಿಂಗ್ ಕೃಷ್ಣ. ಫ್ಲ್ಯಾಶ್ಬ್ಯಾಕ್ ತೆರೆದುಕೊಂಡಾಗ ಕಥೆಯ ಗಂಭೀರತೆ ಹೆಚ್ಚುತ್ತದೆ. ಅಪ್ಪ, ಮಗಳು, ಶಾಲೆ, ಸ್ನೇಹಿತರ ನಡುವೆ ತಮಾಷೆಯಾಗಿ ಸುತ್ತುತ್ತಿದ್ದ ಕಥೆ ಏಕಾಏಕಿ ಕೋರ್ಟ್ ಕಟಕಟೆಗೆ ಬಂದು ನಿಲ್ಲುತ್ತದೆ. ಈಗಾಗಲೇ ಎಲ್ಲವನ್ನೂ ಕಳೆದುಕೊಂಡಿರುವ ಆದಿ ಈಗ ಮಗಳನ್ನೂ ಕಳೆದುಕೊಳ್ಳುತ್ತಾನಾ ಎಂಬ ಪ್ರಶ್ನೆ ಮೂಡುತ್ತದೆ. ಮುಂದೇನಾಗಬಹುದು ಎಂಬ ಕುತೂಹಲದಿಂದಾಗಿ ಈ ಸಿನಿಮಾ ಕೊನೆವರೆಗೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆ.
ಯಾವುದೇ ಗೊಂದಲ ಇಲ್ಲದೇ ಕೆಲವೇ ಕೆಲವು ಪಾತ್ರಗಳ ಮೂಲಕ ಡಾರ್ಲಿಂಗ್ ಕೃಷ್ಣ ಅವರು ಕಥೆ ಹೇಳಿ ಮುಗಿಸಿದ್ದಾರೆ. ‘ಲವ್ ಮಾಕ್ಟೇಲ್’ ಪ್ರಪಂಚಕ್ಕೆ ಒಂದೆರಡು ಹೊಸ ಪಾತ್ರಗಳು ಕೂಡ ಎಂಟ್ರಿ ನೀಡಿವೆ. ಈ ಸಿನಿಮಾದ ಮೂಲಕ ಪ್ರೇಕ್ಷಕರಿಗೆ ಸಂದೇಶ ನೀಡುವ ಪ್ರಯತ್ನವನ್ನೂ ಡಾರ್ಲಿಂಗ್ ಕೃಷ್ಣ ಮಾಡಿದ್ದಾರೆ. ಬಾಲ ನಟಿ ಸಂವೃತಾ ಹೆಚ್ಚು ಇಷ್ಟ ಆಗುತ್ತಾಳೆ. ಕೆಲವು ಕಡೆಗಳಲ್ಲಿ ಆ ಪಾತ್ರದ ವಯಸ್ಸಿಗೂ ಮೀರಿದ ಸಂಭಾಷಣೆ ಮತ್ತು ದೃಶ್ಯಗಳಿಂದಾಗಿ ಸ್ವಲ್ಪ ಅಸಹಜ ಎನಿಸುತ್ತದೆ.
ಒಟ್ಟಾರೆಯಾಗಿ ಫ್ಯಾಮಿಲಿ ಪ್ರೇಕ್ಷಕರನ್ನು ‘ಲವ್ ಮಾಕ್ಟೇಲ್ 3’ ಸಿನಿಮಾ ಸೆಳೆದುಕೊಳ್ಳುತ್ತದೆ. ಮೊದಲಾರ್ಧವನ್ನು ಇನ್ನಷ್ಟು ಉತ್ತಮವಾಗಿಸುವ ಅವಕಾಶ ನಿರ್ದೇಶಕರಿಗೆ ಇತ್ತು ಎನಿಸುತ್ತದೆ. ಆ ಬಗ್ಗೆ ಗಮನ ಹರಿಸಬಹುದಿತ್ತು. ಸಂಗೀತ, ಸಂಕಲನ, ಛಾಯಾಗ್ರಹಣ ಮುಂತಾದ ತಾಂತ್ರಿಕ ವಿಭಾಗಗಳಲ್ಲಿ ಈ ಸಿನಿಮಾ ಅಚ್ಚುಕಟ್ಟಾಗಿದೆ. ಮಿಲನಾ ನಾಗರಾಜ್ ಅವರು ಹೀಗೆ ಬಂದು ಹಾಗೆ ಮಾಯವಾಗುತ್ತಾರೆ. ಅವರ ಅಭಿಮಾನಿಗಳಿಗೆ ಇದೊಂದು ಕೊರತೆ ಎನಿಸಹುದು. ಜಗ್ಗ ಮಮ್ಮಿ ಎಂಬ ಪಾತ್ರ ಮಾಡಿರುವ ಜಗದೀಶ್ ಅವರು ಹೆಚ್ಚು ನಗಿಸುತ್ತಾರೆ. ಅವರಿಗೆ ಅಭಿಲಾಷ್ ಮತ್ತು ಸಂವೃತಾ ಚೆನ್ನಾಗಿ ಸಾಥ್ ನೀಡಿದ್ದಾರೆ.
ವಾಷಿಂಗ್ಟನ್, ಮಾರ್ಚ್ 19:ಇರಾನ್(Iran)ನ ಅನಿಲ ಸ್ಥಾವರಗಳ ಮೇಲೆ ಇಸ್ರೇಲ್ ದಾಳಿ ನಡೆಸು ಬಗ್ಗೆ ನಮಗೇನೂ ತಿಳಿದಿರಲಿಲ್ಲ, ಇದು ಕೇವಲ ಇಸ್ರೇಲ್ ನಡೆಸಿರುವ ದಾಳಿಯಷ್ಟೇ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇರಾನ್‌ನ ಸೌತ್ ಪಾರ್ಸ್ ಅನಿಲ ಸ್ಥಾವರಗಳ ಮೇಲೆ ಇಸ್ರೇಲ್ ಇನ್ನುಮುಂದೆ ಯಾವುದೇ ದಾಳಿ ನಡೆಸುವುದಿಲ್ಲ. ಜತೆಗೆ ಹೆಚ್ಚುತ್ತಿರುವ ಹಗೆತನದ ನಡುವೆ ಕತಾರ್‌ನ ಇಂಧನ ಮೂಲಸೌಕರ್ಯವನ್ನು ಗುರಿಯಾಗಿಸಿಕೊಳ್ಳುವುದರ ವಿರುದ್ಧ ಇರಾನ್‌ಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ದಾಳಿಗಳ ಬಗ್ಗೆ ಕೋಪಗೊಂಡು ದಕ್ಷಿಣ ಪಾರ್ಸ್ ಅನಿಲ ಕ್ಷೇತ್ರದ ಮೇಲೆ ಇಸ್ರೇಲ್ ದಾಳಿ ನಡೆಸಿದೆ. ಅದಕ್ಕೂ ನಮಗೂ ಸಂಬಂಧವಿಲ್ಲ ಹಾಗೆಯೇ ಕತಾರ್ ಪಾತ್ರ ಕೂಡ ಇದರಲಿಲ್ಲ ಇಲ್ಲ ಎಂದು ಅವರು ಒತ್ತಿ ಹೇಳಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ನಡೆದ ಪ್ರತಿದಾಳಿಯಿಂದಾಗಿ ಜಾಗತಿಕ ತೈಲ ಬೆಲೆಗಳು ಗಗನಕ್ಕೇರಿರುವ ನಡುವೆ, ಕತಾರ್‌ನ ಇಂಧನ ಮೂಲಸೌಕರ್ಯವನ್ನು ಗುರಿಯಾಗಿಸಿಕೊಳ್ಳುವುದರ ವಿರುದ್ಧ ಇರಾನ್‌ಗೆ ಎಚ್ಚರಿಕೆ ನೀಡುತ್ತಾ, ಇರಾನ್‌ನ ಪ್ರಮುಖ ಸೌತ್ ಪಾರ್ಸ್ ಅನಿಲ ಕ್ಷೇತ್ರದ ಮೇಲೆ ಇಸ್ರೇಲ್ ಇನ್ನು ಮುಂದೆ ದಾಳಿ ಮಾಡುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಹೇಳಿದ್ದಾರೆ.
ಇದು ಕೇವಲ ಇಸ್ರೇಲಿ ಕಾರ್ಯಾಚರಣೆ, ಈ ನಿರ್ದಿಷ್ಟ ದಾಳಿಯ ಬಗ್ಗೆ ಅಮೆರಿಕಕ್ಕೆ ಏನೂ ತಿಳಿದಿರಲಿಲ್ಲ, ಮತ್ತು ಕತಾರ್ ದೇಶವು ಯಾವುದೇ ರೀತಿಯಲ್ಲಿ, ರೂಪದಲ್ಲಿ ಅಥವಾ ರೂಪದಲ್ಲಿ ಭಾಗಿಯಾಗಿರಲಿಲ್ಲ, ಅಥವಾ ಅದು ಸಂಭವಿಸುತ್ತದೆ ಎಂಬ ಕಲ್ಪನೆಯೂ ಅದಕ್ಕೆ ಇರಲಿಲ್ಲ ಎಂದು ಅವರು ಹೇಳಿದರು.
ವಿಶ್ವದ ಅತಿದೊಡ್ಡ ನೈಸರ್ಗಿಕ ಅನಿಲ ಕ್ಷೇತ್ರ ಎಂದು ಹೇಳಲಾಗುವ ಸೌತ್ ಪಾರ್ಸ್ ಮೇಲೆ ನಡೆದ ಬಾಂಬ್ ದಾಳಿಗೆ ಗಲ್ಫ್‌ನಾದ್ಯಂತ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಅವರ ಹೇಳಿಕೆಗಳು ಬಂದಿವೆ . ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಕತಾರ್‌ನಲ್ಲಿರುವ ಐದು ಇಂಧನ ಸೌಲಭ್ಯಗಳನ್ನು ಮುಂಬರುವ ಗಂಟೆಗಳಲ್ಲಿ ಗುರಿಯಾಗಿಸಲಾಗುವುದು ಎಂದು ಇರಾನ್ ಅಧಿಕಾರಿಗಳು ಹೇಳಿಕೆಯಲ್ಲಿ ಎಚ್ಚರಿಸಿದ್ದರು.
ಫೆಬ್ರವರಿ 28 ರಂದು ಸಂಘರ್ಷ ಪ್ರಾರಂಭವಾದಾಗಿನಿಂದ , ಇಸ್ರೇಲ್ ಮತ್ತು ಅಮೆರಿಕ ತೈಲ ಸೌಲಭ್ಯಗಳು ಸೇರಿದಂತೆ ಇರಾನ್‌ನಲ್ಲಿ ಹಲವಾರು ಗುರಿಗಳ ಮೇಲೆ ದಾಳಿ ಮಾಡಿವೆ. ಗಲ್ಫ್ ರಾಷ್ಟ್ರಗಳು ಸೇರಿದಂತೆ ಪ್ರದೇಶದಾದ್ಯಂತ ಕ್ಷಿಪಣಿ ಮತ್ತು ಡ್ರೋನ್ ದಾಳಿಯ ಮೂಲಕ ಇರಾನ್ ಪ್ರತಿಕ್ರಿಯಿಸಿದೆ.
ದೆಹಲಿ, ಮಾ.19: ಚಾಂದ್ರಮಾನ ಯುಗಾದಿ ಮತ್ತು ಹೊಸ ವರ್ಷದ ಈ ಶುಭ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶವಾಸಿಗಳಿಗೆ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದ್ದಾರೆ. ವಸಂತ ಋತುವಿನ ಆಗಮನವು ಹೊಸ ಚೈತನ್ಯ ಮತ್ತು ಸಾಧ್ಯತೆಗಳನ್ನು ಹೊತ್ತು ತರಲಿ ಎಂದು ಅವರು ಹಾರೈಸಿದ್ದಾರೆ. “ಪವಿತ್ರ ಯುಗಾದಿಯ ಸಂದರ್ಭದಲ್ಲಿ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಸುಖಮಯ ಹೊಸ ವರ್ಷದ ಶುಭಾಶಯಗಳು” ಎಂದು ಪ್ರಧಾನಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ವಸಂತ ಕಾಲದ ಹಸಿರು, ಹೂವುಗಳ ಸುಗಂಧ ಮತ್ತು ಹಣ್ಣುಗಳ ಆಗಮನವು ಹೊಸ ಶಕ್ತಿಯ ಸಂಕೇತವಾಗಿದೆ ಎಂದು ಅವರು ಬಣ್ಣಿಸಿದ್ದಾರೆ. ಯುಗಾದಿಯು ಹೊಸ ಕೃಷಿ ಚಟುವಟಿಕೆಗಳ ಆರಂಭದ ಕಾಲ. ಈ ಸಮಯದಲ್ಲಿ ನಮ್ಮ ದೇಶದ ಕಷ್ಟಜೀವಿ ರೈತರು ಹೊಸ ಆಶಾವಾದದೊಂದಿಗೆ ಮುಂದಿನ ಕೃಷಿ ಚಕ್ರಕ್ಕೆ ಸಜ್ಜಾಗುತ್ತಿರುವುದನ್ನು ಪ್ರಧಾನಿ ಶ್ಲಾಘಿಸಿದ್ದಾರೆ.
ಜೀವನದ ಸಿಹಿ-ಕಹಿಗಳನ್ನು ಸಮಾನವಾಗಿ ಸ್ವೀಕರಿಸಬೇಕು ಎಂಬ ಯುಗಾದಿಯ ಸಾಂಪ್ರದಾಯಿಕ ಸಂದೇಶವನ್ನು ಪ್ರಧಾನಿ ನೆನಪಿಸಿದ್ದಾರೆ. ಸವಾಲುಗಳನ್ನು ಧೈರ್ಯದಿಂದ ಎದುರಿಸಿ, ಯಶಸ್ಸನ್ನು ಕೃತಜ್ಞತೆಯಿಂದ ಸ್ವೀಕರಿಸಲು ಈ ಹಬ್ಬ ಪ್ರೇರಣೆ ನೀಡುತ್ತದೆ ಎಂದಿದ್ದಾರೆ. ಮುಂಬರುವ ವರ್ಷವು ಎಲ್ಲರ ಜೀವನದಲ್ಲಿ ಉತ್ತಮ ಆರೋಗ್ಯ, ಸುಖ ಮತ್ತು ಶಾಂತಿಯನ್ನು ತರಲಿ ಎಂದು ಮೋದಿ ಅವರು ಪ್ರಾರ್ಥಿಸಿದ್ದಾರೆ.
ಯುಗಾದಿ ಹಬ್ಬದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ಜನತೆಗೆ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣ ‘X’ (ಟ್ವಿಟರ್) ಮೂಲಕ ಅವರು ಹಂಚಿಕೊಂಡಿರುವ ಸಂದೇಶದಲ್ಲಿ ಕನ್ನಡಿಗರ ಸಂಸ್ಕೃತಿ ಮತ್ತು ಹೊಸ ಆರಂಭದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಕರ್ನಾಟಕದ ನನ್ನ ಎಲ್ಲಾ ಸಹೋದರ ಸಹೋದರಿಯರಿಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು” ಎಂದು ಪ್ರಧಾನಿ ಮೋದಿಯವರು ಕನ್ನಡ ಭಾಷೆಯಲ್ಲೇ ಸಂದೇಶ ನೀಡುವ ಮೂಲಕ ಕನ್ನಡಿಗರ ಮನ ಗೆದ್ದಿದ್ದಾರೆ. ಯುಗಾದಿಯು ಹೊಸ ಭರವಸೆ ಮತ್ತು ಚೈತನ್ಯದ ಹಬ್ಬವಾಗಿದ್ದು, ಇದು ಪ್ರತಿಯೊಬ್ಬರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರಲಿ ಎಂದು ಅವರು ಹಾರೈಸಿದ್ದಾರೆ.ಮುಂಬರುವ ವರ್ಷವು ಕರ್ನಾಟಕದ ಮನೆಮನಗಳಲ್ಲಿ ಸುಖ, ಶಾಂತಿ, ಆರೋಗ್ಯ ಮತ್ತು ಐಶ್ವರ್ಯವನ್ನು ತುಂಬಲಿ ಎಂದು ಅವರು ಪ್ರಾರ್ಥಿಸಿದ್ದಾರೆ.
ಇದನ್ನೂ ಓದಿ: ಯುಗಾದಿ ಹಬ್ಬದ ಸಂಭ್ರಮ; ನಿಮ್ಮ ಪ್ರೀತಿಪಾತ್ರರಿಗೆ ಶುಭಾಶಯಗಳನ್ನು ತಿಳಿಸಲು ಇಲ್ಲಿವೆ ಸಂದೇಶ
ಉತ್ತರ ಭಾರತದ ರಾಜ್ಯಗಳಿಗೆ ಪ್ರಧಾನಿ ಮೋದಿ ವಿಶೇಷ ಪತ್ರ
ವಿಕ್ರಮ ಸಂವತ್ 2083 ಮತ್ತು ಚೈತ್ರ ನವರಾತ್ರಿಯ ಶುಭ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶ, ಉತ್ತರಾಖಂಡ, ಮಧ್ಯಪ್ರದೇಶ, ಛತ್ತೀಸ್‌ಗಢ, ಬಿಹಾರ, ಜಾರ್ಖಂಡ್, ಹಿಮಾಚಲ ಪ್ರದೇಶ ಮತ್ತು ದೆಹಲಿಯ ಜನತೆಗೆ ವೈಯಕ್ತಿಕ ಪತ್ರಗಳನ್ನು ಬರೆದಿದ್ದಾರೆ. ಭಾರತೀಯ ಸಂಸ್ಕೃತಿಯಲ್ಲಿ ಈ ದಿನಕ್ಕೆ ಇರುವ ಐತಿಹಾಸಿಕ ಮತ್ತು ಆಧ್ಯಾತ್ಮಿಕ ಪ್ರಾಮುಖ್ಯತೆಯನ್ನು ಅವರು ಶ್ಲಾಘಿಸಿದ್ದಾರೆ.ಭಾರತೀಯ ಕಾಲಗಣನೆಯ ಸಂಕೇತವಾದ ವಿಕ್ರಮ ಸಂವತ್ 2083ರ ಆರಂಭವು ದೇಶದಾದ್ಯಂತ ಹೊಸ ಭರವಸೆ ಮತ್ತು ಸಮೃದ್ಧಿಯನ್ನು ತರಲಿ ಎಂದು ಪ್ರಧಾನಿ ಹಾರೈಸಿದ್ದಾರೆ.
ಕಲಿಯುಗದ ಕಾಲಗಣನೆಯಾದ ಯುಗಾಬ್ದ 5128ನೇ ವರ್ಷಕ್ಕೆ ನಾವು ಕಾಲಿಡುತ್ತಿರುವುದು ನಮ್ಮ ಪುರಾತನ ನಾಗರಿಕತೆಯ ಜೀವಂತಿಕೆಗೆ ಸಾಕ್ಷಿ ಎಂದು ಅವರು ಉಲ್ಲೇಖಿಸಿದ್ದಾರೆ. ಶಕ್ತಿ ದೇವತೆಯ ಆರಾಧನೆಯಾದ ಚೈತ್ರ ನವರಾತ್ರಿಯು ದೇಶದ ಜನರಲ್ಲಿ ಆತ್ಮವಿಶ್ವಾಸ ಮತ್ತು ದೃಢತೆಯನ್ನು ತುಂಬಲಿ ಎಂದು ಅವರು ಪ್ರಾರ್ಥಿಸಿದ್ದಾರೆ. ಉತ್ತರ ಭಾರತದ ವಿವಿಧ ಭಾಗಗಳಲ್ಲಿ ಈ ದಿನವನ್ನು ‘ನವ ವರ್ಷ’ವನ್ನಾಗಿ ಆಚರಿಸುವ ಪರಂಪರೆಯನ್ನು ಸ್ಮರಿಸಿರುವ ಅವರು, ಇದು ಭಾರತದ ಸಾಂಸ್ಕೃತಿಕ ಏಕತೆಯ ಪ್ರತಿಬಿಂಬ ಎಂದಿದ್ದಾರೆ.ಹೊಸ ವರ್ಷವು ‘ವಿಕಸಿತ ಭಾರತ’ದ ಸಂಕಲ್ಪವನ್ನು ಈಡೇರಿಸಲು ಎಲ್ಲರಿಗೂ ಶಕ್ತಿ ನೀಡಲಿ ಎಂದು ಮೋದಿ ಅವರು ತಮ್ಮ ಪತ್ರದಲ್ಲಿ ಆಶಿಸಿದ್ದಾರೆ.
ಬೆಂಗಳೂರು, ಮಾರ್ಚ್ 19: ಯುಗಾದಿ (Ugadi) ಹಬ್ಬದ ಸಮಯದಲ್ಲೇ ಕನ್ನಡಿಗರ ಹೆಮ್ಮೆಯ ಬ್ರ್ಯಾಂಡ್ ಆಗಿರುವ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತಕ್ಕೂ (KMF) ಸಂಕಷ್ಟ ಎದುರಾಗಿದೆ. ಇರಾನ್-ಇಸ್ರೇಲ್ ಸೇನಾ ಸಂಘರ್ಷದ ಪರಿಣಾಮವಾಗಿ ದೇಶಾದ್ಯಂತ ಉಂಟಾಗಿರುವ ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್ ಕೊರತೆಯ ಪರಿಣಾಮ ಇದೀಗ ನಂದಿನಿ ಉತ್ಪನ್ನಗಳ (Nandini Products) ಮೇಲೂ ತಟ್ಟತೊಡಗಿದೆ. ಕಳೆದ ಕೆಲ ದಿನಗಳಿಂದ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್‌ಗಳ ಸರಬರಾಜು ವ್ಯತ್ಯಯಗೊಂಡಿರುವುದರಿಂದ ಕೆಎಂಎಫ್ ಉತ್ಪಾದನಾ ಘಟಕಗಳು ಒತ್ತಡಕ್ಕೆ ಸಿಲುಕಿವೆ.
ಉತ್ಪನ್ನಗಳ ತಯಾರಿಗೆ ಕೆಎಂಎಫ್ ಸಾಮಾನ್ಯವಾಗಿ ಪ್ರತಿ ತಿಂಗಳು ಸುಮಾರು 450 ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್‌ಗಳನ್ನು ಬಳಸುತ್ತದೆ. ಇತ್ತೀಚೆಗೆ ಅಗತ್ಯ ಪ್ರಮಾಣದಲ್ಲಿ ಸಿಲಿಂಡರ್‌ಗಳು ಲಭ್ಯವಾಗುತ್ತಿಲ್ಲ.
ಸದ್ಯ ಲಭ್ಯವಿರುವ ಗ್ಯಾಸ್ ಸಂಗ್ರಹವು ಇನ್ನೆರಡು ದಿನಗಳಿಗೆ ಮಾತ್ರ ಸಾಕಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾರ್ಚ್ 20ರ ಒಳಗೆ ಕಮರ್ಷಿಯಲ್ ಎಲ್‌ಪಿಜಿ ಪೂರೈಕೆ ಆಗದಿದ್ದರೆ, ನಂದಿನಿ ಬ್ರ್ಯಾಂಡ್‌ನ ಸಿಹಿ, ಖಾರದ ತಿಂಡಿ ಸೇರಿದಂತೆ ಹಲವು ಉತ್ಪನ್ನಗಳ ತಯಾರಿಕೆ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇದೆ.
ಈ ಹಿನ್ನೆಲೆಯಲ್ಲಿ, ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತಂದು ತುರ್ತು ಕ್ರಮ ಕೈಗೊಳ್ಳುವಂತೆ ಕೆಎಂಎಫ್ ಮನವಿ ಮಾಡಿದೆ. ಅಗತ್ಯ ಗ್ಯಾಸ್ ಪೂರೈಕೆ ಆಗದಿದ್ದರೆ, ಮುಂದಿನ ದಿನಗಳಲ್ಲಿ ನಂದಿನಿ ಉತ್ಪನ್ನಗಳನ್ನು ಸೀಮಿತ ಪ್ರಮಾಣದಲ್ಲೇ ಉತ್ಪಾದಿಸುವ ಅನಿವಾರ್ಯತೆ ಎದುರಾಗಬಹುದು ಎಂದು ತಿಳಿಸಲಾಗಿದೆ.
ದೇಶದ ಎರಡನೇ ಅತಿದೊಡ್ಡ ಹಾಲು ಸಹಕಾರ ಒಕ್ಕೂಟ ಕೆಎಂಎಫ್
ಕೆಎಂಎಫ್ ದೇಶದ ಎರಡನೇ ಅತಿದೊಡ್ಡ ಹಾಲು ಸಹಕಾರ ಒಕ್ಕೂಟವಾಗಿದ್ದು, ದಕ್ಷಿಣ ಭಾರತದಲ್ಲಿ ಮೊದಲ ಸ್ಥಾನದಲ್ಲಿದೆ. ಕೆಎಂಎಫ್‌ನ ವಾರ್ಷಿಕ ವಹಿವಾಟು ಸುಮಾರು 25,000 ಕೋಟಿ ರೂಪಾಯಿಗಳಿಂದ 30,000 ಕೋಟಿ ರೂಪಾಯಿಗಳವರೆಗಿದೆ. ದಿನವೊಂದಕ್ಕೆ ಸರಾಸರಿ 85 ಲಕ್ಷದಿಂದ 90 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದ್ದು, ಅದರಲ್ಲಿ ಸುಮಾರು 40 ಲಕ್ಷ ಲೀಟರ್‌ಗಿಂತಲೂ ಅಧಿಕ ಹಾಲು ಪ್ರತಿದಿನ ಮಾರಾಟವಾಗುತ್ತಿದೆ. ಉಳಿದ ಹಾಲನ್ನು ಮೊಸರು, ಮಜ್ಜಿಗೆ, ತುಪ್ಪ, ಬೆಣ್ಣೆ ಮತ್ತು ನಂದಿನಿ ಸ್ವೀಟ್ಸ್‌ಗಳಂತಹ ಮೌಲ್ಯವರ್ಧಿತ ಉತ್ಪನ್ನಗಳಾಗಿ ಪರಿವರ್ತಿಸಿ ಮಾರಾಟ ಮಾಡಲಾಗುತ್ತದೆ. ಕರ್ನಾಟಕವಷ್ಟೇ ಅಲ್ಲದೆ ನೆರೆಯ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಗೋವಾ ರಾಜ್ಯಗಳಲ್ಲೂ ಕೆಎಂಎಫ್ ಬಲವಾದ ಮಾರುಕಟ್ಟೆ ಹೊಂದಿದೆ.
ನಂದಿನಿ ಬ್ರ್ಯಾಂಡ್ ಅಡಿಯಲ್ಲಿ ಕೇವಲ ಹಾಲು ಮಾತ್ರವಲ್ಲದೆ ಸುಮಾರು 140ಕ್ಕೂ ಹೆಚ್ಚು ವಿವಿಧ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಪ್ರತಿದಿನ ಲಕ್ಷಾಂತರ ಗ್ರಾಹಕರು ನಂದಿನಿ ಹಾಲಿನ ಕೇಂದ್ರಗಳ ಮೂಲಕ ವಹಿವಾಟು ನಡೆಸುತ್ತಾರೆ. ಕೇವಲ ದೇಶೀಯ ಮಾರುಕಟ್ಟೆಯಲ್ಲದೆ, ನಂದಿನಿ ಉತ್ಪನ್ನಗಳು ಅರಬ್ ರಾಷ್ಟ್ರಗಳು, ಸಿಂಗಾಪುರ ಮತ್ತು ಅಮೆರಿಕದಂತಹ ದೇಶಗಳಿಗೂ ರಫ್ತಾಗುತ್ತಿವೆ. ಯುಗಾದಿ, ದೀಪಾವಳಿಯಂತಹ ಹಬ್ಬದ ಸಮಯದಲ್ಲಿ ಸಿಹಿ ತಿಂಡಿಗಳ ಮಾರಾಟವು ಗಣನೀಯವಾಗಿ ಏರಿಕೆಯಾಗಿ, ದಿನದ ವಹಿವಾಟು ಕೋಟ್ಯಂತರ ರೂಪಾಯಿಗಳಷ್ಟು ಹೆಚ್ಚಾಗುತ್ತದೆ. ಪ್ರಸ್ತುತ ಎದುರಾಗಿರುವ ಗ್ಯಾಸ್ ಅಭಾವವು ಇಂತಹ ಬೃಹತ್ ವಹಿವಾಟಿನ ಮೇಲೆ ನೇರ ಪರಿಣಾಮ ಬೀರುವ ಆತಂಕ ಎದುರಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
‘ಕೆಡಿ’ ಸಿನಿಮಾದ ‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡು ಚರ್ಚೆ ಹುಟ್ಟುಹಾಕಿದೆ. ನೋರಾ ಫತೇಹಿ (Nora Fatehi) ಕನ್ನಡದಲ್ಲಿ ಕಾಣಿಸಿಕೊಂಡ ಮೊದಲ ಹಾಡು ಇದು. ಈ ಹಾಡನ್ನು ನೋಡಿ ಅನೇಕರು ಅಪಸ್ವರ ಎತ್ತಿದ್ದಾರೆ. ಈ ಹಾಡನ್ನು ಈಗ ತಾತ್ಕಾಲಿಕವಾಗಿ ತೆಗೆದು ಹಾಕಲಾಗಿದ್ದು, ಹೊಸ ಸಾಹಿತ್ಯದ ಮೂಲಕ ಬರೋದಾಗಿ ಪ್ರೇಮ್ ಹೇಳಿದ್ದಾರೆ. ಈ ಮಧ್ಯೆ ಹಾಡಿನ ವಿಷಯದಲ್ಲಿ ನೋರಾ ಉಲ್ಟಾ ಹೊಡೆದಿದ್ದಾರೆ. ಇಷ್ಟು ಕೆಟ್ಟ ಸಾಹಿತ್ಯ ಇದೆ ಎಂದು ನನಗೆ ಗೊತ್ತಿರಲಿಲ್ಲ ಎಂದು ಅವರು ಹೇಳಿರುವುದು ಪ್ರೇಮ್ ಅಸಮಾಧಾನಕ್ಕೆ ಕಾರಣ ಆಗಿದೆ.
ವಿವಾದ ಭುಗಿಲೇಳುತ್ತಿದ್ದಂತೆ ನೋರಾ ಫತೇಹಿ ಅವರು ವಿವಾದದಿಂದ ದೂರ ಆಗಲು ಪ್ರಯತ್ನಿಸಿದ್ದರು. ‘ಮೂರು ವರ್ಷಗಳ ಹಿಂದೆಯೇ ಈ ಹಾಡು ಚಿತ್ರೀಕರಿಸಲಾಗಿತ್ತು. ಸಂಜಯ್ ದತ್ ಇರೋದ್ರಿಂದ ನಾನು ಸಿನಿಮಾ ಒಪ್ಪಿಕೊಂಡೆ. ಕನ್ನಡ ಭಾಷೆ ನನಗೆ ತಿಳಿಯಲ್ಲ. ಹೀಗಾಗಿ, ಹಾಡಿನ ಅರ್ಥವನ್ನು ತಂಡದವರ ಬಳಿ ಕೇಳಿ ತಿಳಿದುಕೊಂಡೆ’ ಎಂದು ನೋರಾ ಹೇಳಿದ್ದರು. ಹಿಂದಿ ಭಾಷೆಗೆ ಹೇಗೆ ತರ್ಜಮ್ಯ ಮಾಡಲಾಗಿದೆ ಎಂಬುದರ ಐಡಿಯಾ ಇರಲಿಲ್ಲ ಎಂದು ಅವರು ಹೇಳಿದ್ದಾರೆ. ಹಾಡು ಬಿಡುಗಡೆಗೆ ನನ್ನನ್ನು ಕರೆದಾಗ ನನ್ನ ಫೋಟೋಗಳನ್ನು ಬಳಸಿದ ರೀತಿ ಕಂಡು ನನಗೆ ಬೇಸರ ಆಯಿತು ಎಂದು ಅವರು ಹೇಳಿದ್ದಾರೆ.
ನೋರಾ ಹೇಳಿಕೆಗೆ ಪ್ರೇಮ್ ಉತ್ತರ ನೀಡಿದ್ದಾರೆ. ‘ನೋರಾ ಮಾತನಾಡಿದ್ದು ತಪ್ಪು. ಸಾಹಿತ್ಯ ಗೊತ್ತಿಲ್ಲದೆ ಭಾವನೆ ಬರಲ್ಲ. ಏಕೆ ಹಾಗೆ ಮಾತಾಡಿದ್ರೋ ಗೊತ್ತಿಲ್ಲ. ವಿವಾದಿಂದ ತಪ್ಪಿಸಿಕೊಳ್ಳಬೇಕು ಎಂದು ಹೀಗೆ ಹೇಳಿರಬಹುದು. ಪ್ರೇಮ್ ಜೊತೆ ಕೆಲಸ ಮಾಡಿದ್ದು ಖುಷಿ ಆಯ್ತು ಎಂದು ಸಾಂಗ್ ರಿಲೀಸ್ ಆದಾಗ ಹೇಳಿದ್ದರು. ನೊಂದ ಜೀವ ಚೆನ್ನಾಗಿರಲಿ’ ಎಂದು ಪ್ರೇಮ್ ಹೇಳಿದ್ದಾರೆ.