Headlines

nagaraj11081993

Ugadi 2026: ಮಾ.19ಕ್ಕೆ ಹೊಸ ವರ್ಷದ ಆರಂಭ; ಯುಗಾದಿ ಹಬ್ಬದ ಮಹತ್ವ ಮತ್ತು ಆಚರಣೆಯ ಬಗ್ಗೆ ಇಲ್ಲಿದೆ ಮಾಹಿತಿ

ಯುಗಾದಿ ಹಬ್ಬದ ಆಚರಣೆ ಮತ್ತು ಅದರ ಹಿನ್ನೆಲೆಯ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ. ಗುರೂಜಿಯವರು ಹೇಳುವಂತೆ, ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಯುಗಾದಿ ಹಬ್ಬಕ್ಕೆ ಅಗ್ರಮಾನ್ಯ ಸ್ಥಾನವಿದೆ. ಹೊಸ ವರ್ಷದ ಆರಂಭವನ್ನು ಸೂಚಿಸುವ ಈ ಹಬ್ಬವನ್ನು ಕರ್ನಾಟಕ, ಆಂಧ್ರ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಲ್ಲಿ ವಿಭಿನ್ನತೆಯಿಂದ ಆಚರಿಸಲಾಗುತ್ತದೆ. ಯುಗಸ್ಯ ಆದಿ ಅಂದರೆ ಯುಗದ ಪ್ರಾರಂಭ ಎಂಬ ಅರ್ಥವನ್ನು ಹೊಂದಿರುವ ಯುಗಾದಿಯು ಪ್ರಕೃತಿಯಲ್ಲಿ ಹೊಸತನದ…

Read More

ಕರ್ನಾಟಕ-ತಮಿಳುನಾಡು ಗಡಿಯಲ್ಲಿ ಭರ್ಜರಿ ಕಾರ್ಯಾಚರಣೆ: 2.34 ಕೋಟಿ ರೂ. ಹಣ ಸೀಜ್

ಆನೇಕಲ್, ಮಾರ್ಚ್ 18: ತಮಿಳುನಾಡು ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ, ತಮಿಳುನಾಡು-ಕರ್ನಾಟಕ ಗಡಿಯಲ್ಲಿರುವ ಜೂಜುವಾಡಿ ಚೆಕ್​ಪೋಸ್ಟ್​ನಲ್ಲಿ ಚುನಾವಣಾಧಿಕಾರಿಗಳು ಮಹತ್ವದ ಕಾರ್ಯಾಚರಣೆ ನಡೆಸಿದ್ದಾರೆ. ಹಿಟಾಚಿ ಕ್ಯಾಷ್ ಮ್ಯಾನೇಜ್​ಮೆಂಟ್​ ಸರ್ವೀಸ್​ಗೆ ಸೇರಿದ ಎಟಿಎಂ ವಾಹನದಲ್ಲಿ ಹಣ ಸಾಗಿಸುತ್ತಿದ್ದಾಗ ಚುನಾವಣಾಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಈ ವೇಳೆ, ದಾಖಲೆಗಳಿಲ್ಲದ 2.34 ಕೋಟಿ ರೂ. ನಗದು ಕೊಂಡೊಯ್ಯುತ್ತಿರುವುದು ಗಮನಕ್ಕೆ ಬಂದಿದ್ದು, ಅದನ್ನು ವಶಕ್ಕೆ ಪಡೆದಿದ್ದಾರೆ. ವಾಹನ ತಡೆದು ಪರಿಶೀಲನೆ ನಡೆಸಿದಾಗ, ಹಣಕ್ಕೆ ಸಂಬಂಧಿಸಿದ ಸೂಕ್ತ ದಾಖಲೆಗಳು ಮತ್ತು ಅಗತ್ಯ ಭದ್ರತಾ ವ್ಯವಸ್ಥೆಗಳು ಇರಲಿಲ್ಲ ಎಂದು ಚುನಾವಣಾ…

Read More

IPL 2026: ‘ಮಣಿಪಾಲ್’ ಆಗಲಿದೆಯಾ RCB?

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿಯ ಮಾರಾಟ ಪ್ರಕ್ರಿಯೆ ಅಂತಿಮ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಕೆಲ ಪ್ರಮುಖ ಕಂಪೆನಿಗಳು ಬಿಡ್ಡಿಂಗ್​ನಿಂದ ಹಿಂದೆ ಸರಿದಿದ್ದು, ಇದೀಗ ಉಳಿದಿರುವುದು ಎರಡು ಗ್ರೂಪ್​ಗಳು ಮಾತ್ರ ಎಂದು ವರದಿಯಾಗಿದೆ. ಆ ಗ್ರೂಪ್​ಗಳೆಂದರೆ ರಂಜನ್ ಪೈ ಮತ್ತು ಕೆಕೆಆರ್ ಮತ್ತು EQT ಮತ್ತು ಪ್ರೇಮ್‌ಜಿ ಇನ್ವೆಸ್ಟ್. ಮಣಿಪಾಲ್ ಗ್ರೂಪ್‌ನ ಅಧ್ಯಕ್ಷ ಡಾ. ರಂಜನ್ ಪೈ ಅವರು ಈ ಹಿಂದೆಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಖರೀದಿಗೆ ಆಸಕ್ತಿ ತೋರಿದ್ದರು. ಇದೀಗ ಅವರು ಅಮೆರಿಕದ…

Read More

ಪ್ರಜ್ವಲ್ ರೇವಣ್ಣ ವಿಡಿಯೋ ವೈರಲ್ ಪ್ರಕರಣ: ಎಸ್​ಐಟಿ ಚಾರ್ಜ್​ಶೀಟ್ ಸಲ್ಲಿಸಿದ ಎಸ್​ಐಟಿ, ಸ್ಫೋಟಕ ಅಂಶ ಬಯಲು

ಹಾಸನ, ಮಾರ್ಚ್ 18: ಕರ್ನಾಟಕದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅಶ್ಲೀಲ ವಿಡಿಯೋ ವೈರಲ್ ಪ್ರಕರಣ ಸಂಬಂಧ ಮಹತ್ವದ ಬೆಳವಣಿಗೆ ನಡೆದಿದೆ. ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋಗಳಿದ್ದ ಪೆನ್‌ಡ್ರೈವ್ ಹಂಚಿಕೆ ವಿಚಾರವಾಗಿ ವಿಶೇಷ ತನಿಖಾ ತಂಡ (SIT) ಹಾಸನದ ಹಿರಿಯ ಸಿವಿಲ್ ನ್ಯಾಯಾಲಯಕ್ಕೆ ವಿವರವಾದ ಚಾರ್ಜ್‌ಶೀಟ್ ಸಲ್ಲಿಸಿದೆ. ಒಟ್ಟು 13,712 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಲಾಗಿದ್ದು, ಈ ಪ್ರಕರಣದಲ್ಲಿ 52 ಜನರ ಹೆಸರು ಉಲ್ಲೇಖಿಸಲಾಗಿದೆ. ಇವರಲ್ಲಿ 39 ಜನರ ವಿರುದ್ಧ…

Read More

ಇದನ್ನು ನಿರೀಕ್ಷಿಸಿರಲಿಲ್ಲ; ‘ಲವ್ ಮಾಕ್ಟೇಲ್ 3’ ಸಿನಿಮಾ ಸೂಪರ್ ಎಂದ ಸೆಲೆಬ್ರಿಟಿಗಳು

‘ಲವ್ ಮಾಕ್ಟೇಲ್ 3’ ಸಿನಿಮಾದ ವಿಶೇಷ ಶೋಗಳನ್ನು ತಂಡದವರಿಗಾಗಿ ಆಯೋಜನೆ ಮಾಡಲಾಗಿತ್ತು. ಕೆಲ ಸೆಲೆಬ್ರಿಟಿಗಳು ಇದರಲ್ಲಿ ಭಾಗಿ ಆಗಿದ್ದರು. ಇದನ್ನು ನೋಡಿದ ಸೆಲೆಬ್ರಿಟಿಗಳು ಮೆಚ್ಚುಗೆ ಸೂಚಿಸಿದ್ದಾರೆ. ‘ಸಿನಿಮಾ ಹೀಗೆ ಇರುತ್ತದೆ ಎಂದು ನಾನು ಊಹಿಸರಲಿಲ್ಲ’ ಎಂದು ಅನೇಕರು ಹೇಳಿದ್ದಾರೆ. ಮೊದಲ ಭಾಗದಲ್ಲಿ ಕಥಾ ನಾಯಕನ ಪತ್ನಿ ಸಾಯುತ್ತಾಳೆ. ಎರಡನೇ ಭಾಗದಲ್ಲಿ ಆತನ ಜೀವನದಲ್ಲಿ ಒಂದು ಮಗು ಬರುತ್ತದೆ. ಮೂರನೇ ಭಾಗ ಯಾವ ರೀತಿಯಲ್ಲಿ ಇರಬಹುದು ಎಂಬ ಕುತೂಹಲ ಮೂಡಿದೆ. ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ….

Read More

ರಾಯಚೂರಿನಲ್ಲಿ ಸಿಡಿಲು ಬಡಿದು ಹೊತ್ತಿ ಉರಿದ ತೆಂಗಿನ ಮರ; ದಿಗಿಲು ಹುಟ್ಟಿಸುವ ದೃಶ್ಯ!

ರಾಯಚೂರು, ಮಾ.18: ಜಿಲ್ಲೆಯ ಅರಕೇರಾ ತಾಲ್ಲೂಕಿನ ಹಾಳಜಾಡಲದಿನ್ನಿ ಗ್ರಾಮದಲ್ಲಿ ಸಿಡಿಲು ಬಡಿದು ತೆಂಗಿನ ಮರವೊಂದು ಹೊತ್ತಿ ಉರಿದಿರುವ ಘಟನೆ ನಡೆದಿದೆ. ಗುಡುಗು ಸಹಿತ ಮಳೆಯ ಸಂದರ್ಭದಲ್ಲಿ ಸಂಭವಿಸಿದ ಈ ದೃಶ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರೈತ ಶರೀಫ್ ಸಾಬ್ ಎಂಬುವರಿಗೆ ಸೇರಿದ ಜಮೀನಿನಲ್ಲಿ ಈ ಘಟನೆ ಸಂಭವಿಸಿದೆ. ನಿನ್ನೆ ರಾತ್ರಿ ಜಿಲ್ಲೆಯಾದ್ಯಂತ ಗುಡುಗು ಮತ್ತು ಸಿಡಿಲು ಸಹಿತ ಮಳೆಯಾಗುತ್ತಿತ್ತು. ಈ ವೇಳೆ ಜಮೀನಿನಲ್ಲಿದ್ದ ಎತ್ತರದ ತೆಂಗಿನ ಮರಕ್ಕೆ ನೇರವಾಗಿ ಸಿಡಿಲು ಬಡಿದಿದೆ. ಸಿಡಿಲು ಬಡಿದ…

Read More

42 ಸಿಕ್ಸ್, 30 ಫೋರ್: ವಿಶ್ವ ದಾಖಲೆಯ ಚತುಃಶತಕ ಸಿಡಿಸಿದ ಸ್ಯಾಮ್ ಚೀಕ್

ಅಡಿಲೇಡ್ ಮತ್ತು ಸಬರ್ಬನ್ ಕ್ರಿಕೆಟ್ ಅಸೋಸಿಯೇಷನ್ ಆಯೋಜಿಸಿದ ಗ್ರೇಡ್ ಕ್ರಿಕೆಟ್‌ ಟೂರ್ನಿಯಲ್ಲಿ ಸ್ಯಾಮ್ ಚೀಕ್ ವಿಶ್ವ ದಾಖಲೆಯ ಚತುಃಶತಕ ಸಿಡಿಸಿದ್ದಾರೆ. ಅದು ಸಹ ಕೇವಲ 137 ಎಸೆತಗಳಲ್ಲಿ ಎಂಬುದು ವಿಶೇಷ. ಮಾರ್ಫೆಟ್‌ವಿಲ್ಲೆ ಪಾರ್ಕ್ ವಿರುದ್ಧದ ಈ ಪಂದ್ಯದಲ್ಲಿ ಕೊರೊಮ್ಯಾಂಡಲ್ ಕ್ರಿಕೆಟ್ ಕ್ಲಬ್ ಕಣಕ್ಕಿಳಿದ ಸ್ಯಾಮ್ ಚೀಕ್ ತಂದೆಯೊಂದಿಗೆ ಇನಿಂಗ್ಸ್ ಆರಂಭಿಸಿದ್ದರು. ಅಂದರೆ ತಂದೆ ಮತ್ತು ಮಗ ಜೊತೆಯಾಗಿ ಕಣಕ್ಕಿಳಿದಿದ್ದರು. ಇತ್ತ ತಂದೆ ಡ್ಯಾರೆನ್ ಚೀಕ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರೆ, ಇತ್ತ ಮಗ ಸ್ಯಾಮ್ ಚೀಕ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು….

Read More

ಟಾಲಿವುಡ್​​ಗೂ ಮಾದರಿ ಆಯ್ತು ವಿಜಯಲಕ್ಷ್ಮೀ, ರಮ್ಯಾ ನಿರ್ಧಾರ

ನಟಿ ರಮ್ಯಾ (Ramya) ಹಾಗೂ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಇತ್ತೀಚೆಗೆ ತಮ್ಮ ಸೋಶಿಯಲ್ ಮೀಡಿಯಾ ಅಶ್ಲೀಲ ಕಮೆಂಟ್ ಹಾಕಿದವರ ವಿರುದ್ಧ ದೂರು ನೀಡಿದ್ದರು. ಈ ಮೂಲಕ ಇಂಥವರ ವಿರುದ್ಧ ಸುಮ್ಮನೆ ಇರಬಾರದು ಎಂಬ ಸಂದೇಶ ರವಾನಿಸಿದ್ದಾರೆ. ಈ ಪ್ರಕರಣದಲ್ಲಿ ಹಲವರನ್ನು ಬಂಧಿಸಲಾಗಿದೆ. ಈ ವಿಷಯ ಸಾಕಷ್ಟು ಚರ್ಚೆ ಆಯಿತು. ಅಶ್ಲೀಲ ಕಮೆಂಟ್​​ಗಲಿಂದ ಕಂಗೆಟ್ಟಿದ್ದ ಎಲ್ಲರಿಗೂ ಇದೊಂದು ಮಾದರಿ ಆಯಿತು. ಈಗ ಪರಭಾಷೆಯಲ್ಲೂ ನಟಿಯರು ಈ ರೀತಿ ನಿರ್ಧಾರ ಮಾಡುತ್ತಿದ್ದಾರೆ. ನಟಿಯರು ಮುಂದೆ ಬಂದು ಕೇಸ್ ದಾಖಲಿಸುತ್ತಿದ್ದಾರೆ….

Read More

ಮೈಸೂರು ಪಾಲಿಕೆಯಿಂದಲೇ ಫುಟ್​ಪಾತ್ ಒತ್ತುವರಿ! ಅರಮನೆ ಮುಂಭಾಗದ ರಾಜಮಾರ್ಗ ಒಡೆದು ಟಾಂಗಾ ಸ್ಟ್ಯಾಂಡ್​

ಮೈಸೂರು, ಮಾರ್ಚ್ 18: ಮೈಸೂರು (Mysuru) ಅಂದರೆ ಅದು ಪಾರಂಪರಿಕ ಕಟ್ಟಡಗಳ ತವರು. ಇಲ್ಲಿನ ಪ್ರತಿ ರಸ್ತೆಯಿಗೂ ಒಂದು ಇತಿಹಾಸವಿದೆ. ಆದರೆ ಈಗ ಅದೇ ಇತಿಹಾಸಕ್ಕೆ ಕೊಡಲಿ ಪೆಟ್ಟು ಬೀಳುತ್ತಿದೆ. ‘ಸ್ವದೇಶ್ ದರ್ಶನ 2.0’ ಯೋಜನೆಯಡಿ ನಗರದ 10 ಕಡೆ ಟಾಂಗಾ ಸ್ಟ್ಯಾಂಡ್ ನಿರ್ಮಿಸಲು ಪಾಲಿಕೆ ಮುಂದಾಗಿದೆ. ಆದರೆ ಈ ಯೋಜನೆ ಈಗ ವಿವಾದದ (Tonga stand controversy) ಕೇಂದ್ರಬಿಂದುವಾಗಿದೆ. ಅರಮನೆ ಮುಂಭಾಗದ ಚಾಮರಾಜೇಂದ್ರ ವೃತ್ತದ ಬಳಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ರಾಜಮಾರ್ಗವನ್ನು ಒಡೆದು, ಫುಟ್‌ಪಾತ್…

Read More

‘ಸನ್​ರೈಸರ್ಸ್’ ಪರ ಪಾಕ್ ಆಟಗಾರ ಕಣಕ್ಕಿಳಿಯುವುದು ಡೌಟ್!

ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಆಯೋಜಿಸುವ ದಿ ಹಂಡ್ರೆಡ್ ಲೀಗ್​ಗೆ ಆಯ್ಕೆಯಾಗಿರುವ ಪಾಕಿಸ್ತಾನ್ ಸ್ಪಿನ್ನರ್ ಅಬ್ರಾರ್ ಅಹ್ಮದ್ ಮುಂಬರುವ ಟೂರ್ನಿಯಲ್ಲಿ ಸನ್​ರೈಸರ್ಸ್​ ಲೀಡ್ಸ್ ಪರ ಕಣಕ್ಕಿಳಿಯುವುದು ಅನುಮಾನ. ದಿ ಹಂಡ್ರೆಡ್ ಲೀಗ್​​ ಟೂರ್ನಿಗೆ ದಿನಾಂಕ ನಿಗದಿಯಾಗಿದ್ದು, ಇದೇ ವೇಳೆ ಪಾಕಿಸ್ತಾನ್ ತಂಡ ಟೆಸ್ಟ್ ಸರಣಿ ಆಡಲಿದೆ. ಈ ಸರಣಿಗೆ ಅಬ್ರಾರ್ ಆಯ್ಕೆಯಾದರೆ ಅವರು ಸನ್​ರೈಸರ್ಸ್ ಲೀಡ್ಸ್​ ತಂಡದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಮಾರ್ಚ್ 12, 2026 ರಂದು ನಡೆದ ಹರಾಜಿನಲ್ಲಿ ಅಬ್ರಾರ್ ಅಹ್ಮದ್ ಅವರನ್ನುಎಸ್​ಆರ್​ಹೆಚ್ ಮಾಲೀಕತ್ವದ ಸನ್​ರೈಸರ್ಸ್ ಲೀಡ್ಸ್ ಫ್ರಾಂಚೈಸಿಯು ಬರೋಬ್ಬರಿ…

Read More