Headlines

nagaraj11081993

ಮೈಸೂರು ಸಿಗ್ನಲ್​​​ ಬಗ್ಗೆ ಸಿದ್ದರಾಮಯ್ಯ ಅವರ ಸುಪುತ್ರ ಹೇಳಬೇಕು; ಕಮಿಷನ್ ಆಸೆಗಾಗಿ ಈ ವ್ಯವಸ್ಥೆ ಎಂದ ಪ್ರತಾಪ್ ಸಿಂಹ

ಮೈಸೂರು, ಮಾ.18: ನಗರದಲ್ಲಿ ನೂತನವಾಗಿ ಅಳವಡಿಸಲಾಗಿರುವ ಟ್ರಾಫಿಕ್ ಸಿಗ್ನಲ್‌ಗಳು ಮತ್ತು ಫ್ಲೆಕ್ಸ್ ಬೋರ್ಡ್‌ಗಳ ವಿರುದ್ಧ ಸಂಸದ ಪ್ರತಾಪ್ ಸಿಂಹ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ ಸುಮಾರು 108 ಹೊಸ ಟ್ರಾಫಿಕ್ ಸಿಗ್ನಲ್‌ಗಳನ್ನು ಅಳವಡಿಸಲಾಗಿದ್ದು, ಇದು ಅವೈಜ್ಞಾನಿಕವಾಗಿದೆ. ಕೇವಲ 1.5 ರಿಂದ 2 ಕಿಲೋಮೀಟರ್ ಅಂತರದಲ್ಲಿ 9-10 ಸಿಗ್ನಲ್‌ಗಳಿದ್ದು, ವಾಹನ ದಟ್ಟಣೆ ಇಲ್ಲದ ರಸ್ತೆಗಳಲ್ಲೂ ಸಿಗ್ನಲ್‌ಗಳನ್ನು ಅಳವಡಿಸಿರುವುದು ಜನರಿಗೆ ಅನಾನುಕೂಲ ಉಂಟುಮಾಡುತ್ತಿದೆ ಎಂದು ಅವರು ಹೇಳಿದ್ದಾರೆ. ರಿಂಗ್ ರೋಡ್‌ಗೆ ಅಂಡರ್‌ಪಾಸ್ ಮತ್ತು ಓವರ್‌ಬ್ರಿಡ್ಜ್‌ಗಳು ಪರಿಹಾರವೇ ಹೊರತು ಸಿಗ್ನಲ್‌ಗಳಲ್ಲ ಎಂದು…

Read More

ಯುಗಾದಿಗೆ ಗಣೇಶ್ ಕಡೆಯಿಂದ ಸಿಗಲಿದೆ ದೊಡ್ಡ ಸರ್​ಪ್ರೈಸ್

ಗೋಲ್ಡನ್ ಸ್ಟಾರ್ ಗಣೇಶ್ ಅವರು ಹೊಸ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ‘ಯುಗಾದಿ, ಹೊಸ ವರ್ಷ ಮಾತ್ರ ಅಲ್ಲ, ಹೊಸ ಟೈಟಲ್, ಹೊಸ ಸಂಚಲನ, ಹೊಸ ಸಿನಿಮಾ, ಹಲವು ತಿಂಗಳ ಪರಿಶ್ರಮ, ಅನೇಕ ಕನಸುಗಳ ಶ್ರಮ’ ಎಂದು ಕ್ಯಾಪ್ಶನ್ ಹಾಕಿದ್ದಾರೆ. ಈ ವಿಡಿಯೋದಲ್ಲಿ ಮಂಜು ಪಾವಗಡ ಟೈಟಲ್ ಹೇಳಿ ಅಂತ ದುಂಬಾಲು ಬೀಳ್ತಾರೆ. ಕೊನೆಗೆ ಗಣೇಶ್ ಬಳಿಯೂ ಬರ್ತಾರೆ. ಯುಗಾದಿಗೆ ಟೈಟಲ್ ಹೇಳೋದಾಗಿ ಅವರು ತಿಳಿಸ್ತಾರೆ. ಇದರಿಂದ ಯುಗಾದಿಗೆ ಸರ್​​ಪ್ರೈಸ್ ಸಿಗೋದು ಪಕ್ಕಾ ಆಗಿದೆ. ಇನ್ನಷ್ಟು ಸಿನಿಮಾ…

Read More

ಕ್ರಿಕೆಟರ್ ಆಗ ಹೊರಟಿದ್ದ ‘ಧುರಂಧರ್’ ನಿರ್ದೇಶಕ; ರಾಜಕೀಯದಿಂದ ಎಲ್ಲವೂ ಬದಲಾಯ್ತು

ನಿರ್ದೇಶಕ ಆದಿತ್ಯ ಧಾರ್ (Aditya Dhar) ಅವರು ಈಗ ಸುದ್ದಿಯಲ್ಲಿದ್ದಾರೆ. ಅವರ ನಿರ್ದೇಶನದ ‘ಧುರಂಧರ್’ ಸಿನಿಮಾ ಅದ್ಭುತ ಯಶಸ್ಸು ಕಂಡಿತು. ಈ ಚಿತ್ರ ವಿಶ್ವ ಬಾಕ್ಸ್ ಆಫೀಸ್​​ನಲ್ಲಿ 1300 ಕೋಟಿ ರೂಪಾಯಿ ಗಳಿಕೆ ಮಾಡಿತು. ಈ ಮೂಲಕ ಹಲವು ದಾಖಲೆಗಳನ್ನು ಬರೆಯಿತು. ಹಿಂದಿ ಚಿತ್ರವೊಂದು ವಿಶ್ವ ಮಟ್ಟದಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಗಳಿಸಿದ್ದು ಇದೇ ಮೊದಲು. ಇನ್ನು, ‘ಧುರಂಧರ್ 2’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಹಲವು ದಾಖಲೆಗಳನ್ನು ಮಾಡಲು ರೆಡಿ ಆಗಿದೆ. ಈ ಮಧ್ಯೆ ಚಿತ್ರದ ನಿರ್ದೇಶಕ…

Read More

ನಮ್ಮನ್ನು ಕೇಳಿ ಈ ಯುದ್ಧ ಆರಂಭಿಸಿಲ್ಲ: ಟ್ರಂಪ್‌ಗೆ ನ್ಯಾಟೋ ರಾಷ್ಟ್ರಗಳ ಶಾಕ್; ಏಕಾಂಗಿಯಾದ ಅಮೆರಿಕ?

ಟೆಹ್ರಾನ್, ಮಾ.18: ಇರಾನ್‌ನಲ್ಲಿ ಹೊಸ ಆಡಳಿತ ತರುವ ಅಮೆರಿಕ ಮತ್ತು ಇಸ್ರೇಲ್ ಪ್ಲ್ಯಾನ್‌ಗೆ ಈಗ ಇರಾನ್ ಸೇನೆ ಮತ್ತು ಹೊಸ ನಾಯಕ ಮೊಜ್ತಾಬಾ ಖಮನೈ ಮರ್ಮಾಘಾತ ನೀಡಿದ್ದಾರೆ. ಅಮೆರಿಕದ ಬೆಂಬಲಕ್ಕೆ ನಿಲ್ಲಬೇಕಿದ್ದ ನ್ಯಾಟೋ (NATO) ದೇಶಗಳು ಈಗ ಯುದ್ಧದಿಂದ ಹಿಂದೆ ಸರಿದಿರುವುದು ಟ್ರಂಪ್ ಆಡಳಿತಕ್ಕೆ ದೊಡ್ಡ ಹಿನ್ನಡೆಯಾಗಿದೆ. ಹಾರ್ಮುಜ್ ಜಲಸಂಧಿಯನ್ನು ಇರಾನ್ ಬಂದ್ ಮಾಡಿರುವ ಹಿನ್ನೆಲೆಯಲ್ಲಿ ಟ್ರಂಪ್ ನ್ಯಾಟೋ ದೇಶಗಳ ಸಹಾಯ ಕೋರಿದ್ದರು. ಆದರೆ ನ್ಯಾಟೋ ರಾಷ್ಟ್ರಗಳು ಕಡಾತುಂಡಾಗಿ ನಿರಾಕರಿಸಿವೆ. ನ್ಯಾಟೋಗೆ ಈ ಯುದ್ಧಕ್ಕೂ ಸಂಬಂಧವಿಲ್ಲ ಎಂದು…

Read More

ಕೆಎಲ್​ ರಾಹುಲ್​ಗಾಗಿ ಇಂಗ್ಲೆಂಡ್ ಆಟಗಾರನ ಖರೀದಿಸಿದ ಡೆಲ್ಲಿ ಕ್ಯಾಪಿಟಲ್ಸ್

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ಕ್ಕಾಗಿ ಡೆಲ್ಲಿ ಕ್ಯಾಪಿಟಲ್ಸ್​ ಬಲಿಷ್ಠ ಪಡೆಯನ್ನು ರೂಪಿಸಿದೆ. ಹರಾಜಿಗೂ ಮುನ್ನ 17 ಆಟಗಾರರನ್ನು ಉಳಿಸಿಕೊಂಡಿದ್ದ ಡೆಲ್ಲಿ ಫ್ರಾಂಚೈಸಿ, ಆಕ್ಷನ್​ ಮೂಲಕ 8 ಆಟಗಾರರನ್ನು ಖರೀದಿಸಿದ್ದಾರೆ. ಈ ಎಂಟು ಆಟಗಾರರಲ್ಲಿ ಐವರು ವಿದೇಶಿ ಪ್ಲೇಯರ್ಸ್ ಎಂಬುದು ವಿಶೇಷ. ಈ ಐವರು ವಿದೇಶಿ ಆಟಗಾರರಲ್ಲಿ ಬೆನ್ ಡಕೆಟ್ ಕೂಡ ಒಬ್ಬರು. ಇಂಗ್ಲೆಂಡ್ ತಂಡದ ಆರಂಭಿಕ ದಾಂಡಿಗ ಬೆನ್ ಡಕೆಟ್ ಇದೇ ಮೊದಲ ಬಾರಿಗೆ ಐಪಿಎಲ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದರೆ ಕಳೆದ 18 ಸೀಸನ್​ಗಳಲ್ಲಿ…

Read More

‘ಧುರಂಧರ್ 2’ ಸಿನಿಮಾ ಬಜೆಟ್ ಹಾಗೂ ಸ್ಟಾರ್​​ಗಳ ಸಂಭಾವನೆ ವಿವರ

ಆದಿತ್ಯ ಧಾರ್ ನಿರ್ದೇಶನದ ಮತ್ತು ರಣವೀರ್ ಸಿಂಗ್ ನಾಯಕನಾಗಿ ನಟಿಸಿರುವ ‘ಧುರಂಧರ್ 2’ (Dhurandhar 2) ಬಿಡುಗಡೆ ಸಮೀಪಿಸುತ್ತಿದೆ. ಪ್ರೇಕ್ಷಕರು ಕಾತರದಿಂದ ಕಾಯುತ್ತಿರುವ ಈ ಚಿತ್ರವು ಮಾರ್ಚ್ 19ರಂದು ಯುಗಾದಿಗೆ ಉಡುಗೊರೆಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಅದಕ್ಕೂ ಒಂದು ದಿನ ಮೊದಲು ಅಂದರೆ ಮಾರ್ಚ್ 18ರಂದು, ‘ಧುರಂಧರ್ 2’ ಪ್ರೀಮೀಯರ್​ಗಳನ್ನು ಆಯೋಜಿಸಲಾಗಿದೆ. ಮೊದಲ ಭಾಗವು ಬ್ಲಾಕ್ಬಸ್ಟರ್ ಆಗಿದ್ದರಿಂದ, ಈ ಮುಂದುವರಿದ ಭಾಗದ ಮೇಲೆ ಪ್ರೇಕ್ಷಕರಲ್ಲಿ ಭಾರಿ ನಿರೀಕ್ಷೆಗಳಿವೆ. ರಣವೀರ್ ಸಿಂಗ್, ಸಂಜಯ್ ದತ್, ಆರ್. ಮಾಧವನ್, ಅರ್ಜುನ್ ರಾಂಪಾಲ್,…

Read More

LPG ಸಿಲಿಂಡರ್ ಬಿಕ್ಕಟ್ಟು: ಕಾಳಸಂತೆಯಲ್ಲಿ ಏಜೆನ್ಸಿಗಳು, ದಂಧೆಕೋರರ ಕಳ್ಳಾಟ, 15 ಸಾವಿರ ಸಿಲಿಂಡರ್ ಜಪ್ತಿ

ಬೆಂಗಳೂರು, ನವದೆಹಲಿ, ಮಾರ್ಚ್ 18: ಇರಾನ್-ಇಸ್ರೇಲ್, ಮಧ್ಯಪ್ರಾಚ್ಯ ಸಂಘರ್ಷ ಭಾರತದಲ್ಲಿ, ಅದರಲ್ಲೂ ಕರ್ನಾಟಕದಲ್ಲಿ ಗ್ಯಾಸ್ ಸಿಲಿಂಡರ್‌ಗಳ ತೀವ್ರತರದ ಅಭಾವಕ್ಕೆ ಕಾರಣವಾಗಿದೆ. ಈ ಪರಿಸ್ಥಿತಿಯು ಹೋಟೆಲ್ ಮಾಲೀಕರನ್ನು ದಿಕ್ಕೆಡಿಸಿದ್ದು, ಕಮರ್ಷಿಯಲ್ ಸಿಲಿಂಡರ್‌ಗಳ ಕೊರತೆಯಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಬಿಕ್ಕಟ್ಟನ್ನು ದುರ್ಬಳಕೆ ಮಾಡಿಕೊಂಡ ಕೆಲ ಖದೀಮರು ಗೃಹಬಳಕೆ ಸಿಲಿಂಡರ್‌ಗಳನ್ನು ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ಈ ಅಕ್ರಮಗಳ ವಿರುದ್ಧ ದೇಶಾದ್ಯಂತ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಕರ್ನಾಟಕ, ದೆಹಲಿ, ಜಮ್ಮು ಕಾಶ್ಮೀರ, ಕೇರಳ ಸೇರಿದಂತೆ 12 ಸಾವಿರಕ್ಕೂ…

Read More

ಕರ್ನಾಟಕದಲ್ಲಿ 9ನೇ ದಿನಕ್ಕೆ ಕಾಲಿಟ್ಟ ಎಲ್​ಪಿಜಿ ಸಿಲಿಂಡರ್ ಕೊರತೆ: ಜಿಲ್ಲೆ ಜಿಲ್ಲೆಗಳಲ್ಲೂ ಬಿಗಡಾಯಿಸಿದ ಪರಿಸ್ಥಿತಿ

ಬೆಂಗಳೂರು, ಮಾರ್ಚ್ 18: ಇರಾನ್–ಇಸ್ರೇಲ್ ಯುದ್ಧದ (Iran-Israel War) ಪರಿಣಾಮವಾಗಿ ಉಂಟಾದ ಅಡುಗೆ ಅನಿಲ (ಕಮರ್ಷಿಯಲ್ LPG) ಕೊರತೆ ಕರ್ನಾಟಕದಲ್ಲಿ (Karnataka) ತೀವ್ರ ಸಮಸ್ಯೆ ಸೃಷ್ಟಿಸಿದೆ. ಕಳೆದ 9 ದಿನಗಳಿಂದ ಮುಂದುವರಿದಿರುವ ಈ ಸಂಕಷ್ಟದಿಂದ ದೊಡ್ಡ ದೊಡ್ಡ ಹೋಟೆಲ್‌ಗಳು ಹಾಗೂ ರೆಸ್ಟೋರೆಂಟ್‌ಗಳು ಬಾಗಿಲು ಮುಚ್ಚುವ ಹಂತಕ್ಕೆ ಬಂದಿವೆ. ಹೋಟೆಲ್ ಆಹಾರಕ್ಕೆ ಅವಲಂಬಿತವಾಗಿದ್ದ ಜನರು ಈಗ ಒಂದು ಕಡೆಯಿಂದ ಮತ್ತೊಂದು ಕಡೆಗೆ ಅಲೆದಾಡುವಂತಾಗಿದೆ. 6 ಸಾವಿರ ರೂಪಾಯಿ ಕೊಟ್ಟರೂ ಕಮರ್ಷಿಯಲ್ ಸಿಲಿಂಡರ್‌ ಒಂದು ಪಡೆಯಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ….

Read More

ವಿಜಯ್ ಜೊತೆ ತ್ರಿಷಾ ಮದುವೆ ಆಗೋದು ತಾಯಿಗೂ ಇಷ್ಟ?

ತಮಿಳು ಸ್ಟಾರ್ ಹೀರೋ ದಳಪತಿ ವಿಜಯ್ ಅವರ ಹೆಸರು ಈಗ ಕಾಲಿವುಡ್ ಮತ್ತು ಟಾಲಿವುಡ್‌ನಲ್ಲಿ ಮನೆಮಾತಾಗಿದೆ. ಜನರು ವಿಜಯ್ ಮತ್ತು ತ್ರಿಷಾ ಬಗ್ಗೆ ಮಾತನಾಡುತ್ತಿದ್ದಾರೆ. ಇತ್ತೀಚೆಗೆ ನಾಯಕ ವಿಜಯ್ ಅವರ ಪತ್ನಿ ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದಾರೆ . ವಿಜಯ್ ನಾಯಕಿಯೊಂದಿಗೆ ಸಂಬಂಧ ಹೊಂದಿದ್ದಾರೆಂದು ಆರೋಪಿಸಿ ಅವರು ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಮಧ್ಯೆ ವಿಜಯ್ ಹಾಗೂ ತ್ರಿಷಾ ವಿವಾಹ ಆಗುತ್ತಾರಾ ಎನ್ನುವ ಪ್ರಶ್ನೆ ಚರ್ಚೆ ಹುಟ್ಟುಹಾಕಿದೆ. ವಿಜಯ್ ಮತ್ತು ತ್ರಿಷಾ ನಡುವೆ ಏನೋ ಇದೆ…

Read More

RCB ತಂಡದ ಖರೀದಿಗೆ ಹಿಂದೇಟು: ಫೈನಲ್​​ ರೇಸ್​ನಲ್ಲಿ ಇಬ್ಬರು ಬೆಂಗಳೂರಿಗರು!

ಇಂಡಿಯನ್ ಪ್ರೀಮಿಯರ್ ಲೀಗ್‌ನ (IPL) ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೊಸ ಮಾಲೀಕರು ಯಾರು? ಈ ಕುತೂಹಲಕಾರಿ ಪ್ರಶ್ನೆಗೆ ಶೀಘ್ರದಲ್ಲೇ ಉತ್ತರ ದೊರೆಯಲಿದೆ. ಏಕೆಂದರೆ  RCB ಫ್ರಾಂಚೈಸಿ ಮಾರಾಟ ಪ್ರಕ್ರಿಯೆಯು ಇದೀಗ ಅಂತಿಮ ಹಂತಕ್ಕೆ ತಲುಪಿದೆ. ಆದರೆ ಈ ಹಿಂದೆ ಇದ್ದ ಪ್ರಮುಖ ಕಂಪೆನಿಗಳು ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಖರೀದಿಯಿಂದ ಹಿಂದೆ ಸರಿದಿದ್ದಾರೆ ಎಂದು ವರದಿಯಾಗಿದೆ. ಈ ಹಿಂದೆ ಮ್ಯಾಂಚೆಸ್ಟರ್ ಯುನೈಟೆಡ್ ಮಾಲೀಕ ಅವ್ರಾಮ್ ಗ್ಲೇಝರ್ ಮತ್ತು ಸೀರಮ್ ಇನ್‌ಸ್ಟಿಟ್ಯೂಟ್‌ನ ಅದಾರ್…

Read More