‘ಲಗಾನ್’ ಶೂಟಿಂಗ್ ವೇಳೆ ಪ್ರತಿ ದಿನ ಗಾಯತ್ರಿ ಮಂತ್ರ ಕೇಳುತ್ತಿದ್ದ ಆಮಿರ್ ಖಾನ್
ಆಮಿರ್ ಖಾನ್ ನಟನೆಯ ‘ಲಗಾನ್’ (Lagaan) ಸಿನಿಮಾ ತೆರೆಕಂಡು 25 ವರ್ಷಗಳು ಕಳೆದಿವೆ. 2001ರಲ್ಲಿ ತೆರೆಕಂಡ ಈ ಇತಿಹಾಸ ನಿರ್ಮಿಸಿತ್ತು. 25 ವರ್ಷಗಳ ಪೂರೈಸಿದ ಪ್ರಯುಕ್ತ ರೆಡ್ ಲಾರಿ ಫಿಲ್ಮ್ ಫೆಸ್ಟಿವಲ್ನಲ್ಲಿ ಈ ಚಿತ್ರದ ಪ್ರದರ್ಶನ ಮಾಡಲಾಗಿದೆ. ಈ ವೇಳೆ ಆಮಿರ್ ಖಾನ್ (Aamir Khan) ಕೂಡ ಹಾಜರಿ ಹಾಕಿ, ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ‘ಲಗಾನ್’ ಚಿತ್ರದ ಶೂಟಿಂಗ್ ಸಮಯದಲ್ಲಿ, ಇಡೀ ತಂಡ ಪ್ರತಿದಿನ ಗಾಯತ್ರಿ ಮಂತ್ರ (Gayatri Mantra) ಕೇಳುತ್ತಿತ್ತು ಎಂಬುದನ್ನು…