All posts by nagaraj11081993

IPL: ಧೋನಿ, ರೋಹಿತ್, ಕೊಹ್ಲಿ.. ಅತಿ ಹೆಚ್ಚು ರನ್ ಗಳಿಸಿದ ನಾಯಕ ಯಾರು ಗೊತ್ತಾ?

Source link

ಶೂನ್ಯದಿಂದ ಆಸ್ತಿ ಸಂಪಾದನೆ ಮಾಡುವುದು ಹೇಗೆ? ಇಲ್ಲಿದೆ ತಿಳಿದಿರಬೇಕಾದ ಸಂಗತಿಗಳು

ಏನೂ ಬಂಡವಾಳ ಇಲ್ಲದೇ ಜನರು ಉನ್ನತ ಹಂತಕ್ಕೆ ಹೋಗಿರುವ ಉದಾಹರಣೆಗಳು ಹಲವಿವೆ. ಪಿತ್ರಾರ್ಜಿತ ಆಸ್ತಿ ಅಥವಾ ತಂದೆ ತಾಯಿಯ ಹಣದ ನೆರವು, ಮನೆ ಇತ್ಯಾದಿ ಯಾವ ಸೌಲಭ್ಯವೂ ಸ್ವಂತವಾಗಿ ಹಣ, ಆಸ್ತಿ ಸಂಪಾದನೆ ಮಾಡುವುದು ನಿಜಕ್ಕೂ ಸಾಧನೆಯೇ. ಈ ನಿಟ್ಟಿನಲ್ಲಿ ಯಾವುದೇ ವ್ಯಕ್ತಿಯ ಮೊದಲ ಮುಖ್ಯ ಅಂಶ ಆತನ ಸಂಪಾದನೆಯ ಶಕ್ತಿ. ಹಣ ಸಂಪಾದನೆಗೆ ಬೇಕಾದ ಅಗತ್ಯ ಕೌಶಲ್ಯಗಳನ್ನು ಪಡೆಯುವುದು ಬಹಳ ಮುಖ್ಯ.

ಹಣವಂತರಾಗಲು ಮೂರು ಅಂಶಗಳಿರಬೇಕು. ಹಣ ಗಳಿಕೆ, ಹಣ ಉಳಿಸುವಿಕೆ ಮತ್ತು ಹಣ ಹೂಡಿಕೆ. ಹಣ ಗಳಿಕೆಗೆ ಬೇಕಾಗಿರುವುದು ಕೌಶಲ್ಯ. ತಂತ್ರಜ್ಞಾನ, ಎಂಜಿನಿಯರಿಂಗ್, ಫೈನಾನ್ಸ್, ಬ್ಯುಸಿನೆಸ್ ಇತ್ಯಾದಿ ಕೌಶಲ್ಯಗಳನ್ನು ಕಲಿತಿರಬೇಕು.

ಇದನ್ನೂ ಓದಿ: ಹೂಡಿಕೆಗೆ ಯಾವ ರೀತಿಯ ಮ್ಯೂಚುವಲ್ ಫಂಡ್​ಗಳನ್ನು ಆಯ್ದುಕೊಳ್ಳಬೇಕು? ಗಮನಿಸಬೇಕಾದ ಅಂಶಗಳಿವು

ಹಣಕಾಸು ಶಿಸ್ತು

ಹೆಚ್ಚೆಚ್ಚು ಹಣ ಸಂಪಾದಿಸುವುದು ಎಷ್ಟು ಮುಖ್ಯವೋ, ಸಾಧ್ಯವಾದಷ್ಟೂ ಹಣವನ್ನು ಉಳಿಸುವುದೂ ಅಷ್ಟೇ ಮುಖ್ಯ. ಗಳಿಸಿದ ಹಣದಲ್ಲಿ ಅರ್ಧದಷ್ಟು ಹಣ ಉಳಿಸಲು ಸಾಧ್ಯವಾದರೆ ಬಹಳ ದೊಡ್ಡ ಸಂಗತಿ. ಎಮರ್ಜೆನ್ಸಿ ಫಂಡ್ ಇಟ್ಟಿರುವುದು, ಅಧಿಕ ಬಡ್ಡಿಯ ಸಾಲ ಪಡೆಯದಿರುವುದು ಇತ್ಯಾದಿ ಆರ್ಥಿಕ ಶಿಸ್ತನ್ನು ರೂಢಿಸಿಕೊಂಡವರು ಹಣವಂತರಾಗಲು ಸಾಧ್ಯ.

ಹೂಡಿಕೆ ರೂಢಿ

ಉಳಿಸಿದ ಹಣವನ್ನು ಹಾಗೇ ಇಟ್ಟುಕೊಂಡರೆ ಉಪಯೋಗವಿಲ್ಲ. ತಕ್ಕಮಟ್ಟಿಗೆ ಹಣ ಬೆಳೆಯುವ ಕಡೆ ಅದನ್ನು ಹೂಡಿಕೆ ಮಾಡಬೇಕು. ಫಿಕ್ಸೆಡ್ ಡೆಪಾಸಿಟ್, ಸ್ಮಾಲ್ ಸೇವಿಂಗ್ಸ್ ಸ್ಕೀಮ್, ಮ್ಯೂಚುವಲ್ ಫಂಡ್, ಇಟಿಎಫ್, ರಿಯಲ್ ಎಸ್ಟೇಟ್, ಷೇರುಗಳು ಇತ್ಯಾದಿ ಹಲವು ಹೂಡಿಕೆ ಮಾರ್ಗಗಳಿವೆ. ಇಟಿಎಫ್, ಇಂಡೆಕ್ಸ್ ಫಂಡ್​ಗಳಲ್ಲಿ ಹೂಡಿಕೆ ಮಾಡುವುದು ದೀರ್ಘಾವಧಿ ದೃಷ್ಟಿಯಲ್ಲಿ ಸುರಕ್ಷಿತ ಹಾಗೂ ಲಾಭದಾಯಕ ಎಂಬುದು ಈಗಾಗಲೇ ಸಾಬೀತಾಗಿರುವ ಸಂಗತಿ. ನೀವು ಸಂಪಾದನೆ ಶುರು ಮಾಡಿದಾಗಲೇ ಹೂಡಿಕೆ ಆರಂಭಿಸಿದರೆ ಬಹಳ ದೀರ್ಘಾವಧಿ ಹೂಡಿಕೆ ಸಾಧ್ಯವಾಗುತ್ತದೆ. ಹಣದ ಕಾಂಪೌಂಡಿಂಗ್ ಗುಣ ನಿಮಗೆ ವರದಾನವಾಗುತ್ತದೆ.

ಇದನ್ನೂ ಓದಿ: ಮಾರ್ಕೆಟ್ ಟ್ರೆಂಡ್, ಎಕ್ಸ್​ಪೆನ್ಸ್ ರೇಶಿಯೋ, ಎಮರ್ಜೆನ್ ಫಂಡ್ ಇತ್ಯಾದಿ.. ಜನಸಾಮಾನ್ಯರು ಮಾಡುವ ಹೂಡಿಕೆ ತಪ್ಪುಗಳಿವು

ನೀವು ಒಮ್ಮೆ ಹಣ ಉಳಿಸಿ, ಅದರಿಂದ ಉತ್ತಮ ಆಸ್ತಿ ಸಂಪಾದನೆ ಮಾಡಲು ಆರಂಭಿಸಿದರೆ ಆ ಗುಣ ಶಾಶ್ವತವಾಗಿ ಉಳಿಯಬಲ್ಲುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

‘ಆಕಾಶ್’ ಚಿತ್ರೀಕರಣದ ನೆನಪುಗಳು: ವಿಡಿಯೋ ಹಂಚಿಕೊಂಡ ರಮ್ಯಾ

ಪುನೀತ್ ರಾಜ್​​ಕುಮಾರ್ (Puneeth Rajkumar) ಮತ್ತು ರಮ್ಯಾ ನಟನೆಯ ‘ಆಕಾಶ್’ ಸಿನಿಮಾ ಬಿಡುಗಡೆ ಆಗಿ 21 ವರ್ಷಗಳಾಗಿವೆ. ಇತ್ತೀಚೆಗಷ್ಟೆ ‘ಆಕಾಶ್’ ಸಿನಿಮಾ ಮರು ಬಿಡುಗಡೆ ಆಗಿತ್ತು. ನಟಿ ರಮ್ಯಾ ಸಹ ‘ಆಕಾಶ್’ ಸಿನಿಮಾದ ಮರು ಬಿಡುಗಡೆ ಶೋಗೆ ಹೋಗಿ ಎಂಜಾಯ್ ಮಾಡಿದ್ದರು. ಇದೀಗ ನಟಿ ರಮ್ಯಾ ಅವರು ‘ಆಕಾಶ್’ ಸಿನಿಮಾದ ಶೂಟಿಂಗ್​​ನ ವಿಡಿಯೋ ಒಂದನ್ನು ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಪುನೀತ್ ರಾಜ್​​ಕುಮಾರ್, ಅಶ್ವಿನಿ ಪುನೀತ್ ರಾಜ್​​ಕುಮಾರ್, ರಾಘಣ್ಣ, ರಾಜ್​​ಕುಮಾರ್, ಪಾರ್ವತಮ್ಮ, ಯುವ, ವಿನಯ್ ರಾಜ್​​ಕುಮಾರ್, ಮಹೇಶ್ ಬಾಬು ಇನ್ನೂ ಹಲವರು ವಿಡಿಯೋನಲ್ಲಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಇಸ್ರೇಲ್ ದಾಳಿಯಲ್ಲಿ ನಮ್ಮ ದೇಶದ ಗುಪ್ತಚರ ಸಚಿವ ಎಸ್ಮಾಯಿಲ್ ಖತೀಬ್ ಹತ್ಯೆ; ಇರಾನ್ ಸ್ಪಷ್ಟನೆ

ನವದೆಹಲಿ, ಮಾರ್ಚ್ 18: ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನ್​ನ ಗುಪ್ತಚರ ಸಚಿವ ಮೃತಪಟ್ಟಿದ್ದಾರೆ. ಗುಪ್ತಚರ ಇಲಾಖೆಯ ಎಸ್ಮಾಯಿಲ್ ಖತೀಬ್ ಅವರ ಹತ್ಯೆಯನ್ನು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ದೃಢಪಡಿಸಿದ್ದಾರೆ. ಈ ದಾಳಿಯನ್ನು ಅವರು “ಹೇಡಿತನದ ಹತ್ಯೆ” ಎಂದು ಕರೆದಿದ್ದಾರೆ. ಇಸ್ರೇಲ್ ತನ್ನ ಪಡೆಗಳು ಟೆಹ್ರಾನ್ ಮೇಲೆ ರಾತ್ರಿಯಿಡೀ ನಡೆಸಿದ ವೈಮಾನಿಕ ದಾಳಿ ನಡೆಸಿ ಸಚಿವ ಎಸ್ಮಾಯಿಲ್ ಅವರನ್ನು ಹತ್ಯೆ ಮಾಡಿವೆ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಇರಾನ್ (Iran War) ಕೂಡ ಈ ಬಗ್ಗೆ ದೃಢಪಡಿಸಿದೆ.

ಇರಾನ್‌ನಾದ್ಯಂತ ಇತ್ತೀಚೆಗೆ ನಡೆದ ಪ್ರತಿಭಟನೆಗಳಲ್ಲಿ ಎಸ್ಮಾಯಿಲ್ ಖತೀಬ್ ಮಹತ್ವದ ಪಾತ್ರ ವಹಿಸಿದ್ದಾರೆ. ಪ್ರತಿಭಟನಾಕಾರರ ಬಂಧನ ಮತ್ತು ಹತ್ಯೆ ಸೇರಿದಂತೆ ಪ್ರಮುಖ ನಿರ್ಧಾರಗಳಲ್ಲಿ ಅವರು ಪಾತ್ರ ವಹಿಸಿದ್ದರು. ಅವರು ಇಸ್ರೇಲಿಗಳು ಮತ್ತು ಅಮೆರಿಕನ್ನರ ವಿರುದ್ಧ ಭಯೋತ್ಪಾದಕ ಚಟುವಟಿಕೆಗಳನ್ನು ಮುನ್ನಡೆಸಿದ್ದಾರೆ ಎಂದು ಐಡಿಎಫ್ ಹೇಳಿತ್ತು.

ಇದನ್ನೂ ಓದಿ: ಅಮೆರಿಕ, ಇಸ್ರೇಲ್ ನಮ್ಮೆದುರು ಮಂಡಿಯೂರಬೇಕು; ಇರಾನ್‌ ಸುಪ್ರೀಂ ನಾಯಕ ಪಟ್ಟು

ಎಸ್ಮಾಯಿಲ್ ಖತೀಬ್ ಒಬ್ಬ ಶಿಯಾ ಧರ್ಮಗುರು. ಅವರು ಇರಾನ್‌ನ ನ್ಯಾಯಾಂಗ ಮತ್ತು ಗುಪ್ತಚರ ಸಚಿವಾಲಯದಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸಿದ್ದರು. ಅವರು 1980ರ ದಶಕದಲ್ಲಿ ಇರಾನ್-ಇರಾಕ್ ಯುದ್ಧದ ಸಮಯದಲ್ಲಿ ಕ್ರಾಂತಿಕಾರಿ ಗಾರ್ಡ್‌ನಲ್ಲಿಯೂ ಸೇವೆ ಸಲ್ಲಿಸಿದ್ದರು. ಅಲ್ಲಿ ಅವರು ಯುದ್ಧದಲ್ಲಿ ಗಾಯಗೊಂಡಿದ್ದರು.

ಇದನ್ನೂ ಓದಿ: ಇರಾನ್​ಗೆ ಮೆಡಿಕಲ್ ಕಿಟ್ ಕಳುಹಿಸಿ ಮಾನವೀಯತೆ ಮೆರೆದ ಭಾರತ

ಫೆಬ್ರವರಿ 28ರಂದು ಇರಾನ್ ಮೇಲೆ ಯುಎಸ್-ಇಸ್ರೇಲ್ ದಾಳಿಗಳನ್ನು ನಡೆಸಿ ಇರಾನ್​ನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರನ್ನು ಕೊಂದ ನಂತರ ಶುರುವಾದ ಯುದ್ಧವು ಎರಡು ವಾರಗಳಿಗೂ ಹೆಚ್ಚು ಕಾಲದಿಂದ ಉಲ್ಬಣಗೊಳ್ಳುತ್ತಿದೆ. ಅಂದಿನಿಂದ ಎರಡೂ ಕಡೆಯವರು ಪ್ರತೀಕಾರದ ದಾಳಿಗಳನ್ನು ನಡೆಸಿದ್ದು, ಮಧ್ಯಪ್ರಾಚ್ಯದಾದ್ಯಂತ ಉದ್ವಿಗ್ನತೆಯನ್ನು ಹೆಚ್ಚಿಸಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ

Source link

ನೆಲಮಂಗಳದಲ್ಲಿ ಭಾರೀ ಮಳೆ ಗಾಳಿಗೆ ಧರೆಗುರುಳಿದ ಬೃಹತ್ ನೇಮ್ ಬೋರ್ಡ್ ಪಿಲ್ಲರ್

ಬೆಂಗಳೂರು, (ಮಾರ್ಚ್ 18): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ಸಹ ಬೇಸಿಗೆ ಮಳೆಯ ಅಬ್ಬರ ಶುರುವಾಗಿದೆ. ನಿನ್ನೆ (ಮಾರ್ಚ್ 17) ಬೆಂಗಳೂರಿನ ಈ ವರ್ಷದ ಮಾಳೆಯಾಗಿದ್ದು, ಇಂದು (ಮಾರ್ಚ್ 18) ಸಹ ಮುಂದುವರೆದಿದೆ. ಸಂಜೆಯಾಗುತ್ತಿದ್ದಂತೆಯೇ ಮಳೆ ಶುರುವಾಗಿದ್ದು, ಭಾರೀ ಬಿರುಗಾಳಿ ಮಳೆಗೆ ನೆಲಮಂಗಲ ನಗರದಲ್ಲಿ ನೇಮ್ ಬೋರ್ಡ್ ಪಿಲ್ಲರ್ ಧರೆಗುರುಳಿದಿದೆ. ನೆಲಮಂಗಲದ ಬಸವನಹಳ್ಳಿ ಕ್ರಾಸ್ ಬಳಿ ನಗರಸಭೆಯಿಂದ ನಿರ್ಮಾಣ ಮಾಡಿದ್ದ ಬೃಹತ್ ನೇಮ್ ಬೋರ್ಡ್ ಪಿಲ್ಲರ್ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಹೊಸ ‘ಸ್ಪೈಡರ್​​ಮ್ಯಾನ್’ ಟ್ರೈಲರ್ ಬಿಡುಗಡೆ: ಕಾಣುತ್ತಿದೆ ಸಾಕಷ್ಟು ಬದಲಾವಣೆ

‘ಸ್ಪೈಡರ್​​ಮ್ಯಾನ್’ (Spiderman) ವಿಶ್ವದ ಅತ್ಯಂತ ಜನಪ್ರಿಯ ಮತ್ತು ಯಶಸ್ವಿ ಸೂಪರ್ ಹೀರೋ ಸಿನಿಮಾ ಸರಣಿಗಳಲ್ಲಿ ಪ್ರಮುಖವಾದ ಸಿನಿಮಾ. ‘ಸ್ಪೈಡರ್​​ಮ್ಯಾನ್​’ನ ಹಲವು ಆವೃತ್ತಿಗಳು ಹಾಲಿವುಡ್​​ನಲ್ಲಿ ಈಗಾಗಲೇ ಬಂದಿವೆ. ‘ಸ್ಪೈಡರ್​​ಮ್ಯಾನ್’ ಸರಣಿಯ ಹಲವು ಸಿನಿಮಾಗಳು ಬ್ಲಾಕ್ ಬಸ್ಟರ್ ಸಹ ಆಗಿವೆ. ಇದೀಗ ಇದೇ ಸರಣಿಯ ಹೊಸ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಹೊಸ ಸಿನಿಮಾದ ಟ್ರೈಲರ್ ಇಂದಷ್ಟೆ ಬಿಡುಗಡೆ ಆಗಿದೆ. ಜೊತೆಗೆ ಸಿನಿಮಾದ ಬಿಡುಗಡೆ ದಿನಾಂಕವನ್ನು ಸಹ ಘೋಷಣೆ ಮಾಡಲಾಗಿದೆ.

‘ಸ್ಪೈಡರ್​​ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಹೆಸರಿನ ಸಿನಿಮಾ ಇದಾಗಿದ್ದು, ಟ್ಯಾಗ್​ಲೈನ್​​ನಲ್ಲಿಯೇ ಇರುವಂತೆ, ಸ್ಪೈಡರ್​ಮ್ಯಾನ್ ಪಾಲಿಗೆ ಇದು ಸಂಪೂರ್ಣ ಹೊಸ ದಿನವೇ ಆಗಿದೆ. ಈ ಹಿಂದಿನ ‘ಸ್ಪೈಡರ್ ಮ್ಯಾನ್: ನೋ ವೇ ಹೋಮ್’ ಕ್ಲೈಮ್ಯಾಕ್ಸ್​​ನಲ್ಲಿ ಪೀಟರ್ ಪಾರ್ಕರ್ (ಸ್ಪೈಡರ್​ಮ್ಯಾನ್) ಜಗತ್ತು ಉಳಿಸಲು ತ್ಯಾಗ ಮಾಡಿದ್ದು, ಇದೇ ಕಾರಣಕ್ಕೆ ಅವನ ಗರ್ಲ್​​ಫ್ರೆಂಡ್, ಆತ್ಮೀಯ ಗೆಳೆಯ ಎಲ್ಲರು ಪೀಟರ್ ಪಾರ್ಕರ್ ಅನ್ನು ಮರೆತುಬಿಟ್ಟಿದ್ದಾರೆ, ಆದರೆ ಪೀಟರ್​​ಗೆ ಮಾತ್ರ ಎಲ್ಲರ ನೆನಪು ಇದೆ. ಈಗ ಬಿಡುಗಡೆ ಆಗಿರುವ ‘ಸ್ಪೈಡರ್​​ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಸಿನಿಮಾನಲ್ಲಿ ಅದೇ ಕತೆ ಮುಂದುವರೆದಿದೆ.

ಈಗ ಬಿಡುಗಡೆ ಆಗಿರುವ ಟ್ರೈಲರ್​​ನಲ್ಲಿ ತೋರಿಸಿರುವಂತೆ ಪೀಟರ್​​ನ ಪ್ರೇಯಸಿ ಮತ್ತು ಆಪ್ತ ಮಿತ್ರರು ಪೀಟರ್ ಅನ್ನು ಮರೆತಿದ್ದಾರೆ. ಪೀಟರ್​​ನ ಪ್ರೇಯಸಿ ಬೇರೊಬ್ಬನನ್ನು ಪ್ರೀತಿಸುತ್ತಿದ್ದಾಳೆ. ಆದರೆ ಪೀಟರ್ ಆಕೆಯ ಜೀವನಕ್ಕೆ ಮತ್ತೆ ಎಂಟ್ರಿ ಕೊಡುವ ಪ್ರಯತ್ನ ಮಾಡುತ್ತಿದ್ದಾನೆ. ಇದರ ನಡುವೆ ಪೀಟರ್​​ನ ತನ್ನ ಸೂಪರ್ ಹೀರೋ ಶಕ್ತಿಗಳನ್ನು ಸಹ ಕಳೆದುಕೊಳ್ಳುತ್ತಿದ್ದಾನೆ. ಹಳೆಯ ಹಲವು ವಿಲನ್​​ಗಳು ಈಗ ಒಮ್ಮೆಲೆ ಪೀಟರ್ ಅಥವಾ ಸ್ಪೈಡರ್​​ಮ್ಯಾನ್ ಮೇಲೆ ದಾಳಿ ಮಾಡುತ್ತಿದ್ದಾರೆ. ಹೀಗೆ ಹಲವು ಅಂಶಗಳು ಈಗ ಬಿಡುಗಡೆ ಆಗಿರುವ ಟ್ರೈಲರ್​​ನಲ್ಲಿ ಇವೆ.

ಇದನ್ನೂ ಓದಿ:Oscars 2026: ಈ ಬಾರಿ ಆಸ್ಕರ್ ಅವಾರ್ಡ್​ ಗೆದ್ದವರ ಸಂಪೂರ್ಣ ಪಟ್ಟಿ ಇಲ್ಲಿದೆ

ಈಗ ಬಿಡುಗಡೆ ಆಗಿರುವ ಟ್ರೈಲರ್‌ನಲ್ಲಿನ ವಿಷಯವೆಂದರೆ ಪೀಟರ್‌ನ ಶರೀರದಲ್ಲಿ ಬದಲಾವಣೆ ಆಗುತ್ತಿದೆ ಪೀಟರ್, ರೇಷ್ಮೆಗೂಡಿನ ಒಳಗೆ ಎಚ್ಚರಗೊಳ್ಳುವ ದೃಶ್ಯವಿದೆ. ಅಲ್ಲದೆ, ಅವನು ವೆಬ್-ಶೂಟರ್ ಬಳಸಲಾಗದೆ ಬಿದ್ದು ಹೋಗುವ ದೃಶ್ಯವಿದೆ. ಮತ್ತೊಂದು ದೃಶ್ಯದಲ್ಲಿ ತನ್ನ ಮಣಿಕಟ್ಟಿನಿಂದಲೇ ನೇರವಾಗಿ ಜೇಡರ ಬಲೆಯನ್ನು ಬಿಡುತ್ತಿರುವ ದೃಶ್ಯವೂ ಇದೆ. ಹಳೆಯ ಟೋಬಿ ಮ್ಯಾಗೈರ್ ಸ್ಪೈಡರ್​ಮ್ಯಾನ್​​ನಲ್ಲಿ ನಾಯಕ ಬರಿಗೈನಿಂದಲೇ ವೆಬ್ ಶೂಟರ್​​ಗಳನ್ನು ಬಿಡುತ್ತಿದ್ದ.

ಈ ಹೊಸ ಸಿನಿಮಾದಲ್ಲಿ ಮಾರ್ವೆಲ್‌ನ ಇತರ ಪ್ರಮುಖ ಪಾತ್ರಗಳಾದ ಹಲ್ಕ್ ಅಥವಾ ಬ್ರೂಸ್ ಬ್ಯಾನರ್ ಮತ್ತು ಪನಿಶರ್ ಕಾಣಿಸಿಕೊಂಡಿದ್ದಾರೆ. ಪೀಟರ್ ತನ್ನ ದೇಹದಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಬ್ರೂಸ್ ಬ್ಯಾನರ್ ಬಳಿ ಸಹಾಯ ಕೇಳಲು ಹೋಗುವ ದೃಶ್ಯವನ್ನು ಟ್ರೈಲರ್​​ನಲ್ಲಿ ತೋರಿಸಲಾಗಿದೆ. ಸ್ಪೈಡರ್​​ಮ್ಯಾನ್ ಈ ಸಿನಿಮಾನಲ್ಲಿ ಆಧುನಿಕ ಸೂಟ್ ಬದಲಿಗೆ ತಾನೇ ಹೊಲೆದಿದ್ದ ಹಳೆಯ ಸೂಟ್ ಬಳಸುತ್ತಿದ್ದಾನೆ. ಸಿನಿಮಾನಲ್ಲಿ ಸಾಕಷ್ಟು ವಿಲನ್​​ಗಳು ಸಹ ಇದ್ದಾರೆ. ಹಳೆಯ ಶತ್ರು ಸ್ಕಾರ್ಪಿಯಾನ್ ಅಂತಿಮವಾಗಿ ತನ್ನ ಪೂರ್ಣ ರೂಪದಲ್ಲಿ ಮರಳಿದ್ದಾನೆ. ಜೊತೆಗೆ ‘ಟಾಂಬ್‌ಸ್ಟೋನ್’ ಎಂಬ ಭೂಗತ ಪಾತಕಿ ಸಹ ಇದ್ದಾನೆ. ಇವುಗಳ ಜೊತೆಗೆ ಕೆಲವು ಜಪಾನಿ ಸಮುರಾಯ್​ಗಳು ಇದ್ದಾರೆ. ಸ್ವತಃ ಸ್ಪೈಡರ್​​ಮ್ಯಾನ್ ಸಹ ರಾಕ್ಷಸನ ರೂಪ ತಾಳುವ ದೃಶ್ಯವೂ ಸಹ ಇದೆ.

ಒಟ್ಟಾರೆ ‘ಸ್ಪೈಡರ್​​ಮ್ಯಾನ್ : ಬ್ರ್ಯಾಂಡ್ ನ್ಯೂ ಡೇ’ ಸಿನಿಮಾದ ಟ್ರೈಲರ್ ಸಿನಿಮಾ ಬಗ್ಗೆ ಸಾಕಷ್ಟು ಕುತೂಹಲವನ್ನು ಕೆರಳಿಸಿದೆ. ಸಿನಿಮಾನಲ್ಲಿ ಮಾಮೂಲಿನಂತೆ ನಾಯಕನಾಗಿ ಟಾಮ್ ಹಾಲೆಂಡ್ ನಟಿಸಿದ್ದಾರೆ. ನಾಯಕಿ ಜೆಂಡೆಯಾ. ಸಿನಿಮಾ ಜುಲೈ 31ಕ್ಕೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಯುಗಾದಿಯಂದು ಅಧಿಕಾರಿಗಳ ಕಡ್ಡಾಯ ಹಾಜರಿಗೆ ಸೂಚನೆ: ರಂಜಾನ್​​ ದಿನ ಸಭೆ ಕರಿಯಬಹುದಿತ್ತಲ್ಲವೇ ಎಂದ ಬಿಜೆಪಿ ಶಾಸಕ

ಬೆಂಗಳೂರು, ಮಾರ್ಚ್​ 18: ವಿಧಾನಸಭೆಯಲ್ಲಿ ಪ್ರಶ್ನೆಗಳಿಗೆ ಉತ್ತರ ನೀಡುವುದು ಬಾಕಿ ಹಿನ್ನೆಲೆ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಯುಗಾದಿ (Ugadi) ಹಬ್ಬದ‌ ರಜೆಯನ್ನು ಕಡಿತಗೊಳಿಸಲಾಗಿದೆ. ಆ ಮೂಲಕ ಹಬ್ಬದ‌ ದಿನವೂ ಕಡ್ಡಾಯ ಹಾಜರಿಗೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಸೂಚನೆ ನೀಡಿದ್ದಾರೆ.

ಯುಗಾದಿ ಹಬ್ಬದ‌ ದಿನವೂ ಕಡ್ಡಾಯ ಹಾಜರಿಗೆ ಸೂಚನೆ

ಕರ್ನಾಟಕ ವಿಧಾನ ಸಭೆ ಅಧಿವೇಶನಕ್ಕೆ ಸಂಬಂಧಿಸಿದಂತೆ ಮಾರ್ಚ್​​ 23ರಂದು ಕಂದಾಯ ಇಲಾಖೆಗೆ ಸಂಬಂಧಪಟ್ಟ ಪ್ರಶ್ನೆಗಳು ಬಾಕಿಯಿರುವುದರಿಂದ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಕಂದಾಯ ಇಲಾಖೆ ಇವರ ಸೂಚನೆ ಮೇರೆಗೆ ಮುಜರಾಯಿ, ಭೂ ಮಂಜೂರಾತಿ-1, ಭೂ ಮಂಜೂರಾತಿ-2, ಭೂ ಮಂಜೂರಾತಿ-3, ಸೇವೆಗಳು-3, ಭೂ ಕಂದಾಯ, ಭೂ ಮಾಪನ, ಭೂಮಿ, ಭೂಸುಧಾರಣಾ ಕೋಶ ಒಟ್ಟು 9 ಶಾಖೆಗಳಿಗೆ ಸಂಬಂಧಿಸಿದ ಅಧಿಕಾರಿ ಮತ್ತು ಸಿಬ್ಬಂದಿ ಮಾರ್ಚ್​​ 19ರಂದು ಕಡ್ಡಾಯವಾಗಿ ಕಚೇರಿಗೆ ಹಾಜರಾಗಿ ವಿಧಾನ ಸಭೆ ಬಾಕಿಯಿರುವ ಪ್ರಶ್ನೆಗಳಿಗೆ ಉತ್ತರಿಸಲು ಕ್ರಮವಹಿಸುವಂತೆ ಸೂಚಿಸಲಾಗಿದೆ.

ಇದನ್ನೂ ಓದಿ: ಕಾಂಗ್ರೆಸ್​​ ಜೊತೆಗಿನ ಮದುವೆ ಹಿಂಸಾತ್ಮಕವಾಗಿದ್ದರಿಂದ ವಿಚ್ಚೇದನ: ಖರ್ಗೆ ಹೇಳಿಕೆಗೆ ದೇವೇಗೌಡರ ಕೌಂಟರ್​

ಮೊನ್ನೆಯಷ್ಟೇ ಸರ್ಕಾರದ ಕಡೆಯಿಂದ ಉತ್ತರ ಬಾರದೇ ಇರುವುದಕ್ಕೆ ಸ್ಪೀಕರ್ ಅಸಮಾಧಾನಗೊಂಡಿದ್ದರು. ಸ್ಪೀಕರ್ ಕಿಡಿ ಹಿನ್ನೆಲೆ ಸಿಎಂ ಸಿದ್ದರಾಮಯ್ಯರಿಂದ 9 ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ನೋಟಿಸ್​​ ಕೊಟ್ಟ ಕಾರಣಕ್ಕೆ ಹಿರಿಯ ಅಧಿಕಾರಿಗಳು ಕೆಳಹಂತದ ಸಿಬ್ಬಂದಿಗಳಿಗೆ ಹಬ್ಬದ ಖುಷಿ ಇಲ್ಲದಂತೆ ಮಾಡಿದ್ದಾರೆ. ಒಂದು ರೀತಿಯಲ್ಲಿ ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದ ಹಾಗಾಗಿದೆ.

ಸರ್ಕಾರದ ನಡೆಗೆ ಮಾಜಿ ಸಚಿವ ಸುರೇಶ್ ಕುಮಾರ್ ವ್ಯಂಗ್ಯ

ಇನ್ನು ಈ ಬಗ್ಗೆ ಮಾಜಿ ಸಚಿವ ಸುರೇಶ್ ಕುಮಾರ್ ವ್ಯಂಗ್ಯವಾಡಿದ್ದಾರೆ. ಮತ್ತೊಮ್ಮೆ ತನ್ನ ವಿವೇಚನಾ ಕೊರತೆಯನ್ನು ಪ್ರದರ್ಶಿಸಿದ ಸರ್ಕಾರ. ನಾಳೆ, ಗುರುವಾರ 19.3.26. ನಮ್ಮ ನಾಡಿನಲ್ಲಿ ಚಾಂದ್ರಮಾನ ಯುಗಾದಿ ಹಬ್ಬ. ಎಲ್ಲಾ ಹಿಂದೂಗಳು ಆಚರಿಸುವ ದೊಡ್ಡ ಹಬ್ಬ. ನಮ್ಮ ಹೊಸ ಸಂವತ್ಸರದ ವರುಷದ ಆರಂಭ.

ಈ ಹಬ್ಬದ ದಿನವೇ ಸಭೆಗೆ ಹಾಜರಿರಬೇಕೆಂದು ಕಂದಾಯ ಇಲಾಖೆಯಿಂದ ಸೂಚನೆಯ ಪತ್ರ ಕೊಟ್ಟಿರುವುದು ಯಾವ ಮನಸ್ಥಿತಿ ತೋರುತ್ತದೆ? ನಾಡಿದ್ದು, ಶುಕ್ರವಾರ ಅಥವಾ ಶನಿವಾರ ಈ ಸಭೆ ಕರಿಯಬಹುದಿತ್ತಲ್ಲವೇ? ಓ! ಮರೆತಿದ್ದೆ. ಶುಕ್ರವಾರ, ಶನಿವಾರ ರಂಜಾನ್ ಅಲ್ಲವೇ? ಅಂದು ಕರೆದರೆ ಈ ಸರ್ಕಾರ ಜಾತ್ಯತೀತವಾಗುವುದಿಲ್ಲ.

ಇದನ್ನೂ ಓದಿ: ಲೋಪ ಆರೋಪ ಬೆನ್ನಲ್ಲೇ ಜಿಬಿಎ ಮತದಾರರ ಪಟ್ಟಿ ಆಕ್ಷೇಪಣೆಗೆ ನೀಡಿದ್ದ ಕಾಲಾವಕಾಶ ವಿಸ್ತರಣೆ

ಯುಗಾದಿ ಹಬ್ಬದ ದಿನವೇ ರಜೆ ದಿನವಾಗಿದ್ದರೂ ಸರ್ಕಾರಿ ಅಧಿಕಾರಿಗಳನ್ನು ಕರೆಯುವುದು ನಿಜವಾದ ಜಾತ್ಯತೀತತೆ! ವಾಹ್! ಕರ್ನಾಟಕ ಸರ್ಕಾರದ ಈ ನಡೆಗೆ ಭೇಷ್ ಅನ್ನಬೇಕೋ ಅಥವಾ ಛೀ ಅನ್ನಬೇಕೋ ಎಂದು ಮಾಜಿ ಸಚಿವ ಸುರೇಶ್ ಕುಮಾರ್ ವ್ಯಂಗ್ಯವಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Hockey World Cup 2026: ಒಂದೇ ಗುಂಪಿನಲ್ಲಿ ಭಾರತ- ಪಾಕಿಸ್ತಾನ

ಫೆಬ್ರವರಿ 15 ರಂದು ನಡೆದ ಟಿ20 ವಿಶ್ವಕಪ್ ಲೀಗ್ ಹಂತದ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯವನ್ನು ಏಕಪಕ್ಷೀಯವಾಗಿ ಗೆದ್ದುಕೊಳ್ಳುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿತ್ತು. ಇದೀಗ ಮತ್ತೊಮ್ಮೆ ಎರಡು ದೇಶಗಳ ತಂಡಗಳು ಪರಸ್ಪರ ಎದುರುಬದುರಾಗುತ್ತಿವೆ. ಆದರೆ ಈ ಬಾರಿ ಎರಡು ತಂಡಗಳು ಮುಖಾಮುಖಿಯಾಗುತ್ತಿರುವುದು ಕ್ರಿಕೆಟ್ ಮೈದಾನದಲ್ಲಿ ಅಲ್ಲ. ಬದಲಿಗೆ ಹಾಕಿ ಮೈದಾನದಲ್ಲಿ. 2026 ರ ಎಫ್‌ಐಎಚ್ ಹಾಕಿ ವಿಶ್ವಕಪ್ (Hockey World Cup 2026) ಪಂದ್ಯಾವಳಿ ಬೆಲ್ಜಿಯಂ ಮತ್ತು ನೆದರ್‌ಲ್ಯಾಂಡ್ಸ್‌ನಲ್ಲಿ ನಡೆಯಲಿದೆ. ಪಂದ್ಯಾವಳಿ ಆಗಸ್ಟ್ 15 ರಂದು ಪ್ರಾರಂಭವಾಗಿ ಆಗಸ್ಟ್ 30 ರಂದು ಮುಕ್ತಾಯಗೊಳ್ಳಲಿದೆ. ಈ ಪಂದ್ಯಾವಳಿಗಾಗಿ ತಂಡಗಳನ್ನು ಗುಂಪುಗಳಾಗಿ ವಿಂಗಡಿಸಲಾಗಿದೆ. ಪುರುಷ ಮತ್ತು ಮಹಿಳಾ ತಂಡಗಳನ್ನು ತಲಾ 4 ಗುಂಪುಗಳಾಗಿ ವಿಂಗಡಿಸಲಾಗಿದೆ. ಅದರ ಪ್ರಕಾರ, ಪ್ರತಿ ಗುಂಪಿನಲ್ಲಿ 4 ತಂಡಗಳಿವೆ.

ಭಾರತ ಮತ್ತು ಪಾಕಿಸ್ತಾನ ಒಂದೇ ಗುಂಪಿನಲ್ಲಿ

2026 ರ ಹಾಕಿ ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಎರಡೂ ತಂಡಗಳನ್ನು ಕ್ರಿಕೆಟ್‌ನಲ್ಲಿರುವಂತೆಯೇ ಒಂದೇ ಗುಂಪಿನಲ್ಲಿ ಇರಿಸಲಾಗಿದೆ. ಭಾರತ ಮತ್ತು ಪಾಕಿಸ್ತಾನ ಜೊತೆಗೆ, ಈ ಡಿ ಗುಂಪಿನಲ್ಲಿ ಇಂಗ್ಲೆಂಡ್ ಮತ್ತು ವೇಲ್ಸ್ ಸೇರಿವೆ. ಗುಂಪು ಡಿ ಯಲ್ಲಿರುವ ಎಲ್ಲಾ ತಂಡಗಳ ಪಂದ್ಯಗಳನ್ನು ನೆದರ್‌ಲ್ಯಾಂಡ್ಸ್‌ನಲ್ಲಿ ಆಯೋಜಿಸಲಾಗುತ್ತದೆ.

ಮಹಿಳಾ ತಂಡ ಯಾವ ಗುಂಪಿನಲ್ಲಿ?

ಮಹಿಳಾ ಹಾಕಿ ತಂಡವು ಗ್ರೂಪ್ ಡಿ ನಲ್ಲಿ ಸ್ಥಾನ ಪಡೆದಿದೆ. ಈ ಗ್ರೂಪ್ ಡಿ ನಲ್ಲಿ ಚೀನಾ, ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ಸೇರಿವೆ. ಭಾರತದ ಮಹಿಳಾ ಹಾಕಿ ತಂಡದ ಪಂದ್ಯಗಳು ಕೂಡ ನೆದರ್ಲ್ಯಾಂಡ್ಸ್​ನಲ್ಲಿಯೇ ನಡೆಯಲಿವೆ.

ಯಾವ ತಂಡಗಳು ಯಾವ ಗುಂಪಿನಲ್ಲಿವೆ?

  • ಗುಂಪು ಎ: ನೆದರ್ಲ್ಯಾಂಡ್ಸ್, ಅರ್ಜೆಂಟೀನಾ, ನ್ಯೂಜಿಲೆಂಡ್ ಮತ್ತು ಜಪಾನ್
  • ಗುಂಪು ಬಿ: ಬೆಲ್ಜಿಯಂ, ಜರ್ಮನಿ, ಫ್ರಾನ್ಸ್ ಮತ್ತು ಮಲೇಷ್ಯಾ.
  • ಗುಂಪು ಸಿ: ಆಸ್ಟ್ರೇಲಿಯಾ, ಸ್ಪೇನ್, ಐರ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ
  • ಗುಂಪು ಡಿ: ಇಂಗ್ಲೆಂಡ್, ಭಾರತ, ಪಾಕಿಸ್ತಾನ ಮತ್ತು ವೇಲ್ಸ್

ಮಹಿಳಾ ವಿಭಾಗ

  • ಗುಂಪು ಎ: ನೆದರ್ಲ್ಯಾಂಡ್ಸ್, ಆಸ್ಟ್ರೇಲಿಯಾ, ಚಿಲಿ ಮತ್ತು ಜಪಾನ್.
  • ಗುಂಪು ಬಿ: ಅರ್ಜೆಂಟೀನಾ, ಜರ್ಮನಿ, ಅಮೆರಿಕ ಮತ್ತು ಸ್ಕಾಟ್ಲೆಂಡ್.
  • ಗುಂಪು ಸಿ: ಬೆಲ್ಜಿಯಂ, ಸ್ಪೇನ್, ನ್ಯೂಜಿಲೆಂಡ್ ಮತ್ತು ಐರ್ಲೆಂಡ್.
  • ಗುಂಪು ಡಿ: ಚೀನಾ, ಇಂಗ್ಲೆಂಡ್, ಭಾರತ ಮತ್ತು ದಕ್ಷಿಣ ಆಫ್ರಿಕಾ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಜೆ ನೀಡದೆ ಸಂಬಳವನ್ನೂ ಕಟ್ ಮಾಡಿದ್ದಕ್ಕೆ ಬ್ಯಾಂಕ್ ಮ್ಯಾನೇಜರ್​ಗೆ ಶೂಟ್ ಮಾಡಿ ಕೊಂದ ಸೆಕ್ಯುರಿಟಿ

ಗಾಜಿಯಾಬಾದ್, ಮಾರ್ಚ್ 18: ರಜೆ ನಿರಾಕರಿಸಿದ ಕಾರಣದಿಂದ ಮತ್ತು ಸಂಬಳವನ್ನು ಕಡಿತ ಮಾಡಿದ್ದರಿಂದ ಕೋಪಗೊಂಡ ಸೆಕ್ಯುರಿಟಿ ಗಾರ್ಡ್ ಬ್ಯಾಂಕ್ ಮ್ಯಾನೇಜರ್​ಗೆ ಗುಂಡಿಕ್ಕಿ ಕೊಂದಿದ್ದಾರೆ. ಗಾಜಿಯಾಬಾದ್‌ನ ಗಡಿಯ ಸಮೀಪವಿರುವ ಬಲರಾಮ್ ನಗರದಲ್ಲಿರುವ ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ (ಪಿಎಸ್‌ಬಿ) ಶಾಖೆಯಲ್ಲಿ ಸೋಮವಾರ (ಮಾರ್ಚ್ 17) ಮಧ್ಯಾಹ್ನ ಈ ಘಟನೆ ನಡೆದಿದೆ.

ಮೃತ ಬ್ಯಾಂಕ್ ಮ್ಯಾನೇಜರ್ ಅನ್ನು ಬಿಹಾರದ ಪಾಟ್ನಾದ ಅಭಿಷೇಕ್ ಕುಮಾರ್ ಎಂದು ಪೊಲೀಸರು ಗುರುತಿಸಿದ್ದಾರೆ. ಅವರು ಸಾಹಿಬಾಬಾದ್ ಬಳಿಯ ಭೋಪ್ರಾದಲ್ಲಿ ಎತ್ತರದ ಕಟ್ಟಡದಲ್ಲಿ ವಾಸಿಸುತ್ತಿದ್ದರು. ಶಂಕಿತ ಗಾರ್ಡ್ ಅನ್ನು ಹತ್ತಿರದ ಬಾಗ್‌ಪತ್ ಜಿಲ್ಲೆಯ ಮನ್ಸೂರ್‌ಪುರದ ನಿವಾಸಿ ರವೀಂದರ್ ಹೂಡಾ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಸೋಮವಾರ ಮಧ್ಯಾಹ್ನ 1.15ರ ಸುಮಾರಿಗೆ ನಡೆದಿದೆ. ಈ ಘಟನೆಯ ನಂತರ ಸೆಕ್ಯುರಿಟಿ ಗಾರ್ಡ್ ಮತ್ತು ಅವರ ಸಹಚರರು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಭಯೋತ್ಪಾದನೆ ಆರೋಪದಡಿ ಭಾರತದಲ್ಲಿ 6 ಉಕ್ರೇನಿಯನ್ನರು, ಓರ್ವ ಅಮೆರಿಕನ್ ಬಂಧನ

ಮಾಜಿ ಸೈನಿಕ ರವೀಂದ್ರ ಹೂಡಾ ಪಂಜಾಬ್ ಮತ್ತು ಸಿಂಧ್ ಬ್ಯಾಂಕಿನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಆದರೆ, ಸೋಮವಾರ (ಮಾರ್ಚ್ 16) ಮಧ್ಯಾಹ್ನ 1.15ರ ಸುಮಾರಿಗೆ ಅವರು ಮ್ಯಾನೇಜರ್ ಅಭಿಷೇಕ್ ಕುಮಾರ್ ಅವರ ಕ್ಯಾಬಿನ್‌ಗೆ ನುಗ್ಗಿದರು. ಅವರ ನಡುವೆ ಮಾತಿನ ಚಕಮಕಿ ನಡೆಯಿತು. ಸ್ವಲ್ಪ ಸಮಯದ ನಂತರ, ವ್ಯವಸ್ಥಾಪಕರ ಕೊಠಡಿಯಿಂದ ಗುಂಡೇಟಿನ ಶಬ್ದಗಳು ಕೇಳಿಬಂದವು. ಬ್ಯಾಂಕ್ ಸಿಬ್ಬಂದಿ ತಕ್ಷಣ ಪರಿಶೀಲಿಸಲು ಓಡಿಹೋದಾಗ ಮ್ಯಾನೇಜರ್ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ

Source link

ಒಡೆದ ತುಂಗಭದ್ರಾ ಎಡದಂಡೆ ಕಾಲುವೆ, ಸಿಕ್ತು ಬೃಹತ್ ಗಾತ್ರದ​ ಮೀನು

ಕೊಪ್ಪಳ, (ಮಾರ್ಚ್ 18): ನಾಲ್ಕೈದು ಜಿಲ್ಲೆಗಳ ಕೃಷಿ ಮತ್ತು ಕುಡಿಯುವ ನೀರಿನ ಜೀವನಾಡಿಯಾಗಿರುವ ತುಂಗಭದ್ರ ಜಲಾಶಯದ ಎಡದಂಡೆ ಮುಖ್ಯ ಕಾಲುವೆ ಭಾರಿ ಪ್ರಮಾಣದಲ್ಲಿ ಒಡೆದಿದೆ. ಕುಡಿಯುವ ನೀರಿನ ಉದ್ದೇಶಕ್ಕೆ ಕಾಲುವೆಗೆ ಜಲಾಶಯದ ಅಧಿಕಾರಿಗಳು ನೀರು ಬಿಟ್ಟಿದ್ದರು. ಒಟ್ಟು ನಾಲ್ಕು ಜಿಲ್ಲೆಗಳಿಗೆ ಕುಡಿಯುವ ನೀರಿಗಾಗಿ ಕಾಲುವೆಯಿಂದ ನೀರು ಬಿಡಲಾಗಿತ್ತು. ಆದರೆ ಕೊಪ್ಪಳ ತಾಲೂಕಿನ ಬಸಾಪುರ ಗ್ರಾಮದ ಬಳಿ ಕಾಲುವೆ ಒಡೆದಿದ್ದು, ನೀರು ಪಕ್ಕದ ಜಮೀನು ಹಾಗೂ ರೆಸಾರ್ಟ್ ಗಳಿಗೆ ನೀರು ನುಗ್ಗಿದೆ. ಇನ್ನು ಇದೇ ವೇಲೆ ಸ್ಥಳೀಯರ ಬಲೆಗೆ ಬೃಹತ್ ಮೀನು ಬಿದ್ದಿದೆ. ಸುಮಾರು 15ರಿಂದ 20 ಕೆಜಿ ತೂಕದ ಮೀನು ಸಿಕ್ಕಿದ್ದು, ಫುಲ್ ಖುಷ್ ಆಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link