All posts by nagaraj11081993

Guru Chandal Yoga: ಗುರು ಚಂಡಾಲ ಯೋಗ ಎಂದರೇನು? ಇದರಿಂದಾಗುವ ಸಮಸ್ಯೆಗಳೇನು?

Guru Chandal Yoga: ಗುರು ಚಂಡಾಲ ಯೋಗ ಎಂದರೇನು? ಇದರಿಂದಾಗುವ ಸಮಸ್ಯೆಗಳೇನು?

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ಸಂಚಾರ ಮತ್ತು ಅವುಗಳ ಸ್ಥಾನಪಲ್ಲಟವು ಮನುಷ್ಯನ ಜೀವನದ ಮೇಲೆ ಅಪಾರ ಪ್ರಭಾವ ಬೀರುತ್ತದೆ. ಜಾತಕದಲ್ಲಿ ಗ್ರಹಗಳು ಶುಭ ಸ್ಥಾನದಲ್ಲಿದ್ದರೆ ಜೀವನ ಸುಗಮವಾಗಿರುತ್ತದೆ, ಆದರೆ ಕೆಲವು ಗ್ರಹಗಳ ಸಂಯೋಗವು ಅಶುಭ ‘ಯೋಗ’ಗಳನ್ನು ಸೃಷ್ಟಿಸುತ್ತವೆ. ಅಂತಹವುಗಳಲ್ಲಿ ಪ್ರಮುಖವಾದುದು ‘ಗುರು ಚಂಡಾಲ ಯೋಗ’. ಈ ಯೋಗವು ಜಾತಕದಲ್ಲಿ ಕಂಡುಬಂದಾಗ ವ್ಯಕ್ತಿಯು ಮಾನಸಿಕ ಗೊಂದಲ, ತಪ್ಪು ನಿರ್ಧಾರಗಳು ಮತ್ತು ಆರ್ಥಿಕ ಸಂಕಷ್ಟಗಳನ್ನು ಎದುರಿಸಬೇಕಾಗಬಹುದು. ಆದರೆ ಸರಿಯಾದ ಧಾರ್ಮಿಕ ಪರಿಹಾರಗಳು ಮತ್ತು ಪ್ರಾರ್ಥನೆಗಳ ಮೂಲಕ ಇದರ ತೀವ್ರತೆಯನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯವಿದೆ.

ಗುರು ಚಂಡಾಲ ಯೋಗ ಎಂದರೇನು ಮತ್ತು ಅದು ಹೇಗೆ ರೂಪುಗೊಳ್ಳುತ್ತದೆ?

ದೇವಗುರು ಬೃಹಸ್ಪತಿಯು ರಾಹು ಅಥವಾ ಕೇತುವಿನೊಂದಿಗೆ ಒಂದೇ ಮನೆಯಲ್ಲಿ ಸ್ಥಿತನಾಗಿದ್ದಾಗ ಅಥವಾ ಇವರು ಪರಸ್ಪರ ದೃಷ್ಟಿಯನ್ನು ಹೊಂದಿದ್ದಾಗ ಜಾತಕದಲ್ಲಿ ಗುರು ಚಂಡಾಲ ಯೋಗ ಉಂಟಾಗುತ್ತದೆ. ಗುರುವು ಜ್ಞಾನ ಮತ್ತು ಧರ್ಮದ ಸಂಕೇತವಾದರೆ, ರಾಹು-ಕೇತುಗಳು ಅನಿಶ್ಚಿತತೆ ಮತ್ತು ಭ್ರಮೆಯ ಕಾರಕರು. ಇವರ ಸಂಯೋಗದಿಂದಾಗಿ ವ್ಯಕ್ತಿಯ ಶುದ್ಧ ಆಲೋಚನಾ ಶಕ್ತಿಯು ಮಂಕಾಗಬಹುದು. ಈ ಯೋಗದ ಪ್ರಭಾವವು ವ್ಯಕ್ತಿಯ ಜಾತಕದಲ್ಲಿ ಗ್ರಹಗಳ ಬಲಾಬಲದ ಮೇಲೆ ನಿರ್ಧಾರವಾಗುತ್ತದೆ.

ಗುರು ಚಂಡಾಲ ಯೋಗದ ಲಕ್ಷಣಗಳು:

  • ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಪದೇ ಪದೇ ತಪ್ಪುಗಳಾಗುವುದು.
  • ಶಿಕ್ಷಣ ಅಥವಾ ವೃತ್ತಿಜೀವನದಲ್ಲಿ ಅನಿರೀಕ್ಷಿತ ಅಡೆತಡೆಗಳು ಎದುರಾಗುವುದು.
  • ಆರ್ಥಿಕ ಅಸ್ಥಿರತೆ ಅಥವಾ ಹಣಕಾಸಿನ ನಷ್ಟ ಉಂಟಾಗುವುದು.
  • ಸದಾ ಮನಸ್ಸಿನಲ್ಲಿ ಗೊಂದಲ, ತಪ್ಪು ತಿಳುವಳಿಕೆ ಮತ್ತು ಅಶಾಂತಿ ನೆಲೆಸುವುದು.
  • ಸಮಾಜದಲ್ಲಿ ಗೌರವಕ್ಕೆ ಧಕ್ಕೆ ಬರುವಂತಹ ಸಂದರ್ಭಗಳು ಎದುರಾಗುವುದು.

ಇದನ್ನೂ ಓದಿ: ಈ ವರ್ಷ ಯುಗಾದಿ ಹಬ್ಬ ಯಾವಾಗ ? ಈ ದಿನ ಏನು ಮಾಡಬೇಕು ಮತ್ತು ಏನು ಮಾಡಬಾರದು?

ಪರಿಹಾರ ಮಾರ್ಗಗಳು ಮತ್ತು ಪೂಜಾ ವಿಧಾನಗಳು:

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ದೋಷದ ಪ್ರಭಾವ ತಗ್ಗಿಸಲು ವಿಷ್ಣು ಸಹಸ್ರನಾಮ ಪಠಣ ಮತ್ತು ಗುರು ದೇವನ ಆರಾಧನೆ ಅತ್ಯಂತ ಫಲದಾಯಕ.

  • ಶ್ರೀ ಮಹಾವಿಷ್ಣುವಿನ ಆರಾಧನೆ: ಗುರುವಾರದಂದು ವಿಷ್ಣುವಿಗೆ ವಿಶೇಷ ಪೂಜೆ ಸಲ್ಲಿಸಿ. ಹಳದಿ ಬಣ್ಣದ ಹೂವುಗಳು, ಬಟ್ಟೆ ಹಾಗೂ ಕಡಲೆ ಹಿಟ್ಟಿನ ಸಿಹಿತಿಂಡಿಗಳನ್ನು ನೈವೇದ್ಯವಾಗಿ ಅರ್ಪಿಸುವುದರಿಂದ ಗುರು ಗ್ರಹವು ಬಲಗೊಂಡು ನಕಾರಾತ್ಮಕತೆ ದೂರವಾಗುತ್ತದೆ.
  • ಮಂತ್ರ ಪಠಣ: ಪ್ರತಿ ಗುರುವಾರ ‘ಓಂ ಬೃಂ ಬೃಹಸ್ಪತಯೇ ನಮಃ’ ಎಂಬ ಮಂತ್ರವನ್ನು ಕನಿಷ್ಠ 108 ಬಾರಿ ಜಪಿಸುವುದು ಉತ್ತಮ.
  • ರಾಹು-ಕೇತು ಶಾಂತಿ: ರಾಹುವಿನ ಅಶುಭ ದೃಷ್ಟಿ ನಿವಾರಿಸಲು ಶನಿವಾರದಂದು ಬಡವರಿಗೆ ಕಪ್ಪು ಎಳ್ಳು, ಸಾಸಿವೆ ಎಣ್ಣೆ ಅಥವಾ ಕಪ್ಪು ಬಟ್ಟೆಯನ್ನು ದಾನ ಮಾಡಿ.
  • ದಾನ ಧರ್ಮ: ಗುರುವಾರದಂದು ಹಳದಿ ವಸ್ತುಗಳಾದ ಅರಿಶಿನ, ಕಡಲೆ ಬೇಳೆ ಅಥವಾ ಬಾಳೆಹಣ್ಣನ್ನು ದಾನ ಮಾಡುವುದರಿಂದ ಗುರುವಿನ ಅನುಗ್ರಹ ಲಭಿಸುತ್ತದೆ.
  • ಗುರು ಹಿರಿಯರ ಗೌರವ: ಆಧ್ಯಾತ್ಮಿಕ ಗುರುಗಳನ್ನು, ಹಿರಿಯರನ್ನು ಗೌರವಿಸುವುದು ಮತ್ತು ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ಈ ಯೋಗದ ದುಷ್ಪರಿಣಾಮಗಳನ್ನು ತಗ್ಗಿಸಲು ಇರುವ ಅತ್ಯಂತ ಸರಳ ಹಾಗೂ ಪರಿಣಾಮಕಾರಿ ಮಾರ್ಗವಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಪ್ಪು ಸಮಾಧಿಗೆ ಪೂಜೆ ಮಾಡಿದ ಶಿವರಾಜ್ ಕುಮಾರ್: ವಿಡಿಯೋ ನೋಡಿ

ಪುನೀತ್ ರಾಜ್​​ಕುಮಾರ್ (Puneeth Rajkumar) ಅವರ ಜಯಂತಿ ಇಂದು. ಬದುಕಿದ್ದಿದ್ದರೆ ಅವರಿಗೆ 51 ವರ್ಷ ಆಗಿರುತ್ತಿತ್ತು. ಬೆಳಿಗಿನಿಂದಲೇ ಸಾವಿರಾರು ಮಂದಿ ಪುನೀತ್ ಅವರ ಸಮಾಧಿಗೆ ಭೇಟಿ ನೀಡುತ್ತಿದ್ದಾರೆ. ಬೆಳಿಗ್ಗೆ ರಾಘವೇಂದ್ರ ರಾಜ್​ಕುಮಾರ್ ಹಾಗೂ ಅವರ ಕುಟುಂಬಸ್ಥರು ಭೇಟಿ ನೀಡಿ ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದರು. ಕುಟುಂಬಸ್ಥರು ಹಲವು ಗೆಳೆಯರು, ಚಿತ್ರರಂಗದ ಗಣ್ಯರು, ಅಭಿಮಾನಿಗಳು ಸತತವಾಗಿ ಭೇಟಿ ನೀಡುತ್ತಲೇ ಇದ್ದಾರೆ. ನಟ ಶಿವರಾಜ್ ಕುಮಾರ್ ಅವರೂ ಸಹ ಅಪ್ಪು ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಕೊತೆಗೆ ಡಿಕೆಡಿಯ ಪ್ರೀತಂ ಸಹ ಇದ್ದರು. ವಿಡಿಯೋ ನೋಡಿ….

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮದುವೆ ಮುಗಿಸಿ ಕೆಲವೇ ದಿನಗಳಲ್ಲಿ ಕೆಲಸಕ್ಕೆ ಮರಳಿದ ರಶ್ಮಿಕಾ ಮಂದಣ್ಣ

ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣ (Rashmika Mandanna) ಅವರು ವಿಜಯ್ ದೇವರಕೊಂಡ ಜೊತೆ ಕೆಲವೇ ದಿನಗಳ ಹಿಂದೆ ಅದ್ದೂರಿಯಾಗಿ ಮದುವೆಯಾದರು. ವಿವಾಹದ ಸಂಭ್ರಮದ ನಂತರ ಈ ಜೋಡಿ ಈಗ ಮತ್ತೆ ಕೆಲಸದ ಕಡೆಗೆ ಗಮನ ಹರಿಸಿದ್ದಾರೆ. ಮದುವೆಯ ನಂತರ ಈ ಜೋಡಿ ‘ರಣಬಾಲಿ’ ಚಿತ್ರದ ಶೂಟಿಂಗ್ ಆರಂಭಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ರಶ್ಮಿಕಾ ಮಂದಣ್ಣ ಅವರಯ ‘ಮೈಸಾ’ (Mysaa) ಚಿತ್ರದ ಶೂಟಿಂಗ್ ಆರಂಭಿಸಿ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ.

ಮಾರ್ಚ್ 17ರಂದು ರಶ್ಮಿಕಾ ಮಂದಣ್ಣ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹೊಸ ಅಪ್‌ಡೇಟ್ ಒಂದನ್ನು ಹಂಚಿಕೊಂಡಿದ್ದಾರೆ. ರವೀಂದ್ರ ಪುಲ್ಲೆ ನಿರ್ದೇಶನದ ‘ಮೈಸಾ’ ಚಿತ್ರದ ಚಿತ್ರೀಕರಣಕ್ಕೆ ಅವರು ಮರಳಿದ್ದಾರೆ. ಮರುಭೂಮಿಯಂತಹ ಪ್ರದೇಶದಲ್ಲಿ ಚಿತ್ರತಂಡ ಕಷ್ಟಪಟ್ಟು ಕೆಲಸ ಮಾಡುತ್ತಿರುವ ಫೋಟೋವನ್ನು ಹಂಚಿಕೊಂಡಿರುವ ನಿರ್ದೇಶಕರು, ‘ದಿ ಹಂಟ್ ಬಿಗಿನ್ಸ್’ ಎಂದು ಬರೆದುಕೊಂಡಿದ್ದಾರೆ. ರಶ್ಮಿಕಾ ಈ ಪೋಸ್ಟ್ ರೀ-ಶೇರ್ ಮಾಡುವ ಮೂಲಕ ತಾವು ಕೆಲಸಕ್ಕೆ ಹಾಜರಾಗಿರುವುದನ್ನು ಖಚಿತಪಡಿಸಿದ್ದಾರೆ.

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಫೆಬ್ರವರಿ 26ರಂದು ಖಾಸಗಿ ಹೋಟೆಲ್​​ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮಾರ್ಚ್ 4ರಂದು ಚಿತ್ರರಂಗದ ಗಣ್ಯರಿಗಾಗಿ ಅದ್ದೂರಿ ರಿಸೆಪ್ಷನ್ ಹಮ್ಮಿಕೊಳ್ಳಲಾಗಿತ್ತು. ಇದಾದ ನಂತರ ಹನಿಮೂನ್​​ಗೆ ತೆರಳಿದ್ದ ಈ ಜೋಡಿ, ಈ ವಾರವಷ್ಟೇ ಹಿಂದಿರುಗಿದ್ದು ತಕ್ಷಣವೇ ತಮ್ಮ ವೃತ್ತಿಜೀವನದ ಕಡೆಗೆ ಮುಖ ಮಾಡಿದ್ದಾರೆ.

2026ರಲ್ಲಿ ಬಿಡುಗಡೆ ಆಗಲಿರುವ ಬಹುನಿರೀಕ್ಷಿತ ಚಿತ್ರಗಳಲ್ಲಿ ‘ಮೈಸಾ’ ಕೂಡ ಇದೆ. ಈ ಚಿತ್ರದಲ್ಲಿ ರಶ್ಮಿಕಾ ಅವರು ಈ ಹಿಂದೆ ಎಂದೂ ಕಾಣಿಸಿಕೊಳ್ಳದಂತಹ ಆಕ್ರೋಶಭರಿತ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಅವರ ವೃತ್ತಿಜೀವನಕ್ಕೆ ಈ ಸಿನಿಮಾ ಹೊಸ ತಿರುವು ನೀಡುವ ಸಾಧ್ಯತೆಯಿದೆ. ಈಗಾಗಲೇ ಬಿಡುಗಡೆ ಆಗಿರುವ ಅವರ ಫಸ್ಟ್ ಲುಕ್ ಟೀಸರ್ ಗಮನ ಸೆಳೆದಿದೆ.

ಇದನ್ನೂ ಓದಿ: ‘ಮೈಸಾ’ ಫಸ್ಟ್ ಗ್ಲಿಂಪ್ಸ್: ಸಿಕ್ಕಾಪಟ್ಟೆ ಮಾಸ್ ಅವತಾರದಲ್ಲಿ ರಶ್ಮಿಕಾ ಮಂದಣ್ಣ

ಸದ್ಯಕ್ಕೆ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಜೊತೆಯಾಗಿ ನಟಿಸಲಿರುವ ‘ರಣಬಾಲಿ’ ಚಿತ್ರಕ್ಕಿಂತ ಮುಂಚಿತವಾಗಿ ‘ಮೈಸಾ’ ಚಿತ್ರದ ಶೂಟಿಂಗ್ ಮುಗಿಯಲಿದೆ. ‘ಗೀತ ಗೋವಿಂದಂ’ ಮತ್ತು ‘ಡಿಯರ್ ಕಾಮ್ರೇಡ್’ ಸಿನಿಮಾದಲ್ಲಿ ಜೊತೆಯಾಗಿದ್ದ ಈ ಜೋಡಿ ‘ರಣಬಾಲಿ’ ಸಿನಿಮಾದಲ್ಲಿ ಮತ್ತೆ ಒಂದಾಗುತ್ತಿರುವುದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

UPSC CMS 2026: UPSC ಕಂಬೈನ್ಡ್ ಮೆಡಿಕಲ್ ಸರ್ವೀಸಸ್ ಪರೀಕ್ಷೆಯ ಅಧಿಸೂಚನೆ ಬಿಡುಗಡೆ; 1,358 ಹುದ್ದೆಗಳಿಗೆ ನೇಮಕಾತಿ

ಕೇಂದ್ರ ಲೋಕಸೇವಾ ಆಯೋಗವು (UPSC) ದೇಶಾದ್ಯಂತ ವಿವಿಧ ಸರ್ಕಾರಿ ಸಂಸ್ಥೆಗಳಲ್ಲಿ ಖಾಲಿ ಇರುವ ವೈದ್ಯಕೀಯ ಅಧಿಕಾರಿ ಹುದ್ದೆಗಳ ಭರ್ತಿಗಾಗಿ ‘ಸಂಯೋಜಿತ ವೈದ್ಯಕೀಯ ಸೇವೆಗಳ ಪರೀಕ್ಷೆ 2026’ (Combined Medical Services Examination) ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಒಟ್ಟು 1,358 ಹುದ್ದೆಗಳಿಗೆ ಈ ನೇಮಕಾತಿ ನಡೆಯುತ್ತಿದ್ದು, ವೈದ್ಯಕೀಯ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವ ಎಂಬಿಬಿಎಸ್ ಪದವೀಧರರಿಗೆ ಇದು ಅತ್ಯುತ್ತಮ ಅವಕಾಶವಾಗಿದೆ.

ಈ ನೇಮಕಾತಿಯಡಿ ಕೇಂದ್ರ ಆರೋಗ್ಯ ಸೇವೆಯಲ್ಲಿ 864 ಸಾಮಾನ್ಯ ಕರ್ತವ್ಯ ವೈದ್ಯಕೀಯ ಅಧಿಕಾರಿ ಹುದ್ದೆಗಳು, ರೈಲ್ವೆ ಇಲಾಖೆಯಲ್ಲಿ 450 ಸಹಾಯಕ ವಿಭಾಗೀಯ ವೈದ್ಯಕೀಯ ಅಧಿಕಾರಿ ಹುದ್ದೆಗಳು ಹಾಗೂ ನವದೆಹಲಿ ಮತ್ತು ದೆಹಲಿ ಮುನ್ಸಿಪಲ್ ಕಾರ್ಪೊರೇಷನ್‌ಗಳಲ್ಲಿ ತಲಾ 14 ಮತ್ತು 30 ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆಯಿಂದ ಎಂಬಿಬಿಎಸ್ ಪೂರ್ಣಗೊಳಿಸಿರಬೇಕು. ಪ್ರಸ್ತುತ ಎಂಬಿಬಿಎಸ್ ಅಂತಿಮ ವರ್ಷದ ಪರೀಕ್ಷೆ ಬರೆಯುತ್ತಿರುವವರು ಅಥವಾ ಇಂಟರ್ನ್‌ಶಿಪ್‌ನಲ್ಲಿರುವವರು ಸಹ ಅರ್ಜಿ ಸಲ್ಲಿಸಲು ಅರ್ಹರಾಗಿದ್ದರೂ, ನೇಮಕಾತಿಯ ಅಂತಿಮ ಹಂತದ ವೇಳೆಗೆ ಇಂಟರ್ನ್‌ಶಿಪ್ ಪೂರ್ಣಗೊಳಿಸಿರುವುದು ಕಡ್ಡಾಯವಾಗಿದೆ.

ವಯೋಮಿತಿಯ ವಿಷಯಕ್ಕೆ ಬಂದರೆ, ಆಗಸ್ಟ್ 1 ಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಗಳ ವಯಸ್ಸು 32 ವರ್ಷ ಮೀರಿರಬಾರದು (ಅಂದರೆ ಆಗಸ್ಟ್ 2, 1994ಕ್ಕಿಂತ ಮೊದಲು ಜನಿಸಿರಬಾರದು). ಆದರೆ, ಕೇಂದ್ರ ಆರೋಗ್ಯ ಸೇವೆಯ ವೈದ್ಯಕೀಯ ಅಧಿಕಾರಿ ಹುದ್ದೆಗಳಿಗೆ ಗರಿಷ್ಠ ವಯೋಮಿತಿ 35 ವರ್ಷಗಳವರೆಗೆ ಇರುತ್ತದೆ. ನಿಯಮಾನುಸಾರ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ದಿವ್ಯಾಂಗ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 56,100 ರಿಂದ ರೂ. 1,77,500 ವರೆಗಿನ ಆಕರ್ಷಕ ವೇತನ ಹಾಗೂ ಇತರ ಭತ್ಯೆಗಳು ದೊರೆಯಲಿವೆ.

ಇದನ್ನೂ ಓದಿ: ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್​​ನಲ್ಲಿ ಉದ್ಯೋಗವಕಾಶ; ಪದವೀಧರರಿಗೆ ಸುವರ್ಣವಕಾಶ

ಅರ್ಹ ಅಭ್ಯರ್ಥಿಗಳು ಮಾರ್ಚ್ 31 ರಂದು ಸಂಜೆ 6 ಗಂಟೆಯೊಳಗೆ ಯುಪಿಎಸ್‌ಸಿ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ. 200 ಅರ್ಜಿ ಶುಲ್ಕ ನಿಗದಿಪಡಿಸಲಾಗಿದ್ದು, ಮಹಿಳೆಯರು, ಎಸ್‌ಸಿ, ಎಸ್‌ಟಿ ಮತ್ತು ದಿವ್ಯಾಂಗ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಆಯ್ಕೆ ಪ್ರಕ್ರಿಯೆಯು ಲಿಖಿತ ಪರೀಕ್ಷೆ (500 ಅಂಕಗಳು) ಮತ್ತು ವ್ಯಕ್ತಿತ್ವ ಪರೀಕ್ಷೆ ಅಥವಾ ಸಂದರ್ಶನ (100 ಅಂಕಗಳು) ಎಂಬ ಎರಡು ಹಂತಗಳಲ್ಲಿ ನಡೆಯಲಿದೆ. ಆಗಸ್ಟ್ 2, 2026 ರಂದು ದೇಶಾದ್ಯಂತ ಲಿಖಿತ ಪರೀಕ್ಷೆಯನ್ನು ನಡೆಸಲು ಆಯೋಗವು ದಿನಾಂಕ ನಿಗದಿಪಡಿಸಿದೆ.

ಅರ್ಜಿ ಸಲ್ಲಿಸಲು ಈ ಲಿಂಕ್​ ಮೇಲೆ ಕ್ಲಿಕ್​ ಮಾಡಿ

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗಂಗಾ ನದಿಯಲ್ಲಿ ಇಫ್ತಾರ್ ಕೂಟ: ಬಿರಿಯಾನಿ ತಿಂದು ಮೂಳೆಗಳನ್ನು ನದಿಗೆ ಎಸೆದ್ರಾ ಮುಸ್ಲಿಂ ಯುವಕರು? 14 ಮಂದಿ ಅರೆಸ್ಟ್

ವಾರಣಾಸಿ, ಮಾ.17: ಗಂಗಾ ನದಿಯಲ್ಲಿ ದೋಣಿಯ ಮೇಲೆ ಕುಳಿತು ರಂಜಾನ್ ಉಪವಾಸ ಬಿಡುತ್ತಿದ್ದ (ಇಫ್ತಿಯಾರ್) 14 ಯುವಕರನ್ನು ವಾರಣಾಸಿ ಪೊಲೀಸರು ಬಂಧಿಸಿದ್ದಾರೆ. ಬಿಜೆಪಿ ಯುವ ಮೋರ್ಚಾ ನೀಡಿದ ದೂರಿನನ್ವಯ ಈ ಕ್ರಮ ಕೈಗೊಳ್ಳಲಾಗಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸೋಮವಾರ ಸಂಜೆ ಪಂಚಗಂಗಾ ಘಾಟ್ ಸಮೀಪದ ದೋಣಿಯೊಂದರಲ್ಲಿ ಈ ಯುವಕರ ತಂಡ ಇಫ್ತಿಯಾರ್ ಕೂಟ ಏರ್ಪಡಿಸಿತ್ತು. ಈ ವೇಳೆ ಅವರು ಆಹಾರ ಸೇವಿಸುತ್ತಿರುವ ದೃಶ್ಯವನ್ನು ಯಾರೋ ಮೊಬೈಲ್‌ನಲ್ಲಿ ಚಿತ್ರೀಕರಿಸಿ ಸೋಷಿಯಲ್ ಮೀಡಿಯಾಕ್ಕೆ ಅಪ್‌ಲೋಡ್ ಮಾಡಿದ್ದರು. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ವಿವಾದ ಸೃಷ್ಟಿಯಾಗಿದೆ.

ಬಿಜೆಪಿ ಯುವ ಮೋರ್ಚಾದ ನಗರ ಘಟಕದ ಅಧ್ಯಕ್ಷ ರಜತ್ ಜೈಸ್ವಾಲ್ ಅವರು ಕೋತ್ವಾಲಿ ಪೊಲೀಸ್ ಠಾಣೆಗೆ ಅಧಿಕೃತ ದೂರು ನೀಡಿದ್ದಾರೆ. ಪವಿತ್ರ ಗಂಗಾ ನದಿಯ ಮೇಲೆ ದೋಣಿಯಲ್ಲಿ ಕುಳಿತು ಈ ಯುವಕರು ಬಿರಿಯಾನಿ (ಮಾಂಸಾಹಾರ) ಸೇವಿಸುತ್ತಿದ್ದರು. ಬಿರಿಯಾನಿ ಸೇವಿಸಿದ ನಂತರ ಅದರ ಮೂಳೆಗಳನ್ನು ಪವಿತ್ರ ಗಂಗೆಗೆ ಎಸೆಯುವ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ರೀಲ್ಸ್​​​​ಗಾಗಿ ಎದೆಗೆ ರಿವಾಲ್ವರ್ ಇಟ್ಟು ವಿಡಿಯೋ ಮಾಡುವಾಗ ಮಿಸ್‌ಫೈರ್: ಭಯಾನಕ ದೃಶ್ಯ ವೈರಲ್

ವೈರಲ್​ ವಿಡಿಯೋ ಇಲ್ಲಿದೆ ನೋಡಿ:

ದೂರನ್ನು ಆಧರಿಸಿ ಕಾರ್ಯಾಚರಣೆ ನಡೆಸಿದ ಕೋತ್ವಾಲಿ ಪೊಲೀಸರು, ವಿಡಿಯೋದಲ್ಲಿರುವ 14 ಯುವಕರನ್ನು ಗುರುತಿಸಿ ಬಂಧಿಸಿದ್ದಾರೆ. ಇವರ ಮೇಲೆ “ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ” ಆರೋಪದಡಿ ಗಂಭೀರ ಪ್ರಕರಣಗಳನ್ನು ದಾಖಲಿಸಲಾಗಿದೆ. ಇದೀಗ ಈ ಪ್ರಕರಣದಲ್ಲಿ ಪೊಲೀಸರ ಹಸ್ತಕ್ಷೇಪವು ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಸಂಪ್ರದಾಯಗಳನ್ನು ಆಚರಿಸುವ ಹಕ್ಕಿನ ಕುರಿತು ಚರ್ಚೆಯನ್ನು ಹುಟ್ಟುಹಾಕಿದೆ.ರಾಮನವಮಿ ಸೇರಿದಂತೆ ಧಾರ್ಮಿಕ ಚಟುವಟಿಕೆಗಳು ಹೆಚ್ಚುತ್ತಿರುವ ಅವಧಿಯಲ್ಲಿ ಈ ಬಂಧನಗಳು ನಡೆದಿದ್ದು, ವಾರಣಾಸಿಯ ಸೂಕ್ಷ್ಮ ರಾಜಕೀಯ ವಾತಾವರಣವು ಪೊಲೀಸರ ಪ್ರತಿಕ್ರಿಯೆಯ ಸಮಯ ಮತ್ತು ಪ್ರಮಾಣದ ಮೇಲೆ ಪ್ರಭಾವ ಬೀರಿದೆಯೇ ಎಂದು ಹಲವರು ಪ್ರಶ್ನಿಸಿದ್ದಾರೆ.

ದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಯುದ್ಧದಲ್ಲೂ ಮಾನವೀಯತೆ ತೋರಿದ ಬಿಎಪಿಎಸ್ ಹಿಂದೂ ಮಂದಿರ; ಕಂಫರ್ಟ್ ಇನ್ ಕುವೈತ್ ಸಾಕ್ಷ್ಯಚಿತ್ರ ಇಲ್ಲಿದೆ

ಅಬುಧಾಬಿ, ಮಾರ್ಚ್ 17: ಇರಾನ್ ಹಾಗೂ ಇಸ್ರೇಲ್, ಅಮೆರಿಕದ ನಡುವೆ ನಡೆಯುತ್ತಿರುವ ಯುದ್ಧದ ಅನಿಶ್ಚಿತತೆಯ ನಡುವೆ ಗಲ್ಫ್ ರಾಷ್ಟ್ರಗಳಲ್ಲಿ ಸಿಲುಕಿರುವ ಭಾರತೀಯರು ಪರದಾಡುವಂತಾಗಿದೆ. ಅಲ್ಲಿ ಸಿಲುಕಿರುವ ಭಾರತೀಯರಿಗೆ ಅಬುಧಾಬಿಯಲ್ಲಿನ ಬಿಎಪಿಎಸ್ ಹಿಂದೂ ಮಂದಿರ (BAPS Hindu Mandir) ಸಹಾಯಹಸ್ತ ಚಾಚಿದೆ. ಈ ಕುರಿತು ತಯಾರಾಗಿರುವ ‘ಕಂಫರ್ಟ್ ಇನ್ ಕುವೈತ್‌’ ಸಾಕ್ಷ್ಯಚಿತ್ರ ಮನೆಯಿಂದ ದೂರದಲ್ಲಿರುವ, ಕುವೈತ್‌ನಲ್ಲಿ ಸಿಲುಕಿರುವ ಕುಟುಂಬಗಳು ಭಯ, ಗೊಂದಲ ಮತ್ತು ಅಜ್ಞಾತವನ್ನು ಎದುರಿಸುವ ನೈಜ ಕಥೆಯಾಗಿದೆ.

ಅಬುಧಾಬಿಯಲ್ಲಿರುವ BAPS ಹಿಂದೂ ಮಂದಿರ ಅವರಿಗೆ ಆಹಾರ, ಆಶ್ರಯ, ಮಾರ್ಗದರ್ಶನ ಮತ್ತು ಭಾವನಾತ್ಮಕ ಶಕ್ತಿಯನ್ನು ಒದಗಿಸಿದೆ. ಅಲ್ಲಿನ ಸ್ವಯಂಸೇವಕರ ನಿಸ್ವಾರ್ಥ ಬೆಂಬಲದ ಮೂಲಕ ಯುದ್ಧದಲ್ಲಿ ಸಿಲುಕಿದ ಪ್ರಯಾಣಿಕರು ಭರವಸೆ, ಸುರಕ್ಷತೆ ಮತ್ತು ಮನೆಗೆ ಹಿಂದಿರುಗುವ ಮಾರ್ಗವನ್ನು ಕಂಡುಕೊಂಡರು. ಬಿಕ್ಕಟ್ಟಿನ ಸಮಯದಲ್ಲೂ ಮಾನವೀಯತೆ, ನಂಬಿಕೆ ಮತ್ತು ಸೇವೆಯು ಭಯವನ್ನು ನಿವಾರಿಸಬಹುದು, ಕುಟುಂಬದಂತೆ ಜನರನ್ನು ಒಟ್ಟುಗೂಡಿಸಬಹುದು ಮತ್ತು ನಮ್ಮ ಭವಿಷ್ಯದ ಹಾದಿಯನ್ನು ಬೆಳಗಿಸಬಹುದು ಎಂಬುದನ್ನು ಈ ಸಾಕ್ಷ್ಯಚಿತ್ರ ನಿರೂಪಿಸುತ್ತದೆ.

ಇದನ್ನೂ ಓದಿ: ಜೀವನದ ಅದ್ಭುತ ಅನುಭವದಲ್ಲೊಂದು; ಅಬುಧಾಬಿಯ ಬಿಎಪಿಎಸ್ ಹಿಂದೂ ಮಂದಿರಕ್ಕೆ ಸಿಎಂ ಚಂದ್ರಬಾಬು ನಾಯ್ಡು ಭೇಟಿ

“ಕಂಫರ್ಟ್ ಇನ್ ಕುವೈತ್” ಸಾಕ್ಷ್ಯಚಿತ್ರವು ಯುದ್ಧ ವಲಯದ ಅವ್ಯವಸ್ಥೆಯಿಂದ ತಮ್ಮ ಮನೆಯತ್ತ ಸಾಗುವ ಭಾರತೀಯರ ಭಾವನಾತ್ಮಕ ಪ್ರಯಾಣವಾಗಿದೆ. ಕುವೈತ್‌ನಲ್ಲಿ ತಮ್ಮ ಕುಟುಂಬಗಳೊಂದಿಗೆ ಸಿಲುಕಿಕೊಂಡಿದ್ದ ಅನೇಕರು ಭಯ, ಗೊಂದಲ ಮತ್ತು ಮನೆಯಿಂದ ದೂರದಲ್ಲಿರುವ ಅಜ್ಞಾತವನ್ನು ಎದುರಿಸಿದರು. ಅವರಿಗೆ ಬಿಎಪಿಎಸ್ ಸಹಾಯ ಮಾಡಿತು. ಈ ಸಾಕ್ಷ್ಯಚಿತ್ರವು ಕಷ್ಟದ ಸಮಯದಲ್ಲಿ ಮಾನವೀಯತೆ, ನಂಬಿಕೆ ಮತ್ತು ಸೇವೆಯು ಯಾವುದೇ ಭಯವನ್ನು ನಿವಾರಿಸಬಲ್ಲದು ಎಂಬುದನ್ನು ತೋರಿಸುತ್ತದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

SSLC ಪರೀಕ್ಷೆ ಬರೆಯುವ ಮಕ್ಕಳಿಗೆ ಮಿಡಿದ ಕಂಡಕ್ಟರ್​​ ಮನ, ವಿಡಿಯೋ ವೈರಲ್

ಬೆಂಗಳೂರು, (ಮಾರ್ಚ್ 17): 2025-26ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆ-1 (SSLC Exam) ನಾಳೆಯಿಂದ ಅಂದರೆ ಮಾರ್ಚ್ 18ರಿಂದ ಏಪ್ರಿಲ್ 2ರ ವರೆಗೆ ನಡೆಯಲಿದ್ದು, ಲಕ್ಷಾಂತರ ವಿದ್ಯಾರ್ಥಿಗಳು ಪರೀಕ್ಷೆಗೆ (Exam) ಬರೆಯಲು ಸಜ್ಜಾಗಿದ್ದಾರೆ. ಇನ್ನು ವಿದ್ಯಾರ್ಥಿಗಳ ಪರೀಕ್ಷಾ ಪ್ರಯಾಣವನ್ನು ಸುಗಮಗೊಳಿಸಲು ಕೆಎಸ್​​ಆರ್​​ಟಿಸಿ ಉಚಿತ ಪ್ರಯಾಣ ಘೋಷಿಸಿದ್ದು, ಹಾಲ್ ಟಿಕೆಟ್ ತೋರಿಸಿ ಉಚಿತವಾಗಿ ಬಸ್​​ನಲ್ಲಿ ಪ್ರಯಾಣಿಸಬಹುದು. ಇನ್ನು ಪರೀಕ್ಷೆಗೆ ಹೋಗುವ ಮಕ್ಕಳಿಗೆ ಕಂಡಕ್ಟರ್ ಮನ​ ಮಿಡಿದಿದ್ದು, ಡ್ರೈವರ್ ಸಾಹೇಬ್ರೆ ಎಸ್ಎಸ್​ಎಲ್​​ಸಿ ಪರೀಕ್ಷೆಗೆ ಹೋಗುವ ವಿದ್ಯಾರ್ಥಿಗಳು ಎಲ್ಲೇ ಕೈ ಮಾಡಿದರೂ ಬಸ್ ನಿಲ್ಲಿಸಿ ಎಂದು ಕಂಡಕ್ಟರ್ ಹೇಳಿದ್ದಾರೆ, ಸದ್ಯ ಈ ವಿಡಿಯೋ ಫುಲ್ ವೈರಲ್ ಆಗಿದೆ. ​ ಇನ್ನು 10ನೇ ತರಗತಿ ಪರೀಕ್ಷೆ ಬರೆಯುವ ಮಕ್ಕಳ ಬಗ್ಗೆ ನಿರ್ವಾಹಕರೊಬ್ಬರು ಆಡಿದ ಮಾತು ಹೇಗಿದೆ ಕೇಳಿ.

ಇದನ್ನೂ ಓದಿ: ​SSLC ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಗುಡ್​ ನ್ಯೂಸ್ ನೀಡಿದ ಸರ್ಕಾರ

Source link

BCCI vs BCB: ಬಿಸಿಸಿಐಗೆ ಸೆಡ್ಡು ಹೊಡೆಯಲು ನಿಂತ ಬಾಂಗ್ಲಾ ಕ್ರಿಕೆಟ್ ಮಂಡಳಿ

2026ರ ಐಪಿಎಲ್ (IPL 2026) ಇದೇ ಮಾರ್ಚ್​ 28 ರಿಂದ ಪ್ರಾರಂಭವಾಗುತ್ತಿರುವುದು ಪ್ರತಿಯೊಬ್ಬ ಕ್ರಿಕೆಟ್ ಪ್ರಿಯರಿಗೂ ತಿಳಿದಿರುವಂತ ವಿಚಾರ. ವಿಶ್ವದ ಅತಿದೊಡ್ಡ ಕ್ರಿಕೆಟ್ ಲೀಗ್​ನಲ್ಲಿ ವಿಶ್ವ ಕ್ರಿಕೆಟ್​ನ ಸೂಪರ್ ಸ್ಟಾರ್ ಆಟಗಾರರು ಆಡುವುದು ಹೊಸ ವಿಚಾರವೆನ್ನಲ್ಲ. ಹೀಗಾಗಿ ಐಪಿಎಲ್ ನಡೆಯುವ ಸಮಯದಲ್ಲಿ ಸಾಮಾನ್ಯವಾಗಿ, ಯಾವುದೇ ಪ್ರಮುಖ ಕ್ರಿಕೆಟ್ ಮಂಡಳಿಯು ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸುವುದಿಲ್ಲ. ಆದಾಗ್ಯೂ, ಈ ಬಾರಿ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ಐಪಿಎಲ್ ಸಮಯದಲ್ಲಿ ಸರಣಿಯನ್ನಾಡಲು ಮುಂದಾಗಿದ್ದು, ಅದರ ವೇಳಾಪಟ್ಟಿಯನ್ನು ಸಹ ಪ್ರಕಟಿಸಿದೆ. ಅದರಂತೆ ಐಪಿಎಲ್‌ ನಡೆಯುವ ಸಮಯದಲ್ಲಿ ಬಾಂಗ್ಲಾದೇಶ ತಂಡವು ನ್ಯೂಜಿಲೆಂಡ್ (Bangladesh vs New Zealand) ತಂಡವನ್ನು ಎದುರಿಸಲಿದೆ. ಉಭಯ ತಂಡಗಳು ಏಕದಿನ ಮತ್ತು ಟಿ20 ಸರಣಿಗಳನ್ನು ಆಡಲಿದ್ದು, ಅದರ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.

ಬಾಂಗ್ಲಾ- ಕಿವೀಸ್ ಸರಣಿ

ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಮುಂಬರುವ ನ್ಯೂಜಿಲೆಂಡ್ ಪ್ರವಾಸದ ಸಂಪೂರ್ಣ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ನಿಯಮಿತ ಓವರ್​ಗಳ ಸರಣಿಯು ಏಪ್ರಿಲ್-ಮೇ 2026 ರಲ್ಲಿ ನಡೆಯಲಿದ್ದು, ಇದರಲ್ಲಿ ಮೂರು ಏಕದಿನ ಅಂತರರಾಷ್ಟ್ರೀಯ ಪಂದ್ಯಗಳು ಮತ್ತು ಮೂರು ಅಂತರರಾಷ್ಟ್ರೀಯ ಟಿ20 ಪಂದ್ಯಗಳು ಸೇರಿವೆ. ಆದಾಗ್ಯೂ ಉಭಯ ತಂಡಗಳ ಈ ಸರಣಿಗಳು ಐಪಿಎಲ್ ಮೇಲೆ ಯಾವುದೇ ಪರಿಣಾಮ ಬೀರುವುದರಿಲ್ಲ. ಏಕೆಂದರೆ ಯಾವುದೇ ಬಾಂಗ್ಲಾದೇಶಿ ಆಟಗಾರ ಐಪಿಎಲ್‌ನಲ್ಲಿ ಆಡುತ್ತಿಲ್ಲ. ಇತ್ತ ನ್ಯೂಜಿಲೆಂಡ್ ತನ್ನ ಬಿ ತಂಡವನ್ನು ಬಾಂಗ್ಲಾದೇಶ ಪ್ರವಾಸಕ್ಕೆ ಕಳುಹಿಸಬಹುದು.ಏಕೆಂದರೆ ಆ ಸಮಯದಲ್ಲಿ ಕಿವೀಸ್ ತಂಡದ ಸ್ಟಾರ್ ಆಟಗಾರರು ಐಪಿಎಲ್ ಅಂಗಳದಲ್ಲಿರುತ್ತಾರೆ.

ನ್ಯೂಜಿಲೆಂಡ್ ತಂಡ ಏಪ್ರಿಲ್ 13 ರಂದು ಢಾಕಾಗೆ ಆಗಮಿಸಲಿದೆ. ಸರಣಿಯು ಏಕದಿನ ಪಂದ್ಯಗಳೊಂದಿಗೆ ಪ್ರಾರಂಭವಾಗಲಿದ್ದು, ಮೊದಲ ಎರಡು ಪಂದ್ಯಗಳು ಢಾಕಾದ ಮಿರ್ಪುರ್‌ನಲ್ಲಿ ಮತ್ತು ಮೂರನೇ ಪಂದ್ಯ ಚಿತ್ತಗಾಂಗ್‌ನಲ್ಲಿ ನಡೆಯಲಿದೆ. ಟಿ20 ಪಂದ್ಯಗಳು ಎರಡೂ ನಗರಗಳಲ್ಲಿಯೂ ನಡೆಯಲಿವೆ. ಸರಣಿಯು ಏಪ್ರಿಲ್ 17 ರಂದು ಪ್ರಾರಂಭವಾಗಿ ಮೇ 2 ರವರೆಗೆ ನಡೆಯುತ್ತದೆ. ಬಾಂಗ್ಲಾದೇಶ ಇತ್ತೀಚೆಗೆ ಪಾಕಿಸ್ತಾನ ವಿರುದ್ಧದ ತವರು ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದ್ದು, ಇದೀಗ ನ್ಯೂಜಿಲೆಂಡ್ ವಿರುದ್ಧ ಅದೇ ಗೆಲುವಿನ ನಿರೀಕ್ಷೆಯಲ್ಲಿದೆ.

ಏಕದಿನ ಸರಣಿ ವೇಳಾಪಟ್ಟಿ:

  • ಮೊದಲ ಏಕದಿನ ಪಂದ್ಯ: ಏಪ್ರಿಲ್ 17, ಮಿರ್ಪುರ್ (ಢಾಕಾ)
  • 2 ನೇ ಏಕದಿನ ಪಂದ್ಯ: ಏಪ್ರಿಲ್ 20, ಮೀರ್ಪುರ್ (ಢಾಕಾ)
  • ಮೂರನೇ ಏಕದಿನ ಪಂದ್ಯ: ಏಪ್ರಿಲ್ 23, ಚಿತ್ತಗಾಂಗ್

ಟಿ20 ಸರಣಿ ವೇಳಾಪಟ್ಟಿ:

  • ಮೊದಲ ಟಿ20: ಏಪ್ರಿಲ್ 27, ಚಿತ್ತಗಾಂಗ್
  • ಎರಡನೇ ಟಿ20: ಏಪ್ರಿಲ್ 29, ಚಿತ್ತಗಾಂಗ್
  • ಮೂರನೇ ಟಿ20: ಮೇ 2, ಮೀರ್‌ಪುರ (ಢಾಕಾ)

ಮಹಿಳಾ ತಂಡಗಳು ಕಣಕ್ಕೆ

ಇದರ ಜೊತೆಗೆ, ಬಾಂಗ್ಲಾದೇಶ ಮಹಿಳಾ ತಂಡವು ಈ ಸಮಯದಲ್ಲಿ ಶ್ರೀಲಂಕಾ ಮಹಿಳಾ ತಂಡಕ್ಕೆ ಆತಿಥ್ಯ ವಹಿಸಲಿದೆ. ಮಹಿಳಾ ಸರಣಿಯು ಮೂರು ಏಕದಿನ ಪಂದ್ಯಗಳು ಮತ್ತು ಮೂರು ಟಿ20ಪಂದ್ಯಗಳನ್ನು ಒಳಗೊಂಡಿರುತ್ತದೆ. ಏಕದಿನ ಪಂದ್ಯಗಳು ಏಪ್ರಿಲ್ 20, 22 ಮತ್ತು 25 ರಂದು ರಾಜ್‌ಶಾಹಿಯಲ್ಲಿ ನಡೆದರೆ, ಆ ನಂತರ ಟಿ20 ಪಂದ್ಯಗಳು ಏಪ್ರಿಲ್ 28, 30 ಮತ್ತು ಮೇ 2 ರಂದು ಸಿಲ್ಹೆಟ್‌ನಲ್ಲಿ ನಡೆಯಲಿವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಜೆಟ್​​ ಅಧಿವೆಶನದ ನಡುವೆ ಮಹತ್ವದ ಬೆಳವಣಿಗೆ: ದೀಢೀರ್​​ ಸಿಎಂ ಭೇಟಿಯಾಗಿದ್ದೇಕೆ ಕಾಂಗ್ರೆಸ್​​ನ ಹಿರಿಯ ಶಾಸಕರ ತಂಡ?

ಬೆಂಗಳೂರು, ಮಾರ್ಚ್​​ 17: ಬಜೆಟ್​​ ಅಧಿವೆಶನದ ನಡುವೆಯೇ ರಾಜ್ಯ ರಾಜಕಾರಣದಲ್ಲಿ ಮಹತ್ತರ ಬೆಳವಣಿಗೆ ನಡೆದಿದೆ. ಸಚಿವ ಸಂಪುಟ ಪುನಾರಚನೆ ವೇಳೆ ಕನಿಷ್ಠ 20 ಹಿರಿಯ ಶಾಸಕರಿಗೆ ಸಂಪುಟದಲ್ಲಿ ಸ್ಥಾನ ನೀಡುವಂತೆ ವಿಧಾನಸೌಧ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ಎಂಎಲ್​​ಎಗಳು ಮನವಿ ಮಾಡಿದ್ದಾರೆ. ಭೋಜನ ವಿರಾಮದ ಸಮಯದಲ್ಲಿ ಸಿಎಂ ಭೇಟಿಯಾಗಿರುವ ‘ಕೈ’ ಶಾಸಕರು 3ಕ್ಕೂ ಹೆಚ್ಚು ಬಾರಿ ನಾವು ಎಂಎಲ್​​ಎಗಳಾಗಿದ್ದೇವೆ. ಹೀಗಾಗಿ ನಮಗೂ ಅವಕಾಶ ನೀಡಿ ಎಂಬ ಆಗ್ರಹ ಮುಂದಿಟ್ಟಿದ್ದಾರೆ. ಶಾಸಕರಾದ ಎನ್​.ಎ.ಹ್ಯಾರಿಸ್​, ಹಂಪನಗೌಡ ಬಾದರ್ಲಿ, ಬಾಲಕೃಷ್ಣ, ನಾರಾಯಣಸ್ವಾಮಿ, ಅಶೋಕ ಪಟ್ಟಣ, ಯಶವಂತರಾಯಗೌಡ ಪಾಟೀಲ್, ತನ್ವೀರ್ ಸೇಠ್, ರಾಘವೇಂದ್ರ ಹಿಟ್ನಾಳ್ ಸೇರಿ 16 ಶಾಸಕರಿಂದ ಈ ಬಗ್ಗೆ ಮನವಿ ಮಾಡಲಾಗಿದೆ.

‘ಉಪಚುನಾವಣೆ ಬಳಿಕ ಸಂಪುಟ ಪುನಾರಚನೆ’

ಸಚಿವ ಸಂಪುಟ ವಿಚಾರವಾಗಿ ಸ್ವತಃ ನಾನೇ ದೆಹಲಿಗೆ ಹೋಗುತ್ತೇನೆ. ಉಪಚುನಾವಣೆ ಬಳಿಕ ಹೈಕಮಾಂಡ್​ ನಾಯಕರನ್ನು ಭೇಟಿ ಮಾಡಲಿದ್ದು, ಆ ವೇಳೆ ನಿಮ್ಮ ಆಗ್ರಹವನ್ನು ವರಿಷ್ಠರಿ ಗಮನಕ್ಕೆ ತರೋದಾಗಿ ಸಿಎಂ ಸಿದ್ದರಾಮಯ್ಯ ಈ ವೇಳೆ ಹಿರಿಯ ಶಾಸಕರಿಗೆ ತಿಳಿಸಿದ್ದಾರೆ. ಅಲ್ಲದೆ, ಉಪಚುನಾವಣೆ ಬಳಿಕ ಸಂಪುಟ ಪುನಾರಚನೆ ಮಾಡುವುದಾಗಿ ಭರವಸೆಯನ್ನೂ ನೀಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಸ್ಪೀಕರ್ ಖಾದರ್ ಗುಡುಗಿದ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ! ಇಲಾಖಾವಾರು ಎಷ್ಟು ಉತ್ತರ ನೀಡಲಾಯ್ತು? ಇಲ್ಲಿದೆ ವರದಿ

‘ಏಪ್ರಿಲ್ 11ರಂದು ದೆಹಲಿಗೆ ಹೋಗಲು ಪ್ಲ್ಯಾನ್’

ಇನ್ನು ಸಿಎಂ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿರುವ ಶಾಸಕ ಹೆಚ್​.ಸಿ. ಬಾಲಕೃಷ್ಣ, ಮೂಕ್ಕಿಂತ ಹೆಚ್ಚು ಬಾರಿ ಗೆದ್ದಿರುವ ಶಾಸಕರೆಲ್ಲರೂ ಈ ವೇಳೆ ಉಪಸ್ಥಿತರಿದ್ದರು. ಮಂತ್ರಿ ಮಂಡಲ ಪುನಾರಚನೆ ವೇಳೆ ನಮ್ಮನ್ನು ಪರಿಗಣಿಸುವಂತೆ ಕೇಳಿದ್ದೇವೆ. ಕನಿಷ್ಠ 20 ಹಿರಿಯ ಶಾಸಕರಿಗೆ ಅವಕಾಶ ಕೊಡುವಂತೆ ಆಗ್ರಹಿಸಲಾಗಿದೆ. ಈ ವೇಳೆ ಹೈಕಮಾಂಡ್​ ಜೊತೆ ನಾನು ಮಾತನಾಡ್ತೇನೆ, ನೀವೂ ಮಾತನಾಡಿ ಎಂದು ಸಿಎಂ ಹೇಳಿದ್ದಾರೆ. ಹೀಗಾಗಿ ನಾವು ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಮನವಿ ಸಲ್ಲಿಸುತ್ತೇವೆ. ಏಪ್ರಿಲ್ 11ರಂದು ದೆಹಲಿಗೆ ಹೋಗಲು ಪ್ಲ್ಯಾನ್ ಮಾಡಿದ್ದು, 40 ಶಾಸಕರು ಒಟ್ಟಾಗಿ ಹೈಕಮಾಂಡ್​ಗೆ ಮನವಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

SA vs NZ: 18 ರನ್​ಗೆ 5 ವಿಕೆಟ್; ಹೀನಾಯವಾಗಿ ಸೋತ ಆಫ್ರಿಕಾ

2026 ರ ಟಿ20 ವಿಶ್ವಕಪ್ ಸೆಮಿಫೈನಲ್ ಹಾಗೂ ಫೈನಲ್​ನಲ್ಲಿ ಮುಗ್ಗರಿಸಿದ್ದ ದಕ್ಷಿಣ ಆಫ್ರಿಕಾ ಹಾಗೂ ನ್ಯೂಜಿಲೆಂಡ್ (South Africa vs New Zealand) ಪ್ರಸ್ತುತ 5 ಪಂದ್ಯಗಳ ಟಿ20 ಸರಣಿಯನ್ನಾಡುತ್ತಿವೆ. ಸರಣಿಯ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಎರಡಂಕಿ ಮೊತ್ತಕ್ಕೆ ಆಲೌಟ್ ಮಾಡಿ ಪಂದ್ಯ ಗೆದ್ದಿದ್ದ ದಕ್ಷಿಣ ಆಫ್ರಿಕಾ, ಎರಡನೇ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದೆ. ಹ್ಯಾಮಿಲ್ಟನ್‌ನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾವನ್ನು 68 ರನ್‌ಗಳಿಂದ ಸೋಲಿಸಿ, ಐದು ಪಂದ್ಯಗಳ ಸರಣಿಯನ್ನು 1-1 ರಿಂದ ಸಮಬಲಗೊಳಿಸಿದೆ. ಎರಡನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ನ್ಯೂಜಿಲೆಂಡ್‌ 175 ರನ್‌ ಕಲೆಹಾಕಿದರೆ, ಈ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಕೇವಲ 107 ರನ್‌ಗಳಿಗೆ ಆಲೌಟ್ ಆಯಿತು. ತಂಡದ ಬ್ಯಾಟಿಂಗ್ ಎಷ್ಟು ಕಳಪೆಯಾಗಿತ್ತೆಂದರೆ ಕೇವಲ 18 ರನ್‌ಗಳಿಗೆ 5 ಕಳೆದುಕೊಂಡಿತು. ಮಾತ್ರವಲ್ಲದೆ ತಂಡದ ಅಗ್ರ ಆರು ಬ್ಯಾಟ್ಸ್‌ಮನ್‌ಗಳಿಗೆ 20 ರನ್​ಗಳ ಗಡಿ ದಾಟಲು ಸಾಧ್ಯವಾಗಲಿಲ್ಲ.

ಕಾನ್ವೇ ಅರ್ಧಶತಕ

ಮೊದಲು ಬ್ಯಾಟಿಂಗ್‌ ಮಾಡಿದ ನ್ಯೂಜಿಲೆಂಡ್ ಪರ ಆರಂಭಿಕ ಡೆವೊನ್ ಕಾನ್ವೇ 60 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ತಮ್ಮ ಇನ್ನಿಂಗ್ಸ್‌ನಲ್ಲಿ ಅವರು ಐದು ಬೌಂಡರಿಗಳು ಮತ್ತು ಎರಡು ಸಿಕ್ಸರ್‌ಗಳನ್ನು ಬಾರಿಸಿದರು. ಜೋಶ್ ಕ್ಲಾರ್ಕ್ಸನ್ 9 ಎಸೆತಗಳಲ್ಲಿ ಅಜೇಯ 26 ರನ್ ಗಳಿಸಿದರೆ, ನಾಯಕ ಸ್ಯಾಂಟ್ನರ್ 20 ಹಾಗೂ ನಿಕ್ ಕೆಲ್ಲಿ 21 ರನ್​ಗಳ ಕಾಣಿಕೆ ನೀಡಿದರು. ಈ ಮೂವರನ್ನು ಹೊರತುಪಡಿಸಿ ಉಳಿದವರಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಮೂಡಿಬರಲಿಲ್ಲ.

ಐದು ವಿಕೆಟ್‌ಗಳು 18 ರನ್‌ಗಳಿಗೆ ಪತನ

ಈ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್‌ ಬೌಲರ್‌ಗಳ ಅದ್ಭುತ ಪ್ರದರ್ಶನಕ್ಕೆ ಮಕಾಡೆ ಮಲಗಿತು. ಆಫ್ರಿಕಾ ಪರ ಅಗ್ರ 6 ಬ್ಯಾಟ್ಸ್‌ಮನ್​ಗಳು 20 ರ ಗಡಿ ದಾಟುವಲ್ಲಿ ವಿಫಲರಾದರು. ಇದರ ಪರಿಣಾಮವಾಗಿ ಆಫ್ರಿಕಾ ತಂಡದ ಸೋಲು ಆರಂಭದಲ್ಲೇ ಖಚಿತವಾಯಿತು. ಆದಾಗ್ಯೂ ಜಾರ್ಜ್ ಲಿಂಡೆ 33 ರನ್​ಗಳ ಇನ್ನಿಂಗ್ಸ್ ಆಡುವ ಮೂಲಕ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಉಳಿದಂತೆ ತಂಡದ ಕೊನೆಯ ಮೂವರು ಬ್ಯಾಟ್ಸ್‌ಮನ್​ಗಳಿಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಮಧ್ಯಮ ಕ್ರಮಾಂಕ ಕುಸಿದ ನಂತರ ಕೊನೆಯ ಐದು ವಿಕೆಟ್‌ಗಳು ಕೇವಲ 18 ರನ್‌ಗಳಿಗೆ ಪತನಗೊಂಡವು. 13ನೇ ಓವರ್‌ನಲ್ಲಿ 89 ರನ್‌ಗಳಿಗೆ ಆರನೇ ವಿಕೆಟ್ ಕಳೆದುಕೊಂಡ ದಕ್ಷಿಣ ಆಫ್ರಿಕಾ 15.3 ಓವರ್‌ಗಳಲ್ಲಿ 107 ರನ್‌ಗಳಿಗೆ ಆಲೌಟ್ ಆಯಿತು.

ಕಿವೀಸ್ ಪರ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ಬೆನ್ ಸಿಯರ್ಸ್ 14 ರನ್‌ಗಳಿಗೆ 3 ವಿಕೆಟ್‌ಗಳನ್ನು ಪಡೆದರೆ, ಮಿಚೆಲ್ ಸ್ಯಾಂಟ್ನರ್ 2 ವಿಕೆಟ್‌ಗಳನ್ನು ಮತ್ತು ಲಾಕಿ ಫರ್ಗುಸನ್ 3 ವಿಕೆಟ್‌ಗಳನ್ನು ಪಡೆದರು. ಮೆಕ್‌ಕಾಂಚಿ ಮತ್ತು ನೀಶಮ್ ತಲಾ 1 ವಿಕೆಟ್ ಪಡೆದರು. ಹ್ಯಾಮಿಲ್ಟನ್ ಪಿಚ್ ಬ್ಯಾಟಿಂಗ್‌ಗೆ ಕಷ್ಟಕರವಾಗಿದ್ದರಿಂದ ಕಿವೀಸ್ ಇದರ ಸಂಪೂರ್ಣ ಲಾಭವನ್ನು ಪಡೆದುಕೊಂಡಿತು.

ಕಿವೀಸ್​ಗೆ ಮೊದಲ ಪಂದ್ಯದಲ್ಲಿ ಸೋಲು

ಟಿ20 ಸರಣಿಯ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ 7 ವಿಕೆಟ್‌ಗಳ ಹೀನಾಯ ಸೋಲು ಅನುಭವಿಸಿತು. ಬೇ ಓವಲ್‌ನಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ 14.3 ಓವರ್‌ಗಳಲ್ಲಿ ಕೇವಲ 91 ರನ್‌ಗಳಿಗೆ ಆಲೌಟ್ ಆಯಿತು. ದಕ್ಷಿಣ ಆಫ್ರಿಕಾ 3 ವಿಕೆಟ್‌ಗಳ ನಷ್ಟಕ್ಕೆ ಗುರಿ ತಲುಪಿತು. ಸರಣಿ ಈಗ 1-1 ರಲ್ಲಿ ಸಮಬಲಗೊಂಡಿದ್ದು, ಮೂರನೇ ಟಿ20 ಪಂದ್ಯ ಮಾರ್ಚ್ 20 ರಂದು ಆಕ್ಲೆಂಡ್‌ನ ಈಡನ್ ಪಾರ್ಕ್‌ನಲ್ಲಿ ನಡೆಯಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link