All posts by nagaraj11081993

ವಡೋದರಾದಲ್ಲಿ 4 ಕೋಟಿಗೂ ಅಧಿಕ ಮೌಲ್ಯದ ಅಕ್ರಮ ಆಲ್ಕೋಹಾಲ್ ಬಾಟಲಿಗಳ ಧ್ವಂಸ – Kannada News | Illegal liquor worth over Rs 4 crore was destroyed in Gujarat Vadodara

ವಡೋದರಾ, ಜೂನ್ 18: ಗುಜರಾತ್‌ನ ಕಠಿಣ ಮದ್ಯ ನಿಷೇಧ ಕಾಯ್ದೆಯಡಿ ವಡೋದರಾ ಪೊಲೀಸರು ಭಾರಿ ಕಾರ್ಯಾಚರಣೆ ನಡೆಸಿದ್ದಾರೆ. ವಡೋದರಾದ ಕೊಯಲಿ ಚೆಕ್‌ಪೋಸ್ಟ್ ಬಳಿ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ವಶಪಡಿಸಿಕೊಳ್ಳಲಾಗಿದ್ದ ಬರೋಬ್ಬರಿ 4 ಕೋಟಿ ರೂ.ಗೂ ಅಧಿಕ ಮೌಲ್ಯದ ಅಕ್ರಮ ಮದ್ಯ ಮತ್ತು ಬಿಯರ್ ಬಾಟಲಿಗಳನ್ನು ರೋಡ್ ರೋಲರ್ ಹಾಗೂ ಬುಲ್ಡೋಜರ್ ಹರಿಸುವ ಮೂಲಕ ಕಾನೂನುಬದ್ಧವಾಗಿ ಸಂಪೂರ್ಣವಾಗಿ ನಾಶಪಡಿಸಲಾಗಿದೆ. ಗುಜರಾತ್ ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇಧ ಜಾರಿಯಲ್ಲಿದ್ದು, ಅಕ್ರಮ ಮದ್ಯದ ದಂಧೆಯನ್ನು ಮಟ್ಟಹಾಕಲು ಕಾನೂನು ಜಾರಿ ಸಂಸ್ಥೆಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ವಡೋದರಾ ನಗರದಲ್ಲಿ ಕಳೆದ ಕೆಲವು ತಿಂಗಳುಗಳಲ್ಲಿ ಭಾರಿ ಪ್ರಮಾಣದ ಅಕ್ರಮ ಮದ್ಯವನ್ನು ಜಪ್ತಿ ಮಾಡಲಾಗಿತ್ತು. ಜಪ್ತಿಯಾದ ಸಾವಿರಾರು ಮದ್ಯದ ಬಾಟಲಿಗಳನ್ನು ಮೈದಾನದಲ್ಲಿ ಸಾಲಾಗಿ ಜೋಡಿಸಿ, ಅವುಗಳ ಮೇಲೆ ರೋಡ್ ರೋಲರ್‌ ಹಾಗೂ ಬುಲ್ಡೋಜರ್‌ಗಳನ್ನು ಹರಿಸುವ ಮೂಲಕ ಕ್ಷಣಮಾತ್ರದಲ್ಲಿ ಪುಡಿಪುಡಿ ಮಾಡಲಾಯಿತು.

(Video Source: PTI)

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿಜೆಪಿ ಶಾಸಕರೇ ಅವರ ವಿರುದ್ಧ ಇದ್ದಾರೆ ಎಂದ ಸುರ್ಜೇವಾಲಾ – Kannada News | BJP MLAs Are Against Him: Surjewala saprks R. Ashok and B.Y. Vijayendra

ಬೆಂಗಳೂರು, ಜೂನ್​ 18: ಕರ್ನಾಟಕ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ. ಪಕ್ಷದ ಐದೂ ಅಭ್ಯರ್ಥಿಗಳು ಮೊದಲ ಸುತ್ತಿನಲ್ಲೇ ಭಾರಿ ಬಹುಮತದಿಂದ ಜಯಗಳಿಸಿದ್ದಾರೆ. ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲಾ ಮಾತನಾಡಿ, 135 ಮತಗಳನ್ನು ನಿರೀಕ್ಷಿಸಲಾಗಿದ್ದರೂ, ಪಕ್ಷಕ್ಕೆ 151 ಮತಗಳು ದೊರೆತಿವೆ ಎಂದು ತಿಳಿಸಿದರು. ಈ ಗೆಲುವಿಗೆ ಕರ್ನಾಟಕದ ಶಾಸಕರ ಪಕ್ಷ ನಿಷ್ಠೆ ಹಾಗೂ ಕಾಂಗ್ರೆಸ್‌ನ ಐದು ಗ್ಯಾರಂಟಿ ಯೋಜನೆಗಳ ಸಕಾರಾತ್ಮಕ ಪರಿಣಾಮವೇ ಕಾರಣ ಎಂದಿದ್ದಾರೆ. ಬಿಜೆಪಿ 64 ಮತಗಳಲ್ಲಿ 7 ಮತಗಳ ಕೊರತೆ ಕಂಡಿದ್ದರೆ, ಜೆಡಿಎಸ್‌ಗೆ 18ರಲ್ಲಿ 14 ಮತಗಳು ಮಾತ್ರ ಸಿಕ್ಕಿವೆ. ಐದು ಗ್ಯಾರಂಟಿಗಳು ಕರ್ನಾಟಕದ ಜನರ ಜೀವನವನ್ನು ಬದಲಾಯಿಸಿವೆ. ಬಿಜೆಪಿ ಮತ್ತು ಜೆಡಿಎಸ್‌ನ ನಕಾರಾತ್ಮಕ ರಾಜನೀತಿಯನ್ನು ಶಾಸಕರೇ ತಿರಸ್ಕರಿಸಿದ್ದಾರೆ ಎಂದರು. ಇದು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನೇತೃತ್ವದ ಅಭಿವೃದ್ಧಿಯ ಹಾದಿಗೆ ಸಿಕ್ಕ ಸಕಾರಾತ್ಮಕ ಮತ ಎಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಐಎಎಸ್ ಅಧಿಕಾರಿಗಳ ಭರ್ಜರಿ ವರ್ಗಾವಣೆ: ಹಲವು ಇಲಾಖೆಗಳಿಗೆ ಹೊಸ ಅಧಿಕಾರಿಗಳ ನೇಮಕ – Kannada News | Major Bureaucratic Reshuffle in Karnataka: Several Top IAS Officers Transferred to Key Departments

ಬೆಂಗಳೂರು, ಜೂನ್​​ 18: ರಾಜ್ಯ ಸರ್ಕಾರ ಮಹತ್ವದ ಆಡಳಿತಾತ್ಮಕ ಬದಲಾವಣೆಗಳನ್ನು ಮಾಡಿದ್ದು, ಹಲವು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಆಯುಕ್ತ ಮನಿವಣ್ಣನ್ ಪಿ. ಅವರಿಗೆ, ಬೆಂಗಳೂರು ನಗರ ಭೂ ಸಾರಿಗೆ ನಿರ್ದೇಶನಾಲಯದ (DULT) ಆಯುಕ್ತರ ಹುದ್ದೆಯ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ. ನವದೆಹಲಿಯ ಕರ್ನಾಟಕ ಭವನದಲ್ಲಿ ರೆಸಿಡೆಂಟ್ ಕಮಿಷನರ್ ಹುದ್ದೆಯಿಂದ ಇಂಕೊಂಗ್ಲಾ ಜಮೀರ್ ಎಂ. ಅವರನ್ನು ವರ್ಗಾವಣೆ ಮಾಡಲಾಗಿದ್ದು, ಕರ್ನಾಟಕ ಭವನದ ಸಮನ್ವಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.

ಡಾ. ಪ್ರಸಾದ್ ಎನ್.ವಿ. ಅವರನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಸಮೀರ್ ಶುಕ್ಲಾ ಅವರನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿ ಹುದ್ದೆಯಿಂದ ವರ್ಗಾವಣೆ ಮಾಡಿ, ನವದೆಹಲಿಯ ಕರ್ನಾಟಕ ಭವನದಲ್ಲಿ ರೆಸಿಡೆಂಟ್ ಕಮಿಷನರ್ ಆಗಿ ನೇಮಿಸಲಾಗಿದೆ. ತುಳಸಿ ಮದ್ದಿನೇನಿ ಅವರನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿದೆ.

ಇದನ್ನೂ ಓದಿ: ಸರ್ಕಾರಿ ನೌಕರರ 2026-27ನೇ ಸಾಲಿನ ವರ್ಗಾವಣೆ ಮಾರ್ಗಸೂಚಿ ಪ್ರಕಟ

ಮಾಡಲಾಗಿದ್ದು, ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿ ಹುದ್ದೆಯ ಹೆಚ್ಚುವರಿ ಜವಾಬ್ದಾರಿಯನ್ನೂ ನೀಡಲಾಗಿದೆ. ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಯಿಂದ ಶಿವಕುಮಾರ್ ಕೆ.ಬಿ. ವರ್ಗಾವಣೆಯಾಗಿದ್ದು, ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರಾಗಿ ಅವರು ನೇಮಕಗೊಂಡಿದ್ದಾರೆ. ಡಾ. ರಾಮ ಪ್ರಸಾತ್ ಮನೋಹರ್ ವಿ. ಅವರಿಗೆ ಪ್ರವಾಸೋದ್ಯಮ ಆಯುಕ್ತರ ಹುದ್ದೆಯ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ.

ಡಾ. ಸತೀಶ ಬಿ.ಸಿ. ವರನ್ನು ಕೃಷಿ ಇಲಾಖೆಯ ಆಯುಕ್ತರಾಗಿ ನೇಮಕ ಮಾಡಲಾಗಿದ್ದು, ಅಕ್ರಮ್ ಪಾಶಾ ಅವರನ್ನು ರಾಷ್ಟ್ರೀಯ ಆರೋಗ್ಯ ಅಭಿಯಾನ (NHM) ಹಾಗೂ ಆರೋಗ್ಯ ನಿರ್ದೇಶನಾಲಯದ ಮಿಷನ್ ನಿರ್ದೇಶಕರಾಗಿ ನೇಮಿಸಲಾಗಿದೆ. ರಘುನಂದನ್ ಮೂರ್ತಿ ಅವರನ್ನು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕ ಮಾಡಲಾಗಿದ್ದು, ಖಜಾನೆ ಇಲಾಖೆಯ ಆಯುಕ್ತ ಹುದ್ದೆಯ ಹೆಚ್ಚುವರಿ ಜವಾಬ್ದಾರಿಯನ್ನೂ ಇವರು ಮುಂದುವರಿಸಲಿದ್ದಾರೆ.

ನಿತೀಶ್ ಕೆ. ಅವರನ್ನು ನಗರಪಾಲಿಕೆ ಆಡಳಿತ ನಿರ್ದೇಶಕರಾಗಿ, ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರನ್ನು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (MSME) ನಿರ್ದೇಶಕರಾಗಿ ನೇಮಕ ಮಾಡಲಾಗಿದೆ. ಗಜಾನನ ಬಾಳೆ ಅವರನ್ನು ಬಾಗಲಕೋಟೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (CEO) ನೇಮಿಸಲಾಗಿದ್ದು, ಜೊತೆಗೆ ಕೃಷ್ಣಾ ಮೇಲ್ದಂಡೆ ಯೋಜನೆಯ ಪುನರ್ವಸತಿ ಮತ್ತು ಭೂಸ್ವಾಧೀನ ವಿಭಾಗದ ಮಹಾಪ್ರಬಂಧಕರ ಹುದ್ದೆಯ ಹೆಚ್ಚುವರಿ ಜವಾಬ್ದಾರಿಯನ್ನೂ ಇವರಿಗೆ ವಹಿಸಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಪ್ರತಿದಿನ ಕೇವಲ 2 ಲವಂಗ ತಿಂದು ನೋಡಿ! ನಿಮಗೆ ಈ ಆರೋಗ್ಯ ಸಮಸ್ಯೆಯೇ ಬರಲ್ಲ – Kannada News | Why You Should Add Cloves To Your Daily Routine

ಅಡುಗೆ ಮನೆಯಲ್ಲಿ ಸುಲಭವಾಗಿ ಸಿಗುವ ಮಸಾಲೆ ಪದಾರ್ಥಗಳಲ್ಲಿ ಲವಂಗವೂ (Cloves) ಒಂದು. ಆಹಾರಕ್ಕೆ ರುಚಿ ಮತ್ತು ಸುವಾಸನೆ ನೀಡುವುದಷ್ಟೇ ಅಲ್ಲ, ಆರೋಗ್ಯಕ್ಕೂ ಅನೇಕ ರೀತಿಯಲ್ಲಿ ಸಹಕಾರಿಯಾಗಿದೆ. ಲವಂಗದಲ್ಲಿರುವ ಯೂಜಿನಾಲ್ (Eugenol), ಆಂಟಿಆಕ್ಸಿಡೆಂಟ್‌ಗಳು ಮತ್ತು ಪೋಷಕಾಂಶಗಳು ದೇಹವನ್ನು ಹಲವು ಕಾಯಿಲೆಗಳಿಂದ ರಕ್ಷಿಸಲು ಸಹಾಯ ಮಾಡುತ್ತವೆ. ಪ್ರತಿದಿನ 1 ಅಥವಾ 2 ಲವಂಗಗಳನ್ನು ಸೇವಿಸುವುದರಿಂದ ನಾವು ಊಹಿಸಲು ಸಾಧ್ಯವಾಗದಷ್ಟು ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಹೌದು, ಕೇವಲ ಲವಂಗ ತಿನ್ನುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು. ಹಾಗಾದರೆ ಇದರ ಸೇವನೆಯಿಂದ ಸಿಗುವ ಪ್ರಯೋಜನಗಳೇನು ತಿಳಿದುಕೊಳ್ಳಿ.

ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ

ಲವಂಗದಲ್ಲಿ ವಿಟಮಿನ್ ಸಿ ಮತ್ತು ಶಕ್ತಿಶಾಲಿ ಆಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿವೆ. ಇವು ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸಿ, ಸೋಂಕುಗಳು ಮತ್ತು ಋತುಮಾನದ ಕಾಯಿಲೆಗಳ ವಿರುದ್ಧ ಹೋರಾಡಲು ನೆರವಾಗುತ್ತವೆ.

ಬಾಯಿ ಮತ್ತು ಹಲ್ಲಿನ ಆರೋಗ್ಯಕ್ಕೆ ಉತ್ತಮ

ಲವಂಗದಲ್ಲಿ ನೈಸರ್ಗಿಕ ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿಫಂಗಲ್ ಗುಣಗಳಿವೆ. ಲವಂಗವನ್ನು ಜಗಿಯುವುದರಿಂದ ಬಾಯಿಯ ದುರ್ವಾಸನೆ ಕಡಿಮೆಯಾಗುತ್ತದೆ. ಜೊತೆಗೆ ಹಲ್ಲಿನ ನೋವು, ಒಸಡುಗಳ ಉರಿಯೂತ ಮತ್ತು ಬಾಯಿಯಲ್ಲಿನ ಬ್ಯಾಕ್ಟೀರಿಯಾಗಳನ್ನು ನಿಯಂತ್ರಿಸಲು ಸಹಕಾರಿಯಾಗುತ್ತದೆ.

ಜೀರ್ಣಕ್ರಿಯೆ ಸುಧಾರಿಸುತ್ತದೆ

ಗ್ಯಾಸ್ಟ್ರಿಕ್, ಅಜೀರ್ಣ, ಹೊಟ್ಟೆ ಉಬ್ಬರ ಮತ್ತು ಮಲಬದ್ಧತೆ ಸಮಸ್ಯೆಗಳಿಂದ ಬಳಲುವವರಿಗೆ ಲವಂಗ ಉತ್ತಮ ನೆರವು ನೀಡುತ್ತದೆ. ಇದು ಜೀರ್ಣರಸಗಳ ಉತ್ಪಾದನೆಯನ್ನು ಉತ್ತೇಜಿಸಿ ಆಹಾರ ಸುಲಭವಾಗಿ ಜೀರ್ಣವಾಗಲು ಸಹಾಯ ಮಾಡುತ್ತದೆ.

ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ನೆರವಾಗುತ್ತದೆ

ಕೆಲವು ಅಧ್ಯಯನಗಳ ಪ್ರಕಾರ, ಲವಂಗದಲ್ಲಿರುವ ಯೂಜಿನಾಲ್ ಮತ್ತು ಫ್ಲೇವನಾಯ್ಡ್‌ಗಳು ಇನ್ಸುಲಿನ್ ಕಾರ್ಯಕ್ಷಮತೆಯನ್ನು ಸುಧಾರಿಸಲು ಸಹಾಯ ಮಾಡಬಹುದು. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿಡಲು ನೆರವಾಗುತ್ತದೆ.

ಇದನ್ನೂ ಓದಿ: ರಾತ್ರಿ ಮಲಗುವ ಮುನ್ನ ಒಂದು ಲವಂಗ ಸೇವನೆ ಮಾಡಿದ್ರೆ ಏನಾಗುತ್ತೆ ನೋಡಿ!

ಹೃದಯ ಮತ್ತು ಯಕೃತ್ತಿನ ಆರೋಗ್ಯಕ್ಕೆ ಸಹಕಾರಿ

ಲವಂಗದಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಜೊತೆಗೆ ಯಕೃತ್ತಿನಲ್ಲಿ ಸಂಗ್ರಹವಾಗುವ ಹಾನಿಕಾರಕ ವಿಷಪದಾರ್ಥಗಳನ್ನು ಹೊರಹಾಕುವಲ್ಲಿ ಸಹಕಾರಿಯಾಗಿದೆ.

ಹೇಗೆ ಸೇವಿಸಬಹುದು?

ಪ್ರತಿದಿನ ಬೆಳಿಗ್ಗೆ ಅಥವಾ ಸಂಜೆ 1– 2 ಲವಂಗಗಳನ್ನು ಜಗಿಯಬಹುದು. ಅಥವಾ ಲವಂಗವನ್ನು ನೀರಿನಲ್ಲಿ ಕುದಿಸಿ ಲವಂಗದ ನೀರನ್ನು ಕುಡಿಯಬಹುದು. ಲವಂಗ ಆರೋಗ್ಯಕ್ಕೆ ಪ್ರಯೋಜನಕಾರಿಯಾದರೂ, ಅತಿಯಾಗಿ ಸೇವಿಸುವುದು ಸೂಕ್ತವಲ್ಲ. ಯಾವುದೇ ಆರೋಗ್ಯ ಸಮಸ್ಯೆ ಇದ್ದರೆ ವೈದ್ಯರ ಸಲಹೆಯೊಂದಿಗೆ ಸೇವಿಸುವುದು ಉತ್ತಮ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜೈಲಿನಲ್ಲಿ ಪವಿತ್ರಾ ಗೌಡಗೆ ಕೆಲಸ ಮಾಡಿಕೊಡಲು ಆಳುಗಳು ಇದ್ದಾರೆ: ಸಂಧ್ಯಾ ನಾಗರಾಜ್ ಆರೋಪ – Kannada News | Sandhya Nagaraj alleges Pavitra Gowda getting special treatment in Parappana Agrahara Jail

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯಾದ ನಟ ದರ್ಶನ್ ಅವರಿಗೆ ಜೈಲಿನಲ್ಲಿ ರಾಜಾಥಿತ್ಯ ನೀಡಿದ್ದು ಈ ಮೊದಲು ಭಾರಿ ವಿವಾದಕ್ಕೆ ಕಾರಣ ಆಗಿತ್ತು. ಈಗ ಮತ್ತೋರ್ವ ಆರೋಪಿ ಪವಿತ್ರಾ ಗೌಡ (Pavitra Gowda) ಅವರಿಗೂ ಕೂಡ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಶೇಷ ಸವಲತ್ತುಗಳನ್ನು ನೀಡಲಾಗುತ್ತಿದೆ ಎಂದು ಈ ಹಿಂದೆ ವಿಚಾರಣಾಧೀನ ಕೈದಿ ಆಗಿದ್ದ ಸಂಧ್ಯಾ ನಾಗರಾಜ್ ಅವರು ಆರೋಪ ಮಾಡಿದ್ದಾರೆ. ಆದರೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಸಂಧ್ಯಾ ನಾಗರಾಜ್ ವಿರುದ್ಧವೇ ಪವಿತ್ರಾ ಗೌಡ ಅವರು ದೂರು ನೀಡಿದ್ದಾರೆ. ಈ ಬಗ್ಗೆ ಸಂಧ್ಯಾ ಅವರು ಟಿವಿ9ಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ಪವಿತ್ರಾ ಗೌಡ ಅವರನ್ನು ಇನ್ನುಳಿದ ಆರೋಪಿಗಳ ರೀತಿ ನಡೆಸಿಕೊಳ್ಳುತ್ತಿಲ್ಲ. ಪವಿತ್ರಾ ಗೌಡಗೆ ಕೆಲಸ ಮಾಡಿಕೊಡಲು 3 ಜನ ಆಳುಗಳು ಇದ್ದಾರೆ. ಜೈಲಿನ ಒಳಗೆ ಕರೆದುಕೊಂಡು ಹೋದರೆ ಅವರು ಯಾರು ಅಂತ ನಾನು ತೋರಿಸುತ್ತೇನೆ. ಅವರಿಗೆ ಸಂಬಳ ಕೊಟ್ಟಿದ್ದರ ಬಗ್ಗೆ ಮಾತನಾಡಿದ್ದು ನನ್ನ ಕಿವಿಗೆ ಬಿದ್ದಿದೆ. ಸುಮ್ಮನೆ ಆರೋಪ ಮಾಡೋಕೆ ನಾನು ಪವಿತ್ರಾ ಗೌಡಗೆ ಶತ್ರು ಅಲ್ಲ. ಜೈಲು ಸಿಬ್ಬಂದಿಗೆ ಬರುವ ಊಟವನ್ನು ಪವಿತ್ರಾಗೆ ಕೊಡುತ್ತಾರೆ’ ಎಂದು ಸಂಧ್ಯಾ ನಾಗರಾಜ್ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಳಗ್ಗೆ ಬೇಗ ಏಳುವುದರಿಂದ ನೀವು ಈ ಎಲ್ಲಾ ಪ್ರಯೋಜನಗಳನ್ನು ಪಡೆಯಬಹುದು – Kannada News | What are the benefits of waking up early in the morning?

ಸೂರ್ಯ ನೆತ್ತಿಗೆ ಬರುವವರೆಗೂ ಮಲಗಿರಬಾರದು, ಬೆಳಗ್ಗೆ ಬೇಗನೆ (early morning) ಎದ್ದು ನಿತ್ಯ ಕರ್ಮಗಳನ್ನೆಲ್ಲಾ ಮುಗಿಸಬೇಕು ಎಂದು ಹಿರಿಯರು ಹೇಳುವ ಮಾತನ್ನು ನೀವು ಸಹ ಕೇಳಿರಬಹುದಲ್ವಾ. ಆದರೆ ಇಂದಿನ ದಿನಗಳಲ್ಲಿ ಅನೇಕರು ತಡವಾಗಿ ಮಲಗಿ ಬೆಳಗ್ಗೆ ತಡವಾಗಿ ಏಳುತ್ತಾರೆ. ಈ ಅಭ್ಯಾಸವು ಜಡತ್ವ ಮಾತ್ರವಲ್ಲದೆ ಅನೇಕ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಹೀಗಿರುವಾಗ ಜೀವನಶೈಲಿಯಲ್ಲಿ ಕೊಂಚ ಬದಲಾವಣೆಯನ್ನು ಮಾಡಿ, ರಾತ್ರಿ ಬೇಗನೇ ಮಲಗಿ ಮುಂಜಾನೇ ಬೇಗನೆ ಏಳುವ ಮೂಲಕ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಈ ಅಭ್ಯಾಸ ನಿಮ್ಮ ನಿತ್ಯ ಕೆಲಸಗಳನ್ನು ಬೇಗ ಮಾಡಿ ಮುಗಿಸಲು ಸಹಾಯ ಮಾಡುವುದಲ್ಲದೆ ನಿಮ್ಮ ದೇಹ ಮತ್ತು ಮನಸ್ಸಿಗೂ ಸಾಕಷ್ಟು ಪ್ರಯೋಜನಗಳನ್ನು ಒದಗಿಸುತ್ತವೆ. ಈ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಬೆಳಗ್ಗೆ ಬೇಗ ಏಳುವುದರಿಂದ ಲಭಿಸುವ ಪ್ರಯೋಜನಗಳೇನು?

 ಒತ್ತಡ ದೂರವಾಗುತ್ತದೆ: ಬೆಳಿಗ್ಗೆ ತಡವಾಗಿ ಏಳುವುದರಿಂದ ಪ್ರತಿಯೊಂದು ಕೆಲಸವೂ ವಿಳಂಬವಾಗುತ್ತದೆ. ಬೆಳಿಗ್ಗೆಯಿಂದಲೇ ಆತುರ ಪ್ರಾರಂಭವಾಗುತ್ತದೆ. ಇದು ಮನಸ್ಸಿನ ಮೇಲೆ ಒತ್ತಡವನ್ನುಂಟುಮಾಡುತ್ತವೆ, ಇದು ಒತ್ತಡವನ್ನು ಹೆಚ್ಚಿಸುತ್ತದೆ. ನೀವು ಬೇಗನೆ ಎದ್ದರೆ, ನಿಮ್ಮ ಎಲ್ಲಾ ಕೆಲಸಗಳನ್ನು ಸಮಯಕ್ಕೆ ಮತ್ತು ಆರಾಮವಾಗಿ ಪೂರ್ಣಗೊಳಿಸಬಹುದು. ಬೇಗನೆ ಏಳುವುದು ನಿಮ್ಮ ಮನಸ್ಸು ತಾಜಾವಾಗಿರುತ್ತದೆ ಮತ್ತು ಹಾರ್ಮೋನುಗಳು ನಿಯಂತ್ರಣದಲ್ಲಿರುತ್ತವೆ.

ಬೊಜ್ಜಿನ ಸಮಸ್ಯೆಯನ್ನು ದೂರ ಮಾಡಬಹುದು: ಬೆಳಿಗ್ಗೆ ಬೇಗನೆ ಏಳುವುದರ ಒಂದು ಪ್ರಯೋಜನವೆಂದರೆ ನಿಮಗೆ ವ್ಯಾಯಾಮಕ್ಕೆ ಸಾಕಷ್ಟು ಸಮಯ ಸಿಗುತ್ತದೆ. ಬೆಳಿಗ್ಗೆ ವ್ಯಾಯಾಮ ಮಾಡುವುದರಿಂದ ದಿನವಿಡೀ ಶಕ್ತಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಬೆಳಗಿನ ವ್ಯಾಯಾಮವು ತ್ವರಿತ ತೂಕ ನಷ್ಟಕ್ಕೂ ಸಹಾಯ ಮಾಡುತ್ತದೆ. ಅಲ್ಲದೆ ವ್ಯಾಯಾಮದ ಮೂಲಕ ಹೃದಯದ ಆರೋಗ್ಯವನ್ನೂ ಸುಧಾರಿಸಬಹುದು.

ಶ್ವಾಸಕೋಶವನ್ನು ಬಲಪಡಿಸುತ್ತದೆ: ಬೆಳಗಿನ ತಾಜಾ ಗಾಳಿಯನ್ನು ಉಸಿರಾಡುವುದರಿಂದ ಶ್ವಾಸಕೋಶಗಳು ಆರೋಗ್ಯವಾಗಿರುತ್ತವೆ. ನಿಮ್ಮ ಶ್ವಾಸಕೋಶವನ್ನು ಸದೃಢವಾಗಿಡಲು, ಬೆಳಿಗ್ಗಿನ ಹೊತ್ತು ಸ್ವಚ್ಛ ಪರಿಸರದಲ್ಲಿ ವ್ಯಾಯಾಮ ಮಾಡಿ. ಬೆಳಗ್ಗೆ ಬೇಗ ಎದ್ದು ನಂತರ, ಉದ್ಯಾನವನ ಅಥವಾ ಶಾಂತಿಯುತ ಸ್ಥಳಕ್ಕೆ ಹೋಗಿ ಆಳವಾದ, ದೀರ್ಘ ಉಸಿರನ್ನು ತೆಗೆದುಕೊಳ್ಳಿ. ಇದು ನಿಮ್ಮ ಶ್ವಾಸಕೋಶಕ್ಕೆ ತಾಜಾ ಗಾಳಿಯನ್ನು ಒದಗಿಸುತ್ತವೆ.

ಇದನ್ನೂ ಓದಿ: ಸಂತೋಷದಿಂದ ಜೀವನ ನಡೆಸಲು ನೀವು ಮಾಡಬೇಕಾದದ್ದು ಇಷ್ಟೆ

ನಿದ್ರೆಯನ್ನು ಸುಧಾರಿಸುತ್ತದೆ: ಬೆಳಿಗ್ಗೆ ಬೇಗನೆ ಎದ್ದೇಳುವ ಜನರು ಇತರರಿಗಿಂತ ಚೆನ್ನಾಗಿ ನಿದ್ರಿಸುತ್ತಾರೆ. ಅವರು ರಾತ್ರಿ ಬೇಗನೆ ನಿದ್ರಿಸುತ್ತಾರೆ. ಇದರಿಂದ ಅವರ ನಿದ್ರೆಯೂ ಉತ್ತಮವಾಗಿರುತ್ತದೆ ಮತ್ತು ಒಟ್ಟಾರೆ ಆರೋಗ್ಯವೂ ತುಂಬಾನೇ ಚೆನ್ನಾಗಿರುತ್ತದೆ.

ಸಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ: ಜೀವನದ ಗಡಿಬಿಡಿ ಆರಂಭವಾಗುವ ಮೊದಲೇ ನೀವು ಬೆಳಿಗ್ಗೆ ಬೇಗನೆ ಎದ್ದರೆ, ಶಾಂತಿಯುತವಾಗಿ ಸಮಯ ಕಳೆಯಲು ಸ್ವಲ್ಪ ಸಮಯ ಸಿಗುತ್ತದೆ. ಶಾಂತಿಯುತವಾಗಿ ಸಮಯ ಕಳೆಯುವುದರಿಂದ ಮೆದುಳಿನಲ್ಲಿ ಆಮ್ಲಜನಕದ ಮಟ್ಟ ಹೆಚ್ಚಾಗುತ್ತದೆ, ರಕ್ತದೊತ್ತಡ ಕಡಿಮೆಯಾಗುತ್ತದೆ ಮತ್ತು ಇದು ಮಾನಸಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ ‘ಧುರಂಧರ್ 2’: ಅನ್‌ಕಟ್ ಜಾಗತಿಕ ವರ್ಷನ್‌ನಲ್ಲಿ ಏನೆಲ್ಲಾ ಇರಲಿದೆ? – Kannada News | Ranveer Singh Dhurandhar 2 Uncut International Version OTT Release on Netflix India

ಬಾಕ್ಸ್ ಆಫೀಸ್‌ನಲ್ಲಿ ಸಾವಿರಾರು ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ಇತಿಹಾಸ ಸೃಷ್ಟಿಸಿರುವ ರಣವೀರ್ ಸಿಂಗ್ (Ranveer Singh) ಹಾಗೂ ಆದಿತ್ಯ ಧರ್ ಕಾಂಬಿನೇಷನ್‌ನ ಸೂಪರ್ ಹಿಟ್ ಆ್ಯಕ್ಷನ್ ಸ್ಲೈ ಥ್ರಿಲ್ಲರ್ ‘ಧುರಂಧರ್: ದಿ ರಿವೆಂಜ್’ (Dhurandhar 2) ಇದೀಗ ಒಟಿಟಿ ಪ್ರೇಕ್ಷಕರನ್ನು ಮತ್ತೊಮ್ಮೆ ರಂಜಿಸಲು ಸಜ್ಜಾಗಿದೆ. ಜೂನ್ 19ರಿಂದ ಈ ಚಿತ್ರದ ಬಹುನಿರೀಕ್ಷಿತ ‘ಅನ್‌ಕಟ್ ಇಂಟರ್ನ್ಯಾಷನಲ್ ವರ್ಷನ್’ (Uncut International Version) ನೆಟ್‌ಫ್ಲಿಕ್ಸ್ ಒಟಿಟಿ ಮೂಲಕ ಪ್ರಸಾರ ಆಗಲಿದೆ.

ಕೆಲವೇ ವಾರಗಳ ಹಿಂದೆಯಷ್ಟೇ (ಜೂನ್ 4) ಈ ಸಿನಿಮಾ ‘ಜಿಯೋಹಾಟ್‌ಸ್ಟಾರ್’ ಮೂಲಕ ಡಿಜಿಟಲ್ ಪ್ರೀಮಿಯರ್ ಆಗಿತ್ತು. ಆದರೆ ಆ ಸಮಯದಲ್ಲಿ ಲೈವ್ ಬ್ರಾಡ್‌ಕಾಸ್ಟ್ ಫಾರ್ಮ್ಯಾಟ್ ಮತ್ತು ಕಳಪೆ ವಿಡಿಯೋ-ಆಡಿಯೋ ಕ್ವಾಲಿಟಿಯಿಂದಾಗಿ ನೆಟ್ಟಿಗರು ತೀವ್ರ ಅಸಮಾಧಾನ ಹೊರಹಾಕಿದ್ದರು. ಆದರೆ ಈಗ ನೆಟ್‌ಫ್ಲಿಕ್ಸ್ ಮೂಲಕ ಯಾವುದೇ ಕಟ್‌ಗಳಿಲ್ಲದ, ಸಂಪೂರ್ಣ ಅನ್‌ಸೆನ್ಸಾರ್ಡ್ ವರ್ಷನ್ ನೋಡುವ ಅವಕಾಶ ಪ್ರೇಕ್ಷಕರಿಗೆ ಸಿಗುತ್ತಿದೆ.

ಒಟಿಟಿಯಲ್ಲಿ ಈ ಸಿನಿಮಾ ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಲಭ್ಯವಿರಲಿದೆ. ಚಿತ್ರಮಂದಿರಗಳಲ್ಲಿ ಹಾಗೂ ಜಿಯೋಹಾಟ್‌ಸ್ಟಾರ್‌ನ ‘ರಾ ಆ್ಯಂಡ್ ಅನ್​ದೇಖಾ’ ವರ್ಷನ್‌ನಲ್ಲಿ ಸೆನ್ಸಾರ್ ಆಗಿದ್ದ ಹಲವು ರೋಚಕ ಸನ್ನಿವೇಶಗಳು ಈಗ ನೆಟ್‌ಫ್ಲಿಕ್ಸ್ ಇಂಟರ್ನ್ಯಾಷನಲ್ ಕಟ್‌ನಲ್ಲಿ ಮರಳಿ ಬರಲಿವೆ. ಆದ್ದರಿಂದ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಚಿತ್ರಮಂದಿರಗಳಲ್ಲಿ ಮ್ಯೂಟ್ ಮಾಡಲಾಗಿದ್ದ ಪದಗಳನ್ನು ಈ ವರ್ಷನ್‌ನಲ್ಲಿ ಯಾವುದೇ ಸೆನ್ಸಾರ್ ಇಲ್ಲದೆ ಹಾಗೇ ಉಳಿಸಿಕೊಳ್ಳಲಾಗಿದೆ. ಅಂತಾರಾಷ್ಟ್ರೀಯ ವರ್ಷನ್‌ನಲ್ಲಿ ಆ್ಯಕ್ಷನ್ ಸೀನ್‌ಗಳು ಹೆಚ್ಚು ಕ್ರೂರವಾಗಿರಲಿವೆ. ಸುತ್ತಿಗೆ ಫೈಟ್ ಹಾಗೂ ಕ್ಲೈಮ್ಯಾಕ್ಸ್‌ನ ಸಿಮೆಂಟ್ ಬ್ಲಾಕ್ ಫೈಟ್ ಸೀನ್‌ಗಳು ಥಿಯೇಟರ್‌ಗಿಂತಲೂ ಹೆಚ್ಚು ದೀರ್ಘವಾಗಿರಲಿವೆ. ಈ ರೀತಿಯ ಹಲವು ಅಚ್ಚರಿಗಳು ಪ್ರೇಕ್ಷಕರಿಗೆ ಸಿಗಲಿವೆ.

ಇದನ್ನೂ ಓದಿ: ‘ಪ್ರಧಾನಿ ಕಚೇರಿಯವರು ಹೀಗೆಲ್ಲ ಬರೆಯಲು ಸಾಧ್ಯವೇ’; ‘ಧುರಂಧರ್ 2’ ನಟನ ನೇರ ಪ್ರಶ್ನೆ

ಆದಿತ್ಯ ಧರ್ ನಿರ್ದೇಶನದ ಈ ಚಿತ್ರದಲ್ಲಿ ರಣವೀರ್ ಸಿಂಗ್ ಜೊತೆಗೆ ಸಂಜಯ್ ದತ್, ಅರ್ಜುನ್ ರಾಮ್​ಪಾಲ್, ಆರ್. ಮಾಧವನ್ ಮತ್ತು ಸಾರಾ ಅರ್ಜುನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ದೇಶೀಯ ಮಾರುಕಟ್ಟೆಯಲ್ಲಿ 1,000 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿದ ಮೂರನೇ ಸಿನಿಮಾ ಎಂಬ ಹೆಗ್ಗಳಿಕೆಗೆ ಈ ಚಿತ್ರ ಪಾತ್ರವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬಾಗೇಶ್ವರ್ ಧಾಮ್​ಗೆ ತೆರಳಿದ್ದ ಭಕ್ತನಿಗೆ ಹೃದಯಾಘಾತ; ಕೊನೆಯಾಸೆ ಈಡೇರಿತೆಂದು ಕಣ್ಣೀರಿಟ್ಟ ಮಗಳು – Kannada News | 63 Year Old Mumbai Devotee Dies Of Heart Attack in Bageshwar Dham national news in kannada

ಮುಂಬೈ, ಜೂನ್ 18: ಮಧ್ಯಪ್ರದೇಶದ ಛತ್ತರ್‌ಪುರದ ಬಾಗೇಶ್ವರ್ ಧಾಮ್‌ನಲ್ಲಿ ಪ್ರಾರ್ಥನೆ ಸಲ್ಲಿಸಲು ತೆರಳಿದ್ದಾಗ ತೀವ್ರ ಹೃದಯಾಘಾತದಿಂದ (Heart Attack) ಕೊನೆಯುಸಿರೆಳೆದಿದ್ದಾರೆ. ಸದಾ ಬಾಗೇಶ್ವರ್ ಧಾಮ್‌ನಲ್ಲೇ ಇರಲು ಬಯಸುತ್ತಿದ್ದ ಅವರ ಭಕ್ತಿಯನ್ನು ಗೌರವಿಸಿ, ಮುಂಬೈನಿಂದ ಬಂದ ಕುಟುಂಬಸ್ಥರು ಛತ್ತರ್‌ಪುರದಲ್ಲೇ ಅವರ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಮೃತರನ್ನು ಮುಂಬೈನ ಐರೋಲಿ ನಿವಾಸಿ 63 ವರ್ಷದ ಸತೀಶ್ ಕಾಮದ್ ಎಂದು ಗುರುತಿಸಲಾಗಿದೆ. ಬಾಗೇಶ್ವರ್ ಧಾಮ್‌ನ ಪರಮ ಭಕ್ತರಾಗಿದ್ದ ಸತೀಶ್ ಜೂನ್ 1ರಂದು ಧಾಮ್‌ಗೆ ಆಗಮಿಸಿ, ದೇವಾಲಯದ ಸಮೀಪವಿರುವ ಲಾಡ್ಜ್‌ವೊಂದರಲ್ಲಿ ತಂಗಿದ್ದರು. ಅವರು ಆಗಾಗ ಇಲ್ಲಿಗೆ ಭೇಟಿ ನೀಡುತ್ತಿದ್ದರು.

ಜೂನ್ 15ರ ಸಂಜೆ ಸತೀಶ್ ಅವರು ದೇವಾಲಯದ ಆವರಣದಲ್ಲಿರುವ ‘ರಾಮ್ ದರ್ಬಾರ್’ನಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾಗ ಅವರಿಗೆ ಇದ್ದಕ್ಕಿದ್ದಂತೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ತಕ್ಷಣವೇ ಅವರು ತೀವ್ರ ಹೃದಯಾಘಾತಕ್ಕೆ ಒಳಗಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಂದು ರಾತ್ರಿ ಅವರು ಉಳಿದುಕೊಂಡಿದ್ದ ಲಾಡ್ಜ್‌ಗೆ ಹಿಂತಿರುಗಿದಾಗ ಪಕ್ಕದ ರೂಂನಲ್ಲಿದ್ದ ಕೆಲವು ಯುವತಿಯರು ಅವರು ಕಾಣೆಯಾಗಿರುವ ಬಗ್ಗೆ ಮುಂಬೈನಲ್ಲಿದ್ದ ಅವರ ಕುಟುಂಬಕ್ಕೆ ಮಾಹಿತಿ ನೀಡಿದ್ದರು. ಕುಟುಂಬಸ್ಥರು ಸತೀಶ್ ಅವರ ಮೊಬೈಲ್‌ಗೆ ಹಲವು ಬಾರಿ ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ನಂತರ ಪೊಲೀಸರು ಅದೇ ನಂಬರ್ ಬಳಸಿ ಕುಟುಂಬವನ್ನು ಸಂಪರ್ಕಿಸಿ ಸತೀಶ್ ಅವರ ಸಾವಿನ ಸುದ್ದಿಯನ್ನು ತಿಳಿಸಿದ್ದಾರೆ.

ಇದನ್ನೂ ಓದಿ: 30,000 ಅಡಿ ಎತ್ತರದಲ್ಲಿ ಹಾರುತ್ತಿದ್ದ ವಿಮಾನದ ಪೈಲಟ್‌ಗೆ ಹೃದಯಾಘಾತ; ಪ್ರಯಾಣಿಕರ ಕತೆ ಏನಾಯ್ತು?

ಈ ಸುದ್ದಿ ತಿಳಿಯುತ್ತಿದ್ದಂತೆ ಸತೀಶ್ ಅವರ ಪತ್ನಿ ಸ್ನೇಹಾ ಕಾಮದ್, ಮಗಳು ಕೃತಿಕಾ ಕಾಮದ್ ಮತ್ತು ಸಹೋದರ ದಿನೇಶ್ ಕಾಮದ್ ಮುಂಬೈನಿಂದ ವಿಮಾನದ ಮೂಲಕ ಛತ್ತರ್‌ಪುರಕ್ಕೆ ಧಾವಿಸಿದರು. ಜಿಲ್ಲಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮುಗಿದ ನಂತರ, ಬುಧವಾರ ಛತ್ತರ್‌ಪುರದ ಭೈನ್ಸಾಸುರ್ ಮುಕ್ತಿ ಧಾಮ್‌ನಲ್ಲಿ ಸತೀಶ್ ಅವರ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಸಹೋದರ ದಿನೇಶ್ ಕಾಮದ್ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.

ಅಂತ್ಯಸಂಸ್ಕಾರದ ನಂತರ ಮಾತನಾಡಿದ ಮಗಳು ಕೃತಿಕಾ, “ನನ್ನ ತಂದೆ ಬಾಗೇಶ್ವರ್ ಧಾಮ್‌ನ ಪರಮ ಭಕ್ತರಾಗಿದ್ದರು. ತಮ್ಮ ಜೀವನದ ಕೊನೆಯ ಕ್ಷಣಗಳನ್ನು ಇಲ್ಲೇ ಕಳೆಯಬೇಕೆಂದು ಅವರು ಯಾವಾಗಲೂ ಬಯಸುತ್ತಿದ್ದರು. ಅವರ ಆಸೆಯಂತೆ ಅವರ ಸಂಸ್ಕಾರವನ್ನು ಇಲ್ಲೇ ನೆರವೇರಿಸಿದ್ದೇವೆ” ಎಂದು ಕಣ್ಣೀರಿಟ್ಟಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪರಿಷತ್‌ ಚುನಾವಣೆಯಲ್ಲಿ ಭರ್ಜರಿ ಗೆಲುವು ಬೆನ್ನಲ್ಲೇ ಕಾಂಗ್ರೆಸ್​ ಅಭ್ಯರ್ಥಿ ತಿಪ್ಪಣ್ಣಪ್ಪ ಕಮಕನೂರು ಭಾವುಕ – Kannada News | Congress Candidate Thippanappa Kamakanur Turns Emotional After MLC Election Victory

ಬೆಂಗಳೂರು, ಜೂನ್​​ 18: ಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ನ ಐವರು ದಿಗ್ವಿಜಯ ಸಾಧಿಸಿದ್ದಾರೆ. ಈ ಪೈಕಿ ತಿಪ್ಪಣ್ಣಪ್ಪ ಕಮಕನೂರು ಕೂಡ ಒಬ್ಬರು. ಭರ್ಜರಿ ಗೆಲುವು ಸಾಧಿಸುವ ತಿಪ್ಪಣ್ಣಪ್ಪ ಕಮಕನೂರು ಮೂರನೇ ಬಾರಿಗೆ ವಿಧಾನ ಪರಿಷತ್​ಗೆ ಆಯ್ಕೆ ಆಗಿದ್ದಾರೆ. ಫಲಿತಾಂಶ ಬಳಿಕ ಮಾಧ್ಯಮದರೊಂದಿಗೆ ಮಾತನಾಡಿದ ಅವರು, ನಿರೀಕ್ಷೆಗೂ ಮೀರಿ ಮತಗಳು ಲಭಿಸಿರುವುದಕ್ಕೆ ಭಾವುಕರಾದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪ್ರಿಯಾಂಕ್ ಖರ್ಗೆ ಸೇರಿದಂತೆ ಪಕ್ಷದ ಹಿರಿಯ ನಾಯಕರು ಸ್ಪರ್ಧಿಸಲು ಅವಕಾಶ ನೀಡಿದ್ದಕ್ಕೆ ಅವರು ಕೃತಜ್ಞತೆ ಸಲ್ಲಿಸಿದರು. ಮುಂದಿನ ದಿನಗಳಲ್ಲಿ ಕಟ್ಟಕಡೆಯ ಮನುಷ್ಯರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ವಿಧಾನಪರಿಷತ್ತಿನಲ್ಲಿ ಸರ್ಕಾರದ ಗಮನ ಸೆಳೆಯುವುದಾಗಿ ಹೇಳಿದರು. ಸಾಮಾಜಿಕ ನ್ಯಾಯ ಒದಗಿಸಲು ಬದ್ಧರಾಗಿರುವುದಾಗಿ ಹೇಳಿದ ಅವರು, 2028ರಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಶ್ರಮಿಸುವುದಾಗಿ ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಸಂಪೂರ್ಣ ತಲೆಕೆಳಗಾದ ಲೆಕ್ಕಾಚಾರ: ದಳಪತಿಗಳಿಗೆ ಭರ್ಜರಿ ಶಾಕ್​​ ಕೊಟ್ಟ ಪರಿಷತ್​​ ಚುನಾವಣೆ ಫಲಿತಾಂಶ – Kannada News | JDS Stunned in Karnataka MLC Polls as Internal Cross Voting and Failed Strategies Lead to Shock Defeat

ದಳಪತಿಗಳಿಗೆ ಭರ್ಜರಿ ಶಾಕ್​​ ಕೊಟ್ಟ ಪರಿಷತ್​​ ಚುನಾವಣೆ ಫಲಿತಾಂಶImage Credit source: PTI

ಬೆಂಗಳೂರು, ಜೂನ್​​ 18: ಅಖಾಡಕ್ಕೆ ಇಳಿಸಿದ್ದ ತನ್ನ ಏಕೈಕ ಅಭ್ಯರ್ಥಿಯನ್ನು ಶತಾಯ ಗತಾಯ ಗೆಲ್ಲಿಸಿಕೊಳ್ಳುವ ಪ್ರಯತ್ನದ ಹೊರತಾಗಿಯೂ ವಿಧಾನ ಪರಿಷತ್​​ ಚುನಾವಣೆಯಲ್ಲಿ ಜೆಡಿಎಸ್​​ ಪರಾಭವಗೊಂಡಿದೆ. ಜಾತ್ಯಾತೀತ ಜನತಾದಳ ಪಕ್ಷದಿಂದ ಸ್ಪರ್ಧಿಸಿದ್ದ ಗೋವಿಂದರಾಜು ಅವರಿಗೆ ಕೇವಲ 14 ಮತಗಳು ಬಿದ್ದಿದ್ದು, ಫಲಿತಾಂಶ ದಳಪತಿಗಳಿಗೆ ಬಿಗ್ ಶಾಕ್ ಕೊಟ್ಟಿದೆ. ಜೆಡಿಎಸ್​​ನ ಹದಿನೆಂಟು ಮತಗಳು ಗೋವಿಂದರಾಜುಗೆ ಬರುವ ನಿರೀಕ್ಷೆಯಲ್ಲಿ ಜೆಡಿಎಸ್ ನಾಯಕರಿದ್ದರು. ಹೀಗಿದ್ದರೂ ಒಂದರಿಂದ ಎರಡು ಅಡ್ಡ ಮತದಾನ ಆಗುವ ಶಂಕೆ ಹಿನ್ನೆಲೆ ಆ ಬಗ್ಗೆಯೂ ಲೆಕ್ಕಾಚಾರವನ್ನು ನಾಯಕರು ಹಾಕಿಕೊಂಡಿದ್ದರು. ಆದರೀಗ ನಿರೀಕ್ಷೆಗೂ ಮೀರಿ ಕ್ರಾಸ್​​ ವೋಟಿಂಗ್​​ ನಡೆದಿರೋದು ಪಕ್ಷದಲ್ಲಿಯೇ ಈಗ ಚರ್ಚೆ ಹುಟ್ಟುಹಾಕಿದೆ.

ಪರಿಣಾಮ ಬೀರಿದ ಬಿಜೆಪಿ ನಡೆ

62 ಶಾಸಕರ ಬಲ ಹೊಂದಿರುವ ಬಿಜೆಪಿಯಿಂದ ಕಣದಲ್ಲಿರುವ 2 ಅಭ್ಯರ್ಥಿಗಳಿಗೆ ತಲಾ 28ರಂತೆ 56 ಮತಗಳು ಅಗತ್ಯವಿತ್ತು. ಹೀಗಾಗಿ ಹೆಚ್ಚುವರಿಯಾಗಿ ಉಳಿಯಲಿರುವ 6 ಮತಗಳ ಮೇಲೆ ಜೆಡಿಎಸ್​​ ಕಣ್ಣಿಟ್ಟಿತ್ತು. ಪಕ್ಷದ ಅಭ್ಯರ್ಥಿಗೆ ತಮ್ಮ 18 ಮತಗಳು, ಬಿಜೆಪಿಯ 6 ಹೆಚ್ಚುವರಿ ಮತ, ಜನಾರ್ದನ ರೆಡ್ಡಿ, ಬಸನಗೌಡ ಪಾಟೀಲ್​​ ಯತ್ನಾಳ್ ಬೆಂಬಲ ಸೇರಿ 26ರ ಗಡಿ ತಲುಪಬಹುದೆಂಬ ಲೆಕ್ಕಾಚಾರವನ್ನು ದಳಪತಿಗಳು ಹಾಕಿಕೊಂಡಿದ್ದರು. ಆದರೆ ಸ್ವಪಕ್ಷೀಯರ ಅಡ್ಡಮತದಾನದ ಜೊತೆ ತನ್ನ ಒಂದೊಂದು ಅಭ್ಯರ್ಥಿಗೆ 30 ಮತಗಳ ಚಲಾವಣೆ ಬಗ್ಗೆ ಕೊನೇ ಕ್ಷಣದಲ್ಲಿ ಬಿಜೆಪಿ ನಿರ್ಧರಿಸಿದ್ದು ಕೂಡ ಜೆಡಿಎಸ್​​ ಮೇಲೆ ಪರಿಣಾಮ ಬೀರಿದೆ.

ಇದನ್ನೂ ಓದಿ: ಪರಿಷತ್​​ ಚುನಾವಣೆ; ಕೊನೇ ಕ್ಷಣದಲ್ಲಿ ಕೈ ಹಿಡಿದ BJP ರಾಜ್ಯ ನಾಯಕರ ಕಾರ್ಯತಂತ್ರ, ತಪ್ಪಿದ ಭಾರೀ ಮುಖಭಂಗ

ಹೀಗಿದ್ದೂ ತನ್ನ ಹೆಚ್ಚುವರಿ ಮತಗಳನ್ನು ಬಿಜೆಪಿ ಜೆಡಿಎಸ್​​ಗೆ ಹಾಕಿಸಿತ್ತು. ಪಕ್ಷದ ಸೂಚನೆಯಂತೆ ಶಾಸಕ ದುರ್ಯೋಧನ ಐಹೊಳೆ, ಶಾಸಕ ಕೃಷ್ಣ ನಾಯ್ಕ್, ಶಿರಹಟ್ಟಿ ಶಾಸಕ ಚಂದ್ರು ಲಮಾಣಿ, ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಜೆಡಿಎಸ್​​ ಅಭ್ಯರ್ಥಿ ಪರ ಮತ ಚಲಾಯಿಸಿದ್ದರು. ಆದರೂ ಅಂತಿಮವಾಗಿ ಜೆಡಿಎಸ್​​ ಅಭ್ಯರ್ಥಿ ಗೋವಿಂದರಾಜು ಪರಾಭವಗೊಳ್ಳಬೇಕಾಯಿತು. ಜೆಡಿಎಸ್​​ ಮತ್ತು ಬಿಜೆಪಿ ಎರಡು ಪಕ್ಷಗಳಿಂದಲೂ ಕ್ರಾಸ್​​ ವೋಟಿಂಗ್​​ ಆಗಿರೋದು ಮೈತ್ರಿ ಪಕ್ಷಗಳಿಗೆ ಹೊಸ ಟೆನ್ಷನ್​​ ತಂದಿಟ್ಟಿದೆ. ಪಕ್ಷಕ್ಕೆ ದ್ರೋಹ ಬಗೆದವರ ವಿರುದ್ಧ ನಾಯಕರು ಏನು ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link