All posts by nagaraj11081993

ರಜೆ ನೀಡದೆ ಸಂಬಳವನ್ನೂ ಕಟ್ ಮಾಡಿದ್ದಕ್ಕೆ ಬ್ಯಾಂಕ್ ಮ್ಯಾನೇಜರ್​ಗೆ ಶೂಟ್ ಮಾಡಿ ಕೊಂದ ಸೆಕ್ಯುರಿಟಿ

ರಜೆ ನೀಡದೆ ಸಂಬಳವನ್ನೂ ಕಟ್ ಮಾಡಿದ್ದಕ್ಕೆ ಬ್ಯಾಂಕ್ ಮ್ಯಾನೇಜರ್​ಗೆ ಶೂಟ್ ಮಾಡಿ ಕೊಂದ ಸೆಕ್ಯುರಿಟಿ

ಗಾಜಿಯಾಬಾದ್, ಮಾರ್ಚ್ 18: ರಜೆ ನಿರಾಕರಿಸಿದ ಕಾರಣದಿಂದ ಮತ್ತು ಸಂಬಳವನ್ನು ಕಡಿತ ಮಾಡಿದ್ದರಿಂದ ಕೋಪಗೊಂಡ ಸೆಕ್ಯುರಿಟಿ ಗಾರ್ಡ್ ಬ್ಯಾಂಕ್ ಮ್ಯಾನೇಜರ್​ಗೆ ಗುಂಡಿಕ್ಕಿ ಕೊಂದಿದ್ದಾರೆ. ಗಾಜಿಯಾಬಾದ್‌ನ ಗಡಿಯ ಸಮೀಪವಿರುವ ಬಲರಾಮ್ ನಗರದಲ್ಲಿರುವ ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ (ಪಿಎಸ್‌ಬಿ) ಶಾಖೆಯಲ್ಲಿ ಸೋಮವಾರ (ಮಾರ್ಚ್ 17) ಮಧ್ಯಾಹ್ನ ಈ ಘಟನೆ ನಡೆದಿದೆ.

ಮೃತ ಬ್ಯಾಂಕ್ ಮ್ಯಾನೇಜರ್ ಅನ್ನು ಬಿಹಾರದ ಪಾಟ್ನಾದ ಅಭಿಷೇಕ್ ಕುಮಾರ್ ಎಂದು ಪೊಲೀಸರು ಗುರುತಿಸಿದ್ದಾರೆ. ಅವರು ಸಾಹಿಬಾಬಾದ್ ಬಳಿಯ ಭೋಪ್ರಾದಲ್ಲಿ ಎತ್ತರದ ಕಟ್ಟಡದಲ್ಲಿ ವಾಸಿಸುತ್ತಿದ್ದರು. ಶಂಕಿತ ಗಾರ್ಡ್ ಅನ್ನು ಹತ್ತಿರದ ಬಾಗ್‌ಪತ್ ಜಿಲ್ಲೆಯ ಮನ್ಸೂರ್‌ಪುರದ ನಿವಾಸಿ ರವೀಂದರ್ ಹೂಡಾ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಸೋಮವಾರ ಮಧ್ಯಾಹ್ನ 1.15ರ ಸುಮಾರಿಗೆ ನಡೆದಿದೆ. ಈ ಘಟನೆಯ ನಂತರ ಸೆಕ್ಯುರಿಟಿ ಗಾರ್ಡ್ ಮತ್ತು ಅವರ ಸಹಚರರು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಭಯೋತ್ಪಾದನೆ ಆರೋಪದಡಿ ಭಾರತದಲ್ಲಿ 6 ಉಕ್ರೇನಿಯನ್ನರು, ಓರ್ವ ಅಮೆರಿಕನ್ ಬಂಧನ

ಮಾಜಿ ಸೈನಿಕ ರವೀಂದ್ರ ಹೂಡಾ ಪಂಜಾಬ್ ಮತ್ತು ಸಿಂಧ್ ಬ್ಯಾಂಕಿನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಆದರೆ, ಸೋಮವಾರ (ಮಾರ್ಚ್ 16) ಮಧ್ಯಾಹ್ನ 1.15ರ ಸುಮಾರಿಗೆ ಅವರು ಮ್ಯಾನೇಜರ್ ಅಭಿಷೇಕ್ ಕುಮಾರ್ ಅವರ ಕ್ಯಾಬಿನ್‌ಗೆ ನುಗ್ಗಿದರು. ಅವರ ನಡುವೆ ಮಾತಿನ ಚಕಮಕಿ ನಡೆಯಿತು. ಸ್ವಲ್ಪ ಸಮಯದ ನಂತರ, ವ್ಯವಸ್ಥಾಪಕರ ಕೊಠಡಿಯಿಂದ ಗುಂಡೇಟಿನ ಶಬ್ದಗಳು ಕೇಳಿಬಂದವು. ಬ್ಯಾಂಕ್ ಸಿಬ್ಬಂದಿ ತಕ್ಷಣ ಪರಿಶೀಲಿಸಲು ಓಡಿಹೋದಾಗ ಮ್ಯಾನೇಜರ್ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ

Source link

ಒಡೆದ ತುಂಗಭದ್ರಾ ಎಡದಂಡೆ ಕಾಲುವೆ, ಸಿಕ್ತು ಬೃಹತ್ ಗಾತ್ರದ​ ಮೀನು

ಕೊಪ್ಪಳ, (ಮಾರ್ಚ್ 18): ನಾಲ್ಕೈದು ಜಿಲ್ಲೆಗಳ ಕೃಷಿ ಮತ್ತು ಕುಡಿಯುವ ನೀರಿನ ಜೀವನಾಡಿಯಾಗಿರುವ ತುಂಗಭದ್ರ ಜಲಾಶಯದ ಎಡದಂಡೆ ಮುಖ್ಯ ಕಾಲುವೆ ಭಾರಿ ಪ್ರಮಾಣದಲ್ಲಿ ಒಡೆದಿದೆ. ಕುಡಿಯುವ ನೀರಿನ ಉದ್ದೇಶಕ್ಕೆ ಕಾಲುವೆಗೆ ಜಲಾಶಯದ ಅಧಿಕಾರಿಗಳು ನೀರು ಬಿಟ್ಟಿದ್ದರು. ಒಟ್ಟು ನಾಲ್ಕು ಜಿಲ್ಲೆಗಳಿಗೆ ಕುಡಿಯುವ ನೀರಿಗಾಗಿ ಕಾಲುವೆಯಿಂದ ನೀರು ಬಿಡಲಾಗಿತ್ತು. ಆದರೆ ಕೊಪ್ಪಳ ತಾಲೂಕಿನ ಬಸಾಪುರ ಗ್ರಾಮದ ಬಳಿ ಕಾಲುವೆ ಒಡೆದಿದ್ದು, ನೀರು ಪಕ್ಕದ ಜಮೀನು ಹಾಗೂ ರೆಸಾರ್ಟ್ ಗಳಿಗೆ ನೀರು ನುಗ್ಗಿದೆ. ಇನ್ನು ಇದೇ ವೇಲೆ ಸ್ಥಳೀಯರ ಬಲೆಗೆ ಬೃಹತ್ ಮೀನು ಬಿದ್ದಿದೆ. ಸುಮಾರು 15ರಿಂದ 20 ಕೆಜಿ ತೂಕದ ಮೀನು ಸಿಕ್ಕಿದ್ದು, ಫುಲ್ ಖುಷ್ ಆಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಹವಾಮಾನ ಬದಲಾವಣೆಯಿಂದ ಹೆಚ್ಚುತ್ತಿದೆ ಒಣ ಕೆಮ್ಮಿನ ಸಮಸ್ಯೆ: ತಡೆಗಟ್ಟಲು ಈ ಸಲಹೆ ಪರಿಣಾಮಕಾರಿ

ದೇಶದ ಹಲವು ರಾಜ್ಯಗಳಲ್ಲಿ ಇತ್ತೀಚಿನ ದಿನಗಳಲ್ಲಿ ಹವಾಮಾನದಲ್ಲಿ ತೀವ್ರ ಬದಲಾವಣೆ ಕಂಡುಬರುತ್ತಿದೆ. ಬೆಳಿಗ್ಗೆ ಬಿಸಿಲು ಸಂಜೆಯಾಗುತ್ತಿದ್ದಂತೆ ತಂಪಾದ ವಾತಾವರಣ ಇನ್ನು ಕೆಲವು ಕಡೆಗಳಲ್ಲಿ ಮಳೆ ಇರುವುದರಿಂದ ದೇಹಕ್ಕೆ ಹೊಂದಿಕೊಳ್ಳಲು ಕಷ್ಟವಾಗುತ್ತಿದೆ. ಈ ಪರಿಸ್ಥಿತಿಯಲ್ಲಿ ಅನೇಕರಲ್ಲಿ ಒಣ ಕೆಮ್ಮಿನ (Dry Cough) ಸಮಸ್ಯೆ ಹೆಚ್ಚಾಗುತ್ತಿದೆ. ಹವೆಯಲ್ಲಿ ಇರುವ ಧೂಳು, ಹೊಗೆ, ಸಣ್ಣ ಸಣ್ಣ ಕಣಗಳು ಮತ್ತು ಮಾಲಿನ್ಯ ಕೆಮ್ಮನ್ನು ಪ್ರೇರೇಪಿಸುತ್ತವೆ. ಅದರಲ್ಲಿಯೂ ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಆದರೆ ಈ ಸಮಸ್ಯೆಯನ್ನು ಸಮಯಕ್ಕೆ ಸರಿಯಾಗಿ ತಡೆಯದಿದ್ದರೆ ಇದು ದೀರ್ಘಕಾಲದವರೆಗೆ ಮುಂದುವರಿಯಬಹುದು ಮತ್ತು ದೈನಂದಿನ ಜೀವನದ ಚಟುವಟಿಕೆಗಳ ಮೇಲೆ ಪರಿಣಾಮ ಬೀರಬಹುದು. ಮಾತನಾಡಲು, ಕೆಲಸ ಮಾಡಲು ಮತ್ತು ನಿದ್ರೆ ಮಾಡಲು ಸಹ ತೊಂದರೆ ಉಂಟಾಗಬಹುದು. ಆದ್ದರಿಂದ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ಕೆಲವು ಸರಳ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದು ಅತ್ಯಗತ್ಯ.

ಒಣ ಕೆಮ್ಮು ಎಷ್ಟು ದಿನ ಇರುತ್ತದೆ?

ತಜ್ಞರ ಪ್ರಕಾರ, ಒಣ ಕೆಮ್ಮು ಒಮ್ಮೆ ಆರಂಭವಾದರೆ ಸಾಮಾನ್ಯವಾಗಿ ಒಂದು ಅಥವಾ ಎರಡು ವಾರಗಳ ವರೆಗೆ ಮುಂದುವರಿಯಬಹುದು. ಇದು ವ್ಯಕ್ತಿಯ ರೋಗನಿರೋಧಕ ಶಕ್ತಿ ಮತ್ತು ಕಾರಣಗಳ ಮೇಲೆ ಅವಲಂಬಿತವಾಗಿರುತ್ತದೆ. ಇದರ ಪ್ರಮುಖ ಲಕ್ಷಣಗಳಲ್ಲಿ ಗಂಟಲಿನಲ್ಲಿ ಕರಕರೆ ಅಥವಾ ಉರಿ ಭಾವನೆ, ನಿರಂತರ ಕೆಮ್ಮು, ಗಂಟಲು ಒಣಗಿದಂತಾಗುವುದು ಮತ್ತು ಮಾತನಾಡುವಾಗ ತೊಂದರೆ ಅನುಭವಿಸುವುದು ಸೇರಿವೆ. ಹಲವು ಸಂದರ್ಭಗಳಲ್ಲಿ ರಾತ್ರಿ ವೇಳೆ ಕೆಮ್ಮು ಹೆಚ್ಚಾಗುತ್ತದೆ, ಇದರಿಂದ ನಿದ್ರೆ ಸರಿಯಾಗಿ ಮಾಡಲು ಸಾಧ್ಯವಾಗುವುದಿಲ್ಲ. ಕೆಲವರಿಗೆ ಎದೆ ಭಾಗದಲ್ಲಿ ಸಣ್ಣ ಒತ್ತಡ ಅಥವಾ ಜಡತ್ವವೂ ಕಾಣಿಸಬಹುದು. ಒಣ ಕೆಮ್ಮು ದೀರ್ಘಕಾಲ ಮುಂದುವರಿದರೆ ಅಥವಾ ಜ್ವರ, ಉಸಿರಾಟದ ತೊಂದರೆ ಅಥವಾ ದುರ್ಬಲತೆ ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ. ಸಮಯಕ್ಕೆ ಸರಿಯಾದ ಚಿಕಿತ್ಸೆ ಪಡೆದರೆ ಸಮಸ್ಯೆಯನ್ನು ನಿಯಂತ್ರಿಸಬಹುದು.

ಇದನ್ನೂ ಓದಿ: ಪದೇ ಪದೇ ಒಣ ಕೆಮ್ಮು ಬರುವುದಕ್ಕೆ ಈ ಮನೆಮದ್ದನ್ನು ಪ್ರಯತ್ನಿಸಿ

ಹೇಗೆ ತಡೆಗಟ್ಟುವುದು?

ಒಣ ಕೆಮ್ಮಿನಿಂದ ಮುಕ್ತಿ ಪಡೆಯಲು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಅದಕ್ಕಾಗಿ ಸಮತೋಲನ ಆಹಾರ ಸೇವಿಸಬೇಕು, ವಿಟಮಿನ್ ಮತ್ತು ಖನಿಜಾಂಶಗಳು ಸಮೃದ್ಧವಾಗಿರಬೇಕು. ದಿನಪೂರ್ತಿ ಸಾಕಷ್ಟು ನೀರು ಕುಡಿಯುವುದು ಮತ್ತು ಗಂಟಲು ಒಣಗದಂತೆ ನೋಡಿಕೊಳ್ಳುವುದು ಅಗತ್ಯ. ತಣ್ಣನೆಯ ಪದಾರ್ಥಗಳು ಮತ್ತು ಧೂಳು-ಮಾಲಿನ್ಯದಿಂದ ದೂರವಿರಬೇಕು. ಹೊರಗೆ ಹೋಗುವಾಗ ಮಾಸ್ಕ್ ಧರಿಸುವುದು ಸಹಾಯಕವಾಗಬಹುದು. ಇದಲ್ಲದೆ, ಬಿಸಿ ನೀರಿನ ಆವಿಯನ್ನು ತೆಗೆದುಕೊಳ್ಳುವುದು ಮತ್ತು ಉಪ್ಪು ನೀರಿನಿಂದ ಗಾರ್ಗ್ಲ್ ಕೂಡ ಉಪಯುಕ್ತ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇರಾನ್ ಅನ್ನು ಸಂಪೂರ್ಣವಾಗಿ ಮುಗಿಸಿಬಿಡಬೇಕು; ಮತ್ತೆ ಸಿಡಿದೆದ್ದ ಟ್ರಂಪ್

ವಾಷಿಂಗ್ಟನ್, ಮಾರ್ಚ್ 18: “ಭಯೋತ್ಪಾದಕ ದೇಶವಾದ ಇರಾನಿನಲ್ಲಿ ಉಳಿದಿರುವುದನ್ನು ಎಲ್ಲವನ್ನೂ ನಾವು ಮುಗಿಸಿದರೆ ಮತ್ತು ಹಾರ್ಮುಜ್ ಜಲಸಂಧಿಯನ್ನು ಬಳಸುವ ದೇಶಗಳೂ ಅದಕ್ಕೆ ಕೈಜೋಡಿಸಿದರೆ ಏನಾಗುತ್ತದೆ ಎಂದು ನಾನು ಯೋಚಿಸುತ್ತಿದ್ದೇನೆ. ಈ ಮೂಲಕ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಇರಾನ್ ಅನ್ನು “ಮುಗಿಸಿಬಿಡಲು” ಸೂಚಿಸಿದ್ದಾರೆ. ಮತ್ತು ಅಮೆರಿಕ-ಇಸ್ರೇಲ್ ದಾಳಿಗಳ ನಂತರ ಟೆಹ್ರಾನ್ ಅದನ್ನು ಮುಚ್ಚಿದ ನಂತರ ಹಾರ್ಮುಜ್ ಜಲಸಂಧಿಯನ್ನು (Strait of Hormuz) ಅವಲಂಬಿಸಿರುವ ರಾಷ್ಟ್ರಗಳನ್ನು ಈ ಮಾರ್ಗವನ್ನು ಸುರಕ್ಷಿತಗೊಳಿಸುವಂತೆ ಒತ್ತಾಯಿಸಿದ್ದಾರೆ.

ಇರಾನ್‌ನ ಸುಪ್ರೀಂ ನಾಯಕ ಮತ್ತು ಇತರ 40 ಉನ್ನತ ಕಮಾಂಡರ್‌ಗಳನ್ನು ಹತ್ಯೆ ಮಾಡಿದ ನಂತರವೂ ಅಮೆರಿಕ ಮತ್ತು ಇಸ್ರೇಲ್ ಇರಾನ್‌ ಮೇಲೆ ಇನ್ನೂ ದಾಳಿ ನಡೆಸುವ ಯೋಚನೆಯಲ್ಲೇ ಇವೆ. ಯುದ್ಧ ನಡೆಯುತ್ತಿರುವ ಕಳೆದ 20 ದಿನಗಳಲ್ಲಿ ಇಸ್ರೇಲ್ ಮತ್ತು ಅಮೆರಿಕ ಆಡಳಿತವನ್ನು ದುರ್ಬಲಗೊಳಿಸಲು ಹೊಸ ಯೋಜನೆಯನ್ನು ರೂಪಿಸಿವೆ. ಈ ಯೋಜನೆಯು ಮೊದಲು ಇರಾನ್‌ನಲ್ಲಿ ದಂಗೆಯನ್ನು ನಿಗ್ರಹಿಸಿದ ಆರೋಪ ಹೊತ್ತಿರುವ ಇರಾನಿನ ನಾಯಕರನ್ನು ಕೊಲ್ಲುವ ಗುರಿಯನ್ನು ಹೊಂದಿದೆ. ಈಗಾಗಲೇ ಇಸ್ರೇಲ್ ಇರಾನಿನ ಸುಪ್ರೀಂ ಸೆಕ್ಯುರಿಟಿ ಕೌನ್ಸಿಲ್‌ನ ಮುಖ್ಯಸ್ಥ ಅಲಿ ಲಾರಿಜಾನಿ, ಬಸಿಜ್ ಫೋರ್ಸ್‌ನ ಮುಖ್ಯಸ್ಥ ಗುಲಾಮ್ ಸೊಲೈಮಾನಿ ಮತ್ತು ಗುಪ್ತಚರ ಸಚಿವ ಇಸ್ಮಾಯಿಲ್ ಕಟೈಬ್ ಅವರನ್ನು ಹತ್ಯೆ ಮಾಡಲಾಗಿದೆ.

ಇದನ್ನೂ ಓದಿ: ಟ್ರಂಪ್​ಗೆ ಭಾರೀ ಹೊಡೆತ; ಇರಾನ್ ಮೇಲಿನ ದಾಳಿಯನ್ನು ಖಂಡಿಸಿ ಅಮೆರಿಕದ ಅಧಿಕಾರಿ ರಾಜೀನಾಮೆ

ಇರಾನ್ ಜಾಗತಿಕ ಆರ್ಥಿಕತೆಯನ್ನು ನಿಯಂತ್ರಿಸುವ ಎಲ್ಲಾ ಇರಾನಿನ ನೆಲೆಗಳ ಮೇಲೆಯೂ ಅಮೆರಿಕ ದಾಳಿ ಮಾಡಲು ಉದ್ದೇಶಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದರ ಬಗ್ಗೆ ಸುಳಿವು ನೀಡಿದ್ದಾರೆ. ಹಾರ್ಮುಜ್ ಜಲಸಂಧಿಯನ್ನು ಅವಲಂಬಿಸಿರುವ ರಾಷ್ಟ್ರಗಳು ಪ್ರಮುಖ ಹಡಗು ಮಾರ್ಗವನ್ನು ಸುರಕ್ಷಿತಗೊಳಿಸುವ ಜವಾಬ್ದಾರಿಯನ್ನು ವಹಿಸಿಕೊಳ್ಳುವಂತೆ ಟ್ರಂಪ್ ಒತ್ತಾಯಿಸಿದ್ದಾರೆ. ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ಇರಾನ್ ವಿರುದ್ಧ ಜಂಟಿ ಮಿಲಿಟರಿ ದಾಳಿಯನ್ನು ಪ್ರಾರಂಭಿಸಿದ ಕೆಲವು ವಾರಗಳ ನಂತರ ಅವರ ಹೇಳಿಕೆಗಳು ಬಂದಿವೆ. ಈ ಯುದ್ಧದಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಸೇರಿದಂತೆ ಸುಮಾರು 1,300 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ನಮ್ಮನ್ನು ಕೇಳಿ ಈ ಯುದ್ಧ ಆರಂಭಿಸಿಲ್ಲ: ಟ್ರಂಪ್‌ಗೆ ನ್ಯಾಟೋ ರಾಷ್ಟ್ರಗಳ ಶಾಕ್; ಏಕಾಂಗಿಯಾದ ಅಮೆರಿಕ?

ಮಾರ್ಚ್ 1ರಿಂದ ಇರಾನ್ ಹಾರ್ಮುಜ್ ಜಲಸಂಧಿಯನ್ನು ಪರಿಣಾಮಕಾರಿಯಾಗಿ ಮುಚ್ಚಿದೆ. ಇದು ನಿರ್ಣಾಯಕ ತೈಲ ಸಾಗಣೆ ಕಾರಿಡಾರ್ ಅನ್ನು ಅಡ್ಡಿಪಡಿಸಿದೆ. ಟ್ರಂಪ್ ಚೀನಾ ಸೇರಿದಂತೆ ಮಿತ್ರರಾಷ್ಟ್ರಗಳು ಮಧ್ಯಪ್ರವೇಶಿಸಿ ಜಲಮಾರ್ಗವನ್ನು ಮತ್ತೆ ತೆರೆಯಲು ಸಹಾಯ ಮಾಡುವಂತೆ ಒತ್ತಾಯಿಸಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ 

Source link

ಭಾವೈಕ್ಯತೆ ಸಾರಿದ ವಿನೋದ್ ರಾಜ್: ಮಸೀದಿಗಳಲ್ಲಿ ಹಣ್ಣು ವಿತರಣೆ: ವಿಡಿಯೋ

ನಟ ವಿನೋದ್ ರಾಜ್ (Vinod Raj) ಅವರು ತಮ್ಮ ಸಾಮಾಜಿಕ ಕಾರ್ಯದಿಂದ ಆಗಾಗ್ಗೆ ಗಮನ ಸೆಳೆಯುತ್ತಿದ್ದಾರೆ. ತಾಯಿಯ ಹೆಸರಲ್ಲಿ ಆಸ್ಪತ್ರೆ ನಿರ್ಮಾಣ, ಕೋವಿಡ್ ಸಮಯದಲ್ಲಿ ಊರಿನ ಸ್ವಚ್ಛತೆ ಇನ್ನೂ ಹಲವು ಸಾಮಾಜಿಕ ಕಾರ್ಯಗಳನ್ನು ಮಾಡಿರುವ ನಟ ವಿನೋದ್ ರಾಜ್, ಇದೀಗ ಭಾವೈಕ್ಯತೆಯನ್ನು ಸಾರಿದ್ದಾರೆ. ವಿನೋದ್ ರಾಜ್ ಅವರು ರಂಜಾನ್​​ನ ಸಮಯದಲ್ಲಿ ಮಸೀದಿಗಳಲ್ಲಿ ಹಣ್ಣು-ಹಂಪಲು ವಿತರಣೆ ಮಾಡಿದ್ದು, ಮುಸ್ಲಿಂ ಗೆಳೆಯರೊಡನೆ ಮಾತನಾಡಿ ಎಲ್ಲರೂ ಒಟ್ಟಾಗಿ ಬಾಳೋಣ ಎಂದಿದ್ದಾರೆ. ವಿನೋದ್ ಅವರು ಮಸೀದಿಗಳಲ್ಲಿ ಹಣ್ಣು-ಹಂಪು ವಿತರಣೆ ಮಾಡಿರುವ ವಿಡಿಯೋಗಳು ಇಲ್ಲಿವೆ ನೋಡಿ….

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ದೀರ್ಘಾಯುಷ್ಯ ನಿಮ್ಮದಾಗಬೇಕೇ? ಹಾಗಿದ್ರೆ ಪಾಲಿಸಿ ಈ ಸಲಹೆ

ಹಿಂದೆಲ್ಲಾ ನಮ್ಮ ಹಿರಿಯರು ನೂರು ಕಾಲ ಆರೋಗ್ಯವಂತರಾಗಿ ಬದುಕು ಸಾಗಿಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಬಹುತೇಕ ಹೆಚ್ಚಿನವರು ಸಣ್ಣ ವಯಸ್ಸಿನಲ್ಲಿಯೇ ಆರೋಗ್ಯ ಸಮಸ್ಯೆಗಳಿಗೆ ಗುರಿಯಾಗುತ್ತಿದ್ದಾರೆ. ಇದಕ್ಕೆಲ್ಲಾ ಮುಖ್ಯ ಕಾರಣವೇ ಕಳಪೆ ಜೀವನಶೈಲಿ (Lifestyle) ಮತ್ತು ಅನಾರೋಗ್ಯಕರ ಆಹಾರ ಪದ್ಧತಿ. ಹೀಗಿರುವಾಗ ಆರೋಗ್ಯವಂತರಾಗಿ ನೂರು ಕಾಲ ಜೀವಿಸಬೇಕು ಎಂಬ ಬಯಕೆ ನಿಮಗಿದ್ದರೆ, ಜೀವನಶೈಲಿಯಲ್ಲಿ ಈ ಕೆಲವೊಂದಿಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಿ. ಇದರಿಂದ ಖಂಡಿತವಾಗಿಯೂ ದೀರ್ಘಾಯುಷ್ಯ ನಿಮ್ಮದಾಗುತ್ತದೆ.

ದೀರ್ಘಾಯುಷ್ಯ ನಿಮ್ಮದಾಗಲು ಈ ಸಲಹೆ ಪಾಲಿಸಿ:

ಸಮತೋಲಿತ ಆಹಾರ ಸೇವಿಸಿ: ನೀವು ಏನು ತಿನ್ನುತ್ತೀರೋ ಅದು ನಿಮ್ಮ ಆರೋಗ್ಯದ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಹಾಗಾಗಿ ಅನಾರೋಗ್ಯಕರ ಆಹಾರವನ್ನು ಸೇವನೆ ಮಾಡುವುದನ್ನು ತಪ್ಪಿಸಿ, ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ಪ್ರೋಟೀನ್‌ಗಳಿಂದ ಸಮೃದ್ಧವಾಗಿರುವ ಸಮತೋಲಿತ ಆಹಾರಗಳನ್ನು ಸೇವನೆ ಮಾಡಿ.

ನಿಯಮಿತವಾಗಿ ವ್ಯಾಯಾಮ ಮಾಡಿ:ನಿಯಮಿತ ವ್ಯಾಯಾಮವು ನಿಮ್ಮ ದೇಹವನ್ನು ಬಲಿಷ್ಠವಾಗಿ ಮತ್ತು ಸದೃಢವಾಗಿಡುವುದಲ್ಲದೆ, ನಿಮ್ಮ ಮೆದುಳಿಗೆ ಸಹ ಒಳ್ಳೆಯದು. ವ್ಯಾಯಾಮವು ಒತ್ತಡವನ್ನು ಕಡಿಮೆ ಮಾಡಲು, ನಿದ್ರೆಯನ್ನು ಸುಧಾರಿಸಲು ಮತ್ತು ಹೃದಯ ಕಾಯಿಲೆ, ಮಧುಮೇಹ ಮತ್ತು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪ್ರತಿದಿನ ಕೇವಲ 5 ನಿಮಿಷಗಳ ವ್ಯಾಯಾಮವು ನಿಮ್ಮ ಆಯುಷ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಸಾಕಷ್ಟು ನಿದ್ರೆ ಪಡೆಯಿರಿ: ನಿದ್ರೆಯು ನಿಮ್ಮ ದೇಹವನ್ನು ಚೇತರಿಸಿಕೊಳ್ಳಲು ಮತ್ತು ಶಕ್ತಿಯನ್ನು ತುಂಬಲು ಸಮಯ ನೀಡುತ್ತದೆ. ಪ್ರತಿ ರಾತ್ರಿ 7-8 ಗಂಟೆಗಳ ನಿದ್ರೆ ಮಾಡಿ. ನಿದ್ರೆಯ ಕೊರತೆಯು ತೂಕ ಹೆಚ್ಚಾಗಲು ಮತ್ತು ಕೆಟ್ಟ ಮನಸ್ಥಿತಿಗೆ ಕಾರಣವಾಗಬಹುದು. ಆದ್ದರಿಂದ ಸಾಕಷ್ಟು ನಿದ್ರೆಯನ್ನು ಪಡೆಯಿರಿ

ಒತ್ತಡವನ್ನು ಕಡಿಮೆ ಮಾಡಿ: ಇತ್ತೀಚಿನ ದಿನಗಳಲ್ಲಿ ಒತ್ತಡವು ಸಾಮಾನ್ಯವಾಗಿಬಿಟ್ಟಿದೆ. ಈ ಒತ್ತಡ ಹಲವಾರು ಕಾಯಿಲೆಗಳಿಗೆ ಕಾರಣವಾಗಬಹುದು. ಆದ್ದರಿಂದ ಆರೋಗ್ಯವಂತರಾಗಿ ಹೆಚ್ಚು ಕಾಲ ಬಾಳಲು ಒತ್ತಡಮುಕ್ತರಾಗಿರಿ. ಈ ಒತ್ತಡವನ್ನು ಕಡಿಮೆ ಮಾಡಲು, ಯೋಗ, ಧ್ಯಾನ ಅಥವಾ ಆಳವಾದ ಉಸಿರಾಟದ ವ್ಯಾಯಾಮಗಳನ್ನು ಅಭ್ಯಾಸ ಮಾಡಿ.

ಸಕಾರಾತ್ಮಕವಾಗಿ ಯೋಚಿಸಿ: ಸಕಾರಾತ್ಮಕವಾಗಿ ಯೋಚಿಸುವುದರಿಂದ ನೀವು ಹೆಚ್ಚು ಕಾಲ ಬದುಕಲು ಸಹಾಯವಾಗುತ್ತದೆ. ಹಲವಾರು ಅಧ್ಯಯನಗಳು ಸಕಾರಾತ್ಮಕವಾಗಿರುವುದು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ತೋರಿಸಿವೆ. ನೀವು ಜೀವನದ ಬಗ್ಗೆ ಹೆಚ್ಚು ಸಕಾರಾತ್ಮಕ ಮತ್ತು ಆಶಾವಾದಿಗಳಾಗಿದ್ದಷ್ಟೂ, ನೀವು ಕಡಿಮೆ ಅನಾರೋಗ್ಯವನ್ನು ಅನುಭವಿಸುತ್ತೀರಿ ಮತ್ತು  ಹೆಚ್ಚು ಕಾಲ ಆರೋಗ್ಯವಂತರಾಗಿ ಬದುಕುತ್ತೀರಿ.

ಇದನ್ನೂ ಓದಿ: ಪ್ರತಿದಿನ ದಾಳಿಂಬೆ ಹಣ್ಣು ತಿನ್ನುವುದರಿಂದ ಲಭಿಸುವ ಪ್ರಯೋಜನಗಳೇನು ಗೊತ್ತಾ?

ಧೂಮಪಾನ ಮತ್ತು ಮದ್ಯಪಾನ ತ್ಯಜಿಸಿ: ಧೂಮಪಾನ ಮತ್ತು ಅತಿಯಾದ ಮದ್ಯಪಾನವು ನಿಮ್ಮ ಆರೋಗ್ಯಕ್ಕೆ ತುಂಬಾ ಹಾನಿಕಾರಕ. ಈ ಅಭ್ಯಾಸಗಳು ಹೃದ್ರೋಗ, ಕ್ಯಾನ್ಸರ್, ಪಾರ್ಶ್ವವಾಯು ಮತ್ತು ಇತರ ಗಂಭೀರ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತವೆ ಮತ್ತು ಆಯುಷ್ಯವನ್ನೂ ಕಡಿಮೆ ಮಾಡುತ್ತದೆ. ಆದ್ದರಿಂದ ಧೂಮಪಾನವನ್ನು ತ್ಯಜಿಸಿ.

ಸಾಮಾಜಿಕ ಸಂಪರ್ಕದಲ್ಲಿರಿ: ಸಾಮಾಜಿಕ ಸಂಪರ್ಕಗಳನ್ನು ಹೊಂದಿರುವುದು ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು. ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಮಯ ಕಳೆಯಿರಿ. ಈ ಅಭ್ಯಾಸವು ನಿಮ್ಮ ಮನಸ್ಥಿತಿಯನ್ನು ಸುಧಾರಿಸುತ್ತದೆ.

ಸಾಧ್ಯವಾದಷ್ಟು ನಡೆಯಿರಿ: ಪ್ರತಿನಿತ್ಯ ವಾಕಿಂಗ್‌ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಿ.  ನಡೆಯುವುದು ದೇಹವನ್ನು ಉತ್ತಮ ಸಮತೋಲನದಲ್ಲಿಡುತ್ತದೆ, ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ ಮತ್ತು ಮನಸ್ಥಿತಿಯೂ ಉತ್ತಮವಾಗಿರುತ್ತದೆ.‌

ನಿಯಮಿತ ವೈದ್ಯಕೀಯ ತಪಾಸಣೆ: ನಿಮ್ಮ ಆರೋಗ್ಯವನ್ನು ಮೇಲ್ವಿಚಾರಣೆ ಮಾಡಲು ಮತ್ತು ಯಾವುದೇ ಕಾಯಿಲೆಗಳಿಗೆ ಸಕಾಲಿಕ ಚಿಕಿತ್ಸೆ ಪಡೆಯಲು ವೈದ್ಯರೊಂದಿಗೆ ನಿಯಮಿತ ಸಮಾಲೋಚನೆಗಳು ಮತ್ತು ತಪಾಸಣೆಗಳು ಅತ್ಯಗತ್ಯ. ಇದು ದೀರ್ಘ ಮತ್ತು ಆರೋಗ್ಯಕರ ಜೀವನವನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಲೋಪ ಆರೋಪ ಬೆನ್ನಲ್ಲೇ ಜಿಬಿಎ ಮತದಾರರ ಪಟ್ಟಿ ಆಕ್ಷೇಪಣೆಗೆ ನೀಡಿದ್ದ ಕಾಲಾವಕಾಶ ವಿಸ್ತರಣೆ

ಬೆಂಗಳೂರು, ಮಾರ್ಚ್​ 18: ಐದು ನಗರ ಪಾಲಿಕೆಗಳ ವಾರ್ಡ್‌ವಾರು ಮತದಾರರ ತಾತ್ಕಾಲಿಕ ಪಟ್ಟಿಯನ್ನು ಪರಿಷ್ಕರಿಸುವ ಪ್ರಕ್ರಿಯೆಯಲ್ಲಿ ನಾಗರಿಕರಿಗೆ ನೀಡಿದ್ದ ದೂರು ಹಾಗೂ ಆಕ್ಷೇಪಣೆ ಸಲ್ಲಿಸುವ ಅವಧಿಯನ್ನು ಇದೀಗ ಮುಂದೂಡಲಾಗಿದೆ. ಜನರು ತಮ್ಮ ಅಸಮ್ಮತಿ ಅಥವಾ ತಿದ್ದುಪಡಿ ಸಲಹೆಗಳನ್ನು ಮಾರ್ಚ್ 30ರವರೆಗೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಮಾಧ್ಯಮ ಪ್ರಕಟಣೆ ಹೊರಡಿಸಿದೆ.

ಈ ಮೊದಲು ಮಾರ್ಚ್​ 20ರವರೆಗೆ ಮಾತ್ರ ಕಾಲಾವಕಾಶ ನಿಗದಿಯಾಗಿತ್ತು. ಆದರೆ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ನಡೆದ ಸಭೆಯಲ್ಲಿ ಇನ್ನಷ್ಟು ಸಮಯ ನೀಡುವಂತೆ ಒತ್ತಾಯಿಸಿದರು. ಈ ಹಿನ್ನೆಲೆಯಲ್ಲಿ ಸಂಬಂಧಿತ ಅಧಿಕಾರಿಗಳು ರಾಜ್ಯ ಚುನಾವಣಾ ಆಯೋಗಕ್ಕೆ ಅವಧಿ ವಿಸ್ತರಣೆಗಾಗಿ ಮನವಿ ಸಲ್ಲಿಸಿದ್ದರು. ಆ ಮನವಿಯನ್ನು ಪರಿಶೀಲಿಸಿದ ಆಯೋಗವು ಜನಸಾಮಾನ್ಯರ ಅನುಕೂಲವನ್ನು ಗಮನದಲ್ಲಿಟ್ಟು ದೂರು ಮತ್ತು ಆಕ್ಷೇಪಣೆ ಸಲ್ಲಿಸಲು ನೀಡಿದ್ದ ಕಾಲಾವಕಾಶವನ್ನು ಮಾರ್ಚ್​ 30ರವರೆಗೆ ವಿಸ್ತರಣೆ ಮಾಡಿದೆ.

ಮಾಧ್ಯಮ ಪ್ರಕಟಣೆಯಲ್ಲೇನಿದೆ?

ಗ್ರೇಟರ್ ಬೆಂಗಳೂರು ಪ್ರಾಧಿಕಾರದ 5 ನಗರ ಪಾಲಿಕೆಗಳ ವಾರ್ಡುವಾರು ಪರಿಷ್ಕೃತ ಕರಡು ಮತದಾರರ ಪಟ್ಟಿಯು ಮಾರ್ಚ್​ 09 ರಂದು ಪ್ರಕಟಿಸಲಾಗಿತ್ತು. ಆದರೆ ಅದೇ ದಿನ ನಡೆದ ಸಭೆಯಲ್ಲಿ ರಾಜಕೀಯ ಪಕ್ಷಗಳು ಮತದಾರರ ಪಟ್ಟಿಯನ್ನು ಪರಿಶೀಲಿಸಲು ಹಾಗೂ ದೂರು ಆಕ್ಷೇಪಣೆಯನ್ನು ಸಲ್ಲಿಸಲು ಹೆಚ್ಚುವರಿ ಕಾಲಾವಕಾಶ ಬೇಕೆಂದು ಕೋರಿದ್ದರು. ಹೀಗಾಗಿ ದೂರು ಮತ್ತು ಆಕ್ಷೇಪಣೆ ಸಲ್ಲಿಸಲು ಮಾರ್ಚ್​ 20 ರವರೆಗೆ ಕಾಲಾವಕಾಶ ನೀಡುವಂತೆ ಕೋರಲಾಗಿತ್ತು.

ಇದನ್ನೂ ಓದಿ: ಜಿಬಿಎ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸುವುದು ಹೇಗೆ? ಹಂತ ಹಂತವಾದ ಮಾಹಿತಿ ಇಲ್ಲಿದೆ

Search by EPIC ಹಾಗೂ Search by Name ಮೂಲಕ ಮತದಾರರು ತಮ್ಮ ಹೆಸರು ಹಾಗೂ ಇನ್ನಿತರೆ ಮಾಹಿತಿಯನ್ನು ಪರಿಶೀಲಿಸಿಕೊಂಡು ದೂರು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಇನ್ನಷ್ಟು ಸಮಯಾವಕಾಶದ ಅಗತ್ಯವಿರುವುದಾಗಿ ಸಾರ್ವಜನಿಕರು, ರಾಜಕೀಯ ಪಕ್ಷಗಳಿಂದ ಹಾಗೂವಸತಿ ಕಲ್ಯಾಣ ಸಂಘದವರಿಂದ ದೂರವಾಣಿ ಮುಖಾಂತರ ಕೋರುತ್ತಿರುವುದರಿಂದ ದೂರು ಮತ್ತು ಆಕ್ಷೇಪಣೆಯನ್ನು ಸಲ್ಲಿಸಲು ಹೆಚ್ಚುವರಿ ಕಾಲಾವಕಾಶ ಬೇಕೆಂದು ಕೋರಿರುವ ಹಿನ್ನಲೆ ದೂರು ಮತ್ತು ಆಕ್ಷೇಪಣೆ ಸಲ್ಲಿಸಲು ಮಾರ್ಚ್​​ 30ರವರೆಗೆ ಕಾಲಾವಕಾಶ ನೀಡುವಂತೆ ಕೋರಲಾಗಿತ್ತು. ಅದರಂತೆಯೇ ಇದೀಗ ರಾಜ್ಯ ಚುನಾವಣಾ ಆಯೋಗ ಅನುಮತಿ ನೀಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

IPL 2026: ಐಪಿಎಲ್ ಫೈನಲ್​ಗಳಲ್ಲಿ ಸೋಲಿಲ್ಲದ ಸರದಾರರು

Source link

‘ಧುರಂಧರ್ 2’ ಪ್ರೀಮಿಯರ್ ರದ್ದು, ‘ಉಸ್ತಾದ್ ಭಗತ್ ಸಿಂಗ್​​’ಗೆ ಭರ್ಜರಿ ಲಾಭ

ರಣ್ವೀರ್ ಸಿಂಗ್ (Ranveer Singh) ನಟನೆಯ ‘ಧುರಂಧರ್ 2’ ಸಿನಿಮಾ ನಾಳೆ (ಮಾರ್ಚ್ 19) ಬಿಡುಗಡೆ ಆಗುತ್ತಿದೆ. ಆದರೆ ಇಂದಿನಿಂದಲೇ ದೇಶದ ಹಲವು ನಗರಗಳಲ್ಲಿ ಸಿನಿಮಾದ ಪೇಯ್ಡ್ ಪ್ರೀಮಿಯರ್ ಶೋ ಆಯೋಜಿಸಲಾಗಿದೆ. ದುಬಾರಿ ಬೆಲೆಯ ಈ ಪೇಯ್ಡ್ ಪ್ರೀಮಿಯರ್ ಶೋಗಳ ಟಿಕೆಟ್ ಬೆಲೆಯನ್ನು ನಾಲ್ಕೈದು ಪಟ್ಟು ಹೆಚ್ಚಿನ ಬೆಲೆಗೆ ಮಾರಾಟ ಸಹ ಮಾಡಲಾಗಿದೆ. ಆದರೆ ಕೊನೆಯ ಕ್ಷಣದಲ್ಲಿ ಸೆನ್ಸಾರ್​​ನಿಂದ ಸಮಸ್ಯೆ ಎದುರಾದ ಕಾರಣ ಇದೀಗ ಭಾರತದಲ್ಲಿ ಹಿಂದಿ ಪ್ರೀಮಿಯರ್ ಶೋ ಹೊರತಾಗಿ ಇತರೆ ಭಾಷೆಯ ಎಲ್ಲ ಪ್ರೀಮಿಯರ್ ಶೋ ಪ್ರದರ್ಶನವನ್ನು ರದ್ದು ಮಾಡಲಾಗಿದೆ. ಆದರೆ ಅಮೆರಿಕದಲ್ಲಿ ಸಿನಿಮಾದ ಎಲ್ಲ ಪೇಯ್ಡ್ ಪ್ರೀಮಿಯರ್ ಶೋ ರದ್ದು ಮಾಡಲಾಗಿದೆ ಎನ್ನಲಾಗುತ್ತಿದೆ. ಇದು ಪವನ್ ಕಲ್ಯಾಣ್​​ರ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾಕ್ಕೆ ಭರ್ಜರಿ ಲಾಭ ಮಾಡಿಕೊಡಲಿದೆ.

ಭಾರತದಲ್ಲಿ ‘ಧುರಂಧರ್ 2’ ಸಿನಿಮಾದ ಕನ್ನಡ, ತೆಲಗು, ತಮಿಳು ಭಾಷೆಯ ಪೇಯ್ಡ್ ಪ್ರೀಮಿಯರ್ ಶೋಗಳನ್ನು ಮಾತ್ರವೇ ಸದ್ಯಕ್ಕೆ ರದ್ದು ಮಾಡಲಾಗಿದೆ. ಸೆನ್ಸಾರ್ ಮಂಡಳಿಯು ಸುಮಾರು ಆರು ನಿಮಿಷದ ಕಟ್​​ಗಳನ್ನು ಸಿನಿಮಾಕ್ಕೆ ಸೂಚಿಸಿರುವ ಕಾರಣ ಕೊನೆಯ ಕ್ಷಣದಲ್ಲಿ ಸಿನಿಮಾವನ್ನು ಮತ್ತೆ ಟ್ರಿಮ್ ಮಾಡಲಾಗುತ್ತಿದೆ. ಈ ಟ್ರಿಮ್ಮಿಂಗ್ ಕಾರ್ಯವನ್ನು ಹಿಂದಿ ಆವೃತ್ತಿಗೆ ಮಾತ್ರವೇ ಮಾಡಲಾಗುತ್ತಿದ್ದು, ದೇಶದಾದ್ಯಂತ ಹಿಂದಿ ಆವೃತ್ತಿಯ ಪೇಯ್ಡ್ ಪ್ರೀಮಿಯರ್ ಅನ್ನು ಮಾತ್ರವೇ ಪ್ರದರ್ಶಿಸಲಾಗುತ್ತಿದೆ.

ಸಿನಿಮಾದ ಕಂಟೆಂಟ್ ನಲ್ಲಿ ಕೊನೆಯ ಕ್ಷಣದಲ್ಲಿ ಬಂದ ಈ ಸಮಸ್ಯೆಯಿಂದಾಗಿ ಅಮೆರಿಕದ ಎಲ್ಲ ಪೇಯ್ಡ್ ಪ್ರೀಮಿಯರ್ ಶೋ ರದ್ದಾಗಲಿದೆ ಎನ್ನಲಾಗುತ್ತಿದೆ. ಇದರಿಂದಾಗಿ ನಾಳೆ (ಮಾರ್ಚ್ 19) ಬಿಡುಗಡೆ ಆಗಲಿರುವ ಪವನ್ ಕಲ್ಯಾಣ್ ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾದ ಪ್ರೀಮಿಯರ್ ಶೋಗೆ ಭಾರಿ ಸಹಕಾರಿ ಆಗಲಿದೆ.

ಇದನ್ನೂ ಓದಿ:‘ಧುರಂಧರ್ 2’ ಮೊದಲ ವಿಮರ್ಶೆ: ಹಾಲಿವುಡ್ ನಿರ್ದೇಶಕರು ನೋಡಬೇಕು ಎಂದ ಆರ್​ಜಿವಿ

‘ಧುರಂಧರ್ 2’ ಸಿನಿಮಾದ ಕಾರಣದಿಂದಾಗಿ ‘ಉಸ್ತಾದ್ ಭಗತ್ ಸಿಂಗ್’ ದೇಶದಲ್ಲಿ ಮಾತ್ರವಲ್ಲದೆ ಅಮೆರಿಕದಲ್ಲಿಯೂ ಸಹ ಸಾಕಷ್ಟು ಸಮಸ್ಯೆ ಎದುರಿಸಿತ್ತು. ಅಮೆರಿಕ ವಿಶೇಷವಾಗಿ ನಾರ್ತ್ ಅಮೆರಿಕದಲ್ಲಿ ಭರ್ಜರಿ ಕಲೆಕ್ಷನ್ ಅನ್ನು ‘ಉಸ್ತಾದ್ ಭಗತ್ ಸಿಂಗ್’ ನಿರೀಕ್ಷಿಸಿತ್ತು. ಆದರೆ ಅಲ್ಲಿಯೂ ಸಹ ‘ಧುರಂಧರ್ 2’ ಭಾರಿ ಸ್ಪರ್ಧೆ ಒಡ್ಡಿತ್ತು, ಇದರಿಂದಾಗಿ ಪ್ರೀಮಿಯರ್ ಶೋಗಳಿಗೆ ನಿರೀಕ್ಷಿತ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಆದರೆ ಈಗ ‘ಧುರಂಧರ್ 2’ ಸಿನಿಮಾದ ಪ್ರೀಮಿಯರ್ ಶೋ ರದ್ದಾಗಿದ್ದು, ಅದರ ಲಾಭ ‘ಉಸ್ತಾದ್ ಭಗತ್ ಸಿಂಗ್’ಗೆ ಸಿಗಲಿದೆ.

ಪವನ್ ಕಲ್ಯಾಣ್, ಶ್ರೀಲೀಲಾ, ರಾಶಿ ಖನ್ನಾ ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಅಸಲಿಗೆ ಮುಂದಿನ ವಾರ ಬಿಡುಗಡೆ ಆಗಬೇಕಿತ್ತು. ಆದರೆ ‘ಟಾಕ್ಸಿಕ್’ ಸಿನಿಮಾದ ಬಿಡುಗಡೆ ದಿನಾಂಕವನ್ನು ಕೊನೆಯ ಕ್ಷಣದಲ್ಲಿ ಬದಲಾವಣೆ ಮಾಡಿದ ಕಾರಣಕ್ಕೆ, ‘ಉಸ್ತಾದ್ ಭತ್ ಸಿಂಗ್’ ಮಾರ್ಚ್ 19ರಂದೇ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿತು. ಆದರೆ ಈಗ ‘ಧುರಂಧರ್ 2’ ಸಿನಿಮಾದಿಂದ ಭಾರಿ ಸ್ಪರ್ಧೆಯಲ್ಲಿ ಎದುರಿಸುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Ugadi 2026: ಯುಗಾದಿ ಹಬ್ಬಕ್ಕೆ ಮನೆಯಲ್ಲಿಯೇ ಮಾಡಿ ಆರೋಗ್ಯಕರ, ರುಚಿಕರ ಕಾಯಿ ಹೋಳಿಗೆ

ನಾಡಿನೆಲ್ಲೆಡೆ ಯುಗಾದಿ (Ugadi) ಹಬ್ಬದ ಸಂಭ್ರಮ ಮನೆ ಮಾಡಿದೆ. ಯುಗಾದಿ ಹಬ್ಬ ಹಿಂದೂಗಳ ಪಾಲಿನ ವರ್ಷದ ಮೊದಲ ಹಬ್ಬ.  ಹೊಸ ವರ್ಷದ ಆರಂಭವನ್ನು ಸೂಚಿಸುವ ಈ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಈ ಹಬ್ಬದ ದಿನ ಹೊಸ ಬಟ್ಟೆ ತೊಟ್ಟು, ಮನೆಯನ್ನು ತಳಿರು ತೋರಣ, ರಂಗೋಲಿಗಳಿಂದ ಅಲಂಕರಿಸಿ, ಪ್ರತಿಯೊಬ್ಬರೂ ಬೇವು ಬೆಲ್ಲವನ್ನು ಹಂಚುತ್ತಾರೆ. ಬೇವು ಬೆಲ್ಲದ ಜೊತೆ ರುಚಿ ರುಚಿಯಾದ ಬಗೆಬಗೆ ಅಡುಗೆಗಳನ್ನೂ ಮಾಡಲಾಗುತ್ತದೆ. ಅದರಲ್ಲೂ ಯುಗಾದಿ ಹಬ್ಬಕ್ಕೆ ಒಬ್ಬಟ್ಟು ಇರಲೇಬೇಕು. ಸಾಮಾನ್ಯವಾಗಿ ಒಬ್ಬಟ್ಟನ್ನು ಮೈದಾ ಹಿಟ್ಟು ಬಳಸಿ ಮಾಡಲಾಗಿತ್ತದೆ.  ಹೀಗಿರುವಾಗ ಈ ಬಾರಿಯ ಹಬ್ಬಕ್ಕೆ ಆರೋಗ್ಯಕರ ರೀತಿಯಲ್ಲಿ ಒಬ್ಬಟ್ಟು ಮಾಡಬೇಕು ಅಂತಿದ್ರೆ,  ಕಾಯಿ ಒಬ್ಬಟ್ಟನ್ನು ತಯಾರಿಸಿ, ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿ.

ಯುಗಾದಿ ಹಬ್ಬಕ್ಕೆ ಮಾಡಿ ಕಾಯಿ ಒಬ್ಬಟ್ಟು:

ಯುಗಾದಿ ಹಬ್ಬದಂದು ಬೇವು ಬೆಲ್ಲ ಎಷ್ಟು ಮುಖ್ಯವೋ ಒಬ್ಬಟ್ಟು ಕೂಡ ಅಷ್ಟೇ ಮುಖ್ಯ. ಈ ಬಾರಿಯ ಹಬ್ಬಕ್ಕೆ ಮೈದಾ ಹಿಟ್ಟನ್ನು ಬಳಸಿ ಹೋಳಿಗೆ ತಯಾರಿಸುವ ಬದಲು, ಗೋಧಿ ಹಿಟ್ಟಿನಿಂದ ಆರೋಗ್ಯಕರ ಕಾಯಿ ಒಬ್ಬಟ್ಟನ್ನು ತಯಾರಿಸಿ. ಈ ಹೆಲ್ತಿ ರೆಸಿಪಿಯನ್ನು poojaga_food ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಶೇರ್‌ ಮಾಡಲಾಗಿದೆ.

ಕಾಯಿ ಒಬ್ಬಟ್ಟು ಮಾಡಲು ಬೇಕಾಗಿರುವ ಸಾಮಾಗ್ರಿಗಳು:

1 ½ ಕಪ್‌ ಗೋಧಿ ಹಿಟ್ಟು, ಅರಶಿನ, ಉಪ್ಪು, ಎಣ್ಣೆ, 1 ½ ಕಪ್‌ ಬೆಲ್ಲ, 2 ½ ಕಪ್‌ ತೆಂಗಿನಕಾಯಿ ತುರಿ, ಏಲಕ್ಕಿ ಪುಡಿ

ವಿಡಿಯೋ ಇಲ್ಲಿದೆ ನೋಡಿ:‌

ಇದನ್ನೂ ಓದಿ: ಯುಗಾದಿ ಹಬ್ಬದಂದು ಬೇವು-ಬೆಲ್ಲ ಹಂಚುವುದರ ಹಿಂದಿನ ಆಧ್ಯಾತ್ಮಿಕ, ವೈಜ್ಞಾನಿಕ ಮಹತ್ವವೇನು?

ಕಾಯಿ ಒಬ್ಬಟ್ಟು ಮಾಡುವ ವಿಧಾನ:

  • ಒಂದು ಪಾತ್ರೆಗೆ ಗೋಧಿ ಹಿಟ್ಟು, ಸ್ವಲ್ಪ ಅರಶಿನ ಪುಡಿ, ಉಪ್ಪು, ತುಪ್ಪ ಹಾಕಿ ನಂತರ ಸ್ವಲ್ಪ ಸ್ವಲ್ಪವೇ ನೀರನ್ನು ಸೇರಿಸಿ ಮೃದುವಾದ ಕಣಕ ತಯಾರಿಸಿ. ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ 1 ರಿಂದ 2 ಗಂಟೆಗಳ ಕಾಲ ನೆನೆಸಿಡಿ.
  • ನಂತರ ಮಿಕ್ಸಿ ಜಾರ್‌ಗೆ ಬೆಲ್ಲ, ತೆಂಗಿನಕಾಯಿ ತುರಿಯನ್ನು ಹಾಕಿ ಈ ಮಿಶ್ರಣವನ್ನು ರುಬ್ಬಿಕೊಳ್ಳಿ.
  • ಬಳಿಕ ಒಲೆಯ ಮೇಲೆ ಒಂದು ಪಾತ್ರೆಯನ್ನಿಟ್ಟು ಅದಕ್ಕೆ ತುಪ್ಪ ಸೇರಿಸಿ, ಪಾತ್ರ ಕಾದ ಬಳಿಕ ರುಬ್ಬಿಟ್ಟ ಬೆಲ್ಲ ತೆಂಗಿನಕಾಯಿ ಹೂರಣ ಮಿಶ್ರಣವನ್ನು ಸೇರಿಸಿ ಹುರಿಯಿರಿ, ಕೊನೆಯಲ್ಲಿ ಸ್ಪಲ್ಪ ಏಲಕ್ಕಿ ಪುಡಿಯನ್ನು ಸೇರಿಸಿ ಎಲ್ಲವನ್ನು ಮಿಶ್ರಣ ಮಾಡಿ ಉಂಡೆ ಕಟ್ಟಿಕೊಳ್ಳಿ.
  • ಈಗ ಮೊದಲೇ ತಯಾರಿಸಿಟ್ಟ ಗೋಧಿ ಹಿಟ್ಟಿನ ಕಣಕವನ್ನು ಸ್ವಲ್ಪ ಸ್ವಲ್ಪವೇ ತೆಗೆದುಕೊಂಡು ಅದಕ್ಕೆ ತೆಂಗಿನಕಾಯಿ ಹೂರಣವನ್ನು ತುಂಬಿಸಿ, ಹೋಳಿಗೆ ಮಿಶ್ರಣವನ್ನು ಚೆನ್ನಾಗಿ ತಟ್ಟಿಕೊಳ್ಳಿ.
  • ಕೊನೆಯಲ್ಲಿ ಒಂದು ತವಾಗೆ ತುಪ್ಪನ್ನು ಸೇರಿಸಿ ತಯಾರಾದ ಹೋಳಿಗೆಯನ್ನು ಬೇಯಿಸಿದರೆ, ರುಚಿಕರ, ಆರೋಗ್ಯಕರ ಒಬ್ಬಟ್ಟು ಸವಿಯಲು ಸಿದ್ಧ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link