ಯುಗಾದಿಯಂದು ಅಧಿಕಾರಿಗಳ ಕಡ್ಡಾಯ ಹಾಜರಿಗೆ ಸೂಚನೆ: ರಂಜಾನ್ ದಿನ ಸಭೆ ಕರಿಯಬಹುದಿತ್ತಲ್ಲವೇ ಎಂದ ಬಿಜೆಪಿ ಶಾಸಕ
ಬೆಂಗಳೂರು, ಮಾರ್ಚ್ 18: ವಿಧಾನಸಭೆಯಲ್ಲಿ ಪ್ರಶ್ನೆಗಳಿಗೆ ಉತ್ತರ ನೀಡುವುದು ಬಾಕಿ ಹಿನ್ನೆಲೆ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಯುಗಾದಿ (Ugadi) ಹಬ್ಬದ ರಜೆಯನ್ನು ಕಡಿತಗೊಳಿಸಲಾಗಿದೆ. ಆ ಮೂಲಕ ಹಬ್ಬದ ದಿನವೂ ಕಡ್ಡಾಯ ಹಾಜರಿಗೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಸೂಚನೆ ನೀಡಿದ್ದಾರೆ. ಯುಗಾದಿ ಹಬ್ಬದ ದಿನವೂ ಕಡ್ಡಾಯ ಹಾಜರಿಗೆ ಸೂಚನೆ ಕರ್ನಾಟಕ ವಿಧಾನ ಸಭೆ ಅಧಿವೇಶನಕ್ಕೆ ಸಂಬಂಧಿಸಿದಂತೆ ಮಾರ್ಚ್ 23ರಂದು ಕಂದಾಯ ಇಲಾಖೆಗೆ ಸಂಬಂಧಪಟ್ಟ ಪ್ರಶ್ನೆಗಳು ಬಾಕಿಯಿರುವುದರಿಂದ ಸರ್ಕಾರದ ಅಪರ ಮುಖ್ಯ…